#Kumaraswamy #JDS #ramanagara #mysore #kodagu #kannadaexpress9 #prathapsimha #Simha #SaRaMahesh #GTDevegowda #DeveGowda #HDK H D Kumaraswamy – Peepal Media

ನಮ್ಮ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶ: ಜಂಠಿ ಪತ್ರಿಕಾಗೋಷ್ಠಿಯಲ್ಲಿ ಹೆಚ್.ಕೆ. ಕುಮಾರಸ್ವಾಮಿ ಆಕ್ರೋಶ
ಹಾಸನ: ಕಳೆದ ಎರಡು ದಿನಗಳ ಹಿಂದೆ ಹಾಸನದಲ್ಲಿ ನಡೆದ ಸಮಾವೇಶವು ಸ್ವಾಭಿಮಾನಿ ಸಮಾವೇಶವು ಅಲ್ಲ, ಜನ ಕಲ್ಯಾಣ ಸಮಾವೇಶವು ಅಲ್ಲ ಅದೊಂದು ಸ್ವಾರ್ಥ ಸಮಾವೇಶ. ಕೇವಲ ನಮ್ಮ ಜೆಡಿಎಸ್ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರಿಗೆ ಸ್ವಲ್ಪವಾದರು ಮಾನ ಮರ್ಯಾದೆ ಬೇಡವೆ? ಎಂದು ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸಿದರು.

ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಜೆಡಿಎಸ್ ತಿರುಗೇಟು ನೀಡಿದರು.. ಕೇವಲ ನಮ್ಮ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರು ಜಿಲ್ಲೆಗೆ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನೆಂದು ಹೇಳಬೇಕಿತ್ತು. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆ ಇದ್ದರೂ ಆ ಬಗ್ಗೆ ಒಂದೆ ಒಂದು ಮಾತನಾಡಿಲ್ಲ. ಅವರಿಗೆ ಸ್ವಲ್ಪವಾದರು ಮಾನ ಮರ್ಯಾದೆ ಬೇಡವೆ? ಹಾಸನದಲ್ಲಿ ಮಹಿಳೆಯರಿಗೆ ಅನ್ಯಾಯ ಆಗಿದೆ ಅಂತಾರೆ. ಬಾಣಂತಿಯರ ಸಾವು ಆಗಿರುವುದು ಇದು ಯಾರಿಗೆ ಅನ್ಯಾಯ? ಮಹಿಳೆಯರು ಮಕ್ಕಳಿಗೆ ಮಾಡಿದ ಅನ್ಯಾಯ ಅಲ್ಲವೇ. ಎಲ್ಲಾ ಇಲಾಖೆ ಆಡಳಿತ ಇಲ್ಲಾ ಸರ್ಕಾರ ಸತ್ತು ಹೋಗಿದೆ. ಈ ಸಮಾವೇಶ ಅಕ್ಷ್ಯಮ್ಯ ಎಂದು ವಾಗ್ದಾಳಿ ನಡೆಸಿದರು. ಉಪ ಚುನಾವಣೆ ಫಲಿತಾಂಶ ಆಡಳಿತ ಪಕ್ಷದ ಪರ ಬರೋದು ಸಾಮಾನ್ಯ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವ ಬಗ್ಗೆ ಸಿಎಂ ಅವರೇ ಹಗರಣ ಒಪ್ಪಿಕೊಂಡಿದ್ದಾರೆ. ಓರ್ವ ಅದಿಕಾರಿ ಆತ್ಮಹತ್ಯೆ ಮಾಡಿಕೊಂಡಿದಾರೆ. ಇದೆಲ್ಲದರ ಬಗ್ಗೆ ನಿಮ್ಮ ಕ್ರಮ ಆಗಿಲ್ಲ. ಜನ ಕುರುಡರಿಲ್ಲ, ೨೫ ವರ್ಷದಿಂದ ಇರೋ ಪಕ್ಷವನ್ನು ಕಿತ್ತೊಗೆಯೊದಾಗಿ ಹೇಳ್ತಾರೆ. ಅವರು ಆರು ಜಿಲ್ಲೆಯಿಂದ ಅಷ್ಟು ಜನ ಸೇರಿಸಿದಾರೆ. ನಾವು ಒಂದೇ ಜಿಲ್ಲೆಯಿಂದ ಅಷ್ಟು ಜನ ಸೇರಿಸ್ತೀವಿ. ಲೋಕಸಭಾ ಅದಿವೇಶನ ಮುಗಿಯಲಿ. ನಮ್ಮ ಕುಮಾರಸ್ವಾಮಿ ಬರ್ತಾರೆ ನಾವೂ ರಾಜಕೀಯ ಸಮಾವೇಶ ಮಾಡ್ತೇವೆ ಎಂದು ತಿರುಗೇಟು ನೀಡಿದರು. ಇದೆಲ್ಲ ಬಿಡಿ ಇನ್ನು ಮುಂದಾದರು ಕೆಲಸ ಮಾಡಿ ಎಂದು ಸಲಹೆ ನೀಡಿದರು. ಸುಳ್ಳು ಆಪಾದನೆ ಬಿಡಲಿ, ನಮ್ಮ ನಾಯಕರನ್ನ ನಿಂದಿಸಿರುವುದರ ವಿರುಧ್ಧ ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದರು.

ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಿಎಂ ಮತ್ತು ಡಿಸಿಎಂ ಮಾತುಗಳನ್ನ ನೋಡಿದ್ರೆ ಇದು ಕೇವಲ ನಿಂದನೆಗೆ ಮಾಡಿದ ಸಮಾವೇಶವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಿದೆ. ತಾವು ಮಾಡಿದ ಅಭಿವೃದ್ಧಿ ಏನೆಂದು ಹೇಳಬೇಕಿತ್ತು. ಅಭಿವೃದ್ಧಿ ಇಲ್ಲದೆ ಆಡಳಿತ ಪಕ್ಷದ ನಾಯಕರೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಸಮಾಧಾನ ಹೊರ ಹಾಕಿದವರ ಬಾಯಿ ಮುಚ್ಚಿಸೊ ಕೆಲಸ ಆಗ್ತಿದೆ. ಹಿಂದುಳಿದ ವರ್ಗಗಳಿಗೆ ನಾಮಕಾಸ್ತೆ ನಿಗಮ ಮಾಡಿದ್ದಾರೆ. ಯಾವುದೇ ನಿಮಗಳಿಂದ ಆ ಸಮುದಾಯಕ್ಕೆ ಉಪಯೋಗ ಆಗ್ತಿಲ್ಲ ಎಂದು ದೂರಿದರು.

ಸಮಾವೇಶದಲ್ಲಿ ದೇವೇಗೌಡರ ಬಗ್ಗೆ ಮಾತನಾಡೊ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ. ಈ ದೇಶಕ್ಕೆ ದೇವೇಗೌಡರಿಂದ ಅವರದೆ ಆದ ಕೊಡುಗೆ ಇದೆ. ಅವರು ಯಾವುದೆ ಸಮುದಾಯವನ್ನು ಕಡೆಗಣಿಸಿಲ್ಲ. ಎಲ್ಲಾ ಸಮುದಾಯದ ಜನರನ್ನು ಬೆಳೆಸಿದವರು ದೇವೇಗೌಡರು. ಸಾಲಾ ಮನ್ನ ಮಾಡೊ ತೀರ್ಮಾನ ಮಾಡೊ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ. ಕುಮಾರಸ್ವಾಮಿ ಅವರು ಕೊಟ್ಟ ಯೋಜನೆಯಿಂದ ನಾವು ಮತ್ತೆ ಶಾಸಕರಾಗಿರೊದೆ ಸಾಕ್ಷಿ ಎಂದರು. ಮೆಡಿಕಲ್ ಇಂಜಿನಿಯರಿಂಗ್ ಕಾಲೇಜು, ದೇಶದ ದೊಡ್ಡ ಬಸ್ ನಿಲ್ದಾಣ, ಹೈಕೋರ್ಟ್ ಮಾದರಿಯ ಕೋರ್ಟ್ ಸಮಚ್ಚಯ. ದೇವೇಗೌಡರ ಕುಮಾರಸ್ವಾಮಿ ಅವರ ಕೆಲಸದ ಸಾಕ್ಷಿ ಗುಡ್ಡೆ ಎಲ್ಲಿದೆ ಎಂದಿದ್ದ ಡಿಸಿಎಂ ಗೆ ಜೆಡಿಎಸ್ ನಾಯಕರ ತಿರುಗೇಟು ಕೊಟ್ಟರು. ಹಾಸನ ಜಿಲ್ಲೆಯಲ್ಲಿ ನಡೆದಿರೊ ಅಭಿವೃದ್ಧಿ ಬಗ್ಗೆ ವಿವರಿಸಿ ಕಿಡಿಕಾಡಿದರು. ನಮ್ಮ ಅವದಿಯಲ್ಲಿ ಆಗಿರೊ ಕಟ್ಟಡಕ್ಕೆ ಇವರು ಸುಣ್ಣ ಬಣ್ಣ ಬಳಿಯಲು ಆಗಿಲ್ಲ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ದೇವೇಗೌಡರ ೫೫ ವರ್ಷಗಳ ರಾಜಕೀಯದಲ್ಲಿ ಹಳ್ಳಿ ಹಳ್ಳಿಯಲ್ಲಿ ಸಾಕ್ಷಿ ಗುಡ್ಡೆ ಇದೆ. ಬೇಕಿದ್ದರೆ ಬರಲಿ ತೋರಿಸೋಣ. ಆದರೆ ಅಭಿವೃದ್ಧಿ ಮಾಡಲಿ. ನಾವು ಎನ್ ಡಿ ಎ ಆಗಿ ಕೆಲಸ ಮಾಡುತ್ತಿದ್ದೇವೆ. ಉಪ ಚುನಾವಣೆಗಳು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಅಲ್ಲ. ನಾವು ಬಿಜೆಪಿ ಅಣ್ಣ ತಮ್ಮರಂತೆ ಹೋಗ್ತಾ ಇದೀವಿ. ಮುಂದೆ ರಾಜ್ಯದಲ್ಲಿ ಜನರು ಎನ್.ಡಿ.ಎ. ಪರ ಇರ್ತಾರೆ. ಮುಂದಿನ ಬಜೆಟ್ ನಲ್ಲಿಯಾದರು ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಾರೊ ಗೊತ್ತಿಲ್ಲ. ಗುತ್ತಿಗೆ ದಾರರು ನೇಣುಹಾಕಿಕೊಳ್ಳೊ ಹಾಗಾಗಿದೆ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ನಮಗೆ ಯಾವುದೇ ಆತಂಕ ಇಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ವಕ್ತಾರರಾದ ರಘು ಹೊಂಗೆರೆ ಇತರರು ಉಪಸ್ಥಿತರಿದ್ದರು.

ಬಂಡೆ ಅಂದ್ರೆ ಪ್ರಕೃತಿ, ಪೂಜಿಸಿದರೆ ಸಂಸ್ಕೃತಿ, ವಿರುದ್ದ ನಿಂತುಕೊಂಡರೆ ನಾಶ: ಕನಪುರ ಬಂಡೆ ಡಿಕೆಶಿ ಡೈಲಾಗ್‌
ಮೈಸೂರು: ನನ್ನನ್ನು ಕನಕಪುರ ಬಂಡೆ ಅಂತಾರೆ. ಈ ಬಂಡೆ ಯಾವಾಗಲೂ ಸಿದ್ದರಾಮಯ್ಯನವರಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮುಂದುವರೆದು ಕಲ್ಲುಬಂಡೆ ಅಂದ್ರೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ, ವಿರುದ್ದ ನಿಂತುಕೊಂಡರೆ ನಾಶ” ಎಂದು ತಮ್ಮ ವಿರೋಧಿಗಳನ್ನು ಕುರಿತು ಮಾರ್ಮಿಕವಾಗಿ ನುಡಿದರು.

ಶುಕ್ರವಾರ ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಪಕ್ಷದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು “ಹಿಂದುಳಿದ ಸಮುದಾಯದ ಸಿದ್ದರಾಮಯ್ಯನವರು ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಸಹಿಸಲಾಗುತ್ತಿಲ್ಲ. ಅದಕ್ಕೆ ಅವರನ್ನು ಮುಡಾ ಹಗರಣದಲ್ಲಿ ಸಿಕ್ಕಿ ಹಾಕಿಸಿ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಮಾಡಿದ್ದಾರೆ. ಈ ಕನಕಪುರದ ಬಂಡೆ ಸಿಎಂ ಜೊತೆ ಸದಾ ಇರಲಿದೆ ಎಂಬುದನ್ನು ಮರೆಯದಿರಿ ಎಂದು ಎಚ್ಚರಿಕೆ ನೀಡಿದರು.

“ಮಾತಿಗಿಂತ ಕೃತಿ ಮೇಲು ಎಂದು ನಂಬಿದವರು ನಾವು. ನುಡಿದಂತೆ ನಡೆದಿದ್ದೇವೆ. ಬಡ ಜನರಿಗಾಗಿ ಶ್ರಮಿಸಿದ್ದೇವೆ. ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದನ್ನು ಸಹಿಸಲಾಗದೆ ಸಿದ್ದರಾಮವ್ಯಕ್ಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮುಡಾ ಸೈಟ್ ಯಾರ ಆಡಳಿತಾವಧಿಯಲ್ಲಿ ನೀಡಲಾಗಿದೆ? ಬಿಜೆಪಿ ಅವಧಿಯಲ್ಲೇ ಆಗಿದೆ. ಆಗ ಎಲ್ಲಿಗೆ ಹೋಗಿತ್ತು ಹಗರಣ ವಿಚಾರ?” ಎಂದು ಡಿಸಿಎಂ ಪ್ರಶ್ನಿಸಿದರು.

ವಿಜಯೇಂದ್ರ ಅಂದ್ರೆ ಭ್ರಷ್ಟಾಚಾರ: “ಕುಮಾರಸ್ವಾಮಿ ನಂಬಿದವರನ್ನು ಮುಗಿಸುತ್ತಾರೆ. ಅವರು ಮಾಡಿರುವ ಹಗರಣಗಳನ್ನು ಬಯಲು ಮಾಡಿದ್ದೇನೆ, ಮುಂದೆ ಮಾಡುತ್ತೇನೆ. ವಿಜಯೇಂದ್ರ ಕೊರೋನಾ ಸಮಯದಲ್ಲಿ ಬಡವರ ಹಣ ತಿಂದಿದ್ದಾರೆ. ಇಂತಹ ಭ್ರಷ್ಟರನ್ನು ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಸಬೇಕಾ? ವಿಜಯೇಂದ್ರ ಅಂದ್ರೆ ಭ್ರಷ್ಟಾಚಾರ” ಎಂದು ಆರೋಪಿಸಿದರು.

ನಮ್ಮ ಸರ್ಕಾರವನ್ನು ಉರುಳಿಸುವ, ನಾವು ಜನರಿಗೆ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ರಕ್ಷಣೆಗೋಸ್ಕರ ಈ ಜನಾಂದೋಲನ ಆಯೋಜಿಸಿದ್ದೇವೆ” ಎಂದು ಹೇಳಿದರು.

“ಮಿಸ್ಟರ್ ಕುಮಾರಸ್ವಾಮಿ..ಮಿಸ್ಟರ್ ಆಶೋಕಾ..ಮಿಸ್ಟರ್ ವಿಜಯೇಂದ್ರ..ನೀವು ಆಪರೇಶನ್ ಮಾಡಿ ಅನೇಕ ಸರ್ಕಾರಗಳನ್ನು ತೆಗೆದು ಹಾಕಿದ್ದೀರಿ. ಕುಮಾರಸ್ವಾಮಿ ನಿಮ್ಮ ಮುಖಂಡತ್ವದಲ್ಲಿ 19 ಸೀಟ್ ಮಾತ್ರ ಗೆಲ್ಲಲು ಸಾಧ್ಯವಾಗಿದೆ.  ಈ ಡಿ.ಕೆ ಶಿವಕುಮಾರ್ ಮುಖಂಡತ್ವದಲ್ಲಿ 136 ಸೀಟ್ ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದ್ರೂ ಕೂಡ ಕಾಂಗ್ರೆಸ್ ತೆಗೆದು ಹಾಕಲು ಆಗಿಲ್ಲ. ನಿಮ್ಮಿಂದ ರಾಜಿನಾಮೆ ಪಡೆಯಲು ಸಾಧ್ಯವೇ ಎಂದು ಆಕ್ರೋಶವ್ಯಕ್ತಪಡಿಸಿದರು.

ಮಗನ ಬಂಧನ ಬೆನ್ನಲ್ಲೆ ತಾಯಿಗೂ ನೋಟಿಸ್‌: ನಾಳೆ ವಿಚಾರಣೆಗೆ ಹಾಜರಾಗಲು ಭವಾನಿಗೆ SIT ಸೂಚನೆ
ಹಾಸನ: ಇಂದು ಬೆಳಗಿ ಜಾವ ಜರ್ಮನಿಯಿಂದ ಆಗಮಿಸಿದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಂಧನದ ಬೆನ್ನಲ್ಲೆ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ತಂಡ ಮತ್ತೊಂದು ನೋಟೀಸ್‌ ನೀಡಿದೆ.

ಕೆ.ಆರ್‌. ನಗರ ತಾಲ್ಲೂಕಿನ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 1ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಸ್‌ಐಟಿ ತಂಡ, ಭವಾನಿ ಅವರಿಗೆ ನೋಟಿಸ್‌ ಜಾರಿಗೆ ಮಾಡಿದೆ. ಮೊದಲು ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ  ಅವರು ತನಿಖೆಗೆ ಅವಶ್ಯವಿದ್ದರೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇರುವುದಾಗಿ ಭವಾನಿ ತಿಳಿಸಿದ್ದರು. ಆ

‘ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ಒಳೆಗೆ ವಿಚಾರಣೆಗೆ ಬರುತ್ತೇವೆ. ಆ ಸಂದರ್ಭದಲ್ಲಿ ಮನೆಯಲ್ಲಿ ಖುದ್ದು ಹಾಜರಿರಬೇಕು’ ಎಂದು ಎಸ್ಐಟಿ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೀಡಿರುವ ನೋಟಿಸ್‌ನಲ್ಲಿ ಸೂಚನೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಭವಾನಿ ರೇವಣ್ಣ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.  ಶುಕ್ರವಾರ ವಿಚಾರಣೆ ನಡೆಯಲಿದೆ. ಈ ಮಧ್ಯೆ ಎಸ್‌ಐಟಿ ಖುದ್ದು ಹಾಜರಿರುವಂತೆ ನೋಟಿಸ್‌ ನೀಡಿದ್ದು, ನಿರೀಕ್ಷಣಾ ಜಾಮೀನು ಸಿಗದಿದ್ದರೆ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶುಕ್ರವಾರ ಬೆಳಗ್ಗಿನ ಜಾವ ಆಗಮಿಸಲಿರುವ ಪ್ರಜ್ವಲ್:‌ ಜರ್ಮನಿಯಿಂದ ಟಿಕೇಟ್‌ ಬುಕ್‌
ಬೆಂಗಳೂರು: ಹಾಸನದಲ್ಲಿ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ, ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಬವೇರಿಯಾದ ರಾಜಧಾನಿ ಮ್ಯೂನಿಚ್‌ನಿಂದ ಬೆಂಗಳೂರಿಗೆ ಹಿಂತಿರುಗಲು ವಿಮಾನ ಟಿಕೆಟ್ ಕಾಯ್ದಿರಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗಿನ ಜಾವ ಪ್ರಜ್ವಲ್‌ ಆಗಮಿಸಲಿದ್ದಾರೆ ಎನ್ನಲಾಗಿದೆ.

ವಿಶೇಷ ತನಿಖಾ ತಂಡದ ಮೂಲಗಳ ಪ್ರಕಾರ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ 33 ವರ್ಷದ ಮೊಮ್ಮಗ ಮೇ 31ರ ಬೆಳಗಿನಜಾವ ಬೆಂಗಳೂರಿಗೆ ಬಂದಿಳಿಯುವ ನಿರೀಕ್ಷೆಯಿದೆ. ಬಂದಿಳಿದ ಕೂಡಲೇ ಆತನನ್ನು ಬಂಧಿಸಲು ಎಸ್‌ಐಟಿ ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿಗಾ ಇರಿಸಿಕೊಂಡು ಕಾಯುತ್ತಿದೆ.

ಹಾಸನ ಲೋಕಸಭೆ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿರುವ ಸಂಸದ, ಅಪಾರ ಪ್ರಮಾಣದ ಅಶ್ಲೀಲ ವಿಡಿಯೊ ಸಂಗ್ರಹದ ಬಗ್ಗೆ ತನಿಖೆಗೆ ಆದೇಶಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು.

ಇದುವರೆಗೆ ಪ್ರಜ್ವಲ್ ವಿರುದ್ಧ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಎರಡು ದಿನಗಳ ಹಿಂದೆ ಹಾಸನ ಸಂಸದರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸುವುದಾಗಿ ಹೇಳಿಕೆ ನೀಡಿದ್ದಾರೆ.ಸಂಸದರು ಈ ಹಿಂದೆ ಎರಡು ಬಾರಿ ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ ನಂತರ, ಪ್ರಯಾಣ ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಈ ಸಲವಾದರೂ ಪ್ರಜ್ವಲ್‌ ಬಂದೆ ಬರುತ್ತಾರಾ, ಆಥವಾ ತನಿಖೆಯ ದಿಕ್ಕು ತಪ್ಪಿಸಲು ಹೀಗೆ ನಾಟಕವಾಡುತ್ತಿದ್ದಾರಾ ಅನ್ನುವುದು ಮೇ.31ಕ್ಕೆ ತಿಳಿದು ಬರಲಿದೆ.

ದೊಡ್ಡಗೌಡ್ರಿಗೆ ಆತ್ಮಸಾಕ್ಷಿ ಅಂತ ಇದ್ದಿದ್ದರೆ ಅವರು ಹೀಗೆ ಪತ್ರ ಬರೆಯುತ್ತಿದ್ದರು (ಕಾಲ್ಪನಿಕ ಪತ್ರ)
ಇಂದ

ದೊಡ್ಡಗೌಡರು, ಬೆಂಗಳೂರು

ಇವರಿಗೆ,

ರಾಜ್ಯದ ಜನತೆಗೆ

ಮಹಾಜನರೇ, ನಿನ್ನೆಯಿಂದ ನಾನು ಬರೆದಿರುವೇ ಎನ್ನಲಾದ ಪತ್ರ ಒಂದು ವೈರಲ್‌ ಆಗಿದೆ. ನಿಜ ಹೇಳಬೇಕೆಂದ್ರೆ ಅದು ನಾನು ಬರೆದದ್ದಲ್ಲ, ನನ್ನ ಮಕ್ಕಳು ತಮ್ಮ ರಾಜಕೀಯ ಷಡ್ಯಂತ್ರಕ್ಕಾಗಿ  ನಮ್ಮ ಪಕ್ಷದ  ಒಬ್ಬ ಒಳ್ಳೆಯ ವಂದಿಮಾಗದ ಆಸ್ಥಾನ ಲೇಖಕನಿಗೆ ದೊಡ್ಡ ಸಂಬಳ ಕೊಟ್ಟು ಹೀಗ್ಹೀಗೆ ಎಂದು ಹೇಳಿ ಬರೆಸಿದ ಪತ್ರವದು. ಅದು ಪ್ರಜ್ವಲ್‌ ರೇವಣ್ಣನಿಗೆ ಎಂದು ಹೇಳಲಾಗಿದ್ದರೂ ಅದರ ಒಳ ಉದ್ದೇಶ ರಾಜ್ಯ ಜನತೆಗೆ ತಲುಪಿಸುವುದೇ ಆಗಿತ್ತು. ಆ ಉದ್ದೇಶ ಈಡೇರಿಯಾಗಿದೆ.

ಕಳೆದೊಂದು ತಿಂಗಳಿನಿಂದ ನಾನು ಬಳಷ್ಟು ತೊಳಲಾಡಿದ್ದೇನೆ. ನಾವು ರಾಜಕಾರಣಿಗಳು. ನಮಗೂ ಒಂದು ಮನಸ್ಸಿರುತ್ತದೆ. ಆದರೆ, ನಮ್ಮ ಮನಸ್ಸಿನಲ್ಲಿ ಮೂಡುವ ಸತ್ಯವನ್ನು ನಮಗೆ ಹೇಳಲು ಸಾಧ್ಯವಾಗುದಿಲ್ಲ. ನಾವು ಏನಾದರೂ  ನಮ್ಮೊಳಗೆ ಇರುವ ಸತ್ಯ ಹೇಳಿದರೆ ಅದ್ರಿಂದ ಪಕ್ಷದ ಕಾರ್ಯಕರ್ತರು ಮತದಾರರು ಏನೆಂದುಕೊಳ್ಳುತ್ತಾರೋ ಎಂದು ನಾವು ಅವರಿಗೆ ಬೇಕಾದಂತೆ ಸತ್ಯಕ್ಕೆ ತರಾವರಿ ಬಣ್ಣದ ಲೇಪ ಮಾಡಿಕೊಂಡೇ ಮಾತಾಡಬೇಕಾಗುತ್ತದೆ. ಆದರೆ, ಇವತ್ತು ತಡೆದುಕೊಳ್ಳಲಿಕ್ಕಾಗದೇ ಈ ಪತ್ರವನ್ನು ಬರೆಯುತ್ತಿದ್ದೇನೆ.

ನಾನು ಈ ದೇಶದ ಪ್ರಧಾನಿಯಾದುದು ನನ್ನ ಅದೃಷ್ಟ. ಇದ್ರಿಂದ ನನಗೆ ಮತ್ತು ನನ್ನ ಪಕ್ಷಕ್ಕೆ ಒಳ್ಳೆಯ ಹೆಸರು ಬಂತು. ಈ ನಾಡಿನ ಸೂಕ್ಷ್ಮ ಸಂವೇದನೆಯ ರಾಜಕಾರಣಿಗಳೆಲ್ಲ ನನ್ನ ಪಕ್ಷಕ್ಕೆ ಬಂದು ಸೇರಿಕೊಂಡರು. ದಕ್ಷಿಣ ಭಾರತದ ಹಿಂದಿವಾಲಾ ಪಕ್ಷಗಳ ವಿರುದ್ಧ ನಮ್ಮದೇ ನೆಲದ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸೋಣ ಅವರ ಕನಸಾಗಿತ್ತು. ಆರಂಭದಲ್ಲಿಯೇ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ, ನನ್ನ ಪುತ್ರ ವಾತ್ಸಲ್ಯ ಮತ್ತು ಕುಟುಂಬ ಪ್ರೇಮ ನನ್ನನ್ನು ಕುರುಡನ್ನಾಗಿ ಮಾಡಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು.

ಇವನಿಗೆ ಸೀಟು ಕೊಟ್ಟರೆ ಅವನಿಗೆ ಸಿಟ್ಟು, ಅವನಿಗೆ ಕೊಟ್ರೆ ಇವನಿಗೆ ಸಿಟ್ಟು. ಹಾಗಾಗಿ ನಾನು ಬರಬರುತ್ತಾ ನನ್ನ ಮಕ್ಕಳಿಗೆ, ಸೊಸೆಯಂದಿರಿಗೆ, ಅಳಿಯಂದಿರಿಗೆ, ಮೊಮ್ಮಕ್ಕಳಿಗೆ ಇದ್ದುಬಿದ್ದ ಸಂಬಂಧಿಕರಿಗೆಲ್ಲ ನನ್ನ ಪಕ್ಷದ ಟಿಕೇಟ್‌ಗಳನ್ನು ಹಂಚುತ್ತಾ ಹೋದೆ. ಪ್ರಾದೇಶಿಕ ಪಕ್ಷ ಅಂತ ಬಂದವರೆಲ್ಲ ಒಬ್ಬೊಬ್ಬರು ಪಕ್ಷ ಬಿಟ್ಟು ಹೋದರು. ನಮ್ಮ ಪಕ್ಷ ಅನ್ನುವುದು ನನ್ನ ಕುಟುಂಬದ ಪಕ್ಷವಾಗಿ ಮಾತ್ರ ಉಳಿಯಿತು. ಹಾಗೆ ನೋಡಿದರೆ ನಾನು ಪ್ರಜಾಪ್ರಬುತ್ವ ವ್ಯವಸ್ಥೆಯ ವಿರೋಧಿ. ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇರುವ ಪ್ರಜಾ ರಾಜಕಾರಣವನ್ನು ನಮ್ಮ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಸೀಮಿತ ಮಾಡಿದ ಕುಖ್ಯಾತಿ ನನ್ನದೇ ಎನ್ನಬಹುದು. ಇದಷ್ಟೇ ಅಲ್ಲ, ನನ್ನ ಕುಟುಂಬದವರೆಲ್ಲ ಅವರವರ  ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರು. ರಾಜರಂತೆ ವರ್ತಿಸುತ್ತಾ ರಾಜಸತ್ತೆ ಸ್ಥಾಪಿಸತೊಡಗಿದರು. ತಮ್ಮ ತಮ್ಮ ಕ್ಷೇತ್ರಗಳನ್ನು, ಕ್ಷೇತ್ರದ ಜನರನ್ನು, ಹೆಂಗಸರನ್ನು ಆಸ್ತಿಯಂತೆ ಬಳಸತೊಡಗಿದರು. ಇದಕ್ಕೆ ನನ್ನ ದೊಡ್ಡ ಮಗ ಒಂದು ಸಿಂಪಲ್‌ ಉದಾಹರಣೆ.

ಇನ್ನೊಂದು ನನ್ನ ಮುಖ್ಯವಾದ ೨ನೇ ತಪ್ಪೆಂದರೆ ಪ್ರಜ್ವಲ್‌ ರೇವಣ್ಣ ಪ್ರಕರಣ ಐದಾರು ವರ್ಷಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿದ್ದರೂ ನಾನು ನಿರ್ಲಕ್ಷ ಮಾಡಿದ್ದು. ಆಗ ನನ್ನ ಬುದ್ಧಿಗೆ ಮಂಕು ಕವಿದಿತ್ತು. ಪ್ರಜ್ವಲನ ಭಾಷಣ ಕೇಳುತ್ತಿದ್ದರೆ. ನಿಜ ಹೇಳಬೇಕೆಂದರೆ ಅವನ ಗತ್ತು ಗೈರತ್ತು ನೋಡುತ್ತಿದ್ದರೆ, ನನಗೆ ನನ್ನ ಕುಟುಂಬದ ಜೀನ್ಸ್‌ ಬಗ್ಗೆ ಬಹಳಷ್ಟು ಹೆಮ್ಮೆಯಾಗುತ್ತಿತ್ತು. ಈ ಪಜ್ವಲ ನಮ್ಮ ಪಕ್ಷವನ್ನು ಉಜ್ವಲಗೊಳಿಸುತ್ತಾನೆ ಎಂದೇ ನಾನು ನಂಬಿದ್ದೆ.

ರಾಜಕಾರಣಿಗಳ ಸುತ್ತಮುತ್ತಲೆಲ್ಲ ಸ್ವಜಾತಿಯ ಹೊಗಳುಭಟ್ಟ ವಂದಿ ಮಾಗದರೇ ತುಂಬಿಕೊಂಡಿರುತ್ತಾರೆ. ಅಂತ ವಂದಿಮಾಗದರು ಐದಾರು ವರ್ಷಗಳ ಹಿಂದೆಯೇ ಪ್ರಜ್ವಲನ ಕಾಮ ಕ್ರೀಡೋತ್ಸವಗಳನ್ನು ನನಗೆ ಹೇಳಿದ್ದರು. ಹೇಳಿದ ಮರುಗಳಿಗೆಯೇ ವಯಸ್ಸಿನ ಹುಡುಗ ಗೌಡ್ರೆ, ಅದರಲ್ಲೂ ನಮ್ಮಗೌಡ್ರ ಜಾತಿ ಹುಡುಗ, ಗಂಡು ಹುಡುಗ, ಇದೆಲ್ಲ ಕಾಮನ್ನು ಎಂದು ಅವರೇ ಸಮಾಧಾನ ಮಾಡಿದ್ದರು. ಸುಳ್ಳು ಯಾಕೆ ಹೇಳಲಿ ಆಗ ನನ್ನ ಸುತ್ತಲಿದ್ದವರ ಮಾತು ಕೇಳಿ ನನ್ನೊಳಗೂ ಗರ್ವ ತುಸು ಹೆಚ್ಚೇ ಇತ್ತು.  ಅದು ನನ್ನನ್ನು ಮರುಳನನ್ನಾಗಿಸಿತು,

ಅವನ ಚಿಕ್ಕಪ್ಪ ಮಾಡಿದ ಪ್ರಕರಣ ಕಣ್ಮುಂದೆ ಇತ್ತಲ್ಲ. ಅವನ ಚಿಕ್ಕಪ್ಪನೂ ಹಾಗೆ ಒಂದಿಷ್ಟು ದಿನ ಹಾರಾಡಿ, ಊರೆಲ್ಲ ಸುತ್ತಾಡಿ ಆಮೇಲೆ ಮನೆಗೆ ಹತ್ತಿದವನು. ಇವನಿಗೂ ಮದುವೆ ಅನ್ನೋದೊಂದು ಮಾಡಿದ ಮೇಲೆ ಸರಿ ಹೋಗ್ತಾನೆ. ಅಲ್ಲಿಯವರೆಗೂ ಹಾರಾಡಿಕೊಂಡಿರಲಿ ಎಂದು ನಾನು ಸುಮ್ಮನಾಗಿದ್ದೆ.

ಬಹುಶಃ ಯಾರಿಗೆಲ್ಲ ಹಣ, ಅಧಿಕಾರ, ಕೀರ್ತಿ ಬರುತ್ತದೆಯೋ ಅವರೆಲ್ಲ ಹೀಗೆ ದಾರಿ ತಪ್ಪುತ್ತಾರೆ ಅನಿಸುತ್ತದೆ.  ಈ ಕಾರಣಕ್ಕಾಗಿಯೇ ರಾಜರ ಅಂತಪುರಗಳಲ್ಲೆ ಎಲ್ಲ ಕಾಲದಲ್ಲೂ ತುಂಬಿ ತುಳುಕುತ್ತಿದ್ದವು. ಸಣ್ಣ ವಯಸ್ಸಿನ ಮಕ್ಕಳಿಗೆ ಅಧಿಕಾರ, ಸ್ಥಾನಮಾನ, ಟಿಕೇಟ್‌ ಕೊಡಲೇಬಾರದು ಎಂದು ಈಗನಿಸುತ್ತದೆ. ಇದು ನನ್ನ ಮೊಮ್ಮಕ್ಕಳದ್ದೇ ತಪ್ಪಲ್ಲ. ಎಲ್ಲೆಲ್ಲಿ ಕುಟುಂಬ ರಾಜಕಾರಣ ಇದೆಯO ಅಲ್ಲೆಲ್ಲ ಹಿರಿಯ ರಾಜಕಾರಣಿಗಳ ಮಕ್ಕಳು ಮೊಮ್ಮಕ್ಕಳು  ಹಿಂಗೆ ಮೆರಿತಿದ್ದಾರೆ. ಆದರೆ, ಗುಂಡಿ ಒಳಗೆ ಬಿದ್ದೋನಿಗೆ ಆಳಿಗೊಂದು ಕಲ್ಲು.

ನನ್ನ ಸುತ್ತಲಿದ್ದ ಹೊಗಳುಭಟ್ಟರೆಲ್ಲ ನಮ್ಮನ್ನು ನೀವು ದೇಶ ಆಳಕ್ಕೆ ಬಂದವರು ಎಂದೆಲ್ಲ ಯಾವಾಗಲೂ ಹೇಳುತ್ತಲೇ ಇದ್ದರು. ನಾನು ನನ್ನ ಕುಟುಂಬದವರು ಕೂಡ ಅದನ್ನೆ ನಂಬಿ ಆಳುವುದಕ್ಕಾಗಿ ಹೋರಾಡುತ್ತಲೇ ಇದ್ದೇವು. ಆದರೆ, ದೇಶ ಆಳಕ್ಕೆ ಹೋಗಿ ನಮ್ಮ ನಮ್ಮ ಮನೆಯ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಕಡೆ ನಾವು ಗಮನ ಕೊಡಲೇ ಇಲ್ಲ. ಮಕ್ಕಳಿಗೆ ತುಸುವಾದರೂ ಸಂವೇದನೆ ಕಲಿಸಿದ್ದರೆ, ಸಮಾಜದ ಬಗ್ಗೆ ಅರ್ಥ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ.

ಅದರ ಪ್ರತಿಫಲವೇ ಈಗ ಇಷ್ಟೆಲ್ಲ ಆಗಿದೆ.  ನನ್ನ ಎರಡನೇ ಮಗ ಎರಡು ಸಂಸಾರ ಕಟ್ಟಿಕೊಂಡಾಗ, ನನ್ನ ದೊಡ್ಡಮಗ ಕೊರೊನಾ ಕಾಲದಲ್ಲಿ ಜನರಿಗೆ ಕಿಟ್‌ ಹಂಚುವಾಗ ಬೀಕ್ಷುಕರಿಗೆ ಎಸೆಯುವಂತೆ  ಕಿಟ್‌ ಎಸೆದಾಗ, ನನ್ನ ಸೊಸೆ ಒಂದು ಯಕಶ್ಚಿತ್‌ ಕಾರು ಡ್ಯಾಮೇಜ್‌ ಆದಾಗ ಗೌಡ್ರಾಳ್ವಿಕೆಯ ಪೊಗರಿನ ಮಾತಾಡಿದಾಗ, ಪ್ರಜ್ವಲನ ಕಾಮಕ್ರೀಡೆಗಳ ವಿಚಾರ ಕಿವಿಗೆ ಬಿದ್ದಾಗ… ಹೀಗೆ ಆಗಲೇ ಎಚೆತ್ತುಕೊಂಡು ಬುದ್ಧಿ ಹೇಳಿದ್ದರೆ ಇದೆಲ್ಲ ನಡೆಯುತ್ತಲೇ ಇರಲಿಲ್ಲ. ಈಗ ಕಾಲ ಮಿಂಚಿ ಹೋಗಿಬಿಟ್ಟಿದೆ.

ಇನ್ನು ನನ್ನ ಕಣ್ಣಾರೆ ಏನೇನೋ ನೋಡುವುದಿದೆಯೋ ಎಂದು ಅಲವತ್ತುಕೊಳ್ಳುತ್ತಾ ಕಾಲ ಕಳೆಯುವುದಷ್ಟೆ ಈಗ ನನಗೆ ಉಳಿದಿರುವುದು. ಇದನ್ನು ಕೂಡ ನೀವು ಸಹಾನುಭೂತಿ ಗಿಟ್ಟಿಸಿಕೊಳ್ಳಲು ದೊಡ್ಡಗೌಡರ ಗೋಳಾಟ ಎಂದುಕೊಂಡರೆ ನಾನೇನು ಮಾಡಲಾಗುವುದಿಲ್ಲ.  ನಿಮಗೆ ಮನವರಿಕೆ ಮಾಡಲು ಸಾಧ್ಯವಿಲ್ಲವೆಂದು ನನಗೆ ಗೊತ್ತು. ನಾನು ನನ್ನ ಆತ್ಮಸಾಕ್ಷಿಗೆ ಹೆದರುತ್ತೇನೆ, ದೇವರಲ್ಲಿ ನನಗೆ ನಂಬಿಕೆ

ಇಂತಿ ನಿಮ್ಮ ದೊಡ್ಡಗೌಡ್ರು

ಹನುಮಂತ ಹಾಲಿಗೇರಿ

ಮುಸ್ಲಿಂ ಸಮುದಾಯ ಮತ ಕೊಡಲಿಲ್ಲ ಎಂದು ಜೆಡಿಎಸ್ ಶಾಸಕರು ಬಹಿರಂಗವಾಗಿ ಹೇಳಲಿ – ಜಮೀರ್ ಅಹಮದ್ ಖಾನ್ ಅಗ್ರಹ
ಬೆಂಗಳೂರು :ಮುಸ್ಲಿಂ ಸಮುದಾಯದ ಜತೆ ನಾನು ನಿಂತಿದ್ದೆ ಆದರೆ ಆ ಸಮುದಾಯ ಜೆಡಿಎಸ್ ಜತೆ ನಿಲ್ಲಲಿಲ್ಲ ಎಂದು ಹೇಳುವ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಯಾರ ಮತಗಳಿಂದ ಗೆದ್ದರು ಎಂಬುದು ಹೇಳಲಿ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅಗ್ರಹಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯ ಮತ ನೀಡಿರದಿದ್ದರೆ ಇವರು ಗೆಲ್ಲುತ್ತಿದ್ದರೆ ಎಂಬುದನ್ನು ಎದೆ ಮುಟ್ಟಿಕೊಂಡು ಹೇಳಲಿ ಎಂದು ಪ್ರೆಶ್ನೆ ಮಾಡಿದ್ದಾರೆ.

ಹೊಳೆನರಸೀಪುರದಲ್ಲಿ ಎಚ್. ಡಿ. ರೇವಣ್ಣ, ತುರುವೇಕೆರೆ ಕೃಷ್ಣಪ್ಪ, ಚಿಕ್ಕ ನಾಯಕನಹಳ್ಳಿ ಸುರೇಶ್ ಬಾಬು, ಗುರುಮಿಠಕಲ್ ನಾಗನಗೌಡ ಕಂದಕೂರು, ದೇವದುರ್ಗ ಕರೆಮ್ಮ, ಚನ್ನ ರಾಯಪಟ್ಟಣ ಬಾಲಕೃಷ್ಣ ಇವರೆಲ್ಲ ಮುಸ್ಲಿಂ ಸಮುದಾಯ ನಮಗೆ ಮತ ಹಾಕಿಲ್ಲ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಗೆಲ್ಲಲಿಲ್ಲ. ಅಲ್ಲಿ ಮುಸ್ಲಿಂ ಸಮುದಾಯ ಒಟ್ಟಾಗಿ ಮತ ಕೊಟ್ಟಿದ್ದಕ್ಕೆ ಗೆದ್ದಿದ್ದು ಇಲ್ಲದಿದ್ದರೆ ಸೋಲುತ್ತಿದ್ದರು. ಮುಸ್ಲಿಂ ಸಮುದಾಯ ಜೆಡಿಎಸ್ ಗೆ ಮತ ಕೊಟ್ಟಿದ್ದಕ್ಕೆ 19 ಸ್ಥಾನ ಬಂದಿದೆ. ಇಲ್ಲದಿದ್ದರೆ 5 ರಿಂದ ಆರು ಸ್ಥಾನ ಬರುತ್ತಿತ್ತು ಎಂದು ಹೇಳಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಹೋಗುವ ಸಲುವಾಗಿ ಮುಸ್ಲಿಂ ಮತ ಕೊಡಲಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಇದು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಜಮೀರ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಅಪಾರವಾಗಿ ಗೌರವಿಸುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಕೋಮುವಾದಿ ಬಿಜೆಪಿ ವಿರುದ್ಧ ಇದ್ದವರು. ಆದರೆ ಕುಮಾರಸ್ವಾಮಿ ತಮ್ಮ ರಾಜಕಾರಣಕ್ಕೆ ಗೌಡರ ತತ್ವ ಸಿದ್ದಾಂತ ಬಲಿ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.

ಪ್ರತಾಪ ಸಿಂಹರನ್ನು ಸಂಸದನನ್ನಾಗಿ ಮಾಡಿರುವುದು ಹೆಸರು ಬದಲಾಯಿಸುವುದಕ್ಕಲ್ಲ: HDK
ಮೈಸೂರು: ಟಿಪ್ಪು ಹೆಸರಿನ ರೈಲನ್ನು ಒಡೆಯರ್‌ ಹೆಸರಿಗೆ ಬದಲಾಯಿಸಿರುವುದರ ಕುರಿತು ಇಂದು ನಗರದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, “ಸಂಸದ ಪ್ರತಾಪ ಸಿಂಹ ಅವರನ್ನ ಆಯ್ಕೆ ಮಾಡಿರುವುದು ರೈಲಿನ ಹೆಸರು ಬದಲಾಯಿಸುವುದಕ್ಕಲ್ಲ. ಅವರು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ ಅದರತ್ತ ಗಮನ ಕೊಡಲಿ,” ಎಂದು ಹರಿಹಾಯ್ದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು SC/ST ಮೀಸಲಾತಿ ಹೆಚ್ಚಳದಿಂದ ಯಾವ ಪಕ್ಷಕ್ಕೂ ಪ್ಲಸ್‌ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ದೇವೆಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿಈ ವರ್ಗಕ್ಕೆ ಮೀಸಲಾತಿ ದೊರಕಿಸಿಕೊಟ್ಟರು. ಆದರೆ ಈ ಕೆಲಸದ ಕುರಿತು ಅವರನ್ನು ನೆನಪಿಸಿಕೊಳ್ಳುವ ಕೆಲಸವಾಗಿಲ್ಲವೆಂದು ಅವರು ಬೇಸರದಿಂದ ನುಡಿದರು.

ಭಾರತ್ ಜೋಡೋ ಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಅವರು, ʼಯಾತ್ರೆಯಿಂದ ನಮಗೆ ಯಾವುದೇ ನಷ್ಟವಿಲ್ಲ. ಜೆಡಿಎಸ್ ಶಕ್ತಿ ಏನೆಂದು 23ರ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದರು. ಗುಬ್ಬಿ ಶಾಸಕ ಶ್ರೀನಿವಾಸ್ ಈಗ ನಮ್ಮ ಪಕ್ಷದಲ್ಲಿಯೇ ಇಲ್ಲ. ಅವರು ಭಾರತ್‌ ಜೋಡೋಗೆ ಬೆಂಬಲ ಕೊಟ್ಟರೆ ನಮಗೇನು? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.