KH muniyappa – Peepal Media

ಹೊಸ ಬಿಪಿಎಲ್ ಎಪಿಎಲ್ ಕಾರ್ಡುಗಳ ಅರ್ಜಿ ಸಲ್ಲಿಕೆ ಸಧ್ಯಕ್ಕಿಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ
ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದಂತ ರಾಜ್ಯದ ಜನತೆಗೆ ಬಿಗ್ ಶಾಕ್ ಎನ್ನುವಂತೆ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅನುಮತಿ ಇಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರಾದ ಮುನಿಯಪ್ಪ, ಸದ್ಯಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅನೇಕ ಮಂದಿ ಬೇಡಿಕೆ ಇಟ್ಟಿದ್ದಾರೆ ಎಂಬ ಪ್ರಶ್ನೆಗೆ ಸಧ್ಯಕ್ಕೆ ಯಾವುದೇ ಹೊಸ ಕಾರ್ಡ್ ಗೆ ಅನುಮತಿ ಇಲ್ಲಾ ಎಂದು ಸಚಿವ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಆರಂಭವಾಗಿಲ್ಲ . ಎಪಿಎಲ್ , ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ನಾವೇ ಓಪನ್ ಮಾಡಿಲ್ಲ. ಏನು ಕಾರಣ ಅಂತ ಸದ್ಯದಲ್ಲೇ ಹೇಳ್ತೇವೆ. ಇನ್ನೂ ಒಂದಿಷ್ಟು ದಿನ ಎಪಿಎಲ್, ಬಿಪಿಎಲ್ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಂತರ 25, 26 ಒಳಗೆ ಫಲಾನುಭವಿಗಳ ಅಕೌಂಟ್ ಗೆ ಹಣ ಸಂದಾಯವಾಗುತ್ತೆ. ಅಕ್ಕಿ, ರಾಗಿ, ಜೋಳವನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಆ ನಂತರದಲ್ಲಿ ಉಳಿಕೆ ಹಣ ಫಲಾನುಭವಿಗಳಿಗೆ ಹೋಗಲಿದೆ ಎಂದು ತಿಳಿಸಿದ್ದಾರೆ.

ಸಧ್ಯಕ್ಕೆ ಅಕ್ಕಿ ಕೊರತೆ ಇರುವ ಕಾರಣ ಅಕೌಂಟ್ ಗೆ ಹಣ ಸಂದಾಯವಾಗಿದೆ. ಈಗಾಗಲೇ ಅಕ್ಕಿ ಕೊಡಲು ತೆಲಂಗಾಣ ಮತ್ತು ಆಂದ್ರಪ್ರದೇಶ ಮುಂದೆ ಬಂದಿದೆ. ಅಕ್ಕಿ ದರದ ಬಗ್ಗೆ ಮಾತುಕತೆ ನಡೆಯುತ್ತಿದೆ. ವಾರದ ಹತ್ತು ದಿನಗಳ ಒಳಗೆ ಎಲ್ಲವೂ ಫೈನಲ್ ಆಗುತ್ತೆ. ಮುಂದಿನ ತಿಂಗಳು ಪಡಿತರದಲ್ಲಿ ಹತ್ತು ಕೆಜಿ ಅಕ್ಕಿ ಸಿಗುತ್ತೆ ಅಂತ ಡೆಡ್ ಲೈನ್ ಕೊಡಕ್ಕೆ ಆಗಲ್ಲ. ಅಧಿಕಾರಿಗಳ ಜತೆ ಚರ್ಚೆ ಆಗ್ತಿದೆ.. ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.