kolara – Peepal Media

ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಗ್ರಾಮ ಪಂಚಾಯತ್‌ ಸದಸ್ಯರಿಂದ ಹಲ್ಲೆ
ಕೋಲಾರ: ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಸ್ಥಳೀಯ ಪಂಚಾಯತ್‌ ಸದಸ್ಯರಿಬ್ಬರು ಸೇರಿದಂತೆ ಹಲವರು ದಾಳಿ ಎಸಗಿ ಹಲ್ಲೆ ಮಾಡಿದ್ದಾರೆ. ದಾಳಿಗೊಳಗಾದ ರಾಮಯ್ಯನವರನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಊರಿನಲ್ಲಿ ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳಿಂದ ಲೌಡ್‌ ಸ್ಪೀಕರ್‌ ಹಾಕಲಾಗಿತ್ತು. ಇಂದು ಬೆಳಗ್ಗೆ ರಾಮಯ್ಯನವರು ಸ್ಪೀಕರ್‌ ಹಾಕಿರುವಲ್ಲಿಗೆ ಹೋಗಿ ಹಬ್ಬ ಮುಗಿದಿದೆಯಲ್ಲ ಓದಲು ತೊಂದರೆಯಾಗುತ್ತಿದೆ ದಯವಿಟ್ಟು ಮೈಕ್‌ ಸೌಂಡ್‌ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರೆ.

ನಂತರ ರಾಮಣ್ಣನವರ ಮೇಲೆ ಪಾಪರಾಜನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ, ಬೈರಪ್ಪ ತೇರಹಳ್ಳಿ ಮೆಂಬರ್ ಮುನಿಯಪ್ಪ ಎನ್ನುವವರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ರಾಮಯ್ಯನವರನ್ನು ಕೋಲಾರದ ಆಸ್ಪತ್ರೆಗೆ ಸೇರಿಸಲಾಗಿದ್ದು ಗಾಯಗೊಂಡಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲೆ ಇಲ್ಲದೇ ಹಣ ವರ್ಗಾವಣೆ ; ದೂರು ದಾಖಲು
ಕೋಲಾರ : ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 2019-20, ಮತ್ತು 2020-21 ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಸುಮಾರು 35.64 ಲಕ್ಷ ಅನುದಾನದ ದುರುಪಯೋಗ ಪಡಿಸಿಕೊಂಡ ಮತ್ತು ದೊಡ್ಡ ಮಟ್ಟದ ಅವ್ಯವಹಾರ ನಡೆದ ಬಗ್ಗೆ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಯ ಮೇಲೆ ಪ್ರಕರಣ ದಾಖಲಾಗಿದೆ. ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ, ಶಸ್ತ್ರಚಿಕಿತ್ಸಕ ಡಾ. ಎಸ್.ಜಿ ನಾರಾಯಣಸ್ವಾಮಿ ಸೇರಿದಂತೆ ಪ್ರಕರಣದಲ್ಲಿ ಒಟ್ಟು 11 ಜನರ ಮೇಲೆ ದೂರು ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಾಕ್ಟರ್ ಎಸ್.ಜಿ ನಾರಾಯಣಸ್ವಾಮಿ ಮಾತ್ರವಲ್ಲದೆ ಅಲ್ಲದೆ ಸ್ಥಾನಿಕ ವೈದ್ಯಾಧಿಕಾರಿ ನಾರಾಯಣಸ್ವಾಮಿ, ಪ್ರಥಮ ದರ್ಜೆ ಸಹಾಯಕ ಹರೀಶ್, ಕಂಪ್ಯೂಟರ್ ನಿರ್ವಾಹಕ ಕಿಶೋರ್ ಕುಮಾರ್, ಹೊರಗುತ್ತಿಗೆ ಡಿ ದರ್ಜೆ ನೌಕರ ಸೋಮಶೇಖರ್, ಶ್ರೀನಿವಾಸ್, ಪ್ರಶಾಂತ್ ಸೇರಿದಂತೆ ಒಟ್ಟು 11 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.

2019-20 2020-21 ನೇ ಸಾಲಿನಲ್ಲಿ ಜಿಲ್ಲಾ ವೈದ್ಯಾಧಿಕಾರಿ ಮುಖ್ಯಸ್ಥರಾಗಿರುವ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ನಿಯಮಬಾಹಿರವಾಗಿ ಹಲವು ಬಾರಿ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿದೆ. ಅಷ್ಟೂ ಹಣವು ಚೆಕ್ ಗಳಿಂದ ಹಣ ಪಾವತಿ ಮಾಡಲಾಗಿದೆ. ಆದರೆ ಖರ್ಚು ವೆಚ್ಚದ ಪುಸ್ತಕಗಳಲ್ಲಿ ಇದ್ದರ ಬಗ್ಗೆ ಯಾವುದೇ ದಾಖಲೆ ನಮೂದಿಸಿಲ್ಲ. ದಾಖಲೆ ಪುಸ್ತಕ ಇದ್ದರೂ ಸಹ ಯಾವುದೇ ಖರ್ಚು ವೆಚ್ಚದ ಉಲ್ಲೇಖವಿಲ್ಲ. ಇತ್ತ ಮೌಖಿಕವಾಗಿಯೂ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ದಾಖಲೆ ಇಲ್ಲದ ಹಾಗೂ ಒದಗಿಸದ ಹಿನ್ನೆಲೆಯಲ್ಲಿ ನಾನು ದೂರು ದಾಖಲು ಮಾಡಿದ್ದೇನೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯ್ ಕುಮಾರ್ ದೂರು ನೀಡಿದ್ದಾರೆ. ಹಣ ವರ್ಗಾವಣೆ ಮಾಡಿದ್ದಾರೆ ಎಂಬುದು ಸ್ಪಷ್ಟ. ಆದರೆ ಇಲ್ಲಿಯವರೆಗೂ ಯಾವುದಕ್ಕೆ ಹಣ ಖರ್ಚು ಮಾಡಿದ್ದಾರೆ ಎಂಬ ದಾಖಲೆಯನ್ನು ಒದಗಿಸಿಲ್ಲ. ಇತ್ತ ಆಸ್ಪತ್ರೆಯ ಯಾವ ಕೆಲಸಕ್ಕೆ ಆ ಹಣ ಖರ್ಚಾಗಿದೆ ಎಂಬುದಕ್ಕೂ ಸಾಕ್ಷಿಗಳಿಲ್ಲ ಎಂದು ಡಾ.ವಿಜಯ್ ಕುಮಾರ್ ಆರೋಪಿಸಿದ್ದಾರೆ.

‘ನಾನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಲು ಕೆಲಸ ವಹಿಸಿಕೊಳ್ಳುವಾಗ ಅನುಮಾನ ಬಂದು ದಾಖಲೆ ಪರಿಶೀಲಿಸಿದೆ. ಅಗತ್ಯ ದಾಖಲೆ ಸಿಗದ ಬಗ್ಗೆ ಮೇಲಾಧಿಕಾರಿಗಳಿಗೂ ದೂರು ನೀಡಿದ್ದೇನೆ. ಅವರುಗಳ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿದ್ದೇನೆ ಎಂದು ಜಿಲ್ಲಾ ವೈದ್ಯಾಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ನಿವೃತ್ತ ವೈದ್ಯಾಧಿಕಾರಿ ಡಾಕ್ಟರ್ ಎಸ್.ಜಿ ನಾರಾಯಣಸ್ವಾಮಿ ಅವರ ಹೆಸರಿಗೆ 8.20 ಲಕ್ಷ, ಸೋಮಶೇಖರ್ ಅವರ ಹೆಸರಿಗೆ 4.23 ಲಕ್ಷ, ಶ್ರೀನಿವಾಸ್ ಹೆಸರಿಗೆ 9.42 ಲಕ್ಷ, ಸಂಜಯ್ ಎಂಬ ಹೆಸರಿಗೆ 68 ಸಾವಿರ, ಪುರುಷೋತ್ತಮ್ ಎಂಬುವರ ಹೆಸರಿಗೆ 1.22 ಲಕ್ಷ, ಪ್ರಸನ್ನ ಎಂಬುವರಿಗೆ 68 ಸಾವಿರ, ಮನೋಹರ್ ಬಾಬು ಎಂಬವರಿಗೆ 62 ಸಾವಿರ ಮತ್ತು ಕೃಷ್ಣಪ್ಪ ಎಂಬುವರ ಹೆಸರಿಗೆ 3.15 ಲಕ್ಷ ಹಣ ಪಾವತಿಯಾಗಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

ಶಾಲೆಗಾಗಿ ಮಕ್ಕಳ ಕಣ್ಣೀರು: ಹೊಸದೊಂದು ಶಾಲೆ ನಿರ್ಮಿಸುವಂತೆ ಸರ್ಕಾರಕ್ಕೆ ಹೆಚ್‌.ಡಿ.ಕೆ ಒತ್ತಾಯ
ಕೋಲಾರ: ಇಲ್ಲಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದ ಸರಕಾರಿ ಶಾಲೆಯು ಶಿಥಿಲಗೊಂಡಿದ್ದು, ಶಾಲಾ ಮಕ್ಕಳು ಹೊಸ ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಕಣ್ಣೀರಿಟ್ಟಿರುವ ಹಿನ್ನಲೆಯಲ್ಲಿ, ಕೂಡಲೇ ಹೊಸದೊಂದು ಶಾಲಾ ಕಟ್ಟಡವನ್ನು ನಿರ್ಮಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ʼಪಂಚರತ್ನ ರಥಯಾತ್ರೆ ವೇಳೆ ಎದುರಾದ ಈ ಘಟನೆಯಿಂದ ನನಗೆ ಬಹಳ ನೋವಾಗಿದೆ. ಯಾತ್ರೆಯು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಸಾಗುವಾಗ ಬಂಗವಾದಿ ಗ್ರಾಮದ ಸರಕಾರಿ ಶಾಲೆ ಮಕ್ಕಳು ಶಾಲಾ ಕಟ್ಟಡಕ್ಕಾಗಿ ಕಣ್ಣೀರಿಟ್ಟರು, ರಸ್ತೆಯಲ್ಲಿ ಅಡ್ಡಗಟ್ಟಿದರು. ನಂತರ ಹಠ ಬಿಡದೇ ನನ್ನನ್ನು ಆ ಶಿಥಿಲವಾಗಿರುವ ಶಾಲೆಗೆ ಕರೆದುಕೊಂಡು ಹೋಗಿ, ಅಲ್ಲಿನ ದುಸ್ಥಿತಿಯ ದರ್ಶನ ಮಾಡಿಸಿದರು. ಕಳೆದ ಎರಡುಮೂರು ವರ್ಷಗಳಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದರುʼ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕಾರಣ ಸ್ಥಳದಿಂದಲೇ ದೂರವಾಣಿಯಲ್ಲಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್‌ ಅವರನ್ನು ಸಂಪರ್ಕಿಸಿದ ಕುಮಾರಸ್ವಾಮಿಯವರು, ಶಾಲಾ ಕಟ್ಟಡದ ಸಮಸ್ಯೆಕುರಿತು ಮಾತನಾಡಿದೆ. ಇದಕ್ಕೆ ಸ್ಪಂದಿಸಿದ, ಬಿ.ಸಿ. ನಾಗೇಶ್‌ ಅವರು ಆದಷ್ಟು ಬೇಗ ಬಂಗವಾದಿ ಗ್ರಾಮದ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.

ಅಲ್ಲದೆ, ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕರೆ ಮಾಡಿ, ಕೂಡಲೇ ಬಂಗವಾದಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿಕೊಡಬೇಕಾಗಿ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ʼಸಿಎಂ ಆದ ಕೂಡಲೇ ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೆಣ್ಣು ಕೊಡುವುದನ್ನು ನಿಷೇಧಿಸಿʼ: ರೈತ ಯುವಕನಿಂದ ಕುಮಾರಸ್ವಾಮಿಗೆ ಪತ್ರ
ಕೋಲಾರ: ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ, ನೀವು ಸಿಎಂ ಆದ ಕೂಡಲೇ ಕೋಲಾರದಿಂದ ಬೇರೆ ಜಿಲ್ಲೆಗೆ ಹೆಣ್ಣು ಕೊಡುವುದನ್ನು ನಿಲ್ಲಿಸಿ ಎಂದು ಒಕ್ಕಲಿಗ ಸಮುದಾಯದ ರೈತ ಯುವಕನೊಬ್ಬ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರ ಸ್ವಾಮಿಯವರಿಗೆ ಪತ್ರ ಬರೆದಿದ್ದಾನೆ.

ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಅಲ್ಲಿನ ಸ್ಥಳೀಯರ ಮತ್ತು ರೈತರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ, ಮುದುವತ್ತಿ ಗ್ರಾಮದ ಧನಂಜಯ ಎನ್ನುವ ಯುವಕ, ಒಕ್ಕಲಿಗ ರೈತ ಯುವಕರಿಗೆ ವಧುಗಳ ಸಮಸ್ಯೆ ಕಾಡುತ್ತಿದೆ ಎಂದು ಪತ್ರ ಬರೆದಿದ್ದು, ಪತ್ರದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ʼಕೋಲಾರದಲ್ಲಿ ಒಕ್ಕಲುತನ ಮಾಡುವ ರೈತರ ಮಕ್ಕಳಿಗೆ ಹೆಣ್ಣುಗಳು ಸಿಗುತ್ತಿಲ್ಲ. ಜಿಲ್ಲೆಯ ಎಷ್ಟೋ ಜನ ಯುವಕರಿಗೆ ವಯಸ್ಸೂ 40-45 ಆಗುತ್ತಿದ್ದು ಹೆಣ್ಣುಗಳು ಸಿಗುತ್ತಿಲ್ಲ ಇದೊಂದು ಸಮಸ್ಯೆಯಾಗಿದೆ. ಇದಕ್ಕೆ ಕಾರಣ ತಮ್ಮ ಜಿಲ್ಲೆಯಲ್ಲಿನ ಹೆಣ್ಣುಮಕ್ಕಳನ್ನು ಹೊರ ಜಿಲ್ಲೆಗಳಿಗೆ ಹೆಚ್ಚಾಗಿ ಮದುವೆ ಮಾಡಿ ಕೊಡಲಾಗುತ್ತಿದೆ. ಈ ಬಾರಿ ನೀವು ಮುಖ್ಯಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸುತ್ತೀರಿ ಎಂದು ನಂಬಿದ್ದೇವೆ, ಈ ಸಂದರ್ಭದಲ್ಲಿ ತಾವುಗಳು ದಯಮಾಡಿ ಈ ರೀತಿಯ ನಿಯಮವನ್ನು ಜಾರಿಗೆ ತರಬೇಕೆಂದುʼ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾನೆ.

ರೈತ ಯುವಕ ಬರೆದಿರುವ ಪತ್ರ

ಪಂಚರತ್ನ ರಥಯಾತ್ರೆಯು ಯಾವ ಜಾತಿಗೂ ಸೀಮಿತ ಅಲ್ಲ: ಹೆಚ್.ಡಿ ದೇವೇಗೌಡ
ಕೋಲಾರ : ಜೆಡಿಎಸ್‌ ನ ಮೊದಲನೆ ದಿನದ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ಪೂರೈಸಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಶುಕ್ರವಾರದಂದು ಯೋಜನೆಗೆ ಚಾಲನೆ ನೀಡಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಶುಕ್ರವಾರದಂದು ಬೃಹತ್‌ ಸಮಾವೇಶ ನಡೆಸುವುದರ ಮೂಲಕ ಜೆಡಿಎಸ್‌ನ ಪಕ್ಷದ ಮಹಾತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪಂಚರತ್ನ ಯೋಜನೆಗೆ ರಾಜ್ಯದ  ವಿವಿಧೆಡೆಯಿಂದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ಈಗಾಗಲೇ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಬಸ್‌ ಚಾಲನೆ ನೀಡಲಾಗಿದೆ. ಮತ್ತಷ್ಟು ಮಂದಿ ರಥಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಪಂಚರತ್ನ ಯೋಜನೆಯ ಮೊದಲನೇ ದಿನದ ಚಾಲನೆಯ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಜಿ.ಡಿ ದೇವೇಗೌಡರು, ಪಕ್ಷದ ಅಧ್ಯಕ್ಷರಾದ ಸಿ.ಎಂ ಇಬ್ರಾಹಿಂ ಸೇರಿದಂತೆ ಹಲವು ಜೆಡಿಎಸ್‌ ಮುಖಂಡರು ಭಾಗವಗಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಕಾರ್ಯಕ್ರಮವನ್ನು ಉದ್ಧೇಶಿಸಿಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ʼಪಂಚರತ್ನ ರಥಯಾತ್ರೆ ಅನ್ನೋದು ಯಾವ ಜಾತಿಗೂಸೀಮಿತ ಅಲ್ಲ. ನಾಡಿನ ಸಮಸ್ತ ಜನರಿಗೆ ಜಾತಿ ಬೇಧ ಇಲ್ಲʼ ಎಂದು
ಮಾತನಾಡಿದ್ದಾರೆ.

ಈ ಕುರಿತು ಜೆಡಿಎಸ್‌ ಪರ್ವ ಫೇಸ್‌ಬುಕ್‌ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದು, ʼಮೂಡಲಬಾಗಿಲು ದ್ವಾಪರಯುಗದಲ್ಲಿ ಶ್ರೀಕೃಷ್ಣ ನ ಆಜ್ಞೆಯ ಮೇರೆಗೆ ಅರ್ಜುನನಿಂದ ಪ್ರತಿಷ್ಟಾಪಿಸಲಾದ ಪುರಾಣ ಪ್ರಸಿದ್ಧ ಆಂಜನೇಯ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ… ಮಣ್ಣಿನ ಮಗನ ದೇವೇಗೌಡರ ಪೂಜಾಫಲ ಹಾಗೂ ದೇವರ ಅನುಗ್ರಹದಿಂದ ನೆನ್ನೆ ಮಳೆಯ ತೊಂದರೆಯಿಲ್ಲದೆ ಪಂಚರತ್ನ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಸಚಿವರಾದ ಜಿ.ಟಿ ದೇವೇಗೌಡರು ಪಕ್ಷದ ಅಧ್ಯಕ್ಷರಾದ ಸಿ.ಎಂ ಇಬ್ರಾಹಿಂ ರವರು ಸೇರಿದಂತೆ ಅನೇಕ ಹಿರಿಯ ಹಾಗೂ ಯುವ ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಾಕ್ಷಿಯಾದರು… ʼ ಎಂದು ಹೇಳಿದ್ದಾರೆ

ಗಂಡು ಮಗುವಾಗದಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ
ಕೋಲಾರ : ತನ್ನ ಪತ್ನಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಅಪರೂಪದ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಸೆಟ್ಟಿಹಳ್ಳಿಯಲ್ಲಿ ನಡೆದಿದೆ.

9 ವರ್ಷಗಳ ಹಿಂದೆ ಆಂದ್ರಪ್ರದೇಶದ ಪುಂಗನೂರಿನ ವಧುವನ್ನು ಸೆಟ್ಟಿಹಳ್ಳಿಯ ಲೋಕೇಶ್ ವರಿಸಿದ್ದರು. ಕಳೆದ 9 ವರ್ಷಗಳ ಅವಧಿಯಲ್ಲಿ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದ ಲೋಕೇಶ್ ದಂಪತಿ ಹಿಂದಿನಿಂದಲೂ ಗಂಡು ಮಗುವಿನ ನಿರೀಕ್ಷೆಯಲ್ಲಿ ಇದ್ದರು.

ಆದರೆ ನಾಲ್ಕನೇ ಬಾರಿಯೂ ಲೋಕೇಶ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ 34 ವರ್ಷದ ಪತಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ಮುಂಜಾನೆ ಲೋಕೇಶ್‌ನ ತಾಯಿ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿರುವುದನ್ನು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮೂರು ವರ್ಷಗಳ ಹಿಂದೆ ಮೂರನೇ ಮಗಳು ಜನಿಸಿದಾಗ ಲೋಕೇಶ್ ಗಂಡು ಮಗುವಾಗದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿ ತನ್ನ ಕೆಲ ಸ್ನೇಹಿತರಲ್ಲಿ ಪ್ರಾಣ ಬಿಡುವುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಗಂಡು ಮಗು ಇಲ್ಲದ ಕಾರಣಕ್ಕೆ ಅವರು ಈ ಕ್ರಮ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಲೋಕೇಶ್ ಅವರ ಪತ್ನಿ ಮತ್ತೆ ಗರ್ಭ ಧರಿಸಿದ ನಂತರ ಅವರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಶುಕ್ರವಾರ ಮುಳಬಾಗಲಿನ ಆಸ್ಪತ್ರೆಯಲ್ಲಿ ನಾಲ್ಕನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಲೋಕೇಶ್ ತೀವ್ರ ಬೇಸರಗೊಂಡಿದ್ದರು ಎಂದು ಲೋಕೇಶ್ ಅವರ ಆಪ್ತರು ಹೇಳಿಕೊಂಡಿದ್ದಾರೆ‌.

ನಾನು ಬಾಬಾಸಾಹೇಬರಿಂದ ಪ್ರೇರಣೆ ಸ್ಪೂರ್ತಿ ಪಡೆದಿದ್ದೇನೆ: ಡಾ.ಕೆ.ಪಿ.ಅಶ್ವಿನಿಯವರ ಸಂದರ್ಶನ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆ ಕುರಿತು ವಿಶೇಷ ತಜ್ಞರಾಗಿ ಭಾರತದ ಪ್ರಪ್ರಥಮ ತಜ್ಞೆ ಕೋಲಾರ ಮೂಲದ ಡಾ  ಕೆ ಪಿ ಅಶ್ವಿನಿ ನೇಮಕವಾಗಿದ್ದಾರೆ. ಇವರು  ಹೆಮ್ಮೆಯ ಕನ್ನಡತಿಯಾಗಿ, ಅಂಬೇಡ್ಕರ್‌ವಾದಿ ಯುವತಿಯಾಗಿ, ಸ್ವಾಭಿಮಾನಿ ದಲಿತ ಚಿಂತಕಿಯಾಗಿ ದೇಶದ ಮುಡಿಗೊಂದು ಹೆಮ್ಮೆಯ ಕಿರೀಟ ತೊಡಿಸಿದ್ದಾರೆ; ಯುವಜನತೆಯಲ್ಲಿ ಕನಸುಗಳನ್ನು ಬಿತ್ತಿದ್ದಾರೆ. ಇವರ ಅದ್ಭುತ ಸಾಧನೆಯನ್ನು ಪೀಪಲ್‌ ಮೀಡಿಯಾವು ಸಂಭ್ರಮಿಸುತ್ತಾ ಆಭಿನಂದನೆಗಳು ಮತ್ತು ಅಭಿವಂದನೆಗಳನ್ನು ಸಲ್ಲಿಸುತ್ತದೆ. ಪೀಪಲ್‌ ಟೀವಿಗಾಗಿ ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ನಡೆಸಿರುವ ಮಾತುಕತೆಯ ಪೂರ್ಣ ಪಾಠವನ್ನು ನಿಮಗಾಗಿ ಇದು ಪ್ರಸ್ತುತ ಪಡಿಸುತ್ತಿದೆ.

ಪೀಪಲ್‌ ಮೀಡಿಯಾ: ಮೇಡಂ, ಮೊದಲನೆಯದಾಗಿ ನಿಮಗೆ ಅಭಿನಂದನೆಗಳು. ನೀವು ವಿಶ್ವಸಂಸ್ಥೆಯ UNHRC ಯ ವಿಶೇಷ ತಜ್ಞರಾಗಿ ಆಯ್ಕೆಯಾಗಿದ್ದೀರಿ ಈ ಪ್ರಕ್ರಿಯೆಯ ಬಗ್ಗೆ ತಿಳಿಸಿ ಹಾಗೂ ನಿಮ್ಮ ಕೆಲಸದ ಸ್ವರೂಪ ಹೇಗಿರುತ್ತದೆ ತಿಳಿಸಿಕೊಡಿ.

ಡಾ.ಕೆ.ಪಿ.ಅಶ್ವಿನಿ:  ವಿಶ್ವಸಂಸ್ಥೆಯ ಸ್ಪೆಷಲ್‌ ರಾಪೊರ್ಟರ್‌ (rapporteur) ಒಂದು ಸ್ವತಂತ್ರ ಪರಿಣಿತರ ಹುದ್ದೆಯಾಗಿದೆ, ವಿಶ್ವಸಂಸ್ಥೆಯಲ್ಲಿ ಬಹಳ ನಿಯೋಗಗಳಿವೆ (mandates).  ಇಲ್ಲಿ ಜನಾಂಗೀಯ ಭೇದ, ಮೈನಾರಿಟಿ ಇಶ್ಯೂ, ಸ್ಯಾನಿಟೇಶನ್‌, ಹೌಸಿಂಗ್‌ ಈ ರೀತಿ ಬೇರೆ ಬೇರೆ ಮ್ಯಾಂಡೇಟ್ಸ್‌ ಇದೆ. ಪ್ರತೀ ಮ್ಯಾಂಡೇಟ್‌ಗಳಿಗೆ ಒಬ್ಬರು ತಜ್ಞರಿರುತ್ತಾರೆ. ಸ್ಪೆಷಲ್‌ ರಾಪೊರ್ಟರ್‌ ಅಂದರೆ ಸ್ವತಂತ್ರ ತಜ್ಞರು ಅಂತ. ನನ್ನದು ರೇಸಿಸಂ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾಕ್ಕೆ (ಬೇರೆ ದೇಶದವರ ಮೇಲಿನ ದ್ವೇಷ) ಸಂಬಂಧಿಸಿದ ಅಸಹನೆ. ವರ್ಣಭೇದ, ಜನಾಂಗೀಯ ಭೇದನೀತಿ ಇವುಗಳ ಕುರಿತು ಗಮನ ಹರಿಸುವುದಿರುತ್ತದೆ.  ಒಬ್ಬ ಸ್ಪೆಷಲ್‌ ರಾಪರ್ಟರ್‌ ಆಗಿ ನಾನು ಬೇರೆ ಬೇರೆ ದೇಶಗಳನ್ನು ಭೇಟಿ ಮಾಡಬಹುದು. ಯಾವುದಾದರೂ ದೇಶದಲ್ಲಿ ಜನಾಂಗೀಯ ಭೇದದ ಘಟನೆಗಳು ನಡೆದಾಗ ಅವುಗಳ ಕುರಿತು ಎಮರ್ಜೆನ್ಸಿ ಅಪೀಲ್ಸ್ ಕೊಡಬಹುದು. ಹಾಗೆಯೇ ಇಂಡಿಪೆಂಡೆಂಟ್‌ ಎಕ್ಸ್‌ಪರ್ಟ್‌ ಆಗಿರುವುದರಿಂದ UN ನಲ್ಲಿ ರೇಸಿಸಂ ಅನ್ನು ಅಡ್ರೆಸ್‌ ಮಾಡೋದಿಕ್ಕೆ ಬೇರೆ ಬೇರೆ ರೀತಿಯ ಮೆಕಾನಿಸಮ್‌ – ಕನ್ವೆನ್ಷನ್ಸ್‌ ಇವೆ. ಆ ವಿಷಯಗಳ ಮೇಲೆ ಯುನೈಟೆಡ್‌ ನೇಶನ್ಸ್‌   ಎಷ್ಟು ಎಫೆಕ್ಟೀವ್‌ ಆಗಿ ಅಡ್ರೆಸ್‌ ಮಾಡುತ್ತದೆ ಎಂಬುದನ್ನು ಮಾನಿಟರ್‌ ಮಾಡುವಂತಹ ಜವಾಬ್ದಾರಿ ಸ್ಪೆಷಲ್‌ ರಾಪೊರ್ಟರ್‌ ಗೆ ಇರುತ್ತೆ.

ಪೀಪಲ್‌ ಮೀಡಿಯಾ: ಈವರೆಗೆ ಆ ಪೊಸಿಶನ್‌ ಗೆ ಆಯ್ಕೆ ಆಗುತ್ತಿದ್ದುದು ಆಫ್ರಿಕನ್ಸ್‌.  ಆದ್ರೆ ಈಗ ಮೊದಲ ಬಾರಿಗೆ ಭಾರತದಿಂದ ಆಯ್ಕೆ ಆಗಿದ್ದೀರಾ. ನೀವೇ ಆಯ್ಕೆಯಾಗಿದ್ದು ಹೇಗೆ?

ಡಾ.ಕೆ.ಪಿ.ಅಶ್ವಿನಿ: ಜಾತಿ ಮತ್ತು ಜನಾಂಗೀಯ ತಾರತಮ್ಯದ ಕುರಿತಾಗಿಯೇ ನಾನು ಪಿಎಚ್‌ಡಿ ಫೋಕಸ್ ಮಾಡಿರುವುದು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಈ ಹುದ್ದೆಗೆ ವೇಕೆನ್ಸಿ ಇತ್ತು. ನಾನು ಇದಕ್ಕೆ ಅಪ್ಲೈ ಮಾಡಿದ್ದೆ. ಇದಕ್ಕೆ ಪ್ರಪಂಚದ ಎಲ್ಲಾ ಕಡೆಗಳಿಂದ ಬಂದಿರುವ ಅರ್ಜಿಗಳನ್ನು ಸ್ವೀಕರಿಸಿ 12 ಜನರನ್ನು ಅಂತಿಮ ಗೊಳಿಸಿದ್ದರು. ಅಮೆರಿಕ, ಚೀನಾ, ಇಂಡಿಯಾ ಮತ್ತು  ಬೇರೆ ಬೇರೆ ಆಫ್ರಿಕನ್ನರು ತುಂಬಾ ಜನ ಇದ್ರು. ಅವರನ್ನ ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನ ಮಾಡ್ತಾರೆ. ಅದನ್ನು ಸಂದರ್ಶನ ಪ್ರತಿನಿಧಿಗಳು ಮಾಡ್ತಾರೆ. ಇನ್‌ಕ್ಲೂಡಿಂಗ್‌ ಕನ್ಸಲ್ಟೇಟೀವ್ಸ್‌ ಸೇರಿ ಮೂವರು ಪರ್ಮನೆಂಟ್‌ ರೆಪ್ರೆಸೆಂಟೇಟಿವ್ಸ್‌ ಇರ್ತಾರೆ. ಸಂದರ್ಶನ ಬಹಳ ಇಂಟೆನ್ಸಾಗಿರುತ್ತದೆ. ಸಂದರ್ಶನದ  ನಂತರ ಮೂರು ಜನರ ಹೆಸರನ್ನು ಶಾರ್ಟ್‌ಲಿಸ್ಟ್‌ ಮಾಡಿ, ಅದನ್ನು ಮತ್ತೆ ಮಾನವ ಹಕ್ಕು ಮಂಡಳಿಯ ಅಧ್ಯಕ್ಷರಿಗೆ ಕಳಿಸಿ, ಅಲ್ಲಿ ಮತ್ತೆ ನಮ್ಮ ಪರಿಣತಿ, ಪ್ರಾತಿನಿಧ್ಯ, ಜೆಂಡರ್‌ ಡೈವರ್ಸಿಟಿ ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಆಯ್ಕೆ ಮಾಡ್ತಾರೆ. ನನ್ನ ತಿಳುವಳಿಕೆ ಪ್ರಕಾರ  ನನ್ನ ಪರಿಣತಿ, ಐಡೆಂಟಿಟಿ ಎಲ್ಲವನ್ನೂ ಪರಿಗಣಿಸಿ ನನ್ನ ನೇಮಕ ಮಾಡಿದ್ದಾರೆ.

ಪೀಪಲ್‌ ಮೀಡಿಯಾ: ನಿಮ್ಮ ಹಿನ್ನೆಲೆ ಮತ್ತು ನಿಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ಕೊಂಚ ತಿಳಿಸಿಕೊಡಿ.

ಡಾ.ಕೆ.ಪಿ.ಅಶ್ವಿನಿ: ಬೇಸಿಕಲಿ ನನ್ನ ಊರು ಕೋಲಾರ. ನಮ್ಮ ತಂದೆ ಕೆಎಎಸ್‌ ಅಧಿಕಾರಿಯಾಗಿದ್ರು. ಅದರಿಂದಾಗಿ ನಾನು  ಕರ್ನಾಟಕದ ಉದ್ದಗಲಕ್ಕೆ  ವಿದ್ಯಾಭ್ಯಾಸ ಮಾಡಿದ್ದೀನಿ- ಮಂಗಳೂರು, ಗುಲ್ಬರ್ಗ, ಮೈಸೂರು ಇಲ್ಲೆಲ್ಲ. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬಿ ಎ ಪದವಿ ಓದಿದೆ.  ಸೆಂಟ್‌ ಜೋಸೆಫ್‌ ಕಾಲೇಜ್‌ ಬೆಂಗಳೂರಲ್ಲಿ ಎಂಎ ಓದಿದೆ. ದೆಹಲಿಯ JNU – ಜವಾಹರಲಾಲ್‌ ನೆಹರೂ ಯೂನಿವರ್ಸಿಟಿಯಲ್ಲಿ ಎಂ ಫಿಲ್‌, ಪಿಎಚ್ ಡಿ ಮಾಡಿದೆ. ನನ್ನ ಪಿಎಚ್ ಡಿ ವಿಷಯ ಇದ್ದಿದ್ದು ಸೌತ್‌ ಏಷಿಯನ್‌ ಸ್ಟಡೀಸ್‌ ಕುರಿತು. ಹೀಗಾಗಿ ದಲಿತ್‌ ಹ್ಯೂಮನ್‌ ರೈಟ್ಸ್‌ ಬಗ್ಗೆ ಫೋಕಸ್‌ ಮಾಡಿ, ಇಂಡಿಯಾ ನೇಪಾಳ ಎರಡೂ ದೇಶಗಳು ಕ್ಯಾಸ್ಟ್‌ನ್ನು ಹೇಗೆ ಗ್ಲೋಬಲ್‌ ಪ್ಲಾಟ್‌ಫಾರ್ಮ್‌ ನಲ್ಲಿ ಅಡ್ರೆಸ್‌ ಮಾಡಿದಾರೆ ಅನ್ನೋದರ ಬಗ್ಗೆ ಕಂಪೇರಿಟೀವ್‌ ಸ್ಟಡಿ ಮಾಡಿದಿನಿ.

ಪೀಪಲ್‌ ಮೀಡಿಯಾ: ರೇಸಿಸಂ ಅಂತ ಹೇಳ್ದಾಗ ಈ ಹಿಂದೆ ಇಂಡಿಯಾದಲ್ಲಿರುವ ಅಸ್ಪೃಶ್ಯತೆ, ಕ್ಯಾಸ್ಟಿಸಂ ʼಈಸ್‌ ಇಟ್‌ ಎ ಫಾರ್ಮ್‌ ಆಫ್‌ ರೇಸಿಸಂ? ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ನಡೆದಿವೆ.  ಈ ಹಿಂದೆ ವಾಜಪೇಯಿ ಸರ್ಕಾರ ಇದ್ದಾಗ 2002ರಲ್ಲಿ ಡರ್ಬನ್‌ನಲ್ಲಿ ಒಂದು ಕನ್ವೆನ್ಶನ್‌ ನಡೆದಾಗ ಭಾರತ ಸರ್ಕಾರದ ನಿಲುವು ಕ್ಯಾಸ್ಟಿಸಂ ಅನ್ನೋದು ರೇಸಿಸಂ ಅಲ್ಲ ಅನ್ನೋ ರೀತಿಲಿ ಇತ್ತು. ಸೋ ಇದನ್ನು ನಾವು ಅಂದ್ರೆ ಭಾರತದ ಜಾತಿ ವ್ಯವಸ್ಥೆಯನ್ನು ಅಲ್ಲಿ ರೇಸಿಸಂ ಚೌಕಟ್ಟಿನಲ್ಲಿ ತರಲು ಸಾಧ್ಯವೇ? ಈ ಕುರಿತು ನಿಮ್ಮ ಅಭಿಪ್ರಾಯ?

ಡಾ.ಕೆ.ಪಿ.ಅಶ್ವಿನಿ

ಡಾ.ಕೆ.ಪಿ.ಅಶ್ವಿನಿ:  ಇದು ತುಂಬಾ ಟ್ರಿಕ್ಕಿ ಪ್ರಶ್ನೆ. ನಿಜಾ ಅಂದ್ರೆ  ಸುಮಾರು 30 ವರ್ಷಗಳಿಂದ ಗ್ಲೋಬಲ್‌ ಪ್ಲಾಟ್‌ಫಾರ್ಮ್ ನಲ್ಲಿ ಕ್ಯಾಸ್ಟ್‌, ರೇಸ್‌ ಬಗ್ಗೆ ತುಂಬಾ ಡಿಬೇಟ್ಸ್‌ ನಡೆದಿದೆ. ಅದರಲ್ಲೂ ಡರ್ಬನ್‌ ಕಾನ್ಫ್‌ರೆನ್ಸ್ ಆದಮೇಲೆ ಕ್ಯಾಸ್ಟ್‌ ಮೇಲೆ ಬಹಳ ಫೋಕಸ್‌ ಮಾಡಿದಾರೆ. ದಲಿತ್‌ ಆಕ್ಟಿವಿಸ್ಟ್‌ ಆಗ್ಲಿ, ಅಕಾಡೆಮಿಕ್ಸ್‌ ಆಗ್ಲಿ, ಸರ್ಕಾರದ ಪ್ರತಿನಿಧಿಗಳಾಗಲೀ ಗಂಭೀರವಾಗಿ ಪರಿಗಣಿಸಿದ್ದಾರೆ. ಸರ್ಕಾರ ಕೂಡಾ ಇದನ್ನು ಗಂಭೀರ ವಿಷಯ ಎಂದು ಪರಿಗಣಿಸಿದೆ. ಇದೊಂದು, ಮೇಜರ್‌ ಕನ್ಸರ್ನ್‌, ಇದನ್ನು ನಾವು ಪರಿಣಾಮಕಾರಿಯಾಗಿ ಅಡ್ರೆಸ್‌ ಮಾಡಬೇಕು. UN ಅಲ್ಲಿ ಒಂದು ಕನ್ವೆನ್ಶನ್‌ ಇದೆ- ಎಲಿಮಿನೇಶನ್‌ ಆಫ್‌ ರೇಶಿಯಲ್‌ ಡಿಸ್ಕ್ರಿಮಿನೇಶನ್‌ ಅಂತ. ಇದರಲ್ಲಿ ಬೇರೆ ಬೇರೆ ಅಂಶಗಳನ್ನು ಸೇರಿಸಿದ್ದಾರೆ. ರೇಸ್‌,  ಕ್ಸೆನೋಫೋಬಿಯಾ ಅದರಲ್ಲಿ ಡಿಸೆಂಟ್‌ (ಕುಲಮೂಲ) ಮತ್ತು ಉದ್ಯೋಗಾಧಾರಿತ ತಾರತಮ್ಯ ಹೇಗೆ ಎಂದು ನೋಡಲಾಗುತ್ತದೆ.  ಭಾಗಶಃವಾಗಿ ನೋಡಿದರೆ ಜಾತಿ ಅನ್ನೋದು ಹುಟ್ಟಿನಿಂದ ಬರುವ ಮತ್ತು ಉದ್ಯೋಗಾಧಾರಿತ ತಾರತಮ್ಯ. ಆದರೆ ಬಹಳ ಮಂದಿ ದಲಿತ್‌ ಆಕ್ಟಿವಿಸ್ಟ್‌, ಅಕಾಡೆಮಿಶಿಯನ್ಸ್‌, ಪ್ರೊಗ್ರೆಸ್ಸೀವ್‌ ಲಿಬರಲ್ಸ್‌ ಅಭಿಪ್ರಾಯದಲ್ಲಿ ಜಾತಿ ಎಂದೇ ಸ್ಪಷ್ಟವಾಗಿ ಹೇಳುವುದರಿಂದ ಅದನ್ನ ಪರಿಣಾಮಕಾರಿಯಾಗಿ ಅಡ್ರೆಸ್‌ ಮಾಡಬಹುದು. ಯಾಕೆಂದರೆ ಈಗ ಕ್ಯಾಸ್ಟ್‌ ಎಂಬುದು ಇಂಡಿಯಾ, ಸೌತ್‌ ಏಷ್ಯಾಗೆ ಸೀಮಿತವಾದುದಲ್ಲ. ಬದಲಿಗೆ ಅದೊಂದು ಗ್ಲೋಬಲ್‌ ಫಿನಾಮಿನಾನ್‌ ಆಗಿದೆ ಅಂತ. ನನಗಿಂತ ಮುಂಚೆ ಇದ್ದ ರಾಪೋರ್ಟರ್ ಕೂಡಾ ತಮ್ಮ ವರದಿಯಲ್ಲಿ ಜಾತಿ ಕುರಿತು ತಿಳಿಸಿದ್ದಾರೆ. ಯಾರೂ ಗುರುತಿಸುತ್ತಿಲ್ಲ ಎಂದಲ್ಲ. ಕ್ಯಾಸ್ಟ್‌ ಈಸ್‌ ಎ ಗ್ಲೋಬಲ್‌ ಫಿನಾಮೆನಾನ್‌;  ಇಟ್‌ ಶುಡ್‌ ಬಿ ಅಡ್ರೆಸ್ಡ್‌  ಅಂಡ್‌ ಯುನೈಟೆಡ್‌ ನೇಶನ್ಸ್‌ನಲ್ಲಾಗಲೀ ಬೇರೆ ಸಿವಿಲ್‌ ಸೊಸೈಟಿ ಗುಂಪುಗಳಲ್ಲಾಗಲೀ ಈ ಬಗ್ಗೆ ಮಾತನಾಡಿದಾರೆ. ಆದರೆ ಅಕಾಡೆಮಿಕ್‌ ನರೆಟಿವ್‌ ಏನು ಎಂದರೆ ಜಾತಿ ಅಸ್ಪೃಶ್ಯತೆಗಳು ರೇಸಿಸಂಗಿಂತಲೂ ಕೆಟ್ಟದ್ದು ಅಂತ.  ಸ್ಪಲ್ಪ ಅಕಾಡೆಮಿಶಿಯನ್ಸ್‌ ಮತ್ತು ಆಕ್ಟಿವಿಸ್ಟ್‌ ದೃಷ್ಟಿಕೋನ ಅದು. ಆದರೆ ಈಗ ಈ ವಿಷಯ ನೋಡುವುದರಲ್ಲಿ ಬದಲಾವಣೆಯಾಗಿದೆ. ಇಂದು ಜಾತಿ ತಾರತಮ್ಯದ ವಿಷಯವನ್ನು ಅಧಿಕೃತವಾಗಿಯೇ ಗುರುತಿಸುವ ಕೆಲಸ ಕೂಡಾ ಆಗುತ್ತಿದೆ.

ಪೀಪಲ್‌ ಮೀಡಿಯಾ: ಇಂಡಿಯಾ ಅಂದರೆ ದೊಡ್ಡ ಕಲ್ಚರ್‌ ಅಂತಾ ಹೇಳ್ತಾ ಭಾರತದ ಸಮಸ್ಯೆಗಳಾದ ಕ್ಯಾಸ್ಟ್‌, ರೇಸಿಸಂ ಈ ರೀತಿಯದನ್ನು ಮುಚ್ಚಿಡುವ ಪ್ರಯತ್ನಗಳು ನಡಿತಾ ಇವೆ. ಬಹುಶಃ ಈಗ, ನೀವು ಇಂಡಿಯಾದಿಂದ ಈ ಸಮಸ್ಯೆ ಬಗ್ಗೆ ಮಾತಾಡ್ಲಿಕ್ಕೆ ಹೋಗ್ತಿದಿರಾ, ಭಾರತದ ಸಮಸ್ಯೆಯನ್ನು ಹೊರಗಡೆ ನೀವು ಮಾತಾನಾಡೋದಕ್ಕೆ ಅಥವಾ ರೆಪ್ರಸೆಂಟ್‌ ಮಾಡೋದಿಕ್ಕೆ  ಹೊರಟಿದ್ದಿರಾ. ಇದನ್ನು ಎಲ್ಲರೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎಂದು ನಿಮಗೆ ಅನಿಸಿದೆಯಾ?

ಡಾ.ಕೆ.ಪಿ.ಅಶ್ವಿನಿ: ನಾನು ಇಂಡಿಯಾ ರೆಪ್ರೆಸೆಂಟ್‌ ಮಾಡಲ್ಲ . ನಾನು ಒಬ್ಬ ಸ್ವತಂತ್ರ ಪರಿಣತಳಾಗಿರುತ್ತೇನೆ. ನಾನು ವಿಶ್ವಸಂಸ್ಥೆಯನ್ನೂ ಪ್ರತಿನಿಧಿಸುವುದಿಲ್ಲ. ಒಬ್ಬ ಸ್ವತಂತ್ರ ತಜ್ಞೆಯಾಗಿ ವಿಶ್ವಸಂಸ್ಥೆಯ ಮಿತಿಗಳನ್ನು ಸಹ ಹೈಲೆಟ್‌ ಮಾಡಿ ಹೇಳಬಹುದು. ನನ್ನ ಮ್ಯಾಂಡೇಟ್‌ ಅಲ್ಲಿ ಏನ್‌ ಬರುತ್ತೆ ಅಂದ್ರೆ ಮುಖ್ಯವಾಗಿ ವರ್ಣಬೇಧ, ರೇಸಿಸಂ, ರೇಶಿಯಲ್‌ ಡಿಸ್ಕ್ರಿಮಿನೇಶನ್‌, ಕ್ಸೆನೋಫೋಬಿಯಾಗಳಿರುತ್ತವೆ. ಇದನ್ನು ಜಾತಿ ತಾರತಮ್ಯಕ್ಕೂ ವಿಸ್ತರಿಸಬಹುದು. ನಾನು ಪಿಎಚ್ ಡಿ ಮಾಡುವಾಗ ವಿಶ್ವಸಂಸ್ಥೆಯ ರಾಯಭಾರಿಯೊಬ್ಬರು ಈ ವಿಷಯವನ್ನು ಅಲ್ಲಿ ಗುರುತಿಸಿ ಹೇಳಿರುವ ಕುರಿತು ಓದಿದ್ದೆ. ದಲಿತರು ಹೇಗೆ ತಾರತಮ್ಯಕ್ಕೊಳಗಾಗುತ್ತಾರೆ ಎಂಬ ಸಂಗತಿಗಳನ್ನು ಅವರು ದಾಖಲಿಸಿದ್ದರು. ಅದೇ ರೀತಿ ಅದನ್ನು ಹೈಲೈಟ್‌ ಮಾಡಿ ಜನಾಂಗೀಯ ತಾರತಮ್ಯ ಎಷ್ಟು ಮುಖ್ಯವಾದದ್ದು ಎಂದು ತಿಳಿಸುವ ರೀತಿಯಲ್ಲಿ ಭಾರತದ ಪ್ರತಿನಿಧಿಗಳು ಪ್ರೊಆಕ್ಟೀವ್‌ ಆಗಿ ಇನ್ವಾಲ್ವ್‌ ಅಗಿದಾರೆ. ಈಗಿರೋ ಟೆಕ್ನಾಲಾಜಿಕಲ್‌ ಅಡ್ವಾನ್ಸ್‌ಮೆಂಟ್‌ನಲ್ಲಿ ಯಾವ ಮೂಲೇಲಿ ಏನು ನಡೆಯುತ್ತೆ ಅಂತ ಎಲ್ಲರಿಗೂ ಗೊತ್ತಾಗುತ್ತೆ. ಅದನ್ನು ಎಷ್ಟು ಮುಚ್ಚಿಟ್ಟರೂ ಮುಚ್ಚಿಡೋ ಅಂತ ಸ್ಥಿತಿ ಇಲ್ಲ ಈಗ. ಎಲ್ಲರೂ ಮಾತಾಡ್ತಾರೆ. ಮಾತಾಡ್ಲೇ ಬೇಕಾಗಿದೆ ಈಗ.

ಪೀಪಲ್‌ ಮೀಡಿಯಾ: ಕ್ಸೆನೋಪೋಭಿಯಾದ ಬಗ್ಗೆ ಹೇಳಿದ್ರಿ, ಒಂದು ದೇಶದವರು ಮತ್ತೊಂದು ದೇಶದವರ ಮೇಲೆ ತೋರುವ ದ್ವೇಷ-  ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ? ಇದು ಬೇರೆ ಕಡೆಗಳಲೆಲ್ಲಾ ಹೇಗಿದೆ?

ಡಾ.ಕೆ.ಪಿ.ಅಶ್ವಿನಿ: ಹೆಚ್ಚಾಗಿ ಡಯಾಸ್ಪೋರಾ ಕಮ್ಯೂನಿಟಿ, ಅನಿವಾಸಿ ಪ್ರಜೆಗಳು ಇರುವ ಕಡೆ ಇದನ್ನು ಕಾಣುತ್ತೇವೆ. ತುಂಬಾ ಕಡೆ ಏಷಿಯನ್ನರನ್ನು ತಾರತಮ್ಯದಿಂದ ನೋಡಲಾಗತ್ತೆ.  ಯುರೋಪ್‌ನಲ್ಲಾಗಲೀ, ನಾರ್ತ್‌ ಅಮೇರಿಕಾದಲ್ಲಾಗಲಿ ಏಷಿಯನ್ಸ್‌ ನ ಡಿಸ್ಕ್ರಿಮಿನೇಟ್‌ ಮಾಡೋದೊಂದು ರೀತಿ ಜನಾಂಗೀಯ ತಾರತಮ್ಯದ ರೀತಿ. ನನ್ನ ಮ್ಯಾಂಡೇಟ್‌ ನಲ್ಲಿ ಅದು ಒಂದು ಭಾಗ. ಹೇಗೆ ಮುಸ್ಲಿಂ ಸಮುದಾಯಗಳು, ಅಲ್ಪಸಂಖ್ಯಾತ ಸಮುದಾಯಗಳು ತಾರತಮ್ಯಕ್ಕೆ ಒಳಗಾಗುತ್ತವೆ ಎಂದು ನೋಡುವುದು.  ನನಗಿಂತ ಮೊದಲಿದ್ದ ಸ್ಪೆಶಲ್ ರಾಪೋರ್ಟರ್ ಮಾಡಿದ್ದ ಒಂದು ವರದಿಯಲ್ಲಿ ಹೇಗೆ ವಲಸಿತ ಸಮುದಾಯಗಳ ಮೇಲೆ ತಾರತಮ್ಯ ಎಸಗಲಾಗಿದೆ ಎಂದು ತಿಳಿಸಿದ್ದರು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗಿ ಜೀವನಾವಕಾಶಗಳನ್ನು ಹುಡುಕುವ ಸಮುದಾಯಗಳಿರುತ್ತವೆ. ಇಂತಹ ವಲಸಿಗರನ್ನು ಬೇರೆ ರೀತಿಯಾಗಿ ನೋಡುವುದು ಕೂಡಾ ಜನಾಂಗೀಯ ತಾರತಮ್ಯದ ಒಂದು ರೀತಿ. ಇದು ತುಂಬಾ ಮುಖ್ಯ . ಈಗ ಓದೋದಿಕ್ಕೆ ಅಂತ ತುಂಬಾ ಜನ ಹೋಗ್ತಾರೆ. ಭಾರತೀಯ ವಿದ್ಯಾರ್ಥಿಗಳು ಎಲ್ಲಾ ಕಡೆ ಇದ್ದಾರೆ. ಅವರಿಗೆ ಈ ಜನಾಂಗೀಯ ತಾರತಮ್ಯ ಅನುಭವಕ್ಕೆ ಬಂದಿರುತ್ತದೆ. ಜೊತೆಗೆ ಉದ್ಯೋಗಕ್ಕಾಗಿ ತುಂಬಾ ಜನ ಭಾರತೀಯರು ಹೊರದೇಶಗಳಲ್ಲಿದ್ದಾರೆ. ಅಮೆರಿಕ ಮತ್ತು ಎಲ್ಲಾ ದೇಶಗಳಲ್ಲಿ. ನೀವು ವೆಸ್ಟ್‌ ಏಷಿಯನ್‌ ದೇಶಗಳಲ್ಲಿ ನೋಡಿದರೆ ಅಲ್ಲಿರುವುದು ವೈಟ್‌ ಕಾಲರ್‌ ಜಾಬ್ಸ್‌ ಅಲ್ಲ. ಬ್ಲೂ ಕಾಲರ್‌ ಜಾಬ್ಸ್‌, ಲೇಬರ್ಸ್‌ ಕಾಲರ್‌ ಅಲ್ಲಿಯೂ ಇದೆ.  ಅವರೆಲ್ಲಾ ಯಾವ ರೀತಿ ಡಿಸ್ಕ್ರಿಮಿನೇಟ್‌ ಮಾಡ್ತಾರೆ ಅನ್ನೋದರ ಬಗ್ಗೆ ಫೋಕಸ್‌ ಮಾಡಬಹುದು.

ಪೀಪಲ್‌ ಮೀಡಿಯಾ: ಕೆಲವು ಬಾರಿ ನಮ್ಮ ದೇಶದಲ್ಲೇ, ನಮ್ಮ ದೇಶದ ಒಂದು ಭಾಗದವರ ತಾರತಮ್ಯ ಆಗುತ್ತೆ. ಉದಾಹರಣೆಗೆ ಈಗ ಈಶಾನ್ಯ ಭಾರತದ ಮಣಿಪುರದಂತಹ ಕಡೆಗಳಿಂದ ಬರುವ ಜನರನ್ನು ಚೈನೀಸ್‌ ನೇಪಾಳೀಸ್‌ ಅಂತ ಟ್ರೀಟ್‌ ಮಾಡ್ತಾರೆ. ಅದೂ ಕೂಡ ಬರುತ್ತಾ ಇದರಲ್ಲಿ?

ಡಾ.ಕೆ.ಪಿ.ಅಶ್ವಿನಿ ಖಂಡಿತಾ. ಅದೂ ಸಹ ಸೇರಿಕೊಳ್ಳುತ್ತದೆ. ಅದೇ ರೇಸಿಸಂ. ನೀವು ಅವರನ್ನು ಒಂದು ರೀತಿ  ಕಾಣ್ತೀರಾ ಅನ್ನುವ ಕಾರಣದಿಂದ  ಅದು ಇದರಲ್ಲಿ ಸೇರುತ್ತೆ.

ಪೀಪಲ್‌ ಮೀಡಿಯಾ: ನಿಮಗೆ ಈ ರೀತಿಯ ವಿಷಯಗಳು ಮುಖ್ಯ ಅನ್ನಿಸಲು ಮತ್ತು ನಿಮ್ಮ ಪಿಎಚ್‌ಡಿ ಅಧ್ಯಯನದಲ್ಲೂ ಇಂತಹ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?

ಡಾ.ಕೆ.ಪಿ.ಅಶ್ವಿನಿ: ನನಗೆ ಚಿಕ್ಕವಳಿಂದ ಸ್ವಲ್ಪ ದಲಿತ್‌ ಮೂವ್ ಮೆಂಟ್‌ ಬಗ್ಗೆ ಓರಿಯೆಂಟೇಶನ್‌ ಮನೆಯಿಂದಲೇ ಸಿಕ್ಕಿದೆ. ನನ್ನ ಪೇರೆಂಟ್ಸ್‌ನ ಅಕಾಡೆಮಿಕ್‌ ಓರಿಯೆಂಟೇಶನ್‌ ನಂಗೆ ಬಹಳ  ಸಿಕ್ಕಿದೆ. ಎಸ್ಪೆಶಲಿ ಆಂಟಿ ಕಾಸ್ಟ್ ಮೂವ್‌ಮೆಂಟ್‌ ವಿಷಯದಲ್ಲಿ. ಅಂಬೇಡ್ಕರೈಟ್‌ ಐಡಿಯಾಲಜಿ, ಫಿಲಾಸಫಿ ವಿಷಯಗಳಲ್ಲಿ. ಚಿಕ್ಕವಳಾಗಿದ್ದಾಗಿಂದಲೂ ಈ ರೀತಿಯ ಸೋಶಿಯಲ್‌ ಇಶ್ಯೂ, ಪೊಲಿಟಿಕಲ್‌ ಇಶ್ಯೂ ಬಗ್ಗೆ ಓದೋದಿಕ್ಕೆ ಬಹಳ ಆಸಕ್ತಿ ಇತ್ತು. ನಾನು  ಮಾಸ್ಟರ್ಸ್‌ ಥೀಸೀಸ್‌ ಮಾಡಿದಾಗ ಸೈಂಟ್  ಜೋಸೆಫ್‌ ಕಾಲೇಜಿನಲ್ಲಿ ಕ್ಯಾಸ್ಟ್‌ ಅಂಡ್‌ ಲ್ಯಾಂಡ್‌ ರಿಫಾರ್ಮ್ಸ್‌ ಬಗ್ಗೆ ಮಾಡಿದ್ದೆ. ಸೋ ಅದರಲ್ಲಿ ಜಾತಿ ತಾರತಮ್ಯದ ವಿಷಯವನ್ನು ನನ್ನ ಅಕಾಡೆಮಿಕ್‌ ಅಧ್ಯಯನ ಮತ್ತು ಆಕ್ಟಿವಿಸಂನಲ್ಲಿ ಸೇರಿಸಿಕೊಳ್ಳಲು ಪ್ರಯತ್ನ ಮಾಡಿದ್ದೆ.  ನಮ್ಮ ಫ್ಯಾಮಿಲಿ ಫ್ರೆಂಡ್ಸ್‌ ತುಂಬಾ ಜನ ದಲಿತ್‌ ಆಕ್ಟಿವಿಸಂ ನಲ್ಲಿದಾರೆ. ಆರ್ಗನೈಸೇಶನ್ಸ್‌ ಇದೆ. ಸೋ ನಾನು ವಾಲೆಂಟ್ರಿ ಮಾಡ್ತಿನಿ. ಹೀಗಾಗಿ ನನಗೆ ಒಂದು ನಿಜವಾದ ಕನ್ವಿಕ್ಷನ್‌ ಇತ್ತು. ಜೊತೆಗೆ ದಮನಿತ ಸಮುದಾಯದಿಂದ ಬಂದಿರೋದ್ರಿಂದ ಒಂದು ಅನುಭವ ಇರುತ್ತದೆ. ಈಗ ನೀವೊಂದು ಶೋಷಿತ ವರ್ಗದಿಂದ ಬಂದಿರ್ತೀರಾ ಅಂದ್ರೆ ಅಥವಾ ನೀವು ಒಂದು ಎಜುಕೇಟೆಡ್‌, ಅಪ್ಪರ್‌ ಮಿಡಲ್‌ ಕ್ಲಾಸ್‌ ಫ್ಯಾಮಿಲಿಯಿಂದ  ಬಂದ್ರೂ ಎಲ್ಲೋ ಒಂದು ಕಡೆ ನಿಮ್ಮನ್ನ ಟಾಂಟ್‌ ಮಾಡ್ತಾರೆ. ʼಓ ರಿಸರ್ವೇಶನ್‌ʼ ಅಂತ ಮಾತನಾಡಬಹುದು. ಮೆರಿಟ್‌ ಅಂತ ಮಾತನಾಡಬಹುದು. ಇಂತದನ್ನೆಲ್ಲಾ ನೋಡಿ ನನಗೆ, ಇಟ್ಸ್‌ ಇಂಪಾರ್ಟೆಂಟ್‌ ಟು ಸ್ಪೀಕ್‌ ಅಬೌಟ್‌ ದೀಸ್‌ ಇಶ್ಯೂಸ್‌ ಅನಿಸಿತು. ಅದರಲ್ಲೂ ಒಂದು ಎಜುಕೇಟೆಡ್‌ ಫ್ಯಾಮಿಲಿಯಿಂದ ಬಂದಾಗ, ಒಂದು ಬ್ಯಾಕಪ್‌ ಇದ್ದಾಗ, ಒಂದು ಸೋಶಿಯಲ್‌ ಕ್ಯಾಪಿಟಲ್‌ ಇದ್ದಾಗ ಕಮ್ಯೂನಿಟಿಯಲ್ಲಿ ಇರೋರಿಗೆ ಅಸರ್ಟೀವ್‌ ಆಗಿ ಮಾತಾಡುವ ಅವಶ್ಯಕತೆ ಇದೆ ಅಂತ ಅನಿಸಿತು. ಅಂಡ್‌ ಐ ಟೇಕ್‌ ಇನ್ಸ್ಪಿರೇಶನ್‌ ಬೈ ಬಾಬಾಸಾಹೇಬ್ಸ್‌ ಫಿಲಾಸಫಿ. (ಬಾಬಾಸಾಹೇಬರ ತತ್ವಸಿದ್ಧಾಂತದಿಂದ ನಾನು ಪ್ರೇರಣೆ ಸ್ಪೂರ್ತಿ ಪಡೆಯುತ್ತೇನೆ)

ಪೀಪಲ್‌ ಮೀಡಿಯಾ: ನಿಮ್ಮ ರೀತಿ ಯೋಚನೆ ಮಾಡೋರು ತುಂಬಾ ಕಡಿಮೆ ಇದಾರೆ. ಸಾಮಾನ್ಯವಾಗಿ ದಲಿತ ಮತ್ತಿತರ ತುಳಿತಕ್ಕೊಳಗಾದ ಸಮುದಾಯಗಳಿಗೆ ಹೊರಗಡೆ ತಮ್ಮ ಬಗ್ಗೆ, ತಮ್ಮ ಜಾತಿಯ ಬಗ್ಗೆ ಹೇಳಿಕೊಳ್ಳೋದಿಕ್ಕೆ ಹಿಂಜರಿಕೆ ಇರುತ್ತೆ. ಅಥವಾ ಅವರಲ್ಲಿ ಕೀಳರಿಮೆ ಇರಬಹುದು. ಈ ರೀತಿಯ ಸಮಸ್ಯೆಯನ್ನು ನೀವು ಹೇಗೆ ನೋಡ್ತಿರಾ?

ಡಾ.ಕೆ.ಪಿ.ಅಶ್ವಿನಿ:   ಈ ಪ್ರಶ್ನೆಯನ್ನು ತುಂಬಾ ಜನ ಕೇಳ್ತಾರೆ. ನಾನು ವಿದ್ಯಾರ್ಥಿಯಾಗಿದ್ದಾಗ, ಫ್ಯಾಕಲ್ಟಿಯಾಗಿ ಪಾಠ ಮಾಡುವಾಗ, ಯೂನಿವರ್ಸಿಟಿಯಲ್ಲಿರುವಾಗ ಈ ಪ್ರಶ್ನೆ ಬಂದಿದೆ. ಕೆಲವರಿಗೆ ಸೋಶಿಯಲ್‌ ಕ್ಯಾಪಿಟಲ್‌ ಇರುತ್ತೆ. ಈಗ ನನಗೆ ಒಂದು ಸರ್ಟನ್‌ ಪ್ರಿವಿಲೈಜ್ಡ್‌ ಸೋಶಿಯಲ್‌ ಕ್ಯಾಪಿಟಲ್‌ ಇದೆ. ಧೈರ್ಯವಾಗಿ, ಅಸರ್ಟೀವ್‌ ಆಗಿ ಮಾತಾಡುವ ಸ್ಪೇಸ್‌ ಇದೆ. ನಂಗೆ ಆ ಓರಿಯೆಂಟೇಶನ್‌ ಸಿಕ್ಕಿದೆ. ನಾನು ಅದಕ್ಕೆ ತುಂಬಾ ಲಕ್ಕಿ. ನಾನು ಯಾವತ್ತೂ ನನ್ನ ಐಡೆಂಟಿಟಿಯನ್ನು ಹೇಳ್ಕೋಳೋದ್ರಲ್ಲಿ ಹಿಂಜರಿದಿಲ್ಲ. ಆದರೆ ಆದೇ ವೇಳೆಗೆ ನಾನು ಎಲ್ಲರಿಗೂ ನೀವು ಐಡೆಂಟಿಟಿಯನ್ನ ಹೇಳಿಕೊಳ್ಳಿ ಎಂದೂ ಹೇಳೋಕಾಗಲ್ಲ ಅನ್ನೋದನ್ನೂ ಗುರುತಿಸಿಕೊಂಡಿದ್ದೇನೆ. ಕೆಲವರು ಹಣಕಾಸು ಸ್ಥಿತಿ, ಸಾಮಾಜಿಕ ಸ್ಥಿತಿಗತಿ ಇತ್ಯಾದಿ ಕಾರಣದಿಂದ ತಮ್ಮ ಜಾತಿ ಬಗ್ಗೆ ಹೇಳ್ಕೊಳೋಕೆ ಆಗದೇ ಇರಬಹುದು. ನಾನು ಅವರನ್ನು ದೂರುವುದಿಲ್ಲ. ಇದಕ್ಕೆ ಕೀಳರಿಮೆ ಅಂತ ಹೇಳುವುದಕ್ಕಿಂತಲೂ ಅವರು ಹೇಳ್ಕೊಂಡಾಗ ಒಂದು ಪ್ರಿವಿಲೈಜ್ಡ್‌ ಕಮ್ಯೂನಿಟಿಯಿಂದ ಬರುವಂತಹ ಪ್ರತಿಕ್ರಿಯೆಗಳಿಗೆ ಅಂಜಿ ಅವರು ಹೇಳಿಕೊಳ್ಳದೇ ಇರಬಹುದು. ಆದರೆ ನಾನು ಯಾವಾಗಲೂ ಹೇಳುವುದೇನೆಂದರೆ ಅಕಡೆಮಿಕ್ಸ್‌ನಲ್ಲಿ, ಬ್ಯೂರೋಕ್ರಸಿಯಲ್ಲಿ ಅಥವಾ ರಾಜಕಾರಣದಲ್ಲಿ ಇರುವ ಎಜುಕೇಟೆಡ್‌ ಕ್ಲಾಸ್‌ ಧೈರ್ಯದಿಂದ ತಮ್ಮ ಐಡೆಂಟಿಟಿಯನ್ನು ಅಸರ್ಟೀವ್‌ ಆಗಿ ಹೇಳ್ಕೊಳ್ಳಬಹುದು. ಅವರು ಅಂಬೇಡ್ಕರ್‌ವಾದದ ಬಗ್ಗೆ , ಬಾಬಾಸಾಹೇಬರ ಫಿಲಾಸಫಿ ಬಗ್ಗೆ, ತಮ್ಮ ಐಡೆಂಟಿಟಿ ಬಗ್ಗೆ ಹೇಳ್ಕೊಬಹುದು. ಸೋ ಐ ಫೀಲ್‌ ದಟ್‌ ಎಜುಕೇಟೆಡ್‌ ಕ್ಲಾಸ್‌ ಅಟ್ಲೀಸ್ಟ್‌ ಶುಡ್‌ ಬಿ ಅಸರ್ಟೀವ್.

ಪೀಪಲ್‌ ಮೀಡಿಯಾ: ಇತ್ತೀಚೆಗೆ 15-20 ವರ್ಷಗಳಿಂದ ನಾವು ಅಂಬೇಡ್ಕರ್‌ ಬಗ್ಗೆ ಹೆಚ್ಚು ಮಾತಾಡ್ತಾ ಇದೀವಿ. ನಿಮಗೆ ಅಂಬೇಡ್ಕರ್‌ ಚಿಂತನೆ  ಯಾವ ರೀತಿ ಪ್ರೇರಣೆ ನೀಡಿದೆ ಅಥವಾ ಇಂದು ಅಂಬೇಡ್ಕರ್ ಅವರ ಪಾತ್ರ ಏನು?

ಡಾ.ಕೆ.ಪಿ.ಅಶ್ವಿನಿ:  ಬಾಬಾಸಾಹೇಬ್‌ ಅಂಬೇಡ್ಕರ್‌  ಅವರನ್ನು ನಾನು ಒಬ್ಬ ಆದರ್ಶ ವ್ಯಕ್ತಿಯಾಗಿ ನೋಡುತ್ತೇನೆ.  ಯಾಕಂದ್ರೆ ನಾನು ಚಿಕ್ಕವಳಿದ್ದಾಗಿನಿಂದಲೂ ಮನೇಲಿ ಬಾಬಾಸಾಹೇಬರ ಕಥೆಗಳನ್ನು ಕೇಳಿಕೊಂಡು ಬೆಳೆದಿರೋದು. ಅದು ಯಾವ ರೀತಿ ನನ್ನ ಮೇಲೆ ಪ್ರಭಾವ ಆಗಿದೆ  ಅಂದ್ರೆ, ಇಟ್ಸ್‌  ರಿಯಲಿ ಇಂಪಾರ್ಟೆಂಟ್‌ ಲೈಕ್‌… ಯು ಕೆನಾಟ್ ಡಿಸ್ಮಿಸ್‌ ಬಾಬಾಸಾಹೇಬ್‌ ಅಂಬೇಡ್ಕರ್‌ ಫ್ರಂ ಅಕಾಡೆಮಿಕ್ಸ್‌, ಆಕ್ಟಿವಿಸಂ, ಈವನ್‌ ಇನ್ ಡೈಲಿ ಲೈಫ್ ಸಿಚುಯೇಶನ್‌. 20 ವರ್ಷದಿಂದ ಅನ್ನೋದಕ್ಕಿಂತ 1950ರ ದಶಕದಿಂದಲೂ  ಅವರು ಯಾವಾಗ ಸೋಶಿಯಲ್‌ ಮೂವ್‌ಮೆಂಟ್‌ನ ಮೈನ್‌ಸ್ಟ್ರೀಮ್‌ ಗೆ ತಂದ್ರೋ ಆಗ್ಲಿಂದ ಬಾಬಾ ಸಾಹೇಬ್‌ ಬಗ್ಗೆ ಎಲ್ಲಾ ಕಡೆ ಮಾತನಾಡಿದಾರೆ.

ಪೀಪಲ್‌ ಮೀಡಿಯಾ: ನಿಜ, ದಲಿತ್‌ ಮೂವ್‌ಮೆಂಟ್ಸ್‌ ಆ ಕೆಲಸವನ್ನು ಮೊದಲಿಂದಲೂ ಮಾಡ್ತಾನೇ ಇವೆ. ಆದರೆ ದಲಿತೇತರರು ಅಥವಾ  ಜನರಲ್‌ ಪಬ್ಲಿಕ್‌, ಅಥವಾ ಪಬ್ಲಿಕ್‌ ಇಂಟಲೆಕ್ಚುಯಲ್ಸ್‌, ಲೆಫ್ಟ್‌ ಐಡಿಯಾಲಜಿ ಇರುವಂತವರು ಕೂಡ ಅಂಬೇಡ್ಕರ್‌ ಬಗ್ಗೆ ಮಾತಾಡ್ತಿರೋದು ತೀರಾ ಇತ್ತೀಚೆಗೆ.

ಡಾ.ಕೆ.ಪಿ.ಅಶ್ವಿನಿ:   ನಿಜ ಸರ್‌..  ಈಗ ಯಾವ ಕಂಡೀಷನ್‌ ಗೆ ಬಂದಿದೆ ಅಂದ್ರೆ ಒಂದು ಕ್ಲಾಸ್‌ ಕ್ರಿಯೇಟ್‌ ಆಗಿದೆ. ದಲಿತ ಸಮುದಾಯದೊಳಗೇ ಒಂದು ವರ್ಗ. ಅವರಲ್ಲಿ ಬಹಳ ಜನ ಅಸರ್ಟಿವ್‌ ಆಗಿ ದಲಿತ್‌ ಇಶ್ಯೂಸ್‌ ಬಗ್ಗೆ ಮಾತಾಡ್ತಾರೆ. ನಾನು ವಿದ್ಯಾರ್ಥಿ ಚಳವಳಿಯಲ್ಲಿದ್ದೆ. ಜೆ ಎನ್‌ ಯುನಲ್ಲಿ ನಾನು  ಯುನೈಟೆಡ್‌ ದಲಿತ್‌ ಸ್ಟೂಡೆಂಟ್ಸ್‌ ಫ್ರಂಟ್‌ ನ ಭಾಗವಾಗಿದ್ದೆ . ಸೋ ದಲಿತ್‌ ಆಕ್ಟಿವಿಸಂ, ಸ್ಟೂಡೆಂಟ್‌ ಆಕ್ಟಿವಿಸಂನಲ್ಲಿ ತುಂಬಾ ಅಸರ್ಟೀವ್‌ ಆಗಿ, ಆಕ್ಟೀವ್‌ ಆಗಿ ಕ್ಯಾಂಪಸ್‌ ಗಳಲ್ಲಿವೆ. ಸೋ ನಾವು ಕ್ಯಾಸ್ಟ್‌ ಬಗ್ಗೆ, ಡಿಸ್ಕ್ರಿಮಿನೇಶನ್‌ ಬಗ್ಗೆ ಮಾತಾಡಿದಾಗ, ಸಂವಿಧಾನದ ಬಗ್ಗೆ ಮಾತಾಡಿದಾಗ ಅದರ ಸಿದ್ಧಾತಗಳು ಲೆಫ್ಟ್‌ ಆಗಲೀ, ಮತ್ಯಾವುದೇ ರಾಜಕೀಯ ಪಕ್ಷಗಳಾಗಲಿ ಯಾರೂ ಇಂದು ಅಂಬೇಡ್ಕರ್‌ ಅವರನ್ನು ಕಡೆಗಣಿಸಲು ಆಗದಂತಹ ಪರಿಸ್ಥಿತಿ ಬಂದೊದಗಿದೆ. ಈಗ ಅವರಿಗೆ ಬಾಬಾಸಾಹೇಬರ ಬಗ್ಗೆ ಮಾತಾಡಲೇ ಬೇಕು. ಅದೇನೋ ಮಾತಾಡಲೇಬೇಕು ಅಂತಲ್ಲ. ಅಂಬೇಡ್ಕರ್‌ ನೀಡಿರುವ ಕೊಡುಗೆಗಳು ಹಾಗಿವೆ. ಒಂದು ಸಂವಿಧಾನದಿಂದ ಹಿಡಿದು ಪಾಲಿಸಿ ಮೇಕಿಂಗ್‌ ಆಗಲೀ, ಯಾವ ರೀತಿ ಒಂದು ಡೆಮೋಕ್ರಟಿಕ್‌ ಸ್ಟೇಟ್‌ ಆಪರೇಟ್‌ ಮಾಡಬೇಕು, ಹೇಗೆ ಫಂಕ್ಷನ್‌ ಮಾಡಬೇಕು ಇವುಗಳನ್ನೆಲ್ಲಾ  ಯಾವುದೇ ಸಿದ್ಧಾಂತ ಇರುವ ಯಾವುದೇ ರಾಜಕೀಯ ಪಕ್ಷವೂ ಇಗ್ನೋರ್‌ ಮಾಡಲು ಸಾಧ್ಯವಿಲ್ಲ. ಅಕಾಡೆಮಿಕ್‌ ಆಗ್ಲಿ, ಆಕ್ಟಿವಿಸಂ ಆಗ್ಲಿ, ಬಾಬಾಸಾಹೇಬರ ಫಿಲಾಸಫಿ ಈ ಜಂಕ್ಚರ್‌ ಗೆ ಎಷ್ಟು ಇಂಪಾರ್ಟೆಂಟ್‌ ಇದೆ ಅನ್ನೋದನ್ನ ಸಿದ್ಧಾಂತಗಳ ಆಚೆಗೂ ಯಾರೂ ಕಡೆಗಣಿಸಲು ಸಾಧ್ಯವಿಲ್ಲ.

ಪೀಪಲ್‌ ಮೀಡಿಯಾ: ನೀವು ಈಗ ಈ ಹುದ್ದೆಗೆ ಅಪಾಯಿಂಟ್‌ ಆಗಿದ್ದೀರಾ… ನಿಮ್ಮಿಂದ ನಾವೆಲ್ಲಾ ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು?

ಡಾ.ಕೆ.ಪಿ.ಅಶ್ವಿನಿ:  ಇದು ಬಹುದೊಡ್ಡ ಹೊಣೆಗಾರಿಕೆ. ಯಾವುದೇ ಒಂದೇ ದೇಶದ ಮೇಲೆ ಫೋಕಸ್‌ ಮಾಡಲ್ಲ. ಗ್ಲೋಬಲಿ ಐ ವುಡ್‌ ಬಿ ಫೋಕಸಿಂಗ್‌ ಆನ್‌ ಡಿಫರೆಂಟ್‌ ಇಶ್ಯೂಸ್‌ ಅಂಡ್‌ ಡಿಫರೆಂಟ್ ಕಂಟ್ರೀಸ್‌. ನಿಮಗೇ ಗೊತ್ತು ರೇಸಿಸಂ ಅಂದ್ರೆ ಜಸ್ಟ್‌ ರೇಸಿಸಂ ಅಲ್ಲ. ಅದ್ರಲ್ಲಿ ಬೇರೆ ಬೇರೆ ಇಶ್ಯೂಸ್‌ ಇರತ್ತೆ. ಕ್ಸೆನೋಫೋಬಿಯಾ ಅಂದರೆ ಪ್ರಾಯಶಃ ಇಂಡಿಯಾದಲ್ಲಿ ಬೇರೆ ತರ ಇರುತ್ತೆ ಶ್ರೀಲಂಕಾದಲ್ಲಿ ಬೇರೆ ಇರುತ್ತೆ. ಅಮೆರಿಕದಲ್ಲಿ  ಬೇರೆ ರೀತಿಯಾಗಿರುತ್ತದೆ.   ಆದರೆ ನಾನು ಯಾವಾಗಲೂ ಗಮನ ನೀಡುವ ಒಂದು ಮುಖ್ಯ ವಿಷಯ ಅಂದರೆ ಜೆಂಡರ್‌. ರೇಸಿಸಂ ಇರಲಿ, ಜಾತಿ ತಾರತಮ್ಯ ಇರಲಿ, ಕ್ಸೆನೋಫೋಬಿಯಾ ಇರಲಿ, ಅದರಲ್ಲಿ ಜೆಂಡರ್‌ ಹೇಗೆ ಕೆಲಸ ಮಾಡುತ್ತದೆ ಎಂದು ಗುರುತಿಸಿರುವುದು ಕಡಿಮೆ. ಬಟ್‌ ರೇಸಿಸಂ ಅಂತ ಬಂದಾಗ ಜೆಂಡರ್‌ ನಲ್ಲಿ ರೇಸಿಸಂ ಹೇಗೆ ಅಪ್ಲೈ ಅಗತ್ತೆ ಅಂತ. ಒಂದು ವುಮೆನ್‌, ಎಲ್‌ಜಿಬಿಟಿಕ್ಯೂ ಕಮ್ಯೂನಿಟಿ ಆಗ್ಲಿ, ಅವರ ಮೇಲೆ ರೇಸಿಸಂ ನ  ಟ್ರಿಪಲ್‌ ಡಿಸ್ಕ್ರಿಮಿನೇಶನ್‌ ಇರತ್ತೆ, ಮಲ್ಟಿಲೇಯರ್ಸ್‌, ಇಂಟರ್‌ಸೆಕ್ಷಾನಾಲಿಟಿ ಇರುತ್ತೆ. ಆ ವಿಷಯಾನ ಹೈಲೈಟ್‌ ಮಾಡಬೇಕು ಅಂತ ನಂಗೆ ತುಂಬಾ ಇಂಟರೆಸ್ಟ್‌ ಇದೆ.

ಪೀಪಲ್‌ ಮೀಡಿಯಾ: ನೀವು ಹೇಳಿದ ಜೆಂಡರ್‌ ಇಂಟರ್‌ ಸೆಕ್ಷನಾಲಿಟಿ ಆಫ್ರಿಕನ್ಸ್‌ ಅಮೇರಿಕನ್ಸ್‌ ಡಿಸ್‌ಕೋರ್ಸ್‌ನಲ್ಲಿ ಬಹಳ ಮುಖ್ಯವಾಗಿ ಬಂದಿದೆ. ಕೆಲವು ಜನಪ್ರಿಯ ಸಿನಿಮಾಗಳು ಸಹ ಇದನ್ನು ಮುನ್ನೆಲೆಗೆ ತಂದಿವೆ. ಉದಾಹರಣೆಗೆ ಕಲರ್‌ ಪರ್ಪಲ್‌. ಆದರೆ ಇಂಡಿಯಾದಲ್ಲಿ ಒಂದೋ ಜೆಂಡರ್‌ ನೋಡ್ತೀವಿ ಇಲ್ವೇ ಕ್ಯಾಸ್ಟ್‌ ಇಶ್ಯೂ ನೋಡ್ತಿವಿ. ಜೆಂಡರ್‌ ಮೂವ್‌ಮೆಂಟ್ಸ್‌ ಇದೆ ಅಥವಾ ಕ್ಯಾಸ್ಟ್‌ ಮೂವ್‌ಮೆಂಟ್ಸ್‌ ಇದೆ. ಆದರೆ ಅವೆರಡನ್ನೂ ಬ್ಲೆಂಡ್, ಮಾಡೋ ರೀತಿಯಲ್ಲಿ ಜೆಂಡರ್‌ ಒಳಗೆ ಕ್ಯಾಸ್ಟ್‌ ಇಶ್ಯೂ ಅಥವಾ ಕ್ಯಾಸ್ಟ್‌ ಒಳಗೆ ಜೆಂಡರ್‌ ಇಶ್ಯೂನ ನೋಡೋ ಅಂತಹ ಬ್ಯಾಲೆನ್ಸ್‌ ಇಲ್ಲ ಅಂತ ಅನಿಸುತ್ತೆ ನನಗೆ. ಇದರ ಬಗ್ಗೆ ನಿಮ್ಮ ಅನಿಸಿಕೆ?

ಡಾ.ಕೆ.ಪಿ.ಅಶ್ವಿನಿ:   ಕಂಪ್ಲೀಟ್ಲಿ ಇಲ್ಲ ಅಂತ ಹೇಳೋಕಾಗಲ್ಲ. ಬಟ್‌ ಅದಕ್ಕೆ ಸ್ಪೇಸ್‌ ಸ್ವಲ್ಪ ಲಿಮಿಟೆಟ್‌ ಆಗಿದೆ ಅದನ್ನು ಹೇಳ್ತಿನಿ. ಟ್ವೆಂಟಿಯತ್ ಸೆಂಚುರಿಯಿಂದ ತಗೊಂಡ್ರೆ ಮೂವ್‌ಮೆಂಟ್‌ನಲ್ಲಿ ದಲಿತ್‌ ಕಮ್ಯೂನಿಟಿಯ ಬಹಳ ಹೆಣ್ಣು ಮಕ್ಕಳ ರೆಪ್ರೆಸೆಂಟೇಶನ್‌ ಕಾಣಬಹುದು. ಬಾಬಾ ಸಾಹೇಬರ ಮೂವ್‌ಮೆಂಟ್‌ ನಡೀಬೇಕಾದ್ರೆ ಕಾಳಾರಾಂ ದೇವಸ್ಥಾನ ಎಂಟ್ರಿಯಿಂದ ಹಿಡಿದು ಹಲವು ಚಳವಳಿಗಳಲ್ಲಿ ಕಮ್ಯುನಿಟಿ ಹೆಣ್ಣು ಮಕ್ಕಳು ತುಂಬಾ ಪ್ರೋಆಕ್ಟೀವ್‌ ಆಗಿ ಪಾರ್ಟಿಸಿಪೇಟ್‌ ಮಾಡಿದಾರೆ. ಅಲ್ಲದೇ ಬೇಬಿತಾಯಿ ಕಾಂಬ್ಳೆ, ಶಿವಗಾಮಿ, ಆಗ್ಲಿ ಬೇರೆ ಬೇರೆ ದಲಿತ್‌ ರೈಟರ್ಸ್‌, ಬಾಮಾ ಇವರೆಲ್ಲರೂ ದಲಿತ್‌ ವಿಮೆನ್‌ ಎಕ್ಸಪೀರಿಯನ್ಸ್‌ ನ ತುಂಬಾ ಆರ್ಗನಿಕ್‌ ಆಗಿ ಹೇಗಿದೆಯೋ ಹಾಗೆ ಬರೆದಿದ್ದಾರೆ. ಈಗ ಇರೋ ಪರಿಸ್ಥಿತಿಯಲ್ಲಿ ಜೆಂಡರ್‌ ನ ಸಂಪೂರ್ಣ ಇಗ್ನೋರ್‌ ಮಾಡಿದಾರೆ ಅಂತ ಹೇಳಲ್ಲ ನಾನು. ದಲಿತ್‌ ಮೂವ್‌ಮೆಂಟ್‌ ಅಲ್ಲಿ ಜೆಂಡರ್‌ ಮಾತಾಡ್ತಿದಾರೆ.

ಪೀಪಲ್‌ ಮೀಡಿಯಾ: ಚಳವಳಿಯಲ್ಲಿ ಆ ರೀತಿ ಆಗಿದ್ದಿದೆಯಾ?

ಡಾ.ಕೆ.ಪಿ.ಅಶ್ವಿನಿ:   ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲೂ ತುಂಬಾ ಕಡೆ ನೋಡಿದರೆ ಒಂದು ದಲಿತ್‌ ಫೆಮಿನಿಸಂ ಅನ್ನೋ ಕಾನ್ಸೆಪ್ಟೇ ಬಂದಿದೆ. ಬೇಬಿತಾಯಿ ಕಾಂಬ್ಳೆ ಅವರು ತುಂಬಾ ವರ್ಷದ ಹಿಂದೆಯೇ ಬರೆದಿದ್ರು. ಅದು ಒಂದು ಅಕಾಡೆಮಿಕ್‌ ಅಮ್ನೀಶಿಯಾ ಅಂತಾರಲ್ವಾ.. ಹಾಗೆ..

ಪೀಪಲ್‌ ಮೀಡಿಯಾ: ಕರ್ನಾಟಕದಲ್ಲಿ ಅಷ್ಟು ದೊಡ್ಡ ದಲಿತ್‌ ಮೂವ್‌ಮೆಂಟ್‌ ಆದ್ರೂ ಕೂಡ ಒಬ್ಬ ದಲಿತ್‌ ವುಮನ್ ರೈಟರ್‌ ಕಾಣೋದಿಲ್ಲ ಅಲ್ವಾ?

ಡಾ.ಕೆ.ಪಿ.ಅಶ್ವಿನಿ: ಹಾಗೇನಿಲ್ಲ … ಇದಾರೆ ತುಂಬಾ ಜನ…ದು. ಸರಸ್ವತಿ ನೋಡಿ ಅವರು ಬಹಳ ಬರ್ದಿದಾರೆ.

ಪೀಪಲ್‌ ಮೀಡಿಯಾ: ಅವರು ಇತ್ತೀಚಿನವರು. ದಲಿತ್‌ ಮೂವ್‌ ಮೆಂಟ್‌ ತುಂಬಾ ಉತ್ತುಂಗದಲ್ಲಿದ್ದಾಗ ಆತರದ್ದು ಒಂದು ಆಗ್ಲಿಲ್ಲ ಅಂತ.. ಅಲ್ಲಿ ಇನ್‌ಕ್ಲೂಶನ್‌ ಕಡಿಮೇ ಅಂತನಾ?

ಡಾ.ಕೆ.ಪಿ.ಅಶ್ವಿನಿ: ಹಾ ಇರಬಹುದು… ಈಗ ನೀವು ನೋಡಿದರೆ… ಸ್ವಲ್ಪ ಬದಲಾವಣೆ ಆಗಿದೆ… ಅಂಡ್‌ ಅಟ್‌ ಸಮ್‌ ಪಾಯಿಂಟ್‌ ಆಫ್‌ ಟೈಮ್‌ ನೀವು ಬ್ಲಾಕ್‌ ಮೂವ್‌ಮೆಂಟ್‌ ಆಗ್ಲಿ, ದಲಿತ್‌ ಮೂವ್‌ಮೆಂಟ್‌ ಆಗ್ಲಿ ನೋಡಿದ್ರೆ ಅದರ ಪ್ರೈಯಾರಿಟೀಸ್, ಟೈಮ್‌ ಗೆ ತಕ್ಕಂತೆ ಇದನ್ನ ಅಡ್ರೆಸ್‌ ಮಾಡೋಣ ಅನ್ನುವ ರೀತಿಯ ಒಂದು ಡೈನಮಿಕ್ಸ್‌ ಕೂಡಾ ಇರತ್ತೆ. ಬಟ್‌ ಈಗ್ಲೂ ಕೂಡ ಇಟ್ಸ್‌ ರಿಯಲಿ ಇಂಪಾರ್ಟೆಂಟ್‌, ಜೆಂಡರ್‌ನ ನಾವು ಹೇಗೆ ಅಡ್ರೆಸ್‌ ಮಾಡಬೇಕು ಅಂತ. ಈಗ ದಲಿತ್‌ ಅಕಾಡೆಮಿಶಿಯನ್ಸ್‌ ಇದಾರೆ. ವಿಮೆನ್‌ ಅಕಾಡೆಮಿಶಿಯನ್ಸ್‌, ಪೊಲಿಟಿಶಿಯನ್ಸ್‌ ಇದಾರೆ, ಆಕ್ಟಿವಿಸಂ ಅಲ್ಲಿ ಇದಾರೆ ,  ಐ ಥಿಂಕ್‌ ಇಟ್ಸ್‌ ಹೈ ಟೈಮ್‌ ದಟ್‌ ನಾವು ವಿಮೆನ್‌ ರೆಪ್ರೆಸೆಂಟೇಟಿವ್ಸ್‌ ಗೆ ಫ್ರಂಟ್‌ ಆಫ್‌ ಪ್ಲೇಸ್‌ ಕೊಡಬೇಕು.

ಪೀಪಲ್‌ ಮೀಡಿಯಾ: ತುಂಬಾ ಧನ್ಯವಾದಗಳು.

ಸಂದರ್ಶನ: ಹರ್ಷಕುಮಾರ್‌ ಕುಗ್ವೆ

ಕಾದಲವೇಣಿ ಎಂಬ ನೆಲಗರ್ಭದೊಳು ಕಳುವಾದ“ಬಾಂದರವಿ” ಎಂಬೋ ಜೀವಚಿಲುಮೆ…
ಕೋಲಾರದ ಅವಿಭಜಿತ ಜಿಲ್ಲೆಯ ಗೌರಿಬಿದನೂರು ತಾಲೂಕಿನ “ಕಾದಲವೇಣಿ” ಎಂಬ ಗ್ರಾಮದಲ್ಲಿ ಮೂಲತಃ ಮಾದಿಗ ಸಮುದಾಯ ನಡೆಸಿ ಕೊಡುವ ಆಚರಣೆ. ನೂರ ಐವತ್ತಕ್ಕೂ ಹೆಚ್ಚಿನ ಮನೆಗಳಿರುವ ಸಣ್ಣ ಗ್ರಾಮ. ಇಲ್ಲಿ ಮೂರು ಮತ್ತು ಐದು ವರ್ಷಕ್ಕೊಮ್ಮೆ ನಡೆಯುವ ಕಾದಲವೇಣಿ ಮಾರಮ್ಮನ ಜಾತ್ರೆ ತುಂಬಾ ಪ್ರಸಿದ್ದ. ಈ ಜಾತ್ರೆ ನಡಿಯೋದಕ್ಕೆ ಮಾರೆಮ್ಮನ ಕುರಿತ ಸಣ್ಣ ಜನಪದ ಕತೆಯೊಂದು ಬೆಸೆದುಕೊಂಡಿದೆ.

“ಬ್ರಾಹ್ಮಣರ ಹುಡುಗಿಯಾದ ಮಾರೆಮ್ಮನನ್ನು ಮಾದಿಗರ ಹುಡುಗನೊಬ್ಬ ಮೋಸದಿಂದ ಮದುವೆಯಾದ್ನಂತೆ.. ಅವನ ಅಸಲಿ ಜಾತಿ ತಿಳಿದ ಮೇಲೆ ‘ಇನ್ನೂ ಮುಂದೆ ನಾನು ಮಾರಿಯಾಗಿ ಬಂದು ಕೋಣನಾದ ನಿನ್ನನ್ನು ಬಲಿ ತೆಗೆದುಕೊಳ್ಳುತ್ತೇನೆ; ನನ್ನ ಕರುಳು ಉರಿದಂತೆ ಅವನ ತಾಯಿಯ ಕರುಳು ಉರಿಯಬೇಕು”.. ಎಂದು ಶಾಪಕೊಟ್ಟಳಂತೆ. ಸ್ವಲ್ಪ ವ್ಯತ್ಯಾಸಗಳೊಂದಿಗೆ ಎಲ್ಲಾ ಕಡೆ ಮಾರೆಮ್ಮನ ಕತೆಗಳಲ್ಲಿ ಕಂಡುಬರುತ್ತದೆ. ಅಂತರ್ಜಾತಿ ವಿವಾಹವನ್ನೂ ನಿಷೇದಿಸಲಿಕ್ಕೆಂದೆ ಪುರೋಹಿತವರ್ಗದಿಂದ ಸೃಷ್ಟಿಸಲ್ಪಟ್ಟಂಥವುಗಳೆಂದು ಈಗಾಗಲೇ ವಿದ್ವಾಂಸರುಗಳು ಅಭಿಪ್ರಾಯ ಪಟ್ಟಿದ್ದಾರೆ ಎಂಬುದು ಗಮನಿಸಬೇಕಾದ ವಿಚಾರ.

ಚೈತ್ರಮಾಸದಲ್ಲಿ ಈ ಜಾತ್ರೆಯನ್ನು ಊರಿನ ಸಕಲಕುಲಗಳು ಸೇರಿ ಆಚರಿಸಲ್ಪಡುತ್ತಾರೆ.. ಈ ಮಾರಮ್ಮನ ಆಚರಣೆ ಕರಾವಳಿ ಭಾಗದಲ್ಲಿ ನಡೆಯುವ ಭೂತ, ಕೋಲ ಆಚರಣೆಯನ್ನೇ ಹೋಲುತ್ತದೆ. ಇಲ್ಲಿಯೂ ಸಹ ಮಾರೆಮ್ಮನನ್ನು ಊರಗಡಿ ದಾಟಿಸುವ ಸಾಂಪ್ರದಾಯವಿದೆ.

“ಬಾಂದರವಿ” ಏನಿದು ?!

೧.”ಬಾಂದರವಿ” ಗ್ರಾಮದೇವತೆ & ಮಾರೆಮ್ಮನ ಜಾತ್ರೆಗಳಲ್ಲಿ ಅನ್ನ ಬೇಯಿಸುವ ಮಡಕೆ.

೨. ಶಾಪಗ್ರಸ್ತಳಾದ ಮಾರೆಮ್ಮನ ಗಂಡನ ತಾಯಿಯೇ ಬಾಂದರವಿಯಾಗಿದ್ಧಾಳೆಂದು ನಂಬಿಕೆ.

೩. ಪಾಪ ಪರಿಹಾರಾರ್ಥವಾಗಿ ಬಾಂದರವಿಯಲ್ಲಿ ಬೇಯಿಸಿದ ಅನ್ನವನ್ನು ಪ್ರಸಾದವಾಗಿ ಎಲ್ಲರಿಗೂ ಹಂಚುತ್ತಾರೆ.

೫. ಕೋಣ ಬಲಿ ನಂತರ ಈ ಬಾಂದರವಿಗೆ ಬೆಂದ ಅನ್ನವನ್ನು ೧೨ ಭಾಗಮಾಡಿ ಆಯಗರಿಗೆ ಹಂಚಿಕೆ ಮಾಡುತ್ತಾರೆ. ಅನುಕ್ರಮವಾಗಿ ಶಾನುಭೋಗ, ಪಟೇಲ, ರೆಡ್ಡಿ, ಅಕ್ಕಸಾಲಿಗ, ಸುಣ್ಣಕಲ್ಲು, ಕಂಬಾರ, ಹೊಲೆಯ, ಹಟ್ಟಿಗೌಡ, ಇವರಿಗೆ ಹಂಚಿಕೆ ಮಾಡುತ್ತಾರೆ.

೬. ಮಾರೆಮ್ಮನ ತಾಳಿ ಮತ್ತು ಒಡವೆಯನ್ನು ಅಸಾದಿ ಕಿತ್ತುಕೊಂಡು ಹೋಗುತ್ತಾನೆ.. ಇದು ಅವನ ಹಕ್ಕು.

ಈ ಮೇಲಿನ ಕಾದಾಲವೇಣಿ ಮಾರೆಮ್ಮನಜಾತ್ರೆಗೆ ಸಂಬಂದಿಸಿದ ಪ್ರಚಲಿತ ಕತೆಯನ್ನು ಸಂಗ್ರಹಿಸಿದವರು ನನ್ನ ಗುರುಗಳಾದ ಸಿ.ಎಂ.ಗೋವಿಂದರೆಡ್ಡಿರವರು ತಮ್ಮ “ಕೋಲಾರ ಜಾತ್ರೆಗಳು” ಸಂಶೋಧನ ಪ್ರಬಂಧದಲ್ಲಿ

ನನ್ನನ್ನು ಕಾಡಿದ್ದು!!

೧.ಇಲ್ಲಿ ಅನ್ನದ ಮಡಿಕೆಯನ್ನು ಅಸ್ರೃಶ್ಯ ಹೆಣ್ಣೆಂದು ಭಾವಿಸಿರುವುದು.

೨. ಆ.. ಅಸ್ರೃಶ್ಯ ಮಡಕೆಯಲ್ಲಿನ ಅನ್ನವನ್ನು ಇಲ್ಲಿ ೧೨ ಬಾಗ ಮಾಡಿ ಮೇಲ್ವರ್ಗಗಳು ಹಂಚಿ ತಿನ್ನುವ ಕ್ರಮ.

೩.ಹಂಚಿ ತಿನ್ನುವವರು ಒಂದೇ ಪಣಕಟ್ಟಿಗೆ ಸೇರಿರುವವರಾಗುತ್ತಾರೆ. ಇಲ್ಲವೇ ಇವರಲ್ಲಿ ಮೂಲದಲ್ಲಿ ವೈವಾಹಿಕ ಕೂಡಿಕೆಯ ಸಂಬಂಧಗಳಿದ್ದಿರಬೇಕು.

೪. ಶಕ್ತಿ ದೇವತೆಗೆ ಕೋಣನ ಬಲಿ ನೀಡಿರುವುದು ಆದಿಮಾನವನ ಕಾಲದಿಂದಲೂ ಬಂದಿರುವಂಥದ್ದು.
ಅದರ ನೆತ್ತರನ್ನು ಊರ ಹೊಲ,ಗದ್ದೆಗಳಿಗೆ ಎರಚುವುದು ಫಲವಂತಿಕೆಯ ಸಂಕೇತ. ಕೋಣನ ಬಲಿ ನಂತರ ಮಾಂಸವನ್ನು ಹಂಚಿಕೆ ಮಾಡುವುದು ಅವರ ಕುಲದ ಹಕ್ಕು..

೫. ಕೋಣನ ಬಲಿಯನ್ನು ಜಾತಿಹಿನ್ನಲೆಗೆ ಕಟ್ಟಿದ ಕಟ್ಟುಕಥೆ.

೬. “ಬಾಂದರವಿ” ಆಚರಣೆ ಒಂದೇ ತಟ್ಟೆಯಲ್ಲಿ ಕೂತು ಉಣ್ಣುವುದು ವಿಶ್ವಕುಟುಂಬದ ಸಂಕೇತ.

೭. ಮಾರೆಮ್ಮನ ಜಾತ್ರೆ ಮಾತೃಪ್ರಧಾನ ಕುಟುಂಬದ ಸಂಕೇತ. ಸ್ತ್ರೀಪ್ರಧಾನ ಆಚರಣೆ

೮. ಜಾತ್ರೆ ಮುಗಿದ ನಂತರ ಬಾಂದರವಿಯನ್ನು ಮಾದಿಗ ಸಮುದಾಯದವರು ತಮ್ಮ ಮನೆಗೆ ಒಯ್ಯುತ್ತಾರೆ..
ಮೂಲದಲ್ಲಿ ಇದು ಮಾದಿಗ ಸಮುದಾಯದವರ ಆಚರಿಸುವ ಆಚರಣೆ ಇದ್ದಿರಬಹುದೆಂದು ಊಹಿಸಬಹುದು..

೯. ಮಾರೆಮ್ಮ ಬ್ರಾಹ್ಮಣಳಾಗಿದ್ದರೆ ಈ ಅಚರಣೆಯಲ್ಲಿ ಬ್ರಾಹ್ಮಣರು ಭಾಗವಹಿಸಬೇಕಾಗಿತ್ತು ಆದರೆ ಇಲ್ಲಿ ಬ್ರಾಹ್ಮಣರ ಯಾವುದೇ ಪಾತ್ರವಿಲ್ಲ…ಈ ಆಚರಣೆಯಲ್ಲಿ ಶೂದ್ರ ಸಮುದಾಯ ಭಾಗವಹಿಸುತ್ತಿರವುದು ಗಮನಿಸಬೇಕಾದ ವಿಷಯ.

೧೦. ಮಾರೆಮ್ಮನ ಜಾತ್ರೆ ಮುಗಿದ ನಂತರ ಮಾರೆಮ್ಮನ ಮೈಮೇಲಿರುವ ಒಡವೆ, ರವಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.. ಹಾಗಾದರೆ ಮೂಲದಲ್ಲಿ ಈ ಮಾರೆಮ್ಮ ಮಾದಿಗರ ಆರಾದ್ಯ ದೇವತೆಯಾಗಿರಬೇಕು. ಇಲ್ಲವೇ ಮಾತೃ, ಮಾತಂಗಿಯೇ ಆಗಿರಬೇಕುವೆಂದು ಊಹಿಸಬಹುದು…

೧೧. ಈ ಆಚರಣೆಯನ್ನು ಪಣಕಟ್ಟುವಿಗೆ ಸಂಬಂದಿಸಿದ ಕುಲಮೂಲ ಮೀಮಾಂಸೆಯಲ್ಲಿಟ್ಟು ಗ್ರಹಿಸುವುದು..

ಈ “ಬಾಂದರವಿ ದಲಿತ ಸಮುದಾಯದ ಜೀವನೆಲೆಯಾದ “ಗಲ್ಲೇಬಾನಿ”ಯನ್ನು ನೆನಪಿಸುವಂತಿದೆ…

ಗಂಗಪ್ಪ ತಳವಾರ್
ಲೇಖಕರು

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಮಾಲೂರಿನಲ್ಲಿ ಪ್ರತಿಭಟನೆ
ಮಾಲೂರು: ಮಳೆಯಿಂದಾಗಿ ಹಾನಿಗೊಳಗಿ ಸಾರ್ವಜನಿಕ ಆಸ್ತಿ, ಬೆಳೆ ನಷ್ಟವನ್ನು ವೀಕ್ಷಿಸಿ ಸಂಕಷ್ಟದಲ್ಲಿರುವ ಮಡಿಕೇರಿ ಜನರ ನೋವಿಗೆ ಸ್ಪಂದಿಸಲು ಹೋಗಿದ್ದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಪ್ರತಿಭಟನೆ ಸೋಗಿನಲ್ಲಿ ಪೋಲಿಸ್ ರ ಮುಂದೆಯೆ ಅವರ ಮೇಲೆ ಮೊಟ್ಟೆ ಎಸೆದ ಕೃತ್ಯವನ್ನು ಖಂಡಿಸಿ, ಇಂದು ಮಾಲೂರಿನಲ್ಲಿ ಶಾಸಕ ಕೆ.ವೈ. ನಂಜೇಗೌಡ ರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡರು:
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೊಡಗು ಜಿಲ್ಲೆಯ ಜನರ, ರೈತರ ಸಂಕಷ್ಟ ಆಲಿಸಲು ಹೋಗಿದ್ದ ಸಿದ್ದರಾಮಯ್ಯ ರವರ ಮೇಲೆ‌ ಮೊಟ್ಟೆ ಎಸೆದಿರುವಂತದ್ದು ಖಂಡನೀಯ ಇದೊಂದು ಹೇಡಿತನಕ ಕೃತ್ಯ. ಮಾಜಿ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರ ಮೇಲೆ ಈ ರೀತಿಯ ಕೃತ್ಯ ಎಸಗುವುದು ದೌರ್ಜನ್ಯದ ಪರಮಾವಧಿಯಾಗಿದ್ದು. ಬಿಜೆಪಿ ಮತ್ತು ಆರ್‌.ಎಸ್.ಎಸ್ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಒಂದೆಡೆ ಭ್ರಷ್ಟ ತನದ ಕಮೀಷನ್ ಆಡಳಿತ, ಇನ್ನೊಂದೆಡೆ ಕೋಮುದ್ವೇಷದಿಂದ ರಾಜ್ಯವನ್ನು ಗೂಂಡಾ ಸಂಸ್ಕೃತಿಯತ್ತಾ ಕೊಂಡೊಯವ ಪರಿಸ್ಥಿತಿ ರಾಜ್ಯ ಸರ್ಕಾರದ ಆಡಳಿತ ವೈಕರಿಯಾಗಿದೆ ಎಂದು ಕಟುವಾಗಿ ಟೀಕಿಸಿದರು.

ಇದಕ್ಕೂ ಮೊದಲು ಪಟ್ಟಣದ ಮಾರಿಕಾಂಬಾ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗೃಹ ಮಂತ್ರಿಯಾದ ಅರಗ ಜ್ಙಾನೇಂದ್ರ ರವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ಹೊರ ಹಾಜಿದರು. ನಂತರ ತಹಸೀಲ್ದಾರ್ ಕಛೇರಿ ವರೆಗೆ ಪ್ರತಿಭಟನೆ ಜಾತ ನಡೆಸಿ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಸರಿಪಡಿಸಲು, ತಪ್ಪಿತಸ್ಥ ದಾಳಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನೀಲ್ ಕುಮಾರ್, ಮಾಜಿ ಶಾಸಕ ಎ.ನಾಗರಾಜ್, ಮಾಲೂರು,ಮಾಸ್ತಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಎಂ.ಜಿ.ಮಧುಸೂದನ್, ಹೆಚ್.ಎಂ.ವಿಜಯನರಸಿಂಹ, ಮುಖಂಡರಾದ ಸಿ.ಲಕ್ಷ್ಮೀನಾರಾಯಣ್, ಎಂ.ವಿ.ಸೋಮಶೇಖರ್, ಎಟ್ಟಕೋಡಿ ವೀರಭದ್ರಪ್ಪ, ಎ.ಅಶ್ವತ್ಥರೆಡ್ಡಿ, ಬಿ.ಆರ್.ಶ್ರೀನಿವಾಸ್, ಪ್ರದೀಪ್ ರೆಡ್ಡಿ, ಪಿಚ್ಚಳ್ಳಿ ಶ್ರೀನಿವಾಸ್, ನಾಗಾಪುರ ನವೀನ್, ಸಂತ್ತೆಹಳ್ಳಿ ನಾರಾಯಣಸ್ವಾಮಿ, ನಹೀಮ್ ಉಲ್ಲಾ, ಆನೆಪುರ ದೇವರಾಜ್ ಪುರಸಭಾ ಸದಸ್ಯರಾದ ಭಾರತಮ್ಮ ಶಂಕರಪ್ಪ, ಕೊಮಲ ನಾರಾಯಣ್, ವಿಜಯಲಕ್ಷ್ಮಿ ಲಕ್ಮೀನಾರಾಯಣ್, ಎನ್. ವಿ.ಮುರಳೀಧರ್, ಆರ್.ವೆಂಕಟೇಶ್, ಮಂಜುನಾಥ್, ಜಾಕೀರ್ ಖಾನ್ ಹಾಗೂ ಎರಡು ಬ್ಲಾಕ್ ಕಾಂಗ್ರೆಸ್ ನ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.