Kaviraj – Peepal Media

ಆಡಳಿತ, ಅನುದಾನಗಳಿಗಿಂತ ಇಸ್ರೋ ವಿಜ್ಞಾನಿಗಳ ಪ್ರತಿಭೆ, ಪರಿಶ್ರಮವೇ ಯಶಸ್ಸಿನ ಮೂಲ : ಸಾಹಿತಿ ಕವಿರಾಜ್
ಚಂದ್ರಯಾನ 3 ರ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿರುವ ಕ್ರೆಡಿಟ್ ವಾರ್ ಬಹಳ‌ ಅನುಚಿತವಾದದ್ದು . ಮುಖ್ಯವಾಗಿ ಅವರ ಅವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು . ಇವರ ಇವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು ಎಂಬ ಮಾಹಿತಿಯೊಂದರ ಫೋಟೋಗಳು ಓಡಾಡುತ್ತಿವೆ. ಆ ಸಂಖ್ಯೆಗಳು ನಿಜವೇ ?

ಆ ಸಂಖ್ಯೆಗಳ ಮೂಲಕ ಕ್ಲೈಮ್ ಮಾಡಲಾಗುತ್ತಿರುವ ವಿಚಾರ ನಿಜವೇ ? ಎಂದು ನೋಡಲು ಹೊರಟರೇ , ಸಿಗುವುದು ಯಾರ ಆಡಳಿತ ಉತ್ತಮ ಎಂಬ ರಾಜಕೀಯ ಮೇಲಾಟದ ಫಲಿತಾಂಶವಲ್ಲ. ಬದಲಿಗೆ ಅದು ‘ಇಸ್ರೋ’ ಎಂಬ ದೇಶದ ಮಹೋನ್ನತ ಸಂಸ್ಥೆ ಹತ್ತಾರು ಸವಾಲುಗಳನ್ನು ಎದುರಿಸಿ ವಿಕ್ರಮಗಳನ್ನು ದಾಖಲಿಸಿದ ಯಶೋಗಾಥೆಯ ಪರಿಚಯ ಮಾಡಿಕೊಡುತ್ತದೆ.

ISRO ಇತಿಹಾಸ

ಇಸ್ರೋ ಸ್ಥಾಪನೆಯಾಗಿದ್ದು 1962 ರಲ್ಲಿ INCOSPAR (Indian National Committee for Space Research)ಎಂಬ ಹೆಸರಿನೊಂದಿಗೆ. 1969 ರಲ್ಲಿ ಅದು ISRO ಎಂದು ಬದಲಾಯಿತು. ಆಗ ISRO ಬಳಿ ಉಪಗ್ರಹಗಳನ್ನು ಗಗನಕ್ಕೆ ಉಡಾವಣೆ ಮಾಡುವ ಸವಲತ್ತು , ಅಂದರೆ ಲಾಂಚಿಂಗ್ ಮಾಡುವ ತಂತ್ರಜ್ಞಾನ ಲಭ್ಯವಿರಲಿಲ್ಲ. ಅದು ತನ್ನ ಉಪಗ್ರಹಗಳನ್ನು ಲಾಂಚ್ ಮಾಡಲು ಬೇರೆ ದೇಶಗಳನ್ನು ಅವಲಂಭಿಸಿತ್ತು. 1975 ರಲ್ಲಿ ನಮ್ಮ ಮೊದಲ ಉಪಗ್ರಹ ‘ಆರ್ಯಭಟ’ವನ್ನು ಗಗನಕ್ಕೆ ಚಿಮ್ಮಿಸಿದ್ದು ಸೋವಿಯೆತ್ ರಷ್ಯಾದ ‘ಕಪುತಿನ್ ಯಾರ್’ ಎಂಬ ನಗರದಲ್ಲಿ , ಸೋವಿಯೆತ್ ಕಾಸ್ಮೋಸ್ M3 ರಾಕೆಟ್ ಎಂಬ ಲಾಂಚಿಂಗ್ ವೆಹಿಕಲ್ ಮೂಲಕ.

ಉಡಾವಣೆಗೆ ಬೇರೆ ದೇಶವನ್ನು ಆಶ್ರಯಿಸುವುದು ದುಬಾರಿಯಾಗಿತ್ತು. ಹಾಗಾಗಿ 1980 ರಲ್ಲಿ ಇಸ್ರೋ ತನ್ನ ಸ್ವಂತ ಲಾಂಚಿಂಗ್ ವೆಹಿಕಲ್ SLV ( sattellite launching vehicle) ಯನ್ನು ಅಭಿವೃಧ್ಧಿ ಪಡಿಸಿತು . ಇದರ ಮೂಲಕ ತನ್ನ ಉಪಗ್ರಹವಾದ ‘ರೋಹಿಣಿ’ ಯನ್ನು ತಾನೇ ಸ್ವತಃ, ಗಗನಕ್ಕೆ ಚಿಮ್ಮಿಸಿ ಉಡಾವಣೆ ವಿಚಾರದಲ್ಲಿ ಸ್ವಾವಲಂಬಿ ಆಯಿತು.

ಆಗ ಲಾಂಚಿಂಗ್ ತಂತ್ರಜ್ಞಾನ ಇದ್ದರು ಕೂಡಾ ಅದಕ್ಕಾಗಿ ಉಪಯೋಗಿಸುತ್ತಿದ್ದ ಘನ ಇಂಧನ ದುಬಾರಿಯು ಮತ್ತು ಹೆಚ್ಚು ಭಾರ ಉಳ್ಳದಾಗಿತ್ತು. ಇಂಧನಕ್ಕಾಗಿ ದೊಡ್ಡ ಟ್ಯಾಂಕ್ ಗಳನ್ನು ಹೊಂದಬೇಕಾಗಿತ್ತು , ಮತ್ತು ಅದರಿಂದ ರಾಕೆಟ್ ಕ್ರಮಿಸುವ ದೂರವು ಕೂಡಾ ಕಡಿಮೆಯೇ ಆಗಿರುತ್ತಿತ್ತು.

ಆ ಹೊತ್ತಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ಗಳ ದ್ರವರೂಪದ ಮಿಶ್ರಣವಾದ ಕ್ರಯೋಜೆನಿಕ್ ತಂತ್ರಜ್ಞಾನ ಹಗುರ , ಉಪಯುಕ್ತ ಮತ್ತು ಕಡಿಮೆ ವೆಚ್ಚದ್ದಾಗಿ ಅನುಕೂಲಕರವಾಗಿತ್ತು. ಆದರೆ ಆ ತಂತ್ರಜ್ಞಾನ ಇಸ್ರೋ ಬಳಿ ಲಭ್ಯವಿರಲಿಲ್ಲ.
ಆ ತಂತ್ರಜ್ಞಾನವನ್ನು ಕೊಡುವುದಾಗಿ ರಷ್ಯಾ ಒಪ್ಪಿಕೊಂಡಿತ್ತು. ಆದರೆ ತಮ್ಮ ‘ನಾಸಾ’ಗೆ ಇಸ್ರೋ ಪ್ರಬಲ ಪ್ರತಿಸ್ಪರ್ಧಿ ಆಗಬಹುದು ಎಂದು ಹೆದರಿದ ಅಮೇರಿಕಾದ ಕುಮ್ಮಕ್ಕಿನಿಂದ, ಕೊನೆ ಕ್ಷಣದಲ್ಲಿ ರಷ್ಯಾ ತಂತ್ರಜ್ಞಾನ ಒದಗಿಸುವ ಒಪ್ಪಂದದಿಂದ ಹಿಂದೆ ಸರಿಯಿತು.

ಆಗ ಇಸ್ರೋ ಇದನ್ನೇ ಸವಾಲಾಗಿ ಸ್ವೀಕರಿಸಿ , ಸುಮಾರು ಎರಡು ದಶಕಗಳ ನಿರಂತರ ಪ್ರಯತ್ನದ ಮೂಲಕ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಸ್ವದೇಶಿಯಾಗಿ ಅಭಿವೃದ್ಧಿ ಪಡಿಸಿದ್ದು ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭ್ಯುದಯಕ್ಕೆ ಬಹುಮುಖ್ಯ ಕಾರಣವಾಯಿತು.

ಆನಂತರ ಇಸ್ರೋ ತನ್ನ ಉಪಗ್ರಹಗಳಷ್ಟೇ ಅಲ್ಲದೇ , ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿಕೊಡಲು ಆರಂಭಿಸಿತು. 1999 ರಲ್ಲಿ ಮೊದಲ ಬಾರಿಗೆ ತನ್ನ PSLV ( polar sattelite launching vehicle) ಮೂಲಕ ಜರ್ಮನಿ ಮತ್ತು ದಕ್ಷಿಣ ಕೊರಿಯಾದ ಎರಡು ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿಕೊಡುವ ಮೂಲಕ ಈ ಶಕೆ ಆರಂಭವಾಯಿತು.

ಅಂದಿನಿಂದ ಆರಂಭವಾದ ಈ ಯಶೋಗಾಥೆ ಅತ್ಯಂತ ಕಡಿಮೆ ವೆಚ್ಚದಲ್ಲಿ ತಮ್ಮ ಉಪಗ್ರಹಗಳನ್ನು ಉಡಾಯಿಸಲು ವಿಶ್ವವೇ ಭಾರತವನ್ನು ಆಶ್ರಯಿಸುವ ಮಟ್ಟಕ್ಕೆ ಬೆಳೆಯಿತು. ಮುಂದೆ ಇಸ್ರೋ GSLV ( Geosynchronous sattelite launching vehicle ) ಉಡಾವಣಾ ರಾಕೆಟ್ ಅನ್ನು ಕೂಡಾ ಅಭಿವೃದ್ಧಿ ಪಡಿಸಿತು. ಹಂತಹಂತವಾಗಿ ಈ ದಿಸೆಯಲ್ಲಿ ಇಸ್ರೋ ಮುಂದಡಿ ಇಡುತ್ತಾ ಬಂದು, ಈವರೆಗೂ ಸುಮಾರು 385 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿಕೊಟ್ಟ ಸಾಧನೆಗೈದಿದೆ. ಈ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದೆ.

ಅದರಲ್ಲೂ 2017 ರಲ್ಲಿ PSLV ಮೂಲಕ ವಿದೇಶಗಳ 104 ಉಪಗ್ರಹಗಳನ್ನು , ಒಮ್ಮೆಗೆ, ಒಂದೇ ಲಾಂಚ್ ಮೂಲಕ ಗಗನಕ್ಕೆ ಚಿಮ್ಮಿಸಿದ್ದು ಇಸ್ರೋ ಪರಾಕ್ರಮದ ವಿರಾಟ್ ದರ್ಶನವೇ ಸರಿ. ಅದರಲ್ಲಿ ತನ್ನ ಎರಡು ಉಪಗ್ರಹಗಳ ಜೊತೆ, 96 ಉಪಗ್ರಹಗಳು USA ಗೆ ಸೇರಿದ್ದು , ಇನ್ನುಳಿದವು ಜರ್ಮನಿ, ಬೆಲ್ಜಿಯಂ , ನೆದರ್ಲ್ಯಾಂಡ್ , ಯುಎಈ , ಇಸ್ರೇಲ್ ಮತ್ತು ಕಜಕಸ್ತಾನ್ ದೇಶಗಳಿಗೆ ಸೇರಿದ್ದವು. ಈವರೆಗೆ ಇಸ್ರೋ ಉಡಾಯಿಸಿದ ಉಪಗ್ರಹಗಳೆಲ್ಲವೂ ನಮ್ಮ ದೇಶದವೇ ಅಲ್ಲ . ಅವುಗಳಲ್ಲಿ ಹೆಚ್ಚಿನವು ಬೇರೆ ದೇಶಗಳದ್ದು. ಎಲ್ಲಾ ಮುಂದುವರಿದ ದೇಶಗಳು ಸೇರಿದಂತೆ , ಬೇರೆ ಬೇರೆ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವುದರಲ್ಲಿ ಇಸ್ರೋ ಈಗ ಜಗತ್ತಿನ ಅತ್ಯಂತ ಬೇಡಿಕೆಯ ಸಂಸ್ಥೆ.

ಆಡಳಿತ ಅನುದಾನಗಳಿಗಿಂತ ವಿಜ್ಞಾನಿಗಳ ಪ್ರತಿಭೆ, ಪರಿಶ್ರಮವೇ ಯಶಸ್ಸಿನ ಮೂಲ

ಈ ಸಾಧನೆ ಕೇವಲ ಐದಾರು ವರ್ಷಗಳಲ್ಲಿ ಆದದ್ದಲ್ಲ. ಇಸ್ರೋ ತನ್ನ ಮೊದಲ ಉಪಗ್ರಹವನ್ನು ಹಾರಿಸಿ ಸುಮಾರು ಐವತ್ತು ವರ್ಷಗಳಾಗಿ ಹೋಗಿದೆ. ಚಂದ್ರಯಾನದ ಸರಣಿ ಆರಂಭವಾಗಿಯೂ 15 ವರ್ಷವಾಗಿದೆ.
ಆಡಳಿತ , ಅನುದಾನಗಳಿಗಿಂತ ಹೆಚ್ಚು ವಿಜ್ಞಾನಿಗಳ ಪ್ರತಿಭೆ , ಪರಿಶ್ರಮ ಇಸ್ರೋ ಯಶಸ್ಸಿನ ಮೂಲದ್ರವ್ಯ.

1969 ರಿಂದ ಹಂತಹಂತವಾಗೀ ಎಂತೆಂತದ್ದೋ ಕಠಿಣ ಸವಾಲುಗಳನ್ನು ಎದುರಿಸಿ ಇಸ್ರೋ ಇಂದು ಜಗವೇ ಮೆಚ್ಚುವಂತ ಸಾಧನೆಗಳನ್ನು ಮಾಡುವ ಮಟ್ಟಕ್ಕೆ ಬೆಳೆದಿದೆ. ಇಸ್ರೋ ಇಡೀ ದೇಶದ ಪರಂಪರೆಯ ಹೆಮ್ಮೆ. ಅದರ ಹುಟ್ಟಿನಿಂದ ಇಲ್ಲಿಯವರೆಗೂ ಅದರ ಎಲ್ಲ ಸಾಧನೆಗಳು ಇಡೀ ದೇಶಕ್ಕೆ ಸೇರಿದ್ದು‌.

ಇಸ್ರೋದ ಇಂದಿನ ಸಾಧನೆಯ ಕ್ರೆಡಿಟ್ ತೆಗೆದುಕೊಳ್ಳುವ ಹಪಾಹಪಿಯಲ್ಲಿ ಇಂತಹಾ ಅಮೋಘ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರನ್ನು ಅವಮಾನಿಸುವುದು ಅತ್ಯಂತ ದೊಡ್ಡ ದೇಶದ್ರೋಹವಾಗಿದೆ.

ಯಾವುದೇ ಗಿಡವೂ ನೆಟ್ಟ ಕೂಡಲೇ ಫಲ ನೀಡುವುದಿಲ್ಲ. ಪಕ್ಷ , ಪಂಥಗಳ ಅಮಲಿನಲ್ಲಿ , ವರುಷಗಳ ನಂತರ ಫಲವನ್ನು ಸವಿಯುವ ವೇಳೆ ಉತ್ತಿ ಬಿತ್ತಿ , ನೀರುಣಿಸಿ ಬೆಳೆಸಿದವರನ್ನು ಅವಮಾನಿಸುವಷ್ಟು ಕೃತಘ್ನರಾಗದಿರೋಣ.

ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯ : ಕಾವ್ಯದ ಮೂಲಕ ಹರಸಿದ ಖ್ಯಾತ ಕವಿ ಕವಿರಾಜ್
ಬೆಂಗಳೂರು: T20 ವಿಶ್ವಕಪ್ ಟೂರ್ನಿಯ ಇಂದಿನ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೆ ಖ್ಯಾತ ಸಿನಿಮಾ ಸಾಹಿತಿಯಾದ ಕವಿರಾಜ್ ಅವರು ಕವಿತೆ ಬರೆದು ವಿಶಿಷ್ಟ ರೀತಿಯಲ್ಲಿ ಶುಭಕೋರಿದ್ದಾರೆ.

ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಕವಿರಾಜ್ ಅವರು ಬಿಸಿಸಿ ನಡೆಸುವ ಯಾವುದೇ ಪಂದ್ಯಾವಳಿಗಳಿದ್ದರು ತಮ್ಮದೇ ಶೈಲಿಯಲ್ಲಿ ಒಂದಷ್ಟು ಅಭಿಪ್ರಾಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.

ಈಗ ಅದೇ ರೀತಿ ತಮ್ಮ ಕಾವ್ಯದಲ್ಲಿ ಭಾರತದ ಆಟಗಾರನನ್ನು ಹಿಡಿದಿಟ್ಟು ಚಂದದ ಕವಿತೆ ಬರೆಯುವ ಮೂಲಕ ಭಾರತ ತಂಡಕ್ಕೆ ಶುಭಕೋರಿದ್ದಾರೆ.

ಆ ಕವಿತೆ ಯಾವುದು ಅಂತೀರಾ? ಇಲ್ಲಿದೆ ನೋಡಿ.

ಇವತ್ತಿಗೊಂದು ‘ಹಳೇ ಖಯಾಲಿ’ಯ ಪ್ರಾರ್ಥನೆ

‘Row -ಹಿತ’ವಾಗಲಿ

‘Raw -ಹುಲ್ಲ್ ‘ ಹಸಿರಾಗಲಿ

‘ವಿರಾಟ್’ ರೂಪ ದರ್ಶನವಾಗಲಿ

‘ಸೂರ್ಯ’ ಪ್ರಜ್ವಲಿಸಲಿ

‘ಕಾರ್ತಿಕ’ ಮಾಸದಲ್ಲೇ

‘ಹಾರ್ದಿಕ’ ವಿಜಯ ಪ್ರಾಪ್ತಿಯಾಗಲಿ

ಅ(ಹ)ರ್ಶದೀಪ ಬೆಳಗಲಿ

‘ಅಕ್ಷರ’ ಪ್ರತಿಭೆಯು

‘ಅಶ್ವಿನಿ(ನ್)’ ನಕ್ಷತ್ರದಂತೆ ರಾರಾಜಿಸಲಿ

‘ಶಮೀ’ ವೃಕ್ಷ ಶತ್ರುವಿನಾಶಗೈಯಲಿ

ಭಾರತ ‘ಭುವನೇಶ್ವರ’ನಾಗುವತ್ತ

ಅಂತಿಮ ಚರಣಕ್ಕೆ

ಮುನ್ನಡೆಯಲಿ

-ಇಂತೀ ನಿಮ್ಮ ಕವಿರಾಜ್

ಕವಿರಾಜ್ ಅವರ ಕವಿತೆಯ ಆಶಯದಂತೆ ಇಡೀ ಭಾರತದ ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ಭಾರತದ ಗೆಲುವಿಗಾಗಿ ಕಾತುರದಿಂದ ಕಾಯುತ್ತಿರುವುದೂ ಸಹ ಸತ್ಯ. ಭಾರತ ಈ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಲಿ ಎಂದು ಹಾರೈಸೋಣ.

ಬಡವರ ಮಕ್ಕಳು ಹೀರೊ ಆಗ್ಲಿಕ್ಕೆ ಬಿಡ್ತಿರೇನ್ರೊ ನೀವು? ಹೆಡ್‌ ಬುಷ್‌ ವಿವಾದಕ್ಕೆ ನಿರ್ದೇಶಕರ ಆಕ್ರೋಶ
ಬೆಂಗಳೂರು: ಧನಂಜಯ್‌ ನಿರ್ಮಾಣ, ನಟನೆಯ ಹೆಡ್‌ ಬುಷ್‌ ಸಿನಿಮಾ ಕುರಿತು ವಿನಾಕಾರಣ ವಿವಾದಗಳನ್ನು ಸೃಷ್ಟಿಸುತ್ತಿರುವುದರ ಕುರಿತು ಚಲನಚಿತ್ರ ನಿರ್ದೇಶಕರು, ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಧನಂಜಯ್‌ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿರ್ದೇಶಕ ಬಿ.ಎಂ.ಗಿರಿರಾಜ್‌ ಈ ಕುರಿತು ಫೇಸ್‌ ಬುಕ್‌ ನಲ್ಲಿ ಬರೆದಿದ್ದು, ಬಡವರ ಮಕ್ಕಳು ಹೀರೊ ಆಗ್ಲಿಕ್ಕೆ ಬಿಡ್ತಿರೇನ್ರೊ ನೀವು. ಹಿಂದಿಂದಲೇ ಹೊಡೆದು ಬಿಡ್ತೀರ ಎಂದು ಆಕ್ರೋಶ ತೋಡಿಕೊಂಡಿದ್ದಾರೆ.

ನೆಲದ ಬಗ್ಗೆ ಅಪಾರವಾದ ಕಾಳಜಿ, ಮನುಷ್ಯತ್ವ, ಮಾನವೀಯ ಕಾಳಜಿ ಇರುವ ಧನಂಜಯ್‌ ರವರಂತಹ ನಟರು ಕನ್ನಡ ಚಿತ್ರರಂಗಕ್ಕೆ ಹೆಚ್ಚೇ ಅವಶ್ಯಕವಾಗಿದ್ದಾರೆ. ಅವರೊಂದಿಗೆ ಕನ್ನಡ ಚಿತ್ರರಂಗ ನಿಲ್ಲಬೇಕು ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನವರೆಗೆ ಕೇವಲ ಉತ್ತರ ಭಾರತದಲ್ಲಿದ್ದ, ನಂಬಿಕೆಯ ಹೆಸರಲ್ಲಿ ಸಿನೆಮಾಗಳ ಮೇಲೆ ಮುಗಿಬಿದ್ದು ಬಾಯ್ಕಾಟ್-ಬ್ಯಾನ್ ಎಂದು ಕೂಗುವ ಖಾಯಿಲೆ ಈಗ ಕರ್ನಾಟಕಕ್ಕೂ ಬಂದು ನಿಂತಿದೆ. ಎಲ್ರೂ ಎಲ್ಲಾನೂ ಗುತ್ತಿಗೆ ತಗೊಂಡಿದ್ದಾರೆ. ಬಹುಶಃ ಮುಂದೆ ಸಿನೆಮಾದವರು ತಾವು ಹಾಕೋ ಬಟ್ಟೆಗೂ ಇನ್ನೊಬ್ರಿಂದ ಪರ್ಮೀಷನ್ ತಗೋಬೇಕಾಗುತ್ತೇನೋ ಎಂದು ಅವರು ನೊಂದು ನುಡಿದಿದ್ದಾರೆ.

ಸಿನೆಮಾ ನೋಡುವವರಿಗಿಂತ, ನೋಡದೇ ಅರಚುವವರ ಉಪಟಳ ಜಾಸ್ತಿ ಆಗ್ತಿದೆ. ಇಂತಹ ಸಮಯದಲ್ಲಿ ಚಿತ್ರರಂಗದಲ್ಲಿರುವ ‘ಘಟಗಳು’ ಪರಸ್ಪರ ಜೊತೆಯಾಗಿ, ಒಗ್ಗಟ್ಟಾಗಿ ನಿಲ್ಲುವ ಬದಲು..‌ತಮ್ಮ ಲೋಕದಲ್ಲಿ ತಾವಿದ್ದಾರೆ. ಹೀಗೆ ಹೋದ್ರೆ ಚಿತ್ರರಂಗವನ್ನೇ ನಂಬಿರುವ ಕುಟುಂಬಗಳು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೊಂಡು ಮಲಗಬೇಕಾಗುತ್ತದೆ ಎಂದು ಮಂಸೋರೆ ನುಡಿದಿದ್ದಾರೆ.

ಚಿತ್ರಸಾಹಿತಿ ಕವಿರಾಜ್‌ ಫೇಸ್‌ ಬುಕ್‌ ನಲ್ಲಿ ಈ ಕುರಿತು ಬರೆದಿದ್ದು ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ , ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ‌. ಬಣ , ಪಂಥಗಳ ಆಧಾರದ ದ್ವೇಷದಲ್ಲಿ ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನರಲ್ ಆಗಿ‌, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ. ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ‌ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಒಬ್ಬ ಗೀತರಚನಾಕಾರನಾಗಿರುವ ನನ್ನ ಖಚಿತ ನಿಲುವು ಎಂದು ಹೇಳಿದ್ದಾರೆ.

ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ ,ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ ಎಂದು ಕವಿರಾಜ್‌ ನುಡಿದಿದ್ದಾರೆ.

#Amwithdhananjay