kiccha sudeep – Peepal Media

ಸಮಾಜ ಸೇವೆಗೆ ಟೊಂಕ‌ ಕಟ್ಟಿನಿಂತ ಕಿಚ್ಚ ಸುದೀಪ್ ಕೇರ್ ಫೌಂಡೇಶನ್
ಸಮಾಜಸೇವೆಗೆ ಟೊಂಕ‌ ಕಟ್ಟಿನಿಂತ ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಲೋಗೋ ಲಾಂಚ್ ಮಾಡಿದ ಜೂ.ಕಿಚ್ಚ

ಸಮಾಜ‌ ಸೇವೆಗ ಶುರು ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಶಿಕ್ಷಣ, ವೈದ್ಯಕೀಯ ಸೇವೆಗೆ ಒತ್ತು ನೀಡಿ ಸಮಾಜಿಕ ಕಳಕಳಿಯ ಸೇವೆಗಳನ್ನು ಪ್ರಾರಂಭಿಸಿದ್ದಾರೆ ಈಗಾಗಲೆ ಸುಮಾರು ವರ್ಷಗಳಿಂದ ಕಿಚ್ಚ ಸುದೀಪ್‌ ಹಲವಾರು ರೀತಿಗಳಲ್ಲಿ ಸೇವೆ ನೀಡುತ್ತಲೆ ಬಂದಿದ್ದಾರೆ ಆದರೆ ಬೆಳಕಿಗೆ ಬಂದಿರುವುದಿಲ್ಲಾ. ಆದರೆ ಈಗ ಮುಖ್ಯ ವಾಹಿನಿಯ ಮೂಲಕ ಕಿಚ್ಚ ಸುದೀಪ್‌ ಕೇರ್‌ ಫೌಂಡೇಷನ್‌ ಎಂಬ ಹೆಸರಿನೊಂದಿಗೆ ರಾಜ್ಯದ ಜನತೆಯ ಸೇವೆಗೆ ಸಿದ್ದರಾಗಿದ್ದಾರೆ. ಈಗಾಗಲೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ಹರಿದಾಡುತ್ತಲಿರುವುದರಿಂದ ಜನರ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಲಸೇವೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರು ಸದ್ದಿಲ್ಲದೇ ಸಮಾಜಸೇವೆ ಕೆಲಸಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಎಂಬ ಹೊಸ ಚಾರಿಟೇಬಲ್ ಟ್ರಸ್ಟ್ ಪ್ರಾರಂಭಿಸಲಾಗಿದೆ. ಜೂನಿಯರ್ ಕಿಚ್ಚ ಉರೂಫ್ ಸಂಚಿತ್ ಸಂಜೀವ್ ಈ ಫೌಂಡೇಶನ್ ಲೋಗೋ ಹಾಗೂ ಟೀ ಶರ್ಟ್ ಬಿಡುಗಡೆ ಮಾಡಿದರು.ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಅನೇಕ ಸಮಾಜಮುಖಿ ಕೆಲಸಗಳಿಗೆ ಮುಂದಾಗಿದೆ. ಆ ಪೈಕಿ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ಒದಗಿಸುವ ಮಹತ್ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಕಿಚ್ಚ ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿಪಡಿಸಿದ್ದಾರೆ. ಅದರ ಮುಂದುವರೆದ ಭಾಗವೆಂಬಂತೆ ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಸಂಸ್ಥಾಪಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.ಮ್ಯಾಕ್ಸ್ ಸಿನಿಮಾ ಬೆಳ್ಳಿತೆರೆಯಲ್ಲಿ ಮ್ಯಾಜಿಕ್ ಮಾಡ್ತಿರುವ ಮೂವೆಂಟ್ ನಲ್ಲಿ ಕಿಚ್ಚನ ಈ ಸಮಾಜಮುಖಿ ಕೆಲಸಕ್ಕೆ ಮುಂದಾಗಿರುವ ನಡೆ ಕಂಡು ಅಭಿಮಾನಿಗಳು ಸಂತಸಪಡುತ್ತಿದ್ದಾರೆ.

ಕಾವೇರಿ ಹೋರಾಟಕ್ಕೆ ಕಿಚ್ಚ ಸುದೀಪ್ ಬೆಂಬಲ ; ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಆಗ್ರಹ
ಕಾವೇರಿ ಹೋರಾಟಕ್ಕೆ ಕನ್ನಡದ ಚಿತ್ರನಟರು, ಸೆಲೆಬ್ರಿಟಿಗಳ ಬೆಂಬಲ ಘೋಷಿಸಿಲ್ಲ ಎಂಬ ಕೂಗಿನ ನಡುವೆ ಈಗ ಒಂದೊಂದಾಗಿ ಕನ್ನಡ ಚಿತ್ರರಂಗದ ನಟರು ದನಿಗೂಡಿಸಿದ್ದಾರೆ. ಎರಡು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಗ್ಗೆ ದನಿ ಎತ್ತಿ ಹೋರಾಟದಲ್ಲಿ ಭಾಗಿ ಆದರೆ ಈಗ ನಟ ಕಿಚ್ಚ ಸುದೀಪ್ ಕೂಡಾ ತಮ್ಮ ಸಾಮಾಜಿಕ ಜಾಲತಾಣ ‘X’ ನಲ್ಲಿ ಕಾವೇರಿ ಹೋರಾಟಕ್ಕೆ ಕನ್ನಡಿಗರ ಪರ ದನಿ ಎತ್ತಿದ್ದಾರೆ.

ತಮ್ಮ ಅಕೌಂಟ್ ನಲ್ಲಿ ಬರೆದುಕೊಂಡಿರುವ ಕಿಚ್ಚ ಸುದೀಪ್ ‘ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ತಿಳಿಸಿದ್ದಾರೆ.

ಹಾಗೆಯೇ ಮಳೆಯ ಅಭಾವದಿಂದ ನಾಡಿನ ಜನ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ, ‘ಮುಂಗಾರುಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞ ರು ಕೂಡಲೇ ಟ್ರಬಿನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕದ ಬರ ಪರಿಸ್ಥಿತಿ ಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ’ ಎಂದು ಆಗ್ರಹಿಸಿದ್ದಾರೆ.

‘ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ತಮಿಳುನಾಡಿನ ಮುಖ್ಯ ಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆ ಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ -ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಕಿಚ್ಚ ಸುದೀಪ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು ಪಕ್ಷ ಬೇಧ ಮರೆತು ಈ ಹೋರಾಟಕ್ಕೆ ಎಲ್ಲರೂ ಜೊತೆಯಾಗಬೇಕು ಎಂದು ಒತ್ತಾಯಿಸಿರುವ ಸುದೀಪ್ ‘ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ ಆದರೆ ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ. ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣಾ ನದಿ – ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ.
ನಮ್ಮ ಜಲ ನಮ್ಮ ಹಕ್ಕು’ ಎಂದು ಸುದೀಪ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.

‘ದರ್ಶನ್ ಜೊತೆಯಾಗಲು ಸಿದ್ಧ, ಆದರೆ..!’ ; ಕಿಚ್ಚ ಸುದೀಪ್ ಹೇಳಿದ್ದೇನು?
ತನ್ನ ಹುಟ್ಟು ಹಬ್ಬದ ವಿಶೇಷವಾಗಿ ಅಭಿಮಾನಿಗಳು ಮತ್ತು ಮಾಧ್ಯಮ ಸ್ನೇಹಿತರ ಜೊತೆಗೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್ ಮಾಧ್ಯಮದವರೊಟ್ಟಿಗೆ ಮಾತಾಡಿದ್ದಾರೆ. ವಿಶೇಷ ಎಂದರೆ ತನ್ನ ಸಹನಟ ದರ್ಶನ್ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ ಕಿಚ್ಚ ಸುದೀಪ್.

ಇತ್ತೀಚೆಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಂದೇ ವೇದಿಕೆ ಹಂಚಿಕೊಂಡರೂ ಮುಖ ನೋಡಿಕೊಳ್ಳದ ದರ್ಶನ್ ಮತ್ತು ಸುದೀಪ್ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸುದ್ದಿಗಳು ಗರಿಗೆದರಿತ್ತು. ಅದರ ಬೆನ್ನಲ್ಲೇ ಬಂದ ಸುದೀಪ್ ಹುಟ್ಟುಹಬ್ಬ ಆ ಒಂದು ಸನ್ನಿವೇಶದ ಬಗ್ಗೆ ಪ್ರಶ್ನಿಸಲು ಮಾಧ್ಯಮಗಳಿಗೆ ಒಂದು ಒಳ್ಳೆಯ ವೇದಿಕೆ ಕೂಡಾ ಆಗಿದ್ದು ವಿಶೇಷ.

ಇನ್ನೂ ಒಂದು ಮುಖ್ಯ ವಿಚಾರ ಎಂದರೆ ಸುದೀಪ್ ಬೇರೆಲ್ಲಾ ದಿನಗಳಂತೆ ದರ್ಶನ್ ವಿಚಾರವಾಗಿ ಬಂದ ಪ್ರಶ್ನೆಗಳನ್ನು ತಿರಸ್ಕರಿಸದೇ, ಮುಕ್ತವಾಗಿ ಸ್ವೀಕರಿಸಿ ಬಹುತೇಕರಿಗೆ ಸಮಾಧಾನ ಆಗುವಂತೆ ಉತ್ತರಿಸಿದ್ದಾರೆ. ಸಮಾಧಾನ ಎನ್ನುವುದಕ್ಕಿಂತ ತನ್ನ ಮನದ ಮಾತನ್ನು ಹೊರಹಾಕಿದ್ದಾರೆ.

ಸುಮಲತಾ ಅಂಬರೀಶ್ ಹುಟ್ಟು ಹಬ್ಬದ ಸಂದರ್ಭದಲ್ಲಿ ದರ್ಶನ್ ಸುದೀಪ್ ವೇದಿಕೆ ಹಂಚಿಕೊಂಡ ಬಗ್ಗೆ, ಇಬ್ಬರೂ ಮುಖ ನೋಡಿಕೊಳ್ಳದೇ ನಿರ್ಗಮಿಸಿದ ಬಗ್ಗೆ ಮಾಧ್ಯಮಗಳು ಮೊದಲ ಪ್ರಶ್ನೆಯಾಗಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್.. ಮೊದಲಿಗೆ ದರ್ಶನ್ ಹಾಗೂ ಮಾಧ್ಯಮಗಳು ಒಂದಾಗಿದ್ದು ಒಳ್ಳೆಯ ವಿಷಯ. ಎಷ್ಟು ದಿನ ಅಂತ ದ್ವೇಷ ಇಟ್ಟು ಇರುವುದಕ್ಕೆ ಆಗುತ್ತದೆ.. ಒಂದು ಕೆಟ್ಟ ಗಳಿಗೆಯಲ್ಲಿ ಮಾತು ಬರುತ್ತೆ, ಹೋಗುತ್ತೆ.. ಅದನ್ನು ಬೆಳೆಸದೇ ಒಂದಾಗಿದ್ದು ನನಗಂತೂ ಖುಷಿ ಇದೆ ಎಂದು ಸುದೀಪ್ ಹೇಳಿದ್ದಾರೆ.

ನಂತರ ‘ನಂಗೆ ಅವರ ಮೇಲೆ ಕೋಪ ಇಲ್ಲ. ನಾವಿಬ್ಬರೂ ಒಂದಾಗುವುದಕ್ಕೆ ಸ್ವಲ್ಪ ಸಮಯ ಬೇಕು. ನಾವಿಬ್ಬರೂ ಪರಸ್ಪರ ಗೌರವ ಕೊಡ್ತೀವಿ. ಪರಸ್ಪರ ಕೈಕುಲುಕಿದ ಮಾತ್ರಕ್ಕೆ ಎಲ್ಲಾ ಸರಿಹೋಯ್ತು ಅನ್ನೋಕಾಗಲ್ಲ. ನನ್ನಲ್ಲೂ ಕೆಲವು ಪ್ರಶ್ನೆಗಳಿವೆ, ಅವರಲ್ಲೂ ಕೆಲವು ಪ್ರಶ್ನೆಗಳಿರಬಹುದು.. In fact ಸುಮಾರು 6 ವರ್ಷಗಳ ನಂತರ ನಾನು ದರ್ಶನ್ ಮುಖಾಮುಖಿ ಆದದ್ದು. ಈ ಬಗ್ಗೆ ಖುಷಿ ಇದೆ. ಆದರೆ ಒಂದಾಗಲು ಕಾಲ ಬರಬೇಕು. ಅದಕ್ಕೆ ಸಮಯ ಬೇಕು. ಆ ಸಮಯ ಕೊಡಿ’ ಎಂದು ಸುದೀಪ್ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಈ ವಿಷಯ ಸುದ್ದಿ ಆದಾಗ ಖುಷಿ ತಂದಿತ್ತು. ದರ್ಶನ್ ದೊಡ್ಡ ನಟ. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಕೋಪವಿಲ್ಲ. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನುವುದು ಕಲ್ಪನೆ ಅಷ್ಟೇ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ಇಬ್ಬರೂ ಒಂದೇ ಪಾರ್ಟಿಯಲ್ಲಿ ಭೇಟಿ ಆಗಿದ್ದು ಖುಷಿ ತಂದಿದೆ. ನಂಗೂ ಕೆಲವು ಪ್ರಶ್ನೆಗಳು ಇವೆ. ದರ್ಶನ್‌ಗೂ ಇವೆ. ಇಬ್ಬರೂ ಮುಖಾಮುಖಿ ಆದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗೋದು. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ ಎಂದು ಸುದೀಪ್‌ ಹೇಳಿದ್ದಾರೆ.

ಸುಮಲತಾ (Sumalatha) ಅವರ ಮೇಲೆ ಗೌರವ ಇದೆ, ಹಾಗಾಗಿ ಪಾರ್ಟಿ ಹೋಗಿದ್ದೆ. ತುಂಬಾ ವರ್ಷಗಳ ನಂತರ ಪಾರ್ಟಿಗೆ ಹೋಗಿದ್ದೆ. ನಾನು ಪಾರ್ಟಿ ಮಾಡುವ ವ್ಯಕ್ತಿ ಅಲ್ಲ. ಆ ರೀತಿ ಆಗಿದ್ದು ನನಗೂ ತುಂಬಾ ಖುಷಿ ಆಗಿದೆ. ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ನೋಡುವುದಿಲ್ಲ. ದರ್ಶನ್ ಪೋಸ್ಟ್ ನಾನು ನೋಡಿಲ್ಲ. ನೇರವಾಗಿ ಏನಾದರೂ ಹೇಳಿದರೆ ಕನ್ಸಿಡರ್ ಮಾಡ್ತೀನಿ ಎಂದಿದ್ದಾರೆ ಸುದೀಪ್.

ಸಧ್ಯ ಎಲ್ಲಾ ಮನಸ್ತಾಪಕ್ಕೂ ಒಂದು ಕೊನೆ ಇದೆ. ಅದಕ್ಕೆ ಕಾಲ ಬೇಕು ಎನ್ನುವ ಮೂಲಕ ಸುದೀಪ್ ಮೊದಲ ಬಾರಿಗೆ ಈ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಮೌನ ಮುರಿದಿದ್ದಾರೆ. ಇನ್ನು ಇದಕ್ಕೆ ದರ್ಶನ್ ಅವರ ಉತ್ತರ ಏನು, ಒಂದಾಗಲು ಎಷ್ಟು ಕಾಲ ಬೇಕು ಎಂಬುದಕ್ಕೂ ಕಾಲವೇ ಉತ್ತರಿಸಲಿದೆ.

ದರ್ಶನ್‌ ಅವಮಾನ ಖಂಡನೀಯ: ʼನಾವು ಪ್ರೀತಿ ಮತ್ತು ಗೌರವವನ್ನು ಅಷ್ಟೇ ಹಂಚಬೇಕುʼ- ಕಿಚ್ಚ ಸುದೀಪ್‌
ಬೆಂಗಳೂರು: ಹೊಸಪೇಟೆಯಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮೇಲೆ ಚಪ್ಪಲಿ ಎಸೆದಿರುವ ಘಟನೆಯನ್ನು ನಟ ಕಿಚ್ಚ ಸುದೀಪ್‌ ಖಂಡಿಸಿದ್ದು, ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ, ʼನಾವು ಪ್ರೀತಿ ಮತ್ತು ಗೌರವವನ್ನು ಹಂಚಬೇಕುʼ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೆ ಹೊಸಪೇಟೆಯಲ್ಲಿ ಕನ್ನಡ ಭಾಷೆಯ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾದ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಿನಿಮಾರಂಗದ ಖ್ಯಾತ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾರ್ಯಕ್ರಮದ ಕುರಿತು ಮಾತನಾಡುವಾಗ, ಕೆಲವು ಕಿಡಿಗೇಡಿಗಳು ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದರು. ಈ ಘಟನೆಯು ಕನ್ನಡ ಚಿತ್ರರಂಗಕ್ಕೆ ಅವಮಾನ ಎಂದು ರಾಜ್ಯದಾದ್ಯಂತ ಹಲವು ನಟರು, ಅಭಿಮಾನಿಗಳು ಖಂಡನೆ ವ್ಯಕ್ತಪಡಿಸಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ದರ್ಶನ್‌ ಪರ ನಿಂತಿದ್ದಾರೆ.
ಈ ವೇಳೆ ನಾಯಕ ನಟ ಕಿಚ್ಚ ಸುದೀಪ್‌ ಕೂಡ ದರ್ಶನ್‌ ಪರ ನಿಂತಿದ್ದು, ಟ್ವೀಟ್‌ ಮಾಡುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

ʼದ್ವೇಷವೇ ಎಲ್ಲದಕ್ಕೂ ಉತ್ತರವಲ್ಲʼ ನಮ್ಮ ನೆಲ, ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಯುತವಾದದ್ದು, ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ. ಹಾಗೆಯೇ ಪ್ರತಿಯೊಂದು ಪರಿಹಾರವು ಹಲವಾರು ಪರಿಹಾರದ ದಾರಿಗಳನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹನಾಗಿದ್ದಾನೆ. ಮತ್ತು ಸಮಸ್ಯೆಯನ್ನು ಆಹ್ಲಾದಕರ, ಶಾಂತ ರೀತಿಯಲ್ಲಿ ಪರಿಹರಿಸಬಹುದುʼ ಎಂದು ಕಿಚ್ಚ ಸುದೀಪ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ʼಆ ವಿಡಿಯೋವನ್ನು ನೋಡಿ ನಾನು ತುಂಬಾ ವಿಚಲಿತನಾದೆ. ಆ ಸಿನಿಮಾಗೆ ಸಂಬಂಧಪಟ್ಟ ಅನೇಕರು ಮತ್ತು ಸಿನಿಮಾದ ಭಾಗವಾಗಿದ್ದ ಪ್ರಮುಖ ಮಹಿಳೆ ಕೂಡ ಇದ್ದರು. ಅವರೆಲ್ಲ ಆ ಸಿನಿಮಾ ಕಾರ್ಯಕ್ರಮದ ಭಾಗವಾಗಿದ್ದರು. ಆ ಸಮಯದಲ್ಲಿ ಸಂಭವಿಸಿದ ಅಗೌರವದ ಅವಘಡಕ್ಕೆ ಯಾವುದೇ ಸಂಬಂಧವಿರಲಿಲ್ಲ. ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಈ ಅನ್ಯಾಯದ ಪ್ರತಿಕ್ರಿಯೆಗಳಿಗೆ ನಾವು ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹಾಗಾಗಿ ಒಳಗಿರುವ ಆಕ್ರೋಶವನ್ನು ಹೊರಹಾಕುವ ಮಾರ್ಗವೂ ಇದಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ʼದರ್ಶನ್ ಮತ್ತು ಪುನೀತ್ ಅಭಿಮಾನಿಗಳಿಗೆ ಕೆಲವೊಂದು ವಿಷಯಗಳಿಗೆ ಅಸಮಾಧಾನವಿದೆ ಎಂಬುದು ನನಗೆ ಗೊತ್ತಿದೆ. ಆದರೆ ಪುನೀತ್‌ರವರು ಕೂಡ ಈ ರೀತಿಯ ಘಟನೆಗಳನ್ನು ಒಪ್ಪುತ್ತಿರಲಿಲ್ಲ ಮತ್ತು ಸಹಕರಿಸುತ್ತಿರಲಿಲ್ಲ. ಏಕೆಂದರೆ ಅವರು ಎಲ್ಲರನ್ನೂ ಗೌರವಿಸುತ್ತಿದ್ದರು. ಯಾವನೋ ಒಬ್ಬ ಗುಂಪಲ್ಲಿ ಮಾಡುವ ಕ್ಷುಲ್ಲಕ ಕೆಲಸಕ್ಕೆ ಇಡೀ ವ್ಯವಸ್ಥೆಯನ್ನು ದೂಷಣೆ ಮಾಡುವುದು ಬೇಡ. ಇಡೀ ವ್ಯವಸ್ಥೆ ಪ್ರೀತಿ, ಘನತೆ, ಗೌರವದಿಂದ ತುಂಬಿದೆ ಎಂಬುದು ಪುನೀತ್ ಅಭಿಮಾನಿಗಳಿಗೆ ಗೊತ್ತಿರಬೇಕುʼ ಎಂದು ಸುದೀಪ್‌ ಹೇಳಿದ್ದಾರೆ.
ʼದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಮತ್ತು ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ನನ್ನ ಮನಸ್ಸಿನಲ್ಲಿರುವುದನ್ನು ನಾನು ಹೇಳಲೇಬೇಕು. ನಿಜಕ್ಕೂ ಈ ಘಟನೆ ನನ್ನನ್ನು ವಿಚಲಿತನನ್ನಾಗಿ ಮಾಡಿದೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ʼಕನ್ನಡ ಚಿತ್ರರಂಗ ಮತ್ತು ಜನ ಕನ್ನಡ ಹಾಗೂ ಕರ್ನಾಟಕಕ್ಕೆ ಹಾಗೂ ಎಲ್ಲರಿಗೂ ಗೌರವ ತಂದುಕೊಡುವ ಕೊಡುವ ಕೆಲಸ ಮಾಡಿದೆ. ಒಳ್ಳೆಯದನ್ನು ನಾವು ಎಲ್ಲೆಡೆ ಹರಡಬೇಕೆ ವಿನಃ ಇಂತಹ ನೀಚ ಕೃತ್ಯಗಳ ಮೂಲಕ ಕೆಟ್ಟ ಸಂದೇಶವನ್ನು ಹರಡಬಾರದುʼ ಎಂದಿದ್ದಾರೆ.

ʼನನಗೆ ಗೊತ್ತಿದೆ. ಕೆಲವು ನಟರುಗಳ ನಡುವೆ ಹಾಗೂ ಅಭಿಮಾನಿಗಳ ಮಧ್ಯೆ ಅಸಮಾಧಾನವಿದೆ. ಭಿನ್ನಾಭಿಪ್ರಾಯವಿದೆ. ನಾನೂ ದರ್ಶನ್ ಮತ್ತು ಮನೀತ್ ಇಬ್ಬರನ್ನೂ ಹತ್ತಿರದಿಂದ ಬಲ್ಲವನಾಗಿದ್ದೇನೆ. ಇಬ್ಬರ ಜೀವನವನ್ನು ನೋಡಿದ್ದೇನೆ. ಆ ಸಲುಗೆಯಿಂದ ನನ್ನ ಮನದ ಮಾತುಗಳನ್ನು ಹೇಳುತ್ತಿದ್ದೇನೆ. ನಾನು 27 ವರ್ಷ ಸಿನಿಮಾರಂಗದಲ್ಲಿ ಜೀವಿಸಿದ್ದೇನೆ. ಎಲ್ಲ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ನೋಡಿದ್ದೇನೆ. ನಾವು ಪ್ರೀತಿ ಮತ್ತು ಗೌರವವನ್ನು ಹಂಚಬೇಕು, ಇದೇ ನಮಗೆ ಪ್ರತಿಯಾಗಿ ಸಿಗುವುದು ಕೂಡ. ಇದೊಂದೇ ದಾರಿ ಪ್ರತಿಯೊಂದು ಸಂದರ್ಭ ಮತ್ತು ಎಲ್ಲರನ್ನು ಗೆಲ್ಲಲು ಎಂದು ಕಿಚ್ಚ ಸುದೀಪ್‌ ತಿಳಿಸಿದ್ದಾರೆ.

Rebellion isn't always an Answer.
❤️🙏🏼 pic.twitter.com/fbwANDdgP0
— Kichcha Sudeepa (@KicchaSudeep) December 20, 2022

ಟ್ವಿಟರ್‌ ನಲ್ಲಿ ʼವಿಕ್ರಾಂತ್‌ ರೋಣʼ ಅಬ್ಬರ
ಬೆಂಗಳೂರು: ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ‘ವಿಕ್ರಾಂತ್‌ ರೋಣ’ ಇಂದು (ಗುರುವಾರ) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದ್ದು, ಈ ಸಿನಿಮಾದ ಬಗ್ಗೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್‌ ಫರ್ನಾಂಡಿಸ್‌ ಮೊದಲಾದವರು ನಟಿಸಿದ್ದು. ಚಿತ್ರಕ್ಕೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ‘ವಿಕ್ರಾಂತ್‌ ರೋಣ’ ಸಿನಿಮಾದ ಪಸ್ಟ್‌ ಡೇ ಪಸ್ಟ್‌ ಶೋ ವೀಕ್ಷಿಸಿರುವ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನೆರೆ ಭಾಷೆಯ ಸಿನಿಮಾ ಸೂಪರ್‌ ಸ್ಟಾರ್‌ಗಳು ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಸಿನಿಮಾ ಸೂಪರ್‌ ಥ್ರಿಲ್ಲಿಂಗ್‌ ಆಗಿದೆ ಎಂದೂ  ಟ್ವೀಟ್‌ ಮಾಡಿದ್ದಾರೆ.

ವಿಕ್ರಾಂತ್‌ ರೋಣ ಸಿನಿಮಾ 3ಡಿಯಲ್ಲೂ ಇರುವುದರಿಂದ  ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿ ಮೂಡಿಬಂದಿದೆ,. ಉತ್ತಮ ಆಕ್ಷನ್, ಹಾರರ್ ಥ್ರಿಲ್ಲರ್ ಹೊಂದಿರುವ ಈ ಸಿನಿಮಾ ನೋಡುಗರಿಗೆ ರೋಚುಕತೆ ಹುಟ್ಟಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

– ಶ್ರೀಗಂಧದ ಹೆಮ್ಮೆ. ಹಾಲಿವುಡ್ ರೇಂಜ್ ಸಿನಿಮಾ.ಕಿಚ್ಚ ಸುದೀಪ್ ಸರ್, ನಿಮ್ಮ ಅಭಿನಯ ನನಗೆ ಸ್ಫೂರ್ತಿ! ಕಥೆ, ದೃಶ್ಯಗಳು, ಅಭಿನಯ ಎಲ್ಲವೂ ಪರಿಪೂರ್ಣ! ರೇಟಿಂಗ್ ಕೊಡುವುದಾರೆ 4.5/5. ಕೊಡುತ್ತೆನೆ ಮತ್ತೆ ಸಂಜೆ ಇನ್ನೊಮ್ಮೆ ಸಿನಿಮಾ ನೋಡಲು  ಹೋಗುತ್ತಿದ್ದೇನೆ ಎಂದು ತೋರ್ ಅಲ್ಲು ಅರ್ಜುನ್ ಅಭಿಮಾನಿ ಎಂಬುವರು ಟ್ವಿಟ್‌ ಮಾಡಿದ್ದಾರೆ.

One word – pride of sandalwood. Hollywood range movie. @KicchaSudeep sir, your performance inspired me! Story, visuals, performance everything is perfect! Rating 4.5/5 😍 . Again going for evening show🤩 #VikrantRona pic.twitter.com/00ECh82lbI
— Thor Allu Arjun Fan (@AlluStark) July 28, 2022

ಕಿಚ್ಚ ಸುದೀಪ್ ಶೋ ಕದಿಯಿರಿ , ನಿರೂಪ್ ಅದ್ಬುತ, ರವಿಶಂಕರ್ ಗೌಡ , ನೀತ ಎಲ್ಲಾರಿಗೂ  ಜಸ್ಟ್‌  ವಾವ್ ಹೇಳುತ್ತೆನೆ.  ಈ ಸಿನಿಮಾದ ನಿಜವಾದ ಹೀರೋ ಕೀರ್ತಿ ನಿರ್ದೇಶಕರಿಗೆ ಎಂದು ತೆಲುಗು ಚಿತ್ರದ ಖ್ಯಾತ ನಟ ಪ್ರಿನ್ಸ್‌     ಮಹೇಶ್‌ ಬಾಬು ಟ್ವಿಟರ್‌ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://twitter.com/ursTruMahesh_FC/status/1552488896268619776?s=20&t=Dg4q2J331oauFn7uF_gNZg

ಒಟ್ಟಾರೆಯಾಗಿ ಹೇಳುವುದಾದರೆ, ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿರುವ ವಿಕ್ರಾಂತ್‌ ರೋಣ ʼಬಾಕ್ಸ್‌ ಆಫೀಸ್‌ʼ  ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.