kodagu – Peepal Media

ಕೊಡಗಿನಲ್ಲಿ ಪತ್ತೆಯಾದ 9 ನೇ ಶತಮಾನದ 69 ಶಾಸನಗಳ ನಕಲು ಕಾರ್ಯ ಪೂರ್ಣ
ಮಡಿಕೇರಿ: ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾದ ಶಿಲಾ ಶಾಸನಗಳನ್ನು ನಕಲು ಮಾಡುವ ಕೆಲಸ ಇದೀಗ ಪೂರ್ಣಗೊಂಡಿದೆ.

2023 ರಲ್ಲಿ ಪ್ರಾರಂಭವಾದ ಸಮೀಕ್ಷೆಯಲ್ಲಿ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ಬಿಪಿ ರೇಖಾ ಅವರು ಈ ಶಾಸನಗಳ ಪತ್ತೆಯನ್ನು ಬಿಎಲ್ ರೈಸ್ ನಂತರ ಕೊಡಗಿನಲ್ಲಿ ನಡೆದ ಅತಿದೊಡ್ಡ ಕಾರ್ಯ ಎಂದು ಕರೆದಿದ್ದಾರೆ.

ಬಿಎಲ್ ರೈಸ್ ಅವರು ಕೊಡಗಿನಲ್ಲಿ ದೊರೆತ 114 ಶಿಲಾ ಚಪ್ಪಡಿ ಶಾಸನಗಳ ಪ್ರತಿಲೇಖನವನ್ನು 1886 ರಲ್ಲಿ ‘ಎಪಿಗ್ರಾಫಿಯಾ ಕರ್ನಾಟಕ’ದಲ್ಲಿ ಪ್ರಕಟಿಸಿದ್ದರು. ಬಿ.ಪಿ.ರೇಖಾ ಅವರು ಇತ್ತೀಚೆಗೆ 69 ಶಾಸನಗಳನ್ನು ಕಂಡುಕೊಂಡಿದ್ದಾರೆ.

ಮೈಸೂರಿನ ಶಾಸನ ತಜ್ಞ ಎಚ್.ಎಂ.ನಾಗರಾಜರಾವ್ ಅವರು ಶಾಸನಗಳ ಪ್ರತಿಲೇಖನವನ್ನು ಸಿದ್ಧಪಡಿಸಿದ್ದು, ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಉದಾಹರಣೆಗೆ ಕ್ರಿ.ಶ.9ನೇ ಶತಮಾನಕ್ಕೆ ಸೇರಿದ ನಿಲುವಾಗಿಲು ಗ್ರಾಮದಲ್ಲಿ ದೊರೆತಿರುವ ಶಾಸನದಲ್ಲಿ ಇಂದು ಕಾಣಸಿಗದ ವಾಸಂತಿ ದೇವಾಲಯದ ಬಗ್ಗೆ ಉಲ್ಲೇಖವಿದೆ.

9 ನೇ ಶತಮಾನದ ಎಡವಾರೆ ಗ್ರಾಮದಲ್ಲಿ ಕಂಡುಬರುವ ಮತ್ತೊಂದು ಶಾಸನದಲ್ಲಿ, ಸ್ವರ್ಗಕ್ಕೆ ಏರಿದ ವೆಂಡಿ ಎಂಬ ವ್ಯಕ್ತಿಯ ಬಗ್ಗೆ ಉಲ್ಲೇಖವಿದೆ. ಅವನನ್ನು ‘ಕಲಿಯುಗದ ಬ್ರಹ್ಮ’ ಎಂದು ಶಾಸನವು ಉಲ್ಲೇಖಿಸುತ್ತದೆ.

ಕನಕಸೇನಯ್ಯ ಎಂಬ ವ್ಯಕ್ತಿ ತನ್ನ ಗುರುವಿನ ಸ್ಮರಣಾರ್ಥ ವಿರಾಜಪೇಟೆಯ ಕಡು ಎಂಬಲ್ಲಿ ‘ನಿಶಿಧಿ’ ಶಾಸನವನ್ನು ಸ್ಥಾಪಿಸಿದ್ದ. ಹೀಗೆ ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ಶಾಸನಗಳಿವೆ.

ಕ್ರಿ.ಶ. 11-12 ನೇ ಶತಮಾನದಷ್ಟು ಹಿಂದಿನ ಶಿರಂಗಾಲದಲ್ಲಿ ಪತ್ತೆಯಾದ ಶಾಸನವು ಆ ಪ್ರದೇಶವನ್ನು ‘ಸಿರಿವಂಗಲ’ ಎಂದು ಉಲ್ಲೇಖಿಸುತ್ತದೆ. ಅಲ್ಲದೆ, ಕಾವೇರಿ ನದಿ ಮತ್ತು ಸಿರಿಯಮ್ಮ ಮತ್ತು ಕಾವ ಗೌಡ ಎಂಬ ವ್ಯಕ್ತಿಗಳ ಉಲ್ಲೇಖಗಳಿವೆ.

ಕೆಲವು ಶಾಸನಗಳು ಕ್ರಿ.ಶ.8ನೇ ಶತಮಾನದಷ್ಟು ಹಿಂದಿನವು. ರಾಜೇಂದ್ರ ಚೋಳನಿಗೆ ಸಂಬಂಧಿಸಿದ ಶಾಸನವೊಂದು ಸೀಗೆಹೊಸೂರಿನಲ್ಲಿ ದೊರೆತಿದ್ದು, ಇದು ಕೊಡಗಿನವರೆಗೆ ಅರಸರ ಸಾಮ್ರಾಜ್ಯ ವಿಸ್ತರಿಸಿತ್ತು ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ.

ಮೃತ್ಯುಂಜಯ ದೇವಸ್ಥಾನದಲ್ಲಿ ಒಂದು ಶಾಸನವು ಕಂಡುಬಂದಿದ್ದು, ಇದು ‘ವಂಗಲ’ ಸ್ಥಳವನ್ನು ಉಲ್ಲೇಖಿಸುತ್ತದೆ. ಬಸವನಹಳ್ಳಿಯ ಮತ್ತೊಂದು ಅಪರೂಪದ ಶಾಸನದಲ್ಲಿ ಕೊಂಗಾಳ್ವದ ಬಡಿವರ ಉಲ್ಲೇಖವಿದೆ. ಇದು ಕೊಂಗಾಳ್ವರ ಬಗ್ಗೆ ಲಭ್ಯವಿರುವ ಅಪರೂಪದ ಶಾಸನವಾಗಿದೆ.

69 ಶಾಸನಗಳ ನಕಲು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬಿ.ಪಿ.ರೇಖಾ ತಿಳಿಸಿದರು. ಇವುಗಳ ವಿವರವಾದ ಅಧ್ಯಯನವು ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲುತ್ತದೆ.

ರಘುಪತಿ ಭಟ್ ಉಚ್ಚಾಟನೆ: ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಸಂಸದ ಪ್ರತಾಪ ಸಿಂಹ
​ಮೈಸೂರು:  ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಉಚ್ಚಾಟನೆ ಮಾಡಿರುವುದಕ್ಕೆ ಬಿಜೆಪಿ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬರುತ್ತಿದ್ದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್‌ ಒಳ್ಳೆಯ ಹೋರಾಟ ರೂಪಿಸಿದ್ದರು. ಅವರಿಗೆ ಎಂಎಲ್ಎ ಟಿಕೆಟ್ಟೂ ಸಿಗಲಿಲ್ಲ, ಎಂಎಲ್‌ಸಿ ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಚಾಟನೆ ಮಾಡಿರುವುದು ಸರಿಯೇ?  ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ’ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ವಿಧಾನ ಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಘುಪತಿ ಭಟ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಬಿಜೆಪಿ ಮುಖಂಡರು ಅವರ ಮೇಲೆ ಮುನಿಸಿಕೊಂಡಿದ್ದರು.

ಈ ಸಂಬಂಧ ನೋಟಿಸ್‌ ನೀಡಿದ್ದ ರಾಜ್ಯ ಬಿಜೆಪಿ ಶಿಸ್ತು ಸಮಿತಿ, ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದಂತಾಗಿದೆ ಎಂದು ಆರೋಪಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಆಲಿಯಾ ಗೇಲಿ:

ರಘುಪತಿ ಭಟ್‌ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಕುರಿತು ಆಲಿಯಾ ಅಸ್ಸಾದಿ ತಮ್ಮ ಎಕ್ಸ್‌ ಖಾತೆಯಲ್ಲಿ  ಗೇಲಿ ಮಾಡಿದ್ದರು. ಯಾವ ತಪ್ಪು ಮಾಡದ ನನ್ನನ್ನು ಕಾಲೇಜು ಮಂಡಳಿ ಹೊರಹಾಕುವಂತೆ ಮಾಡಿದ್ದರು. ದೇವರು ಅವರಿಗೆ ಸರಿಯಾಗಿಯೇ ಮಾಡಿದ್ದಾನೆ ಎಂದು ಬರೆದುಕೊಂಡಿದ್ದರು.

ಎ ವಾರ್ಷಿಕ ಪರೀಕ್ಷೆಗೆ 60 ದಿನಗಳು ಬಾಕಿ ಇರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ತೋರಿಸಿದ್ದರಲ್ಲವೇ. ಆದರೆ, ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ಇದ್ದುಕೊಂಡೆ ನೋಡುವಂತಾಯಿತು ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು.

ಪ್ರತಾಪ್‌ ಸಿಂಗ್‌ ಅವರಿಗೆ ಬಿಜೆಪಿಯು ಕಟ್ಟರ್‌ ಹಿಂದುತ್ವವಾದಿಗಳು ಎನಿಸಿಕೊಂಡಿದ್ದ ತನಗೆ ಮತ್ತು ತನ್ನಂಥ ಈಶ್ವರಪ್ಪ ಅವರಿಗೆ, ಸಿ.ಟಿ. ರವಿ ಅವರಿಗೆ ಮತ್ತು ನಳೀನ್‌ ಕುಮಾರ್‌ ಅವರಿಗೆ ಲೊಕಸಭೆ ಚುನಾವಣೆಗೆ ಟಿಕೇಟ್‌ ನೀಡದಿರುವುದು ಮತ್ತು ಆಲಿಯಾ ಗೇಲಿ ಮಾಡಿರುವುದು ಸಂಸದ ಪ್ರತಾಪ್‌ ಸಿಂಹ್‌ ಅವರಿಗೆ ಬೇಸರ ತರಿಸಿದೆ. ಅವರು ಈಗ ಬಿಜೆಪಿ ವಿರುದ್ಧವೇ ಅಸಮಾಧಾನ ಹೊರಹಾಕಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಡಿಕೇರಿಯಲ್ಲಿ ಗುಡ್ಡ ಕುಸಿತ : ಸ್ಥಳದಲ್ಲೇ ಮೂವರು ಕಾರ್ಮಿಕರ ಸಾ*ವು
ಕೊಡಗು ಜಿಲ್ಲೆಯ ಮಡಿಕೇರಿ ರೆಡ್ ಕ್ರಾಸ್ ಸಭಾಂಗಣದ ಹತ್ತಿರ ಭೀಕರ ದುರಂತ ನಡೆದಿದೆ. ಮಡಿಕೇರಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ರೆಡ್​ಕ್ರಾಸ್ ಸಭಾಂಗಣ ಬಳಿ ಅನಿರೀಕ್ಷಿತವಾಗಿ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ದಿಢೀರ್ ಗುಡ್ಡ ಕುಸಿದ ಪರಿಣಾಮ, ಅದರಡಿ ಮೂವರು ಸಿಲುಕಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಸ್ಥಳೀಯರು ಮೂವರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಇಬ್ಬರು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನೋರ್ವ ಕಾರ್ಮಿಕ ರಕ್ಷಣಾ ಕಾರ್ಯದ ನಂತರ ಸಾವನ್ನಪ್ಪಿದ್ದಾರೆ.

ಮೃತ ಕಾರ್ಮಿಕರನ್ನು ಹುಬ್ಬಳ್ಳಿ ಮೂಲದ ಬಸವ, ಲಿಂಗಪ್ಪ ಮತ್ತು ಆನಂದ್ ಎಂಬುದಾಗಿ ಗುರುತಿಸಲಾಗಿದೆ.

ಮಣ್ಣಿನಡಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ತೀವ್ರಗತಿಯಲ್ಲಿ ಸಾಗಿದರೂ ಇಬ್ಬರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆದರೆ ಗಂಭೀರ ಗಾಯಗೊಂಡ ಒಬ್ಬರ ರಕ್ಷಣಾ ಕಾರ್ಯ ನಡೆದರೂ ಕೊನೆಯ ಹಂತದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಇನ್ನೊರ್ವ ಕಾರ್ಮಿಕನೂ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್, ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ವಾರದ ಆಸುಪಾಸಿನಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ
ಕೊಡಗು : ಕಾಡಾನೆ ದಾಳಿಗೆ ಸಕಲೇಶಪುರದ ‘ಆನೆ ವೆಂಕಟೇಶ್’ ಮೃತಪಟ್ಟ ಸುದ್ದಿಯ ಬೆನ್ನಲ್ಲೇ ಮಡಿಕೇರಿಯಲ್ಲಿ ಮತ್ತೊಂದು ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಶುಂಠಿಕೊಪ್ಪದಲ್ಲಿ ನಡೆದ ಆನೆ ದಾಳಿಗೆ ಸಂಬಂಧಿಸಿದಂತೆ ನಡೆದ ಕಾರ್ಯಾಚರಣೆಯಲ್ಲಿ ಈ ದಾಳಿ ನಡೆದಿದೆ.

ಸೋಮವಾರ ಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬೈಕ್ ನಿಂದು ಬಿದ್ದು ವ್ಯಕ್ತಿಗೆ ಗಾಯವಾಗಿತ್ತು. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಅದೇ ಕಾಡಾನೆ ಮತ್ತೊಮ್ಮೆ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಆನೆಯನ್ನು ಓಡಿಸುವ ಸಲುವಾಗಿ ಬೆಳಗ್ಗಿನಿಂದಲೇ ಅರಣ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಈ ತಂಡದಲ್ಲಿಆರ್ ಆರ್ ಟಿ ಸಿಬ್ಬಂದಿ ಗಿರೀಶ್(35) ಕೂಡ ಇದ್ದರು. ಆನೆಯನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಕಾಡಾನೆ ಗಿರೀಶ್ ಅವರ ಮೇಲೆ ಎರಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಕಳೆದ ಹಲವು ವರ್ಷಗಳಿಂದ ಆನೆಕಾಡು ಆರ್ ಆರ್ ಟಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

96ನೇ ದಿನಕ್ಕೆ ಕಾಲಿಟ್ಟ ಮಾಯಾಮುಡಿಯ ನಿರಂತರ ಅಹೋರಾತ್ರಿ ಸತ್ಯಾಗ್ರಹ
ಕೊಡಗು : ಕೊಡಗಿನ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರು ತಮ್ಮ ನಿವೇಶನ ಹಕ್ಕು ಪತ್ರಕ್ಕಾಗಿ ಸುಮಾರು 96 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಬಂದು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು ಯಾವೊಬ್ಬ ಅಧಿಕಾರಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲದರಿಂದ  ಪ್ರತಿಭಟನಾಕಾರರೆಲ್ಲಾ ಸೇರಿ ಪೊನ್ನಂಪೇಟೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸುತ್ತಲೇ ಬಂದ ಲೈನ್‌ಮನೆವಾಸಿಯಾದ ಜ್ಯೋತಿ ಎಂಬುವವರು, ʼ ನಮಗೆ ಈ ಲೈನ್‌ಮನೆಗಳಲ್ಲಿ ವಾಸಿಸಲು ತುಂಬಾ ಕಷ್ಟವಾಗುತ್ತಿದೆ. ಯಾವುದಕ್ಕೂ ನಮಗೆ ಸ್ವಾತಂತ್ರ್ಯವಿಲ್ಲ. ಇವರು ಕೊಡುವ 150 ರೂ ಗಳಿಗೆ ನಮ್ಮ ಮಕ್ಕಳಿಗೆ ಶಾಲೆಗೆ ಕಳಿಸಲು ಆಗುತ್ತಿಲ್ಲ. ಹಬ್ಬ ಹರಿದಿನಗಳು ಮಾಡಬೇಕಾದರೂ ಮಾಲಿಕರನ್ನು ಕೇಳಬೇಕುʼ ಎಂದು ತಮ್ಮ ಅಸಹಾಯಕತೆಯನ್ನು ಪೀಪಲ್‌ ಮೀಡಿಯಾದೊಂದಿಗೆ ಹಂಚಿಕೊಂಡರು.

ಈ ನಿರಂತರ ಹೋರಾಟಕ್ಕೆ ನವೆಂಬರ್‌ 4ರಂದು  ಮಾಯಮುಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ 94 ದಿನಗಳು ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಕಛೇರಿ ಎದುರು 81 ನೇ ದಿನಗಳು ಮುಗಿದಿತ್ತು. ಆದ್ದರಿಂದ ಪ್ರತಿಭಟನಾಕಾರರೆಲ್ಲಾ ಸೇರಿ ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಕಛೇರಿ ಯಿಂದ ಪೊನ್ನಂಪೇಟೆ ತಹಶೀಲ್ದಾರ್ ಕಛೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ಹಕ್ಕುಪತ್ರಕ್ಕಾಗಿ ಮನವಿ ಮಾಡಿದ್ದರು. ನೆನ್ನೆ ವಿರಾಜಪೇಟೆ ತಾಲ್ಲೂಕು ಪಂಚಾಯಿತಿಗೆ ಹೋಗಿ ಮಾತನಾಡಿದ್ದಾರೆ. ಆದರೆ ಕೆಲಸ ಆಗುತ್ತೆ ಅಂತ ಹೇಳುತ್ತಾರೆಯೇ ಹೊರತು ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಲ್ಲಿನ ಒಬ್ಬ ಪ್ರತಿಭಟನಾಕಾರರು ಮಾತನಾಡಿದ್ದಾರೆ.

ಕೊಡಗಿನಲ್ಲಿ ಬೀಡುಬಿಟ್ಟಿರುವ ಹುಲಿಗಳ ಸೆರೆಗೆ ಅರಣ್ಯಾಧಿಕಾರಿಗಳ ಕೂಂಬಿಂಗ್ ಕಾರ್ಯಾಚರಣೆ ಆರಂಭ
ಮಡಿಕೇರಿ: ಇತ್ತೀಚೆಗಷ್ಟೇ ಕರ್ನಾಟಕದ ದಕ್ಷಿಣ ಕೊಡಗು ಜಿಲ್ಲೆಯ ಹರಿಹರ ಗ್ರಾಮದಲ್ಲಿ ಎರಡು ಕಾಡೆಮ್ಮೆಗಳ ಮೇಲೆ ಹುಲಿಗಳು ದಾಳಿ ಮಾಡಿ ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.

ಹುಲಿಯನ್ನು ಸೆರೆಹಿಡಿಯಲು ಅಧಿಕಾರಿಗಳು ಎರಡು ಸ್ಥಳಗಳಲ್ಲಿ ಪಂಜರಗಳನ್ನು ಅಳವಡಿಸಿದ್ದಾರೆ ಮತ್ತು ಹುಲಿಗಳ ಚಲನವಲನವನ್ನು ಪರಿಶೀಲಿಸಲು ಕ್ಯಾಮೆರಾ ಟ್ರ್ಯಾಪ್ ಅನ್ನು ಅಳವಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ (TOI) ವರದಿ ಮಾಡಿದೆ.

ಮಾಹಿತಿ ಪ್ರಕಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೆಲವು ಹುಲಿಗಳು ಆಹಾರ ಅರಸಿ ಗ್ರಾಮದತ್ತ ಹೊರಟಿದ್ದು, ಈ ಭಾಗದ ಶ್ರೀಮಂಗಲ, ಹುದಿಕೇರಿ ಮತ್ತು ಬಾಳೆಲೆ ಗ್ರಾಮಗಳ ಕಾಫಿ ತೋಟಗಳಲ್ಲಿ ಸುಮಾರು 7 ರಿಂದ 10 ವರ್ಷದ ಮೂರು ಹುಲಿಗಳು ಕಾಣಿಸಿಕೊಂಡಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹರಿಹರ ಗ್ರಾಮದಲ್ಲಿ ಹಾಕಲಾಗಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಹುಲಿಯ ಚಿತ್ರವೂ ಸೆರೆಯಾಗಿದೆ.

ಈ ಕುರಿತು ರೈತ ಸಂಘದ ಸದಸ್ಯ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹುಲಿಗಳು ಈ ಭಾಗದಲ್ಲಿ ಬೀಡು ಬಿಡುತ್ತವೆ. ಆದಾಗ್ಯೂ, ಈ ವರ್ಷ, ಹುಲಿಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ ಎಂದು ಹೇಳಿದರು.

ಈ ಕಾರಣ ಬೋಪಯ್ಯ ಅವರು ಹುಲಿಯನ್ನು ಹಿಡಿಯಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್.ಎನ್.ಮೂರ್ತಿ ಹಾಗೂ ವಿರಾಜಪೇಟೆ ಡಿಸಿಎಫ್ ಚಕ್ರಪಾಣಿ ಗ್ರಾಮಕ್ಕೆ ಭೇಟಿ ನೀಡಿದ್ದು, ಶೀಘ್ರವೇ ಕಾಡು ಹುಲಿಯನ್ನು ಹಿಡಿಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಿವಾಸಿಗಳಿಗೆ ಭರವಸೆ ನೀಡಿದರು ಹಾಗೂ  ಇಲಾಖೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

15 ದಿನಗಳ ಹಿಂದೆ ಬಾಳೆಲೆ ಗ್ರಾಮದ ಬೊಮ್ಮಡು ಗಿರಿಜನ ಕಾಲೋನಿಯಲ್ಲಿ ಹುಲಿ ಕಾರ್ಮಿಕನೊಬ್ಬನನ್ನು ಕೊಂದಿತ್ತು. ಇದರ ಬೆನ್ನಲ್ಲೇ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರಿದಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಬುಡಕಟ್ಟು ಕಾರ್ಮಿಕರ ನಂಬಿಕೆ ಹುಸಿ ಮಾಡುತ್ತಿರುವ ಶಾಸಕರು
ಕೊಡಗು : ಕೊಡಗಿನ ಲೈನ್ ಮನೆ ವಾಸಿಗಳು ನಿವೇಶನ ಹಕ್ಕು ಪತ್ರಕ್ಕಾಗಿ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಗೊಂಡು ಸುಮಾರು ದಿನಗಳೇ ಆಗಿವೆ. ಪ್ರತಿಭಟನೆ ಶುರುವಾಗಿ ಇವತ್ತಿಗೆ 37 ದಿನಗಳು ಕಳೆದಿವೆ. ಮಾಯಾಮುಡಿ ಗ್ರಾಮ ಪಂಚಾಯಿತಿಯಲ್ಲಿ ಶುರುವಾದ ಈ ಸತ್ಯಾಗ್ರಹ ತಾಲ್ಲೂಕು ಪಂಚಾಯಿತಿಗಳಲ್ಲೂ ಶುರುವಾಗಿ ಮುಂದುವರೆಯುತ್ತಿದೆ.

ಅಷ್ಟು ದಿನಗಳಿಂದ ಅಲ್ಲಿನ ಯಾವೊಬ್ಬ ಶಾಸಕರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನೆನ್ನೆಯ ದಿನ ದಿನಾಂಕ : 05-09-2022 ರಂದು  ಅಲ್ಲಿನ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಶಾಸಕರಾದ ಕೆ.ಜಿ ಬೋಪಯ್ಯ ರವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಶಾಸಕ  ಕೆ.ಜಿ ಬೋಪಯ್ಯ ಪ್ರತಿಭಟನಾಕಾರರೊಂದಿಗೆ ಮಾತನಾಡುತ್ತಿರುವ ದೃಶ್ಯ

ಈ ಕುರಿತು ಬುಡಕಟ್ಟು ಕಾರ್ಮಿಕರೊಂದಿಗೆ ಮಾತನಾಡಿದ ಅವರು.  ನಿಮ್ಮ ಈ ಹೋರಾಟ ಕಾರ್ಯರೂಪಕ್ಕೆ ಬರಲು ಇನ್ನೂ ಸ್ವಲ್ಪ ತಡವಾಗುತ್ತೆ. ನಮಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 2 ತಿಂಗಳ ಕಾಲಾವಕಾಶ ಬೇಕಾಗಿದೆ. ಈಗ ಸದ್ಯಕ್ಕೆ ಪ್ರತಿಭಟನೆಯನ್ನು ಕೈಬಿಡುವಂತೆ ಹೇಳಿದ್ದಾರೆ. ಹೀಗಾಗಿ ಲೈನ್ ಮನೆ ವಾಸಿಗಳು ಸರ್ಕಾರದ ಮೇಲೆ ಇಟ್ಟಿದ್ದ ಕೊಂಚ ಭರವಸೆಯನ್ನೂ ಹುಸಿಯಾಗುವಂತೆ ಮಾಡಿದ್ದಾರೆ.

ಇಷ್ಟಾದರೂ ಹೋರಾಟ ನಿಲ್ಲಿಸದೆ ಡಿಸಿ ಕಚೇರಿಯ ಮುಂದೆಯೇ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿರುವ ಅಲ್ಲಿನ ಬುಡಕಟ್ಟು ಕಾರ್ಮಿಕರು ʼನಾವು ಇಲ್ಲಿನ ಮೂಲ ನಿವಾಸಿಗಳು ನಮಗೆ ನೀಡಿದ ಹಕ್ಕು ಪಡೆದುಕೊಳ್ಳುವುದಕ್ಕೊಸ್ಕರ ಹೋರಾಟ ಮಾಡುತ್ತಿದ್ದೇವೆʼ. ಒಂದು ಸ್ವಂತ ನೆಲೆಗೋಸ್ಕರ ಬೇಡಿಕೆ ಇಟ್ಟಿದ್ದರೂ ಅಲ್ಲಿನ ಶಾಸಕರು ನಮಗೆ ಇದುವರೆಗೂ ಯಾವೊಂದು ರೀತಿಯ ಮಾಹಿತಿಯೂ ಬಂದಿಲ್ಲ ನೀವು ಈ ಪ್ರತಿಭಟನೆ ಮಾಡಿ ಏನೂ ಪ್ರಯೋಜನವಿಲ್ಲ ಎಂಬಂತೆ ಹೇಳುತ್ತಿದ್ದಾರೆ. ಆದರೆ  ಈಗಾಗಲೇ ತಾವಿದ್ದ ಲೈನ್ ಮನೆಗಳನ್ನು ಬಿಟ್ಟು ಬಂದುಬಿಟ್ಟಿದ್ದೇವೆ. ಬೀದಿಗಿಳಿದು ಹೋರಾಟಕ್ಕೆ ನಿಂತು ಬೀದಿ ಪಾಲಾಗಿದ್ದೇವೆ. ನಾವು ಈಗ ಎಲ್ಲಿಗೆ ಹೋಗುವುದು? ಎಂದು ಅಲ್ಲಿನ ಪ್ರತಿಭಟನಾಕಾರರು ಪೀಪಲ್ ಮೀಡಿಯಾದೊಂದಿಗೆ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

ಆಗಸ್ಟ್ 27 ರ ವರೆಗೂ ಕೊಡಗುನಲ್ಲಿ ನಿಷೇಧಾಜ್ಞೆ ಜಾರಿ
ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮಡಿಕೇರಿ ಚಲೋ’ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ನಾಳೆ (ಅ.24) ಯಿಂದ ಕೊಡಗುನಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 24 ರಿಂದ ಆಗಸ್ಟ್ 27 ರ ಸಂಜೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೂರ್ವ ಯೋಜಿತ ಖಾಸಗಿ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ, ಈಗಾಗಲೇ ಕರೆ ಕೊಟ್ಟಿದ್ದರೆ ಅದನ್ನು ರದ್ದುಪಡಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಮುಖವಾಗಿ ಯಾವುದೇ ಪ್ರತಿಭಟನೆ, ವಿಜಯೋತ್ಸವ, ರ್ಯಾಲಿ, ಜಾಥಾ ನಡೆಸದಂತೆ ಕಡ್ಡಾಯ ಆದೇಶ ಹೊರಡಿಸಿದ್ದಾರೆ.

ಇದರ ಜೊತೆಗೆ ಜಿಲ್ಲೆಯಲ್ಲಿ 5 ಜನಕ್ಕಿಂತ ಹೆಚ್ಚು ಮಂದಿ ಗುಂಪು ಸೇರದಂತೆ, ಪಟಾಕಿ ಸಿಡಿಸದಂತೆ, ಧ್ವನಿವರ್ದಕ ಬಳಸದಂತೆ, ಪ್ರಚೋದನಾಕಾರಿ ಘೋಷಣೆ ಕೂಗದಂತೆ, ಸಾರ್ವಜನಿಕವಾಗಿ ಆಯುಧಗಳನ್ನು ಹಿಡಿಯದಂತೆ, ಯಾವುದೇ ಸಂಘ ಸಂಘಟನೆಗಳ ಬಾವುಟ ಹಿಡಿಯದಂತೆ, ಸಂತೆ ಸಮಾರಂಭ ನಡೆಸದಂತೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.

ಮಳೆಹಾನಿ ಮತ್ತು ನೆರೆಪೀಡಿತ ಪ್ರದೇಶಗಳ ವೀಕ್ಷಣೆಗೆ ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಸಾವರ್ಕರ್ ಫೋಟೋ ತೋರಿಸಿ, ಮೊಟ್ಟೆ ಎಸೆದು ಪ್ರತಿಭಟಿಸಿದ್ದರು. ಸಂಘಪರಿವಾರದ ಕಾರ್ಯಕರ್ತರ ಈ ನಡೆಯ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಬಹುತೇಕ ರಾಜಕೀಯ ನಾಯಕರು ಇದನ್ನು ಖಂಡಿಸಿದ್ದರು. ಆದರೆ ಬಿಜೆಪಿ ಪಕ್ಷದ ಕೆಲವು ಮುಖಂಡರು ಇದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದು, ಸಂಘಪರಿವಾರದವರ ನಡೆಗೆ ಸಿದ್ದರಾಮಯ್ಯ ನಿಲುವೇ ಕಾರಣ ಎಂಬುದಾಗಿ ಹೇಳಿಕೆ ಕೊಟ್ಟಿದ್ದರು.

ಸೂಕ್ತ ಭದ್ರತೆ ಒದಗಿಸದ ಮತ್ತು ಇಂಟೆಲಿಜೆನ್ಸ್ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿದ ಜಿಲ್ಲಾ ಪೊಲೀಸರ ಕ್ರಮದ ವಿರುದ್ಧ ಸಿದ್ದರಾಮಯ್ಯ ಅಂದೇ ಆಕ್ರೋಶ ವ್ಯಕ್ತಪಡಿಸಿ, ಆಗಸ್ಟ್ 26 ಕ್ಕೆ SP ಕಛೇರಿ ಮುತ್ತಿಗೆ ಮತ್ತು ಬೃಹತ್ ಸಮಾವೇಶಕ್ಕೆ ಕರೆ ನೀಡಿದರು. ಮಾಹಿತಿಯ ಪ್ರಕಾರ ಕೊಡಗು ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಕ್ಕೂ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು ಈ ಸಮಾವೇಶಕ್ಕೆ ಸೇರುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಈ ಪ್ರತಿಭಟನೆ ಘೋಷಣೆ ಬೆನ್ನಲ್ಲೇ ಬಿಜೆಪಿ ಕೂಡಾ ಅದೇ ದಿನ ಜನಜಾಗೃತಿ ಸಭೆ ನಡೆಸುವುದಾಗಿ ಕರೆ ಕೊಟ್ಟಿದೆ. ಈ ಸಂಬಂಧ ಜಿಲ್ಲಾಡಳಿತ ಸೂಕ್ತ ಭದ್ರತೆ ಹಿನ್ನೆಲೆಯಲ್ಲಿ ನಾಳೆಯಿಂದಲೇ ಕೊಡಗುನಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.

ಯು.ಪಿ ಮಾದರಿ ಎಂದರೆ ಇದೆನಾ?: ಬಿಜೆಪಿ ವಿರುದ್ದ ಸಿದ್ದು ವಾಗ್ದಾಳಿ
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ನೆರೆ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳ ವೀಕ್ಷಣೆಗೆಂದು ಗುರುವಾರ ಹೋಗಿದ್ದ ಸಿದ್ದರಾಮಯ್ಯನವರಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿ ಅವರ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದು ಗೋ ಬ್ಯಾಕ್‌ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು,ಇದನ್ನ ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು. ನಿಮ್ಮ ಯು.ಪಿ ಮಾದರಿ ಎಂದರೆ ಇದೆನಾ?ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ @BSBommai ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು.
ಯು.ಪಿ ಮಾದರಿ ಎಂದರೆ ಇದೆನಾ? 1/9
— Siddaramaiah (@siddaramaiah) August 18, 2022

ಶಿವಮೊಗ್ಗದ ಗಲಭೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರೇ ಕಾರಣ. ಸಚಿವ ಸ್ಥಾನ ಕಳೆದುಕೊಂಡು ಮನೆಯಲ್ಲಿರುವ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ನ ಖಾತರಿಯೂ ಇಲ್ಲ. ಇದರಿಂದ ಹತಾಶರಾಗಿರುವ ಈಶ್ವರಪ್ಪನವರು ಆರ್ ಎಸ್ ಎಸ್ ಒಡೆಯರನ್ನು ಒಲಿಸಿಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆ ಎಂದು  ವ್ಯಂಗ್ಯವಾಡಿದ್ದಾರೆ.

ಸಾಧನೆಯ ಬಲದಿಂದ ಚುನಾವಣೆಯನ್ನು ಎದುರಿಸಲಿಕ್ಕಾಗದ ಬಿಜೆಪಿ ನಾಯಕರಿಗೆ ಸುಳ್ಳು ಸುದ್ದಿ ಮತ್ತು ಆಧಾರರಹಿತ ಆರೋಪಗಳೇ ಬಂಡವಾಳ. ಹೀಗಾಗಿ ಹಳೆಯ ಆಟವನ್ನು ಬಿಜೆಪಿ ರಾಜ್ಯದಲ್ಲಿ ಮತ್ತೆ ಶುರುಮಾಡಿದೆ. ಈ ಸುಳ್ಳಿನ ಸರದಾರರಿಗೆ ಸತ್ಯವನ್ನು ಎದುರಿಸುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.

ವಿ.ಡಿ.ಸಾವರ್ಕರ್ ಬಗ್ಗೆ ಅಭಿಮಾನ ಇದ್ದರೆ ಅವರ ಬಗ್ಗೆ ಪುಸ್ತಕ ಬರೆದು, ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಿ. ಕೋಮುಗಲಭೆ ಹುಟ್ಟುಹಾಕಲು ಅವರ ಪೋಟೊವನ್ನು ಅಸ್ತ್ರವನ್ನಾಗಿ ಯಾಕೆ ಮಾಡುತ್ತಿದ್ದೀರಿ? ಮಹಾತ್ಮ ಗಾಂಧೀಜಿಯವರ ಪೋಟೊ ಹಾಕಿ ಜಾಹೀರಾತು ಕೊಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಅವರು, ತಮ್ಮದೇ ಪಕ್ಷದ ಕಾರ್ಯಕರ್ತರು ಗಾಂಧೀಜಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪೋಟೊ ಮೆರವಣಿಗೆ ಮಾಡಿದ್ದಾರೆ. ಗೋಡ್ಸೆಗೆ ಪೂಜೆ ಮಾಡುವುದು ದೇಶಪ್ರೇಮವೇ? ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಇದನ್ನೇ ನಾನು ಪ್ರಶ್ನಿಸಿದ್ದು ಎಂದು ಕಿಡಿಕಾರಿದರು.

ಸಾವರ್ಕರ್ ಅವರನ್ನು ಹೊತ್ತು ಮೆರೆಯುತ್ತಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ 52 ವರ್ಷಗಳ ಕಾಲ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಯಾಕೆ ಹಾರಿಸಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತೀರಾ? ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೊವನ್ನು ಪಕ್ಷದ ಕಚೇರಿಯಲ್ಲಿಯೇ ಕಸದ ಬುಟ್ಟಿಗೆ ಎಸೆದಿರುವ  ಬಿಜೆಪಿ ನಾಯಕರ ಹೃದಯದೊಳಗೆ ಗಾಂಧೀಜಿಯೂ, ಇಲ್ಲ ಅಂಬೇಡ್ಕರ್ ಅವರೂ ಇಲ್ಲ. ಅವರೊಳಗೆ ಇರುವುದು ನಾಥುರಾಮ್ ಗೋಡ್ಸೆ ಮಾತ್ರ. ಈ ಸತ್ಯವನ್ನು ಮೊದಲು ಒಪ್ಪಿಕೊಳ್ಳಿ ಎಂದು ಹೇಳಿದರು.

ಬಿ.ಎಸ್ ಯಡಿಯೂರಪ್ಪ ಅವರಿಗೆ 75 ವರ್ಷ ಆಯ್ತು ಎಂದು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸಿದರು. ಅವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ, ಈಗ ಅವರ ವಯಸ್ಸು ಕಡಿಮೆ ಆಯ್ತಾ? ಇದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಅಲ್ಲ, ಸೋಲಿನ ಭಯ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.