kohli – Peepal Media

ಕ್ರಿಕೆಟ್‌ ‘ಕಿಂಗ್’ ಕೊಹ್ಲಿ ವೃತ್ತಿಜೀವನಕ್ಕೆ 15 ವರ್ಷ
ಕ್ರಿಕೆಟ್ ನ ಕಿಂ‌ಗ್ ಎಂದೇ ಖ್ಯಾತಿ ಪಡೆದ ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿ ಇಂದಿಗೆ ಸರಿಯಾಗಿ 15 ವರ್ಷಗಳು. ವಿರಾಟ್ ಕೊಹ್ಲಿ 18 ಆಗಸ್ಟ್ 2008ರಂದು ಶ್ರೀಲಂಕಾ ವಿರುದ್ಧದ ODI ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು.

ಫಾರ್ಮ್ಯಾಟ್‌ ಯಾವುದೇ ಇರಲಿ, ರನ್‌ಗಳ ಪ್ರವಾಹವನ್ನೇ ಹರಿಸುವ ಕೊಹ್ಲಿ ಇದುವರೆಗೆ ಟೆಸ್ಟ್, ODI ಮತ್ತು T20 ಯಂತಹ ಎಲ್ಲಾ ಮೂರು ಸ್ವರೂಪಗಳಲ್ಲಿ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಸತತವಾಗಿ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಅವರು ಚೇಸಿಂಗ್ ಮಾಸ್ಟರ್ ಎಂದು ಹೊಗಳಲ್ಪಟ್ಟಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ಕೊಹ್ಲಿ 111 ಟೆಸ್ಟ್‌ಗಳಲ್ಲಿ 49.3 ಸರಾಸರಿಯಲ್ಲಿ 8676 ರನ್ ಗಳಿಸಿದ್ದಾರೆ. ಅವರು 275 ODIಗಳಲ್ಲಿ 57.32 ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. 115 T20I ಗಳಲ್ಲಿ 52.73ರ ಸರಾಸರಿಯಲ್ಲಿ ಮತ್ತು 137.97 ರ ಸ್ಟ್ರೈಕ್ ರೇಟ್‌ನಲ್ಲಿ 4008 ರನ್ ಗಳಿಸಿದ್ದಾರೆ.

ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 15 ವರ್ಷ ಪೂರೈಸಿರುವ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಕೊಹ್ಲಿಯ ಅದ್ಭುತ ಸಾಧನೆಗಳು ಕೋಟ್ಯಂತರ ಜನರಿಗೆ ಸ್ಫೂರ್ತಿ ನೀಡಿವೆ ಎಂದು ಜಯ್ ಶಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇಂದು 500ನೇ ಅಂತರಾಷ್ಟ್ರೀಯ ಪಂದ್ಯ ಆಡಲಿರುವ ಕೊಹ್ಲಿ
ಇಂದಿನಿಂದ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಇಂಡಿಯನ್ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಅವರ ವೃತ್ತಿಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ವಿರಾಟ್ ಈ ಮೈಲಿಗಲ್ಲನ್ನು ತಲುಪಿದ ಭಾರತದ ನಾಲ್ಕನೇ ಆಟಗಾರ ಮತ್ತು ವಿಶ್ವದ 10ನೇ ಆಟಗಾರನಾಗಲಿದ್ದಾರೆ. ವಿರಾಟ್‌ಗಿಂತಲೂ ಮೊದಲು 6 ಬ್ಯಾಟ್ಸ್‌ಮನ್‌ಗಳು ಮತ್ತು 3 ಆಲ್‌ರೌಂಡರ್‌ಗಳು 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ವಿಶೇಷವೆಂದರೆ ನಿಖರವಾಗಿ 500 ಪಂದ್ಯಗಳನ್ನು ಆಡಿ ಅತಿ ಹೆಚ್ಚು ರನ್ ಗಳಿಸಿದ ಸ್ಟಾರ್‌ಗಳ ಪಟ್ಟಿಯಲ್ಲಿ ವಿರಾಟ್ ನಂಬರ್-1 ಆಗುವುದು ಖಚಿತವಾಗಿದೆ. ವಿರಾಟ್ ಇದುವರೆಗೆ 499 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ 110 ಟೆಸ್ಟ್‌ಗಳು, 274 ಏಕದಿನ ಪಂಧ್ಯಗಳು ಮತ್ತು 115 T20 ಪಂದ್ಯಗಳು ಸೇರಿವೆ. ಈ ಎಲ್ಲಾ ಪಂದ್ಯಗಳನ್ನು ಒಳಗೊಂಡಂತೆ ವಿರಾಟ್ 53.48 ಸರಾಸರಿಯಲ್ಲಿ 25,461 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 75 ಶತಕ ಮತ್ತು 131 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ರನ್‌ ಗಳಿಕೆಯಲ್ಲಿ ಎಲ್ಲರಿಗಿಂತಲೂ ಮುಂದೆ, ಶತಕದಲ್ಲಿ ಸಚಿನ್‌ ದಾಖಲೆ ಸರಿಸಮ

ಈ ಪಂದ್ಯದೊಂದಿಗೆ ವಿರಾಟ್ ಕೊಹ್ಲಿ 500 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಅವರು 499 ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಮಹೇಲಾ ಜಯವರ್ಧನೆ, ಸನತ್ ಜಯಸೂರ್ಯ ಮತ್ತು ಜಾಕ್ವೆಸ್ ಕಾಲಿಸ್ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿದ್ದಾರೆ.

ಕೊಹ್ಲಿ ಇಲ್ಲಿಯವರೆಗೆ 25,461 ರನ್ ಗಳಿಸಿದ್ದಾರೆ. ಅವರು 53.48ರ ಸರಾಸರಿಯಲ್ಲಿ ಇಷ್ಟು ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ 500 ಪಂದ್ಯಗಳಲ್ಲಿ 25,035 ರನ್ ಗಳಿಸಿದ್ದಾರೆ.

ಕೊಹ್ಲಿ ಬ್ಯಾಟಿನಿಂದ ಇದುವರೆಗೆ 75 ಶತಕಗಳು ದಾಖಲಾಗಿವೆ. ಸಚಿನ್ ತೆಂಡೂಲ್ಕರ್ ಕೂಡ 500 ಪಂದ್ಯಗಳಲ್ಲಿ ಹಲವು ಶತಕಗಳನ್ನು ಬಾರಿಸಿದ್ದಾರೆ.