kejrival – Peepal Media

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು l ಬಿಜೆಪಿ ಸಂಚಿಗೆ ಸೋಲು: ಆತಿಶಿ
ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದನ್ನು ಸ್ವಾಗತಿಸಿರುವ ಎಎಪಿ ನಾಯಕಿ ಆತಿಶಿ, ಇದು ಸತ್ಯಕ್ಕೆ ಸಂದ ಜಯ. ಬಿಜೆಪಿ ಕುತಂತ್ರದ ಸೋಲು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನಮ್ಮ ನಾಯಕರಾದ ಕೇಜ್ರಿವಾಲ್‌ ಅವರ ಬಂಧನದ ಹಿಂದೆ ಬಿಜೆಪಿಯ ಕುಂತಂತ್ರ ಕೆಲಸ ಮಾಡಿದೆ. ಬಿಜೆಪಿ ಹೈಕಮಾಂಡ್‌ ತನಗೆ ಆಗದವರನ್ನು ಮುಗಿಸಲು ಏನು ಮಾಡಲು ಹೇಸುವುದಿಲ್ಲ. ಈಗ ಮಧ್ಯಂತರ ಜಾಮೀನು ಸಿಕ್ಕಿದೆ ಎಂದರೆ, ಕೇಜ್ರಿವಾಲ್‌ ಬಂಧನದ ಹಿಂದೆ ಬಿಜೆಪಿ ಸಂಚು ಅಡಗಿರುವುದು ಸಾಬೀತುಗೊಂಡಂತಾಗಿದೆ’ ಎಂದರು.

‘ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಗಲಿದೆ ಎಂದು ಬಿಜೆಪಿಗೆ ತಿಳಿದಿತ್ತು. ಅದಕ್ಕಾಗಿ ಅವರನ್ನು ಸಿಬಿಐ ಮೂಲಕ ಮತ್ತೆ ಬಂಧಿಸಿದೆ. ಕೇಜ್ರಿವಾಲ್‌ ಹೊರಗೆ ಇರಬಾರದು ಎಂಬುದು ಬಿಜೆಪಿಯ ಕುತಂತ್ರವಾಗಿದೆʼ ಎಂದು ಆತಿಶಿ ಕಿಡಿ ಕಾರಿದರು.

‘ಕೇಜ್ರಿವಾಲ್ ಪ್ರಾಮಾಣಿಕ ವ್ಯಕ್ತಿವಾಗಿದ್ದು, ಪ್ರಾಮಾಣಿಕವಾಗಿಯೇ ಇರುತ್ತಾರೆ’ ಅವರನ್ನು ಎಷ್ಟೇ ದಿನ ಒಳಗಡೆ ಇಟ್ಟರೂ ಏನು ಬದಲಾಗಲ್ಲ ಎಂದು ಆತಿಶಿ ಭರವಸೆ ವ್ಯಕ್ತಪಡಿಸಿದರು.

ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ಲಭಿಸಿದರೂ, ಜೈಲಿನಿಂದ ಹೊರಬರುವಂತಿಲ್ಲ. ಇದೇ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರನ್ನು ಸಿಬಿಐ ಬಂಧಿಸಿದೆ.

ಗಂಭೀರ ಖಾಯಿಲೆಯ ಲಕ್ಷಣಗಳಿವೆ, ಆದ್ರೂ ನಾಡಿದ್ದು ಜೈಲಿಗೆ ಹೋಗ್ತಿನಿ: ಕೇಜ್ರಿವಾಲ್‌
ನವದೆಹಲಿ: ನನ್ನ ದೇಹದೊಳಗೆ ಗಂಭಿರ ಖಾಯಿಲೆಗಳ ಲಕ್ಷಣಗಳಿವೆ. ಆದರೂ ನಾಡಿದ್ದು  ಜೂನ್‌ 2ರಂದು ಜೈಲಿಗೆ ಹೋಗಿ ಶರಣಾಗ್ತಿನಿ. ದೇಶದ ಸರ್ವಾಧಿಕಾರಿಗೆ ಬುದ್ಧಿ ಕಲಿಸುವುದಕ್ಕಾಗಿ ನಾನು ಮತ್ತೆ ಜೈಲಿಗೆ ಹೋಗಲಿದ್ದೇನೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ‘ನನ್ನನ್ನು ಎಷ್ಟು ದಿನ ಜೈಲಿನಲ್ಲಿ ಇರಿಸಲಾಗುತ್ತದೆ ಎಂದು ನನಗೆ ತಿಳಿದಿಲ್ಲ. ನಾಡಿದ್ದು ತಿಹಾರ್ ಜೈಲಿನಲ್ಲಿ ಪೊಲೀಸರ ಮುಂದೆ ಶರಣಾಗುತ್ತೇನೆ ಎಂದು ಶುಕ್ರವಾರ ಹೇಳಿದ್ದಾರೆ.

ಮೇ 10 ರಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ಕೇಜ್ರಿವಾಲ್ ಹೊರಗಿದ್ದರು. ಅವರ ದೇಹವು “ಗಂಭೀರ ಕಾಯಿಲೆ”ಯ ಕೆಲವು ಲಕ್ಷಣಗಳನ್ನು ಹೊಂದಿರಬಹುದು ಎಂದು ವೈದ್ಯರು ತಿಳಿಸಿದ್ದರು.

ಚಿತ್ರಹಿಂಸೆಗೆ ತಲೆಬಾಗುವುದಿಲ್ಲ:  ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಅವರು ನನ್ನನ್ನು ಬಗ್ಗಿಸಲು ಮತ್ತು ನನ್ನ ಬಾಯಿ ಮುಚ್ಚಿಸಲು ಹಲವು ರೀತಿಯಲ್ಲಿ ಪ್ರಯತ್ನಿಸಿದರು. ಆದರೆ, ಯಶಸ್ವಿಯಾಗಲಿಲ್ಲ, ನಾನು ಜೈಲಿನಲ್ಲಿದ್ದಾಗ ಹಲವು ರೀತಿಯಲ್ಲಿ ಚಿತ್ರಹಿಂಸೆ ನೀಡಿದರು. ನನ್ನ ಔಷಧಿಗಳನ್ನು ನಿಲ್ಲಿಸಿದರು. ಆದರೂ ನಾನು ಸೋಲಲಿಲ್ಲ ಎಂದರು.

“ಜೈಲಿಗೆ ಹೋದಾಗ ನನ್ನ ತೂಕ 70 ಕೆ.ಜಿ. ಇವತ್ತು 64 ಕೆ.ಜಿ. ಇದೆ. ಜೈಲಿನಿಂದ ಬಿಡುಗಡೆಯಾದ ಮೇಲೂ ತೂಕ ಹೆಚ್ಚುತ್ತಿಲ್ಲ, ಇದು ದೇಹದಲ್ಲಿ ಯಾವುದೋ ಗಂಭೀರ ಕಾಯಿಲೆಯ ಲಕ್ಷಣವೂ ಆಗಿರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಅನೇಕ ಪರೀಕ್ಷೆಗಳನ್ನು ಮಾಡಬೇಕಾಗಿದೆ” ಎಂದು ಅವರು ಹೇಳಿದರು.

“ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ನನಗೆ 21 ದಿನಗಳ ಕಾಲಾವಕಾಶ ನೀಡಿತ್ತು. ನಾಡಿದ್ದು ದಿನ ನಾನು ತಿಹಾರ್ ಜೈಲಿಗೆ ಹಿಂತಿರುಗುತ್ತೇನೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಆದರೆ ನಾನು ತಲೆಬಾಗುವುದಿಲ್ಲ” ಎಂದು ಹೇಳಿದರು.

ಉಚಿತ ಯೋಜನೆಗಳ ಮುಂದುವರಿಕೆ: “ ಜನರಿಗಾಗಿ ಪ್ರಾರಂಭಿಸಲಾಗಿರುವ ಉಚಿತ ವಿದ್ಯುತ್, ಮೊಹಲ್ಲಾ ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಉಚಿತ ಔಷಧಿಗಳು, ಚಿಕಿತ್ಸೆ, 24 ಗಂಟೆಗಳ ವಿದ್ಯುತ್ ಮತ್ತು ಇತರ ಹಲವು ವಿಷಯಗಳು ಮುಂದುವರಿಯುತ್ತದೆ. ಹಿಂದಿರುಗಿದ ನಂತರ, ನಾವು ದೆಹಲಿಯ ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂಪಾಯಿಗಳನ್ನು ನೀಡಲು ಪ್ರಾರಂಭಿಸುತ್ತೇವೆ” ಎಂದು ಅವರು ಹೇಳಿದರು.

ನನ್ನ ತಾಯಿಗಾಗಿ ಪ್ರಾರ್ಥಿಸಿ:  ಅಸ್ವಸ್ಥರಾಗಿರುವ ತಮ್ಮ ತಾಯಿಗಾಗಿ ಪ್ರಾರ್ಥಿಸುವಂತೆ ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿದ್ದಾರೆ. “ನನ್ನ ಹೆತ್ತವರಿಗೆ ತುಂಬಾ ವಯಸ್ಸಾಗಿದೆ, ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ನಾನು ಜೈಲಿನಲ್ಲಿ ಅವಳ ಬಗ್ಗೆ ತುಂಬಾ ಚಿಂತೆ ಮಾಡುತ್ತೇನೆ.  ನನ್ನ ಹೆತ್ತವರನ್ನು ನೋಡಿಕೊಳ್ಳಿ ಮತ್ತು ಅವರಿಗಾಗಿ ಪ್ರಾರ್ಥಿಸಿ” ಎಂದು ಬೇಸರದಿಂದ ಹೇಳಿದರು.

ಅಬಕಾರಿ ನೀತಿ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಏಳು ದಿನಗಳ ವಿಸ್ತರಣೆಗೆ ಕೇಜ್ರಿವಾಲ್ ಅವರ ಮನವಿಯನ್ನು ಆಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಗತ್‌ ಸಿಂಗ್‌, ಅಂಬೇಡ್ಕರ್ ಫೋಟೊ ಜೊತೆ ಕೇಜ್ರಿವಾಲ್‌ ಫೋಟೊ: ಭಗತ್‌ ಸಿಂಗ್‌ ಮೊಮ್ಮಗ ಆಕ್ಷೇಪ
ಅರವಿಂದ್ ಕೇಜ್ರಿವಾಲ್ ಅವರನ್ನು ಶಹೀದ್-ಎ-ಆಜಮ್ ಜೊತೆ ಹೋಲಿಸಿದ್ದಕ್ಕೆ ಭಗತ್ ಸಿಂಗ್ ಮೊಮ್ಮಗ ಯುದ್ವಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ತನಗೆ ಮತ್ತು ಭಗತ್ ಸಿಂಗ್ ಪ್ರೇಮಿಗಳಿಗೆ ತುಂಬಾ ಬೇಸರವಾಯಿತು ಎಂದು ಅವರು ಹೇಳಿದ್ದಾರೆ.

ಮುಂದೆ ಈ ರೀತಿ ಮಾಡಬೇಡಿ ಎಂದು ಆಮ್ ಆದ್ಮಿ ಪಕ್ಷಕ್ಕೆ ಯುದ್ವಿಂದರ್ ಸಿಂಗ್ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಪತ್ರಿಕಾಗೋಷ್ಠಿಯಲ್ಲಿ, ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ನಡುವೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಚಿತ್ರ ಕಂಡುಬಂದಿದೆ.

ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕೇಜ್ರಿವಾಲ್ ಅವರ ಚಿತ್ರ ಇಬ್ಬರು ಮಹಾನ್ ವ್ಯಕ್ತಿಗಳ ನಡುವೆ ಕಾಣಿಸಿದ ನಂತರ ಈ ವಿವಾದ ಉಂಟಾಗಿದೆ. ಭಾರತೀಯ ಜನತಾ ಪಕ್ಷವು ಆಮ್ ಆದ್ಮಿ ಪಕ್ಷದ ವಿರುದ್ಧ ಹೋರಾಟವನ್ನು ಆರಂಭಿಸಿದೆ. ಇದು ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ. ಅದೇ ಸಮಯದಲ್ಲಿ, ಕೇಜ್ರಿವಾಲ್ ಅವರು ಭಗತ್ ಸಿಂಗ್ ಅವರಂತೆ ಸರ್ವಾಧಿಕಾರದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಅದೇ ಕಾರಣಕ್ಕೆ ಅವರು ಜೈಲಿಗೆ ಹೋಗಿದ್ದಾರೆ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷವು ತನ್ನನ್ನು ತಾನು ಸಮರ್ಥಿಸಿಕೊಂಡಿದೆ. ಇದೀಗ ಈ ಹೋಲಿಕೆಗೆ ಭಗತ್ ಸಿಂಗ್ ಮೊಮ್ಮಗ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸಂದೇಶದಲ್ಲಿ ಯುದ್ವಿಂದರ್ ಸಿಂಗ್, ‘ಇದನ್ನು ನೋಡಿ ತುಂಬಾ ಬೇಸರವಾಯಿತು. ಆಮ್ ಆದ್ಮಿ ಪಕ್ಷ ಈ ರೀತಿ ಮಾಡಬಾರದು. ಯಾವುದೇ ರಾಜಕಾರಣಿ ತನ್ನನ್ನು ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಜೊತೆ ಹೋಲಿಸಿಕೊಳ್ಳಬಾರದು. ನಿಮ್ಮ ವೈಯಕ್ತಿಕ ರಾಜಕೀಯವನ್ನು ನಿಮ್ಮದೇ ಆದ ರೀತಿಯಲ್ಲಿ ಮಾಡಿ, ಆದರೆ ಈ ಮಹಾನ್ ವ್ಯಕ್ತಿಗಳೊಂದಿಗೆ ಹೋಲಿಕೆ ಮಾಡಬೇಡಿ. ಅವರು ತೋರಿಸಿದ ಮಾರ್ಗಗಳನ್ನು ಅನುಸರಿಸಲು ನಾವು ಪ್ರಯತ್ನಿಸಬಹುದು. ನನಗೆ ಭಾರತದಾದ್ಯಂತ ಪ್ರತಿಕ್ರಿಯೆಗಳು ಬರುತ್ತಿವೆ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅವರ ಪ್ರೇಮಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಈ ಇಬ್ಬರು ಮಹಾನ್‌ ವ್ಯಕ್ತಿಗಳಿಗೆ ಹೋಲಿಸಿರುವುದು ತುಂಬಾ ಬೇಸರವಾಗಿದೆ ಎಂದಿದ್ದಾರೆ. ಭವಿಷ್ಯದಲ್ಲಿ ಆಮ್ ಆದ್ಮಿ ಪಕ್ಷ ಇದನ್ನು ತಪ್ಪಿಸಬೇಕುʼ ಎಂದು ಅವರು ತಮ್ಮ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಕಾನೂನು ಪಾಲನೆ’ ಕುರಿತು ಭಾರತ ಯಾವುದೇ ದೇಶದಿಂದ ಪಾಠ ಕಲಿಯುವ ಅಗತ್ಯವಿಲ್ಲ: ಉಪರಾಷ್ಟ್ರಪತಿ ಧನಕರ್
ಹೊಸದೆಹಲಿ, ಮಾರ್ಚ್ 29: ಭಾರತವು ಬಲಿಷ್ಠ ನ್ಯಾಯಾಂಗವನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅದನ್ನು ಯಾರಿಂದಲೂ ಅಥವಾ ಯಾವುದರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಉಪಾಧ್ಯಕ್ಷ ಜಗದೀಪ್ ಧನಕರ್ ಶುಕ್ರವಾರ ಹೇಳಿದ್ದಾರೆ.

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಅಮೆರಿಕದ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ, ಭಾರತದ ಪ್ರಜಾಪ್ರಭುತ್ವವನ್ನು ಅನನ್ಯ ಎಂದು ಬಣ್ಣಿಸಿದ ಉಪಾಧ್ಯಕ್ಷ ಧನಕರ್, ಭಾರತವು “ಕಾನೂನಿನ ಪಾಲನೆಯ ಬಗ್ಗೆ ಯಾರಿಂದಲೂ ಪಾಠಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನ (ಐಐಪಿಎ) ನವೀಕರಿಸಿದ ಕ್ಯಾಂಪಸ್‌ನ ಉದ್ಘಾಟನಾ ಸಮಾರಂಭದಲ್ಲಿ ಉಪಾಧ್ಯಕ್ಷರು ಈ ವಿಷಯ ತಿಳಿಸಿದರು.

ಇಲ್ಲಿ ಐಐಪಿಎಯ 70ನೇ ಸಂಸ್ಥಾಪಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಧನಕರ್, ಇಂದು ದೇಶದಲ್ಲಿ “ಕಾನೂನಿನ ಮುಂದೆ ಸಮಾನತೆ ಹೊಸ ರೂಢಿಯಾಗಿದೆ” ಮತ್ತು ತಮ್ಮನ್ನು ತಾವು ಕಾನೂನಿಗೆ ಹೊರತಾದವರು ಎಂದು ಪರಿಗಣಿಸುವವರನ್ನು ಕಾನೂನು ಹೊಣೆಗಾರರನ್ನಾಗಿ ಮಾಡುತ್ತಿದೆ ಎಂದು ಹೇಳಿದರು.

“ಆದರೆ ಇಂದು ಏನಾಗುತ್ತಿದೆ? ಕಾನೂನು ತನ್ನ ದಾರಿಯನ್ನು ಹಿಡಿದ ತಕ್ಷಣ, ಅವರು ಬೀದಿಗೆ ಬರುತ್ತಾರೆ, ಗಟ್ಟಿಯಾಗಿ ವಾದಿಸುತ್ತಾರೆ, ಮಾನವ ಹಕ್ಕುಗಳ ಉಲ್ಲಂಘನೆಯ ಕೆಟ್ಟ ಸ್ವರೂಪದ ಅಪರಾಧಗಳನ್ನು ಮರೆಮಾಡುತ್ತಾರೆ.”

ಭಾರತೀಯ ನ್ಯಾಯಾಂಗವು ಬಲಿಷ್ಠವಾಗಿದೆ, ಜನಪರ ಮತ್ತು ಸ್ವತಂತ್ರವಾಗಿದೆ ಎಂದು ಬಣ್ಣಿಸಿದ ಅವರು, “ಕಾನೂನಿನ ಆಡಳಿತವು ತನ್ನ ಹಾದಿಯನ್ನು ಹಿಡಿದಾಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಸಂಸ್ಥೆ ಬೀದಿಗಿಳಿಯುವುದು ಎಷ್ಟರಮಟ್ಟಿಗೆ ಸರಿ?”

ಈ ವಿಷಯದ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ಕರೆ ನೀಡಿದ ಧನಕರ್, “ಕಾನೂನು ಉಲ್ಲಂಘನೆಯಲ್ಲಿ ಭಾಗಿಯಾಗಿರುವರು ವಿಕ್ಟಿಮ್‌ ಕಾರ್ಡ್‌ ಪ್ಲೇ ಮಾಡವುದು ಎಷ್ಟು ಸರಿ?” ಎಂದು ಕೇಳಿದರು.

ಕೇಜ್ರಿವಾಲ್ ಬಂಧನ ಖಂಡಿಸಿ ಪ್ರತಿಭಟನೆ: ಅತಿಶಿ, ಸೌರಭ್ ಸೇರಿ ಹಲವರು ಪೊಲೀಸ್‌ ವಶಕ್ಕೆ
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷವು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ದೆಹಲಿಯ ಎಎಪಿ ಮುಖಂಡರು ಮತ್ತು ಬೆಂಬಲಿಗರು ಆಪ್ ಮತ್ತು ಬಿಜೆಪಿ ಪ್ರಧಾನ ಕಛೇರಿ ಬಳಿಯಿರುವ ಐಟಿಒ ಬಳಿ  ಬೆಳಗ್ಗೆಯಿಂದಲೇ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ, ಈ ಪ್ರದೇಶದಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ 144 ಸೆಕ್ಷನ್ ಕರ್ಪ್ಯೂ ಜಾರಿ ಮಾಡಲಾಗಿದೆ. ಪ್ರತಿಭಟನಾ ನಿರತ ಸಚಿವರಾದ ಸೌರಭ್‌ ಭಾರದ್ವಾಜ್‌, ಅತಿಶಿ ಸೇರಿದಂತೆ ಹಲವು ಆಪ್‌ ನಾಯಕರನ್ನು ವಶಕ್ಕೆ ಪಡೆಯಲಾಗಿದೆ.

ಎಎಪಿ ಬೆಂಬಲಿಗರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಪಕ್ಷಗಳ ಪ್ರಧಾನ ಕಚೇರಿ ಇರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಸಂಚಾರಕ್ಕೆ ತಡೆ ನೀಡಿದ್ದಾರೆ.

ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದ ಕೇಜ್ರಿವಾಲ್‌:  ನಾಟಕೀಯ ಬೆಳವಣಿಗೆಯೊಂದರಲ್ಲಿ ತಮ್ಮ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಿಂಪಡೆದಿದ್ದಾರೆ.

ಕಳೆದ ವಾರ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಆರ್‌ ಎಸ್ ನಾಯಕಿ ಕೆ.ಕವಿತಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ವಿಶೇಷ ಪೀಠವು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ

ಕೇಜ್ರಿವಾಲ್ ಅವರು ಕೆಳ ಹಂತದ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಾಮೀನು ಸೇರಿದಂತೆ ಯಾವುದೇ ಪರಿಹಾರಕ್ಕೆ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಕೆ.ಕವಿತಾ ಅವರಿಗೆ ವಿಶೇಷ ಪೀಠವು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನನ್ನ ವಿರುದ್ಧ ಬಲವಂತದ ಕ್ರಮ ಬೇಡ: ಇ.ಡಿ ವಿರುದ್ದ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೇಜ್ರಿವಾಲ್
ನವದೆಹಲಿ:  ಇಡಿ (ಜಾರಿ ನಿರ್ದೇಶನಾಲಯ) ನನ್ನ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ನನ್ನನ್ನು ಬಂಧಿಸಲೂಬಹುದು ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ದೆಹಲಿ ಹೈಕೋರ್ಟ್‌ ನಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ತನ್ನ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದು ಬೇಡವೆಂದು  ವಿನಂತಿಸಿ ಕೇಜ್ರಿವಾಲ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ʼಎಕ್ಸ್‌ʼ ಮಾಹಿತಿ ನೀಡಿದೆ.

ಸುರೇಶ್ ಕುಮಾರ್‌ ಕೈಟ್ ಅವರಿರುವ ವಿಭಾಗೀಯ ಪೀಠ ಇಂದು ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಇದುವರೆಗೂ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಅರವಿಂದ ಕೇಜ್ರಿವಾಲ್ ಅವರಿಗೆ 9 ಬಾರಿ ನೋಟಿಸ್‌ ಜಾರಿ ಮಾಡಿದೆ. ತಮಗೆ ಜಾರಿ ನಿರ್ದೇಶನಾಲಯ ನೀಡಿದ ಸರಣಿ ನೋಟಿಸ್ ಪ್ರಶ್ನಿಸಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಬಗ್ಗೆ ವಿವರಣೆ ಬಯಸಿ ಕೋರ್ಟ್ ಇ.ಡಿಗೆ ನೋಟಿಸ್‌ ಜಾರಿ ಮಾಡಿದೆ.

ಬಂಧನದ ಆತಂಕ: ಕೇಜ್ರಿವಾಲ್ ಅವರನ್ನು ಇ.ಡಿ ಬಂಧಿಸಲು ತಯಾರಿ ಮಾಡಿಕೊಂಡಿದೆ. ಈ ಬಂಧನವಾಗದಂತೆ ರಕ್ಷಣೆ ನೀಡಿದರೆ ವಿಚಾರಣೆಗೆ ಹಾಜರಾಗಲು ಸಿದ್ದರಿದ್ದಾರೆ ಎಂದು ಕೇಜ್ರಿವಾಲ್‌ ಪರ ವಕೀಲರು ಬುಧವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

ಸ್ನೇಹಿತನ ಪುತ್ರಿಯ ಮೇಲೆ ನಿರಂತರ ರೇಪ್ ಆರೋಪ: ಸರ್ಕಾರಿ ಉದ್ಯೋಗಿಯನ್ನು ವಜಾಗೊಳಿಸಿದ ದೆಹಲಿ ಸಿ.ಎಂ ಕೇಜ್ರಿವಾಲ್
ಹೊಸದಿಲ್ಲಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನಿರ್ದೇಶಕರನ್ನು ಅಮಾನತು ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದರು.

ದೆಹಲಿ ಪೊಲೀಸರು ಉಪನಿರ್ದೇಶಕನ ಮನೆಗೆ ಬಂದಿದ್ದು, ಉಪನಿರ್ದೇಶಕ ಶೀಘ್ರದಲ್ಲೇ ಬಂಧನಕ್ಕೆ ಸಾಧ್ಯತೆಯಿದೆ. ಉಪ ನಿರ್ದೇಶಕನ ಮೇಲೆ ತಮ್ಮ ಸ್ನೇಹಿತನ ಮಗಳ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರವೆಸಗಿರುವ ಆರೋಪವಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತನ ಮಗಳ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿ ಆಕೆ ಗರ್ಭಧರಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದರು.

ಸಂತ್ರಸ್ತ ಬಾಲಕಿ ತನ್ನ ತಂದೆಯ ಮರಣದ ನಂತರ ಅಕ್ಟೋಬರ್ 1, 2020ರಿಂದ ಉಪ ನಿರ್ದೇಶಕರ ಮನೆಯಲ್ಲಿ ವಾಸಿಸುತ್ತಿದ್ದು, ಪೊಲೀಸರ ಪ್ರಕಾರ, ಆರೋಪಿ ಅಧಿಕಾರಿಯು ನವೆಂಬರ್ 2020 ಮತ್ತು ಜನವರಿ 2021ರ ನಡುವೆ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದು, ದೂರಿನಲ್ಲಿ ಅಧಿಕಾರಿಯ ಪತ್ನಿಯೂ ಗರ್ಭಪಾತಕ್ಕೆ ಔಷಧ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಅನಕ್ಷರಸ್ಥರಿಗೆ ಮತ ನೀಡಬೇಡಿ ಎಂದ ಉಪನ್ಯಾಸಕನಿಗೆ ಬೆಂಬಲ | ಅನಕ್ಷರಸ್ಥರು ಪ್ರತಿನಿಧಿಗಳಾದರೆ ದೇಶದ ಪ್ರಗತಿ ಅಸಾಧ್ಯ – ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ: ಮುಂಬರುವ ಚುನಾವಣೆಯಲ್ಲಿ ವಿದ್ಯಾವಂತರಿಗೆ ಮತದಾನ ಮಾಡುವಂತೆ ಅನ್‌ ಅಕಾಡೆಮಿ ಎನ್ನುವ ಸಂಸ್ಥೆಯ ಉಪನ್ಯಾಸಕರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್‌ ಮೂಲಕ ಕರೆ ಕೊಟ್ಟಿದ್ದರು.

ಉಪನ್ಯಾಸಕರು ಯಾವುದೇ ಹೆಸರನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಿರಲಿಲ್ಲವಾದರೂ, ಮೋದಿಯವರ ಅಭಿಮಾನಿಗಳು ಅವರ ವಿರುದ್ಧ ಕೆರಳಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌ ನಡೆಸಿದ್ದರು.

ಇದರೊಂದಿಗೆ, ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯಲ್ಲ ಎಂದು ಸಂಘಟನೆಯು ಅವರ ಮೇಲೆ ದಾಳಿ ಮಾಡಿತ್ತು.

ಈಗ ಇದಕ್ಕೆ ಅರವಿಂದ್ ಕೇಜ್ರಿವಾಲ್ ಕೂಡ ಪ್ರತಿಕ್ರಿಯಿಸಿದ್ದು, ಉಪನ್ಯಾಸಕರು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.

ಕರಣ್ ಸಾಂಗ್ವಾನ್ ಅನ್‌ ಅಕಾಡೆಮಿಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಆ ಚಾನೆಲ್ ಮೂಲಕ ಅವರು ತಮ್ಮ ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿದ್ಯಾವಂತ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕುವಂತೆ ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಕಂಪನಿಯ ಸಹ-ಮಾಲೀಕ ರೋಮನ್ ಸೈನಿ ಅವರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ವೀಟ್ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಘೋಷಿಸಿದರು.

ಇದಕ್ಕೆ ಸಂಗ್ವಾನ್ ಪ್ರತಿಕ್ರಿಯಿಸಿ, “ಕಳೆದ ಕೆಲವು ದಿನಗಳಿಂದ ನನಗೆ ಸಂಬಂಧಿಸಿದ ವಿಡಿಯೋವೊಂದು ವಿವಾದಕ್ಕೀಡಾಗಿದೆ. ನನ್ನ ಜೊತೆಗೆ ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನನ್ನ ವಿದ್ಯಾರ್ಥಿಗಳು ಕೂಡ ಆ ವಿಡಿಯೋದಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಇದೇ ತಿಂಗಳ 19ರಂದು ವಿವರಣೆ ನೀಡಲಿದ್ದೇನೆ” ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

क्या पढ़े लिखे लोगों को वोट देने की अपील करना अपराध है? यदि कोई अनपढ़ है, व्यक्तिगत तौर पर मैं उसका सम्मान करता हूँ। लेकिन जनप्रतिनिधि अनपढ़ नहीं हो सकते। ये साइंस और टेक्नोलॉजी का ज़माना है। 21वीं सदी के आधुनिक भारत का निर्माण अनपढ़ जनप्रतिनिधि कभी नहीं कर सकते। https://t.co/YPX4OCoRoZ
— Arvind Kejriwal (@ArvindKejriwal) August 17, 2023

ಕಂಪನಿಯ ಸಹ-ಮಾಲೀಕರಾದ ರೋಮಾ ಸೈನಿ ಅವರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹೀಗೆ ಬರೆದಿದ್ದಾರೆ: “ನಮ್ಮ ಕಂಪನಿಯು ತುಂಬಾ ಕಟ್ಟುನಿಟ್ಟಾದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ. ಇವಿದ್ಯಾರ್ಥಿಗಳಿಗೆ ವಸ್ತುನಿಷ್ಠ ಜ್ಞಾನವನ್ನು ನೀಡುವುದು ನಮ್ಮ ಕರ್ತವ್ಯ. ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವ ವೇದಿಕೆಯಲ್ಲ. ಅವು ವಿದ್ಯಾರ್ಥಿಗಳ ಮೇಲೆ ತಪ್ಪು ಪರಿಣಾಮ ಬೀರುತ್ತವೆ. ಸಂಘಟನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕರಮ್ ಸಾಂಗ್ವಾನ್ ಅವರನ್ನು ವಜಾಗೊಳಿಸಲಾಗಿದೆ.”

ಈ ಘಟನೆ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಪ್ರತಿಕ್ರಿಯಿಸಿ, “ವಿದ್ಯಾವಂತರಿಗೆ ಮತ ಕೇಳುವುದು ತಪ್ಪೇ? ಅನಕ್ಷರಸ್ಥರನ್ನು ನಾನು ವೈಯಕ್ತಿಕವಾಗಿ ಗೌರವಿಸುತ್ತೇನೆ. ಆದರೆ ಸಾರ್ವಜನಿಕ ಪ್ರತಿನಿಧಿಗಳು ಅನಕ್ಷರಸ್ಥರಾಗಿರಬಾರದು. ಇದು ವಿಜ್ಞಾನ ಮತ್ತು ತಂತ್ರಜ್ಞಾನವು ಬೆಳೆಯುತ್ತಿರುವ ಯುಗವಾಗಿದೆ. ಅವಿದ್ಯಾವಂತರಿಂದ ಆಧುನಿಕ ಭಾರತ ನಿರ್ಮಾಣ ಸಾಧ್ಯವಿಲ್ಲ” ಎಂದು ಅವರು ಉಪನ್ಯಾಸಕರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.