KPSC – Peepal Media

KPSC ಕಾರ್ಯದರ್ಶಿ ಲತಾಕುಮಾರಿಗೆ 10 ದಿನ ರಜೆ ನೀಡಿ ಮನೆಗೆ ಕಳಿಸಿದ ಸರ್ಕಾರ!
ಬೆಂಗಳೂರು: ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಕೆಲವು ಸದಸ್ಯರು ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಅವರ ಕೆಲವು ದಿನಗಳಿಂದ ಜಟಾಪಟಿ ನಡೆಯುತ್ತಿದೆ, ಇದರ ಮಧ್ಯೆಯೇ, ಸರ್ಕಾರ ಪ್ರಮಾಣಿಕ ಅಧಿಕಾರಿ ಎನಿಸಿಕೊಂಡಿದ್ದ ಲತಾ ಕುಮಾರಿ ಅವರಿಗೆ 10 ದಿನ ಗಳಿಕೆ ರಜೆ ನೀಡಿ ಮನೆಗೆ ಕಳುಹಿಸಿದೆ.

ಈ ಕುರಿತು ಡಿಪಿಎಆರ್ ಇಲಾಖೆಯು ಬುಧವಾರ ಕೆ.ಎಸ್. ಲತಾ ಕುಮಾರಿ ಅವರಿಗೆ ಫೆಬ್ರುವರಿ 7 ರಿಂದ ಫೆಬ್ರುವರಿ 17ರವರೆಗೆ ಗಳಿಕೆ ರಜೆ ನೀಡಿ ಆದೇಶ ಹೊರಡಿಸಿದೆ. ಅವರ ರಜೆ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಕೆ ಅವರನ್ನು ಕೆಪಿಎಸ್‌ಸಿ ‍ಪ್ರಭಾರಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಲಾಗಿದೆ.

ಕೆಪಿಎಸ್‌ಸಿಯ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌, ಕೆಲ ಸದಸ್ಯರು ಮತ್ತು ಲತಾಕುಮಾರಿ ಅವರ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ಮಧ್ಯೆಯೇ ಪ್ರಮಾಣಿಕ ಅಧಿಕಾರಿ ಎನಿಸಿಕೊಂಡಿದ್ದ ಲತಾ ಅವರಿಗೆ ರಜೆ ಮಂಜೂರು ಮಾಡಿ ಕಳುಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆಯೋಗದ ಆಯ್ಕೆ ಸಮಿತಿ ಸೂಚಿಸಿದ್ದ ಅಭ್ಯರ್ಥಿಯನ್ನು ಕಾನೂನು ಕೋಶದ ಮುಖ್ಯಸ್ಥ ಹುದ್ದೆಗೆ ನೇಮಿಸಿ ತಕ್ಷಣ ಆದೇಶ ಹೊರಡಿಸಬೇಕು ಎಂದು ಅಧ್ಯಕ್ಷರಿಂದ ಒತ್ತಡ ಇತ್ತು ಎಂಬುದು ತಿಳಿದು ಬಂದಿದೆ. ಅದು ಸಾಧ್ಯವಾಗದೇ ಇದ್ದರೆ ರಜೆ ಮೇಲೆ ತೆರಳಬೇಕು’ ಎಂದು ಅಧ್ಯಕ್ಷರು ಮತ್ತು ಸದಸ್ಯರು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಅವರ ರಜೆಯ ಹಿಂದೆ ಈ ಒತ್ತಡವೇ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

KPSC ಭ್ರಷ್ಟಾಚಾರ: ದಯಾ ಮರಣಕ್ಕೆ ಅಭ್ಯರ್ಥಿಗಳ ಮನವಿ
ಕರ್ನಾಟಕ ಲೋಕಸೇವಾ ಆಯೋಗದ ಅಡಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಕರೆದ ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಅಡಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗ ವಂಚಿತ ಅಭ್ಯರ್ಥಿಗಳು ನ್ಯಾಯ ಬೇಕು ಅಥವಾ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

2018 ರ ಅಧಿಸೂಚನೆಯ ಅಡಿಯಲ್ಲಿ ಹೊರಡಿಸಲಾದ ಸಿ & ಆರ್ ನಿಯಮಾವಳಿ ಪ್ರಕಾರ ಒಟ್ಟು 1,520 ಹುದ್ದೆಗಳನ್ನು ಉದ್ಯೋಗ ನೇಮಕಾತಿಗೆ ಆದೇಶ ಹೊರಡಿಸಲಾಗಿತ್ತು. ಅಷ್ಟೂ ಆಯ್ಕೆಯನ್ನು ಅರ್ಹತೆಯ ಆಧಾರದಲ್ಲೇ ನಡೆಸುವ ಬಗ್ಗೆ ಇಲಾಖೆಯ ನಿಯಮಾವಳಿಗಳು ತಿಳಿಸಿವೆ.

ಹಾಗಾಗಿ ಮೀಸಲಾತಿ ಕೆಳಗೆ ಬರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಆಯ್ಕೆಗಳನ್ನು ತಮಗೆ ಬೇಕಾದ ಅಭ್ಯರ್ಥಿಗಳನ್ನಷ್ಟೇ ಆಯ್ಕೆ ಪ್ರಕ್ರಿಯೆ ಒಳಗೆ ಬಳಸಿಕೊಳ್ಳಲಾಗಿದೆ ಎಂದು ಉದ್ಯೋಗ ವಂಚಿತ ಅಭ್ಯರ್ಥಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ಈ ಆರೋಪದ ಅಡಿಯಲ್ಲಿ ಈಗಾಗಲೇ 450 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಆಯ್ಕೆ ಮಾಡಲಾಗಿದೆ. ಉಳಿದ 350 ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ತಡೆ ಹಿಡಿದ ಬಗ್ಗೆಯೂ ಆರೋಪಿಸಿದ್ದಾರೆ.

ಹಾಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಡಿಯಲ್ಲೂ ಸಹ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಕೆಲಸ ಮಾಡಿದೆ ಎಂದು ವಂಚಿತ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಅರ್ಹತೆ ಅಡಿಯಲ್ಲಿ ನೋಡಿದರೆ ಈಗಾಗಲೇ ಉದ್ಯೋಗ ನೇಮಕಾತಿ ಆದೇಶ ಪಡೆದುಕೊಂಡಿರುವ 450 ಕ್ಕೂ ಹೆಚ್ಚು ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು ಈಗಾಗಲೇ ಇದ್ದರೂ ಅವರಿಗೆ ನೇಮಕಾತಿ ಆದೇಶ ಕೊಡದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಸ್ಪಷ್ಟ ಚಿತ್ರಣ ಕಾಣಲಾಗುತ್ತಿದೆ ಎಂದು ಉದ್ಯೋಗ ವಂಚಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ತಡೆ ಹಿಡಿದ 350 ಉದ್ಯೋಗಾಕಾಂಕ್ಷಿಗಳ ನೇಮಕಾತಿ ಆದೇಶ ತಡೆ ಹಿಡಿದ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ ಕೊಟ್ಟಿಲ್ಲ. ಹಾಗೊಂದು ವೇಳೆ ನೇಮಕಾತಿ ತಡೆ ಹಿಡಿಯುವ ಬಗ್ಗೆ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಆದೇಶವನ್ನೂ ಹೊರಡಿ‌ಸಿಲ್ಲ‌. ಹಾಗಾದರೆ ಬಾಕಿ ಉಳಿದ 350 ಮಂದಿ ಉದ್ಯೋಗ ನೇಮಕಾತಿಯನ್ನು ಯಾಕೆ ತಡೆ ಹಿಡಿಯಲಾಗಿದೆ ಎಂಬ ಪ್ರಶ್ನೆಯನ್ನು ಉದ್ಯೋಗ ವಂಚಿತ ಅಭ್ಯರ್ಥಿಗಳು ಹಾಕಿದ್ದಾರೆ.

ಇಲ್ಲಿ ನೇಮಕಾತಿ ಆದೇಶವನ್ನೇ ನಂಬಿಕೊಂಡ 350 ಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲಾತಿಗಳನ್ನು ಇಲಾಖೆಗೆ ನೀಡಿ ಸುಮಾರು 8 ತಿಂಗಳು ಕಳೆದಿವೆ. ಈ ಬಗ್ಗೆ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖೆ ಸಚಿವರು, ಮುಖ್ಯಮಂತ್ರಿಗಳಾದಿಯಾಗಿ ಯಾರನ್ನೇ ಸಂಪರ್ಕಿಸಿದರೂ ನಮ್ಮ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಕಾನೂನು ಮೊರೆ ಹೋಗಲೂ ನಮ್ಮ ಬಳಿ ಹಣವಿಲ್ಲ. ನಮ್ಮ ಕಷ್ಟ ಯಾರಿಗೆ ಕೇಳುವುದು. ಹಾಗಾಗಿ ಕೊನೆಯ ಪಕ್ಷ ನಮಗೆ ದಯಾಮರಣಕ್ಕಾದರೂ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡಿದ್ದಾರೆ. ನಿಮಗೆ ಇದೊಂದೇ ಉದ್ಯೋಗವೇ, ಬೇರೆ ನೋಡಿಕೊಳ್ಳಿ ಎಂಬ ಹಾರಿಕೆಯ ಅಹಂಕಾರದ ಮಾತನ್ನಾಡಿದ್ದಾರೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಸಧ್ಯ ಈ ಎಲ್ಲಾ ಬೆಳವಣಿಗೆ ನೋಡಿದರೆ ಲೋಕಸೇವಾ ಆಯೋಗದ ಅಡಿಯಲ್ಲಿ ಈಗಾಗಲೇ ನೇಮಕವಾಗಿರುವ 450 ಅಭ್ಯರ್ಥಿಗಳ ಆಯ್ಕೆ ಮತ್ತು ತಡೆ ಹಿಡಿದಿರುವ 350 ಹುದ್ದೆಗಳ ಹಿಂದೆ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡದೇ ಹೋದರೆ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ ಎಂಬಂತಾಗುತ್ತದೆ.

FDA ನೌಕರಿ ಕೊಡಿಸುವ ಆಮೀಷ: ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅಮಾನತು
ಮೈಸೂರು:  ಕೆಪಿಎಸ್‌ಸಿಯಿಂದ FDA ನೌಕರಿ ಕೊಡಿಸುವ ಆಮೀಷದ ಆರೋಪದಡಿ ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅವರನ್ನು  ಅಮಾನತು ಮಾಡಲಾಗಿದೆ.

ಪ್ರಥಮ ದರ್ಜೆ ಸಹಾಯಕ ನೇಮಕಾತಿಯಲ್ಲಿ ಹುದ್ದೆ  ಕೊಡಿಸುವುದಾಗಿ ಬಸವರಾಜು ಎಂಬುವರಿಗೆ ಬಾಗಲಕೋಟೆ ಜಿಲ್ಲೆಯ ಸಂಗಮೇಶ್‌ ಜಳಕಿ ಜೊತೆಗೆ ಆರೋಪಿಯಾದ ಪಿಎಸ್‌ಐ ಅಶ್ವಿನಿ ಅವರೊಂದಿಗೆ ಮಾತನಾಡ ಮೊಬೈಲ್‌ ಹಾಗೂ ವ್ಯಾಟ್ಸಪ್‌ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಜೊತೆಗೆ ಬ್ಯಾಂಕ್‌ ಖಾತೆಯಲ್ಲಿ ಹಣ ವರ್ಗಾವಣೆ ಆಗಿರುವ ಕುರಿತು  ಬ್ಯಾಂಕ್‌ ಸ್ಟೇಟ್‌ ಮೆಂಟ್‌ಗಳು ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು.

ಈ ಕುರಿತು ಪ್ರಜಾವಾಣಿಯು ವರದಿ ಮಾಡಿತ್ತು.

ಕೆಪಿಎಸ್‌ಸಿಯಿಂದ FDA ನೌಕರಿ ಕೊಡಿಸುವ ಆಮೀಷ: ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅಮಾನತು#mysuru #kpschttps://t.co/YaHLnMjOsD
— Prajavani (@prajavani) September 19, 2022