Kolkata – Peepal Media

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸರು, ಆಸ್ಪತ್ರೆಗೆ ಕೋರ್ಟ್ ಛೀಮಾರಿ
ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿ ಮುಚ್ಚಿಡಲು ಯತ್ನಿಸಿದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಕೋಲ್ಕತ್ತಾ ನ್ಯಾಯಾಲಯ ಜನವರಿ 21, 2025 ಸೋಮವಾರದಂದು ಛೀಮಾರಿ ಹಾಕಿದೆ ಎಂದು ಲೈವ್ ಲಾ ವರದಿ ಮಾಡಿದೆ.

2024 ರ ಆಗಸ್ಟ್‌ನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಅಪರಾಧಿಯಾಗಿದ್ದ ಮಾಜಿ ನಾಗರಿಕ ಪೊಲೀಸ್ ಸ್ವಯಂಸೇವಕ ಸಂಜಯ್ ರಾಯ್‌ಗೆ ಸೀಲ್ದಾ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ರಾಯ್ ಅವರನ್ನು ದೋಷಿ ಎಂದು ಘೋಷಿಸುವ ತನ್ನ 172 ಪುಟಗಳ ತೀರ್ಪಿನಲ್ಲಿ, ತನಿಖೆಯಲ್ಲಿ ಪೊಲೀಸರು ಲೋಪವೆಸಗಿದ್ದಾರೆ ಮತ್ತು ಘಟನೆಯನ್ನು ಮುಚ್ಚಿಹಾಕಲು ಆಸ್ಪತ್ರೆಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಟೀಕಿಸಿದೆ.

“ಕಟ್ಟಕಡೆಯ ಅಧಿಕಾರಿಗಳೂ ಸೇರಿದಂತೆ, ಆಸ್ಪತ್ರೆಯ ಪ್ರಾಧಿಕಾರದ ಮೇಲೆ ಯಾವುದೇ ಪರಿಣಾಮಗಳು ಬೀರಬಾರದು ಎಂದು ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಪರಿಗಣಿಸಲು ಯಾವುದೇ ಸಂದೇಹವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

“ಕಿರಿಯ ವೈದ್ಯರು ಪ್ರತಿಭಟನೆಯನ್ನು ನಡೆಸಿ ಪ್ರಾಂಶುಪಾಲರಿಗೆ ಒಂದು ಮನವಿ ಪತ್ರವನ್ನು ಸಲ್ಲಿಸಿದ್ದರಿಂದ ಪ್ರಾಧಿಕಾರದ ಈ ‘ಅಕ್ರಮ ಕನಸು’ ನನಸಾಗಿಲ್ಲ ಎಂಬುದು ಪ್ರಕರಣದ ದಾಖಲೆಯಿಂದ ತೋರುತ್ತದೆ. ಆ ಸಮಯದಲ್ಲಿ, ಪೊಲೀಸ್ ಪಡೆ ತನ್ನ ಕ್ರಮವನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು, ಆದರೆ ಅದು ಸಾಕಷ್ಟು ವಿಳಂಬ ಮಾಡಿತು. ಬಹುಶಃ ಸಂತ್ರಸ್ತೆಯ ಪೋಷಕರಿಗೆ ತಮ್ಮ ಮಗಳನ್ನು ನೋಡಲು ಅವಕಾಶ ನೀಡದಿರಲು ಇದು ಕಾರಣವಾಗಿದೆ,” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆ ದಿನ ಬೆಳಗ್ಗೆ ಘಟನೆ ವರದಿಯಾಗಿದ್ದರೂ, ಆಗಸ್ಟ್ 9ರಂದು ರಾತ್ರಿ 11.30ರ ನಂತರ ಎಫ್‌ಐಆರ್ ಏಕೆ ಸಲ್ಲಿಸಲಾಗಿದೆ ಎಂದೂ ನ್ಯಾಯಾಲಯ ಪ್ರಶ್ನಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಿರಿಯ ವೈದ್ಯೆ ಆಸ್ಪತ್ರೆಯ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು .

ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ ಹಲವು ವಾರಗಳವರೆಗೆ ಹಿರಿಯ ಅಧಿಕಾರಿಗಳ ರಾಜೀನಾಮೆ ಒತ್ತಾಯಿಸಿ ಮತ್ತು ಪಶ್ಚಿಮ ಬಂಗಾಳದ ವೈದ್ಯಕೀಯ ಕೇಂದ್ರಗಳಲ್ಲಿನ “ಗೂಂಡ ಸಂಸ್ಕೃತಿ” ಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿತು.

ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ವೈದ್ಯರ ಶವ ಪತ್ತೆಯಾದ ಮರುದಿನ, ಆಗಸ್ಟ್ 10 ರಂದು ರಾಯ್ ನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದರು.

ಮೂರು ದಿನಗಳ ನಂತರ, ಕಲ್ಕತ್ತಾ ಹೈಕೋರ್ಟ್ ಈ ವಿಷಯವನ್ನು ತನಿಖೆ ಮಾಡಲು ಕೇಂದ್ರೀಯ ತನಿಖಾ ದಳಕ್ಕೆ ಆದೇಶಿಸಿತು .

ಅಕ್ಟೋಬರ್ 7 ರಂದು ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದ ನಂತರ ನ್ಯಾಯಾಲಯವು ದೈನಂದಿನ ವಿಚಾರಣೆಯನ್ನು ನಡೆಸಿತು. ರಾಯ್ ಯನ್ನು ನಿರಪರಾಧಿ ಎಂದು ಹೇಳಿತು.

ನ್ಯಾಯಕ್ಕಾಗಿ ವೈದ್ಯರು ನಡೆಸಿದ ಪ್ರತಿಭಟನೆ ಆಗಸ್ಟ್‌ನಲ್ಲಿ ಭುಗಿಲೆದ್ದ ನಂತರ, ಕೋಲ್ಕತ್ತಾ ಪೊಲೀಸರು ಹಲವಾರು ದಿನಗಳವರೆಗೆ ವೈದ್ಯಕೀಯ ಸಂಸ್ಥೆಯ ಹೊರಗೆ ಜನಸಂದಣಿಯನ್ನು ಒಟ್ಟುಗೂಡಿಸದಂತೆ ನಿಷೇಧಾಜ್ಞೆಗಳನ್ನು ವಿಧಿಸಿದರು. ಆಗಸ್ಟ್ 15 ರಂದು, 5,000 ರಿಂದ 7,000 ಜನರ ಗುಂಪೊಂದು ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಧ್ವಂಸಗೊಳಿಸಿತು. ವೈದ್ಯರು ಸೇರಿದಂತೆ ಪ್ರತಿಭಟನಾಕಾರರ ಮೇಲೆ ಗುಂಪು ಹಲ್ಲೆ ನಡೆಸಿತು.

ಘಟನೆಯ ವಿರುದ್ಧ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಪಶ್ಚಿಮ ಬಂಗಾಳದಾದ್ಯಂತ ಹಲವಾರು ವಾರಗಳ ಕಾಲ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿತು.

ಕೇಂದ್ರೀಯ ತನಿಖಾ ದಳವು ಈ ಪ್ರಕರಣದಲ್ಲಿ ನಡೆದಿರುವ ಸಾಕ್ಷ್ಯಾಧಾರಗಳನ್ನು ತಿರುಚುವಿಕೆ ಮತ್ತು ವೈದ್ಯಕೀಯ ಸೌಲಭ್ಯದಲ್ಲಿ ನಡೆದಿರುವ ಆಪಾದಿತ ಭ್ರಷ್ಟಾಚಾರವನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಿದೆ. ಪ್ರಕರಣದ ಆರೋಪಿಗಳಲ್ಲಿ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆಯ ಮಾಜಿ ಅಧಿಕಾರಿ ಸೇರಿದಂತೆ ಇತರರು ಸೇರಿದ್ದಾರೆ.

ಸೌರವ್‌ ಗಂಗೂಲಿಯನ್ನು ಕಡೆಗಣಿಸಲಾಗಿದೆ: ಮಮತಾ ಬ್ಯಾನರ್ಜಿ ಗಂಭೀರ ಆರೋಪ
ಕೋಲ್ಕತಾ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಯವರನ್ನು ಕಡೆಗಣಿಸುವ ಯತ್ನ ನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಸೌರವ್‌ ಗಂಗೂಲಿ ಐಸಿಸಿ (ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಮಮತಾ ಆಗ್ರಹಿಸಿದ್ದಾರೆ.

ಸೌರವ್ ಅವರನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಗೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿರುವ ಮಮತಾ ಬ್ಯಾನರ್ಜಿ, ಸೌರವ್‌ ಅವರನ್ನು ಅನ್ಯಾಯವಾಗಿ ಹೊರಗಿಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

“ನನಗೆ ತುಂಬಾ ದುಃಖವಾಗಿದೆ. ಸೌರವ್ ಬಹಳ ಜನಪ್ರಿಯ ವ್ಯಕ್ತಿತ್ವ. ಅವರು ಭಾರತ ತಂಡದ ನಾಯಕರಾಗಿದ್ದರು. ಅವರು ದೇಶಕ್ಕೆ ಬಹಳಷ್ಟು ನೀಡಿದರು. ಅವರು ಬಂಗಾಳದ ಹೆಮ್ಮೆ ಮಾತ್ರವಲ್ಲ, ಭಾರತದ ಹೆಮ್ಮೆ. ಅವರನ್ನು ಏಕೆ ಹೊರಗಿಡಲಾಯಿತು? ನೀವು ಅನ್ಯಾಯದ ದಾರಿ ತುಳಿಯುತ್ತಿದ್ದೀರಿ” ಎಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಶಾಸಕ ಮಾಣಿಕ್ ಭಟ್ಟಾಚಾರ್ಯ ಬಂಧನ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾತ್ರೋರಾತ್ರಿ ವಿಚಾರಣೆ ನಡೆಸಿದ ನಂತರ ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಭಟ್ಟಾಚಾರ್ಯ ಅವರನ್ನು ಇಂದು ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದ್ದು, ಈ ಹಿಂದೆ ಭಟ್ಟಾಚಾರ್ಯರಿಗೆ ಸಮನ್ಸ್ ನೀಡಿತ್ತು. ಪ್ರಮುಖವಾಗಿ, ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಭಟ್ಟಾಚಾರ್ಯ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30 ರಂದು ಮುಂದಿನ ಆದೇಶದವರೆಗೆ ವಿಸ್ತರಿಸಿತ್ತು.

ಈ ಹಿನ್ನಲೆಯಲ್ಲಿ ಮಾಣಿಕ್ ಭಟ್ಟಾಚಾರ್ಯ ಅವರಿಗೆ ನೀಡಲಾಗಿರುವ ಮಧ್ಯಂತರ ರಕ್ಷಣೆ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದು ನ್ಯಾಯಾಲಯ ತಿಳಿಸಿತ್ತು ಹಾಗೂ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ನ್ಯಾಯಾಲಯ ಅವರಿಗೆ ಸೂಚಿಸಿತ್ತು.

ಈ ಹಿಂದೆ ಎಸ್‌ಎಸ್‌ಸಿ (ಶಾಲಾ ಸೇವಾ ಆಯೋಗ) ಹಗರಣದಲ್ಲಿ ಆಗಿನ ಪಶ್ಚಿಮ ಬಂಗಾಳದ ಕೈಗಾರಿಕಾ ಸಚಿವ ಮತ್ತು ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಇಡಿ ಬಂಧಿಸಿದೆ. ಈ ಮೂಲಕ ಹಗರಣದಲ್ಲಿ ಮಾಣಿಕ್ ಭಟ್ಟಾಚಾರ್ಯ ಅವರು ಬಂಧಿತರಾದ ಎರಡನೇ ತೃಣಮೂಲ ನಾಯಕರಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಾರ್ಥ ಚಟರ್ಜಿಯ ಅಳಿಯನನ್ನು ವಿಚಾರಣೆಗೊಳಪಡಿಸಿದ ಇಡಿ
ಕೋಲ್ಕತ್ತಾ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಅಳಿಯ ಕಲ್ಯಾಣ್‌ಮೋಯ್ ಭಟ್ಟಾಚಾರ್ಯ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೊಳಪಡಿಸಿದೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ತನಿಖೆಗೆ ಕೇಂದ್ರೀಯ ಸಂಸ್ಥೆಯು ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ.

ಪಾರ್ಥ ಚಟರ್ಜಿಯವರ ಮಗಳು ಸೋಹಿನಿಯನ್ನು ಮದುವೆಯಾಗಿರುವ ಕಲ್ಯಾಣ್ಮೋಯ್ ಭಟ್ಟಾಚಾರ್ಯ ಅವರು ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಕಲ್ಯಾಣ್‌ಮೋಯ್‌ಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ವಿದೇಶದಲ್ಲಿರುವ ಕಾರಣ ಅವರು ಏಜೆನ್ಸಿಯ ಮುಂದೆ ಹಾಜರಾಗಲು ವಿಫಲರಾಗಿದ್ದರು. ಹೀಗಾಗಿ ಕಲ್ಯಾಣ್‌ಮೋಯ್ ಅವರನ್ನು ಸೋಮವಾರ ಕೋಲ್ಕತ್ತಾದಲ್ಲಿ ಇಡಿ ಎದುರು ಹಾಜರಾಗುವಂತೆ ಮನವಿ ಸಲ್ಲಿಸಲಾಗಿತ್ತು ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಪಾರ್ಥ ಚಟರ್ಜಿ ಅವರ ಅಳಿಯ ಇಂದು ಬೆಳಗ್ಗೆ 11 ಗಂಟೆಗೆ ಇಡಿ ಕಚೇರಿಗೆ ಆಗಮಿಸಿದ್ದು,  ಪ್ರಕರಣಕ್ಕೆ ಸಂಭಂದಿಸಿದಂತೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾನುವಾರ ಹಗರಣಕ್ಕೆ ಸಂಬಂಧಿಸಿ ಟಿಎಂಸಿ ನಾಯಕನ ಮಗಳಿಗೆ ಸಿಬಿಐ ಪ್ರಶ್ನೆ
ಕೋಲ್ಕತ್ತಾ: ಜಾನುವಾರ ಕಳ್ಳ ಸಾಗಾಟಣೆ ಆರೋಪದ ಅಡಿಯಲ್ಲಿ ಬಂಧಿತವಾಗಿರುವ ಟಿಎಂಸಿ ನಾಯಕ ಅನುಬ್ರತಾ ಮೊಂಡಾಲ್‌ ಅವರ ಮನೆಗೆ ಸಿಬಿಐ ತಂಡವು ಭೇಟಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಅವರ ಮಗಳನ್ನು ವಿಚಾರಣೆ ಕೈಗೊಂಡಿದೆ.

ಮೂವರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ಕೇಂದ್ರಿಯಾ ತನಿಖಾ ದಳ (ಸಿಬಿಐ) ತಂಡವು, ಸುಕನ್ಯಾ ಮೊಂಡಾಲ್‌ ಅವರಿಗೆ ಪ್ರಕರಣಕ್ಕೆ ಸಬಂಧಿಸಿ ಪ್ರೆಶ್ನೆಗಳನ್ನು ಕೇಳಲಾಯಿತಿ ಎಂದು ಮೂಲಗಳು ತಿಳಿಸಿವೆ.

ಸುಮಾರು ಒಂದು ಗಂಟೆಗಳ ಕಾಲ ಟಿಎಂಸಿ ಬಿರ್ಭೂಮ್‌  ಜಿಲ್ಲಾಧ್ಯಕ್ಷರ ನಿಚುಪಟ್ಟಿ ನಿವಾಸದಲ್ಲಿ ಇದ್ದ ಸಿಬಿಐ ತಂಡವು, ಹೆಚ್ಚಿನ ತನಿಖೆಗೆ ಸಂಬಂಧಿಸಿ ಸಮೀಪದ ಅಂಚೆ ಕಛೇರಿಗೆ ತೆರಳಿದೆ. ನಂತರ ಸುಕನ್ಯಾ ಮೊಂಡಾಲ್‌ ತನ್ನ ತಂದೆಗೆ ಸಂಬಂಧಿಸಿದ ಅಕ್ಕಿ ಗಿರಾಣಿಯಲ್ಲಿ ಷೇರುಧಾರರಾಗಿದ್ದರು ಎಂದು ತಿಳಿದ ಸಿಬಿಐ ತಂಡವು, ರೈಸ್‌ ಮಿಲ್‌ಗೆ ಭೇಟಿ ನೀಡಿದ್ದು, ಕೆಲವು ವಾಹನಗಳನ್ನು ವಶಪಡಿಸಿಕೊಂಡಿದೆ. ಮಾಹಿತಿ ಪ್ರಕಾರ ವಾಹನಗಳು ಬೇರೆಯವರ ಒಡೆತನದಲ್ಲಿದ್ದವು ಮತ್ತು ಅವುಗಳನ್ನು ಟಿಎಂಸಿ ನಾಯಕರು ಬಳಸುತ್ತಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿದ್ದಾರೆ.

ಕೋಲ್ಕತ್ತಾದ 6 ಪ್ರದೇಶಗಳಲ್ಲಿ ಇಡಿ ದಾಳಿ: 7 ಕೋಟಿ ರೂ. ನಗದು ಪತ್ತೆ
ಕೋಲ್ಕತ್ತಾ: ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ ತನಿಖೆಗೆ ಸಂಬಂಧಿಸಿದಂತೆ 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಇಂದು ಕೋಲ್ಕತ್ತಾದ 6 ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶೋಧ ಕಾರ್ಯಾಚರಣೆ ನಡೆಸಿದೆ.

ಈ ಕುರಿತು ಮಾಹಿತಿ ನೀಡಿರುವ ಇಡಿ, ಕಾರ್ಯಾಚರಣೆಯಲ್ಲಿ ಇದುವರೆಗೆ 7 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಮೊತ್ತದ ಲೆಕ್ಕ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಟ್ಟಾಗಲಿವೆ : ಮಮತಾ ಬ್ಯಾನರ್ಜಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರತಿಪಕ್ಷ ನಾಯಕರುಗಳ ಭೇಟಿಯ ಬೆನ್ನಲ್ಲೇ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರತಿಪಕ್ಷಗಳು ಒಟ್ಟಾಗಿ ಮುಂದಿನ ಲೋಕಸಭೆ ಚುನಾವಣೆ ಮಾತನ್ನಾಡಿದ್ದಾರೆ. ಅದರಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಹಾರ ಮತ್ತು ಜಾರ್ಖಂಡ್ ನಲ್ಲಿರುವ ನನ್ನ ಸಹವರ್ತಿಗಳು ಮತ್ತು ಹಲವಾರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಲು ನಾನು ಸಿದ್ಧನಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಮಮತಾ ಬ್ಯಾನರ್ಜಿ, ಬಿಜೆಪಿ ತನ್ನ ದುರಹಂಕಾರ, ದುರಾಡಳಿತ ಮತ್ತು ಜನರ ಕೋಪದಿಂದಾಗಿ ಸೋಲನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಪಾಠ ಕಲಿಸುವುದರೊಂದಿಗೆ ನಮ್ಮ ಪಕ್ಷ ಅಭೂತಪೂರ್ವ ಜಯ ಗಳಿಸಿತ್ತು. ಜಾರ್ಖಂಡ್ ನಲ್ಲೂ ಕೂಡ ಹೇಮಂತ್ ಸೋರೆನ್ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದರು. ಈಗ ನಿತೀಶ್ ಕುಮಾರ್ ಕೂಡಾ NDA ಇಂದ ಹೊರಬಂದು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಇದೊಂದು ಸ್ವಾಗತಾರ್ಹ ನಿರ್ಧಾರ. ಇದೇ ಮಾದರಿಯಲ್ಲಿ ಬಿಜೆಪಿಯನ್ನು ಕೇಂದ್ರದಿಂದಲೂ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ ತನ್ನ ಹಣಬಲ ಮತ್ತು ಅಧಿಕಾರ ಬಲದಿಂದ ನಿರಂತರವಾಗಿ ನಮ್ಮಿಂದ ಅಧಿಕಾರ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಜಾರ್ಖಂಡ್ ನಲ್ಲೂ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿತ್ತು. ಮತ್ತು ಪಶ್ಚಿಮ ಬಂಗಾಳದಲ್ಲೂ ಕೂಡಾ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯವನ್ನು ಬಳಸಿ ನಮ್ಮ ಶಾಸಕರಿಗೆ ಬೆದರಿಕೆ ತೋರಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಎಷ್ಟು ನಮ್ಮನ್ನು ಕೆಣಕುತ್ತದೆಯೋ ಅಷ್ಟು ಬಾರಿ ತನ್ನ ಸೋಲಿಗೆ ಹತ್ತಿರವಾಗಲಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಧ್ಯ ನಿತೀಶ್ ಕುಮಾರ್ ಕೆಲವೇ ದಿನಗಳ ಹಿಂದೆ ದೆಹಲಿ ಪ್ರವಾಸದಲ್ಲಿ ಪ್ರತಿಪಕ್ಷ ಮುಖಂಡರ ಭೇಟಿಯ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆ ಮುಂದಿನ 2024 ರ ಲೋಕಸಭಾ ಚುನಾವಣೆಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಕೂಡಾ ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಂಡಿದ್ದು ತಳಮಟ್ಟದ ಕಾರ್ಯಕರ್ತರನ್ನು ತಲುಪಿ ಪಕ್ಷ ಸಂಘಟನೆಗೆ ಮುಖ್ಯ ಆದ್ಯತೆ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ಏನೆಲ್ಲಾ ತಂತ್ರಗಾರಿಕೆ ರೂಪಿಸಲಿವೆ ಎಝಬ ಕುತೂಹಲ ಹುಟ್ಟಿಸಿದೆ.

ಟಿಎಂಸಿ ನಾಯಕ ʼಮೊಲೊಯ್ ಘಾಟಕ್ʼ ಮೇಲೆ ʼಸಿಬಿಐʼ ದಾಳಿ
ಪಶ್ಚಿಮ ಬಂಗಾಳ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಮತ್ತು ಪಶ್ಚಿಮ ಬಂಗಾಳದ ಸಚಿವ ಮೊಲೊಯ್ ಘಾಟಕ್ ಅವರ ಮೇಲೆ ಸಿಬಿಐ ದಾಳಿ ನಡೆಸಿದೆ.

ಕೋಲ್ಕತ್ತಾದಲ್ಲಿ ಐದು ಮತ್ತು ಅಸನ್ಸೋಲ್‌ನಲ್ಲಿ ಒಂದು ಸ್ಥಳ ಸೇರಿದಂತೆ ಒಟ್ಟು ಆರು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಯುತ್ತಿದೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿ ಮಾಡಿದೆ.