Kidnap – Peepal Media

ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ‘ಕಿಡ್ನಾಪ್’ ಆರೋಪ: ‘FIR’ ದಾಖಲು
ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ಬೆದರಿಕೆಯೊಡ್ಡಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆಂದು ಆರೋಪಿಸಿ ಆರ್ ಆರ್ ನಗರ ಬಿಜೆಪಿ ಶಾಸಕ ಎಂ.ಮುನಿರತ್ನ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಲಕ್ಷ್ಮಿ ದೇವಿನಗರದ ಪೇಂಟರ್ ಸ್ಯಾಮ್ಯುಯೆಲ್ ಎಂಬವರು ಈ ಆರೋಪವನ್ನು ಶಾಸಕರ ಮೇಲೆ ಹೊರಿಸಿದ್ದು, ದೂರುದಾರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮುನಿರತ್ನ ಮತ್ತು ಬೆಂಬಲಿಗರಾದ ಸುರೇಶ್, ವಸಂತ್, ವಾಸಿಂ ಮತ್ತು ಸೀನಾ ಎನ್ನುವವರ ವಿರುದ್ಧ ಅಪಹರಣದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಎರಡು ದಿನಗಳ ಕೆಳಗೆ ಮಾತನಾಡುವ ನೆಪದಲ್ಲಿ ಅವರನ್ನು ಶಾಸಕ ಮುನಿರತ್ನ ಅವರ ಕಚೇರಿಗೆ ಬಲವಂತವಾಗಿ ಶಾಸಕರ ಹಿಂಬಾಲಕರು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಬಿಜೆಪಿ ಸೇರಿಸಿದ್ದಾರೆ ಎಂದು ಸಂತ್ರಸ್ಥ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಶಾಸಕ ಮುನಿರತ್ನ ನಿರಾಕರಿಸಿದ್ದಾರೆ.

ನಾನು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಏ.1ರಂದು ಶಾಸಕ ಮುನಿರತ್ನ ಮಾತನಾಡುವುದಿದೆ ಎಂದು ತಮ್ಮ ಹಿಂಬಾಲಕರಾದ ಸುರೇಶ್, ವಸಂತ್, ವಾಸಿಂ, ಸೀನಾ ಅವರನ್ನು ರಾಜ್‌ಕುಮಾರ್ ಸಮಾಧಿ ಬಳಿ ನನ್ನನ್ನು ಕರೆಸಲು ಕಳಿಸಿದ್ದರು. ಬಳಿಕ ವೈಯಾಲಿಕಾವಲ್‌ನಲ್ಲಿರುವ ಶಾಸಕರ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಶಾಸಕ ಮುನಿರತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ಯಾಮುಯಲ್ ದೂರಿದ್ದಾರೆ.

ವಿದೇಶದಲ್ಲಿ ಭಾರತ ಮೂಲದ ನಾಲ್ವರ ಅಪಹರಣ: ತೋಟದಲ್ಲಿ ಪತ್ತೆಯಾದ ಮೃತದೇಹಗಳು
ಕ್ಯಾಲಿಫೋರ್ನಿಯಾ : ಭಾರತದ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅಮೆರಿಕದ ಕ್ಯಾಲಿಫೋರ್ನಿಯಾದ ಮರ್ಸಿಡ್‌ ನಗರದಲ್ಲಿ ಕಿಡ್ನಾಪ್‌ ಆಗಿದ್ದು, ಇದೀಗ  ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾ ಸ್ಯಾನ್‌ಜೋಕ್ವಿನ್‌ ವ್ಯಾಲಿಯಲ್ಲಿರುವ ಮರ್ಸಿಡ್‌ನಲ್ಲಿ ಸೋಮವಾರದಂದು ಭಾರತ ಮೂಲದ ಒಂದೇ ಕುಟುಂಬದ ನಾಲ್ವರನ್ನು  ಅಪಹರಿಸಲಾಗಿತ್ತು. 8 ತಿಂಗಳ ಮಗು ಅರೂಹಿ ಧೇರಿ ಸೇರಿದಂತೆ ಮಗುವಿನ ಪೋಷಕರು ಮತ್ತು ಸೋದರ ಮಾವನನ್ನು ಅವರ ಉದ್ಯಮದ ಸ್ಥಳದಿಂದ ಕಿಡ್ನಾಪ್‌ ಮಾಡಿದ್ದು, ಮರ್ಸಿಡ್‌ ಕೌಂಟಿಯ ತೋಟದಲ್ಲಿ 4 ಜನರ ಮೃತ ದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಿಡ್ನಾಪ್‌ ಮಾಡಿದ್ದ ವ್ಯಕ್ತಿಯ ಕಣ್ಗಾಗಳು ವೀಡಿಯೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದು, ಹಣಕಾಸಿನ ವ್ಯವಹಾರಕ್ಕೆ ಈ ಕೊಲೆ ಮಾಡಿರಬಹದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

8 ತಿಂಗಳ ಮಗು ಅರೂಹಿ ಧೇರಿ, ಮಗುವಿನ ತಂದೆ ಜಶದೀಪ್‌ ಸಿಂಗ್‌(36) ತಾಯಿ ಜಸ್ಲೀನ್‌ ಕೌರ್‌(27) ಮತ್ತು ಸೋದರಮಾವ ಅಮನ್‌ ದೀಪ್‌ ಸಿಂಗ್‌(39) ನಾಲ್ಕೂ ಜನ ಕೊಲೆಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ‘ಕಾಂತಾರ’ ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು

‘ಕಾಂತಾರ’ ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು

ಕಾಲೇಜು ಶುಲ್ಕ ಪಾವತಿಸಲು ಹಣದ ಕೊರತೆ: ಬಾಲಕನನ್ನು ಕಿಡ್ನ್ಯಾಪ್‌ ಮಾಡಿದ ಯುವಕರು
ಬೆಂಗಳೂರು : ಹಣದ ಸಮಸ್ಯೆಯಿಂದ ಕಾಲೇಜು ಶುಲ್ಕ ಕಟ್ಟಲು ಆಗದೆ ಬಾಲಕನನ್ನು ಕಿಡ್ನಾಪ್‌ ಮಾಡಿ ಹಣ ಸುಲಿಗೆ ಮಾಡಿದವರನ್ನು ಸಂಪಿಗೆಹಳ್ಳಿ ಪೋಲೀಸರು ಬಂಧಿಸಿದ್ದಾರೆ.

ಗುಡಿಬಂಡೆಯ ಸುನಿಲ್ ಕುಮಾರ್‌(23) ಮತ್ತು ಚಿಕ್ಕಬಳ್ಳಾಪುರದ ಮಂಡಿಕಲ್‌ನ ವೈ ವಿ ನಾಗೇಶ್‌ ಎಂಬುವವರು ಕಾಲೇಜು ಶುಲ್ಕ ಕಟ್ಟಲು ಹಣವಿಲ್ಲದೆ, ಮಾನ್ಯತಾ ಲೇಔಟ್‌ನಲ್ಲಿ ವಾಸವಿದ್ದ ಖಾಸಗಿ ಕಂಪನಿಯ ಮ್ಯಾನೇಜರ್‌ ರಮೇಶ್‌ ಬಾಬು ಅವರ 14 ವರ್ಷದ ಭವೇಶ್‌ನನ್ನು ಕಿಡ್ನಾಪ್‌ ಮಾಡಿದ್ದು, ಪೋಷಕರಿಂದ 15 ಲಕ್ಷರೂ ಪಡೆದು ಮಗನನ್ನು ಜೀವಂತವಾಗಿ ಮನೆಗೆ ಕಳುಹಿಸಿದ್ದಾರೆ. ಮಗ ಮನೆಗೆ ಬಂದ ನಂತರ ಪೋಲೀಸರಿಗೆ ಕಿಡ್ನಾಪ್‌ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಮಾಡಿದ ಪೋಲೀಸರು ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್‌ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಹಿನ್ನಲೆ: 14 ವರ್ಷದ ಮಗ ಒಬ್ಬನೇ ತಳಮಹಡಿಯ ಕೋಣೆಯಲ್ಲಿ ಮಲಗುತ್ತಿದ್ದುದ್ದನ್ನು ನೋಡಿದ ಯುವಕರು ಸೆಪ್ಟಂಬರ್‌ 2 ರಂದು ಮಾಸ್ಕ್‌ ಧರಿಸಿ ಬಂದು ಬಾಗಿಲು ಬಡಿದಿದ್ದಾರೆ. ಭವೇಶ್‌ನನ್ನು ಹೆದರಿಸಿದ ದುಷ್ಕರ್ಮಿಗಳು ತಂದೆಯ ಕಾರಿನ ಕೀ ಪಡೆದು ಅದೇ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿಕೊಂಡು ಪರಾರಿಯಾಗಿದ್ದಾರೆ. ಮಾರನೇ ದಿನ ಭವೇಶ್‌ ಮೊಬೈಲ್‌ನಿಂದ ಕರೆ ಮಾಡಿ 15 ಲಕ್ಷ ರೂ ನೀಡಬೇಕು, ಇಲ್ಲದಿದ್ದರೆ ಮಗನನ್ನು ಸಾಯಿಸುವಂತೆ ಬ್ಲಾಕ್‌ಮೇಲ್‌ ಮಾಡಿದ್ದಾರೆ. ಇದರಿಂದ ಹೆದರಿದ ಪೋಷಕರು ದುಷ್ಕರ್ಮಿಗಳ ಸೂಚನೆಯಂತೆ 15 ಲಕ್ಷ ರೂಗಳನ್ನು ಬ್ಯಾಗ್‌ನಲ್ಲಿಟ್ಟು ನೆಲಮಂಗಲ ಸಮೀಪದ ರೈಲ್ವೇ ಟ್ರ್ಯಾಕ್‌ ಬಳಿ ಇಟ್ಟು ತನ್ನ ಮಗನನ್ನು ಸುರಕ್ಷಿತವಾಗಿ ಮನೆಗೆ ಕರೆದು ಕೊಂಡಿದ್ದಾರೆ.

ಘಟನೆಯ ನಂತರ ಭವೇಶ್‌ನ ತಂದೆ ರಮೇಶ್‌ ಸಂಪಿಗೆಹಳ್ಳಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ ಪೋಲೀಸರು ಕಿಡ್ನ್ಯಾಪ್‌ ಮಾಡಿದ್ದ ಮನೆಯ ಸಮೀಪದ ಸಿಸಿಟಿವಿ ದೃಶ್ಯಾವಳಿ ಮುಖಾಂತರ ಮತ್ತಿತರ ಮಾಹಿತಿಗಳನ್ನು ಆಧರಿಸಿ ಯಲಹಂಕದಲ್ಲಿ ವಾಸವಿದ್ದ ಸುನಿಲ್‌ಕುಮಾರ್‌ ಮತ್ತು ನಾಗೇಶ್‌ ಅವರನ್ನು ಬಂಧಿಸಿದ್ದಾರೆ.

ಈ ಕುರಿತು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು,  ಅವರು ಕದ್ದಿದ್ದ ಒಂದು ಕಾರು, 9.69 ಲಕ್ಷ ರೂ ನಗದು, ಎರಡು ಬೈಕ್‌ ಮತ್ತು ಒಂದು ಕ್ಯಾಮೆರವನ್ನು ವಶಪಡಿಸಿಕೊಂಡಿಸಿದ್ದಾರೆ. ಕಾಲೇಜು ಶುಲ್ಕ ಪಾವತಿಸಲು ಹಣ ಹೊಂದಿಸುವುದಕ್ಕಾಗಿ ಕಿಡ್ನ್ಯಾಪ್‌ ಕೃತ್ಯ ಎಸಗಿದ್ದಾಗಿ ಬಂಧಿತ ಸುನಿಲ್‌ ಕುಮಾರ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೋಲೀಸ್‌ ಅಧಿಕಾರಿಗಳು ಹೇಳಿದರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನು ನೋಡಿ: ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್‌ ರಾಥೋಡ್‌ ಅವರ ವಿಶ್ಲೇಷಣೆ ಇಲ್ಲಿದೆ.

15 ಲಕ್ಷ ರೂ ಸುಲಿಗೆ: ಇಬ್ಬರು ಅಪಹರಣಕಾರರ ಬಂಧನ
ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿ ವ್ಯವಸ್ಥಾಕರ 14 ನೇ ವರ್ಷದ ಪುತ್ರನನ್ನು ಅಪಹರಿಸಿ 15 ಲಕ್ಷ ರೂ, ಸುಲಿಗೆ ಮಾಡಿದ್ದ ಇಬ್ಬರು ಅಪಹರಣಕಾರರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿ ಬಂಡೆಯ ಸುನಿಲ್‌ಕುಮಾರ್‌ (23) ಹಾಗೂ ಮಂಡಿಕಲ್‌ನ ವೈ.ವಿ.ನಾಗೇಶ್‌ ಎಂದು ತಿಳಿದು ಬಂದಿದೆ.

ನಾಗೇಶ್‌

ಸುನೀಲ್‌

ಪೊಲೀಸ್‌ ಮೂಲಗಳ ಪ್ರಕಾರ, ಅಪಹರಣಕಾರರು ಎಂ.ಡಿ. ಪುತ್ರನನ್ನು ಸಿನಿಮಾ ಶೈಲಿಯಲ್ಲಿ ಅಪಹರಿಸಿರುವುದಾಗಿ ತಿಳಿದು ಬಂದಿದ್ದು, ಡಿಸೆಪ್ಟೆಂಬರ್‌ 2 ರಂದು ಮಾನ್ಯತಾ ಟೆಕ್‌ಪಾರ್ಕ್‌ನ ಮಾನ್ಯತಾ ರೆಸಿಡೆನ್ಸಿಯಲ್ಲಿ ನೆಲೆಸಿದ್ದ ಎಂ.ಡಿ. ಮನೆಯವರನ್ನು ಭಯಬೀತಗೊಳಿಸಿ ಎಂ.ಡಿ. ಅವರ ಎದುರು ನಿಲುಗಡೆ ಮಾಡಿದ್ದ ಕಾರಿನ ಕೀಯನ್ನೇ ತೆಗೆದುಕೊಂಡು, ಆ ಕಾರಿನಲ್ಲೇ ಬಾಲಕರನ್ನು ಅಪಹರಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಪಹರಣಕಾರರು ದಾಬಸ್‌ಪೇಟೆಯಿಂದ ಕರೆ ಮಾಡಿ, 15 ಲಕ್ಷ ಬೇಡಿಕೆಯಿಟ್ಟಿದ್ದು, ಹಣಕೊಡದಿದ್ದರೆ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಅಪಹರಣಕಾರರು ತಾವುಗಳು ಇರುವ ಸ್ಥಳಕ್ಕೆ ಕರೆಸಿಕೊಂಡು 15 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ತದನಂತರ ಬಾಲಕನ್ನು ಹಸ್ತಾಂತರಿಸಿ ಕಣ್ಮರೆಯಾಗಿದ್ದರು.

ಈ ಹಿನ್ನಲೆ ಆರೋಪಿಗಳ ಪತ್ತೆಹಚ್ಚಲು ಈಶಾನ್ಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನಂತರ ಕಾರ್ಯಚರಣೆ ನಡೆಸಿದ ತಂಡವು ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್‌ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದೆ. ಅಷ್ಟರಲ್ಲೇ ಅಪಹರಣಕಾರು ಕೆಟಿಎಂ ಬೈಕ್‌, ಕೆನಾನ್‌ ಕ್ಯಾಮರ, ಪ್ಯಾಷನ್‌ ಪ್ರೊ ಬೈಕ್‌ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಬಂಧಿತರಿಂದ ಬೈಕ್‌, ಕ್ಯಾಮರ ಸೇರಿದಂತೆ 9 ಲಕ್ಷ ರೂ ನಗದು ಹಣ ಹಾಗೂ ಬಾಲಕನ ಅಪಹರಣಕ್ಕೆ ಬಳಸಿದ್ದ ಕ್ರೆಟಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಉದ್ಯಮಿ ಪುತ್ರನನ್ನು ಅಪಹರಸಿ 25 ಲಕ್ಷ ಸುಲಿಗೆ : ಇಬ್ಬರು ಬಂಧನ
ಬೆಂಗಳೂರು: ಗುತ್ತಿಗೆದಾರ ಹಾಗೂ ಉದ್ಯಮಿ ರವಿ ಅವರ ಪುತ್ರ ಸೂರಜ್‌ ಎಂಬಾತನನ್ನು ಅಪಹರಿಸಿ 25 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ಬ. ನಿಂಬರಗಿ, ಬಂಧಿತ ಆರೋಪಿಗಳಿಂದ 20 ಲಕ್ಷ ನಗದು ಹಣ ಸೇರಿದಂತೆ ಏರ್‌ಗನ್‌ ವಶಕ್ಕೆ ಪಡೆಯಲಾಗಿದೆ, ಆರೋಪಿಗಳು ಪುಷ್ಪಾ (30) ಮತ್ತು ರಾಕೇಶ್‌ (27) ಎಂದು ತಿಳಿದು ಬಂದಿದ್ದು, ಪುಷ್ಪ ಎಂಬುವರು ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ (ಸ್ಯಾಟಲೈಟ್‌ ಬಸ್‌ ನಿಲ್ದಾಣ) ಎ.ಪಿ.ಜೆ ಅಬ್ದುಲ್‌ ಕಲಾಂ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷೆ ಯಾಗಿದ್ದು , ಆಕೆಯ ಸಂಬಂಧಿ ರಾಕೇಶ್‌, ಮೈಸೂರು ರಸ್ತೆಯ ಶಾರದಾ ಶಾಲೆ ಬಳಿ ನಿವಾಸಿ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಅರ್ಜುನ್‌ ಹಾಗೂ ಸಂತೋಷ್‌ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ತಿಳಿಸಿದರು.