kpcc – Peepal Media

ಕೆಪಿಸಿಸಿ ಪುನಾರಚನೆ ಪ್ರಸ್ತಾವನೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧಾರವೇನು?
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಪದಾಧಿಕಾರಿಗಳ ಪುನಾರಚನೆಯ ಚರ್ಚೆ ನಡೆದಿದೆ. ಹೊಸ ಮತ್ತು ಪಕ್ಷ ಕಟ್ಟುವ ಆಸಕ್ತಿ ಇರುವ ಮುಖಗಳಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಕೆಪಿಸಿಸಿ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC) ಈಗಾಗಲೇ ಹಳೆಯ ಮುಖಗಳಿಗೆ ಮಣೆ ಹಾಕಿದ್ದು, ಸಮಿತಿ ಹಾಗೂ ಉಪ ಸಮಿತಿಗಳ ಪುನರ್ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಕೆಪಿಸಿಸಿ ಪುನರ್ ರಚನೆ ಪ್ರಸ್ತಾವನೆ ಇಡುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಕೆಪಿಸಿಸಿ ಸಂಘಟನಾ ವಿಭಾಗದ ಪ್ರಮುಖ ಪದಾಧಿಕಾರಿ ಸ್ಥಾನಗಳಲ್ಲಿ ಇರುವ ಅನೇಕರು ಶಾಸಕರಾಗಿದ್ದಾರೆ. ಸಚಿವ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪಕ್ಷದಲ್ಲಿ ಎರಡೆರಡು ಅಧಿಕಾರ ಅನುಭವಿಸುವುದಕ್ಕಿಂತ ಹೊಸ ಆಸಕ್ತಿ ಇರುವ ಯುವ ಮುಖಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಪಕ್ಷ ಬೆಳೆಸುವ ನಿಟ್ಟಿನಲ್ಲಿ ಕೆಪಿಸಿಸಿ ಪುನರ್ ರಚನೆ ಅನಿವಾರ್ಯ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಮುಂದಿನ ದಿನಗಳಲ್ಲಿ ಪಕ್ಷದ ವ್ಯಾಪ್ತಿ ವಿಸ್ತರಿಸುವ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ. ಇದು ಅನಿವಾರ್ಯ ಎಂಬುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು.

ಈ ಎಲ್ಲಾ ಕಾರಣದಿಂದ ಶೀಘ್ರವೇ ಕೆಪಿಸಿಸಿ ಪುನಾರಚನೆ ಆಗಲಿದ್ದು, ಯುವ ಮುಖಗಳಿಗೆ ಹೊಣೆಗಾರಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಲಿದೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಪಕ್ಷದ ಹುದ್ದೆಯಿಂದ ಜನಪ್ರತಿನಿಧಿಗಳಿಗೆ ಕೋಕ್ ಕೂಡ ನೀಡಲಾಗುತ್ತಿದೆ.

KPCC ನಕಲಿ ವೆಬ್‌ಸೈಟ್‌ ಸೃಷ್ಟಿ: ಮೂವರು ಕಂಪನಿ ನಿರ್ದೇಶಕರು, ಒಬ್ಬ ಉದ್ಯೋಗಿ ಬಂಧನ; ಮೊಬೈಲ್ ಲ್ಯಾಪ್ ಟಾಪ್ ವಶಕ್ಕೆ
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (KPCC) ನಕಲಿ ವೆಬ್‌ಸೈಟ್‌ ಸೃಷ್ಟಿಸಿದ ಮತ್ತು ಅಸಭ್ಯ ವಿಷಯಗಳನ್ನು ಅದರಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಹಾಸನ ಮೂಲದ, ಬೆಂಗಳೂರಿನಲ್ಲೂ ಕಚೇರಿ ಹೊಂದಿರುವ ಸಂಸ್ಥೆಯ ಮೂವರು ನಿರ್ದೇಶಕರು ಮತ್ತು ಓರ್ವ ಉದ್ಯೋಗಿಯನ್ನು ಬೆಂಗಳೂರು ಸೈಬರ್‌ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ KPCC ಹೆಸರು ಮತ್ತು ಕಾಂಗ್ರೆಸ್‌ ಪಕ್ಷದ ಚಿಹ್ನೆಯನ್ನು ಬಳಸಿಕೊಂಡು ನಕಲಿ ವೆಬ್‌ಸೈಟ್‌ ಸೃಷ್ಟಿಸಲಾಗಿತ್ತು. ಈ ಕುರಿತು ಅಂದು ಕಾಂಗ್ರೆಸ್‌ ಪಕ್ಷದ ಶತಭೀಷ್‌ ಶಿವಣ್ಣ ಎನ್ನುವವರು ದೂರು ನೀಡಿದ್ದರು.

ನಕಲಿ ವೆಬ್ಸೈಟ್‌ ಸೃಷ್ಟಿಸುವುದರ ಜೊತೆಗೆ ವೆಬ್ಸೈಟಿನಲ್ಲಿ ಅವಹೇಳನಕಾರಿ ಸಂಗತಿಗಳನ್ನು ಸಹ ಪ್ರಕಟಿಸಲಾಗಿದೆಯೆಂದು ದೂರಿನಲ್ಲಿ ಹೇಳಲಾಗಿತ್ತು. ಚುನಾವಣೆಗೆ ಎರಡು ತಿಂಗಳಿರುವಾಗ ಇಂತಹದ್ದೊಂದು ಪ್ರಕರಣ ಎದುರಾಗಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ತಂದಿತ್ತು.

ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸಿ ಈ ಪ್ರಕರಣದ ಸಂಬಂಧ ಹಾಸನ ಮೂಲದ ವೆಟ್‌ ಫ್ಯಾಬ್‌ ಟೆಕ್ನಾಲಜೀಸ್‌ ಎನ್ನುವ ಕಂಪನಿಯ ಧರಣೇಶ್‌ ಜೈನ್‌, ಸಿದ್ಧಾರ್ಥ್‌, ಅರುಣ್‌ ಮತ್ತು ವೆಂಕಟೇಶ ಎನ್ನುವ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪೈಕಿ ಧರಣೇಶ ಮತ್ತು ಅರುಣ ವೆಬ್‌ ಹೋಸ್ಟಿಂಗ್‌ ಹಣ ಭರಿಸಿದ್ದು, ಸಿದ್ಧಾರ್ಥ್‌ ಮತ್ತು ಅಲ್ಲಿನ ಉದ್ಯೋಗಿ ವೆಂಕಟೇಶ ನಕಲಿ ಇಮೇಲ್‌ ಐಡಿ ರಚನೆ ಮತ್ತು ವೆಬ್ಸೈಟ್‌ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಮೂವರು ಕಂಪನಿ ನಿರ್ದೇಶಕರಾಗಿದ್ದು ಓರ್ವ ಕಂಪನಿ ಉದ್ಯೋಗಿಯಾಗಿದ್ದಾನೆ. ಇವರೆಲ್ಲರೂ ಈ ಬೆಂಗಳೂರು ನಗರ ಪೊಲೀಸ್‌ ವಶದಲ್ಲಿದ್ದಾರೆ.

ಈ ಪ್ರಕರಣದಲ್ಲಿ ಹಾಸನ ಮೂಲದ ಶಶಾಂಕ್ ಭಾರದ್ವಾಜ್ ಮತ್ತು ವರಾಹೆ ಅನಾಲಿಟಿಕಲ್ ಕಂಪನಿಯಲ್ಲಿ (ಚುನಾವಣಾ ಪ್ರಚಾರ ನಿರ್ವಹಣಾ ಸಂಸ್ಥೆ) ಕೆಲಸ ಮಾಡುತ್ತಿರುವ ಆರೋಪಿ ನಿರ್ದೇಶಕರ ಸ್ನೇಹಿತ ಆರೋಪಿಗಳನ್ನು ಸಂಪರ್ಕಿಸಿ ಈ ನಕಲಿ ವೆಬ್‌ಸೈಟ್ ತಯಾರಿಸಿ ಕೊಡುವಂತೆ ಕೇಳಿಕೊಂಡಿದ್ದನು. ಇದಕ್ಕಾಗಿ ರೂ. 25,000/- ಕೊಟ್ಟು ತನ್ನ ಪಾಲಿನ ಕಮಿಷನ್ ಪಡೆದಿದ್ದ.

ವೆಬ್‌ಸೈಟ್‌ಗೆ ಸಂಬಂಧಿಸಿದಂತೆ ಟೆಕ್‌ ಸಂಸ್ಥೆಯ ನಿರ್ದೇಶಕರು ಮತ್ತು ಶಶಾಂಕ್‌ ನಡುವಿನ ವಾಟ್ಸಾಪ್‌ ಮಾತುಕತೆಗಳು ತಮಗೆ ಲಭ್ಯವಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಶಶಾಂಕ್‌ ಭಾರಧ್ವಾಜ್‌ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ. ಮುಂದಿನ ವಿಚಾರಣೆ ಜಾರಿಯಲ್ಲಿದೆ.

ಚಿತ್ರದುರ್ಗ SC,ST ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ: ಸತೀಶ್‌ ಜಾರಕಿಹೊಳಿ
ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’ವನ್ನು ಜನವರಿ 8 ರಂದು ಚಿತ್ರದುರ್ಗದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಈ ಕುರಿತು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ʼಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ʼಐಕ್ಯತಾʼ ಸಮಾವೇಶʼವನ್ನು 2023 ಜನವರಿ 8 ರಂದು ಮಾಡುವಂತಹ ನಿರ್ಧಾರವನ್ನು ಕಾಂಗ್ರೆಸ್‌ ಪಕ್ಷದ ನಾಯಕರು ಮತ್ತು ಮುಖಂಡರು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಐತಿಹಾಸಿಕ ಸಮಾವೇಶವನ್ನು ಪಕ್ಷದಿಂದ ಮಾಡಬೇಕೆಂದು ಬಹುದಿನಗಳಿಂದ ಚಿಂತನೆ ನಡೆಸಿದ್ದೆವು. ಈ ಹಿನ್ನೆಲೆಯಲ್ಲಿ ಇಂದು ಎಲ್ಲಾರ ಚರ್ಚೆಯ ಮುಖಾಂತರ ಸಮಾವೇಶದ ದಿನಾಂಕವನ್ನು ನಿರ್ಧರಿಸಿದ್ದೇವೆ ಎಂದಿದ್ದಾರೆ.

ನಾವು ಎಲ್ಲ ಸಮುದಾಯಗಳು ಒಂದಾಗಬೇಕು, ಒಂದೇ ವೇದಿಕೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕೆಂದು ನಾವು ತೀರ್ಮಾನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮಗೆ ಸಿಗಬೇಕಾದಂತಹ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಮತ್ತೆ ಜಾರಿಯಾಗಬೇಕು ಎಂದರು.

ಕೆಪಿಸಿಸಿ ವಕ್ತಾರರಾಗಿದ್ದ ಜಾಫೆರ್‌ ಮೊಹಿಯುದ್ದೀನ್‌ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ
ಬೆಂಗಳೂರು: ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಕೆಪಿಸಿಸಿ ವಕ್ತಾರ ಜಾಫೆರ್‌ ಮೊಹಿಯುದ್ದೀನ್‌ರವರು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರ ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆಯಾದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ರಾಯಚೂರು ಮೂಲದವರಾದ ಜಾಫೆರ್‌ ಮೊಹಿಯುದ್ದೀನ್‌ರವರು ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿದ್ದಾಗಲೇ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಇವರು ಭಾರತೀಯ ವಾಯುಪಡೆಯಲ್ಲಿ ಡೆಪ್ಯುಟಿ ಆರ್ಕಿಟೆಕ್ಟ್‌ ಆಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1997ರಲ್ಲಿ ರಾಯಚೂರಿನಲ್ಲಿ ಜಾಫೆರ್‌ ಅಸೋಸಿಯೇಟ್ಸ್‌ ಎಂಬ ಸ್ವಂತ ಸಂಸ್ಥೆ ಕಟ್ಟಿದ್ದಾರೆ. ಕತ್ಪುಟ್ಲಿಯಾನ್‌ ಥಿಯೇಟರ್‌ ಗ್ರೂಪ್‌ ಎಂಬ ಎನ್‌ಜಿಒ ಅಧ್ಯಕ್ಷರಾಗಿ ರಂಗಭೂಮಿ, ಕಲೆ, ಸಂಗೀತವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಫುವಾಕ್ ಎಂಬ ಎನ್‌ಜಿಒ ಅಧ್ಯಕ್ಷರಾಗಿ ಉರ್ದು ಲೇಖಕರು ಹಾಗೂ ಕಲಾವಿದರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ” ಎಂದು ಪರಿಚಯಿಸಿದರು.

“ಜಾಫೆರ್‌ರವರು ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ದೃಶ್ಯಮಾಧ್ಯಮಗಳ ಹಲವು ಚರ್ಚೆಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಮಾನವ ಹಕ್ಕುಗಳು ಹಾಗೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಕಂಡುಬಂದಾಗಲೆಲ್ಲ ಪ್ರತಿಭಟಿಸುವ ಮನೋಭಾವ ಇವರದ್ದು. 2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2021ರಲ್ಲಿ ಆಮ್‌ ಆದ್ಮಿ ಪಾರ್ಟಿ ಸೇರಿ 2014ರ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಕಾರಣಾಂತರದಿಂದ 2015ರ ನಂತರ ಆಮ್‌ ಆದ್ಮಿ ಪಾರ್ಟಿಯಿಂದ ದೂರವಾಗಿ, 2016ರಲ್ಲಿ ಕಾಂಗ್ರೆಸ್‌ ಸೇರಿದ್ದರು. 2019ರ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ಈಗ ಇವರು ಮತ್ತೆ ಎಎಪಿಗೆ ವಾಪಸಾಗುತ್ತಿರುವುದು ನಮಗೆಲ್ಲ ಸಂತಸ ಉಂಟುಮಾಡಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಈ ಕುರಿತು ಜಾಫೆರ್‌ ಮೊಹಿಯುದ್ದೀನ್‌ ಮಾತನಾಡಿ, “ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರದ ಸುಧಾರಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಗಿರುವ ಬದ್ಧತೆ ಪ್ರಶಂಸನೀಯ. ಪ್ರಸ್ತುತ ರಾಜಕೀಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವನ್ನು ಆಮ್‌ ಆದ್ಮಿ ಪಾರ್ಟಿ ಮಾತ್ರ ತೆಗೆದುಕೊಳ್ಳಬಹುದು. ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಭ್ರಷ್ಟ ಬಿಜೆಪಿಯನ್ನು ಮೂಲೆಗುಂಪು ಮಾಡುವ ಸಾಮರ್ಥ್ಯ ಎಎಪಿಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹಾಗೂ ಇತರೆ ಮುಖಂಡರು, ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ರಾಹುಲ್ ಯಾತ್ರೆಯಲ್ಲಿ ಅತಿಹಿಂದುಳಿದ ಸಮುದಾಯಗಳಿಗೆ ಅಪಮಾನ: ಸಿದ್ಧರಾಮಯ್ಯನವರೇ ಹೀಗೇಕೆ ಮಾಡಿದಿರಿ?
ಬೆಂಗಳೂರು: ಭಾರತ ಐಕ್ಯತಾ ಯಾತ್ರೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಾಡುಗೊಲ್ಲ, ಕೋಲೆಬಸವ, ಕೋಲಿ, ಕಬ್ಬಲಿಗ, ಹಕ್ಕಿಪಿಕ್ಕಿ, ದೊಂಬಿದಾಸ ಸಮುದಾಯದ ನಾಯಕರಿಗೆ ಅಪಮಾನ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯಾತ್ರೆ ಕರ್ನಾಟಕ ಪ್ರವೇಶಿಸಿದ ಸಂದರ್ಭದಲ್ಲಿ ಕನ್ನಡಪರ ಚಿಂತಕ ಅರುಣ್ ಜಾವಗಲ್ ಅವರನ್ನು ಆಹ್ವಾನಿಸಿ, ರಾಹುಲ್ ಜೊತೆಗಿನ ಸಂವಾದದಲ್ಲಿ ಮಾತನಾಡಲು ಅವಕಾಶ ನೀಡದೇ ಇದ್ದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅಂಥದ್ದೇ ಘಟನೆ ರಾಯಚೂರಿನಲ್ಲೂ ನಡೆದಿದ್ದು, ಹಿಂದುಳಿದ ಸಮುದಾಯದ ಮುಖಂಡರಿಗೆ ಆಹ್ವಾನ ನೀಡಿ, ವಿಶೇಷ ಪಾಸ್ ಕೊಟ್ಟು ಕರೆಯಿಸಿಕೊಂಡು ಅಪಮಾನವೆಸಗಿ ಹಿಂದಕ್ಕೆ ಕಳುಹಿಸಲಾಗಿದೆ.

ಈ ಸಂಬಂಧ ‘ಪೀಪಲ್ ಮೀಡಿಯಾ’ ಜೊತೆ ಕಾಡುಗೊಲ್ಲ ಸಮುದಾಯದ ಮುಖಂಡರಾದ ನಾಗಣ್ಣ ಮಾತನಾಡಿದ್ದು, ಅವರ ಹೇಳಿಕೆಯ ಪೂರ್ಣಪಾಠ ಹೀಗಿದೆ:

ಈ ಘಟನೆ ನಡೆದು ಸುಮಾರು ಮೂರು ದಿನ ಆಯಿತು, ಸಿದ್ದರಾಮಯ್ಯನವರ ಉಗ್ರ ಅಭಿಮಾನಿಯಾದ ನನಗೆ ಇದನ್ನು ಹೇಳಲು ಮನಸ್ಸಿಲ್ಲ, ಹೇಳದಿದ್ದರೆ, ಹಿಂದುಳಿದ ವರ್ಗಗಳಲ್ಲಿನ ಅತಿ ಸಣ್ಣ ಮತ್ತು ಸೂಕ್ಷ್ಮ ಸಮುದಾಯಗಳು ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಚ್ಚೆತ್ತುಕೊಳ್ಳಲಾರವು ಮತ್ತು ಸತ್ಯ ಹೇಳದಿದ್ದರೆ ನನಗೆ ಆತ್ಮವಂಚನೆ ಎನಿಸುತ್ತದೆ. ಆದ್ದರಿಂದ ಹೇಳುತ್ತಿದ್ದೇನೆ.

ಧರ್ಮ-ಜಾತಿ ದ್ವೇಷ, ಅಸಹನೆ, ಹಿಂಸೆ, ಸರ್ಕಾರದ ದಬ್ಬಾಳಿಕೆ, ಭ್ರಷ್ಟಾಚಾರದಿಂದ ಬಾಧಿತವಾಗಿರುವ ಭಾರತವನ್ನು ರಕ್ಷಣೆ ಮಾಡಿ ಇಂಡಿಯಾದ ಜನರನ್ನು ಬೆಸೆಯುವ  ಮಹತ್ವಾಕಾಂಕ್ಷೆ ಯಿಂದ  ‘ಭಾರತ್ ಜೋಡೋ  ಯಾತ್ರೆ’ ಎಂಬ ಹೆಸರಿನಲ್ಲಿ  ಪ್ರಿಯ ರಾಹುಲ್ ಗಾಂಧಿಯವರು ಪ್ರಾರಂಭಿಸಿರುವ ಕಾಲ್ನಡಿಗೆ ಜಾತಕ್ಕೆ ಅಭೂತಪೂರ್ವ ಜನ ಸ್ಪಂದನೆ ಸಿಗುತ್ತಿದೆ. ಈ ಜಾತಾದಲ್ಲಿ ಸಮಾಜದ ರೈತಾಪಿ ವರ್ಗ, ಮಹಿಳೆಯರು, ದಲಿತರು, ನಿರುದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ಆದಿವಾಸಿಗಳು ,ಅಲೆಮಾರಿಗಳು, ಬುಡಕಟ್ಟಿನ ಜನರು ಅಲ್ಪಸಂಖ್ಯಾತರು, ವಿಕಲ ಚೇತನರು, ಯುವಕ ಯವತಿಯರು  ವಯೋವೃದ್ದರು  ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ  ತಬ್ಬಿ  ಆಲಂಗಿಸಿಕೊಂಡು  ತಮ್ಮ ದುಃಖ  ದುಮ್ಮಾನಗಳನ್ನು  ಹೇಳಿಕೊಳ್ಳುತ್ತಿದ್ದಾರೆ.

ಇಂತಹ ದುರಿತ ಕಾಲದಲ್ಲಿ  ನೊಂದ ಜನರನ್ನು ಅಪ್ಪಿಕೊಂಡು ಸಾಂತ್ವನ ಹೇಳುವ ರಾಹುಲ್ ಅವರ ವ್ಯಕ್ತಿತ್ವ  ಅತೀ ಭಾವುಕನಾದ ನನಗೆ ತುಂಬಾ ಇಷ್ಟವಾಯಿತು.  ಕಷ್ಟದಲ್ಲಿರುವ ಜನರನ್ನು ರಾಹುಲ್ ಅಪ್ಪಿಕೊಂಡ ಫೋಟೋಗಳನ್ನು ನಾನು ನೋಡಿದಾಗ  ಎಷ್ಟೋ ಬಾರಿ ನನ್ನ ಹೃದಯ ಮತ್ತು ಕಣ್ಣುಗಳು ನನ್ನ ನಿಯಂತ್ರಣ ಕಳೆದುಕೊಂಡು ಕಣ್ಣೀರು ಸುರಿಸಿದ್ದು ಉಂಟು.  ನಾನು ಕೂಡ ರಾಹುಲ್ ಗಾಂಧಿ ಅವರನ್ನು ನೋಡಿ  ನನ್ನ ತಬ್ಬಲಿ ಸಮುದಾಯವಾದ ಕಾಡುಗೊಲ್ಲ ಜನಾಂಗದ  ನೋವುಗಳನ್ನು ಮತ್ತು ನಮಗೆ ಆಗುತ್ತಿರುವ ಅನ್ಯಾಯಗಳನ್ನು  ಅವರಿಗೆ ತಿಳಿಸಬೇಕು ಅನ್ನಿಸುತ್ತಿತ್ತು.

ಆದರೆ ನಮ್ಮಂತ ಸಣ್ಣ ಬುಡಕಟ್ಟು ಸಮುದಾಯದವರಿಗೆ ಅದು ಸಾಧ್ಯವಿಲ್ಲ. ಏಕೆಂದರೆ ನಮ್ಮ ಜಾತಿಯಲ್ಲಿ ಅಷ್ಟು ಎತ್ತರಕ್ಕೆ ಬೆಳೆದಿರುವ ಯಾವ ನಾಯಕರೂ ಇಲ್ಲ‌. ಇಂತಹ ವ್ಯಥೆಪಟ್ಟುಕೊಳ್ಳುತ್ತಿದ್ದ ಸಂದರ್ಭದಲ್ಲಿ  ಇದ್ದಕ್ಕಿದ್ದಂತೆ ಡಾ.ಸಿ.ಎಸ್. ದ್ವಾರಕಾನಾಥ್ ಅವರು ದಿನಾಂಕ 20/10/2022 ರಂದು ಪೋನ್ ಮಾಡಿ  “ನಾಳೆ ರಾಯಚೂರು ಜಿಲ್ಲೆಯ ಗಿಲ್ಲೆಸೆಗೂರು ಪಿ.ಯು ಕಾಲೇಜಿನಲ್ಲಿ  ನಿಮ್ಮ ಕಾಡುಗೊಲ್ಲ ಸಮುದಾಯವನ್ನು ಪ್ರತಿನಿಧಿಸಿ ರಾಹುಲ್ ಗಾಂಧಿ ಅವರ ಜೊತೆಗೆ ಸಂವಾದ ಮಾಡುವ ಸಮಯ ನಿಗದಿ ಆಗಿದೆ ನೀವು ಕೂಡಲೇ ರಾಯಚೂರಿಗೆ ಹೊರಡಿ, ನಿಮ್ಮ ಜೊತೆಗೆ  ಕೊಲೇಬಸವ ಸಮುದಾಯದ ಶ್ರೀನಿವಾಸ, ಹಕ್ಕಿ- ಪಿಕ್ಕಿ ಸಮುದಾಯದ ಪುನೀತ್, ಕೊಲಿ  ಮತ್ತು ಕಬ್ಬಲಿಗ ಸಮುದಾಯದ ಶಿವಪುತ್ರಪ್ಪ, ದೊಂಬಿದಾಸ ಸಮುದಾಯದ ರಂಗಮುನಿದಾಸ್ ಸೇರಿಕೊಳ್ಳುತ್ತಾರೆ” ಎಂದರು.

ನಾನು ತುಂಬಾ ಸಂತೋಷದಿಂದ ರಾಯಚೂರು ತಲುಪಿದೆ. ನಿಗದಿಯಂತೆ ರಾಹುಲ್ ಗಾಂಧಿ ಜೊತೆಗಿನ ಸಂವಾದ ಕಾರ್ಯಕ್ರಮದ ವ್ಯವಸ್ಥೆ ಆಗಿತ್ತು. ನಮ್ಮ ಐದು ಸಮುದಾಯಗಳ ಪ್ರತಿನಿಧಿಗಳ ತಂಡಕ್ಕೆ  ಪ್ರವೇಶಕ್ಕೆ ವಿಶೇಷ ಪಾಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಪಾಸ್ ಪಡೆದು ರಾಹುಲ್ ಗಾಂಧಿ ಅವರು ತಂಗಿದ್ದ ಗಿಲ್ಲೆಸೆಗೂರು ಪಿ.ಯು ಕಾಲೇಜಿನ ಒಳಕ್ಕೆ ಹೋದೆವು  ಅಲ್ಲಿ ಮಾಜಿ  I A S ಅಧಿಕಾರಿ ಸೆಂಥಿಲ್ ಅವರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿಸಿದರು. ಎರಡು ಗಂಟೆಗೆ ರಾಹುಲ್ ಗಾಂಧಿ ಅವರ ಜೊತೆಗೆ ನಿಮ್ಮ ಸಂವಾದ ಕಾರ್ಯಕ್ರಮ ಇದೆ ನೀವು ಕನ್ನಡದಲ್ಲಿಯೇ ನಿಮ್ಮ ಸಮುದಾಯ ಸಮಸ್ಯೆಗಳನ್ನು ಹೇಳಿಕೊಳ್ಳಿ ನಾನು ಇಂಗ್ಲಿಷ್ ಗೆ ಭಾಷಾಂತರ ಮಾಡುತ್ತೇನೆ” ಎಂದರು.

ತುಂಬಾ ಜವಾಬ್ದಾರಿಯಿಂದ ನಾವು ನಮ್ಮ ಸಮುದಾಯಗಳ ಸ್ಥಿತಿ ಗತಿಗಳ ಬಗ್ಗೆ ಮಾತನಾಡಲು ಟಿಪ್ಪಣಿ ಮಾಡಿಕೊಂಡು  ಕಾಯುತ್ತಿದೆವು. ರೈತ ಮುಖಂಡರ ಸಂವಾದ ಮುಗಿದ ನಂತರ ನಮ್ಮನ್ನು ಕರೆದರು  ನಾವು ಸಂವಾದ ನಡೆಯುವ ಕಾರ್ಯಕ್ರಮದ ಕೊಠಡಿಗೆ ಹೋಗುವ ಸಂದರ್ಭದಲ್ಲಿ  ರವಿವರ್ಮ ಕುಮಾರ್  ಅವರ ನೇತೃತ್ವದಲ್ಲಿ ಬಂದಿದ್ದ  “ಹಿಂದುಳಿದ ವರ್ಗಗಳ ಒಕ್ಕೂಟ”ದ  ರಾಮಚಂದ್ರ, ಎಚ್.ಎಂ. ರೇವಣ್ಣ, ಬೈರತಿ ಸುರೇಶ್ ಮತ್ತು ಅವರ ಬಳಗ ನಮ್ಮನ್ನು ಒಳಗಡೆ ಹೋಗಲು ಬಿಡಲಿಲ್ಲ . “ಹಿಂದುಳಿದ ವರ್ಗಗಳ ವತಿಯಿಂದ  ಒಕ್ಕೂಟದ ಸದಸ್ಯರು ಮಾತ್ರ ಒಳಕ್ಕೆ ಹೊಗಬೇಕು ನೀವು ಯಾರು?” ಎಂದು ಎಚ್.ಎಂ.ರೇವಣ್ಣ ಅವರು ನನ್ನ ಕತ್ತಿನ ಪಟ್ಟಿಹಿಡಿದು ನೂಕಿದರು.  ಆಗ ನಾನು “ಸರ್ ನಾನು ಅತ್ಯಂತ ಹಿಂದುಳಿದ  ಕಾಡುಗೊಲ್ಲ ಸಮುದಾಯದ ಪ್ರತಿನಿಧಿ. ನಮಗೆ ರಾಹುಲ್ ಗಾಂಧಿ ಅವರ ಜೊತೆಗೆ ಮಾತನಾಡಲು ಸಮಯ ನಿಗದಿಯಾಗಿದೆ ನಿಮಗೆ ಅನುಮಾನವಿದ್ದರೆ ಆಯೋಜಕರ ಹತ್ತಿರ ಕೇಳಿ  ಪಟ್ಟಿಯಲ್ಲಿ ನಮ್ಮ ಹೆಸರಿದೆ. ನಮಗೆ ವಿಶೇಷ ಪಾಸ್ ಕೊಟ್ಟಿದ್ದಾರೆ ನೋಡಿ,  ನಿಮ್ಮಂತ ದೊಡ್ಡವರು ನಮ್ಮಂತಹ ತಬ್ಬಲಿ ಸಮುದಾಯದವರನ್ನು ಈ ರೀತಿಯಲ್ಲಿ ದೌರ್ಜನ್ಯ ಮಾಡಬಾರದು ನಮ್ಮನ್ನು ಒಳಗಡೆ ಬಿಡಿ ಸಾರ್” ಎಂದೆ.

ಅದಕ್ಕೆ  ಮಾಜಿ ಸಚಿವ ರೇವಣ್ಣ ಮತ್ತು ಕುರುಬ ಸಮುದಾಯದ  ರಾಮಚಂದ್ರ ನಮ್ಮ ಮೇಲೆ ವ್ಯಗ್ರರಾದರು.  ನಮ್ಮ ತಂಡದಲ್ಲಿದ್ದ  ಮೂರು ಜನರನ್ನು ಒಳಗೆ ಬಿಡದೆ ನೂಕಿದರು.  ನಾನು ಮತ್ತು ಕೊಲೇಬಸವ ಸಮುದಾಯದ ಶ್ರೀನಿವಾಸ ಅವರು ಕಷ್ಟಪಟ್ಟು ಒಳ ಹೋದೆವು. ನಾವು ಒಳ ಹೋಗುತ್ತಿದ್ದಂತೆ  ಅಲ್ಲಿ ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನೀವು ಯಾಕೆ?” ಎಂದು ಪ್ರಶ್ನೆ ಮಾಡಿದರು. ಆಗ ನಮ್ಮ ಪಾಸ್ ತೋರಿಸಿ “ರಾಹುಲ್ ಸರ್ ಜೊತೆಗೆ ಸಂವಾದಕ್ಕೆ ಆಹ್ವಾನಿತರಾಗಿ ಬಂದಿದ್ದೇವೆ” ಎಂದಾಗ ಒಳಗೊಳಗೆ ಗೊಣಗಿಕೊಂಡು ಅಸಹನೆಯಿಂದ ನಮ್ಮನ್ನು ನೋಡಿದರು.  ನನ್ನ ಪಕ್ಕದಲ್ಲಿ ಕುಳಿತಿದ್ದ ಕೊಲೇ ಬಸವ ಸಮುದಾಯದ ಶ್ರೀನಿವಾಸ್ “ಸರ್ ನಾವು M B C ಗಳು” ಅಂದಾಗ ಕೊಪಗೊಂಡ ಕುರುಬ ಸಮುದಾಯದ ಮುಖಂಡರು ಶ್ರೀನಿವಾಸ ಅವರನ್ನು ಹಿಡಿದು ಹಿಂದಕ್ಕೆ ತಳ್ಳಿದರು.  ಇಷ್ಟೆಲ್ಲಾ   ದೌರ್ಜನ್ಯದ ನಡುವೆ ನಾವು ರಾಹುಲ್ ಗಾಂಧಿ ಅವರ ಬಳಿಗೆ ಹೋಗಿ ಮನವಿ ಕೊಡಲು ಪ್ರಯತ್ನ ಮಾಡಿದಾಗ ಸಿದ್ದರಾಮಯ್ಯ ಅವರು ನನ್ನನ್ನು ಹಿಂದಕ್ಕೆ ನೂಕಿದರು.

ಇಷ್ಟೆಲ್ಲಾ ಸನ್ನಿವೇಶವನ್ನು ನೋಡುತ್ತಿದ್ದ ಮಧು ಬಂಗಾರಪ್ಪ ಅವರ ಬಳಿ ನಾನು ಹೋಗಿ “ಏನ್ ಸರ್ ನಮ್ಮಂತಹ ತಬ್ಬಲಿ ಸಮುದಾಯಗಳಿಗೆ  ಇವರು ಹೇಗೆ ಮಾಡುತ್ತಿದ್ದಾರೆ ನೋಡಿ” ಎಂದಾಗ  “ನಾನು ಮೂಕ ಪ್ರೇಕ್ಷಕ  ನೋ ಕಾಮೆಂಟ್ಸ್” ಎಂದು ಬಿಟ್ಟರು. ಅತೀ ಉತ್ಸಾಹದಿಂದ ನಮ್ಮ ಸಮುದಾಯಗಳ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದ ನಾವು ಹತಾಶೆಯಿಂದ ಹೊರಬಂದೆವು.

ಮಾಜಿ ಸಚಿವ ರೇವಣ್ಣ  ಅವರು ವೇದಿಕೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಸಾಕಷ್ಟು ಭಾಷಣ ಮಾಡುತ್ತಾರೆ  ಅತ್ಯಂತ ಹಿಂದುಳಿದ ಅಲಕ್ಷಿತ ಸಮುದಾಯಗಳ ಬಗ್ಗೆ ತೋರುವ ಕಾಳಜಿ ಇದೆನಾ..? ಇಂತವರ ನಾಯಕತ್ವದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಸಿಗುತ್ತದೆಯೆ? ನಮ್ಮಂತಹ ದಿಕ್ಕಿಲ್ಲದ ಸಮುದಾಯಗಳ ಬೇರುಗಳನ್ನು ಕತ್ತರಿಸುವ ಕ್ರೌರ್ಯ ನಮ್ಮ ಅರಿವಿಗೆ ಬಂದಿದ್ದರೂ ನಾವು ಏನನ್ನೂ ಮಾತನಾಡದೇ “ಜೈ  ಹುಲಿಯಾ” “ಜೈ ಸಿದ್ದರಾಮಯ್ಯ” ಎಂದು ಜೈ ಕಾರ ಕೂಗುವುದಷ್ಟೇ ನಮ್ಮ ಯೋಗ್ಯತೇನಾ..?

ಇದು ನಾಗಣ್ಣ ಅವರ ನೊಂದ ನುಡಿಗಳು. ಕಾಂಗ್ರೆಸ್ ಮುಖಂಡರು ಹೀಗೇಕೆ ಮಾಡಿದರು? ಹೀಗೆ ಕರೆದು ಅಪಮಾನಿಸುವ ಅಗತ್ಯವೇನಿತ್ತು? ಬೇರೆಯವರ ವಿಷಯ ಹಾಗಿರಲಿ, ಸಿದ್ಧರಾಮಯ್ಯ ಅವರೇಕೆ ಹೀಗೆ ಮಾಡಿದರು?

ಭಾರತ ಐಕ್ಯತಾ ಯಾತ್ರೆಯ ಇಂದಿನ ಕಾರ್ಯಕ್ರಮಗಳ ವಿವರ
ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಇಂದು ಕರ್ನಾಟಕಕ್ಕೆ ಆಗಮಿಸಿರುವ ಭಾರತ ಐಕ್ಯತಾ ಯಾತ್ರೆಯ ಇಂದಿನ ಕಾರ್ಯಕ್ರಮಗಳ ವಿವರಗಳನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಟ್ವೀಟ್‌ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ನೀವೂ ಬನ್ನಿ, ಭಾಗವಹಿಸಿ.. ನವಭಾರತಕ್ಕಾಗಿ ಜೊತೆಯಾಗಿ ಹೆಜ್ಜೆಹಾಕೋಣ ಎಂದು ಕರೆಕೊಟ್ಟರು.

ಭಾರತ ಐಕ್ಯತಾ ಯಾತ್ರೆಯ ಇಂದಿನ ದಿನದ ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ

@bharatjodo #BharatJodoYatra

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: Kantara Celebrity premiere show : ನೋಡ್ತಿರಿ ಕಾಂತಾರ ಚಿತ್ರಕ್ಕೆ ನ್ಯಾಷನಲ್ ಅರ್ವಾಡ್ ಬರತ್ತೆ : ಅನುಶ್ರೀ

Reviews KANTARA After Watching Celebrity Show

https://fb.watch/fRKMlpnfDZ/

ಡಿ.ಕೆ. ಶಿವಕುಮಾರ್‌ ಅವರ ಮನೆ ಮತ್ತು ಇತರೆಡೆ ಸಿಬಿಐ ದಾಳಿ
ಇತ್ತ ಕಾಂಗ್ರೆಸ್‌ ಪಕ್ಷದ ನಾಯಕರು ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದರೆ ಅತ್ತ ಕೇಂದ್ರ ತನಿಖಾ ದಳದ ಅಧಿಕಾರಿಗಳು KPCC ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ಮನೆ ಮತ್ತು ಇತರ ಸ್ಥಳಗಳಲ್ಲಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ಬುಧವಾರ ತೆರಳಿ ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಈ ಪರಿಶೀಲನೆಗಳಿಗೆ ಸಿಬಿಐ ಅಧಿಕಾರಿಗಳು ಕನಕಪುರ ತಹಶೀಲ್ದಾರ್ ಹಾಗೂ ಪೋಲೀಸರ ಜತೆಗೆ ತೆರಳಿದ್ದರು. ಉಳಿದ ವಿವರಗಳನ್ನು ಎದುರುನೋಡಲಾಗುತ್ತಿದೆ.

ಹಿರಿಯ ಕಾಂಗ್ರೆಸ್‌ ನಾಯಕ ನಿಧನ
ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಕೇರಳದ ಮಾಜಿ ಶಾಸಕ ಕೆ. ಮೊಹಮ್ಮದ್‌ ಅಲಿ ನಿಧನರಾಗಿದ್ದಾರೆ.

76 ವರ್ಷ ವಯಸ್ಸಿನ ಈ ಹಿರಿಯ ನಾಯಕ ಕೇರಳದ ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಕಿಡ್ನಿ ಸಂಬಂಧಿ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಒಕ್ಕೂಟದ ಮೂಲಕ ರಾಜಕೀಯ ಪ್ರವೇಶಿಸಿದ್ದ ಇವರು 1980-2006ರ ಸಮಯದಲ್ಲಿಸತತವಾಗಿ ವಿಧಾನಸಭೆ ಚುನಾವಣೆ ಗೆದ್ದು ಶಾಸಕರಾಗಿದ್ದರು. ಆಲುವಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಇವರು ಕೇರಳ ಪ್ರದೇಶ ಕಾಂಗ್ರೆಸ್ಸಿನ ವಿವಿಧ ಹುದ್ದೆಯ ಜವಬ್ದಾರಿಗಳನ್ನು ಸಹ ನಿಭಾಯಿಸಿದ್ದರು.

ಅವರ ನಿಧನಕ್ಕೆ ಸ್ಪೀಕರ್ ಎ.ಎನ್ ಶಂಸೀರ್ ಸಂತಾಪ ಸೂಚಿಸಿದ್ದಾರೆ. ‘ಉತ್ತಮ ಶಾಸಕರಲ್ಲದೆ ಲೇಖಕರೂ, ಜನಪ್ರಿಯ ನಾಯಕರೂ ಆಗಿದ್ದರು’ ಎಂದು ಶಂಸೀರ್ ಹೇಳಿದರು.

ಕೆಪಿಸಿಸಿಯ ಹಿಂದುಳಿದ ಜಾತಿಗಳ ವಿಭಾಗದ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಆಯ್ಕೆ
ಬೆಂಗಳೂರು: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಹಿಂದುಳಿದ ಜಾತಿಗಳ ವಿಭಾಗದ ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಆಯ್ಕೆಮಾಡಲಾಗಿದೆ ಎಂದು  ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಕಟಣೆ

ಈ ಕುರಿತು ಟ್ವೀಟ್‌ ಮಾಡುವ ಮೂಲಕ ಅಭಿನಂದಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿಯ ಹಿಂದುಳಿದ ಜಾತಿಗಳ ವಿಭಾಗದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಮಾಜಿ ಶಾಸಕ ಮಧು ಬಂಗಾರಪ್ಪನವರಿಗೆ ಅಭಿನಂದನೆಗಳು. ಜನಜಾಗೃತಿ, ಸಂಘಟನೆ ಮತ್ತು ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸ ನಿಮ್ಮಿಂದಾಗಲಿ ಎಂದು ಶುಭ ಹಾರೈಸಿದ್ದಾರೆ.