kerala health minister – Peepal Media

ಪ್ರತಿಷ್ಠಿತ ಮ್ಯಾಗ್ಸೆಸೆ‌ ಪ್ರಶಸ್ತಿಯನ್ನು ತಿರಸ್ಕರಿದ ಶೈಲಜಾ ಟೀಚರ್
ಮ್ಯಾಗ್ಸೆಸೆ ಸಮಿತಿಯು ಅವರ ಹೆಸರನ್ನು ಅಂತಿಮಗೊಳಿಸಿ ಇ ಮೇಲ್‌ ಮೂಲಕ ಅವರಿಗೆ ತಿಳಿಸಿತ್ತು. ಆದರೆ ಪಕ್ಷದ ತೀರ್ಮಾನಕ್ಕೆ ಕಟ್ಟುಬಿದ್ದು ಶೈಲಜಾ ಟೀಚರ್‌ ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ತಿರುವನಂತಪುರಂ: ಅಚ್ಚರಿ ಎನಿಸುವ ರೀತಿಯಲ್ಲಿ ಶೈಲಜಾ ಟೀಚರ್‌ ಎಂದೇ ಪ್ರಸಿದ್ಧರಾಗಿರುವ ಕೇರಳದ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜ ಅವರು ತಮಗೆ ಒಲಿದು ಬಂದಿದ್ದ ಪ್ರತಿಷ್ಠಿತ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ತಮ್ಮ ಸಿಪಿಐಎಂ ಪಕ್ಷದ ನಾಯಕರೊಂದಿಗೆ ಮಾತಾನಾಡಿಕೊಂಡು ಈ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನನಗೆ ಮ್ಯಾಗ್ಸೆಸೆ ಪ್ರಶಸ್ತಿ ಸಮಿತಿಯಿಂದ ಪತ್ರ ಬಂದಿತ್ತು. ಸಿಪಿಐ(ಎಂ) ನ ಸದಸ್ಯಳಾಗಿ ನಾನು ಪತ್ರದ ಕುರಿತು ನನ್ನ ಪಕ್ಷದ‌ಲ್ಲಿ ಚರ್ಚಿಸಿದೆ. ನಂತರ ನನಗೆ ಬಂದಿರುವ ಈ  ಮ್ಯಾಗೆಸ್ಸೆ ಪ್ರಶಸ್ತಿಯನ್ನು  ಸ್ವೀಕಾರ ಮಾಡಬಾರದು ಎಂದು  ತೀರ್ಮಾನಕ್ಕೆ ಬಂದಿದ್ದೇವೆ.” ಎಂದು ತಿಳಿಸಿದ್ದಾರೆ.

ಕೇರಳದ ಮಾಜಿ ಆರೋಗ್ಯ ಮಂತ್ರಿ ಕೆ ಕೆ ಶೈಲಜಾ ಅಕಾ ಶೈಲಜಾ ಟೀಚರ್‌ ಕೊವಿಡ್-‌19 ದಾಳಿಯ ಸಂದರ್ಭದಲ್ಲಿ ಕೇರಳ ರಾಜ್ಯದ ಆರೋಗ್ಯ ಸಚಿವರಾಗಿ ನಾಯಕತ್ವವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು. ಅದಕ್ಕಿಂತಲೂ ಮುಂಚೆ ನಿಫಾ ವೈರಸ್‌ ದಾಳಿಯಾದಾಗಲೂ ಕೊವಿಡ್‌ ಸಾಂಕ್ರಾಮಿಕ ದಾಳಿಯಾದಾಗಲೂ ಅವರ ನಾಯಕತ್ವದಲ್ಲಿ ಕೇರಳ ಸರ್ಕಾರ ಬಹಳ ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಿದ ರೀತಿ ಜನಮನ್ನಣೆ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ಮ್ಯಾಗ್ಸೆಸೆ ಸಮಿತಿಯು ಅವರ ಹೆಸರನ್ನು ಅಂತಿಮಗೊಳಿಸಿ ಇಮೇಲ್‌ ಮೂಲಕ ಅವರಿಗೆ ತಿಳಿಸಿತ್ತು. ಆದರೆ ಪಕ್ಷದ ತೀರ್ಮಾನಕ್ಕೆ ಕಟ್ಟುಬಿದ್ದು ಶೈಲಜಾ ಟೀಚರ್‌ ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಏಷಿಯಾ ಖಂಡದ ನೊಬೆಲ್‌ ಪ್ರಶಸ್ತಿ ಎಂದೇ ಕರೆಯಲಾಗುವ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಫಿಲಿಪ್ಪೀನ್ಸ್‌ ಸರ್ಕಾರದ ಸಹಯೋಗದಲ್ಲಿ ಅಮೆರಿಕದ ರಾಕಫೆಲ್ಲರ್‌ ಫೌಂಡೇಶನ್‌ 1957ರಲ್ಲಿ ಸ್ಥಾಪಿಸಿತ್ತು. ಮುಖ್ಯವಾಗಿ ಸರ್ಕಾರದ ಸೇವೆ, ಸಾರ್ವಜನಿಕ ಸೇವೆ, ಸಮುದಾಯ ನಾಯಕತ್ವ, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸೃಜನಶೀಲ ಸಂವಹನ ಕಲೆ ಹಾಗೂ ಶಾಂತಿ ಮತ್ತು ಅಂತರರಾಷ್ಟ್ರೀಯ ಗ್ರಹಿಕೆ ವಿಭಾಗಗಳಲ್ಲಿ ಉತ್ತಮ ಸಾಧನೆಗೈದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇತ್ತೀಚೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತೀಯರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿರುವ ಟಿ ಎಂ ಕೃಷ್ಣ, ಮಲ ಹೊರುವ ಪದ್ಧತಿ ವಿರುದ್ಧ ಹೋರಾಟಕ್ಕೆ ತಮ್ಮ ಜೀವನವನ್ನೇ ಸವೆಸಿರುವ ಸಫಾಯಿ ಕರ್ಮಾಚಾರಿ ಚಳವಳಿಗಾರ  ಬೆಜವಾಡಾ  ವಿಲ್ಸನ್‌ ಪ್ರಮುಖರಾಗಿದ್ದಾರೆ.

ಮ್ಯಾಗ್ಸೆಸೆ ಪ್ರಶಸ್ತಿ ಹುಟ್ಟು ಹಾಕಿದ್ದ ರಾಮೋನ್ ಮ್ಯಾಗ್ಸೆಸೆ  ಫಿಲಿಪ್ಪೀನ್ಸ್‌ ಸರ್ಕಾರದ ಅಧ್ಯಕ್ಷರಾಗಿ 1955ರ ಸುಮಾರಿಗೆ ಫಿಲಿಪ್ಪೀನ್ಸ್‌ ನಲ್ಲಿ ನಡೆಯುತ್ತಿದ್ದ ಕಮ್ಯುನಿಷ್ಟ್‌ ಚಳವಳಿಯನ್ನು ಹತ್ತಿಕ್ಕಿದ ಹಿನ್ನೆಲೆಯಲ್ಲಿ ಅವರ ಹೆಸರಿನ ಪ್ರಶಸ್ತಿಯನ್ನು ಕಮ್ಯುನಿಷ್ಟ್‌ ಪಕ್ಷದ ಸದಸ್ಯೆಯೊಬ್ಬರು ಸ್ವೀಕರಿಸುವುದು ಪಕ್ಷಕ್ಕೆ ಕೆಟ್ಟ ಹೆಸರು ತರಬುಹುದು ಎಂಬ ಕಾರಣಕ್ಕೆ ಸಿಪಿಐಎಂ ಈ ರೀತಿ ತೀರ್ಮಾನ ಮಾಡಿರುವ ಸಾದ್ಯತೆ ಇದೆ.