karnataka – Peepal Media

NEET ಪತ್ರಿಕೆ ಸೋರಿಕೆ ಪ್ರಕರಣ, ಮಧ್ಯವರ್ತಿಗಳ ಪಾತ್ರ ಬಯಲು – CBI ತನಿಖೆ ಚುರುಕು
ನವದೆಹಲಿ : NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಪ್ರಮುಖ ಮಾಹಿತಿಗಳು ಬಹಿರಂಗಗೊಂಡಿವೆ. ಪರೀಕ್ಷೆಗೆ ಮೂರು ದಿನಗಳ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ವಾಟ್ಸಪ್‌, ಟೆಲಿಗ್ರಾಂ ಹಾಗೂ ಆಫ್‌ಲೈನ್‌ ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಪ್ರಕರಣದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಸಂಬಂಧಿಸಿದ ವಿಷಯ ತಜ್ಞರು, ಕೋಚಿಂಗ್‌ ಕೇಂದ್ರಗಳ ನಿರ್ವಾಹಕರು, ಮಧ್ಯವರ್ತಿಗಳು ಸೇರಿದಂತೆ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತನಿಖೆಯ ಪ್ರಕಾರ, ರಸಾಯನಶಾಸ್ತ್ರ ತಜ್ಞ ಪಿ.ವಿ. ಕುಲಕರ್ಣಿ ಅವರು ಪುಣೆಯಲ್ಲಿ ನಡೆಸಿದ ವಿಶೇಷ ತರಗತಿಗಳಲ್ಲಿ ಪರೀಕ್ಷೆಯಲ್ಲಿ ಬಂದಿದ್ದ ಪ್ರಶ್ನೆಗಳು ಹಾಗೂ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳ ನೋಟ್‌ಬುಕ್‌ಗಳಲ್ಲಿ ಇದ್ದ ಪ್ರಶ್ನೆಗಳು ಸೋರಿಕೆಯಾದ ಪ್ರಶ್ನೆಪತ್ರಿಕೆಯೊಂದಿಗೆ ಹೊಂದಿಕೆಯಾಗಿವೆ ಎಂದು ಸಿಬಿಐ ತಿಳಿಸಿದೆ.

ಕುಲಕರ್ಣಿ ಅವರ ಮೊಬೈಲ್‌ನಿಂದ ಪ್ರಶ್ನೆಗಳ ಫೋಟೋಗಳು, ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ಸಂಭಾಷಣೆಗಳು ಸೇರಿದಂತೆ ಡಿಜಿಟಲ್‌ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ತನಿಖೆಯಲ್ಲಿ ಹೇಳಲಾಗಿದೆ. ಪರೀಕ್ಷೆಯ ಬಳಿಕ, ಅವರು ಹೇಳಿದ ಪ್ರಶ್ನೆಗಳೇ ಬಂದಿದ್ದಕ್ಕಾಗಿ ಒಬ್ಬ ಪೋಷಕರು ಉಡುಗೊರೆ ನೀಡಲು ಮುಂದಾಗಿದ್ದರು ಎಂಬ ಅಂಶವೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಭೌತಶಾಸ್ತ್ರ ವಿಷಯದ ಪ್ರಶ್ನೆಗಳನ್ನು ಹಣ ಪಡೆದು ಸೋರಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮನೀಷಾ ಹವಾಲ್ದಾರ್ ಎಂಬ ವಿಷಯ ತಜ್ಞರು ₹25 ಸಾವಿರ ಪಡೆದು ಪ್ರಶ್ನೆಗಳನ್ನು ಹಂಚಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಮತ್ತೊಬ್ಬ ಆರೋಪಿ ಮನೀಷಾ ವಾಘ್ಮಾರೆ ಅವರು ವಿದ್ಯಾರ್ಥಿಗಳು ಮತ್ತು ತಜ್ಞರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದರು ಎಂದು ತನಿಖೆಯಲ್ಲಿ ತಿಳಿಸಲಾಗಿದೆ.

ಜೀವಶಾಸ್ತ್ರ ವಿಷಯದ ತರಗತಿಗಳನ್ನು ನಡೆಸುತ್ತಿದ್ದ ಮತ್ತೊಬ್ಬ ಆರೋಪಿ ಮನೀಷಾ ಗುರುನಾಥ್ ಮಂದಾರೆ ಅವರು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪಠ್ಯ ಭಾಗಗಳಿಂದ ಪ್ರಶ್ನೆಗಳನ್ನು ಸಿದ್ಧಪಡಿಸುತ್ತಿದ್ದರು ಹಾಗೂ ಸೋರಿಕೆಯಾದ ಪ್ರಶ್ನೆಗಳ ಪ್ರತಿಗಳನ್ನು ಪಡೆದಿದ್ದರು ಎಂದು ಸಿಬಿಐ ಹೇಳಿದೆ.

ರಾಜಸ್ಥಾನದ ಸೀಕರ್‌ನ ಕೋಚಿಂಗ್‌ ಜಾಲದ ಮೂಲಕವೂ ಪ್ರಶ್ನೆಗಳು ನೂರಾರು ವಿದ್ಯಾರ್ಥಿಗಳಿಗೆ ತಲುಪಿವೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ. ಪರೀಕ್ಷೆಗೆ ಮುನ್ನವೇ 40ರಿಂದ 50 ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿದ್ದ ಪಿಡಿಎಫ್‌ ಫೈಲ್‌ ಹಂಚಲಾಗಿತ್ತು ಎನ್ನಲಾಗಿದೆ.

ಆರೋಪಿಗಳು ಗುರುತು ಮರೆಮಾಚಲು ವಿವಿಧ ವಾಟ್ಸಪ್‌ ಗುಂಪುಗಳು ಹಾಗೂ ಕೋಡ್‌ ಹೆಸರುಗಳನ್ನು ಬಳಸಿದ್ದರು ಎಂದು ಸಿಬಿಐ ತಿಳಿಸಿದೆ. ‘NEET 2026’, ‘FIFA World Cup 2026’ ಸೇರಿದಂತೆ ಹಲವು ಗುಂಪುಗಳಲ್ಲಿ ಮಾಹಿತಿ ಹಂಚಲಾಗುತ್ತಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಸಂಚು 2025ರ ಅಕ್ಟೋಬರ್‌ನಲ್ಲೇ ಆರಂಭವಾಗಿತ್ತು ಎಂದು ಸಿಬಿಐ ಆರೋಪಿಸಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಲಾಗಿದ್ದು, ಹಣವನ್ನು ನಗದು ಮತ್ತು ಆನ್‌ಲೈನ್‌ ಮೂಲಕ ಪಡೆದಿರುವ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎಂದು ತಿಳಿಸಿದೆ.

ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಭಾಷಾಂತರಿಸುವ ಪ್ರಕ್ರಿಯೆಯಲ್ಲಿದ್ದ ಭದ್ರತಾ ಲೋಪಗಳನ್ನೇ ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ. ಒಬ್ಬನೇ ತಜ್ಞನಿಗೆ ಹಲವು ಮಾಸ್ಟರ್‌ ಸೆಟ್‌ಗಳಿಗೆ ಪ್ರವೇಶವಿದ್ದದ್ದು ಹಾಗೂ ಸಮರ್ಪಕ ಮೇಲ್ವಿಚಾರಣೆ ಕೊರತೆಯೂ ಸೋರಿಕೆಗೆ ಕಾರಣವಾಗಿರಬಹುದು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಹೈಕಮಾಂಡ್ ಮಾತಿಗೆ ಬದ್ಧ, ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ – ಪ್ರಿಯಾಂಕ್‌ ಖರ್ಗೆ
ಬೆಂಗಳೂರು: ಹೈಕಮಾಂಡ್ ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡುವಂತೆ ಸೂಚಿಸಿದರೆ ತಾವು ಸೇರಿದಂತೆ ಎಲ್ಲರೂ ಅದನ್ನು ಪಾಲಿಸಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನೂತನ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಸಚಿವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು. ಸಚಿವ ಸಂಪುಟದಲ್ಲಿರುವ ಇಬ್ಬರಿಗೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, 33 ಸಚಿವ ಸ್ಥಾನಗಳಷ್ಟೇ ಇರುವುದರಿಂದ ಎಲ್ಲರಿಗೂ ಅವಕಾಶ ನೀಡುವುದು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯವನ್ನು ಸಮತೋಲನಗೊಳಿಸುವುದು ಕಷ್ಟದ ಕೆಲಸವಾದರೂ, ಎಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

“ಹೈಕಮಾಂಡ್ ನನಗೆ ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಿ ಎಂದರೂ ನಾನು ಅದಕ್ಕೆ ಬದ್ಧನಿದ್ದೇನೆ. ಪಕ್ಷದ ಜವಾಬ್ದಾರಿ ನೀಡಿದರೆ ಸ್ವೀಕರಿಸಲು ಸಿದ್ಧ,” ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಖಾತೆ ಹಂಚಿಕೆ ಕುರಿತು ಮಾತನಾಡಿದ ಅವರು, ಅಧಿವೇಶನ ನಡೆಯುತ್ತಿದ್ದು, ಒಂದು ವಾರ ಸಮಯ ಸಿಕ್ಕರೆ ಇಲಾಖೆ ಬಗ್ಗೆ ತಿಳಿದುಕೊಳ್ಳಬಹುದು. ಶೀಘ್ರದಲ್ಲೇ ಖಾತೆ ಹಂಚಿಕೆ ನಡೆಯಲಿದೆ ಎಂದರು.

ಕುರುಬ ಸಮುದಾಯದ ಕೆಲವು ಶಾಸಕರ ಅಸಮಾಧಾನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ನ್ಯಾಯ ನೀಡುವುದು ಸವಾಲಿನ ಕೆಲಸ. ಎಲ್ಲ ಸಮುದಾಯಗಳ ಬೇಡಿಕೆಗಳಿದ್ದು, ಸಂವಿಧಾನದ ಪ್ರಕಾರ ಶೇ.15ರಷ್ಟು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದೆ ಎಂದು ಹೇಳಿದರು. ತಿಮ್ಮಾಪುರ್-ನಂಜಯ್ಯಮಠ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಛಲವಾದಿ ನಾರಾಯಣಸ್ವಾಮಿ ಅವರು ದೂರು ನೀಡಿದರೆ ಪರಿಶೀಲಿಸಲಾಗುವುದು ಎಂದ ಅವರು, ಎಲ್ಲರ ಹೇಳಿಕೆ ಆಧರಿಸಿ ಸುಮೋಟೋ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಪ್ರಕರಣ ಗಂಭೀರವಾಗಿದ್ದರೆ ಸೂಕ್ತ ದೂರು ನೀಡಬೇಕು ಎಂದು ತಿಳಿಸಿದರು.

ಹಿಂದೆ ಪಿಎಸ್‌ಐ ಹಗರಣದ ವಿಚಾರದಲ್ಲಿ ಮಾಧ್ಯಮ ವರದಿಗಳ ಆಧಾರದ ಮೇಲೆ ಮಾತನಾಡಿದ್ದಕ್ಕೆ ಸಿಐಡಿ ಮೂರು ಬಾರಿ ನೋಟಿಸ್ ನೀಡಿತ್ತು. ಆದರೆ ಶಾಸಕರಾದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಅದೇ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ರಾಜ್ಯದಲ್ಲಿ SIR ಪ್ರಕ್ರಿಯೆ ವಿಸ್ತರಣೆ – ಅಂತಿಮ ಪಟ್ಟಿ ಅಕ್ಟೋಬರ್ 27ಕ್ಕೆ
ಬೆಂಗಳೂರು: ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ECI) ಮತ್ತೆ ಪರಿಷ್ಕರಿಸಿದೆ. ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಅವರ ಮನವಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ, ಮನೆ-ಮನೆಗೆ ತೆರಳಿ ಮತದಾರರ ಮಾಹಿತಿ ಪರಿಶೀಲಿಸುವ ಕಾರ್ಯ ಆಗಸ್ಟ್ 17ರವರೆಗೆ ಮುಂದುವರಿಯಲಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗುತ್ತದೆ. ಬಳಿಕ ಸೆಪ್ಟೆಂಬರ್ 23ರವರೆಗೆ ಹಕ್ಕುಗಳು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸ್ವೀಕರಿಸಲಾದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಅಕ್ಟೋಬರ್ 22ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿಯನ್ನು ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ತಿಳಿಸುವಂತೆ ಹಾಗೂ ಮುದ್ರಣ, ದೃಶ್ಯ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ವ್ಯಾಪಕವಾಗಿ ಮಾಹಿತಿ ತಲುಪಿಸುವಂತೆ ECI ನಿರ್ದೇಶಿಸಿದೆ. ಜೊತೆಗೆ, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳಿಗೂ ಪರಿಷ್ಕೃತ ವೇಳಾಪಟ್ಟಿಯ ಬಗ್ಗೆ ಲಿಖಿತವಾಗಿ ಮಾಹಿತಿ ನೀಡುವಂತೆ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಲಾಗಿದೆ.

ಖಾಸಗಿ ಶಾಲೆಗಳಲ್ಲಿ ಕಾನೂನುಬಾಹಿರವಾಗಿ ಡೊನೇಷನ್ ಪಡೆದರೆ – 10 ಪಟ್ಟು ದಂಡ
ಬೆಂಗಳೂರು : ನಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಪಠ್ಯದೊಂದಿಗೆ ಆಟದಲ್ಲೂ ಹಾಗೂ ತಂತ್ರಜ್ಞಾನದಲ್ಲೂ ಮುಂದಿರಬೇಕು ಅನ್ನುತ್ತಾ ಖಾಸಗಿ ಶಾಲೆಗಳಿಗೆ ಸೇರಿಸುತ್ತೇವೆ. ಈ ವೇಳೆ ಡೊನೇಷನ್ ಅನ್ನೋದು ತಪ್ಪು ಎಂದು ಗೊತ್ತಿದ್ದರು ಸಹ ಸಾವಿರಾರೂ ರೂಪಾಯಿ ಡೊನೇಷನ್ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತೇವೆ. ಆದ್ರೆ, ಇದೀಗ ಖಾಸಗಿ ಶಾಲೆಗಳ ಡೊನೇಷನ್ ಹಾವಳಿಗೆ ಲಗಾಮು ಹಾಕಲು ಮುಂದಾಗಿರುವ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ಡೊನೇಷನ್ ಪಡೆದರೆ, 10 ಪಟ್ಟು ದಂಡ!

ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸಮಯದಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವುದು ಮತ್ತು ಪೋಷಕರಿಗೆ ಪಾರದರ್ಶಕತೆ ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು, ಖಾಸಗಿ ಶಾಲೆಗಳು 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಮತ್ತು ಶುಲ್ಕ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲಾ ವೆಬ್‌ಸೈಟ್‌ ಹಾಗೂ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ತಿಳಿಸಿದೆ.

ಮುಂದುವರೆದು, ದಾಖಲಾತಿ ಪ್ರಕ್ರಿಯೆಯಲ್ಲಿ ಪೋಷಕರಿಂದ ಕಾನೂನುಬಾಹಿರವಾಗಿ ಡೊನೇಷನ್ ಪಡೆದರೆ, ಪಡೆದ ಶುಲ್ಕದ 10 ಪಟ್ಟು ದಂಡವನ್ನು ಆ ಶಾಲೆಗಳಿಗೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರವೇಶ ಪರೀಕ್ಷೆ ನಡೆಸಿದರೆ ದಂಡ

ಇದೆ ವೇಳೆ ಖಾಸಗಿ ಶಾಲೆಗಳಲ್ಲಿ ಸೀಟು ನೀಡುವ ಮುನ್ನ ಮಗು ಅಥವಾ ಪೋಷಕರನ್ನು ಯಾವುದೇ ರೀತಿಯ ಟೆಸ್ಟ್ ಅಥವಾ ಸಂದರ್ಶನಕ್ಕೆ ಒಳಪಡಿಸಿದರೆ ಅಂತಹ ಶಾಲೆಗಳಿಗೆ ₹25,000 ದಂಡ ಕೂಡ ವಿಧಿಸಲಾಗುತ್ತದೆ. ಪುನರಾವರ್ತಿತ ತಪ್ಪಿಗೆ ಪ್ರತಿ ಬಾರಿ 50,000 ರೂಪಾಯಿ ದಂಡ ಎಂದು ಹೇಳಲಾಗಿದೆ.

ಹುದ್ದೆಗಾಗಿ ಯಾರ ಮನೆಗೂ ಹೋಗಲ್ಲ – ಯಶವಂತ ರಾಯಗೌಡ ಪಾಟೀಲ್‌
ವಿಜಯಪುರ : ಸಚಿವ ಸ್ಥಾನ ಸಿಗದಿರುವುದಕ್ಕಿಂತ ವರಿಷ್ಠರು ಕೊಟ್ಟ ಮಾತು ಉಳಿಸಿಕೊಳ್ಳದಿರುವುದರ ಬಗ್ಗೆ ನೋವಾಗಿತ್ತು. ಹೀಗಾಗಿ ರಾಜೀನಾಮೆ ಕೊಟ್ಟಿದ್ದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆದರೆ, ನನ್ನನ್ನು ಶಾಸಕನನ್ನಾಗಿ ಮಾಡಿದ್ದು ಕ್ಷೇತ್ರದ ಜನತೆ. ಅವರೇ ನನಗೆ ಹೈಕಮಾಂಡ್‌. ಅವರ ಭಾವನೆಗಳನ್ನು ಗೌರವಿಸಿ ಶಾಸಕನಾಗಿ ಕೆಲಸ ಮಾಡುತ್ತೇನೆ. ಇನ್ನು ಮುಂದೆ ಯಾವುದೇ ಹುದ್ದೆಗಾಗಿ ಯಾರ ಮನೆಗೂ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

60 ಜನ ಆಕಾಂಕ್ಷಿಗಳಿದ್ದಾಗ ಎಲ್ಲರಿಗೂ ಅವಕಾಶ ಕೊಡೋದು ಅಸಾಧ್ಯ ಎಂಬುದು ನನಗೂ ಗೊತ್ತು. ಆದರೆ ಕೊಟ್ಟು ಮಾತು ಉಳಿಸಿಕೊಳ್ಳಿ ಎಂದು ವರಿಷ್ಠರ ಗಮನಕ್ಕೆ ತಂದಿದ್ದೆ. ಸಚಿವರಾಗುವವರ ಪಟ್ಟಿ ಬಿಡುಗಡೆಯಾಗುವ ತನಕವೂ ನನಗೆ ಅವಕಾಶ ಕೊಡುವುದಾಗಿ ತಿಳಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ನನ್ನ ಹೆಸರು ಬಿಟ್ಟು ಹೋಗಿದ್ದರಿಂದ ರಾಜೀನಾಮೆ ಕೊಟ್ಟಿದ್ದೆ ಎಂದರು.

ರಾಜ್ಯದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಸೇರಿದಂತೆ ಅನೇಕ ನಾಯಕರು ನನ್ನ ಮನೆಗೆ ಬಂದಿದ್ದರು. ನನ್ನನ್ನು ಕೈಬಿಟ್ಟಿದ್ದರ ಬಗ್ಗೆ ವಿವರಣೆ ನೀಡಿದ್ದಾರೆ. ಆದರೆ, ಕಾರಣವನ್ನು ನಾನೀಗ ಬಹಿರಂಗಪಡಿಸಲ್ಲ ಎಂದಿದ್ದಾರೆ. ಮಠಾಧೀಶರು, ಸಾಹಿತಿಗಳು, ಅನೇಕ ಶಾಸಕರು ವಿಕೋಪಕ್ಕೆ ಹೋಗೋದು ಬೇಡ ಎಂದು ಸಲಹೆ ನೀಡಿದರು. ಅಲ್ಲದೆ, ಕ್ಷೇತ್ರದ ಜನರೇ ನನ್ನ ಮೂಲ ಮಾಲೀಕರು, ಅವರ ಭಾವನೆಗಳ ವಿರುದ್ಧ ನಡೆದುಕೊಳ್ಳಬಾರದೆಂದು ರಾಜೀನಾಮೆ ಹಿಂಪಡೆದುಕೊಂಡೆ,” ಎಂದು ವಿವರಿಸಿದರು.

ನಮ್ಮ ವೈಯಕ್ತಿಕ ವಿಚಾರಗಳಿಗಿಂತ ಪಕ್ಷ ದೊಡ್ಡದು. ಎಲ್ಲ ಸ್ಥಾನಮಾನಕ್ಕಿಂತ ನನ್ನ ಸುದೀರ್ಘ ರಾಜಕಾರಣಕ್ಕೆ ಅವಕಾಶ ಕೊಟ್ಟ ಕ್ಷೇತ್ರದ ಜನ ದೊಡ್ಡವರು. ಕಷ್ಟದ ದಿನಗಳಲ್ಲಿ ಕಾಂಗ್ರೆಸ್‌ ಕಟ್ಟಿದ ಕುಟುಂಬ ನಮ್ಮದು. ಮುಂದೆಯೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಮನಸ್ಸಿಗೆ ಬಂದಂತೆ ಪಕ್ಷನಿಷ್ಠೆ ಬದಲಾಯಿಸುವ ಜಾಯಮಾನ ನನ್ನದಲ್ಲ,” ಎಂದು ಹೇಳಿದ್ದಾರೆ.

ಹಂಪಿಯ ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮ ಹೋಂಸ್ಟೇಗಳಿಗೆ ಅನುಮತಿ – ನ್ಯಾಯಮೂರ್ತಿ ಬಿ. ವೀರಪ್ಪ ಸ್ವಯಂಪ್ರೇರಿತ ದೂರು
ಹೊಸಪೇಟೆ : ಹಂಪಿಯ ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು ಹೋಂಸ್ಟೇಗಳಿಗೆ ಅವಕಾಶ ನೀಡಿದ ಆರೋಪದ ಮೇಲೆ 54 ಅಧಿಕಾರಿಗಳ ವಿರುದ್ಧ ಲೋಕಾಯಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ ಮತ್ತು ಸೆಪ್ಟೆಂಬರ್ 1 ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ವಿಶ್ವ ಪರಾಂಪರಿಕ ತಾಣದಲ್ಲಿಸಂರಕ್ಷಣಾ ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು, ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ (HWHAMA) ಅಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಹೊಸಪೇಟೆ ಮತ್ತು ಕೊಪ್ಪಳ ನ್ಯಾಯವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.

ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ (HWHAMA) ಕೋರ್ ವಲಯ, ಬಫರ್ ವಲಯ ಮತ್ತು ಬಾಹ್ಯ ವಲಯದಲ್ಲಿ 200 ಅಕ್ರಮ ಹೋಂಸ್ಟೇಗಳಿವೆ. ಅದೇ ರೀತಿ, ಹಂಪಿ ದೇವಾಲಯದ ಬಳಿಯ ಜನತಾ ಕಾಲೋನಿಯಲ್ಲಿ 250 ಅಕ್ರಮ ಹೋಂಸ್ಟೇಗಳಿವೆ ಎಂದು ಉಪ ಲೋಕಾಯುಕ್ತರು ತಿಳಿಸಿದ್ದಾರೆ.

ಗಂಗಾವತಿಯ HWHAMA ಮತ್ತು ಪ್ರವಾಸಿ ಸ್ಥಳಗಳಲ್ಲಿ ಮಾದಕ ದ್ರವ್ಯಗಳ ಭೀತಿ ಮತ್ತು ಅಕ್ರಮ ಮದ್ಯ ಮಾರಾಟದ ದೂರುಗಳನ್ನು ಉಪ ಲೋಕಾಯುಕ್ತರು ಸ್ವೀಕರಿಸಿದ್ದಾರೆ. ಯುನೆಸ್ಕೋ ಪಟ್ಟಿ ಮಾಡಿರುವ ಪರಂಪರೆಯ ತಾಣದ ಕೋರ್ ವಲಯ, ಬಫರ್ ವಲಯ ಮತ್ತು ಬಾಹ್ಯ ಪ್ರದೇಶಗಳಲ್ಲಿ ಅನಧಿಕೃತ ಹೋಂಸ್ಟೇಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಹಂಪಿಯ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹಂಪಿಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ರಕ್ಷಣೆಗಾಗಿ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದ್ದರೂ, ನಿರ್ಬಂಧಿತ ಪ್ರದೇಶಗಳಲ್ಲಿ ಅನಧಿಕೃತ ವಾಣಿಜ್ಯ ನಿರ್ಮಾಣಗಳು, ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳನ್ನು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಎಂದು ದೂರುಗಳು ಸಲ್ಲಿಕೆಯಾಗಿವೆ.

ಯುನೆಸ್ಕೋ ಪರಂಪರೆ ಸಂರಕ್ಷಣಾ ಮಾನದಂಡಗಳ ಪ್ರಕಾರ, ಹಂಪಿಯ ಪುರಾತತ್ವ ಮತ್ತು ಸಾಂಸ್ಕೃತಿಕ ಮಹತ್ವದ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳನ್ನು ಕೋರ್ ಮತ್ತು ಬಫರ್ ವಲಯಗಳಲ್ಲಿ ನಿಷೇಧಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅಂತಹ ಉಲ್ಲಂಘನೆಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಮತ್ತು ಕೆಲವು ಸಂದರ್ಭಗಳಲ್ಲಿ, ನಿಗದಿತ ನಿಯಮಗಳಿಗೆ ವಿರುದ್ಧವಾಗಿ ಚಟುವಟಿಕೆಗಳಿಗೆ ಅವಕಾಶ ನೀಡಿದ್ದಾರೆ ಎಂದು ದೂರುಗಳಲ್ಲಿ ಉಲ್ಲೇಖಿಸಲಾಗಿದೆ.

ಇಬ್ಬರು ಯುವತಿಯರ ಪರಸ್ಪರ ಪ್ರೀತಿ ಮನೆಯಲ್ಲಿ ವಿರೋಧ – ಆತ್ಮಹತ್ಯೆಗೆ ಶರಣು
ಬೆಂಗಳೂರು: ಯಲಹಂಕದಲ್ಲಿ (Yelahanka) ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ (Crime) ಇಬ್ಬರು ಯುವತಿಯರ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಪ್ರಾಥಮಿಕ ವಿಚಾರಣೆಯ ಪ್ರಕಾರ, ಇಬ್ಬರೂ ಯುವತಿಯರು ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬ ಹಾಗೂ ಸಮಾಜದ ವಿರೋಧದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು 22 ವರ್ಷದ ಸಿರ್ಜನಾ ಹಾಗೂ 23 ವರ್ಷದ ರಿತಾ ಎಂದು ಗುರುತಿಸಲಾಗಿದೆ. ಇಬ್ಬರೂ ಸಂಬಂಧಿಕರಾಗಿದ್ದು, ಮೂಲತಃ ನೇಪಾಳದವರು ಎನ್ನಲಾಗಿದೆ. ಬಾಲ್ಯದಿಂದಲೇ ಒಟ್ಟಿಗೆ ಬೆಳೆದಿದ್ದ ಇವರ ನಡುವೆ ಆತ್ಮೀಯ ಬಾಂಧವ್ಯ ಇತ್ತು. ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಇಬ್ಬರೂ ಬಹುತೇಕ ಎಲ್ಲ ಸಮಯದಲ್ಲೂ ಜೊತೆಯಾಗಿ ಇರುತ್ತಿದ್ದರು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನೇಪಾಳದಲ್ಲಿದ್ದಾಗಲೇ ಇಬ್ಬರ ಆತ್ಮೀಯತೆ ಬಗ್ಗೆ ಸ್ಥಳೀಯರು ಟೀಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆದರೆ ನಗರಕ್ಕೆ ಬಂದ ಬಳಿಕವೂ ಇಬ್ಬರೂ ಸಂಪರ್ಕದಲ್ಲೇ ಇದ್ದರು. ರಿತಾ ಫ್ರೇಜರ್ ಟೌನ್‌ನಲ್ಲಿ ಹಾಗೂ ಸಿರ್ಜನಾ ಜಕ್ಕೂರಿನಲ್ಲಿ ವಾಸವಾಗಿದ್ದರೂ ವಾರದಲ್ಲಿ ಹಲವು ಬಾರಿ ಭೇಟಿಯಾಗುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಗೆ ಮುನ್ನದ ದಿನ ಇಬ್ಬರೂ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಕುಟುಂಬದಲ್ಲಿ ಮದುವೆ ವಿಚಾರ ಪ್ರಸ್ತಾಪವಾಗಿದ್ದು, ಅದರ ನಂತರ ಇಬ್ಬರೂ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. “ನಮ್ಮಿಬ್ಬರನ್ನು ಸಮಾಜ ಒಟ್ಟಿಗೆ ಬದುಕಲು ಬಿಡುವುದಿಲ್ಲ” ಎಂದು ಮಾತನಾಡಿಕೊಂಡಿದ್ದರೆಂಬ ಮಾಹಿತಿ ವಿಚಾರಣೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದ್ದು, ಕುಟುಂಬಸ್ಥರು ಹಾಗೂ ಪರಿಚಿತರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಇಬ್ಬರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಯಲಹಂಕ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹೊರಟ್ಟಿ ಅವರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸುವುದು ತಮ್ಮ ಇಚ್ಛೆಯಲ್ಲ – ಬಿಕೆ ಹರಿಪ್ರಸಾದ್
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರನ್ನು ಭೇಟಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ (Bk Hariprasad), ಅವರ ವಿರುದ್ಧ ಅವಿಶ್ವಾಸ ನಿರ್ಣಯ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಹಿರಿಯ ನಾಯಕರಾದ ಹೊರಟ್ಟಿ ಅವರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸುವುದು ತಮ್ಮ ಇಚ್ಛೆಯಲ್ಲ ಎಂದು ಹೇಳಿದರು. ವಿಧಾನ ಪರಿಷತ್ತು ಚಿಂತಕರ ಚಾವಡಿಯಾಗಿದ್ದು, ಅದರ ಘನತೆ ಮತ್ತು ಗೌರವವನ್ನು ಎಲ್ಲರೂ ಕಾಪಾಡಬೇಕು ಎಂಬುದಾಗಿ ತಾವು ಮನವಿ ಮಾಡಿರುವುದಾಗಿ ತಿಳಿಸಿದರು.

ಹೊರಟ್ಟಿ ಅವರನ್ನು ಮುಂದುವರಿಸುವ ವಿಚಾರದಲ್ಲಿ ಕೆಲ ಸಚಿವರು ಒತ್ತಡ ಹೇರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಯಾವುದೇ ಸಚಿವರು ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ಗೆ ವಿಧಾನ ಪರಿಷತ್ತಿನಲ್ಲಿ ಸಂಖ್ಯಾಬಲ ಇರುವುದರಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ ಎಂದರು.

ಈ ವೇಳೆ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಯಾವ ರೀತಿಯಲ್ಲಿ ಸ್ಥಾನದಿಂದ ತೆರವುಗೊಳಿಸಲಾಗಿತ್ತು ಎಂಬುದು ತನಗೆ ಗೊತ್ತಿದೆ. ಆದರೆ ಕಾಂಗ್ರೆಸ್ ಆ ರೀತಿಯ ನಡೆ ಅನುಸರಿಸುವುದಿಲ್ಲ. ನಿಯಮಾವಳಿ, ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿಯೇ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹರಿಪ್ರಸಾದ್ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಕೃಷ್ಣಪ್ಪ ಅವರನ್ನು ಭೇಟಿ ಮಾಡಿದ ಕುರಿತು ಮಾತನಾಡಿದ ಹರಿಪ್ರಸಾದ್, ತಮ್ಮ ಮತ್ತು ಕೃಷ್ಣಪ್ಪ ಅವರ ಸಂಬಂಧ ಕಾಲೇಜು ದಿನಗಳಿಂದಲೂ ಇದೆ ಎಂದು ಹೇಳಿದರು. ರೇಣುಕಾಚಾರ್ಯ ಕೂಡ ತಮ್ಮ ಕಾಲೇಜಿನ ಹಿರಿಯರಾಗಿದ್ದು, ಸುಮಾರು 45 ರಿಂದ 50 ವರ್ಷಗಳ ಸಂಬಂಧ ನಮ್ಮ ನಡುವೆಯಿದೆ ಎಂದು ತಿಳಿಸಿದರು.

ಕೃಷ್ಣಪ್ಪ ಅವರಿಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಹೇಳಿದ ಅವರು, ಇಬ್ಬರೂ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದವರಾಗಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧರಾಗಿದ್ದೇವೆ ಎಂದು ಹೇಳಿದರು.

ಕೃಷ್ಣಪ್ಪ ಅವರಿಗೆ ಆಗಿರುವ ನೋವಿನ ಬಗ್ಗೆ ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನಹರಿಸಿದ್ದು, ಇನ್ನೂ ಕೆಲವು ದಿನಗಳಲ್ಲಿ ಅವರು ಕೃಷ್ಣಪ್ಪ ಅವರನ್ನು ನೇರವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲಿಯವರೆಗೆ ಪಕ್ಷಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಕೃಷ್ಣಪ್ಪ ನಡೆದುಕೊಂಡಿರುವುದು ಸಂತೋಷದ ಸಂಗತಿ ಎಂದರು.

ಹಿರಿಯ ನಾಯಕರಿಗೆ ಅನ್ಯಾಯವಾಗಿದೆ ಎಂಬ ಭಾವನೆ ಮೂಡಿದಾಗ ಬೇಸರವಾಗುವುದು ಸಹಜ. ಆದರೆ ಈಗ ಅವರು ಸಮಾಧಾನವಾಗಿದ್ದೇನೆ ಎಂದು ಹೇಳಿರುವುದು ಸಂತೋಷ ತಂದಿದೆ ಎಂದು ಹರಿಪ್ರಸಾದ್ ಹೇಳಿದರು.

ಕೃಷ್ಣಪ್ಪ ಅವರಿಗೆ ಯಾವ ಜವಾಬ್ದಾರಿ ಅಥವಾ ಸ್ಥಾನ ನೀಡಬೇಕು ಎಂಬುದನ್ನು ರಾಹುಲ್ ಗಾಂಧಿಯವರೇ ತೀರ್ಮಾನಿಸಲಿದ್ದಾರೆ. ಅವರು ನೇರವಾಗಿ ಮಾತುಕತೆ ನಡೆಸಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

ರಾಜಕೀಯದಲ್ಲಿ ಯಾವಾಗ ಏನು ನಡೆಯುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. “Politics is a game of possibilities” ಎಂದು ಹೇಳಿದ ಹರಿಪ್ರಸಾದ್, ಸಾಧ್ಯತೆಗಳು ಇರುವವರೆಗೆ ಎಲ್ಲವೂ ಸಾಧ್ಯ. ಆದ್ದರಿಂದ ಯಾವಾಗಲೂ ಸಕಾರಾತ್ಮಕ ಮನೋಭಾವದಿಂದ ಇರಬೇಕು, ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್, ತೈಲ ಬೆಲೆಗಳು ಮತ್ತೆ 1% ಏರಿಕೆ
ಟೆಹ್ರಾನ್ : ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗಣೆಯ ಬಗ್ಗೆ ಅನಿಶ್ಚಿತತೆ ಉಂಟಾಗಿರುವುದರಿಂದ ಶುಕ್ರವಾರ ತೈಲ ಬೆಲೆಗಳು ಶೇ.1 ರಷ್ಟು ಏರಿಕೆಯಾಗಿವೆ.

ಭಾರತೀಯ ಕಾಲಮಾನ ಬೆಳಗ್ಗೆ 7:25 ರ ಸುಮಾರಿಗೆ, ಬ್ರೆಂಟ್ ಕಚ್ಚಾ ತೈಲವು (Crude Oil) ಬ್ಯಾರೆಲ್‌ಗೆ 84 ಸೆಂಟ್ಸ್ ಅಥವಾ 1.02% ಹೆಚ್ಚಾಗಿ 83.33 ಡಾಲರ್‌ಗೆ ವಹಿವಾಟು ನಡೆಸುತ್ತಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲವು ಬ್ಯಾರೆಲ್‌ಗೆ 69 ಸೆಂಟ್ಸ್ ಅಥವಾ 0.89% ಏರಿಕೆಯಾಗಿ 77.98 ಡಾಲರ್‌ಗೆ ತಲುಪಿದೆ.

ಅಮೆರಿಕ ಮತ್ತು ಇಸ್ರೇಲಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಬಳಸುವುದನ್ನು ತಡೆಯುವ ಗುರಿಯನ್ನು ಹೊಂದಿರುವ ಕಾನೂನನ್ನು ಇರಾನ್ ಪರಿಶೀಲಿಸಿದ ಬೆನ್ನಲ್ಲೇ ಕಚ್ಚಾ ತೈಲವು ಬ್ಯಾರೆಲ್‌ಗೆ 3 ಡಾಲರ್‌ಗಿಂತ ಹೆಚ್ಚು ಏರಿಕೆ ಕಂಡಿತು. ಫೆಬ್ರವರಿ ಅಂತ್ಯದಲ್ಲಿ ಯುದ್ಧ ಪ್ರಾರಂಭವಾಗುವ ಮೊದಲು, ಈ ಮಾರ್ಗವು ವಿಶ್ವದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಯ ಐದನೇ ಒಂದು ಭಾಗವಾಗಿತ್ತು.

ಇರಾನ್ ಒಳಗೊಂಡ ಸಂಘರ್ಷ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ನಾನು ನಂಬಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಹೆಚ್ಚು ಕಾಲ ಹೋರಾಡುವುದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಯುದ್ಧವು ಬಹಳ ಬೇಗ ಕೊನೆಗೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಏತನ್ಮಧ್ಯೆ, ಇರಾನ್ ಮತ್ತು ಓಮನ್ ಕೂಡ ಹೊಸ ಸಾರಿಗೆ ಪ್ರಸ್ತಾಪಗಳನ್ನು ಚರ್ಚಿಸಿವೆ. ಆದರೆ, ಪ್ರತಿಕೂಲವೆಂದು ಪರಿಗಣಿಸುವ ಹಡಗುಗಳನ್ನು ಗುರಿಯಾಗಿಸಿಕೊಂಡು ಕ್ರಮಗಳನ್ನು ಮುಂದುವರಿಸಿವೆ.

ಆಟವಾಡುತ್ತಲೇ ಕುಸಿದು ಬಿದ್ದು 15 ವರ್ಷದ ಬಾಲಕ – ದುರ್ಮರಣ
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಸುರಿಂಜೆಯಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ದಿಢೀರ್ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತ ಬಾಲಕನನ್ನು ಸುರಿಂಜೆಯ ಕೋಟೆ ಬೊಲ್ಲಾರು ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಲಿಖಿತ್ ಅಮೀನ್ ಎಂದು ಗುರುತಿಸಲಾಗಿದೆ.

ಸುರಿಂಜೆ ಆಟದ ಮೈದಾನದಲ್ಲಿ ಲಿಖಿತ್ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕೋರ್ಟ್‌ನಲ್ಲೇ ಕುಸಿದುಬಿದ್ದಿದ್ದಾನೆ.

ಸಿಸಿಟಿವಿ ದೃಶ್ಯದಲ್ಲಿ ಲಿಖಿತ್ ವಾಲಿಬಾಲ್ ಸರ್ವ್ ಮಾಡಿದ ಬಳಿಕ ಎದುರಾಳಿ ತಂಡದ ಶಾಟ್‌ ಅನ್ನು ಹಿಂತಿರುಗಿಸಲು ನೆಟ್‌ನತ್ತ ಓಡುವಾಗ ದಿಢೀರ್ ಕುಸಿದು ಬಿದ್ದಿದ್ದಾನೆ. ಇದನ್ನು ನೋಡಿದ ಆಘಾತಕ್ಕೊಳಗಾದ ಇತರ ಆಟಗಾರರು ತಕ್ಷಣ ಆತನತ್ತ ಧಾವಿಸಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಲಿಖಿತ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ವೈದ್ಯರು ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆತನನ್ನು ಉಳಿಸಲು ವೈದ್ಯರು ಪ್ರಯತ್ನಿಸಿದರೂ ಫಲಿಸಲಿಲ್ಲ.

ಲಿಖಿತ್ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.