Karan Thapar – Peepal Media

‘ದಿ ವೈರ್’ ವರದರಾಜನ್, ಕರಣ್ ಥಾಪರ್ ವಿರುದ್ಧ ಎರಡನೇ ಪ್ರಕರಣದಲ್ಲಿ ದೇಶದ್ರೋಹ ಕಾಯ್ದೆಯನ್ನು ಜಾರಿಗೊಳಿಸಿದ ಅಸ್ಸಾಂ ಪೊಲೀಸ್
ಆಗಸ್ಟ್ 12, 2025 ರಂದು – ಹೊಸ ದೇಶದ್ರೋಹ ಕಾನೂನಿನ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ದಿ ವೈರ್ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿ, ಜುಲೈನಲ್ಲಿ ಮೋರಿಗಾಂವ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರಿಂದ ಯಾವುದೇ “ಬಲವಂತದ ಕ್ರಮ” ದಿಂದ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಸೇರಿದಂತೆ ಅದರ ಪತ್ರಕರ್ತರನ್ನು ರಕ್ಷಿಸಿದ ದಿನ – ಗುವಾಹಟಿ ಅಪರಾಧ ವಿಭಾಗವು ವರದರಾಜನ್ ಮತ್ತು ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರಿಗೆ ರಾಜ್ಯ ಪೊಲೀಸರು ದಾಖಲಿಸಿದ ಹೊಸ ‘ದೇಶದ್ರೋಹ’ ಎಫ್‌ಐಆರ್‌ನಲ್ಲಿ ಸಮನ್ಸ್ ಜಾರಿ ಮಾಡಿತು.

ಪೊಲೀಸ್ ಇನ್ಸ್‌ಪೆಕ್ಟರ್ ಸೌಮರ್‌ಜ್ಯೋತಿ ರೇ ಅವರು ಬಿಎನ್‌ಎಸ್‌ಎಸ್‌ನ ಸೆಕ್ಷನ್ ಸೆ.35(3) ಅಡಿಯಲ್ಲಿ ಹೊರಡಿಸಿದ ಸಮನ್ಸ್‌ನಲ್ಲಿ, ಗುವಾಹಟಿಯ ಪನ್‌ಬಜಾರ್‌ನ ಅಪರಾಧ ಶಾಖೆಯಲ್ಲಿ ಸೆಕ್ಷನ್ 152, 196, 197(1)(D)/3(6), 353, 45 ಮತ್ತು 61 ರ ಅಡಿಯಲ್ಲಿ ನೋಂದಾಯಿಸಲಾದ ಎಫ್‌ಐಆರ್ (03/2025) ಅನ್ನು ಉಲ್ಲೇಖಿಸಲಾಗಿದೆ.

ಆದಾಗ್ಯೂ, ಎಫ್‌ಐಆರ್ ದಿನಾಂಕವನ್ನು ಉಲ್ಲೇಖಿಸಲಾಗಿಲ್ಲ, ಆಪಾದಿತ ಅಪರಾಧದ ಯಾವುದೇ ವಿವರಗಳನ್ನು ಒದಗಿಸಲಾಗಿಲ್ಲ ಮತ್ತು ಎಫ್‌ಐಆರ್‌ನ ಪ್ರತಿಯನ್ನು ಸೇರಿಸಲಾಗಿಲ್ಲ – ಬಿಎನ್‌ಎಸ್‌ಎಸ್‌ನ ಈ ವಿಭಾಗದ ಅಡಿಯಲ್ಲಿ ಸಮನ್ಸ್ ಜಾರಿ ಮಾಡುವಾಗ ಪೊಲೀಸರು ಕಾನೂನುಬದ್ಧವಾಗಿ ಹಾಗೆ ಮಾಡಲು ಬದ್ಧರಾಗಿರುತ್ತಾರೆ.

ಆಗಸ್ಟ್ 14 ರಂದು ದಿ ವೈರ್ ಕಚೇರಿಯಲ್ಲಿ ಸಮನ್ಸ್ ಸ್ವೀಕರಿಸಲಾಯಿತು . ಇಂದು (ಆಗಸ್ಟ್ 18), ಅದೇ ಎಫ್‌ಐಆರ್‌ಗಾಗಿ ಥಾಪರ್ ಹೆಸರಿನಲ್ಲಿ ಅದೇ ರೀತಿಯ ಸಮನ್ಸ್ ಸ್ವೀಕರಿಸಲಾಗಿದೆ.

“ಪ್ರಸ್ತುತ ತನಿಖೆಗೆ ಸಂಬಂಧಿಸಿದಂತೆ ನಿಮ್ಮಿಂದ ಸತ್ಯ ಮತ್ತು ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು ನಿಮ್ಮನ್ನು ಪ್ರಶ್ನಿಸಲು ಸಮಂಜಸವಾದ ಆಧಾರಗಳಿವೆ ಎಂದು ತಿಳಿದುಬಂದಿದೆ” ಎಂದು ಹೇಳಿಕೊಂಡು, ವರದರಾಜನ್ ಮತ್ತು ಥಾಪರ್ ಇಬ್ಬರಿಗೂ ಆಗಸ್ಟ್ 22, ಶುಕ್ರವಾರ ಗುವಾಹಟಿಯ ಪನ್‌ಬಜಾರ್‌ನಲ್ಲಿರುವ ಅಪರಾಧ ಶಾಖೆಯ ಕಚೇರಿಯಲ್ಲಿ ಹಾಜರಾಗಲು ಸೂಚಿಸಲಾಗಿದೆ. “ಈ ಸೂಚನೆಯ ನಿಯಮಗಳನ್ನು ಪಾಲಿಸಲು / ಹಾಜರಾಗಲು ವಿಫಲವಾದರೆ ನಿಮ್ಮನ್ನು ಬಂಧನಕ್ಕೆ ಒಳಪಡಿಸಬಹುದು” ಎಂದು ಸಮನ್ಸ್‌ನಲ್ಲಿ ಹೇಳಲಾಗಿದೆ.

ಜುಲೈ 11, 2025 ರಂದು ಮೋರಿಗಾಂವ್‌ನಲ್ಲಿ ವರದರಾಜನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್, ಜೂನ್ 28, 2025 ರಂದು ದಿ ವೈರ್‌ನಲ್ಲಿ ಪ್ರಕಟವಾದ ( ರಾಜಕೀಯ ನಾಯಕತ್ವದ ನಿರ್ಬಂಧಗಳಿಂದಾಗಿ ಐಎಎಫ್ ಪಾಕ್‌ ಜೊತೆಗಿನ ತನ್ನ ಸಂಘರ್ಷದಲ್ಲಿ ಫೈಟರ್ ಜೆಟ್‌ಗಳನ್ನು ಕಳೆದುಕೊಂಡಿತು) ಸುದ್ದಿಯ ಕುರಿತು ಬಿಜೆಪಿ ಕಚೇರಿಯ ಅಧಿಕಾರಿಯೊಬ್ಬರು ಸಲ್ಲಿಸಿದ ದೂರಿಗೆ ಸಂಬಂಧಿಸಿದೆ, ಆದರೆ ಅಪರಾಧ ವಿಭಾಗದ ಎಫ್‌ಐಆರ್ ಯಾವ ಲೇಖನ ಅಥವಾ ವೀಡಿಯೊಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿಲ್ಲ.

ದಿ ವೈರ್ ನ ವಕೀಲೆ ನಿತ್ಯ ರಾಮಕೃಷ್ಣನ್ ಸುಪ್ರೀಂ ಕೋರ್ಟ್ ಗೆ ತಿಳಿಸಿದಂತೆ , ಮೋರಿಗಾಂವ್ ಪ್ರಕರಣದಲ್ಲಿಯೂ ಸಹ, ಎಫ್ಐಆರ್ ಅನ್ನು ರಹಸ್ಯವಾಗಿಡಲಾಗಿತ್ತು ಮತ್ತು ದೂರು, ಎಫ್ಐಆರ್ ದಾಖಲಿಸಿದ ದಿನಾಂಕ ಮತ್ತು ಕ್ರಿಮಿನಲ್ ಸೆಕ್ಷನ್ ಗಳನ್ನು ತಿಳಿದುಕೊಳ್ಳಲು ಸಾಧ್ಯವಾದದ್ದು ಸುಸಜ್ಜಿತ ಮೂಲಗಳ ಮೂಲಕವೇ.

ಇದರ ಆಧಾರದ ಮೇಲೆ ದಿ ವೈರ್ ಬಿಎನ್‌ಎಸ್‌ನ ಸೆಕ್ಷನ್ 152 ರ ನಿಯಮಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿತು ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ನೋಟಿಸ್ ಜಾರಿ ಮಾಡಿತು.

ಬಿಎನ್‌ಎಸ್‌ನ ಸೆಕ್ಷನ್ 152 (‘ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು’) ಭಾರತದ ಹಿಂದಿನ ದೇಶದ್ರೋಹ ನಿಬಂಧನೆಯ (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A, ಸೆಕ್ಷನ್) ಮರುನಾಮಕರಣಗೊಂಡ ಆವೃತ್ತಿಯಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ 2022 ರಲ್ಲಿ ತಡೆಹಿಡಿದಿದೆ.

ಸುಪ್ರೀಂ ಕೋರ್ಟ್ ವಿಧಿಸಿರುವ ಎಫ್‌ಐಆರ್‌ಗಳನ್ನು ಬಹಿರಂಗಪಡಿಸಬೇಕು ಮತ್ತು ಆರೋಪಿಗಳಿಗೆ ಪ್ರತಿಗಳನ್ನು ನೀಡಬೇಕು ಎಂಬ ಅವಶ್ಯಕತೆಯ ಬಗ್ಗೆ ಗಮನ ಸೆಳೆಯುವ ಮೂಲಕ ವರದರಾಜನ್ ಮತ್ತು ಥಾಪರ್ ಸಮನ್ಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಎಫ್‌ಐಆರ್ ಪ್ರತಿ ಇಲ್ಲದೆ ಪೊಲೀಸ್ ಸಮನ್ಸ್ ಅಮಾನ್ಯವಾಗಿದೆ ಎಂದು ಹೇಳುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸಹ ಅವರು ಗಮನಿಸಿದ್ದಾರೆ.

ಗುವಾಹಟಿಯಲ್ಲಿರುವ ದಿ ವೈರ್‌ನ ಕಾನೂನು ಪ್ರತಿನಿಧಿಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಎಫ್‌ಐಆರ್‌ನ ಯಾವುದೇ ಕುರುಹುಗಳಿಲ್ಲ ಎಂದು ಹೇಳುತ್ತಾರೆ.  ಹೊಸ ಪ್ರಕರಣದ ಬಗ್ಗೆ ಗುವಾಹಟಿ ಪೊಲೀಸರಿಂದ ಯಾವುದೇ ವಿವರಗಳನ್ನು ಪಡೆಯುವಲ್ಲಿ ಅಸ್ಸಾಂನಲ್ಲಿರುವ ತಮ್ಮ ವರದಿಗಾರರು ವಿಫಲರಾಗಿದ್ದಾರೆ ಎಂದು ದಿ ವೈರ್‌ ತಿಳಿಸಿದೆ.

ಕರಣ್‌ ಥಾಪರ್‌ ಹೆಸರಿನಲ್ಲಿ ಬಿಟ್‌ಕಾಯಿನ್‌ ಸ್ಕ್ಯಾಮ್‌! ಮೋಸ ಹೋಗದಿರಿ
ಬೆಂಗಳೂರು: “ಹೇಯ್….ನೀವು ನಿಮ್ಮ ಹಣವನ್ನು ಡಬಲ್‌ ಮಾಡ್ಬೇಕಾ? ಇಪ್ಪತ್ತಾರು ಸಾವಿರ ಹಾಕಿ ನಿಮ್ಮ ಹಣ ಡಬಲ್‌ ಮಾಡಬಹುದು. ಬಿಟ್‌ ಕಾಯಿನ್‌ ಮೇಲೆ ಇನ್ವೆಸ್ಟ್‌ ಮಾಡಿ…” ಎಂಬ ನಿಮ್ಮ ಫೇಸ್ಬುಕ್‌, ಇನ್ಸ್ಟಾ ಎಲ್ಲಾ ಕಡೆ ಪಾಪಪ್‌ ಅಗುವ ಮೆಸೆಜ್‌ಗಳನ್ನು ನೀವು ನೋಡಿರಬಹುದು.

ನೀವು ಇದನ್ನು ನಂಬಿ ದುಡ್ಡು ಹಾಕಿದರೆ, ಪಂಗನಾಮ ಗ್ಯಾರಂಟಿ.

ಈ ಬಾರಿ, ಈ ಸ್ಕ್ಯಾಮರ್‌ಗಳು ತಮ್ಮ ಸ್ಕ್ಯಾಮನ್ನು ಪ್ರಚಾರ ಮಾಡಲು ಬಳಸಿಕೊಂಡದ್ದು ಬೇರೆ ಯಾರನ್ನೂ ಅಲ್ಲ, ತನ್ನ ಪ್ರಶ್ನೆಗಳ ಮೂಲಕವೇ ಬೆವರಿಳಿಸಿ, ನೀರು ಕುಡಿಸುತ್ತಿದ್ದ ಖ್ಯಾತ ಸಂದರ್ಶಕ ಕರಣ್‌ ಥಾಪರ್!‌ ಕರಣ್‌ ಥಾಪರ್‌ರವರು ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರನ್ನು, ಸಾಹಿತಿಗಳನ್ನು, ಸಿನೇಮಾ ತಾರೆಗಳನ್ನು, ನೋಬೆಲ್‌ ಪುರಸ್ಕೃತರನ್ನು ಸಂದರ್ಶನ ಮಾಡಿ ಹೆಸರಾದವರು. ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಅವರ ಜೊತೆಗಿನ ʼಪುಲ್ವಾಮ ದಾಳಿʼಯ ಬಗೆಗಿನ ಸಂದರ್ಶನ ದೇಶದಾದ್ಯಂತ ಚರ್ಚೆಯಾಗಿತ್ತು. ಇನ್ಫೋಟೈನ್‌ಮೆಂಟ್ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಅಧ್ಯಕ್ಷರಾಗಿರುವ ಥಾಪರ್, ಸದ್ಯ ದಿ ವೈರ್‌ನಲ್ಲಿ ಸಂದರ್ಶನಗಳನ್ನು ನಡೆಸಿಕೊಡುತ್ತಾರೆ.

ಕರಣ್‌ ಥಾಪರ್‌ರನ್ನು ಪತ್ರಕರ್ತೆ ಪೂಜಿತಾ ದೇವರಾಜು ಸನ್‌ ಟಿವಿಯಲ್ಲಿ ಸಂದರ್ಶನ ಮಾಡಿರುವುದಾಗಿ, ಈ ಸಂದರ್ಶನದ ಪಠ್ಯವನ್ನು ಹಾಗೂ ತಿರುಚಲ್ಪಟ್ಟ ಫೋಟೋಗಳನ್ನು ಬಳಸಿ BBC.INDIA ಹಾಗೂ SUNTV ಹೆಸರಿನಲ್ಲಿ ಫೇಕ್‌ ವೆಬ್‌ಸೈಟ್‌ ಸೃಷ್ಟಿಸಿ ಪ್ರಕಟಿಸಲಾಗಿದೆ. ಈ ಸುಳ್ಳು ವರದಿಯಲ್ಲಿ ಸ್ಕ್ಯಾಮರ್‌ಗಳು ತಮ್ಮ Immediate Bitwave  ವೆಬ್‌ಸೈಟ್‌ನ (octshareb.com) ಲಿಂಕ್‌ ಅನ್ನು ಮಧ್ಯೆ ಮಧ್ಯೆ ಉಲ್ಲೇಖಿಸಿದ್ದಾರೆ.

octshareb.com ಎಂಬ ಲಿಂಕ್‌ನಲ್ಲಿ ಇರುವ ಬಿಬಿಸಿ ನ್ಯೂಸನ್ನು ಹೋಲುವ ವೆಬ್‌ಸೈಟ್‌ ಒಂದನ್ನು ಇವರು ಸೃಷ್ಟಿಸಿದ್ದಾರೆ. ಈ ಲಿಂಕನ್ನು ತೆರೆದಾಗ ನಾವು ಸಹಜವಾಗಿಯೇ ಇದು ಬಿಬಿಸಿ ಇಂಡಿಯಾದ ವೆಬ್‌ ಪೋರ್ಟಲ್‌ ಎಂಬಂತೆ ತೋರುತ್ತದೆ. ಆದರೆ, ಬಿಬಿಸಿಯ ಲೋಗೋ ಮೇಲೆ ನಾವು ಕ್ಲಿಕ್‌ ಮಾಡಿದರೆ ಅದು ಹೋಮ್‌ ಪೇಜಿಗೆ ತೆರೆದುಕೊಳ್ಳುವುದಿಲ್ಲ.

ಮಾತ್ರವಲ್ಲ, ಈ ಬಿಬಿಸಿ ಪೇಕ್‌ ವೆಬ್‌ಸೈಟ್‌ ನಲ್ಲಿ ಬಿಬಿಸಿ ಎಪ್ರಿಲ್‌  10ರಂದು ಪ್ರಕಟಿಸಿದ China aircraft carrier ‘seals off’ Taiwan in drill, Nashville council to hold vote on expelled lawmaker, What does the huge leak of Ukraine war documents tell us? ಎಂಬ ಮೂರು ವರದಿಗಳನ್ನು ಕ್ರಮವಾಗಿ ಒಂದು ಗಂಟೆ, 29 ನಿಮಿಷ, ಐದು ಗಂಟೆಗಳ ಹಿಂದಿನ ಪ್ರಕಟಣೆ ಎಂಬಂತೆ ಎಡಿಟ್‌ ಮಾಡಲಾಗಿದೆ. ಆದರೆ ಈ ವರದಿಗಳ ಮೇಲೆ ಕ್ಲಿಕ್‌ ಮಾಡಿದರೆ, ಇದು ತೆರೆದುಕಳ್ಳುವುದಿಲ್ಲ. ಬದಲಾಗಿ, ಈ ವರದಿಗಳ ಹೆಡ್‌ಲೈನ್‌ಗಳನ್ನು ಕಾಪಿ ಮಾಡಿ ಸರ್ಚ್‌ ಇಂಜಿನ್‌ನಲ್ಲಿ ಹುಡುಕಿದರೆ, ಬಿಬಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಎಪ್ರಿಲ್‌ 10ರಂದು ಪ್ರಕಟಿಸಿರುವ ಈ ವರದಿಗಳನ್ನು ಓದಬಹುದು.

ಪೂಜಿತಾರವರು ಕರಣ್‌ರನ್ನು ಸಂದರ್ಶನ ಮಾಡಿದ್ದಾರೆ ಎಂದು ಬಿಂಬಿಸಲಾಗಿರುವ ಈ ವರದಿಯಲ್ಲಿ ಪೂಜಿತಾ, “ನೀವು ತುಂಬಾ ಲೇಜೀ, ಒಂದು ವರ್ಷದ ಹಿಂದೆ ನಿಮ್ಮಲ್ಲಿ ಹಳೇಯ ಕಾರು, ಸಣ್ಣ ಅಪಾರ್ಟ್‌ಮೆಂಟ್‌ ಇತ್ತು. ಈಗ ದೊಡ್ಡ ಅಪಾರ್ಟ್‌ ಮೆಂಟ್‌, ಹೊಸ ಕಾರು ಎಲ್ಲಾ ಇದೆ. ಎಲ್ಲಿಂದ ಬಂತು ಕಾಸು?” ಎಂದು ಕೇಳುತ್ತಾರೆ.

ಆಗ ಕರಣ್‌ ಥಾಪರ್‌ ತಮ್ಮ ಫೋನಿನಲ್ಲಿ ಇಮಿಡಿಯೆಟ್‌ ಬಿಟ್‌ ವೇವ್‌ನ ಲಿಂಕ್‌ ಓಪನ್‌ ಮಾಡಿ ತೋರಿಸುತ್ತಾರೆ. ಇದರಲ್ಲಿ ಹೇಗೆ 26 000 ಕಾಸು ಹಾಕಿ ಹಣ ಹೆಚ್ಚಿಸಿಕೊಳ್ಳಬಹುದು ಎಂದು ಹೇಳುತ್ತಾರೆ.

ಸ್ವತಃ ಪೂಜಿತಾರವರ ಫೋನನ್ನು ತೆಗೆದುಕೊಂಡು 26000 ಇನ್ವೆಸ್ಟ್‌ ಮಾಡಿ, ಸ್ವಲ್ಪ ಸಮಯಯದ ನಂತರ 31 094 ಆಗಿದ್ದನ್ನು ಅವರು ತೋರಿಸುತ್ತಾರೆ.

ಈ ವರದಿಯಲ್ಲಿ ಲಿಂಕ್‌ಅನ್ನು ಮಧ್ಯ ನೀಡಿರುವುದರಿಂದ, ಈ ವರದಿಯನ್ನು ಓದುವ ಓದುಗ ಈ ವಿಚಾರ ಸತ್ಯವೆಂದು ತಿಳಿದು, ಲಿಂಕ್‌ ತೆರೆದು ಹಣ ಹೂಡುವಂತೆ ಮಾಡುವುದು ಈ ಸ್ಕ್ಯಾಮರ್‌ಗಳ ತಂತ್ರ.

ಇದನ್ನೂ ಓದಿ: “ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!”: ವಂಚನೆಯ ಆಳ-ಅಗಲ

ಇದರ ಜೊತೆಗೆ, ಬಿಬಿಸಿ ಇಂಡಿಯಾದ ಸುದ್ದಿ ಸಂಪಾದಕ ಎಂದು ಅಮೀರ್‌ ಪಾಲೇಕರ್‌ ಎಂಬ ಫೋಟೋವನ್ನು ಬಳಸಿ, ಕರಣ್‌ ಥಾಪರ್‌ ಹೇಳಿದ ವೆಬ್‌ಸೈಟಿನಿಂದ ತಾನೂ ಹಣ ಸಂಪಾದಿಸಿದ್ದಾಗಿ ಬರೆಯಲಾಗಿದೆ. ಜೊತೆಗೆ, ಹಣ ಜಮೆಯಾದ ಸುಳ್ಳು ಬ್ಯಾಂಕ್ ವಿವರಗಳನ್ನೂ ನೀಡಲಾಗಿದೆ.

ಈ ವರದಿಯಲ್ಲಿ, ಕರಣ್ ಥಾಪರ್‌ ಹಾಗೂ ಪೂಜಿತಾರ ಫೋಟೋಗಳನ್ನು ಸನ್‌ ಟಿವಿಯ ಲೋಗೋದ ಜೊತೆಗೆ ಬಳಸಲಾಗಿದೆ. ಹೀಗಾಗಿ, ಓದುಗ ಈ ಸಂದರ್ಶನವನ್ನು ಸತ್ಯ ಎಂದು ತಿಳಿಯುತ್ತಾನೆ. ಕರಣ್‌ ಥಾಪರ್‌ರಂತಹ ಖ್ಯಾತನಾಮರು ಇಂತಹ ಬಿಟ್‌ ಕಾಯಿನ್‌ ಹೂಡಿಕೆಯನ್ನು ಮಾಡುವಾಗ ತಾವೂ ಮಾಡಬಹುದು ಎಂಬಂತೆ ಪ್ರೇರೇಪಿಸುತ್ತದೆ.

ಕರಣ್‌ ಥಾಪರ್‌ ಸ್ಪಷ್ಟೀಕರಣ

ಆದರೆ, ಈ ಸಂದರ್ಶನ ಒಂದು ಅಪ್ಪಟ ಸುಳ್ಳು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕರಣ್‌ ಥಾಪರ್‌, ತಾವು ಅಂತಹ ಹಣ ಸಂಪಾದಿಸುವ ವೆಬ್‌ಸೈಟ್‌ ಬಳಿಸಿಲ್ಲ, ಇದೊಂದು ಸುಳ್ಳು ವೆಬ್‌ಸೈಟ್‌ ಮತ್ತು ಸುಳ್ಳು ವರದಿ ಎಂದು ಹೇಳಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರಣ್‌ ಥಾಪರ್‌, “ ನಕಲಿ ವೆಬ್‌ಪುಟಗಳು ತಮ್ಮ ಮೇಲೆ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡುತ್ತಿವೆ ಮತ್ತು ಅವುಗಳನ್ನು ನಂಬಬೇಡಿ,” ಎಂದು ಹೇಳಿದ್ದಾರೆ.

“ನನ್ನ ಬಗ್ಗೆ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಚಾರಗಳೊಂದಿಗೆ BBC.INDIA ಮತ್ತು SUNTV ಹೆಸರುಗಳನ್ನು ಬಳಸಿಕೊಂಡು ನಕಲಿ ಮತ್ತು ಫೇಕ್ ವೆಬ್‌ಪೇಜ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂಬುದು ಸ್ನೇಹಿತರು ಮತ್ತು ಹಿತೈಷಿಗಳ ಮೂಲಕ ನನ್ನ ಗಮನಕ್ಕೆ ಬಂದಿದೆ” ಎಂದು ಥಾಪರ್ ಹೇಳಿಕೆಯಲ್ಲಿ ಬರೆದಿದ್ದಾರೆ.

“octequiti.com’ ಎಂಬ ವೆಬ್‌ಪೇಜ್ ನನ್ನ ಮತ್ತು SUNTV ನ ಪೂಜಿತ ದೇವರಾಜು ನಡುವಿನ ಆಪಾದಿತ ಸಂಭಾಷಣೆಯನ್ನು ಪ್ರಕಟಿಸಲಾಗಿದೆ, ಅಲ್ಲಿ ಒಂದು ನಿರ್ದಿಷ್ಟ ಮೋಸದಿಂದ ಹಣ ಮಾಡುವ ಯೋಜನೆಯ ವೆಬ್‌ಸೈಟ್ ಅನ್ನು ಕ್ಲಿಕ್ ಬೈಟ್ ಶೀರ್ಷಿಕೆಯೊಂದಿಗೆ ಪ್ರಚಾರ ಮಾಡಲಾಗುತ್ತಿದೆ” ಎಂದು ಅವರು ಬರೆದಿದ್ದಾರೆ.

“ಜವಾಬ್ದಾರಿಯುತ ನಾಗರಿಕನಾಗಿ, ನನ್ನ ಪ್ರತಿಕ್ರಿಯೆಯನ್ನು ನೀಡುವುದು ಮತ್ತು ಈ ವಿಚಾರದಲ್ಲಿ ನಿಜವಾದ ಹಾಗೂ ನಿಖರವಾದ ಸಂಗತಿಗಳನ್ನು ಸಾರ್ವಜನಿಕರ ಮುಂದೆ ಇಡುವುದು ಅಗತ್ಯವೆಂದು ನಾನು ಭಾವಿಸುತ್ತೇನೆ. ಆದ್ದರಿಂದ, ಆರಂಭದಲ್ಲಿ, ನಾನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಚಾರವನ್ನು ಸುಳ್ಳು ಮತ್ತು ಕಟ್ಟುಕಥೆ ಎಂದು ಹೇಳುತ್ತಾ ನಿರಾಕರಿಸುತ್ತೇನೆ. ಇದನ್ನು ನಂಬಬೇಡಿ ಅಥವಾ ಅವರು ಹೇಳಿದಂತೆ ಕೇಳಬೇಡಿ ಎಂದು ಸಾರ್ವಜನಿಕರಿಗೆ ಈ ಮೂಲಕ ವಿನಂತಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಈ ಮೂಲಕ ತಾವು ಇಂತಹ “ಸಂದರ್ಶನವನ್ನು ಎಂದಿಗೂ ನೀಡಿಲ್ಲ, ಪೋಸ್ಟ್‌ಗಳು ಮತ್ತು ವೆಬ್‌ಪೇಜ್‌ಗಳಲ್ಲಿ ಉಲ್ಲೇಖಿಸಿರುವಂತಹ ಹೇಳಿಕೆಗಳನ್ನು ನೀಡಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಈಗಾಗಲೇ ವಿಚಾರವನ್ನು ಫೇಸ್‌ಬುಕ್‌ಗೆ ರಿಪೋರ್ಟ್‌ ಮಾಡಿ, ಪೋಸ್ಟನ್ನು ತೆಗೆದುಹಾಕಲು ವಿನಂತಿಸಿದ್ದೇನೆ. ಈ ಮಾನಹಾನಿಕರ ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳು/ವೆಬ್‌ಪೇಜ್‌ಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ನಾನು ಬಿಬಿಸಿ ಇಂಡಿಯಾ ಮತ್ತು SUNTV ಗೆ ವಿಚಾರದ ಬಗ್ಗೆ ಸೂಚನೆ ನೀಡಿದ್ದೇನೆ,” ಎಂದು ಥಾಪರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.