kedaranath – Peepal Media

ಚಿನ್ನದ ಬದಲಿಗೆ ಹಿತ್ತಾಳೆ ಹೊದಿಕೆ ; ಕೇದಾರನಾಥದಲ್ಲಿ 125 ಕೋಟಿ ಅವ್ಯವಹಾರದ ಆರೋಪ
ಉದ್ಯಮಿಯೊಬ್ಬರು ದೊಡ್ಡ ಪ್ರಮಾಣದ ದೇಣಿಗೆ ಅಡಿಯಲ್ಲಿ ಕೇದಾರನಾಥ ದೇವಸ್ಥಾನದ ಗರ್ಭಗುಡಿಗೆ ಚಿನ್ನದ ಹೊದಿಕೆ ಕಾಮಗಾರಿ ನಡೆದಿತ್ತು. ಆದರೆ ಅಲ್ಲಿ ಚಿನ್ನದ ಬದಲು ಹಿತ್ತಾಳೆಯ ಹೊದಿಕೆ ಹೊದಿಸಲಾಗಿದೆ ಎಂಬ ಅಲ್ಲಿನ ಹಿರಿಯ ಅರ್ಚಕರು ಹಾಗೂ ಚಾರ್ ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷರೂ ಆಗಿರುವ ಸಂತೋಷ್ ತ್ರಿವೇದಿ ಹಗರಣ ನಡೆದ ಬಗ್ಗೆ ಆರೋಪಿಸಿದ್ದಾರೆ.

ಉದ್ಯಮಿಯೊಬ್ಬರು ಕೇದಾರನಾಥ ದೇವಾಲಯಕ್ಕೆ 230 ಕೆಜಿ ಚಿನ್ನವನ್ನು ದೇಣಿಗೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿಯೊಳಗಿನ ಚಿನ್ನದ ಪದರದ ಕೆಲಸಕ್ಕೆ ಉದ್ಯಮಿ ನೀಡಿದ ಆ ಚಿನ್ನವನ್ನು ಬಳಸಲು ನಿರ್ಧರಿಸಲಾಗಿತ್ತು. ಆದರೆ ಈಗ ಅರ್ಚಕರಾದ ಸಂತೋಷ್ ತ್ರಿವೇದಿ ಆರೋಪಿಸಿದಂತೆ ಚಿನ್ನದ ಲೇಪನ ಈಗ ಹಿತ್ತಾಳೆ ಲೇಪನ ಆಗಿದೆ. ಇದು ಸುಮಾರು 125 ಕೋಟಿ ರೂಪಾಯಿ ಮೌಲ್ಯದ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆದರೆ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (BKTC) ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಅರ್ಚಕರ ಈ ಆರೋಪವನ್ನು ನಿರಾಕರಿಸಿದೆ. ಅಂತಹ ಯಾವುದೇ ಅವ್ಯವಹಾರ ನಡೆದೇ ಇಲ್ಲ ಎಂಬಂತೆ ದೇವಾಲಯದ ಆಡಳಿತ ಮಂಡಳಿ ನಿರಾಕರಿಸಿದೆ.

ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ಹಿರಿಯ ಅರ್ಚಕ ಸಂತೋಷ್ ತ್ರಿವೇದಿ ಅವರು ಚಿನ್ನದ ಲೇಪನದ ಹೆಸರಿನಲ್ಲಿ ದೇವಾಲಯದ ಗರ್ಭಗುಡಿಯನ್ನು ಹಿತ್ತಾಳೆ ತಟ್ಟೆಗಳಿಂದ ಮುಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತೋಷ್ ತ್ರಿವೇದಿ, ಆಪಾದಿತ ಹಗರಣದಲ್ಲಿ ಭಾಗಿಯಾಗಿರುವವರನ್ನು ಕಾನೂನು ಕ್ರಮಕ್ಕೆ ತರದಿದ್ದರೆ ಆಂದೋಲನ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಬದರಿನಾಥ – ಕೇದಾರನಾಥ ದೇವಾಲಯದ ಸಮಿತಿ ಭಾನುವಾರ ಸಾಮಾಜಿಕ ಮಾಧ್ಯಮದ ಈ ಆಂದೋಲನವನ್ನು ಇದೊಂದು ರಾಜಕೀಯ “ಪಿತೂರಿ” ಎಂದು ಬಣ್ಣಿಸಿದೆ. ಅವರ ನೇತೃತ್ವದಲ್ಲಿ ಸುಧಾರಿತ ಸೌಲಭ್ಯಗಳಿಂದಾಗಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯಾಗಿದೆ. ಇದರಿಂದ ಸಂತೋಷವಾಗದ ಜನ ಈ ರೀತಿಯ ಪಿತೂರಿ ಮಾಡುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ. ಇಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬುದು ತನಿಖೆಯಿಂದ ಹೊರಬರಬೇಕಿದೆ.

ನಾಳೆ ಕೇದಾರನಾಥಕ್ಕೆ ಪ್ರಧಾನಿ ಭೇಟಿ
ಉತ್ತರಾಖಾಂಡ : ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಲಿದ್ದು, ಕೇದಾರನಾಥನ ದರ್ಶನ  ಪಡೆದು ಪೂಜಾಕಾರ್ಯಕ್ರಮವನ್ನು ಸಲ್ಲಿಸಲಿದ್ದಾರೆ. ಮತ್ತು ಅಲ್ಲಿನ ಅಭಿವೃದ್ದಿ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.

ಅಕ್ಟೋಬರ್‌ 21 ರಂದು ಪ್ರಧಾನಿ ಮೋದಿ ಕೇದಾರನಾಥಕ್ಕೆ ತೆರಳಲಿದ್ದು, ದೇವರ ದರ್ಶನ ಪಡೆಯಲಿದ್ದಾರೆ. ನಂತರ ಕೇದಾರನಾಥ ರೋಪ್‌ ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಆದಿ ಗುರು ಶಂಕರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಆನಂತರ ಬದರಿನಾಥದಲ್ಲಿನ ರಿವರ್‌ಫ್ರಂಟ್‌ ಅಭಿವೃದ್ದಿ ಕಾರ್ಯಗಳ ಪ್ರಗತಿ, ಪ್ಲಾಜಾ ಮತ್ತು ಕೆರೆಗಳ  ಅಭಿವೃದ್ದಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. 2430 ಕೋಟಿ ವೆಚ್ಚದಲ್ಲಿ ಕೇದಾರನಾಥ ರೋಪ್‌ ವೇ ಯೋಜನೆಯ ಶಂಕುಸ್ಥಾಪನೆ ನಡೆಸಲಿದ್ದಾರೆ.

ಕೇದರನಾಥ್‌ ಬಳಿ ಹೆಲಿಕ್ಯಾಫ್ಟರ್‌ ಪತನ : 6 ಮಂದಿ ದುರ್ಮರಣ
ಉತ್ತರಾಖಂಡ್‌ : ಹವಾಮಾನ ವೈಫರಿತ್ಯದಿಂದ ಹೆಲಿಕ್ಯಾಫ್ಟರ್‌ ಪತನವಾಗಿದ್ದು ಇಬ್ಬರು ಫೈಲೆಟ್‌ ಸೇರಿದಂತೆ 6 ಜನರು ದುರ್ಮರಣವಾಗಿರುವ ಘಟನೆ ಕೇದರನಾಥ್‌ನ ಗರುಡಚಟ್ಟಿ ಬಳಿ ನಡೆದಿದೆ.

ಎಂಟು ಜನರನ್ನು ಕೇದನಾಥಕ್ಕೆ ಯಾತ್ರಿಕರನ್ನು ಕೊಂಡೊಯ್ಯುತ್ತಿದ್ದ ಹೆಲಿಕ್ಯಾಫ್ಟರ್‌ ಪತನಗೊಂಡಿದೆ. ಹವಾಮಾನ ವೈಫರಿತ್ಯದ ಕಾರಣ ಕೇದರನಾಥ್‌ನ ಗರುಡಚಟ್ಟಿ ಬಳಿ  ಹೆಲಿಕ್ಯಾಫ್ಟರ್‌  ಪತನಗೊಂಡಿದ್ದು, ಇಬ್ಬರು ಫೈಲೆಟ್‌ ಮತ್ತು ನಾಲ್ಕು  ಮಂದಿ ಯಾತ್ರಿಕರು ಬಲಿಯಾಗಿದ್ದಾರೆ. ಕೇದರನಾಥಕ್ಕೆ ತಲುಪಲು 2 ಕಿಮೀ ಅಷ್ಟೇ ಬಾಕಿ ಇರುವಾಗ ಈ ದುರಂತ ನಡೆದಿದೆ.