kichha sudeep – Peepal Media

ಬಿಗ್ ಬಾಸ್‌ನಲ್ಲೂ ಹೆಡ್ ಬುಷ್ ಸದ್ದು : ಬೆಲ್ ಬಾಟಂ ನಲ್ಲಿ ಕಿಚ್ಚ ಸುದೀಪ್!
ಹೆಡ್ ಬುಷ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಅವರು ನಿನ್ನೆ ಭಾನುವಾರ ಬಿಗ್ ವಾಸ್ ಸೀಸನ್ 9 ವೇದಿಕೆಗೆ ಅತಿಥಿಯಾಗಿ ಬಂದಿದ್ದರು. ಕಿಚ್ಚ ಸುದೀಪ್ ಹೆಡ್ ಬುಷ್ ಎಂದರೆ ಏನು? ಎಂದು ಕೇಳಿದಾಗ, ಡಾಲಿ ಧನಂಜಯ ಮಾತನಾಡಿ “ಹೆಡ್ ಮತ್ತು ಟೇಲ್ ಎಂದು ಅರ್ಥ. ಲೈಫ್ ಅನ್ನೋದು ಒಂದು ಗ್ಯಾಂಬ್ಲಿಂಗ್ ಇದ್ದಹಾಗೆ ಎರಡು ಶೇಡ್ಗಳು ಇರ್ತದೆ ಎಂದು ಹೇಳಿದರು.

ನೆಗೆಟಿವ್ ಕ್ಯಾರೆಕ್ಟರ್ ಅಷ್ಟು ಇಷ್ಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾಲಿ, ಹೌದು, “ರಿಯಲ್ ಲೈಫ್‌ನಲ್ಲಿ ಮಾಡದೇ ಇರುವುದನ್ನು ಮಾಡಲಿಕ್ಕೆ ಆಗುತ್ತದೆ” ಎಂದು ಹೇಳಿದರು. ಅದಕ್ಕೆ ಸುದೀಪ್ ಮಾತನಾಡಿ “ರಿಯಲ್ ಲೈಫ್‌ನಲ್ಲಿ ಎಲ್ಲವೂ ಮಾಡುತ್ತೀರಲ್ಲ”ಎಂದು ಕಾಲೆಳೆದಿದ್ದಾರೆ.

ಡಾಲಿ ಧನಂಜಯ್ ರಾತ್ರೆ ಎಷ್ಟು ಹೊತ್ತು ಎಚ್ಚರ ಇರ್ತಾರೆ? ಬೆಳಿಗ್ಗೆ ಎಷ್ಟು ಗಂಟೆಗೆ ಏಳ್ತಾರೆ? ಎಂದು ಕೇಳಿದ ಪ್ರಶ್ನೆಗೆ, ಪ್ರತಿ ದಿನ ಬೇಗ ಏಳ್ತಿನಿ, ರಾತ್ರೆ ತಡವಾಗಿ ಮಲ್ಗೊದು ಅಭ್ಯಾಸ ಆದರೆ ರಾತ್ರಿ ಸೆಲೆಬ್ರೇಷನ್ ಇದ್ದರೆ ಮಲ್ಗೊದು ಲೇಟು ಎದ್ದೇಳೊದು ಲೇಟಾಗುತ್ತೆ ಎಂದು ಹೇಳಿದ್ದಾರೆ‌. ವಾರದಲ್ಲಿ ಆರು ದಿನ ಸೆಲೆಬ್ರೆಷನ್ ಇರತ್ತ ಎಂದು ಸುದೀಪ್ ಡಾಲಿ ಧನಂಜಯ್ ಅವರ ಕಾಲೆಳೆದಿದ್ದಾರೆ.‌

ಮತ್ತೊಂದು ವಿಶೇಷ ಏನೆಂದರೆ, ಡಾಲಿ ಧನಂಜಯ ಮತ್ತು ಕಿಚ್ಚ ಸುದೀಪ್ ಇಬ್ಬರು ಬೆಲ್ ಬಾಟಂನ ಡ್ರೆಸ್‌ನಲ್ಲಿ ಮಿಂಚಿದರು. ನಿಮ್ಮ ಚಿತ್ರಕ್ಕೆ ನಾನು ಬೆಲ್ ಬಾಟಂ ಹಾಕುವ ಮೂಲಕ ಸಪೋರ್ಟ್ ಮಾಡ್ತಿದ್ದೀನಿ ನೋಡಿ ಎಂದು ಸುದೀಪ್ ಡಾಲಿಗೆ ಕಿಚಾಯಿಸಿದರು.

ಕೊನೆಯಲ್ಲಿ ಡಾಲಿ ಧನಂಜಯ ಅವರು, ಚಿತ್ರಮಂದಿರಗಳಲ್ಲೇ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

Love you sir @KicchaSudeep , it’s always good to see you, so much love you give, thanks for the stage and all those kind and inspiring words.

Thanks @ColorsKannada for providing #Bigboss stage to promote my film #HeadBush .#HeadBushOnOct21st pic.twitter.com/idYNkDCxAL
— Dhananjaya (@Dhananjayaka) October 17, 2022

ನೆಗೆಟಿವ್ ಅಭಿಪ್ರಾಯಗಳನ್ನು ಪಾಸಿಟಿವ್ ಪ್ರಚಾರ ಮಾಡಿಕೊಂಡ ಬಿಗ್ ಬಾಸ್!
ಯಾವುದೇ ಸಾಮಾಜಿಕ ಸಂದೇಶದ ಜವಾಬ್ದಾರಿ ಇಲ್ಲದೇ, ಕೇವಲ ಮನರಂಜನೆಯನ್ನಷ್ಟೇ ಮುಖ್ಯ ಉದ್ದೇಶವನ್ನಾಗಿಸಿಕೊಂಡದ್ದ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿ ಕನ್ನಡದ ಬಿಗ್ ಬಾಸ್ ಸೀಜನ್ 9 ಬಹುಶಃ ಹಿಂದಿನ ಎಲ್ಲಾ ಸೀಜನ್ ಗಿಂತಲೂ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ. ಹಿಂದಿನ ಕೆಲವು ಸೀಜನ್ ಗಳು ಬಿಗ್ ಬಾಸ್ ಮನೆಯ ವಿನ್ಯಾಸದ ಮೂಲಕ ಗಮನ ಸೆಳೆದಿದ್ದರೆ ಇನ್ನು ಕೆಲವು ಶೋ ಪ್ರಾರಂಭವಾಗಿ ಸ್ಪರ್ಧಿಗಳ appearance ಅಥವಾ performance ಆಧಾರದಲ್ಲಿ ಸುದ್ದಿ ಆಗುತ್ತಿತ್ತು. ಆದರೆ ಈ ಸೀಜನ್ ಶೋ ಪ್ರಾರಂಭದಲ್ಲೇ ಹೆಚ್ಚು ಪ್ರಚಾರ ಗಿಟ್ಟಿಸಿದ್ದು ಆ ಮಟ್ಟಿಗೆ ಬಿಗ್ ಬಾಸ್ ಟೀಂ ಶುರುವಿನಲ್ಲೇ ಸಿಕ್ಸರ್ ಬಾರಿಸಿದ ಸಂಭ್ರಮದಲ್ಲಿದೆ.

ಇಂಗ್ಲಿಷ್ ನಾಣ್ಣುಡಿ ‘Any publicity is good Publicity’ ಎಂಬುದನ್ನು ಈ ಬಿಗ್ ಬಾಸ್ ಟೀಂ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೊತೆಗೆ ಅದನ್ನು ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದೆ ಕೂಡಾ. ಹಾಗಾಗಿ ಸಾರ್ವಜನಿಕ ಅಭಿಪ್ರಾಯ ಏನೇ ಬಂದರೂ ಪರವಾಗಿಲ್ಲ ಎಂಬಂತೆ ಶೋ ಮುಂದುವರೆಸಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡದ ಈ ಸೀಜನ್ OTT ಪ್ಲಾಟಫಾರಂ ಅಡಿಯಲ್ಲಿ ಶೋ ಶುರು ಮಾಡಿದ್ದು ವಿಶೇಷ.

ಈ ಬಾರಿಯ ಶೋ ಅತಿ ಹೆಚ್ಚು ಸದ್ದು ಮಾಡಲು ಪ್ರಮುಖ ಕಾರಣವಾಗಿದ್ದು 15 ಮಂದಿ ಸ್ಪರ್ಧಿಗಳಲ್ಲಿ ಕೇವಲ ಇಬ್ಬರು ಸ್ಪರ್ಧಿಗಳ ಕಾರಣಕ್ಕೆ. ಒಬ್ಬರು “ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು” ಡೈಲಾಗ್ ಖ್ಯಾತಿಯ ಜ್ಯೋತಿಷಿ ಆರ್ಯವರ್ದನ್ ಕಾರಣಕ್ಕೆ, ಹಾಗೂ ಇನ್ನೊಂದು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ ಅವರ ಕಾರಣಕ್ಕೆ. ಈ ಇಬ್ಬರ ಆಯ್ಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆ ನಡೆಯುತ್ತಿದ್ದು ಹೆಚ್ಚಿನ ಮಂದಿ ಈ ಆಯ್ಕೆಯನ್ನು ಅತ್ಯಂತ ಕಟುವಾಗಿ ಟೀಕಿಸಿ, ಟ್ರೋಲ್ ಮಾಡಿ ಸೋಷಿಯಲ್ ಪ್ಲಾಟಫಾರಂನಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಸುದೀಪ್ ಅವರಿಗೆ ಇದು ಬೇಕಿತ್ತಾ? ಎನ್ನುವ ಮೂಲಕವೂ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಜ್ಯೋತಿಷಿ ಆರ್ಯವರ್ದನ್ ಆಯ್ಕೆಗಿಂತ ಹೆಚ್ಚಾಗಿ ಸೋನು ಗೌಡ ಇಲ್ಲಿ ಅಗತ್ಯ ಇರಲಿಲ್ಲ ಎಂಬ ಮಾತು ಹೆಚ್ಚು ಪ್ರಚಲಿತದಲ್ಲಿದೆ. ಯಾವಾಗ ಬಿಗ್ ಬಾಸ್ ನ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ ಗೌಡ ಎಂಬ ಹೆಸರು ಹೊರಬಿತ್ತೋ ಸೋಷಿಯಲ್ ಮೀಡಿಯಾದಲ್ಲಿ ಅಕ್ಷರಶಃ ಬೆಂಕಿ ಬಿದ್ದಂತೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕೆಲವೇ ದಿನಗಳ ಹಿಂದೆ ಸೋನು ಗೌಡ ಅವರ ಖಾಸಗಿ ವಿಡಿಯೋ ತುಣುಕು ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಅವರ ಬಿಗ್ ಬಾಸ್ ಆಯ್ಕೆ ಈ ಟೀಕೆಗಳಿಗೆ ಪ್ರಮುಖ ಕಾರಣವಾಗಿದೆ. ಕೆಲವರ ಪ್ರಕಾರ ಆಕೆ ಹಣಕ್ಕಾಗಿ ಈ ರೀತಿ ವಿಡಿಯೋ ಮಾಡಿದ್ದು ಎನ್ನುವುದಾದರೆ, ಇನ್ನೂ ಕೆಲವರ ಪ್ರಕಾರ ಆಕೆಯ ಖಾಸಗಿ ವಿಡಿಯೋ Misuse ಆಗಿದೆ ಎಂಬಂತೆಯೂ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಸರಿಯಾಗಿ ಕನ್ನಡದ ಬಹುತೇಕ ಟ್ರೋಲ್ ಪೇಜ್ ಗಳಿಗೆ ಸೋನು ಗೌಡ ಅವರ ಆಯ್ಕೆ ಆಹಾರವಾಗಿದೆ. ಹೆಚ್ಚಿನ ಮಂದಿ ನಕಾರಾತ್ಮಕವಾಗಿ ಇದನ್ನು ಟೀಕಿಸುತ್ತಿದ್ದರೂ ಬಿಗ್ ಬಾಸ್  ಟೀಂ ಇವ್ಯಾವುದಕ್ಕೂ ಕ್ಯಾರೇ ಎನ್ನದೇ ತನ್ನ ಶೋ ಮುಂದುವರೆಸಿದೆ.

ಇನ್ನು ಮತ್ತೊಂದು ವಿಶೇಷ ಎಂದರೆ ಈ ಬಾರಿಯ ಬಿಗ್ ಬಾಸ್ ಆಯ್ಕೆಯಲ್ಲಿ ಬಹುತೇಕ ಯುವಕ ಯುವತಿಯರೇ ತುಂಬಿದ್ದಾರೆ. ಜ್ಯೋತಿಷಿ ಆರ್ಯವರ್ದನ್ ಬಿಟ್ಟರೆ ಮತ್ತೆಲ್ಲರೂ 40 ವರ್ಷದ ಒಳಗಿನ ಯಂಗ್ ಅಂಡ್ ಎನರ್ಜೆಟಿಕ್ ಟೀಂ ಇದಾಗಿದೆ. ಇದರ ಮಧ್ಯೆ ಇತ್ತೀಚಿನ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕಾಫಿನಾಡು ಚಂದು ಈ ಬಾರಿಯ ಶೋಗೆ ಬರಬಹುದು ಎಂಬ ನಿರೀಕ್ಷೆ ಕೂಡಾ ಹೆಚ್ಚಿನವರಿಗೆ ಇತ್ತು. ಚಂದು ಅವರ ನಿರೀಕ್ಷಿಸಿದವರಿಗೆ ಈ ಬಾರಿ ನಿರಾಸೆಯಾಗಿದೆ.

ಎಂದಿನಂತೆ ಬಿಗ್ ಬಾಸ್ ಮನೆಯ ವಿನ್ಯಾಸದಲ್ಲಿಯೂ ಕ್ರಿಯೇಟಿವ್ ಹೆಡ್ ಪರಮೇಶ್ವರ್ ಗುಂಡಕಲ್ ಹೊಸತನ ಮೆರೆದಿದ್ದಾರೆ. ಬಿಗ್ ಬಾಸ್ OTT ಪ್ಲಾಟಫಾರಂ ನಲ್ಲಿ ಒಟ್ಟು 42 ದಿನ ನಡೆಯುವ ಈ ಶೋ ಹಿಂದಿಗಿಂತ ಹೆಚ್ಚು ಆಕರ್ಷಕವಾಗಿದೆ. ವಿಶೇಷವಾಗಿ ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಚಿತ್ರ ಇದ್ದು ಒಟ್ಟಾರೆ ಈ ಬಾರಿಯ ಶೋ ಹೆಚ್ಚು ಕುತೂಹಲ ಮೂಡಿಸಿದೆ.

ವಿಕ್ರಾಂತ್‌ರೋಣನ ಅದ್ಭುತ ಲೋಕ 27ರಂದು 27 ದೇಶಗಳಲ್ಲಿ ಚಿತ್ರದ ಪ್ರಿವ್ಯೂ
ವಿಕ್ರಾಂತ್‌ರೋಣ ಪ್ರತಿದಿನ ತನ್ನ ವಿಶೇಷತೆಗಳಿಂದ ಸುದ್ದಿಯಾಗುತ್ತಿರೋ ಚಿತ್ರ.  ಮೊನ್ನೆಯಷ್ಟೇ ದುಬೈನಲ್ಲಿ ಚಿತ್ರದ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ ಈಗ ‘ಸಿನೆಡಬ್ಸ್’  ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತಮ್ಮಿಷ್ಟದ ಭಾಷೆಗಳಲ್ಲಿ ನೋಡುವಂಥ ಅವಕಾಶವನ್ನು ಕಲ್ಪಿಸುತ್ತಿದೆ.

ನಿನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಜಾಕ್‌ಮಂಜು, ಈ ಆಫ್ ಅನ್ನು ಹೊರತಂದಿರುವ ಆದಿತ್ಯಕಶ್ಯಪ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆದಿತ್ಯ ಕಶ್ಯಪ್ ಮಾತನಾಡುತ್ತ ಪ್ಲೇಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಂಡು ತೆರೆಮೇಲೆ ಯಾವುದೇ ಭಾಷೆ ಪ್ರದರ್ಶನವಾಗುತ್ತಿರಲಿ, ನಾವು ಮೊಬೈಲ್ ನಲ್ಲಿ ನಮ್ಮಿಷ್ಟದ ಭಾಷೆ ಆಯ್ಕೆ ಮಾಡಿಕೊಂಡು ಹೆಡ್ ಫೋನ್ ಮೂಲಕ ಕೇಳುತ್ತ ಚಿತ್ರವನ್ನು ಎಂಜಾಯ್ ಮಾಡಬಹುದು. ಕಳೆದವಾರ ರಿಲೀಸಾದ ತಮಿಳಿನ ರಾಕೆಟ್ರಿ ಚಿತ್ರದ ಜೊತೆ ನಾವು ಟೈಅಪ್ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದಲ್ಲದೆ ಓಟಿಟಿಯಲ್ಲಿ ಬರುವ ಚಿತ್ರಗಳನ್ನೂ ನಮ್ಮ ಭಾಷೆಯಲ್ಲೇ ವೀಕ್ಷಿಸಬಹುದಾಗಿದೆ. ಚಿತ್ರದ ನಿರ್ಮಾಪಕರು ಆಪ್‌ನೊಂದಿಗೆ ಮೊದಲೇ ಟೈಅಪ್ ಮಾಡಿಕೊಂಡಿದ್ದರೆ ಮಾತ್ರವೇ ಅದು ಸಾಧ್ಯವಾಗಲಿದೆ ಎಂದು ವಿವರಿಸಿದರು.

ನಂತರ ನಿರ್ಮಾಪಕ ಜಾಕ್ ಮಂಜು ಮಾತನಾಡುತ್ತ ಇವರು ಒಂದೆರಡು ತಿಂಗಳ ಹಿಂದೆಯೇ ನನ್ನಬಳಿ ಬಂದಿದ್ದರೆ ಬೆಂಗಾಳಿ, ಮರಾಠಿ, ಗುಜರಾತಿ ಭಾಷೆಯಲ್ಲೂ ನಮ್ಮ ಚಿತ್ರವನ್ನು ಡಬ್ ಮಾಡಬಹುದಿತ್ತು. ನಾವು ಡಬ್ ಮಾಡಿದ ಅಷ್ಟೂ ಭಾಷೆಯ ಸೌಂಡ್‌ಟ್ರ‍್ಯಾಕನ್ನು ಇವರಿಗೆ ಕೊಟ್ಟಾಗ ಅವರು ಅದನ್ನು ತಮ್ಮ ಆಪ್‌ಗೆ ಅಳವಡಿಸುತ್ತಾರೆ. ಕೆಲ ಕೇಂದ್ರಗಳಲ್ಲಿ ಎಲ್ಲಾ ಭಾಷೆಯಲ್ಲಿ ರಿಲೀಸ್ ‌ಮಾಡಲು ಸಾಧ್ಯವಾಗದಿದ್ದಾಗ ಆ ಭಾಷೆಯ ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದರು. 27ರಂದು ಪ್ರಪಂಚದ 27 ದೇಶಗಳಲ್ಲಿ ವಿಕ್ರಾಂತ್ ರೋಣ ಪ್ರಿವ್ಯೂ ಆಗುತ್ತಿದೆ. ಜೊತೆಗೆ ದುಬೈನಲ್ಲಿ 5 ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನಿನ್ನೆಯಷ್ಟೇ ನೇಪಾಳ ಕನ್‌ಫರ್ಮ್ ಆಗಿದೆ. ಅಲ್ಲದೆ ಪಾಕಿಸ್ತಾನದಲ್ಲೂ ವಿಕ್ರಾಂತ್‌ರೋಣ ರಿಲೀಸಾಗುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ 3200ರಿಂದ 3500 ಚಿತ್ರಮಂದಿಗಳಲ್ಲಿ ರಿಲೀಸಾಗುತ್ತಿರುವ ವಿಕ್ರಾಂತ್ ರೋಣ, ಕರ್ನಾಟಕದಲ್ಲೇ 400ರಿಂದ 420 ಥೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕಕ್ಕಿಂತ ತೆಲುಗು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ

ಸಿಗುತ್ತಿದೆ. ಇದರ ಜೊತೆಗೆ, ಬಾಲಿವುಡ್‌ನಲ್ಲಿ 900 ಚಿತ್ರಮಂದಿರ, ಟಾಲಿವುಡ್‌ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್, ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಕ್ರಾಂತ್‌ರೋಣ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಶೇಕಡಾ.90 ರಷ್ಟು 3ಡಿ ವರ್ಷನ್ ಚಿತ್ರ ರಿಲೀಸಾಗುತ್ತಿದ್ದು, 3ಡಿ ಇಲ್ಲದ ಕಡೆ ಮಾತ್ರವೇ 2ಡಿ ವರ್ಷನ್ ಪ್ರದರ್ಶನವಾಗಲಿದೆ.