kundapur – Peepal Media

ಅಕ್ಟೋಬರ್‌ ಒಂದರಂದು ಕುಂದಾಪುರದಲ್ಲಿ ಮೌನ ಮೆರವಣಿಗೆ
ಕುಂದಾಪುರ: ದೇಶ ಮತ್ತು ರಾಜ್ಯದ ಹಲವೆಡೆ ನಡೆಯುತ್ತಿರುವ ಮಹಿಳೆಯರು ಮತ್ತು ಶೋಷಿತ ಜನರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಕುಂದಾಪುರದ ಹಲವು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಅಕ್ಟೋಬರ್‌ 1ನೇ ತಾರೀಖಿನಂದು ಸಂಜೆ 6:30ಕ್ಕೆ ಮೌನ ಮೆರವಣಿಗೆಯನ್ನು ಹಮ್ಮಿಕೊಂಡಿವೆ.

ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಸಾರ್ವಜನಿಕರಿಗೆ ಭಾಗವಹಿಸುವಂತೆ ಆಹ್ವಾನವನ್ನು ನೀಡಿದ್ದು, ಅಂದು ಪ್ರಜ್ಞಾವಂತ ನಾಗರಿಕರು ಜೊತೆಗಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡಿರುತ್ತಾರೆ.

ಸಮಿತಿಯ ಪ್ರಕಟಣಾ ಹೇಳಿಕೆ ಹೀಗಿದೆ:

ಮೋಂಬತ್ತಿಯ ಬೆಳಕಿನಲ್ಲಿ ಆತ್ಮಸಾಕ್ಷಿಯನ್ನು ಶೋಧಿಸಿಕೊಳ್ಳೋಣ!

ದೇಶಪ್ರೇಮಿ ಬಂಧುಗಳೆ,
ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ದಲಿತ ಮಹಿಳೆಯರ ಮೇಲಿನ ಪ್ರತಿವರ್ಷ ವರದಿಯಾಗುವ ಅತ್ಯಾಚಾರ ಪ್ರಕರಣಗಳು ಹತ್ತು ವರ್ಷಗಳ ಹಿಂದಿಗಿಂತ ಈಗ ನಲವತ್ತೈದು ಶೇಕಡಾದಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಅಂಕಿಸಂಖ್ಯೆಗಳು ತಿಳಿಸುತ್ತವೆ. ಅಸ್ಪ್ರಶ್ಯತೆ, ಜಾತಿ ನಿಂದನೆಯ ಪ್ರಕರಣಗಳೂ ಹೆಚ್ಚುತ್ತಿವೆ. ತನ್ನ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ದೇವರ ಗುಜ್ಜು ಕೋಲನ್ನು ಎತ್ತಿದ್ದಕ್ಕಾಗಿ ಕರ್ನಾಟಕದಲ್ಲಿ ದಲಿತ ಹುಡುಗನೊಬ್ಬನನ್ನು ತಳಿಸಿ ಆ ಕುಟುಂಬಕ್ಕೆ ದಂಡ ವಿಧಿಸಿದ ಘಟನೆ ನಡೆದಿದೆ. ನಿತ್ಯವೂ ಇಂತಹ ನೂರಾರು ಘಟನೆಗಳು ನಡೆಯುತ್ತವೆ. ಎಲ್ಲವೂ ವರದಿಯಾಗುವುದಿಲ್ಲ. ಜಾತಿ- ಮತಗಳ ನಡುವೆ ಅಪನಂಬಿಕೆ ಉಂಟಾಗುವಂತಹ ದ್ವೇಷದ ವಾತಾವರಣವು ಉಂಟಾಗಿದೆ. ಸಹಬಾಳ್ವೆಯ ಭಾರತವನ್ನೀಗ ಮರುಕಟ್ಟಬೇಕಿದೆ. ಅಂತಹ ದೌಡೇನಿಲ್ಲ. ನಿಧಾನವಾಗಿ ಆದರೆ, ನಿಖರವಾಗಿ ನೆಮ್ಮದಿಯ ನಾಡನ್ನು ಕಟ್ಟುವ ಗುರಿ ತಲುಪುವುದಕ್ಕಾಗಿ, ನಾವು ಆತ್ಮಸಾಕ್ಷಿಯನ್ನು‌ ಪ್ರಶ್ನಿಸಿಕೊಳ್ಳಬೇಕಾಗಿದೆ. ಅಸಮಾನತೆ, ಅಸ್ಪ್ರಶ್ಯತೆ, ಅಸಹಿಷ್ಣುತೆ, ಅತ್ಯಾಚಾರಗಳು ನಮ್ಮನ್ನು ತಲೆತಗ್ಗಿಸುವಂತೆ ಮಾಡಿವೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಬೇಕಾಗಿದೆ.
ಈ ದೇಶದ ಜನರು ಸಂವಿಧಾನದ ಪೀಠಿಕೆಯಲ್ಲಿ ನೀಡಿರುವ ವಾಗ್ದಾನದಂತೆ ಸಮಾನತೆಯ, ಶೋಷಣೆರಹಿತ ಸಮಾಜವನ್ನು ಕಟ್ಟಲು ನಾವು ಕಟಿಬದ್ಧರಾಗಬೇಕಿದೆ. ಭ್ರಾತೃತ್ವದ ಭಾರತವನ್ನು ಹಂಬಲಿಸುವ ಎಲ್ಲರೂ ಶನಿವಾರ, ಅಕ್ಟೋಬರ್ 1 ರಂದು ಸಂಜೆ 6.30 ಕ್ಕೆ ಮೋಂಬತ್ತಿ ಹಿಡಿದು ಮೌನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಿಕೆ.
ಸ್ಥಳ: ಶಾಸ್ತ್ರಿ ವೃತ್ತದಿಂದ ಪಾರಿಜಾತ ಸರ್ಕಲ್, ಕುಂದಾಪುರ

ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜೊತೆಗೂಡಿ.

ಕುಂದಾಪುರದಲ್ಲೊಂದು ಅಮೃತ ಘಳಿಗೆ
ಕುಂದಾಪುರ: ಸಮುದಾಯ ಕುಂದಾಪುರ ಘಟಕವು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಕುರಿತು ಅರಿವು ಮತ್ತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ “ಅಮೃತ ಘಳಿಗೆ” ಎನ್ನುವ ಕಿರು ವೀಡಿಯೋ ಸ್ಪರ್ಧೆಯೊಂದನ್ನು ಆಯೋಜಿಸಿತ್ತು.

ಈ ಸ್ಪರ್ಧೆಗೆ ಆಯೋಜಕರ ನಿರೀಕ್ಷೆಯನ್ನು ಮೀರಿ ಮಕ್ಕಳು ಸ್ಪಂದಿಸಿದ್ದರು. ಒಂದೇ ವಾರದಲ್ಲಿ ಮುನ್ನೂರು ಮಕ್ಕಳು ಈ ಸ್ಪರ್ಧೆಗೆ ವಿಡಿಯೋ ಕಳುಹಿಸಿದ್ದರು. “ಎಳೆಯ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಸ್ವರೂಪ ಮತ್ತು ಅದರ ಪರಿಣಾಮಗಳು ಅರ್ಥವಾಗುವುದು ಕಷ್ಟ. ಆ ಕತೆಗಳನ್ನು ಮತ್ತೆ ಮತ್ತೆ ಕೇಳುವುದೊಂದೇ ದಾರಿ. ಕುಂದಾಪುರ ಸಮುದಾಯವು ಮಕ್ಕಳಿಗಾಗಿ ಹಮ್ಮಿಕೊಂಡ ಎರಡು ನಿಮಿಷಗಳ ವಿಡಿಯೋ ಭಾಷಣ ಸ್ಪರ್ಧೆಯ ಉದ್ದೇಶವೂ ಅದೇ- ಮಕ್ಕಳಿಗಾಗಿ ದೊಡ್ಡವರು ಸ್ವಾತಂತ್ರದ ಕತೆ ಹೇಳಬೇಕೆಂಬುದು. ಒಂದೇ ವಾರದಲ್ಲಿ‌ ಮುನ್ನೂರು ಮಕ್ಕಳು ವಿಡಿಯೋ ಕಳುಹಿಸಿಕೊಟ್ಟರು. ಅವರೆಲ್ಲರ ಪೋಷಕರು, ಶಿಕ್ಷಕರು ಎರಡು ನಿಮಿಷಗಳ ವಿಡಿಯೋಕ್ಕಾಗಿ ಸಂಗ್ರಹಿಸಿದ ಸಂಗತಿಗಳು ಸ್ವಾತಂತ್ರ ಹೋರಾಟದ ಕಾಲವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿರಬಹುದು. ಮುನ್ನೂರು ಮಕ್ಕಳಲ್ಲಿ ಮೂವತ್ತು ಮಕ್ಕಳು ನಾಡಿದ್ದು ರವಿವಾರ ನಮ್ಮ ಜೊತೆ ಇರುತ್ತಾರೆ. ಎಲ್ಲ ಮುನ್ನೂರು ಮಕ್ಕಳಿಗೂ ಪುಸ್ತಕ ಬಹುಮಾನ ಮತ್ತು ಸರ್ಟಿಫಿಕೇಟ್ ದೊರೆಯುತ್ತದೆ,” ಎಂದು ಪೀಪಲ್‌ ಮೀಡಿಯಾ ಜೊತೆ ಮಾತನಾಡಿದ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವ್ಕರ್ ತಿಳಿಸಿದರು.

samudaya kundapura

ಕಾರ್ಯಕ್ರಮವು 18 ಸೆಪ್ಟಂಬರ್‌ 2022ರ ಭಾನುವಾರದಂದು ಅಪರಾಹ್ನ 10 ಗಂಟೆಗೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯ ಝಾನ್ಸಿರಾಣಿ ಲಕ್ಷ್ಮಿಬಾಯಿ (ಜೆಎಲ್‌ಬಿ) ರಸ್ತೆಯಲ್ಲಿರು ಜೇಸಿ ಭವನದಲ್ಲಿ ನಡೆಯಲಿದ್ದು ಸಾರ್ವಜನಿಕರು, ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಚಿತ್ರನಿರ್ದೇಶಕ ಯಾಕೂಬ್‌ ಖಾದರ್‌ ಗುಲ್ವಾಡಿ, ಡಿಎಸ್‌ಎಸ್‌ ಸಂಘಟನೆಯ ರಾಜು ಬೆಟ್ಟಿನ ಮನೆ, ಜೇಸಿ ಟ್ರಸ್ಟಿನ ಸದಾನಂದ ನಾವುಡ, ಜೇಸಿಐ ಕುಂದಾಪುರ, ಬುದ್ಧಿಸ್ಟ್‌ ಸೊಸೈಟಿ ಆಫ್‌ ಇಂಡಿಯಾದ ರಾಘವೇಂದ್ರ ಉಡುಪಿ ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.