kerala HIGH COURT – Peepal Media

ಟ್ರಾನ್ಸ್ ದಂಪತಿಗಳ ಮಗುವಿನ ಜನನ ಪ್ರಮಾಣಪತ್ರದಲ್ಲಿ ಲಿಂಗ-ತಟಸ್ಥ ಪದ ‘ಪೋಷಕರು’ ಎಂದು ಬಳಸಿ: ಕೇರಳ ಹೈಕೋರ್ಟ್
ತಮ್ಮ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆ ಮತ್ತು ತಾಯಿಯ ಬದಲಿಗೆ ಲಿಂಗ-ತಟಸ್ಥ ಪದ “ಪೋಷಕರು” ಎಂದು ಬಳಸಲು ಟ್ರಾನ್ಸ್ಜೆಂಡರ್ ದಂಪತಿಗಳು ಕೋರಿದ ಮನವಿಯನ್ನು ಕೇರಳ ಹೈಕೋರ್ಟ್  ಸಮ್ಮತಿಸಿದೆ.

ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಎಎ ಅವರು, ಟ್ರಾನ್ಸ್ ಪುರುಷ ಜಹಾದ್ ಮತ್ತು ಟ್ರಾನ್ಸ್ ಮಹಿಳೆ ಜಿಯಾ ಪಾವಲ್ ಇಬ್ಬರನ್ನೂ ಅವರ ಲಿಂಗವನ್ನು ಉಲ್ಲೇಖಿಸದೆ “ಪೋಷಕರು” ಎಂದು ಪಟ್ಟಿ ಮಾಡುವ ಪರಿಷ್ಕೃತ ಪ್ರಮಾಣಪತ್ರವನ್ನು ನೀಡಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

“ತಂದೆ ಮತ್ತು ತಾಯಿಯ ಹೆಸರಿನ ಕಾಲಮ್‌ಗಳನ್ನು ತೆಗೆದುಹಾಕಿ ಮತ್ತು ಅರ್ಜಿದಾರರ ಲಿಂಗವನ್ನು ಉಲ್ಲೇಖಿಸದೆ ಪೋಷಕರೆಂದು ಅವರ ಹೆಸರುಗಳನ್ನು ಸೇರಿಸುವ ಮೂಲಕ ಮಾರ್ಪಾಡುಗಳೊಂದಿಗೆ ಜನನ ಪ್ರಮಾಣಪತ್ರಗಳನ್ನು ನೀಡುವಂತೆ ಐದನೇ ಪ್ರತಿವಾದಿಯನ್ನು ನಿರ್ದೇಶಿಸುವ ಈ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ” ಎಂದು ಬಾರ್ ಮತ್ತು ಬೆಂಚ್ ಆದೇಶವನ್ನು ಉಲ್ಲೇಖಿಸಿ ವರದಿ ಮಾಡಿದೆ.

ರಾಜ್ಯದ ಮೊದಲ ಟ್ರಾನ್ಸ್ಜೆಂಡರ್ ಪೋಷಕರೆಂದು ಗುರುತಿಸಲ್ಪಟ್ಟ ಈ ದಂಪತಿಗಳು, ಈ ಬದಲಾವಣೆಯನ್ನು ಕೋರಿ 2023 ರಲ್ಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು.

ಇದಕ್ಕೂ ಮೊದಲು, ಕೋಯಿಕ್ಕೋಡ್ ಕಾರ್ಪೊರೇಷನ್ ಮಗುವಿನ ಜನನ ಪ್ರಮಾಣಪತ್ರವನ್ನು ನೀಡುವಾಗ ಜಹಾದ್ ಅವರನ್ನು ‘ತಾಯಿ (ಟ್ರಾನ್ಸ್ಜೆಂಡರ್)’ ಮತ್ತು ಜಿಯಾ ಅವರನ್ನು ‘ತಂದೆ (ಟ್ರಾನ್ಸ್ಜೆಂಡರ್)’ ಎಂದು ಪಟ್ಟಿ ಮಾಡಿತ್ತು. ದಂಪತಿಗಳು ಲಿಂಗ-ನಿರ್ದಿಷ್ಟ ಪದಗಳನ್ನು ಬಳಸಬೇಕೆಂದು ಒತ್ತಾಯಿಸಿದರು ಮತ್ತು ತಮ್ಮ ಮಗುವನ್ನು ಗೊಂದಲ ಅಥವಾ ಯಾವುದೇ ತಾರತಮ್ಯದಿಂದ ರಕ್ಷಿಸಲು ಅವರನ್ನು ‘ಪೋಷಕರು’ ಎಂದು ಮಾತ್ರ ಪಟ್ಟಿ ಮಾಡಬೇಕೆಂದು ವಿನಂತಿಸಿದರು.

ಅಧಿಕಾರಿಗಳು ಕಿವಿಗೊಡದ ಕಾರಣ, ದಂಪತಿಗಳು ಕೇರಳ ಹೈಕೋರ್ಟ್‌ನ ಮೊರೆ ಹೋಗಿ, ಪ್ರಮಾಣಪತ್ರವನ್ನು ತಿದ್ದುಪಡಿ ಮಾಡಲು ನಿರಾಕರಿಸುವುದು ತಮ್ಮ ಮತ್ತು ತಮ್ಮ ಮಗುವಿನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.

“ಗಂಡು ಮಗುವಿಗೆ ಜನ್ಮ ನೀಡುವುದರಲ್ಲಿ ವೈಜ್ಞಾನಿಕವಾಗಿ ಕೆಲವು ವಿರೋಧಾಭಾಸಗಳಿರುವುದರಿಂದ, ಮೂರನೇ ಅರ್ಜಿದಾರರು (ಮಗು) ತನ್ನ ಜೀವಿತಾವಧಿಯಲ್ಲಿ ಶಾಲಾ ಪ್ರವೇಶ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಮತ್ತು ಉದ್ಯೋಗ ಮತ್ತು ಸಂಬಂಧಿತ ವಿಷಯಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಎದುರಿಸಬೇಕಾದ ಮುಜುಗರವನ್ನು ತಪ್ಪಿಸಲು ತಂದೆ ಮತ್ತು ತಾಯಿಯ ಹೆಸರನ್ನು ಬಳಸದೆ ‘ಪೋಷಕ’ ಎಂದು ಬರೆಯುವಂತೆ ಅರ್ಜಿದಾರರು ಅಧಿಕಾರಿಗಳನ್ನು ವಿನಂತಿಸಿದರು,” ಎಂದು ಪೋಷಕರು ವಾದಿಸಿದರು.

ಹಲವಾರು ದೇಶಗಳು ದಂಪತಿಗಳಿಗೆ, ವಿಶೇಷವಾಗಿ ಸಮಲಿಂಗ ದಂಪತಿಗಳಿಗೆ, ತಮ್ಮ ಮಗುವಿನ ಜನನ ಪ್ರಮಾಣಪತ್ರದಲ್ಲಿ ‘ತಾಯಿ’, ‘ತಂದೆ’ ಮತ್ತು ‘ಪೋಷಕರ’ ನಡುವೆ ತಮಗೆ ಬೇಕಾದ ಶೀರ್ಷಿಕೆಯನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತವೆ ಎಂದು ದಂಪತಿಗಳು ವಾದಿಸಿದರು.

ಹೊಸ ಪ್ರಮಾಣಪತ್ರದ ನಿರಾಕರಣೆಯು, ಮಹತ್ವದ NALSA ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಪೋಷಕರು ವಾದಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ vs. ಭಾರತ ಒಕ್ಕೂಟ (2014) ಎಂದು ಅಧಿಕೃತವಾಗಿ ಹೆಸರಿಸಲಾದ NALSA ಪ್ರಕರಣವು, “ಮೂರನೇ ಲಿಂಗ” ವನ್ನು ಕಾನೂನುಬದ್ಧವಾಗಿ ಗುರುತಿಸುವ ಮತ್ತು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ದೃಢಪಡಿಸುವ ಭಾರತದ ಸುಪ್ರೀಂ ಕೋರ್ಟ್‌ನ ಒಂದು ಮಹತ್ವದ ತೀರ್ಪು ಇದಾಗಿದೆ.

ದ್ವೇಷ ಭಾಷಣ: ಅಸಮರ್ಪಕ ಶಿಕ್ಷೆಯನ್ನು ಟೀಕಿಸಿ ಬಿಜೆಪಿ ನಾಯಕನ ಜಾಮೀನು ಅರ್ಜಿ ನಿರಾಕರಿಸಿದ ಕೇರಳ ಹೈಕೋರ್ಟ್
ದ್ವೇಷ ಭಾಷಣ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಪಿ.ಸಿ. ಜಾರ್ಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೇರಳ ಹೈಕೋರ್ಟ್ , ಭಾರತದ ದ್ವೇಷ ಭಾಷಣ ಕಾನೂನುಗಳಲ್ಲಿನ ಅಂತರವನ್ನು ಶುಕ್ರವಾರ ಎತ್ತಿ ತೋರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಜನವರಿ 5 ರಂದು ದೂರದರ್ಶನದ ಚರ್ಚೆಯ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಸೇರಿದಂತೆ ಕೋಮುವಾದಿ ಹೇಳಿಕೆಗಳನ್ನು ನೀಡಿದ ಸಂಭವಗಳನ್ನು ಉಲ್ಲೇಖಿಸಿ ಜಾರ್ಜ್ ಅವರ ಅರ್ಜಿಯನ್ನು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ತಿರಸ್ಕರಿಸಿದರು ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.‌

ಪುನರಾವರ್ತಿತ ಅಪರಾಧಗಳಿಗೆ ಕಾನೂನು ಕಠಿಣ ಶಿಕ್ಷೆಯನ್ನು ವಿಧಿಸುವುದಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಧೀಶರು, ಸಂಸತ್ತು ಮತ್ತು ಕಾನೂನು ಆಯೋಗವು ನಿಬಂಧನೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.

“ಇತ್ತೀಚಿನ ದಿನಗಳಲ್ಲಿ, ಧರ್ಮ, ಜಾತಿ ಇತ್ಯಾದಿಗಳನ್ನು ಆಧರಿಸಿ ಹೇಳಿಕೆಗಳನ್ನು ನೀಡುವ ಪ್ರವೃತ್ತಿ ಇದೆ. ಇವು ನಮ್ಮ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿವೆ. ಈ ಪ್ರವೃತ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು,” ಎಂದು ಲೈವ್ ಲಾ ಶುಕ್ರವಾರದ ಆದೇಶವನ್ನು ಉಲ್ಲೇಖಿಸಿದೆ.

ಪ್ರಸ್ತುತ ನಿಬಂಧನೆಗಳ ಪ್ರಕಾರ, ದ್ವೇಷ ಭಾಷಣದ ಅಪರಾಧಗಳಿಗೆ ಜೈಲು ಶಿಕ್ಷೆಯು ಐಚ್ಛಿಕವಾಗಿರುತ್ತದೆ, ಏಕೆಂದರೆ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸುವ ಅಥವಾ ದಂಡವನ್ನು ವಿಧಿಸುವ ವಿವೇಚನೆಯನ್ನು ಹೊಂದಿದೆ.

ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿಯಲ್ಲಿ, ದ್ವೇಷ ಭಾಷಣವನ್ನು “ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ” ಸೆಕ್ಷನ್ 196(1)(a) ಮತ್ತು “ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗೆ” ಸಂಬಂಧಿಸಿದ ಸೆಕ್ಷನ್ 299 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ.

ಎರಡೂ ವಿಭಾಗಗಳು ದ್ವೇಷ ಭಾಷಣ ಅಪರಾಧಗಳಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುತ್ತವೆ.

ಎರಡನೇ ಬಾರಿ ಅಪರಾಧಿಗಳಿಗೆ ಸಹ ಹೆಚ್ಚು ಕಠಿಣ ಶಿಕ್ಷೆ ವಿಧಿಸಲಾಗಿಲ್ಲ, ಇದು ಕಾನೂನು ಆಯೋಗ ಮತ್ತು ಸಂಸತ್ತು ಪರಿಶೀಲಿಸಬೇಕಾದ ಗಂಭೀರ ವಿಷಯವಾಗಿದೆ ಎಂದು ಕುಂಞಿಕೃಷ್ಣನ್ ಶುಕ್ರವಾರ ಹೇಳಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.

ನಂತರ ಅವರು ಆದೇಶದ ಪ್ರತಿಯನ್ನು ಕಾನೂನು ಆಯೋಗದ ಅಧ್ಯಕ್ಷರಿಗೆ ಕಳುಹಿಸುವಂತೆ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದರು.

ಜನವರಿ 5 ರಂದು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮುಸ್ಲಿಂ ಯೂತ್ ಲೀಗ್ ಮುನ್ಸಿಪಲ್ ಸಮಿತಿಯು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 196(1)(a) ಅಡಿಯಲ್ಲಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ, ಜೊತೆಗೆ ಕೇರಳ ಪೊಲೀಸ್ ಕಾಯ್ದೆಯ ಕಾನೂನುಬಾಹಿರ ಸಭೆ‌ ಸೇರುವಿಕೆಗಳನ್ನು ಎದುರಿಸುವ ಅಧಿಕಾರಗಳಿಗೆ ಸಂಬಂಧಿಸಿದ ಸೆಕ್ಷನ್ 120(o) ಅನ್ನು ದಾಖಲಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಇದಕ್ಕೂ ಮೊದಲು, ಬಿಜೆಪಿ ನಾಯಕನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೊಟ್ಟಾಯಂ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಮಯದಲ್ಲಿ, ಜಾರ್ಜ್ ಅವರಿಗೆ ಕೋಮು ಹೇಳಿಕೆಗಳನ್ನು ನೀಡುವ ಅಭ್ಯಾಸವಿದೆ ಎಂದು ಕುಂಞಿಕೃಷ್ಣನ್ ಹೇಳಿರುವುದನ್ನು ಲೈವ್ ಲಾ ವರದಿ ಮಾಡಿದೆ. ಬಿಜೆಪಿ ನಾಯಕ 2022 ರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡಿದ್ದರು, ನಂತರ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಆ ಸಮಯದಲ್ಲಿ ಜಾರ್ಜ್‌ಗೆ ಜಾಮೀನು ನೀಡುವಾಗ ಹೈಕೋರ್ಟ್ ಅಂತಹ ಹೇಳಿಕೆಗಳನ್ನು ನೀಡದಂತೆ ಷರತ್ತು ವಿಧಿಸಿತ್ತು, ಬಿಜೆಪಿ ನಾಯಕ ಷರತ್ತು ಉಲ್ಲಂಘಿಸಿದ್ದಾರೆ ಎಂದು ಕುನ್ಹಿಕೃಷ್ಣನ್ ಹೇಳಿದರು.

ಜಾರ್ಜ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ. ವಿಜಯಭಾನು, ಬಿಜೆಪಿ ನಾಯಕರು ಜನವರಿ 5 ರಂದು ಯಾವುದೇ ಅಪರಾಧ ಮಾಡುವ ಉದ್ದೇಶವಿಲ್ಲದೆ ಆ ಕ್ಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ನಂತರ ಜಾರ್ಜ್ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದಾರೆ ಎಂದು ಅವರು ಹೇಳಿದರು.

ಆದರೆ, ದೂರುದಾರರ ಪರ ವಕೀಲ ಎಸ್ ರಾಜೀವ್, ನ್ಯಾಯಾಲಯದಿಂದ ಎಚ್ಚರಿಕೆ ಪಡೆದಿದ್ದರೂ ಜಾರ್ಜ್ ಪದೇ ಪದೇ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಹೇಳಿದರು.

ಗುತ್ತಿಗೆ ಪ್ರಕರಣದಲ್ಲಿ ಪೊಲೀಸ್ ದೂರು: ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಸನ್ನಿ ಲಿಯೋನ್
ಕೊಚ್ಚಿ: ನಾಲ್ಕು ವರ್ಷಗಳ ಹಿಂದೆ ಕೋಝಿಕ್ಕೋಡ್‌ನಲ್ಲಿ ವೇದಿಕೆ ಪ್ರದರ್ಶನಕ್ಕಾಗಿ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ತನ್ನ ವಿರುದ್ಧ ರಾಜ್ಯ ಪೊಲೀಸ್ ಅಪರಾಧ ವಿಭಾಗವು ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ತನ್ನ ಅರ್ಜಿಯಲ್ಲಿ, ನಟಿ ತನ್ನ, ತನ್ನ ಪತಿ ಮತ್ತು ಅವರ ಉದ್ಯೋಗಿಯ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಹಾಗೆಯೇ ಆರೋಪಗಳು ಆಪಾದಿತ ಅಪರಾಧಗಳ ಅಂಶಗಳನ್ನು ಒಳಗೊಂಡಿರುವುದಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಅರ್ಜಿಯಲ್ಲಿ ಇಲ್ಲಿಯವರೆಗೆ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ನಟಿ ಹೇಳಿದ್ದಾರೆ. ನೀಡಿರುವ ದೂರಿನಲ್ಲಿ ಅವರ ವಿರುದ್ಧ ಯಾವುದೇ ಸ್ಪಷ್ಟ ಪುರಾವೆಗಳು ಕಂಡುಬರದಿದ್ದರೂ ಕೂಡ, ಅವರನ್ನು ದೀರ್ಘಕಾಲದ ವಿಚಾರಣೆಗೆ ಕರೆದಿರುವುದು ಬಹಳಷ್ಟು ನೂವಿಗೆ ಕಾರಣವಾಗಿದೆ ಎಂದು ಸನ್ನಿಲಿಯೋನ್‌ ಹೇಳಿಕೊಂಡಿದ್ದಾರೆ.

ಮಾಹಿತಿ ಪ್ರಕಾರ, ಎರ್ನಾಕುಲಂ ಜಿಲ್ಲೆಯ ಶಿಯಾಸ್ ಕುಂಜುಮೊಹಮ್ಮದ್ ಎಂಬ ವ್ಯಕ್ತಿ ದೂರು ನೀಡಿದ್ದು. ದಾಖಲಾದ ಪ್ರಕರಣದ ಬಗ್ಗೆ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ.

ಹೆರುವ, ಹೆರದೇ ಇರುವ ಹಕ್ಕು ಮಹಿಳೆಗೆ ಸೇರಿದ್ದು: ಕೇರಳ ಹೈಕೋರ್ಟ್‌
ತಿರುವನಂತಪುರಂ: ಮಕ್ಕಳನ್ನು ಹೆರುವ ಅಥವಾ ಹೆರದೇ ಇರುವ ಮಹಿಳೆಯ ಹಕ್ಕಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇರಳ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ವಿ.ಜಿ.ಅರುಣ್ ಅವರ ಏಕಸದಸ್ಯ ಪೀಠ, ಭಾರತ ಸಂವಿಧಾನದ 21 ನೇ ವಿಧಿಯ ಪ್ರಕಾರ, ಮಹಿಳೆಗೆ ಸಂತಾನೋತ್ಪತ್ತಿ ಆಯ್ಕೆ ಮಾಡುವ ಹಕ್ಕಿದೆ. ಅದು ಆಕೆಯ ವೈಯಕ್ತಿಕ ಸ್ವಾತಂತ್ರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

23 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯೊಂದಿಗಿನ ಸಮ್ಮತಿಯ ಲೈಂಗಿಕ ಸಂಬಂಧದಿಂದ ತನ್ನ ಗರ್ಭಾವಸ್ಥೆಯನ್ನು ಕೊನೆಗೊಳಿಸುವಂತೆ ಕೋರಿ ಸಲ್ಲಿಸಿದ್ದಾರೆ.

ಗರ್ಭನಿರೋಧಕ ವೈಫಲ್ಯದಿಂದ  ಗರ್ಭಿಣಿಯಾಗಿದ್ದು, ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿದಾಗಲೇ ಗರ್ಭ ಧರಿಸಿರುವ ವಿಷಯ ತಿಳಿಯಿತು. ಅನಿಯಮಿತ ಮುಟ್ಟಿನ ಅವಧಿಗಳು ಮತ್ತು ಇತರ ದೈಹಿಕ ಅಸ್ವಸ್ಥತೆಗಳ ಬಗ್ಗೆ ವೈದ್ಯರ ಸಲಹೆಯ ಆಧಾರದ ಮೇಲೆ ಸ್ಕ್ಯಾನ್ ಮಾಡಿಸಿದಾಗ ಗರ್ಭ ಧರಿಸಿದ್ದು ಗೊತ್ತಾಯಿತು. ಆದರೆ ಮಗುವನ್ನು ಹೆರಲು ಇಷ್ಟವಿಲ್ಲದ ಕಾರಣ ಗರ್ಭಪಾತಕ್ಕೆ ಮನವಿ ಮಾಡಿದಾಗ ಯಾವುದೇ ಆಸ್ಪತ್ರೆ ಗರ್ಭಪಾತಕ್ಕೆ ಒಪ್ಪಲಿಲ್ಲ ಎಂದು ಮಹಿಳೆ ದೂರಿದ್ದರು.

20 ವಾರಗಳಿಗೂ ಮೀರಿದ ಗರ್ಭವಾದ್ದರಿಂದ, ಗರ್ಭಪಾತ ಮಾಡಲು ಆಸ್ಪತ್ರೆಗಳು ನಿರಾಕರಿಸಿದ್ದವು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, “ಮಕ್ಕಳನ್ನು ಹೆರುವ ಅಥವಾ ಹೆರದೇ ಇರುವ ಮಹಿಳೆಯ ಆಯ್ಕೆಯನ್ನು ನಿರ್ಬಂಧಿಸಲಾಗದು. ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅರ್ಥೈಸಿಕೊಂಡಂತೆ ಸಂತಾನೋತ್ಪತ್ತಿ ಆಯ್ಕೆಯನ್ನು ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನಾಗಿ ನೋಡಬೇಕು ಎಂದು ಹೇಳಿದೆ.

ಈ ಸಂಬಂಧ 2009ರ ಸುಚಿತಾ ಶ್ರೀವಾಸ್ತವ v/s ಚಂಡೀಗಢ (ಅಡ್ಮಿನಿಸ್ಟ್ರೇಷನ್)‌  ಪ್ರಕರಣದ ಸುಪ್ರೀಂ ಕೋರ್ಟ್‌ ತೀರ್ಪನ್ನು  ಉಲ್ಲೇಖಿಸಿರುವ ನ್ಯಾಯಾಧೀಶರು, 20 ವಾರಗಳಿಗೂ ಮೀರಿದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವುದರಿಂದ ಅವಿವಾಹಿತ ಮಹಿಳೆಯರನ್ನು ಹೊರತುಪಡಿಸುವುದು ವೈಯಕ್ತಿಕ ಸ್ವಾತಂತ್ರ್ಯದ  ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲೈಂಗಿಕ ಕಿರುಕುಳ ಪ್ರಕರಣ: ಸಿವಿಕ್ ಚಂದ್ರನ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಕೇರಳ ಹೈಕೋರ್ಟ್
ಕೇರಳ: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಸಿವಿಕ್ ಚಂದ್ರನ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ಪ್ರಶ್ನಿಸಿ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದೆ.

ಈ ಹಿನ್ನಲೆಯಲ್ಲಿ ಸಿವಿಕ್ ಚಂದ್ರನ್‌ನವರು ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

ಆಗಷ್ಟ್‌ 24 ರಂದು ಲೈಂಗಿಕ ಕಿರುಕುಳದ ಆರೋಪಿ ಸಿವಿಕ್ ಚಂದ್ರನ್‌ಗೆ ನಿರೀಕ್ಷಣಾ ಜಾಮೀನು ನೀಡುವ ಕೋಝಿಕ್ಕೋಡ್ ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿತ್ತು. ನಂತರ ಅವರ ವಯಸ್ಸನ್ನು ಪರಿಗಣಿಸಿ ಅವರಿಗೆ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಮೇಲ್ಮನವಿ ಇತ್ಯರ್ಥವಾಗುವವರೆಗೆ ಅವರನ್ನು ಬಂಧಿಸಬಾರದು ಎಂದು ನಿರ್ದೇಶನ ನೀಡಿತ್ತು.

ಏರ್ಪೋರ್ಟ್ ಖಾಸಗೀಕರಣ ; ಕೇರಳ ಹೈಕೋರ್ಟ್ ನಿರ್ಧಾರ ಎತ್ತಿ ಹಿಡಿದ ಸು.ಕೋರ್ಟ್
ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ಸ್  ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಕಂಪನಿಯು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಯೊಂದಿಗೆ ಮಾಡಿಕೊಂಡ 50 ವರ್ಷಗಳ ಒಪ್ಪಂದದ ಕರಾರನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು ಕೇರಳ ಸರ್ಕಾರದ ಅರ್ಜಿ ವಜಾಗೊಳಿಸಿದೆ.

ಗೌತಮ್ ಅದಾನಿ ಒಡೆತನದ ಖಾಸಗಿ ಘಟಕವು ಅಕ್ಟೋಬರ್ 2021 ರಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಅಂಶವನ್ನು ಪರಿಗಣಿಸಿ, ಕೇರಳ ಸರ್ಕಾರ ಸಲ್ಲಿಸಿದ್ದ ಪಿಟಿಷನ್ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾ.ಬೇಲಾ ಎಂ.ತ್ರಿವೇದಿ ಅವರಿದ್ದ ದ್ವಿಸದಸ್ಯ ಪೀಠವು ಅಕ್ಟೋಬರ್ 2020 ರ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯದ ಮೇಲ್ಮನವಿಯನ್ನು ತಿರಸ್ಕರಿಸಿತು.

ಆದಾಗ್ಯೂ, ವಿಮಾನ ನಿಲ್ದಾಣವು ನೆಲೆಗೊಂಡಿರುವ ಭೂಮಿಯ ಮಾಲೀಕತ್ವದ ಪ್ರಶ್ನೆಯು ಮುಕ್ತವಾಗಿರುತ್ತದೆ ಎಂದು ನ್ಯಾಯಾಲಯವು ತನ್ನ ಸಂಕ್ಷಿಪ್ತ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ತಿರುವನಂತಪುರಂ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ರಾಜ್ಯ ಸರ್ಕಾರದ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕಿಂತ ಅದಾನಿ ಒಡೆತನದ ಖಾಸಗಿ ಸಂಸ್ಥೆಗೆ ಹೆಚ್ಚು ಆದ್ಯತೆ ನೀಡಿರುವ AAI ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಸಲ್ಲಿಸಿತ್ತು.

‘ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಈ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಇಲ್ಲ. ಜೊತೆಗೆ ಅದಾನಿ ಒಡೆತನದ ಸಂಸ್ಥೆ ಕೂಡಾ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಅನುಭವವೇ ಹೊಂದಿಲ್ಲದ ಕಾರಣ 1994 ರ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಆಕ್ಟ್‌ನ ನಿಬಂಧನೆಗಳ ಉಲ್ಲಂಘನೆಯಾಗಿದೆ ಮತ್ತು ಟೆಂಡರ್ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯು ದುರುಪಯೋಗವಾಗಿದೆ ಎಂದು ಕೇರಳ ಸರ್ಕಾರದ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಒಪ್ಪಂದದಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣ ಇರುವ ಭೂಮಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಸೇರಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಯಿತು; ಕಂಪನಿಯು 2019 ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ AAI ಗೆ ಪಾವತಿಸಬೇಕಾದ ಪ್ರತಿ ಪ್ರಯಾಣಿಕರ ಶುಲ್ಕವಾಗಿ ರೂ.168 ರನ್ನು ಪಾವತಿಸಿ ಹರಾಜು ಪ್ರಕ್ರಿಯೆಯಲ್ಲಿ ಗೆದ್ದಿದೆ.

ಅಕ್ಟೋಬರ್ 2020 ರಲ್ಲಿ, ತಿರುವನಂತಪುರಂ ವಿಮಾನ ನಿಲ್ದಾಣವನ್ನು ಅದಾನಿಗೆ ಗುತ್ತಿಗೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜ್ಯದ ಆಕ್ಷೇಪಣೆಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು.

ಜೊತೆಗೆ ಈ ಪ್ರಸ್ತಾವನೆ ಅರ್ಜಿಯಲ್ಲಿನ ಹಲವು ಷರತ್ತುಗಳನ್ನು ಖಾಸಗಿ ಸಂಸ್ಥೆಗಳಿಗೆ ತಕ್ಕಂತೆ ರೂಪಿಸಲಾಗಿದೆ ಎಂದು ಕೇರಳ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿದ ತನ್ನ ಆಕ್ಷೇಪಣಾ ಅರ್ಜಿಯಲ್ಲಿ ತಿಳಿಸಿತ್ತು. ಆದರೆ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಕೇಂದ್ರವು ಹೈಕೋರ್ಟ್‌ಗೆ ತಿಳಿಸಿತ್ತು. ಕೇಂದ್ರದ ಸಮರ್ಥನೆಗಳಿಂದ ತೃಪ್ತರಾದ ಹೈಕೋರ್ಟ್, AAI ಮತ್ತು ಅದಾನಿ ನಡುವಿನ ಒಪ್ಪಂದವನ್ನು ಸ್ಪಷ್ಟಪಡಿಸಿತ್ತು.

ತನಗೆ ಬೇಕಾದ ಉಡುಪನ್ನು ಧರಿಸುವುದು ಪ್ರತಿ ವ್ಯಕ್ತಿಯ ಹಕ್ಕು: ಕೇರಳ ಹೈಕೋರ್ಟ್
ಕೇರಳ: ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಬೇಕಾದ ಉಡುಪನ್ನು ಧರಿಸುವ ಸ್ವಾತಂತ್ರ್ಯವಿದೆ, ಅದು ಅವರ ಹಕ್ಕು ಎಂದು ಕೇರಳ ಹೈಕೋರ್ಟ್‌ ತಿಳಿಸಿದೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನೀರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೋಝಿಕ್ಕೋಡ್‌ ಸೆಷನ್‌ ನ್ಯಾಯಾಧೀಶರು ನೀಡಿದ ಆದೇಶದಿಂದ ʼಲೈಂಗಿಕ ಪ್ರಚೋದನಕಾರಿ ಉಡುಗೆʼ ಟೀಕೆಗಳನ್ನು ತೆಗೆದುಹಾಕುವ ವೇಳೆ ಕೇರಳ ಹೈಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮಹಿಳೆಯರನ್ನು, ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ವಿರೋಧಿಸುವುದನ್ನು ಸಮರ್ಥಿಸಲಾಗುವುದಿಲ್ಲ ಮತ್ತು ಮಹಿಳೆಯರನ್ನು ಅವರ ಉಡುಪಿನ ಆಯ್ಕೆಯ ಆಧಾರದ ಮೇಲೆ ವರ್ಗೀಕರಿಸುವ ಮಾನದಂಡಗಳನ್ನು ಸಹಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಗುರುವಾರ ತಿಳಿಸಿದೆ.

ನ್ಯಾಯಾಧೀಶರು ನೀಡಿದ ಆದೇಶದಿಂದ ʼಲೈಂಗಿಕ ಪ್ರಚೋದನಕಾರಿ ಉಡುಗೆʼಯ ಟೀಕೆಗಳನ್ನು ಹೊರಹಾಕುವ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದ್ದು, ʼಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಪನ್ನು ಧರಿಸಿದ್ದರೂ ಸಹ, ಅದು ತನ್ನ ನಮ್ರತೆಯನ್ನು ಅತಿರೇಕಗೊಳಿಸಲು ಪುರುಷನಿಗೆ ಪರವಾನಗಿ ನೀಡುವುದಿಲ್ಲʼ ಎಂದು ಹೈಕೋರ್ಟ್‌ ಆದೇಶಿಸಿದೆ.

ʼಮಹಿಳೆಯರು ಪುರುಷರ ಗಮನ ಸೆಳೆಯಲು ಮಾತ್ರ ಉಡುಗೆ ಧರಿಸುತ್ತಾರೆʼ ಎಂಬ ಯಾವುದೇ ಆಲೋಚನೆ ಇರಬಾರದು. ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಕ್ಕೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುವುದು ತಪ್ಪು. ಸಂತ್ರಸ್ತೆಯ ಲೈಂಗಿಕ ಪ್ರಚೋದನಕಾರಿ ಉಡುಗೆಯ ಆಧಾರದ ಮೇಲೆ, ಮಹಿಳೆಯ ಘನತೆಗೆ ಅವಮಾನ ಮಾಡಿದ ಆರೋಪದಿಂದ ಆರೋಪಿಯನ್ನು ಮುಕ್ತಗೊಳಿಸಲು ಕಾನೂನು ಸಹಮತ ನೀಡುವುದಿಲ್ಲ. ಭಾರತದ ಸಂವಿಧಾನವು ನೀಡಿರುವ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಡಿ, ವ್ಯಕ್ತಿಯು ಯಾವುದೇ ಉಡುಪನ್ನು ಧರಿಸುವ ಸ್ವಾತಂತ್ರ್ಯವು ವಿಸ್ತರಿಸಲ್ಪಟ್ಟಿದೆ. ಹೀಗಾಗಿ ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಗೆಯನ್ನು ಧರಿಸಿದ್ದರೂ ಸಹ, ಅದು ಪುರುಷನಿಗೆ ಆಕೆಯ ಘನತೆಯನ್ನು ಅವಮಾನಿಸುವ ಪರವಾನಗಿ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 A(2) & 341 ಮತ್ತು 354 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಮಾಡಿದ ಆರೋಪ ಹೊತ್ತಿರುವ ಕಾರ್ಯಕರ್ತ ಸಿವಿಕ್ ಚಂದ್ರನ್‌ ಅವರಿಗೆ ಜಾಮೀನು ಮಂಜೂರು ಮಾಡುವ ಆದೇಶವನ್ನು ಪ್ರಶ್ನಿಸಿ, ಕೇರಳ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ.

ಸಂತ್ರಸ್ತೆ “ಲೈಂಗಿಕ ಪ್ರಚೋದನಕಾರಿ ಉಡುಗೆ” ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಲೈಂಗಿಕ ಕಿರುಕುಳ ಪ್ರಕರಣವು ಪ್ರಾಥಮಿಕ ಹಂತದಲ್ಲಿ ನಿಲ್ಲುವುದಿಲ್ಲ ಎಂದು ನ್ಯಾಯಾಧೀಶ ಎಸ್ ಕೃಷ್ಣ ಕುಮಾರ್ ಅವರು ನೀಡಿದ ತೀರ್ಪನ್ನು  ಸೆಷನ್ಸ್  ನ್ಯಾಯಾಲಯ ಆದೇಶಿಸಿದೆ.

ತೀರ್ಪಿನ ಪ್ರಕಾರ, ಪ್ರಾಥಮಿಕ ಹಂತದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಾಲಾಗಬೇಕೆಂದರೆ ದೈಹಿಕ ಸಂಪರ್ಕ ಮತ್ತು ದೈಹಿಕ ಸಂಪರ್ಕಕ್ಕೆ ಇಷ್ವವಿಲ್ಲದ ಕಾರಣಗಳು, ಬೇಡಿಕೆಗಳು, ಒತ್ತಾಯಗಳು ಇರಬೇಕು. ಇಲ್ಲವಾದಲ್ಲಿ ಕೇವಲ ಲೈಂಗಿಕ ಪ್ರಚೋದನಕಾರಿ ಉಡುಗೆ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ದೌರ್ಜನ್ಯದ ಪ್ರಕರಣ ದಾಖಾಲಾಗಿದ್ದರೆ, ಅಂತಹ ಪ್ರಕರಣಗಳು ಪ್ರಾಥಮಿಕ ಹಂತದಲ್ಲಿ ನಿಲ್ಲುವುದಿಲ್ಲ ಎಂದು ನ್ಯಾಯಲಯ ತಿಳಿಸಿದೆ.