karnataka government – Peepal Media

ಕೆಎಸ್ಡಿಎಲ್ ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ
ಬೆಂಗಳೂರು: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ (ಕೆಎಸ್ಡಿಎಲ್) ಕಾರ್ಖಾನೆಯು 2023-24ನೇ ಸಾಲಿನಲ್ಲಿ ಮಾಡಿರುವ 362.07 ಕೋಟಿ ರೂಪಾಯಿ ಲಾಭದ ಪೈಕಿ 108.62 ಕೋಟಿ ರೂಪಾಯಿಗಳ ಲಾಂಭಾಂಶದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಕಾರ್ಖಾನೆ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು ಮಂಗಳವಾರ ಇಲ್ಲಿ ಹಸ್ತಾಂತರಿಸಿದರು.

ವಿಧಾನಸಭೆ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಚೆಕ್ ನೀಡಲಾಯಿತು. ಇದಲ್ಲದೆ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ ಐದು ಕೋಟಿ ರೂಪಾಯಿಗಳ ಚೆಕ್ ನೀಡಲಾಯಿತು. ಕಾರ್ಖಾನೆ ಇತಿಹಾಸದಲ್ಲಿ ಇಷ್ಟು ಮೊತ್ತದ ಲಾಭಾಂಶದ ಚೆಕ್ ನೀಡಿರುವುದು ಇದೇ ಮೊದಲು.

ನಂತರ ಮಾತನಾಡಿದ ಮುಖ್ಯಮಂತ್ರಿಯವರು, ‘ಸಾರ್ವಜನಿಕ ಉದ್ದಿಮೆಗಳು ಲಾಭದಾಯಕ ವಹಿವಾಟು ನಡೆಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ಐದು ವರ್ಷಗಳ ಹಿಂದೆ 15.91 ಕೋಟಿ ರೂಪಾಯಿ ಲಾಭಾಂಶ ಕೊಟ್ಟಿದ್ದ ಈ ಉದ್ದಿಮೆಯು ಈ ವರ್ಷ 108 ಕೋಟಿ ರೂ.ಗಳಿಗೂ ಹೆಚ್ಚಿನ ಡಿವಿಡೆಂಡ್ ಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಎಂ ಬಿ ಪಾಟೀಲ ಮಾತನಾಡಿ, ‘ಈಗಿನ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೆಎಸ್ಡಿಎಲ್ ಕಾರ್ಖಾನೆಯು ಉನ್ನತಿ ಕಾಣುತ್ತಿದೆ. ಈ ಲಾಭವನ್ನು ಇನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಹೊಸಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದರು.

ಸಾರ್ವಜನಿಕ ಉದ್ದಿಮೆಗಳು ತಮ್ಮ ಲಾಭಾಂಶದಲ್ಲಿ ಶೇ.30ರಷ್ಟನ್ನು ಸರಕಾರಕ್ಕೆ ಕೊಡಬೇಕಾದ್ದು ನಿಯಮವಾಗಿದೆ. ಇದಕ್ಕೆ ತಕ್ಕಂತೆ ಈ ಲಾಭಾಂಶವನ್ನು ಸರಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧ್ಯಕ್ಷ ನಾಡಗೌಡ ವಿವರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ.ಎಂ.ಪ್ರಶಾಂತ್, ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಾದ ಕೆ.ಎಲ್.ರವೀಶ, ಗಂಗಪ್ಪ ಅವರು ಉಪಸ್ಥಿತರಿದ್ದರು.

ಅನ್ನಭಾಗ್ಯಕ್ಕೆ ಪಂಜಾಬ್ ಅಕ್ಕಿ: ಕನ್ನಡ ದಿನಪತ್ರಿಕೆಯೊಂದರ ವರದಿಗೆ ಆಹಾರ ಇಲಾಖೆ ಸ್ಪಷ್ಟನೆ
ಬೆಂಗಳೂರು: ಡಿಸೆಂಬರ್‌ 2,  2024 ರಂದು ಕನ್ನಡದ ದಿನಪತ್ರಿಕೆಯೊಂದರಲ್ಲಿ “ಅನ್ನಭಾಗ್ಯಕ್ಕೆ ಪಂಜಾಬ್ ಅಕ್ಕಿ” ಎನ್ನುವ ಶೀರ್ಷಿಕೆಯ ಜೊತೆಗೆ ಸುದ್ದಿಯೊಂದು ಪ್ರಕಟವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸ್ಪಷ್ಟಿಕರಣವನ್ನು ನೀಡಿದೆ.

ಈ ಪತ್ರಿಕೆಯು ʼಅನ್ನಭಾಗ್ಯಕ್ಕೆ ಪಂಜಾಬ್ ಅಕ್ಕಿʼ ಎಂಬ ಶೀರ್ಷಿಕೆ ನೀಡಿ, ಎಂ.ಎಸ್.ಪಿ ದರಕ್ಕೆ ಹೋಲಿಸಿದರೆ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ 300 ರಿಂದ 400 ರುಪಾಯಿ ಕಡಿಮೆ ಇದ್ದು, ಬೆಲೆ ಕುಸಿದಾಗ ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಸ್ಥಿರಗೊಳಿಸುವುದೇ ಎಂ.ಎಸ್.ಪಿ. ಯೋಜನೆಯ ಮುಖ್ಯ ಉದ್ದೇಶ ಎಂದು ಪ್ರಕಟಿಸಲಾಗಿತ್ತು.

“ಇದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯವು ಡಿ.ಸಿ.ಪಿ. (De-Centralized procurement) ರಾಜ್ಯವಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನುಸಾರ ರಾಜ್ಯದ ರೈತರಿಂದ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಿ ಸಾರ್ವಜನಿಕ ವಿತರಣಾ ಪದ್ಧತಿಯಡಿ Central NFSA ಪಡಿತರ ಫಲಾನುಭವಿಗಳಿಗೆ ಮಾತ್ರ ಹಂಚಿಕೆ ಮಾಡಲು ಕ್ರಮವಹಿಸಬೇಕಾಗಿರುತ್ತದೆ. ಅದರಂತೆ 2024- 25ನೇ ಸಾಲಿನಲ್ಲಿ 2.24 ಲಕ್ಷ ಮೆಟ್ರಿಕ್‌ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ರಾಜ್ಯ ಸರ್ಕಾರದಿಂದ ಇದಕ್ಕೆ ಸಂಬಂಧಿಸಿದಂತೆ ದಿನಾಂಕ 29-11-20248 ಆದೇಶವನ್ನು ಹೊರಡಿಸಲಾಗಿದ್ದು, ರೈತರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎನ್.ಐ.ಸಿ. ಸಂಸ್ಥೆಗೆ ಅಗತ್ಯ ಸೂಚನೆ ನೀಡಲಾಗಿರುತ್ತದೆ.” ‌

“ಹಾಗೆಯೇ, ಕೇಂದ್ರ ಸರ್ಕಾರ ಅನುಮೋದಿತ ಖರೀದಿ ಅವಧಿ ಎಂದರೆ 01 ಜನವರಿ 2025 ರಿಂದ 31 ಮಾರ್ಚ್ 2025 ರವರಗೆ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಭತ್ತ ಖರೀದಿಗೆ ಅಗತ್ಯವಿರುವ ಖರೀದಿ ಕೇಂದ್ರಗಳನ್ನು ಗುರುತಿಸಿ ಪ್ರಾರಂಭಿಸಲು ಈಗಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಗಳ ಅಧ್ಯಕ್ಷತೆಯಲ್ಲಿರುವ ಟಾಸ್ಕ್‌ ಫೋರ್ಸ್ ಸಮಿತಿಗಳಲ್ಲಿ ನಿರ್ಣಯಿಸಿ ಕ್ರಮವಹಿಸಲಾಗುತ್ತಿದೆ ಹಾಗೂ ವ್ಯಾಪಕ ಪ್ರಚಾರ ಕಾರ್ಯವನ್ನು ಸಹ ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಲಾಗಿದೆ. 2023-24ನೇ ಸಾಲಿನಲ್ಲಿ ಸಹ 2.24 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿ, ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಕೂಡ ರೈತರಿಂದ ಭತ್ತ ಖರೀದಿಯಾಗಿರುವುದಿಲ್ಲ,” ಎಂದು ಇಲಾಖೆ ಸ್ಪಷ್ಟಿಕರಣವನ್ನು ನೀಡಿದೆ.

ಡಿ.ಸಿ.ಪಿ. ರಾಜ್ಯವು ಭತ್ತವನ್ನು ಖರೀದಿಸಿದಾಗ ಅದರಿಂದ ಪಡೆಯುವ ಭತ್ತ ಪರಿವರ್ತಿತ ಅಕ್ಕಿ ಪ್ರಮಾಣವನ್ನು ಕೇವಲ Central NFSA ಪಡಿತರ ಫಲಾನುಭವಿಗಳಿಗೆ ಮಾತ್ರ ಹಂಚಿಕೆ ಮಾಡಲು ಅವಕಾಶವಿರುತ್ತದೆ. ರಾಜ್ಯ NFSA ಪಡಿತರ ಫಲಾನುಭವಿಗಳಿಗೆ ಕೇಂದ್ರ NFSA ಫಲಾನುಭವಿಗಳಿಗೆ ನೀಡಿದಂತೆಯೇ ಪ್ರತಿ ತಿಂಗಳು ಪ್ರತಿ ಪಿಹೆಚ್.ಹೆಚ್ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯವನ್ನು ನೀಡುತ್ತಿದ್ದು, ಇದಕ್ಕಾಗಿ ಭಾರತೀಯ ಆಹಾರ ನಿಗಮದಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (Open Market Sale Scheme- OMSS) ಅಕ್ಕಿಯನ್ನು ಖರೀದಿಸಲಾಗುತ್ತಿದೆ. ಪ್ರತಿ ಕ್ವಿಂಟಲ್ ಗೆ 2800 ರುಪಾಯಿ ಎಂದು ನಿಗಧಿಪಡಿಸಿ Excluding Transportation ಎಂದು ತಿಳಿಸಲಾಗಿರುತ್ತದೆ. ಇದರಿಂದಾಗಿ, ಜಿಲ್ಲೆಗಳಲ್ಲಿನ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಯಾವ ರಾಜ್ಯದ ಅಕ್ಕಿಯ ಲಾಟ್ ಲಭ್ಯವಿರುತ್ತದೆಯೋ ಅದರನ್ವಯ ನಿಗದಿತ ಬೆಲೆ 2800 ರುಪಾಯಿಯೊಂದಿಗೆ ಸಾಗಾಟ ದರವನ್ನು ಸೇರಿಸಿ ದರಗಳನ್ನು ನಿಗಧಿಪಡಿಸಲಾಗಿರುತ್ತದೆ.

“ಇದರಿಂದಾಗಿ ರಾಜ್ಯ ಸರ್ಕಾರದಿಂದ ಯಾವುದೇ ಇತರೇ ರಾಜ್ಯಗಳಿಂದ ನೇರವಾಗಿ ಅಕ್ಕಿಯನ್ನು ಖರೀದಿಸದೇ, ಕೇಂದ್ರ ಸರ್ಕಾರದ ಯೋಜನೆಯಾದ OMSS ರಡಿ ಭಾರತ ಆಹಾರ ನಿಗಮದಿಂದ ಖರೀದಿಸಲಾಗುತ್ತಿದೆ. ರಾಜ್ಯವು ಕೇಂದ್ರ ಸರ್ಕಾರದ FCI ನಿಂದ ಖರೀದಿ ಮಾಡಿದ ಅಕ್ಕಿಯ ಮೂಲ ತಿಳಿದಿರುವುದಿಲ್ಲ. FCI ಗೋದಾಮಿನಿಂದ ಖರೀದಿಸಿದ ಅಕ್ಕಿಯನ್ನು ನಮ್ಮ ರಾಜ್ಯದ ಸಗಟು ಮಳಿಗೆಗಳಿಗೆ ಕೊಂಡೊಯ್ದು, ಅಲ್ಲಿಂದ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ ಆಹಾರ ಭದ್ರತೆ ಯೋಜನೆಯಡಿ ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಪಂಜಾಬ್, ಹರಿಯಾಣ, ಒಡಿಶಾ, ಉತ್ತರವದೇಶ ಇತ್ಯಾದಿ ಅಕ್ಕಿ ಭಾಗ್ಯ ಲಭಿಸುತ್ತಿದೆ ಎಂದು ಪ್ರಕಟಿಸಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ,” ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

ಅನುಮತಿ ಇಲ್ಲದೆ ಪುತ್ತೂರು ವಿವೇಕಾನಂದ ಕಾಲೇಜಿಗೆ ಸ್ವಾಯತ್ತತೆ: ಮಂಗಳೂರು ವಿವಿಗೆ ಸರ್ಕಾರದಿಂದ ನೋಟೀಸ್
ಬೆಂಗಳೂರು: ಆರ್‌ಎಸ್‌ಎಸ್‌ ನಾಯಕ, ಹಿಂದುತ್ವವಾದಿ ಕಲ್ಲಡ್ಕ ಪ್ರಭಾಕರ ಭಟ್‌ ಅಧ್ಯಕ್ಷರಾಗಿರುವ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಇರುವ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳಿಗೆ ಸರ್ಕಾರದ ಅನುಮತಿ ಪಡೆಯದೆ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಯತ್ತ ಸ್ಥಾನಮಾನ ನೀಡಿತ್ತು.

ಈ ಸ್ಥಾನಮಾನ ನೀಡುವ ಮುನ್ನ ರಾಜ್ಯ ಸರ್ಕಾರದ ಅನುಮತಿ ಪಡೆಯುವಂತೆ ಯುಜಿಸಿ ಹೇಳಿದ್ದರೂ ಮಂಗಳೂರು ವಿವಿ ನಿಯಮವನ್ನು ಕಡೆಗಣಿಸಿದೆ. ವಿವಿಯು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಅಧಿನಿಯಮ 2000ರ ಪ್ರಕರಣ 64 ಅನ್ವಯ ಸರ್ಕಾರದ ಪೂರ್ವ ಅನುಮತಿಯನ್ನು ಪಡೆಯಬೇಕು. ಕರ್ನಾಟಕ ರಾಜ್ಯ ಸರ್ಕಾರ ವಿವಿಗೆ ನೋಟೀಸು ನೀಡಿದೆ ಎಂದು ದಿ ಫೈಲ್‌ ವರದಿ ಮಾಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕಾಲೇಜಿಗೆ ಮಂಗಳೂರು ವಿವಿ 2022-23 ರಿಂದ 2031-32 ರ ವರೆಗೆ ಸ್ವಾಯತ್ತತೆ ನೀಡಿತ್ತು. ಈ  ಸಂಬಂಧ ಅಗಸ್ಟ್‌ 10, 2022 ರಂದು ವಿವಿ ಪುತ್ತೂರಿನ ಈ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿತ್ತು.

ವಿವಿಗೆ ನೀಡಿದ ನೊಟೀಸಿನಲ್ಲಿ ಏನಿದೆ? (ಇ- ಕ್ರಮಾಂಕ; ಇಡಿ 173 ಯುಡಿವಿ 2023, ದಿನಾಂಕ 30/09/2024)

ಶ್ರೀ ವಿವೇಕಾನಂದ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 64ರ ಅನ್ವಯ ವಿಶ್ವವಿದ್ಯಾಲಯವು ಸರ್ಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯವಾಗಿರುತ್ತದೆ. ಆದರೆ ಮಂಗಳೂರು ವಿಶ್ವವಿದ್ಯಾಲಯವು ಸರ್ಕಾರದ ಪೂರ್ವಾನುಮತಿ ಪಡೆಯದೇ ಸ್ವಾಯತ್ತ ಸ್ಥಾನಮಾನ ನೀಡಿರುವುದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 64ರ ಸ್ಪಷ್ಟ ಉಲ್ಲಂಘನೆ ಮಾಡಿರುತ್ತದೆ ಎಂದು ನೊಟೀಸಿನಲ್ಲಿ ಹೇಳಲಾಗಿದೆ.

“ಈ ಹಿನ್ನೆಲೆಯಲ್ಲಿ ಸರ್ಕಾರದ ಪೂರ್ವಾನುಮತಿ ಪಡೆಯದೇ ತೆಗೆದುಕೊಂಡಿರುವಂತಹ ಈ ನಿರ್ಣಯಕ್ಕೆ ಕಾರಣಕರ್ತರಾದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 8ರ ಅನ್ವಯ ಏಕೆ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಸೂಕ್ತ ಕಾರಣ, ಸ್ಪಷ್ಟಿಕರಣದೊಂದಿಗೆ ಲಿಖಿತ ಹೇಳಿಕೆಯನ್ನು 15 ದಿನದೊಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಾವುಗಳು ಹೇಳುವುದು ಏನೂ ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು,” ಎಂದು ನೋಟೀಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡದ 47% ಸಿಬ್ಬಂದಿಗಳು: ಕಡತಗಳ ರಾಶಿ!
ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯಗಳು ಮತ್ತು ವಿವಿಧ ಇಲಾಖೆಗಳಲ್ಲಿ ಪ್ರಿಂಟರ್‌, ಸ್ಕ್ಯಾನರ್‌ ಇಲ್ಲ ಎಂಬ ಕಾರಣದಿಂದ ಕಡತ ವಿಲೇವಾರಿ ತಡವಾಗುತ್ತಿದೆ. ಈ ಕಾರಣಗಳನ್ನು ನೆಪವಾಗಿಟ್ಟುಕೊಂಡು ಇಲಾಖೆಗಳ 47% ಅಧಿಕಾರಿಗಳು, ಸಿಬ್ಬಂದಿಗಳು ಸಮುಯಕ್ಕೆ ಸರಿಯಾಗಿ ಕೆಲಸ ಮುಗಿಸುತ್ತಿಲ್ಲ ಎಂದು ದಿ ಫೈಲ್‌ ವರದಿ ಮಾಡಿದೆ.

ಅಧಿಕಾರಿಗಳು, ನೌಕರರ ಹಾಜರಾತಿಯ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಪರಿಶೀಲನೆ ನಡೆಸಿದ ಬೆನ್ನಲ್ಲೇ ಅಧಿಕಾರಿಗಳು ಕೆಲಸಗಳ್ಳರಾಗಿರುವುದು ಬೆಳಕಿಗೆ ಬಂದಿದೆ. ಪ್ರತೀ ವರ್ಷ ಇ-ಆಡಳಿತ ಇಲಾಖೆ ಕಂಪ್ಯೂಟರ್‌, ಸ್ಕ್ಯಾನರ್, ಪ್ರಿಂಟರ್‌ಗಳನ್ನು ಖರೀದಿಸುತ್ತಿದ್ದರೂ ಈ ನೆಪ ಹೇಳುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

ಈ ಅವ್ಯವಸ್ಥೆಯಿಂದಾಗಿ ರಾಶಿ ಕಡತಗಳು ವಿಲೇವಾರಿಯಾಗದೆ ಬಿದ್ದಿವೆ. ಇದಕ್ಕೆ ಕಾರಣ ಸ್ಕ್ಯಾನರ್, ಪ್ರಿಂಟರ್‌ಗಳು ಇಲ್ಲದೇ ಇರುವುದು ಎಂದು ಸಚಿವಾಲಯ ನೌಕರರ ಸಂಘ ಹೇಳಿರುವುದು ದಿ ಫೈಲ್‌ ಉಲ್ಲೇಖಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಮಟ್ಟದ ಸಭೆ ನಡೆಸಿದ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಇಲಾಖೆಗಳಿಗೆ ಅಗತ್ಯವಾಗಿ ಬೇಕಾದ ಕಂಪ್ಯೂಟರ್‌, ಸ್ಕ್ಯಾನರ್, ಪ್ರಿಂಟರ್‌ಗಳ ಕೊರತೆಯಾಗಿರುವುದನ್ನು ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತಂದು, ಈ ಸಂಬಂಧ ಕಡತ ಮಂಡಿಸಿ ಅನುಮತಿ ಪಡೆಯಲು ಸಭೆಯಲ್ಲಿ ಸೂಚಿಸಿಲಾಗಿದೆ.

ರಾಮಮಂದಿರ ಉದ್ಘಾಟನೆ : ತಮ್ಮ ನಿಲುವುಗಳಿಂದ ಗಮನ ಸೆಳೆದ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ
ದೇಶಾದ್ಯಂತ ಜನವರಿ 22 ರಂದು ಎಲ್ಲಾ ಸರ್ಕಾರಿ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ಸರ್ಕಾರಿ ರಜೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸಬೇಕು ಎಂದು ಬಿಜೆಪಿ ನಾಯಕರು, ಹಿಂದೂ ಸಂಘಟನೆ ಮುಖಂಡರು ಒತ್ತಾಯಿಸಿದ್ದರು. ಆದರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಳೆ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ. ಆದರೆ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ನಾಳೆ ವಿಶೇಷ ಪೂಜೆ ಇರಲಿದೆ ಎಂದು ತಿಳಿಸಿದರು.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರ ಯಾವುದೇ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಪುನಸ್ಕಾರಕ್ಕೆ ಬ್ರೇಕ್ ಹಾಕಿದೆ. ಡಿಎಂಕೆ ಆಡಳಿತ ಇರುವ ತಮಿಳುನಾಡಿನ ಎಂಕೆ ಸ್ಟಾಲಿನ್‌ ನೇತೃತ್ವದ ರಾಜ್ಯ ಸರ್ಕಾರ ಮಾತ್ರ ನಾಳಿನ ಅಯೋಧ್ಯೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪೂಜೆ ಪುನಸ್ಕಾರ ನಡೆಸದಂತೆ ಆದೇಶ ಹೊರಡಿಸಿದೆ.

ಅಷ್ಟೆ ಅಲ್ಲದೆ ನಾಳೆ ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರ ಮಾಡದಂತೆ ಆದೇಶ ಹೊರಡಿಸಿದೆ ಎಂಬ ವರದಿ ತಮಿಳುನಾಡು ಮೂಲದಿಂದ ಕೇಳಿ ಬಂದಿದೆ

ತಮಿಳುನಾಡು ಸರ್ಕಾರದ ಈ ನಡೆ ವಿರುದ್ಧ ಸಿಡಿದೆದ್ದರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟ್ಟರ್‌ನಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಅವರು, 22 ಜನವರಿ 2024ರ (ನಾಳೆ) ಅಯೋಧ್ಯೆ ರಾಮಮಂದಿರ ಕಾರ್ಯಕ್ರಮಗಳ ನೇರ ಪ್ರಸಾರವನ್ನು ವೀಕ್ಷಿಸುವುದನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ತಮಿಳುನಾಡಿನಲ್ಲಿ ಶ್ರೀರಾಮನಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ದೇವಾಲಯಗಳಿವೆ. HR&CE ವ್ಯಾಪ್ತಿಯಡಿ ಬರುವ ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಯಾವುದೇ ಪೂಜೆ/ಭಜನೆ/ಪ್ರಸಾದ/ಅನ್ನದಾನವನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಖಾಸಗಿ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪೊಲೀಸರು ತಡೆಯುತ್ತಿದ್ದಾರೆ. ಪೆಂಡಾಲ್‌ಗಳನ್ನು ಕಿತ್ತು ಹಾಕುತ್ತೇವೆ ಎಂದು ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ ನಡೆ. ಈ ದ್ವೇಷಪೂರಿತ ನೀತಿಯನ್ನು ಬಲವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

TN govt has banned watching live telecast of #AyodhaRamMandir programmes of 22 Jan 24. In TN there are over 200 temples for Shri Ram. In HR&CE managed temples no puja/bhajan/prasadam/annadanam in the name of Shri Ram is allowed. Police are stopping privately held temples also… pic.twitter.com/G3tNuO97xS
— Nirmala Sitharaman (@nsitharaman) January 21, 2024

ಆದರೆ ಈ ಬಗ್ಗೆ ತಮಿಳುನಾಡು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ಬಿಜೆಪಿ ಉದ್ದೇಶಪೂರ್ವಕವಾಗಿ ಇಂತಹದೊಂದು ಸುದ್ದಿ ಬಿತ್ತರಿಸಿ ತಮಿಳುನಾಡು ಸರ್ಕಾರದ ವಿರುದ್ಧ ಅಭಿಪ್ರಾಯ ಹುಟ್ಟುವಂತೆ ಮಾಡಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಇತ್ತ ತಮಿಳುನಾಡು ದೇವಸ್ಥಾನಗಳಲ್ಲಿ ಯಾವುದೇ ವಿಶೇಷ ಪೂಜೆ ಇಲ್ಲ ಎಂದಿದ್ದು, ಕರ್ನಾಟಕ ಸರ್ಕಾರ ಸರ್ಕಾರಿ ರಜೆ ಘೋಷಣೆ ಇಲ್ಲ ಎಂದಿರುವ ಎರಡೂ ನಿಲುವುಗಳು RSS ಹಾಗೂ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ನಾಳೆ ದಾಸೋಹ, ಪಾನಕ, ಫಲಹಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಾಳೆ ರಾಜ್ಯದಲ್ಲಿ ರಜೆ ಘೋಷಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಎಸ್‌ಆರ್‌ಟಿಸಿಯಿಂದ ಪಾರ್ಸೆಲ್‌ ಸೇವೆ: ಬರಲಿವೆ 20 ಟ್ರಕ್‌ಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಜ್ಯದಲ್ಲಿ ಲಾಜಿಸ್ಟಿಕ್ಸ್ ವ್ಯವಹಾರವನ್ನು ನಡೆಸಲು ಸಿದ್ಧವಾಗಿದೆ.  ಈ ಸೇವೆಗಳನ್ನು ನೀಡಲು ಇಲಾಖೆ 20 ಟ್ರಕ್‌ಗಳನ್ನು ಖರೀದಿಸಿದೆ. ಈ ಸೇವೆಯನ್ನು ನೀಡುವ ಮೂಲಕ ಕರ್ನಾಟಕ ಸರ್ಕಾರ ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯನ್ನು ನಡೆಸುತ್ತಿರುವ ಇಲಾಖೆಗೆ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಲಾಜಿಸ್ಟಿಕ್ಸ್ ವ್ಯವಹಾರದ ಮೂಲಕ ಕೆಎಸ್‌ಆರ್‌ಟಿಸಿ ವಾರ್ಷಿಕ ₹ 100 ಕೋಟಿ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಕೆಎಸ್‌ಆರ್‌ಟಿಸಿಗೆ ಸೇರಿದ ಸುಮಾರು 8,000 ಸರ್ಕಾರಿ ಬಸ್‌ಗಳನ್ನು ನಾವು ಹೊಂದಿದ್ದೇವೆ ಮತ್ತು ಪ್ರತಿ ಬಸ್‌ನಲ್ಲಿ ಲಗೇಜ್‌ ಇಡಲು ಸ್ಥಳಾವಕಾಶವಿದೆ. ಮೊದಲು ಟೆಂಡರ್ ಕರೆದು ಈ ಬಸ್‌ಗಳಲ್ಲಿ ಲಗೇಜ್ ಜಾಗವನ್ನು ಖಾಸಗಿಯವರಿಗೆ ನೀಡುತ್ತಿದ್ದರು ಮತ್ತು ಗ್ರಾಹಕರಿಗೆ ಶುಲ್ಕವನ್ನು ವಿಧಿಸುತ್ತಿದ್ದರು. ಈ ಮೂಲಕ ಕೆಎಸ್‌ಆರ್‌ಟಿಸಿ ವರ್ಷಕ್ಕೆ ₹ 3 ಕೋಟಿ ಗಳಿಸುತ್ತಿತ್ತು.

ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅವಲಂಬಿಸುವ ಬದಲು ಲಾಜಿಸ್ಟಿಕ್ಸ್ ಸೇವೆಗಳ ಮೂಲಕ ನಿಗಮದ ಆದಾಯವನ್ನು ಹೆಚ್ಚಿಸಲು ಅವಕಾಶವಿರುವುದರಿಂದ ಸಾರಿಗೆ ಇಲಾಖೆ ಮೊದಲ ಹಂತದಲ್ಲಿ 20 ಟ್ರಕ್‌ಗಳನ್ನು ಖರೀದಿಸಲು ನಿರ್ಧರಿಸಿದೆ.

“ನಿಗಮವು 10 ಟ್ರಕ್‌ಗಳನ್ನು ಖರೀದಿಸಲು ಸೂಚಿಸಿದೆ, ಆದರೆ ನಾನು ಮೊದಲ ಹಂತದಲ್ಲಿ 20 ಟ್ರಕ್‌ಗಳೊಂದಿಗೆ ಸೇವೆಯನ್ನು ಪ್ರಾರಂಭಿಸಲು ಸೂಚಿಸಿದ್ದೇನೆ. ಹಾಗಾಗಿ, ಈ ಪ್ರತಿಯೊಂದು ಟ್ರಕ್‌ಗೆ ಸುಮಾರು ₹ 17 ಲಕ್ಷ ವೆಚ್ಚವಾಗಲಿದೆ. ಕೆಎಸ್‌ಆರ್‌ಟಿಸಿಯು 20 ಟ್ರಕ್‌ಗಳನ್ನು ಹೊಂದಿದ್ದು, ಅವುಗಳನ್ನು ಡಿಸೆಂಬರ್ 10 ರೊಳಗೆ ಪುಣೆಯಿಂದ ಅವುಗಳನ್ನು ತರಿಸಲಾಗುತ್ತದೆ,” ಎಂದು ರೆಡ್ಡಿ ತಿಳಿಸಿದ್ದಾರೆ.

ಇನ್ನು ಮುಂದೆ ಜನರು ಬಸ್ ಟಿಕೆಟ್‌ಗಳನ್ನು ಬುಕ್ ಮಾಡಿದಂತೆ ಲಾಜಿಸ್ಟಿಕ್ ಸೇವೆಗಳನ್ನು ಬುಕ್ ಮಾಡಬಹುದು ಎಂದು ಸಚಿವರು ಹೇಳಿದ್ದಾರೆ. “ಜನರು ಅಪ್ಲಿಕೇಶನ್‌ಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ ಮತ್ತು ಶೀಘ್ರದಲ್ಲೇ ಅವರು ಪಾರ್ಸೆಲ್ ಸೇವೆಗಳಿಗೆ ಇದೇ ರೀತಿಯಲ್ಲಿ ಬುಕ್ ಮಾಡಬಹುದು. ಆರಂಭದಲ್ಲಿ ಈ ಸೇವೆಯು ಕರ್ನಾಟಕದೊಳಗೆ ಮಾತ್ರ ಲಭ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.