koppala – Peepal Media

ಹಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
ಕುಷ್ಟಗಿ: ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಹಾಗೂ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗಡಚಿಂತಿ ಮೊದಲಾದ ಗ್ರಾಮಗಳ‌ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಗಂಡು ಚಿರತೆ, ಮಾಲಗಿತ್ತಿ ಅರಣ್ಯ ಪ್ರದೇಶದ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.

ಈ ಚಿರತೆ ಊರಿನ ನಾಯಿ, ಹಸು ತಿಂದು ಹಾಕಿ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿತ್ತು. ಇದರ ಹಾವಳಿಗೆ ಮಾಲಗಿತ್ತಿ, ಗಡಚಿಂತಿ, ನಾಗೇಂದ್ರಗಡ ಸುತ್ತಮುತ್ತಲಿನ ಗ್ರಾಮಸ್ಥರು ಕಂಗೆಟ್ಟಿದ್ದರು. ಈ ಹಿನ್ನೆಲೆಯಲ್ಲಿ ದನಗಾಯಿ, ಕುರಿಗಾಯಿಗಳು ಅರಣ್ಯ ಪ್ರದೇಶದಲ್ಲಿ ಕುರಿ, ದನ ಮೇಯಿಸುವುದಕ್ಕೆ, ರೈತರು ಒಬ್ಬಂಟಿಯಾಗಿ ಜಮೀನುಗಳಿಗೆ ಹೋಗುವುದಕ್ಕೂ ಜೀವ ಭಯ ಸೃಷ್ಟಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ ನಾಗೇಂದ್ರಗಡ, ಗಡಚಿಂತಿ, ಮಾಲಗಿತ್ತಿ ಗುಡ್ಡದಲ್ಲಿ ಚಿರತೆಗೆ ಬೋನಿನ ವ್ಯವಸ್ಥೆ ಮಾಡಿದ್ದರು. ಬೋನು ಇಟ್ಟು ಮೂರು ದಿನಗಳಲ್ಲಿ ಚಿರತೆ ಸೆರೆಯಾಗಿದ್ದು, ಬಹು ದಿನಗಳ ಆತಂಕ ನಿವಾರಣೆಯಾಗಿದೆ.

ಈ ಚಿರತೆ ಸೆರೆಯಾಗಿಸಲು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿ ಲಾಲ್ ಸಾಬ್ ಸೂಳಿಬಾವಿ, ಅರಣ್ಯ ರಕ್ಷಕ ಕಳಕಪ್ಪ ಬ್ಯಾಳಿ ಇವರ ಕಾರ್ಯಕ್ಕೆ‌ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ ಪ್ರತಿಕ್ರಿಯಿಸಿ, ಮಾಲಗಿತ್ತಿ ಗುಡ್ಡದಲ್ಲಿ ಸೆರೆ ಸಿಕ್ಕ ಚಿರತೆ ವಯಸ್ಕ ಚಿರತೆಯಾಗಿದ್ದು, ಅಂದಾಜು ಐದಾರು ವರ್ಷಗಳ‌ ಚಿರತೆಯಾಗಿದೆ. ಈ ಚಿರತೆಯನ್ನು ಮೇಲಾಧಿಕಾರಿಗಳ‌ ನಿರ್ದೇಶನದ ಮೇರೆಗೆ ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ: ಸಚಿವ ಮುರುಗೇಶ್‌ ನಿರಾಣಿ
ಹುಬ್ಬಳ್ಳಿ: ರಾಜ್ಯದ ದಾವಣಗೆರೆ, ಬಾದಾಮಿ, ರಾಯಚೂರು, ಕೊಪ್ಪಳ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 94ನೇ ಸಂಸ್ಥಾಪನಾ ದಿನ ಹಾಗೂ ‘ವಾಣಿಜ್ಯ ರತ್ನʼಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸಾಕಷ್ಟು ಉದ್ಯಮಿಗಳು ಒಲವು ತೋರಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಕಡೆಯೂ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಅದಕ್ಕೆ ಅನುಕೂಲವಾಗುವಂತೆ ರಾಜ್ಯದ ಈ ಐದು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಮುರುಗೇಶ್‌ ನಿರಾಣಿ ಹೇಳಿದರು.

ಈ ಹಿನ್ನಲೆ ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತಿದ್ದು, 18 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ, ಹಾಗೆಯೇ ತುಮಕೂರು ಮತ್ತು ಶಿರಾ ನಡುವೆ ಹಾಗೂ ಬೆಳಗಾವಿಯ ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.