KrishnaByregowda – Peepal Media

ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ : ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
ಬೆಂಗಳೂರು : ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಒತ್ತುವರಿ ಪಟ್ಟಿಯನ್ನು ಶೀಘ್ರದಲ್ಲಿ ತಯಾರಿಸಿ ಹಾಗೂ ಪ್ರತೀ ವಾರಾಂತ್ಯದಲ್ಲಿ ಒತ್ತುವರಿ ತೆರವಿಗೆ ಮುಂದಾಗಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ.

ವಿಕಾಸ ಸೌಧದಲ್ಲಿ ಇಂದು ಸರ್ಕಾರ ಪ್ರಧಾನ ಕಾರ್ಯದರ್ಶಿ,  ಬೆಂಗಳೂರು ನಗರ/ಗ್ರಾಮೀಣ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಆಯುಕ್ತರ ಸಭೆ ಕರೆದಿದ್ದ ಸಚಿವರು, ಸಭೆಯಲ್ಲಿ ಒತ್ತುವರಿ ತೆರವಿಗೆ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರೆ.

ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು, “ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನು ಒತ್ತುವರಿ ಅತಿದೊಡ್ಡ ಸಮಸ್ಯೆಯಾಗಿದೆ. ಸರ್ಕಾರದ ಜಮೀನು ಭೂ ಮಾಫಿಯಾ ಪಾಲಾಗುತ್ತಿದೆ. ಪರಿಣಾಮ ಸರ್ಕಾರಕ್ಕೆ ಸಾಕಷ್ಟು ಆದಾಯವೂ ಖೋತಾ ಆಗುತ್ತಿದೆ. ಹೀಗಾಗಿ ಅಧಿಕಾರಿಗಳು ಶೀಘ್ರದಲ್ಲಿ ಒತ್ತುವರಿ ಜಮೀನಿನ ಪ್ರಾಥಮಿಕ ಪಟ್ಟಿ ಸಿದ್ದಪಡಿಸಿ, ಪ್ರತೀ ಶನಿವಾರ ಹಾಗೂ ಭಾನುವಾರ ಒತ್ತುವರಿ ತೆರವಿಗೆ ಮುಂದಾಗಬೇಕು” ಎಂದು ತಿಳಿಸಿದರು.

ಕಳೆದ ಅಧಿವೇಶನದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವಿನ ಬಗ್ಗೆ ನಮ್ಮ ಸರ್ಕಾರ ಮಾತು ನೀಡಿದೆ. ಕೊಟ್ಟ ಮಾತಿನಂತೆ ಒತ್ತುವರಿ ತೆರವಿನ ಜೊತೆಗೆ ಸರ್ಕಾರಿ ಜಮೀನನ್ನು ರಕ್ಷಿಸುವ ಕೆಲಸವೂ ಆಗಬೇಕು. ಸರ್ಕಾರಿ ಜಮೀನಿನ ಸುತ್ತ ಸುರಕ್ಷಿತ ಬೇಲಿ ಹಾಕಬೇಕು, ಪ್ರತಿವಾರ ಅಧಿಕಾರಿಗಳು ‘ಬೀಟ್’ ಹಾಕುವ ಮೂಲಕ ಸರ್ಕಾರಿ ಸ್ವತ್ತನ್ನು ಕಾಪಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಭೂಮಿಯ ರೀ ಸರ್ವೆ ಆಗಲಿ
ಹಲವಾರು ಪ್ರಕರಣಗಳಲ್ಲಿ ಸರ್ಕಾರಿ ದಾಖಲೆಗಳು ಕಳುವಾಗಿವೆ ಅಥವಾ ಕೆಲವು ದಾಖಲೆಗಳನ್ನು ತಿದ್ದಲಾಗಿದೆ. ಇದರ ಹಿಂದೆ ಭೂ ಮಾಫಿಯಾ ಕೈವಾಡವೂ ಇದೆ. ಹೀಗಾಗಿ ಭೂ ಸುಧಾರಣೆ-ಬಗರ್ ಹುಕುಂ ಅಡಿಯಲ್ಲಿ ಜಮೀನು ಗ್ರ್ಯಾಂಟ್ ಪಡೆದ ಅರ್ಹ ಫಲಾನುಭವಿಗಳೂ ಸಂಕಷ್ಟ ಎದುರಿಸುವಂತಾಗಿದೆ.

ಇದಲ್ಲದೆ, ಗೋಮಾಳ, ಸ್ಮಶಾನದ ಭೂಮಿ, ಕೆರೆ-ಕಟ್ಟೆಗಳೂ ಸಹ ಒತ್ತುವರಿ ಆಗಿದೆ. ಹೀಗಾಗಿ ಭೂ ಮಾಪಕರು ಹಾಗೂ ಗ್ರಾಮ ಲೆಕ್ಕಿಗರು ತಹಶೀಲ್ದಾರ್ ನೇತೃತ್ವದಲ್ಲಿ ಸರ್ಕಾರಿ ದಾಖಲೆಗಳಲ್ಲಿರುವ ಪ್ರತಿ ಸರ್ಕಾರಿ ಜಮೀನನ್ನು ಮತ್ತೆ ರೀ ಸರ್ವೆ (ಮರು ಮಾಪನ) ನಡೆಸಬೇಕು. ಆ ವರದಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಒತ್ತುವರಿಯಾದ ಸರ್ಕಾರಿ ‌ಜಮೀನನ್ನು ಗುರುತಿಸಿ ಪಟ್ಟಿ ಸಿದ್ದಪಡಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಪ್ಲ್ಯಾನ್ ಅನುಮತಿಗೆ ಮುನ್ನ ಎಚ್ಚರ
ವಸತಿ ಸಮುಚ್ಚಯ ಸೇರಿದಂತೆ ಯಾವುದೇ ಯೋಜನೆಗಾಗಿ ನೋಂದಣಿ ಬಂದರೂ ಸಹ ಅಧಿಕಾರಿಗಳು ಎಚ್ಚರವಹಿಸಬೇಕು. ನೋಂದಣಿಯಾಗುತ್ತಿರುವ ಭೂಮಿಯ ದಾಖಲೆಗಳನ್ನು ಪರಿಶೀಲಿಸಬೇಕು, ಸರ್ಕಾರಿ ಜಮೀನಾಗಿದ್ದಲ್ಲಿ ಕೂಡಲೇ ಕ್ರಮ ಜರುಗಿಸಬೇಕು. ಇನ್ನಾದರೂ ಅಕ್ರಮ ಒತ್ತುವರಿಗೆ ತಡೆಯೊಡ್ಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ. ಸುನೀಲ್ ಕುಮಾರ್ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಡಾ| ಶಿವಶಂಕರ್. ಎನ್ ಹಾಗೂ ಕಂದಾಯ ಇಲಾಖೆಯ ಹಲವು ಅಧಿಕಾರಿಗಳು ಇದ್ದರು.

ಅಮರನಾಥ ಯಾತ್ರಾರ್ಥಿಗಳ ಸುರಕ್ಷತೆ ನಮ್ಮ ಸರ್ಕಾರದ ಜವಾಬ್ದಾರಿ : ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ಅಮರನಾಥ ಯಾತ್ರೆಗೆ ತೆರಳಿ, ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಯಾತ್ರಿಕರ ಬಗ್ಗೆ ಯಾವುದೇ ಆತಂಕ ಬೇಡ. ಎಲ್ಲ ಯಾತ್ರಿಕರೂ ಸುರಕ್ಷಿತವಾಗಿದ್ದು ಅವರನ್ನು ರಾಜ್ಯಕ್ಕೆ ವಾಪಾಸ್ ಕರೆತರುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಭರವಸೆ ನೀಡಿದ್ದಾರೆ.

ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭವಾಗಿದೆ.‌ ಕರ್ನಾಟಕದಿಂದಲೂ ಅಪಾರ ಜನ ಭಕ್ತಾದಿಗಳು ಯಾತ್ರೆಗೆ ತೆರಳಿದ್ದಾರೆ. ಆದರೆ, ಉತ್ತರ ಭಾರತದಲ್ಲಿ ವಿಪರೀಪತವಾಗಿರುವ ಮಳೆಯ ಕಾರಣಕ್ಕೆ ಭೂ ಕುಸಿತ ಉಂಟಾಗಿದ್ದು, ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಇಂದಿನ ಅಧಿವೇಶನದಲ್ಲೂ ವಿರೋಧ ಪಕ್ಷದ ಸದಸ್ಯರು ಕರ್ನಾಟಕದ ಅಮರನಾಥ ಯಾತ್ರಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪ್ರಶ್ನೆ ಎತ್ತಿದರು.

ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ, “ಅಮರನಾಥ ಯಾತ್ರೆಗೆ ತೆರಳಿದ 18,000 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಕರ್ನಾಟಕದ ಯಾತ್ರಾರ್ಥಿಗಳೂ ಇದ್ದಾರೆ. ಈಗಾಗಲೇ ಎನ್ ಡಿ ಆರ್ ಎಫ್ ಹಾಗೂ ಸಿಆರ್ ಪಿಎಫ್ ಆರ್ಮಿ ಕ್ಯಾಂಪ್ ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಿಎಂ ಕಚೇರಿಯಿಂದ ಸಂವಹನ ನಡೆಸಲಾಗುತ್ತಿದ್ದು, ರಾಜ್ಯದಿಂದ 4 ಜನ ಹಿರಿಯ ಐಎಎಸ್ ಐಪಿಎಸ್ ಅಧಿಕಾರಿಗಳನ್ನು ಈಗಾಗಲೇ ಕಾಶ್ಮೀರಕ್ಕೆ ಕಳುಹಿಸಿ ಕೊಡಲಾಗಿದೆ. ಎಲ್ಲ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅವರ ಕುಟುಂಬಸ್ಥರು ಆತಂಕಪಡುವ ಅಗತ್ಯ ಇಲ್ಲ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಈಗಾಗಲೇ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿರುವ 129 ಯಾತ್ರಾರ್ಧಿಗಳನ್ನು ಸುರಕ್ಷಿತವಾಗಿ ಕಾಶ್ಮೀರಕ್ಕೆ ಕರೆತರಲಾಗಿದೆ. ಆದರೆ, ಬಾಲ್ತಾಲ್ ಕ್ಯಾಂಪ್ ನಲ್ಲಿ ಹವಾಮಾನ ಹದಗೆಟ್ಟಿದ್ದು ವಿಪರೀತ ಮಂಜಿನ ಕಾರಣಕ್ಕೆ ರಸ್ತೆ ಬಂದ್ ಆಗಿದೆ. ಬುಧವಾರದ ನಂತರ ವಾತಾವರಣ ತಿಳಿಯಾಗಲಿದ್ದು,ರಸ್ತೆ ಕಾರ್ಯಾಚರಣೆ ಆರಂಭವಾಗಲಿದೆ. ಆನಂತರ ಅವರನ್ನೂ ಕಾಶ್ಮೀರಕ್ಕೆ ರವಾನಿಸಿ ಅಲ್ಲಿಂದ ಕರ್ನಾಟಕಕ್ಕೆ ಕರೆತರಲಾಗುವುದು” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲೇ-ಲಡಾಕ್ ನಲ್ಲಿ ಸಿಲುಕಿರುವ ಯಾತ್ರಾರ್ಧಿಗಳ ರಕ್ಷಣೆಯ ಬಗ್ಗೆಯೂ ಸದನದಲ್ಲಿ ವಿರೋಧ ಪಕ್ಷದ ನಾಯಕರಿಂದ ಗಮನ ಸೆಳೆಯಲಾಯಿತು.

ಈ ಪ್ರಶ್ನೆಗೂ ಸ್ಪಷ್ಟಣೆ ನೀಡಿದ ಸಚಿವರು, “ಲೇ-ಲಡಾಕ್ ಬೇರೆಯದೇ ರಾಜ್ಯ. ಮಿಲಿಟರಿ ಹಿಡಿತವಿರುವ ರಾಜ್ಯ. ಆ ಭಾಗದಲ್ಲಿ ಕೇವಲ ಏಕೈಕ ಹೆಲಿಪ್ಯಾಡ್ ಇದ್ದು, ಪ್ರೈವೇಟ್ ಹೆಲಿಕಾಪ್ಟರ್ ಗಳಿಗೆ ಅವಕಾಶ ಇಲ್ಲ. ಆದರೆ, ಲೇ-ಲಡಾಕ್ ನಲ್ಲಿ ಸಿಲುಕಿರುವ ಕನ್ನಡಿಗರ ಪರವಾಗಿಯೂ ನಮ್ಮ ಸಹಾಯ ಸಹಾನುಭೂತಿ ಇದೆ. ಅಲ್ಲಿ ಸಿಲುಕಿರುವ ಪ್ರಯಾಣಿಕರ ಬಗ್ಗೆ ಮಾಹಿತಿ ಇದ್ದರೆ ಕೊಡಿ, ಅವರ ರಕ್ಷಣೆಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ” ಎಂದರು.