koraga community – Peepal Media

ಮೂಲನಿವಾಸಿ ಕೊರಗರ ಬದುಕಲ್ಲಿ ಅಜಲು ಮುಕ್ತವಾದ ಇತಿಹಾಸ
ಕೊರಗರು ಅಲೆಮಾರಿ ಜೀವನದ ಬಳಿಕ ಒಂದು ಕಡೆ ನೆಲೆ ನಿಂತು ತಮ್ಮ ತಮ್ಮ ತರವಾಡ (ಮೂಲ ಮನೆತನ) ಗಳಲ್ಲಿ ಸ್ವತಂತ್ರವಾಗಿ ಕೃಷಿ ಜೀವನ ಆರಂಭಿಸಿದವರು. ಯಾರದೇ ಹಂಗಿಲ್ಲದೇ ಬದುಕಿದವರು. ಸಂಪತ್ಭರಿತ ಸಂಸ್ಕೃತಿ ಹೊಂದಿದ್ದವರು. ಇಂತಿರ್ಪ ಕಾಲದೊಳ್ ಪರದೇಸಿ ಮಂದಿ ಈ ಕಾಡುವಾಸಿ ಕೊರಗರ ಸೊಂಪಾದ ಸಾಂಸ್ಕೃತಿಕ ಕಲಾ ಸಂಪನ್ನತೆಗೆ ಮನಸೋತು, ಇವರನ್ನು ನಯವಾಗಿ ತಮ್ಮ ತೆಕ್ಕೆಗೆ ಜಾರಿಸಿಕೊಂಡರು.

ಕೊನೆಗೆ ಗುಲಾಮರನ್ನಾಗಿ ಮಾಡಿ, ಬಿಟ್ಟಿ ಸೇವೆಗೆ ಬಳಸಿಕೊಂಡು, ಕೊಳಕರೆಂದು ಹಣೆಪಟ್ಟಿ ಅಂಟಿಸಿದರು. ಗ್ರಾಮಾಡಳಿತದ ಭಾಗವಾಗಿ ಅತ್ಯಂತ ಕೆಳದರ್ಜೆಯ ಅನಿಷ್ಟ ಹೊರುವ ಅಜಲು ನೀಡಿ ವಿಕೃತ ಸಂತೋಷ ಪಡೆದರು. ಈ ಅಜಲು ಕೊರಗರ ನರನಾಡಿ ಮೆದಳುಗಳನ್ನೇ ಬಂದ್ ಮಾಡಿತು.

ಇಂತಹ ಅಸಹಾಯಕ ಮುಗ್ಧ ಮಾನವರ ಮೇಲೆ ಎಷ್ಟು ಸಾಧ್ಯವೋ ಅಷ್ಟೂ ದೌರ್ಜನ್ಯ ದಬ್ಬಾಳಿಕೆ ನಡೆಸಿದ್ದಾರೆ. ಸಾವಿರಾರು ವರ್ಷಗಳ ಕಾಲ ಅಜಲು ಹೆಸರಲ್ಲಿ ಶೋಷಣೆಗೆ ಒಳಗಾದ ನಮ್ಮವರು ಅದೇ ಸತ್ಯ, ಹಾಗಯೇ ನಮ್ಮ ಬದುಕು ಎಂಬ ಭ್ರಮೆಗೆ ಬಲಿಯಾದರು. ಆದರೆ ಇದು ಯಾವ ಪ್ರಗತಿ ಪರ ಹೋರಾಟಗಾರರ ಕಣ್ಣಿನ ಪೊರೆಯನ್ನೂ ತೆರೆಯಲಿಲ್ಲ. 1988/89 ರ ಸುಮಾರಿಗೆ ಕಾಪು ಪರಿಸರದಲ್ಲಿ ಒಂದು ಕಣ್ಣು ಈ ದೀನರ ಮೇಲೆ ನೆಟ್ಟತು. ಅದು ಬಲಿಷ್ಟ ಬಂಟ, ಕೊರಗರ ಪಾಲಿನ ಅಸ್ತಿತ್ವ ಪುನರ್ ನಿರೂಪಕ, ಎಂಟೆದೆಯ ದೇವದಾಸ್ ಶೆಟ್ಟಿ.

ಅಜಲಿನ ಇಂಚಿಂಚು ಅಳೆದು ತೂಗಿದ ದೇವದಾಸರು ಅಜಲಿನಿಂದ ಕೊರಗರ ಮುಕ್ತಿಗೆ ಸಂಕಲ್ಪತೊಟ್ಟರು. ಮಳ್ಳನ್ನು ಮುಳ್ಳಿಂದಲೇ ತೆಗೆವ ಸಾಹಸಕ್ಕೆ ಕೈ ಇಕ್ಕಿದರು. ಸಾಮಾಜಿಕ ಪಿಡುಗುಗಳ ಪರಿವೆಯೇ ಇರದ ಕೊರಗರನ್ನು ಸಂಘಟಿಸಿ ಕೊರಗರ ಅಜಲಿನ ವಿರುದ್ಧ ಆಂದೋಲನ ಕಟ್ಟಿದರು. ಗರಬಡಿದಂತಿದ್ದ ಕೊರಗರೂ ಒಮ್ಮೆಲೆ ಎಚ್ಚರವಾಗಿ ಆಂದೋಲನದ ಭಾಗೀಧಾರಿಗಳಾದರು. ಟೊಂಕ ಕಟ್ಟಿ ಹೋರಾಡಿದರು.

ಇದರ ಪರಿಣಾಮವಾಗಿಯೇ 2000ನೇ ಇಸವಿ ಆಗಸ್ಟ್ 17ರಂದು ಕರ್ನಾಟಕ ಸರಕಾರ ಈ ಕೊರಗರ ಅಜಲು ಸೇವೆಯನ್ನು ನಿಷೇಧಿಸಿ ಸುಗ್ರೀವಾಜ್ಞೆಯ ಮೂಲಕ ಆದೇಶವನ್ನು ಹೊರಡಿಸಿತು. ನಂತರ ಸೂಕ್ತ ತಿದ್ದುಪಡಿಗಳೊಂದಿಗೆ ಕಾನೂನು ಆಗಿ ಜಾರಿಗೆ ಬಂದಿತು. ಹಾಗಾಗಿ ಆಗಸ್ಟ್ 17 ಕೊರಗರ ಜೀತ ಮುಕ್ತಿಯ ದಿನ” ವಾಗಿರುತ್ತದೆ. ಎಲ್ಲರಿಗೂ ” ಕೊರಗರ ಅಜಲು ಮುಕ್ತ ದಿನ”ದ ಶುಭಾಶಯಗಳು.

ಅಜಲು ನಿಷೇಧ ಚಳುವಳಿ’ಯ ಪ್ರಮುಖಾಂಶಗಳು

1997-1998

ಸೂರಾಲು ಹಬ್ಬದಲ್ಲಿ ಕದನಿ ನಿಲ್ಲಿಸಲಾಯಿತು.

ಸೂರಾಲು ಹಬ್ಬಕ್ಕೆ ಅರಸರನ್ನು ಊರ ಧನಿ ಡೋಲು ಮೇಳದೊಂದಿಗೆ ಕರೆತಂದು, ಪುನಃ ಅವರ ಮನೆಗೆ ಬಿಟ್ಟು ಬರುವುದನ್ನು ನಿಲ್ಲಿಸಿರುವುದು.

ಸೂರಾಲು ಹಬ್ಬದ ದಿನ ಊರ ಹೋಟೇಲಿನವರು – ಕೊರಗರಿಗೆ ಹಾಕಿದ ಪ್ರತ್ಯೇಕ ಚಪ್ಪರವನ್ನು ಹಬ್ಬದ ದಿನ ಕಿತ್ತು ಬಿಸಾಡಲಾಯಿತು

ಇದುವರೆಗಿನ ಸಂಪ್ರದಾಯದಂತೆ ನೂತನ ವಧುವರರು ಮದುವೆಯ ದಿನ ಮನೆಗೆ ಬರುವ ಮುನ್ನ, ಧನಿಯವರ ಕಾಲು ಹಿಡಿಯಲು ಹೋಗಬೇಕಿತ್ತು. ಅದನ್ನು ನಿಲ್ಲಿಸಲಾಯಿತು.

ಮದುವೆಯಲ್ಲಿ ಕುಡಿತವನ್ನು ಕಡ್ಡಾಯವಾಗಿ ನಿಲ್ಲಿಸಲಾಯಿತು.

ಪಾದೆಮಠ ಹಬ್ಬದಲ್ಲಿ ವೇಷ ಹಾಕಿ ಬೇಡುವುದನ್ನು ನಿಲ್ಲಿಸಲಾಯಿತು.

ಸೂರಾಲು, ಪಾದೆಮಠ, ಕೊಕ್ಕರ್ಣೆ, ಚೆಗ್ರಿಬೆಟ್ಟು, ಮೊಗೇರಪೇಟೆ, ರಂಗನಕೆರೆ, ಬಂಡೀಮಠ, ಕೂರಾಡಿ, ನಿಂಜೂರು ಮುಂತಾದ ಕಡೆಗಳಲ್ಲಿ ಮಾರಿ ಹಬ್ಬದ ದಿನ ಊರ ಮನೆ ಮನೆಗೆ ಹೋಗಿ ಬೇಡುವುದನ್ನು ನಿಲ್ಲಿಸಲಾಯಿತು.

ಬಾರ್ಕೂರು ಮಾರಿ ಹಬ್ಬದಂದು ಸಂಬಳರಹಿತ ಡೋಲು ಸೇವೆಗೆ ವಿರೋಧ ವ್ಯಕ್ತಪಡಿಸಲಾಯಿತು. ಆ ಮೂಲಕ ಬಾರ್ಕೂರಿನಲ್ಲಿ ಮೊದಲ ಬಾರಿಗೆ ಕೊರಗರು ಡೋಲಿನ ಕೆಲಸಕ್ಕೆ ಸಂಭಾವನೆ ಪಡೆದುಕೊಂಡರು.

ಬೈದಬೆಟ್ಟಿನಲ್ಲಿ ಪಾಯಿಖಾನೆ ಸ್ವಚ್ಛಗೊಳಿಸುವುದಕ್ಕೆ ಕೊರಗರಿಂದ ವಿರೋಧ. ಇನ್ನು ಮುಂದೆ ಸ್ವಚ್ಛತೆಯ ಕೆಲಸಗಳಿಗೆ ಅನಿಷ್ಟ ಚಾಕರಿಗಳಿಗೆ ಹೋಗುವುದಿಲ್ಲವೆಂಬ ತೀರ್ಮಾಣ.

ಹೆಜಮಾಡಿ ನೇಮೋತ್ಸವದಲ್ಲಿ ಡೋಲು ಚಾಕ್ರಿಯ ವಿರುದ್ಧ ಪೋಲೀಸರಿಗೆ ದೂರು ನೀಡಲಾಯಿತು.

1998-99

ಕೊರಗರಿಂದ ಯಾವುದೇ ರೀತಿಯ ಅಜಲು ಕೆಲಸಗಳಿಗೆ ಹೋಗುವುದಿಲ್ಲವೆಂಬ ತೀರ್ಮಾನ.

ವಡ್ಡಬೆಟ್ಟು ಕಂಬಳದಲ್ಲಿ ಅಜಲು ಚಾಕರಿ ನಿಲ್ಲಿಸಲಾಯಿತು.

ಕೆಂಜೂರು ಕಂಬಳದಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು. ಊರ ಮಂದಿಯಿಂದ ತೀವ್ರ ಪ್ರತಿರೋಧ.

ಬಾರ್ಕೂರಿನಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಪಾದಯಾತ್ರೆ. ಅಜಲು ನಿಷೇಧಿಸುವಂತೆ ಮನವಿ.

ಬಾರ್ಕೂರು ಮೂರು ಮಾಗಣಿಯ ಮಾರಿಯಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು.

ವಂಡಾರು ಕಂಬಳದಲ್ಲಿ ಸುಮಾರು 200ರಷ್ಟಿದ್ದ ಕೊರಗರ ವೇಷಗಳಿಗೆ ಈ ವರ್ಷ ಪೂರ್ಣವಿರಾಮ.

ಶಿಬರೂರು ಜಾತ್ರೆಯಲ್ಲಿ ಅಜಲು ಚಾಕ್ರಿಗೆ ಬಳಸಿದ ಡೋಲುಗಳನ್ನು ಪೋಲೀಸರಿಂದ ಮುಟ್ಟುಗೋಲು ಹಾಕಿಸಲಾಯಿತು.

ಮುಲ್ಕಿ ಅರಸು ಕಂಬಳದಲ್ಲಿ ಕಂಬಳದ ಗದ್ದೆಯ ಸುತ್ತ ನೂರಾರು ಸಂಖ್ಯೆಯಲ್ಲಿ ಸೇರಿ ಅಜಲು ಚಾಕ್ರಿಯನ್ನು ವಿರೋಧಿಸಲಾಯಿತು.

ಕಟಪಾಡಿ ಕಂಬಳದ ದಿನ ಅಜಲು ಚಾಕ್ರಿಯನ್ನು ವಿರೋಧಿಸಿ ಮಾನವ ಸರಪಳಿ ರಚಿಸಲಾಯಿತು.

ಬರಹ : ಪಾಂ.ಬಾಬು ಕೊರಗ

ಕಾಡ್ತ್ ಕಿಜ್ರ್ ಬಣ್ತ್ ಹೆಜ್: ಕೊರಗ ಮಕ್ಕಳ ರಂಗ ಶಿಬಿರಕ್ಕೆ ವರ್ಣರಂಜಿತ ತೆರೆ
ಕುಂದಾಪುರ: ತಾಲ್ಲೂಕಿನ ಆಲೂರು ಗ್ರಾಮದ ಹಾಡಿಮನೆ ಎನ್ನುವಲ್ಲಿ ಜರುಗಿದ ಕಾಡ್ತ್ ಕಿಜ್ರ್ ಬಣ್ತ್ ಹೆಜ್ (ಕಾಡಿನ ಮಕ್ಕಳ ಬಣ್ಣದ ಹೆಜ್ಜೆ) ಎನ್ನುವ ರಜಾಕಾಲದ ರಂಗ ಶಿಬಿರವು ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ಆರು ದಿನಗಳ ಕಾಲ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯರು ಬಹಳ ಉತ್ಸಾಹದಿಂದ ಪಾಲ್ಗೊಂಡು ತಮ್ಮ ದೈನಂದಿನ ಬದುಕಿನ ಜಂಜಡಗಳ ನಡುವೆ ಒಂದಷ್ಟು ಸಂಭ್ರಮವನ್ನು ಅನುಭವಿಸಿದರು. ಆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕೆಲವು ಚಿತ್ರಗಳು ಮತ್ತುವರದಿಯನ್ನು ನಿಮಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಸ್ ವೈ ಗುರುಶಾಂತ್ ಮಾತನಾಡಿ ಈ ರೀತಿಯ ರಂಗ ತರಬೇತಿ ಶಿಬಿರ ಈ ಸಮುದಾಯದ ನಡುವೆ ಹೆಚ್ಚು ಹೆಚ್ಚು ನಡೆಯಬೇಕು. ಕೊರಗ ಸಮುದಾಯದ ಮಕ್ಕಳಿಗೆ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸುವ ಕೆಲಸ ಆಗಬೇಕು. ಆಲೂರಿನ ಕೊರಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ಅಖಿಲೇಶ್ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದಿರುವುದು ಹಾಗೆ ಅಂಕಿತಾ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಹಾಗೆ ಇಲ್ಲಿನ ಸ್ಥಳೀಯ ಕೊರಗ ಮಕ್ಕಳಲ್ಲಿ ಪ್ರತಿಭಾವಂತರು ಇದ್ದಾರೆ ಅವರಿಗೆ ಗುರಿ ತಲುಪಲು ಸಹಾಯ ಮಾಡಬೇಕಾದ ಮಹತ್ತರವಾದ ಜವಬ್ದಾರಿ ಈ ಸಮಾಜದ  ಮೇಲಿದೆ ಎಂದು ಅವರು ತಿಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಡಾ. ಎಸ್ ವೈ ಗುರುಶಾಂತ್

ಈ ರಂಗ ತರಬೇತಿ ಶಿಬಿರ ಸರಕಾರದ ಯಾವುದೇ ಇಲಾಖೆಗಳ ಸಹಕಾರ ಇಲ್ಲದೇ ದಾನಿಗಳ ನೆರವಿನಿಂದ ಅದರಲ್ಲೂ, ಕೊರಗ ಸಮುದಾಯದವರೇ ನೀಡಿದ ಆಹಾರ ಸಾಮಗ್ರಿ ಸಂಗ್ರಹಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ರೀತಿಯ ಚಟುವಟಿಕೆಗಳನ್ನು ಮುಂದುವರಿಸಬೇಕು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯ ಕುಂದಾಪುರ ಇದರ ಅಧ್ಯಕ್ಷರಾದ ಉದಯ ಗಾಂವಕರ್ ಮಾತನಾಡಿ ಈ ಮಕ್ಕಳಿಗೆ ನಾವು ಏನನ್ನು ಕಲಿಸಲು, ಹೊಸತನ್ನು ಅವರ ತಲೆಗೆ ತುಂಬುವ ಕೆಲಸವನ್ನು ನಾವು ಮಾಡಿಲ್ಲ. ಈ ಸಮುದಾಯ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಅವರ ಸಮುದಾಯದ ನಾಯಕ ಹುಭಾಶಿಕನ ಕಥೆಯ ಎಳೆಯನ್ನು ಹಿಡಿದುಕೊಂಡು ನಾಟಕವನ್ನು ಕಟ್ಟಿದೇವೆ. ಒಂದು ವಾರದಲ್ಲಿ ನಾವು ಮಕ್ಕಳೊಂದಿಗೆ ಕೊರಗ ಸಮುದಾಯದ ಬಂಧುಗಳೊಂದಿಗೆ ಬೆರೆತು ಸಾಕಷ್ಟು ಕಲಿತಿದ್ದೇವೆ. ಈ ಸಮುದಾಯದ ನಡುವೆ ನಾವು ಕಲಿಯಬೇಕಾದ ವಿಷಯಗಳು ಬಹಳಷ್ಟಿವೆ ಎಂದರು. ಹಾಗೆ ಈ ಶಿಬಿರ ನಡೆಸಲು ತೀರ್ಮಾನ ಮಾಡಿರುವ ಶಿಬಿರದ ನಿರ್ದೇಶಕರಾದ ವಾಸುದೇವ ಗಂಗೇರ ಮತ್ತು ಆದಿವಾಸಿ ಸಂಘಟನೆ ಮುಖಂಡರಾದ ಶ್ರೀಧರ ನಾಡ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹಿರಿಯರಾದ ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರು ಫಿಲಿಪ್ ಡಿಸಿಲ್ವಾ

ಆ ದಿನ ವೇದಿಕೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕರು ಆದ ಡಾ ಕೃಷ್ಣಪ್ಪ ಕೊಂಚಾಡಿ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರು ಫಿಲಿಪ್ ಡಿಸಿಲ್ವಾ, ವಿನಯ್ ಕೊರ್ಲಹಳ್ಳಿ, ಪೊಲೀಸ್‌ ಉಪನಿರೀಕ್ಷಕರು ಗಂಗೊಳಿ ಪೊಲೀಸ್ ಠಾಣೆ, ಲಕ್ಷ್ಮಣ ಬೈಂದೂರು, ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಜಲಜ ಶೆಡ್ತಿ, ಆಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ರವಿ ಶೆಟ್ಟಿ, ಶಿಬಿರದ ನಿರ್ದೇಶಕರು ವಾಸುದೇವ ಗಂಗೇರ, ಕೊರಗ ಮುಖಂಡ ಗಣೇಶ ಆಲೂರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀಧರ ನಾಡ ಉಪಸ್ಥಿತರಿದ್ದರು. ರಮೇಶ್ ಗುಲ್ವಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ರೇವತಿ ಸ್ವಾಗತಿಸಿದರು, ಶ್ರೀಧರ ನಾಡ ವಂದಿಸಿದರು

ಮಕ್ಕಳಿಗೆ ಮೇಕಪ್‌ ಮಾಡುತ್ತಿರುವ ಶಿಬಿರದ ನಿರ್ದೇಶಕರಾದ ವಾಸುದೇವ ಗಂಗೇರ

ಕಾರ್ಯಕ್ರಮದ ಆಯೋಜಕ ಶ್ರೀಧರ ನಾಡ ಅವರಿಂದ ವಂದನಾರ್ಪಣೆ