karnataka politics – Peepal Media

ಹೆಚ್ಚು ಡಿಸಿಎಮ್‌ ಸ್ಥಾನಗಳಿಗೆ ಬೇಡಿಕೆ: ಕಾಂಗ್ರೆಸ್‌ ನಾಯಕರನ್ನು ದೆಹಲಿಗೆ ಕರೆದ ಹೈಕಮಾಂಡ್
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಸಿದ್ಧತೆ ಕುರಿತು ಚರ್ಚಿಸಲು ಕಾಂಗ್ರೆಸ್ ಹೈಕಮಾಂಡ್ ಜನವರಿ 11ರಂದು ಕರ್ನಾಟಕದ ಹಲವು ಸಚಿವರನ್ನು ದೆಹಲಿಗೆ ಕರೆಸಿದೆ. ರಾಜ್ಯದಲ್ಲಿ ಹೆಚ್ಚಿನ ಉಪಮುಖ್ಯಮಂತ್ರಿಗಳ ನೇಮಕಕ್ಕೆ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಸಚಿವರನ್ನು ಕರೆಸಲಾಗಿದೆ.

ಹಲವಾರು ಸಚಿವರು ವಿಶೇಷವಾಗಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದವರು ಈ ವರ್ಷದ ಮೇ ತಿಂಗಳೊಳಗೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ವಿವಿಧ ಜಾತಿಗಳಿಗೆ ಪ್ರಾತಿನಿಧ್ಯ ನೀಡಲು ಇನ್ನೂ ಎರಡು ಡಿಸಿಎಂ ಹುದ್ದೆಗಳಿಗೆ ಬೇಡಿಕೆ ಇಡುತ್ತಿದ್ದಾರೆ.

ವರದಿಗಳ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ 28 ಲೋಕಸಭಾ ಸ್ಥಾನಗಳಿಗೆ ಸಂಯೋಜಕರಾಗಿ ನೇಮಕಗೊಂಡ ಎಲ್ಲಾ 28 ಸಚಿವರಿಗೆ ಕರೆಯೋಲೆ ಕಳುಹಿಸಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ಭಾನುವಾರ 28 ಸ್ಥಾನಗಳಿಗೆ 28 ಸಚಿವರನ್ನು ಸಂಯೋಜಕರನ್ನಾಗಿ ನೇಮಿಸಿದೆ.

ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಹಿರಿಯ ಸಚಿವರು ತಡರಾತ್ರಿ ಸಭೆ ನಡೆಸಿದರು ಮತ್ತು ಇನ್ನೂ ಎರಡು ಉಪ ಮುಖ್ಯಮಂತ್ರಿ ಸ್ಥಾನಗಳ ಬೇಡಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಒಂದು ಗಂಟೆ ಕಾಲ ಸಭೆ ನಡೆಸಿದ ಮೊದಲಿಗರು. ನಂತರ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ದಿನೇಶ್ ಗುಂಡೂರಾವ್ ಅವರು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಸೋಮವಾರ ಸುರ್ಜೇವಾಲಾ ಅವರನ್ನು ಭೇಟಿಯಾದ ಹಲವು ಸಚಿವರು ಕಳೆದ ವಾರ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಪ್ರತ್ಯೇಕ ಔತಣಕೂಟಕ್ಕೆ ಜಮಾಯಿಸಿರುವುದು ಕುತೂಹಲ ಮೂಡಿಸಿದೆ.

ಜನವರಿ 11ರಂದು ಹೆಚ್ಚಿನ ಡಿಸಿಎಂಗಳ ನಿರ್ಧಾರ

ಸುರ್ಜೇವಾಲಾ ಅವರೊಂದಿಗಿನ ಸಭೆಯ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಪಕ್ಷದ ಹೈಕಮಾಂಡ್ ಜೊತೆಗಿನ ಸಭೆಯ ನಂತರ ಸ್ಪಷ್ಟ ಚಿತ್ರಣ ಹೊರಬರಬಹುದು ಎಂದು ಹೇಳಿದರು.

“ನಾವು ಸುರ್ಜೇವಾಲಾ ಅವರೊಂದಿಗೆ ವಿವರವಾಗಿ ಚರ್ಚಿಸಿದ್ದೇವೆ ಮತ್ತು ಲೋಕಸಭೆ ಚುನಾವಣೆಗೆ ಮುನ್ನ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ. ಹೆಚ್ಚಿನ ಡಿಸಿಎಂ ಹುದ್ದೆಗಳ ಅಗತ್ಯದ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಜನವರಿ 11ರಂದು ಪಕ್ಷದ ಹೈಕಮಾಂಡ್‌ನೊಂದಿಗೆ ಸಭೆ ನಡೆಸಿದ ನಂತರ ಸ್ಪಷ್ಟ ಚಿತ್ರಣ ಹೊರಬರಬಹುದು. ಎಷ್ಟು ಡಿಸಿಎಂ ಹುದ್ದೆಗಳನ್ನು ರಚಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ” ಎಂದು ಸತೀಶ್ ಜಾರಕಿಹೊಳಿ ಹೇಳಿದರು.

congress high command, karnataka minister eshwarappa, karnataka news, karnataka politics, congress high command summons siddaramaiah, karnataka congress, cm of karnataka, karnataka latest news, karnataka ministers, karnataka, karnataka elections 2023, karnataka news live,minister eshwarappa, congress in karnataka, karnataka leadership change, karnataka local news, karnataka cm leadership change, karnataka high court,

ಹೊಸ ಪಾರ್ಟಿ ಕಟ್ತಿದ್ದಾರಾ ಗಾಲಿ ಜನಾರ್ಧನ ರೆಡ್ಡಿ!?
ತನ್ನ ತವರು ಜಿಲ್ಲೆಗೆ ಕಾಲಿಡಲು ಕೋರ್ಟಿನಿಂದ ಅನುಮತಿ ಪಡೆದ ನಂತರ ಬಳ್ಳಾರಿಗೆ ಬಂದಿದ್ದ ಜನಾರ್ಧನ ರೆಡ್ಡಿಯವರು ಬಿಜೆಪಿಯನ್ನು ನೇರವಾಗಿ ಟೀಕಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ನಂತರ ಆ ಸುದ್ದಿಗೆ ಕೈಕಾಲು ಬೆಳೆದು ಅವರು ಕಾಂಗ್ರೆಸ್ ಸೇರುತ್ತಾರೆ, ಹೊಸ ಪಕ್ಷ ಕಟ್ಟುತ್ತಾರೆ ಇತ್ಯಾದಿಯಾಗಿ ಸುದ್ದಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಪೀಪಲ್ ಮೀಡಿಯಾ ಹಲವು ಮೂಲಗಳನ್ನು ಎಡತಾಕಿ ಸಂಗ್ರಹಿಸಿದ ಮಾಹಿತಿಗಳ ಅವಲೋಕನ ಇಲ್ಲಿದೆ.

ಗಾಲಿ ಜನಾರ್ಧನ ರೆಡ್ಡಿಯೆನ್ನುವ ಹೆಸರು ರಾಜಕೀಯದಲ್ಲಿ ಹಲವು ಬಾರಿ ದೊಡ್ಡ ಸದ್ದು ಮಾಡಿದೆ. ಭಾರತದಲ್ಲಿ ಮೊದಲ ಭಾರಿಗೆ ಆಪರೇಷನ್ ಕಮಲವನ್ನು ಮಾಡಿಸಿದ ಡಾಕ್ಟರ್ ಯಡ್ಯೂರಪ್ಪನವರಾದರೆ, ಆ ಆಪರೇಷನ್ನಿಗೆ ತಗಲುವ ಖರ್ಚನ್ನು ನೋಡಿಕೊಂಡಿದ್ದು ಯಾರು ಎನ್ನುವುದು ಜನಜನಿತ ಸತ್ಯ. ಆದರೆ ಅಷ್ಟೆಲ್ಲ ಧೂಳನ್ನು ರಾಜಕಾರಣದಲ್ಲೂ, ಬಳ್ಳಾರಿಯ ಗಣಿಗಳಲ್ಲೂ ಒಟ್ಟಿಗೇ ಎಬ್ಬಿಸಿದ್ದ ಜನಾ ರೆಡ್ಡಿಯವರ ರಾಜಕೀಯ ಬದುಕು ಗಾಳಿಯ ಅಬ್ಬರ ಇಳಿದ ನಂತರ ಮತ್ತೆ ಮಣ್ಣಿಗಿಳಿದ ಧೂಳಿನ ಕಣದಂತೆಯೇ ಆಗಿತ್ತು. ಇಂದಿಗೂ ಅವರು ಹಲವು ಕೇಸುಗಳ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ.

ಹಾಗೆ ಜೈಲಿಗೆ ಹೋಗಿ ಕುಳಿತರೂ ರೆಡ್ಡಿ ಸುಮ್ಮನೆ ಕುಳಿತವರಲ್ಲ, ಆಗಾಗ ಜೈಲಿನಿಂದಲೂ ಅದರ ನಂತರ ಜೈಲಿನಿಂದ ಹೊರಗೆ ಬಂದ ಮೇಲೂ ಸದ್ದು ಮಾಡುತ್ತಲೇ ಇದ್ದವರು. ಮಗಳ ಮದುವೆಯನ್ನಂತೂ ದೇವಲೋಕದ ಸಭೆಯೋ ಎಂಬಂತೆ ಆಯೋಜಿಸಿದ್ದ ರೆಡ್ಡಿ ವಾರಗಳ ಕಾಲ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಆಗಿದ್ದರು. ಅದರ ನಂತರ ಇತ್ತೀಚೆಗೆ ತನ್ನ ಮಗನನ್ನು ಸಿನೆಮಾ ನಾಯಕನನ್ನಾಗಿ ಪರಿಚಯಿಸುವ ಸಲುವಾಗಿ ಹೊಸ ಚಿತ್ರವೊಂದನ್ನು ಸಹ ಅನೌನ್ಸ್ ಮಾಡಿದ್ದರು.

ಇದೆಲ್ಲದರ ನಡುವೆ ಈಗ ರಾಜಕೀಯ ವಲಯದಲ್ಲೊಂದು ಸುದ್ದಿ ಓಡಾಡತೊಡಗಿ ಅದಕ್ಕೆ ಕೈ-ಕಾಲು, ತಲೆ ಮೂಡತೊಡಗಿ ಈಗ ಅದಕ್ಕೆ ಒಂದು ರೂಪ ಬಂದಂತಿದೆ. ಈಗೀನ ಹೊಸ ಸುದ್ದಿ ಏನಪ್ಪಾ ಅಂದ್ರೆ ರೆಡ್ಡಿಯವರು ಹೊಸ ಪಕ್ಷ ಕಟ್ಟಲಿದ್ದಾರೆ ಎನ್ನುವುದು! ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಈಗ ಅವರು ಹೊಸ ಪಾರ್ಟಿ ಕಟ್ಟಲಿದ್ದಾರೆನ್ನುವ ಸುದ್ದಿ ರಾಜಕೀಯದ ಪಡಸಾಲೆಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸ್ವತಃ ಜನಾರ್ಧನ ರೆಡ್ಡಿಯವರೇ, “ವಿರೋಧ ಪಕ್ಷವಾಗಿರುವ ಕಾಂಗ್ರೆಸ್’ಗೆ ನನ್ನನ್ನು ಟೀಕಿಸುವ ಎಲ್ಲಾ ಹಕ್ಕಿದೆ, ಆದರೆ, ಪಕ್ಷವನ್ನು ಕಟ್ಟಲು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾನು ದೊಡ್ಡ ಪಾತ್ರ ನಿರ್ವಹಿಸಿದ್ದರಿಂದ ಬಿಜೆಪಿಯಿಂದ ಟೀಕೆಯನ್ನು ಎದುರು ನೋಡಿರಲಿಲ್ಲ. ನನ್ನ ರಾಜಕೀಯ ಬದುಕಿನ ಕುರಿತು ನನಗೆ ತೃಪ್ತಿಯಿದೆ. ಶೀಘ್ರದಲ್ಲೇ, ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ,” ಎಂದು ಮೊನ್ನೆ ಬಳ್ಳಾರಿಗೆ ಬಂದಾಗ ಹೇಳಿದ್ದರು. ಅಲ್ಲದೆ ಇನ್ನು ಮುಂದೆ ತಾನು ಬೆಂಗಳೂರಿಗೆ ಹೋಗದೆ ಬಳ್ಳಾರಿ ಜನರ ನಡುವೆಯೇ ಇರುವುದಾಗಿಯೂ ಘೋಷಿಸಿದ್ದರು.

ಇದೆಲ್ಲದರ ನಡುವೆ ಅವರು ಕಾಂಗ್ರೆಸ್ ಸೇರುತ್ತಾರೆನ್ನುವ ಸುದ್ದಿಯೂ ಓಡಾಡಿತ್ತಾದರೂ, ಅಂತಹ ಸಾಧ್ಯತೆಗಳು ಬಹಳ ಕಡಿಮೆ. ಯಾಕೆಂದರೆ ರೆಡ್ಡಿ ಬ್ರದರ್ಸ್ ಮತ್ತು ಅವರ ಸಂಗಡಿಗರ ಕುರಿತು ಪಾದಯಾತ್ರೆ ಮಾಡಿ ಜಯಿಸಿದ್ದ, ಅವರೆಲ್ಲರ ವಿರುದ್ಧ ಭ್ರಷ್ಟಾಚಾರದ ವಿಷಯದಲ್ಲಿ ದೊಡ್ಡ ಯುದ್ಧವನ್ನೇ ಹೂಡಿದ್ದ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆ ಎನ್ನುವುದನ್ನು ನಂಬಲು ಕಷ್ಟ.

ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿದರೆ ಜನಾ ರೆಡ್ಡಿಯವರಿಗೆ ಇರುವ ಮತ್ತೊಂದು ಆಯ್ಕೆಯೆಂದರೆ ಅದು ಹೊಸ ಪಕ್ಷ ಕಟ್ಟುವುದು. ಬಳ್ಳಾರಿಗೆ ತೀರಾ ಹತ್ತಿರವಾದ ಅವಿಭಜಿತ ಆಂಧ್ರದಲ್ಲಿ ಈ ರೀತಿಯಾಗಿ ಬಲಶಾಲಿ ವ್ಯಕ್ತಿಗಳು ತಮ್ಮದೇ ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ರಾಜಕೀಯವಾಗಿ ಹೋರಾಡುವುದು ಮತ್ತು ಅಧಿಕಾರ ಹಿಡಿಯುವುದು ಸರ್ವೇಸಾಮಾನ್ಯ. ಕಾಂಗ್ರೆಸ್ಸಿನೊಡನೆ ಮುನಿಸಿಕೊಂಡು ಹೊರ ಹೋದ ಜಗನ್ ಇಟ್ಟಿದ್ದು ಕೂಡಾ ಇದೇ ರೀತಿಯ ಹೆಜ್ಜೆಯನ್ನು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆದರೆ ಕರ್ನಾಟಕದ ಮಟ್ಟಿಗೆ ಇಂತಹದ್ದೊಂದು ಪ್ರಯೋಗ ಎಷ್ಟರಮಟ್ಟಿಗೆ ಪ್ರಯೋಜನಕಾರಿಯೆನ್ನುವುದನ್ನು ಕಾಲವೇ ಹೇಳಬೇಕಿದೆ. ಇಲ್ಲಿ ಈ ರೀತಿ ಪಕ್ಷ ಕಟ್ಟಲು ಹೊರಟು ಎಡವಿಬಿದ್ದ ಬಂಗಾರಪ್ಪ, ಯಡ್ಯೂರಪ್ಪ ಇನ್ನಿತರರನ್ನು ನೆನಪಿಸಿಕೊಳ್ಳಬಹುದು. ಆದರೆ ಬಳ್ಳಾರಿ ಮತ್ತು ಅದರ ಸುತ್ತಮುತ್ತ ಮತಗಳ ಭದ್ರಕೋಟೆಯನ್ನೇ ಹೊಂದಿರುವ ರೆಡ್ಡಿಗಳ ಬಳಗ ಒಂದಷ್ಟು ಸೀಟನ್ನು ಗೆದ್ದರೆ ಅಚ್ಚರಿಪಡುವಂತಹದ್ದೇನಿಲ್ಲ.

ಒಂದು ವೇಳೆ ರೆಡ್ಡಿಯವರು ಪಕ್ಷ ಕಟ್ಟುವುದು ನಿಜವೇ ಆದರೆ, ಈಗಾಗಲೇ ಭ್ರಷ್ಟಾಚಾರ ಮತ್ತು ಅಧಿಕಾರ ವಿರೋಧಿ ಅಲೆಯಲ್ಲಿ ಮುಳುಗಿರುವ ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆಯೆನ್ನುವುದು ಪರಿಣಿತರ ಅಭಿಪ್ರಾಯ. ರಾಮುಲು ಅವರಂತಹ ಹಿಂದುಳಿದ ವರ್ಗದ ನಾಯಕ ಪಕ್ಷವನ್ನು ಬಿಟ್ಟರೆ ಅದರ ಪರಿಣಾಮ ತೀರಾ ನಗಣ್ಯವಾಗಿಯೇನೂ ಇರುವುದಿಲ್ಲ. ಕೇವಲ ಹಿಂದುತ್ವದ ಹೆಸರಿನಲ್ಲಿ ಇಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆನ್ನುವುದನ್ನು ತಿಳಿದಿರುವ ಬಿಜೆಪಿ ಈಗ ಕೆಂಪೇಗೌಡರ ಎತ್ತರದ ಮೂರ್ತಿ ನಿರ್ಮಿಸಿ, ಮೋದಿಯವರನ್ನು ಕರೆಯಿಸಿ ಅದನ್ನು ಅನಾವರಣ ಮಾಡಿಸುವ ಮೂಲಕ ಒಕ್ಕಲಿಗರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿದೆ. ಜೊತೆಗೆ ಅನಧಿಕೃತವಾಗಿ ಕರ್ನಾಟಕದಲ್ಲಿನ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಹುಮ್ಮಸ್ಸಿನಲ್ಲಿರುವಾಗಲೇ ಇಂತಹದ್ದೊಂದು ಸುದ್ದಿ ಈಗ ಹರಿದಾಡತೊಡಗಿದೆ.

ಅದೇನೇ ಇದ್ದರೂ ಅವರು ರಾಜಕೀಯದಲ್ಲಿ ಅಪ್ರಸ್ತುತರಾಗದಿರಲು ಏನಾದರೂ ಒಂದು ಹೊಸ ಹೆಜ್ಜೆಯನ್ನು ಇಡಲಿರುವುದಂತೂ ಖಚಿತ. ಆ ಹೆಜ್ಜೆ ಯಾವುದು ಎನ್ನುವುದನ್ನು ಬಹುಶಃ ಮುಂದಿನ ವಾರ ಅವರು ಕೊಪ್ಪಳದಲ್ಲಿ ನಡೆಸಲಿರುವ ಸಭೆಯಲ್ಲಿ ಬಹಿರಂಗಗೊಳಿಸಬಹುದೆನ್ನುವುದು ರಾಜಕೀಯ ಮೂಲಗಳ ಅಂಬೋಣ. ಜನಾರ್ಧನ ರೆಡ್ಡಿಯವರ ಎರಡನೇ ಇನ್ನಿಂಗ್ಸ್ ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಕರ್ನಾಟಕದ ರಾಜಕೀಯ ಆಗು-ಹೋಗುಗಳಿಗೆ ಹೊಸ ರಂಗನ್ನು ತುಂಬುವುದಂತೂ ಖಚಿತ.

ಟೆನ್ನಿಸ್‌ ಕೃಷ್ಣ ಆಮ್‌ ಆದ್ಮಿ ಪಾರ್ಟಿಗೆ
ಕನ್ನಡದ ಖ್ಯಾತ ಹಾಸ್ಯನಟ ಟೆನ್ನಿಸ್‌ ಕೃಷ್ಣ ಹೊಟೇಲ್‌ ಪರಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರ ಸಮ್ಮುಖದಲ್ಲಿ ಟೆನ್ನಿಸ್ ಕೃಷ್ಣ ಎಎಪಿ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟೆನ್ನಿಸ್‌ ಕೃಷ್ಣ “ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿ ಆಮ್‌ ಆದ್ಮಿ ಪಾರ್ಟಿ ಯಶಸ್ವಿಯಾಗುತ್ತಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸಿರುವ ಎಎಪಿಯು ಈಗ ಪಂಜಾಬ್‌ನಲ್ಲೂ ಮೋಡಿ ಮಾಡುತ್ತಿದೆ. ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ದೇಶವನ್ನು ಕಾಪಾಡಲು ಎಎಪಿಯಿಂದ ಮಾತ್ರ ಸಾಧ್ಯ. ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿಯುಳ್ಳ ಆಮ್‌ ಆದ್ಮಿ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಎಎಪಿಯನ್ನು ಬಳಸಿಕೊಂಡು ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಬೇಕು” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕರ್ನಾಟಕದಲ್ಲಿ ಆಮ್‌ ಆದ್ಮಿ ಪಾರ್ಟಿಯು ಭದ್ರವಾಗಿ ಬೇರೂರುತ್ತಿದೆ. ಸಿನಿಮಾ ಸಾಧಕರು, ದಕ್ಷ ಅಧಿಕಾರಿಗಳು, ರೈತ ನಾಯಕರು, ಸಮಾಜಸೇವಕರು, ವಕೀಲರು, ಉಪನ್ಯಾಸಕರು ಮುಂತಾದ ವಿವಿಧ ಕ್ಷೇತ್ರದ ಗಣ್ಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ದೇಶಕ್ಕೆ ಆಮ್‌ ಆದ್ಮಿ ಪಾರ್ಟಿಯೊಂದೇ ಆಶಾಕಿರಣ ಎಂಬುದು ಯುವಜನತೆಗೆ ಮನವರಿಕೆಯಾಗುತ್ತಿದೆ. ಜನಪ್ರಿಯ ನಟರಾದ ಟೆನಿಸ್ ಕೃಷ್ಣರವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಸ್ವಚ್ಛ ರಾಜಕೀಯ ಹಾಗೂ ಪಾರದರ್ಶಕ ಆಡಳಿತವೇ ನಮ್ಮೆಲ್ಲರ ಧ್ಯೇಯವಾಗಿದ್ದು, ಇದನ್ನು ಸಾಧಿಸಲು ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ” ಎಂದು ಹೇಳಿದರು.

ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ಟೆನಿಸ್‌ ಕೃಷ್ಣರವರ ತಂದೆಯವರು ಕೆಂಗಲ್‌ ಹನುಮಂತಯ್ಯ, ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕ ಗಣ್ಯರಿಗೆ ಟೆನಿಸ್‌ ತರಬೇತಿ ನೀಡಿದವರು. ಕೃಷ್ಣರವರು ಕೂಡ ತಂದೆಯ ಹಾದಿಯಲ್ಲೇ ಸಾಗಿ ಟೆನಿಸ್‌ ತರಬೇತಿ ನೀಡಿ, ಟೆನಿಸ್‌ ಕೃಷ್ಣ ಎಂದೇ ಮನೆಮಾತಾಗಿದ್ದಾರೆ. ಕನ್ನಡದ 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಗಿಸುವ ಮೂಲಕ ಕನ್ನಡಿಗರ ಆಯುಸ್ಸು ಹೆಚ್ಚಿಸಿದ್ದಾರೆ. ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌ ಮುಂತಾದ ಮೇರುನಟರ ಜೊತೆ ಅಭಿನಯಿಸಿದ ಕೃಷ್ಣರವರು ಇಂದು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ಪಕ್ಷಕ್ಕೆ ಹೆಮ್ಮೆಯ ವಿಚಾರ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಸಂಚಿತ್ ಸೆಹ್ವಾನಿ , ಜಗದೀಶ್ ವಿ ಸದಂ , ಪುರುಷೋತ್ತಮ್ ,ಸುರೇಶ್ ರಾಥೋಡ್, ಉಷಾ ಮೋಹನ್, ಚನ್ನಪ್ಪಗೌಡ ನೆಲ್ಲೂರು, ಜ್ಯೋತಿಷ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.