koraga – Peepal Media

ಬೆಂಗಳೂರು ಕಂಬಳದಲ್ಲಿ ಕೊರಗರ “ಪನಿಕುಲ್ಲುನ” ಅಜಲು ಆಚರಣೆಯ ಆತ್ಮವಿಮರ್ಶೆಯೂ ನಡೆಯುತ್ತದೆಯೇ ?: ಮುನೀರ್ ಕಾಟಿಪಳ್ಳ ಪ್ರಶ್ನೆ
ಬೆಂಗಳೂರು: ತುಳುನಾಡಿನ ಜನಪ್ರಿಯ ಸಾಂಸ್ಕೃತಿಕ ಕ್ರೀಡೆ ಕಂಬಳವನ್ನು ʼವಿಶ್ವಕ್ಕೆ ಪರಿಚಯಿಸುವʼ ಉದ್ದೇಶದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಹಮ್ಮಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ, ಈ ಕಂಬಳದಲ್ಲಿ ಕೊರಗರ “ಪನಿಕುಲ್ಲುನ” ಅಜಲು ಆಚರಣೆಯ ಆತ್ಮವಿಮರ್ಶೆಯೂ ನಡೆಯುತ್ತದೆಯೇ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಈಗ ಅಜಲು ಪದ್ದತಿ ನಿಷೇಧದ ಕಾರಣಕ್ಕೆ ಸದ್ಯ ಕೈ ಬಿಡಲಾಗಿರುವ ತುಳುನಾಡಿನ ಅತ್ಯಂತ ತುಳಿತಕ್ಕೊಳಗಾದ ಮೂಲ ನಿವಾಸಿ ಕೊರಗರನ್ನು ‘ಪನಿ ಕುಲ್ಲಾವುನ’ ಎಂಬ ಆಚರಣೆಗೆ ಕಂಬುಳದಲ್ಲಿ ಬಳಸಿಕೊಳ್ಳಲಾಗುತ್ತಿತ್ತು. “ ಜಾತಿ, ಪಾಳೇಗಾರಿ ಶೋಷಣೆಯ ಈ ಕೆಟ್ಟ, ಅಸ್ಪೃಶ್ಯ ಆಚರಣೆಯು ಕಂಬಳದ ಪ್ರಮುಖ ಭಾಗ ಆಗಿತ್ತು. ಕೊರಗ ಸಮುದಾಯವನ್ನು ಆ ಮೂಲಕ ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂಬುದನ್ನು ನಾಡಿನ ಮುಂದೆ ವಿನೀತವಾಗಿ ಒಪ್ಪಿಕೊಳ್ಳುವ, ಆತ್ಮ ಶೋಧನೆ ನಡೆಸುವ ಕಾರ್ಯ ಕಂಬಳದಲ್ಲಿ ನಡೆಯಲಿದೆಯೇ,” ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಮಂಗಳೂರಿನ ವಾಮಂಜೂರಿನಲ್ಲಿ “ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ” ಕೊರಗ ಸಮುದಾಯದ ಕಾರ್ಯಕರ್ತರಿಗಾಗಿ ಒಂದು ದಿನದ ಸೈದ್ದಾಂತಿಕ ಶಿಬಿರ

ಮಂಗಳೂರಿನ ವಾಮಂಜೂರಿನಲ್ಲಿ “ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ” ಕೊರಗ ಸಮುದಾಯದ ಪ್ರಮುಖ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಸೈದ್ದಾಂತಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಇವರು,  “ತುಳುನಾಡಿನ ಸಾಂಸ್ಕೃತಿಕ ಕ್ರೀಡಾ ವೈಭವವನ್ನು ರಾಜಧಾನಿಯಲ್ಲಿ ರಾಜಾಶ್ರಯದಲ್ಲಿ ಸಂಘಟಿಸುತ್ತಿರುವಾಗ ಕಂಬಳದ ಹೆಸರಿನಲ್ಲಿ ಅಜಲು ನಿಷೇಧ ಕಾನೂನು ಜಾರಿಗೆ ಬರುವವರೆಗೂ ಆಚರಿಸುತ್ತಿದ್ದ ‘ಪನಿ ಕುಲ್ಲಾವುನ’ ಎಂಬ ಅಮಾನುಷ ಜಾತಿ ದಮನ, ಶೋಷಣೆಯನ್ನು ಈ ಆಧುನಿಕ ಕಾಲಘಟ್ಟದಲ್ಲಿ ಮುಚ್ಚಿಡಬಾರದು,” ಎಂದು ಹೇಳಿದ್ದಾರೆ.

ಮುನೀರ್ ಕಾಟಿಪಳ್ಳ, ಡಿವೈಎಫ್ಐ ರಾಜ್ಯಾಧ್ಯಕ್ಷ

ಏನಿದು ಪನಿಕುಲ್ಲುನೆ?

ತುಳುನಾಡಿನ ಆಚರಣೆಯಾಗಿರುವ (ನಂತರ ಕ್ರೀಡೆಯಾಗಿ ಬದಲಾಗಿದೆ) ಕಂಬಳದಲ್ಲಿ ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸಲಾಗುತ್ತದೆ. ಇದರ ಹಿಂದಿನ ಸಾಯಂಕಾಲ ಈ ಕಂಬಳದ ಗದ್ದೆಯಲ್ಲಿ ಗಾಜು, ಹರಿತ ಕಲ್ಲಿನ ಚೂರುಗಳನ್ನು ಪತ್ತೆ ಹಚ್ಚಲು ಕೊರಗ ಸಮುದಾಯದವರನ್ನು ಓಡಿಸುತ್ತಿದ್ದದ್ದರು. ರಾತ್ರಿಯಿಡೀ ಊರಿನ ಕೊರಗ ಸಮುದಾಯದವರು ಕರೆಯ ಗದ್ದೆಯ ಬದುಗಳಲ್ಲಿ ಡೋಲು ಭಾರಿಸುತ್ತಾ ಕೆರೆಯನ್ನು ಕಾಯುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಅನುಚಿತ ಕೆಲಸಗಳಿಗೆ ಬಳಸಲಾಗುತ್ತಿತ್ತು.

ಕಂಬಳದ ಗದ್ದೆಯಲ್ಲಿ ಕೊರಗರ ಡೋಲು

ಕರ್ನಾಟಕ ಕೊರಗರ (ಅಜಲು ಪದ್ದತಿ ನಿಷೇಧ) ಕಾಯ್ದೆ- THE KARNATAKA KORAGAS (PROHIBITION OF AJALU PRACTICE) ACT, 2000 ಜಾರಿಯಾದ ‘ಪನಿ ಕುಲ್ಲುನ’ ಎಂಬ ಅಸ್ಪೃಶ್ಯತೆಯ  ಆಚರಣೆಗೆ ನಿಷೇಧ ಹೇರಲಾಯಿತು.

THE KARNATAKA KORAGAS (PROHIBITION OF AJALU PRACTICE) ACT, 2000

“ಶಾಸನ ಸಭೆಯ ಪ್ರತಿನಿಧಿಗಳು, ಸಮಾಜದ ಗಣ್ಯರು ಆಯೋಜಿಸುತ್ತಿರುವ, ಸರಕಾರದ ಮುಖ್ಯಮಂತ್ರಿಗಳು, ಸಚಿವರು ಭಾಗಿಯಾಗುತ್ತಿರುವ, ಸರಕಾರದಿಂದ ಕೋಟಿ ರೂಪಾಯಿ ಅನುದಾನ ಪಡೆದಿರುವ ಬೆಂಗಳೂರು ಕಂಬಳದಲ್ಲಿ, ಕಂಬಳದ ಹೆಸರಿನಲ್ಲಿ ನಡೆದಿರುವ ಜಾತಿ ಶೋಷಣೆ, ಅಸ್ಪ್ರೃಶ್ಯತೆ ಆಚರಣೆಯೂ ಚರ್ಚೆಯಾಗುವುದು, ಪಾಪಪ್ರಜ್ಞೆಯಿಂದ ಒಪ್ಪಿಕೊಳ್ಳುವುದು ಬಹಳ ಮುಖ್ಯ‌. ಸಿನೆಮಾ, ಕ್ರೀಡಾ, ಉದ್ಯಮ, ರಾಜಕೀಯ ಕ್ಷೇತ್ರದ ರಾಷ್ಟ್ರ ಮಟ್ಟದ ಸೆಲೆಬ್ರಿಟಿಗಳು, ತಾರೆಗಳ ಜೊತೆ ತುಳುನಾಡಿನ ಕೊರಗ, ದಲಿತ ಸಮುದಾಯದ ಮುಖಂಡರಿಗೂ ವೇದಿಕೆಯಲ್ಲಿ ಅವಕಾಶ ಒದಗಿಸುವುದು,  ಅವರ ಸಮ್ಮುಖದಲ್ಲೇ ಇತಿಹಾಸದಲ್ಲಿ ಆಗಿಹೋಗಿರುವ, ಶೋಷಣೆ, ಅನ್ಯಾಯಕ್ಕೆ ವಿಷಾದ ವ್ಯಕ್ತಪಡಿಸುವುದಕ್ಕೆ ಬಹಳ ಮಹತ್ವವಿದೆ,” ಎಂದು ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ.

“ಬೆಂಗಳೂರು ಕಂಬಳಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ, ಬಲಾಢ್ಯ ಸಮುದಾಯಗಳ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸುವ ಮುಖ್ಯಮಂತ್ರಿಗಳು ಕೊರಗರಂತಹ ಸರಾಸರಿ 45 ವರ್ಷಗಳ ಆಯಸ್ಸು ಮಾತ್ರ ಹೊಂದಿರುವ ತುಳುನಾಡಿನ ಮೂಲ ನಿವಾಸಿಗಳು, ಅಮಾನುಷ ಜಾತಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯದ ಬಳಿಗೆ ಬರುವುದು ಯಾವಾಗ, ಅವರ ಕನಿಷ್ಟ ಬೇಡಿಕೆಗಳಿಗೆ ಅನುದಾನ ಬಿಡುಗಡೆ ಮಾಡುವುದು ಯಾವಾಗ, ಡಾ. ಮಹಮ್ಮದ್ ಪೀರ್ ವರದಿಯಂತೆ ಕೊರಗ ಕುಟುಂಬಗಳಿಗೆ ಎರಡೂವರೆ ಎಕರೆ ಕೃಷಿ ಭೂಮಿ ನೀಡುವುದು ಯಾವಾಗ ?ಮುಖ್ಯಮಂತ್ರಿ, ಸಚಿವರುಗಳು ಬಿಡಿ ಪಂಚಾಯತ್ ಸದಸ್ಯರುಗಳಾದರೂ ಕೊರಗರಂತಹ ಆದಿವಾಸಿಗಳ ಕಾಲೋನಿ ಕಡೆಗೆ ತಲೆ ಹಾಕುತ್ತಾರೆಯೆ,” ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ದಮನಿತ ಸಮುದಾಯಗಳು ಒಂದಾಗದೆ, ಸೈದ್ದಾಂತಿಕ ತಿಳುವಳಿಕೆ, ಬದ್ದತೆಯೊಂದಿಗೆ ಸಂಘರ್ಷಕ್ಕಿಳಿಯದೆ ವ್ಯವಸ್ಥೆ ತಮ್ಮ ಕಡೆಗೆ ತಿರುಗಿ ನೋಡುವುದಿಲ್ಲ. ಈ ಕುರಿತು ಕೊರಗ ಸಮುದಾಯದ ಯುವ ತಲೆಮಾರು ಧ್ವನಿ ಎತ್ತಬೇಕು, ಪ್ರಶ್ನಿಸಬೇಕು ಎಂದು ಮುನೀರ್ ಹೇಳಿದ್ದಾರೆ.

ಕಾರ್ಯಕ್ರಮದ ಆದ್ಯಕ್ಷತೆಯನ್ನು ಕರಿಯ ಕೊರಗ ವಹಿಸಿದ್ದರು. ಡಾ. ಕೃಷ್ಣಪ್ಪ ಕೊಂಚಾಡಿ, ರಶ್ಮಿ ವಾಮಂಜೂರು, ರಾಜ್ಯ ಸಮಿತಿ ಸದಸ್ಯ ಕೃಷ್ಣ ಇನ್ನಾ, ಶೇಖರ್ ಮಂಗಳಜ್ಯೋತಿ, ನೌಕರರರ ಉಪ ಸಮಿತಿ ಸಂಚಾಲಕ ಜಯ ಸುರತ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.