literature – Peepal Media

ಶ್ರೀ ರೇಣುಕಾಂಬ ಕಲಾಸಂಘದಿಂದ ಪ್ರಕೃತಿ ಸಂರಕ್ಷಣೆ ಹಾಗೂ ಆತ್ಮಹತ್ಯೆ ತಡೆ ಜಾಗೃತಿ, ಸನ್ಮಾನ ಕಾರ್ಯಕ್ರಮ
ಶ್ರೀ ರೇಣುಕಾಂಬ ಕಲಾಸಂಘ (ರಿ)ಬೆಂಗಳೂರು ಇವರ ಆಯೋಜನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ನೆರವಿನೊಂದಿಗೆ ಪ್ರಕೃತಿ ಸಂರಕ್ಷಣೆ ಹಾಗೂ ಆತ್ಮಹತ್ಯೆ ತಡೆ ಜಾಗೃತಿ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಅಂತರ ರಾಷ್ಟ್ರೀಯಮಟ್ಟದ ಕುಚಿಪುಡಿ, ಭರತನಾಟ್ಯ ಹಾಗೂ ನೃತ್ಯಗಳು, ರಾಜ್ಯಮಟ್ಟದ ಗೀತಗಾಯನ, ವಚನ ವಾಚನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ದಿನಾಂಕ 8/5/2025 ಗುರುವಾರದಂದು
ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆರವೇರಿದವು.

ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ರವರು, ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಆಡಳಿತಾಧಿಕಾರಿಯಾದ ಶ್ರೀ ತುಷಾರ್ ಗಿರಿನಾಥ್ ರವರು, ಕಲ್ಯಾಣದ ಐ.ಎ.ಎಸ್ ವಿಶೇಷ ಆಯುಕ್ತರಾದ ಶ್ರೀ ಸೂರಳ್ಕರ್ ವಿಕಾಶ್ ಕಿಶೋರ್ ರವರು, ಆರ್. ಆರ್. ನಗರ ವಲಯದ ಆಯುಕ್ತರಾದ ಶ್ರೀ ಡಾll ಸತೀಶ್ ರವರು ಹಾಗೂ ಆರ್. ಆರ್. ನಗರ ವಲಯದ ಜಂಟಿ ಆಯುಕ್ತರಾದ ಶ್ರೀಮತಿ ಡಾll ಆರತಿ ಆನಂದ್ ಇವರೆಲ್ಲರೂ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಬೆಂಗಳೂರಿನ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ಸಾರಥಿ ದಿನಪತ್ರಿಕೆಯ ಸಂಪಾದಕರು ಹಾಗೂ ಚಲನ ಚಿತ್ರ ನಟ ಮತ್ತು ನಿರ್ಮಾಪಕರು ಆದಂತಹ ಶ್ರೀ ಗಂಡಸಿ ಸದಾನಂದ ಸ್ವಾಮಿ, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಆದಂತಹ ಶ್ರೀ ಗುರುರಾಜ ಪಟೇಲ್ ಬೆಟ್ಟಳ್ಳಿಯವರು, ಅಖಿಲ ಕರ್ನಾಟಕ ಡಾll ಮಾಯಣ್ಣಗೌಡ ಕಲಾವಿದ ಬಳಗದ ಶ್ರೀ ಮಾಯಣ್ಣಗೌಡರು, ಮೂಡಲಪಾಳ್ಯದ ಗೋವಿಂದರಾಜ ನಗರದ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರವೀಶ್ ರವರು, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜನಪ್ರಿಯ ನಿರೂಪಕರು ಆದಂತಹ ಶ್ರೀ ಆರ್. ವೆಂಕಟರಾಜು, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರು ಆದಂತಹ ಶ್ರೀ ಮಂಜು ಪಾಂಡವಪುರ, ಮಾರುತಿ ಮೆಡಿಕಲ್ಸ್ ಮಾಲಿಕರು ಹಾಗೂ ಗೋ ಸಂರಕ್ಷಕರು ಆದಂತಹ ಶ್ರೀ ಮಹೇಂದ್ರ ಮನೋತ್ ರವರು, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ. ನಾಗರಾಜ್ ರವರು, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಕಾಂತೇಶ್ ಸಿ. ಮಾರನಪುರ ರವರು, ಬೆಂಗಳೂರಿನ ರಂಗಭೂಮಿ ಕಲಾವಿದರು ಹಾಗೂ ನಾಟಕ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ನಾಗೇಂದ್ರಪ್ರಸಾದ್ ರವರು, ನಾಗಾವರದ ಸಮಾಜ ಸೇವಕರು ಹಾಗೂ ಹಿರಿಯ ರಂಗಭೂಮಿ ಕಲಾವಿದರು ಆದಂತಹ ಶ್ರೀ ಆರ್. ಕೃಷ್ಣಮೂರ್ತಿ ಫೈಯರ್ ರವರು, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಆದಂತಹ ಶ್ರೀ ವಜ್ರಮೂರ್ತಿರವರು, ಬೆಂಗಳೂರಿನ ಚಲನಚಿತ್ರ ನಟರು ಹಾಗೂ ರಂಗಭೂಮಿ ಕಲಾವಿದರಾದ ಶ್ರೀ ಸೂರ್ಯರವರು, ಬೆಂಗಳೂರಿನ ರಂಗಭೂಮಿ ಕಲಾವಿದರಾದ ಶ್ರೀ ನವೀನ್ ಗೌಡರವರು ಹಾಗೂ ಕಿರುತೆರೆ ಹಾಗೂ ಚಲನಚಿತ್ರ ನಟಿ ಮತ್ತು ರಂಗಭೂಮಿ ಕಲಾವಿದೆಯಾದಂತಹ ಶ್ರೀಮತಿ ಲಲಿತಾ ಶ್ರೀಧರ್ ಇವರೆಲ್ಲರೂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಗೀತ ಗಾಯನ, ವಚನ ವಾಚನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ನಡೆದವು. ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಬೆಂಗಳೂರಿನ ವಿಜಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವಾದಿರಾಜರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಬಸವಲಿಂಗ ಎಲ್ ರವರು ನಡೆಸಿಕೊಟ್ಟರು.

ಕವಿಗೋಷ್ಠಿಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಆಗಮಿಸಿದ ಸುಮಾರು ಮೂವತ್ತು ಕವಿ/ ಕವಯಿತ್ರಿಯರು ಪಾಲ್ಗೊಂಡಿದ್ದರು. ಎಲ್ಲರೂ ಅನೇಕ ಉತ್ತಮ ವಿಷಯಗಳನ್ನು ಒಳಗೊಂಡ ತಮ್ಮ ಸ್ವಯಂ ರಚಿತ ಕವನಗಳನ್ನು ವಾಚನ ಮಾಡಿದರು. ಕವನ ವಾಚನದಲ್ಲಿ ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯೆಯೊಬ್ಬರು ಕೂಡಾ ತಮ್ಮ ಸ್ವಯಂ ರಚಿತ ಕವನವನ್ನು ವಾಚನ ಮಾಡುತ್ತಾ “ನನ್ನ ದೇಹ ನನ್ನ ಹಕ್ಕು” ಎನ್ನುವ ಸಂದೇಶ ಹೊತ್ತ ಕವನದ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನವನ್ನು ಮಾಡಿದ್ದಾರೆ.

ನಂತರ ಅಂತರರಾಷ್ಟ್ರೀಯ ಕುಚಿಪುಡಿ ಮತ್ತು ಭರತನಾಟ್ಯ ಕಲಾವಿದೆ ಗುರು ಡಾll ಎನ್ ಅನುಪಮಾ ಭೂಷಣ್ ರವರಿಂದ ಮತ್ತು ಅವರ ಶಿಷ್ಯವೃಂದದಿಂದ ಹಾಗೂ ರಸಜ್ಞ ಆಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ತಂಡದವರಿಂದ ಅಮೋಘವಾದ ನೃತ್ಯ ಪ್ರದರ್ಶನಗಳು ನೆರವೇರಿದವು. ತದನಂತರ ಜಿತುರೇಶಾ ಕಾವ್ಯನಾಮದ ಪ್ರೊ. ತುಕ್ಕಪ್ಪ ರವರ ರಚನೆ ಹಾಗೂ ನಿರ್ದೇಶನದ “ಕೈಲಾಸದ ಬಾಗಿಲಲ್ಲಿ ಆತ್ಮಗಳು” (ಆತ್ಮಹತ್ಯೆ ತಡೆಯಿರಿ ಜೀವ ಉಳಿಸಿರಿ) ನಾಟಕವು ನವಭಾರತ ಉದಯ ಪ್ರತಿಷ್ಠಾನದ ಅಭಿನಯ ರಂಗಕಲಾ ತಂಡದಿಂದ ಮೂಡಿಬಂತು. ಈ ನಾಟಕದ ಮೂಲಕ ಆತ್ಮಹತ್ಯೆಯು ಪರಿಹಾರವಲ್ಲ ಎನ್ನುವ ಸಂದೇಶವನ್ನು ಸಮಾಜಕ್ಕೆ ರವಾನೆ ಮಾಡಲಾಯಿತು. ನಾಟಕ ಪಾತ್ರಧಾರಿಗಳೆಲ್ಲರ ಅಭಿನಯವು ಅದ್ಭುತವಾಗಿತ್ತು. ಕಾರ್ಯಕ್ರಮಗಳ ನಿರೂಪಣೆಯನ್ನು ಬೆಂಗಳೂರಿನ ಸಂಗೀತಾ ಗಿರೀಶ್ ರವರು ಮಾಡಿದರು.

ನಾಟಕದ ನಡುವಿನ ವಿರಾಮದ ವೇಳೆಯಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿ/ಕವಯಿತ್ರಿಯರಿಗೆ ಹಾಗೂ ಸಮಾಜದ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ,ಸನ್ಮಾನ,ಗೌರವಗಳನ್ನು ಪ್ರದಾನ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕವಿಗಳು ಹಾಗೂ ಕವಯಿತ್ರಿಯರೆಲ್ಲರಿಗೂ ಹಾಗೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೂ ಆದರಪೂರ್ವಕವಾಗಿ ಶಾಲು ಹೊದಿಸಿ, ಹಾರ ಹಾಕಿ, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಜೊತೆಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದವರು ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯರು ಎನ್ನುವುದು ಹೆಮ್ಮೆಯ ವಿಚಾರ. ಶ್ರೀ ರೇಣುಕಾಂಬ ಕಲಾಸಂಘದ ಈ ಮಹತ್ತರ ಕಾರ್ಯಕ್ಕೆ ಕೈಜೋಡಿಸಿದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಾಗೂ ಬೆಂಗಳೂರಿನ ಮಹಾನಗರ ಪಾಲಿಕೆಯವರು ಎನ್ನುವುದು ಅತ್ಯಂತ ಸಂತೋಷದ ಸಂಗತಿ.

ಶ್ರೀ ರೇಣುಕಾಂಬ ಕಲಾಸಂಘದವರು ಗಾಯನ,ನಾಟ್ಯ,ನಾಟಕ ಮುಂತಾದ ಕಲೆಗಳನ್ನು ಪೋಷಿಸುತ್ತಿರುವುದಲ್ಲದೇ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಅನೇಕ ವರ್ಷಗಳಿಂದ ಸಮಾಜದ ಒಳಿಗಾಗಿ ದುಡಿಯುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಅನುಕರಣೀಯ ಹಾಗೂ ಅಭಿನಂದನಾರ್ಹ.

ಶಿಕ್ಷಕಿ ಹಾಗೂ ಕವಯಿತ್ರಿಯಾದಂತಹ ಶ್ರೀಮತಿ ಸಾವಿತ್ರಮ್ಮ ಓಂಕಾರ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರ ಹಾಗೂ ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯರ ರೇಖಾ ಚಿತ್ರವನ್ನು ರಚಿಸಿದರು. ಇವರು ಹೀಗೆ ತಮ್ಮ ಹಲವು ಪ್ರಿಯ ಸಾಹಿತಿಗಳ ರೇಖಾ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಚಿತ್ರಗಳನ್ನು ನಯನ ಸಭಾಂಗಣದ ಆವರಣದಲ್ಲಿ ಕಾರ್ಯಕ್ರಮದ ದಿನದಂದು ಪ್ರದರ್ಶಿಸಲಾಗಿತ್ತು.

ಇಂದಿನ ಈ ಕಾರ್ಯಕ್ರಮಕ್ಕೆ ಕೈಜೋಡಿಸಿರುವ ಜಿತುರೇಶಾ ಕಾವ್ಯನಾಮದ ಪ್ರೊ. ತುಕ್ಕಪ್ಪನವರು ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿ ಶ್ರೀ ರೇಣುಕಾಂಬ ಕಲಾಸಂಘದವರ ಪರಿಚಯವನ್ನು ಹಾಗೂ ಅವರು ಮಾಡುತ್ತಿರುವ ಸಮಾಜ ಸೇವೆಯನ್ನು ಎಲ್ಲರಿಗೂ ಪರಿಚಯಿಸಿದರು. ಅವರ ಮಾತುಗಳನ್ನು ಆಲಿಸಿದಾಗ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಶ್ರೀ ರೇಣುಕಾಂಬ ಕಲಾಸಂಘದ ಬಗ್ಗೆ ಹೆಮ್ಮೆ ಎನಿಸಿತು. ಈ ಕಲಾಸಂಘದ ಪ್ರತಿಯೊಬ್ಬ ಸದಸ್ಯರೂ ಅಭಿನಂದನಾರ್ಹರು. ಸಮಾಜಕ್ಕೆ ಇವರೆಲ್ಲರೂ ಮಾಡುತ್ತಿರುವ ಸೇವೆ ಅಪಾರ. ಇವರ ಸೇವೆಯು ಇತರರಿಗೂ ಮಾದರಿಯಾಗಿದೆ. ಶ್ರೀ ರೇಣುಕಾಂಬ ಕಲಾಸಂಘದಿಂದ ಇನ್ನೂ ಇಂತಹಾ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ನಡೆಯುತ್ತಿರಲಿ ಎಂದು ಒಮ್ಮನಸ್ಸಿನಿಂದ ಎಲ್ಲರೂ ಹಾರೈಸೋಣ.

ವರದಿ: ರುಕ್ಮಿಣಿ. ಎಸ್. ನಾಯರ್
ಬೆಂಗಳೂರು.

20ನೇ ಶತಮಾನದ ಬಹಳ ದೊಡ್ಡ ಪುಸ್ತಕ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್: ಪ್ರೊ.ರಹಮತ್ ತರೀಕೆರೆ
ಬೆಂಗಳೂರು: ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಲೇಖಕರ ಸಂಘ ಬಹುತ್ವ ಆಯಾಮದ ಚಳವಳಿಯಾಗಿ ಮೂಡಲಿ ಎಂದು ಹಿರಿಯ ಸಾಹಿತಿ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಏಪ್ರಿಲ್ 23ರ, ಬುಧವಾರ ನಗರದ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ನಡೆದ  ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘದ ಉದ್ಘಾಟನೆ ಜೊತೆಗೆ ಅಂಬೇಡ್ಕರ್ ಜಯಂತಿ-ವಿಶ್ವ ಪುಸ್ತಕ ದಿನಾಚರಣೆಯ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

1979 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಲಿತ ಸಾಹಿತ್ಯಕ್ಕೆ ವೇದಿಕೆಯಲ್ಲಿ ಅವಕಾಶ ನೀಡದಿದ್ದಕ್ಕಾಗಿ ಒಂದು ಪ್ರತಿಭಟನೆಯಾಗಿ ಬಂಡಾಯ ಸಾಹಿತ್ಯ ಚಳವಳಿ ಹುಟ್ಟಿದಂತೆ, ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘವೂ ಕೆಲಸ ಮಾಡುತ್ತೆ ಎಂದೆನಿಸುತ್ತೆ. ಇದರಲ್ಲಿ ಒಂದು ಪ್ರತಿರೋಧ ಇದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಪುಸ್ತಕ ಸಂಸ್ಕೃತಿಯಲ್ಲಿ ಮೂರು ಮಾದರಿಗಳಿವೆ. ಶುದ್ಧ ವ್ಯಾಪಾರ ಮಾದರಿ, ಪುಸ್ತಕವನ್ನು ರಾಜಕೀಯ ಅಜೆಂಡಾವನ್ನಾಗಿ ನೋಡುವ ಮಾದರಿ, ಪುಸ್ತಕವನ್ನು ಮನುಕುಲದ ಸೇವೆಯನ್ನಾಗಿ, ಪ್ರಜಾಪ್ರಭುತ್ವದ ಸಂವೇದನಾಶೀಲ ನಾಗರಿಕರನ್ನು ಸೃಷ್ಠಿ ಮಾಡುವುದೇ ಪುಸ್ತಕ ಸಂಸ್ಕೃತಿಯ ಉದ್ದೇಶವನ್ನಾಗಿಸಿಕೊಂಡ ಮಾದರಿಯಾಗಿದೆ.

ಕಳೆದ 5ವರ್ಷಗಳಲ್ಲಿ ಪುಸ್ತಕದ ಅಂಗಡಿಯಲ್ಲಿ ಹೆಚ್ಚು ಮಾತಾಡಿದ್ದೇನೆ. ವಿಶ್ವ ವಿದ್ಯಾಲಯಗಳಲ್ಲಿ ನಡೆಯಬೇಕಾದ ಚರ್ಚೆಗಳು ಪುಸ್ತಕದಂಗಡಿಯಲ್ಲಿ ನಡೆಯುತ್ತಿವೆ ಎಂದು ಹೇಳಿದರು.

20ನೇ ಶತಮಾನದಲ್ಲಿ ಬಹಳ ದೊಡ್ಡ ಪುಸ್ತಕ ಪ್ರೇಮಿ ಯಾರಾದರೂ ಇದ್ದರೆ, ಅದು ಡಾ.ಬಿ.ಆರ್.ಅಂಬೇಡ್ಕರ್ ಅವರು. ಕಾರ್ಮಿಕ ಮಂತ್ರಿ ಯಾಗಿದ್ದಾಗ, ಹಳೆಯ ಪುಸ್ತಕದಂಗಡಿಗೆ ಹೋಗಿ ಪುಸ್ತಕಗಳನ್ನು ತೆಗೆದುಕೊಂಡು ಬರುತ್ತಿದ್ದರು.

ಭಾರತದ ಮಂತ್ರಿಯೊಬ್ಬರು ಧೂಳಿನ ಪುಸ್ತಕದಂಗಡಿಯಲ್ಲಿ ಸಮಯ ಕಳೆದಿದ್ದೂ ಯಾರಾದೂ ಇದ್ದರೆ ಅದೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ. ಡಾ.ಅಂಬೇಡ್ಕರ್ ಅವರ ವ್ಯಕ್ತಿತ್ವ ನಿರ್ಮಾಣ ಹಾಗೂ ಅವರ ಚಳವಳಿಯ ಪುಸ್ತಕಗಳು ಮುಖ್ಯ ಪಾತ್ರವಹಿಸಿವೆ ಎಂದು ತಿಳಿಸಿದರು.

ಸಿನೆಮಾ ಮತ್ತು ನಾಟಕಗಳು ನಾಯಕ ಮತ್ತು ನಿರ್ದೇಶಕ  ಕೇಂದ್ರಿತವಾಗಿರುತ್ತವೆ. ಆದರೆ ಸಿನೆಮಾದಲ್ಲಿ ಲೈಟ್‌ಬಾಯ್, ಪರದೆ ಎಳೆಯುವವರು ಇಲ್ಲದಿದ್ದರೇ ಏನಾಗುತ್ತಿತ್ತು. ಸಾಮೂಹಿಕ ದುಡಿಮೆಯ ಸಂಸ್ಕೃತಿಯ ಭಾಗವಾಗಿ ಕಲಾ ಮಾದ್ಯಮಗಳು ಸೃಷ್ಠಿಯಾಗಿವೆ. ಆದರೆ ನಟ ಕೇಂದ್ರಿತವಾಗಿ ವ್ಯಾಖ್ಯಾನ ಮಾಡಿ, ಇಡೀ ಕಲೆಯ ಸೃಷ್ಠಿಯ ಹಿಂದೆ ಇರುವ ವ್ಯಕ್ತಿಗಳನ್ನು ನಾವು ಮರೆತಿದ್ದೇವೆ.

ಇದು ಭಾರತೀಯರು ವ್ಯಕ್ತಿ ಕೇಂದ್ರಿತ ಇತಿಹಾಸವನ್ನು ರಚನೆ ಮಾಡುವ ದುಷ್ಪರಿಣಾಮದ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟರು.

ಈಗ ಸಾಮೂಹಿಕ ಪ್ರಜ್ಞೆಯೇ ಇಲ್ಲವಾಗಿದೆ. ಆದಷ್ಟು ಹೊಸ ಉದ್ಯಮಶೀಲತೆಗಳನ್ನು ಸಾಮೂಹಿಕ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬೇಕು. ಬಹುತ್ವ ಎನ್ನುವುದು ಆದರ್ಶವಾದಾಗ ಅದನ್ನು ಪಾಲಿಸಬೇಕು. ಕರ್ನಾಟಕದ ಎಲ್ಲ ಕ್ಷೇತ್ರಗಳ ಸಾಧಕರ ಹಿನ್ನೆಲೆಯಲ್ಲಿ ದುಡಿದಿರುವವರನ್ನು ಸೇರಿಸಿಕೊಂಡೇ ನಾವು ಚರಿತ್ರೆಯನ್ನು ಕಟ್ಟಬೇಕಿದೆ ಎಂದು ತಿಳಿಸಿದರು.

ಹೊಸತಲೆಮಾರು ಓದನ್ನು ಹೇಗೆ ನೋಡುತ್ತಾರೆ, ಡಿಜಿಟಲ್ ಯುಗದಲ್ಲಿ ನೋಡುವ ಮತ್ತು ಕೇಳುವ ಸಂಸ್ಕೃತಿ ಅತಿವೇಗವಾಗಿ ಬೆಳೆಯುತ್ತಿದ್ದು, ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಸಂಘದ ಲೋಗೊ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ‘ನಾನು ಬರಹಗಾರನಲ್ಲ, ಚಿಂತಕನೂ ಅಲ್ಲ, ಆದರೆ ಬರಹಗಾರರು, ಚಿಂತಕರ ಜೊತೆ ಓದುತ್ತಾ, ಅವರ ಒಡನಾಟದಲ್ಲಿ ಬೆಳೆದ ಹೋರಾಟಗಾರ, ನಾವು ಓದಿಗೆ ತೆರೆದುಕೊಂಡದ್ದೇ ವಿಭಿನ್ನ ಎಂದು ಹೇಳಿದರು.

ಈ ವೇಳೆ ದೇಶದಲ್ಲೆಡೆ, ಹಾಗೂ ಜಗತ್ತಿನ ಸುತ್ತಮುತ್ತ ನೋಡಿರೆ ಪ್ರಜಾತಂತ್ರವನ್ನು ಬಳಸಿಕೊಂಡೇ ಸರ್ವಾಧಿಕಾರಿಗಗಳು ಅಧಿಕಾರಕ್ಕೇರುತ್ತಿದ್ದಾರೆ. ಅವರೆಲ್ಲರೂ ಪುಸ್ತಕ ದ್ವೇಷಿಗಳೇ, ಅವರಿಗೆ ಒಬ್ಬ ಕನ್ನಡಿಗನನ್ನು, ಒಂದು ಮಗುವನ್ನು ಕೂಡ ಸಹಿಸಿಕೊಳ್ಳಲಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿಯ ಪಾತ್ರ ಏನು ಎನ್ನುವುದನ್ನು ಕೂಡ ಆಲೋಚನೆ ಮಾಡಬೇಕಿದೆ. ಇಡೀ ಪುಸ್ತಕೋದ್ಯಮ ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಲುಕಿವೆ. ಪುಸ್ತಕ ಮೇಳಗಳನ್ನು ಕೂಡ ಬಂಡವಾಳಶಾಹಿಗಳು ಸ್ಟಾರ್ ಹೊಟೇಲ್‌ಗಳಲ್ಲಿ ನಡೆಸುತ್ತಿದ್ದಾರೆ ಅಂತಾ ಆತಂಕ ವ್ಯಕ್ತ ಪಡಿಸಿದರು.

ಜೊತೆಗೆ ಪುಸ್ತಕ ಲೋಕ ಹೇಗೆ ಅಂಬೇಡ್ಕರ್ ಬರಹಗಳನ್ನು ವ್ಯವಸ್ಥಿತವಾಗಿ ಜನರ ಕೈಗೆ ಸಿಗದಂತೆ ನೋಡಿಕೊಂಡಿದೆ ಎಂಬುದನ್ನು ವಿವರಿಸಿದರು. ಜೊತೆಗೆ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ದಾರಿ ಮಾಡಿಕೊಡುತ್ತಿರುವ ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘಕ್ಕೆ ಶುಭಾಷಯ ಕೋರುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ, ಪ್ರಕಾಶಕ ಗುರುಪ್ರಸಾದ್ ಡಿ.ಎನ್, ಪ್ರಕಾಶಕಿ ಡಾ.ಮಮತಾ ಕೆ.ಎನ್, ರಹಮತ್ ತರೀಕೆರೆ ಸೇರಿದಂತೆ ಅನೇಕ ಗಣ್ಯರು, ಪುಸ್ತಕಾಸಕ್ತರು ಉಪಸ್ಥಿತರಿದ್ದರು.

ಕನ್ನಡ ಸಾರಸ್ವತ ಭೂಮಿ ಸಂಶೋಧನೆಯ ಕನ್ನೆ ನೆಲವಾಗಿದೆ: ಪ್ರೊ.ಹಂಪ ನಾಗರಾಜಯ್ಯ
ನಮ್ಮ ಕನ್ನಡ ಸಾರಸ್ವತ ಭೂಮಿಯು ಯಾವತ್ತೂ ಬಂಜೆಯಲ್ಲ. ಅದು ಕಣ್ಣು ಹಾಯಿಸಿದಷ್ಟೂ ಸಂಶೋಧನೆಯ ಸಾಧ್ಯತೆಗಳತ್ತ ದಾರಿ ತೋರುವ ಕನ್ನೆ ನೆಲವಾಗಿದೆ ಎಂದು ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಕನ್ನಡ ಸಂಶೋಧನೆಯ ಹೊಸ ಸಾಧ್ಯತೆಗಳು” ಕುರಿತ 5 ದಿನಗಳ ರಾಷ್ಟ್ರಮಟ್ಟದ ‘ಸಂಶೋಧನ ಕಾರ್ಯಾಗಾರ’ವನ್ನು ಅಂತರ್ಜಾಲದ ಜೂಮ್ ವೇದಿಕೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಂಶೋಧನೆ ಎಂದರೆ ಹುಡುಗಾಟವಲ್ಲ; ಅದು ನಿರಂತರವಾಗಿ ನಡೆಸಬೇಕಾದ ಹುಡುಕಾಟ. ಸಂಶೋಧನೆಗಿರುವುದು ಬೆವರಿನ ದಾರಿಯೇ ಹೊರತು ಯಾವುದೇ ಅಡ್ಡದಾರಿಗಳಿಲ್ಲ. ಶಿಸ್ತುಬದ್ಧವಾದ ಪೂರ್ವ ತಯಾರಿ, ಸತತ ಅಭ್ಯಾಸ, ವ್ಯಾಪಕವಾದ ಅಧ್ಯಯನವು ಸಂಶೋಧನೆಗೆ ಅತ್ಯವಶ್ಯಕ. ಭಾಷಾವಿಜ್ಞಾನದ ಅರಿವಿನೊಂದಿಗೆ ಸ್ವಭಾಷಾ ಜ್ಞಾನವೂ ಇರಬೇಕು. ಆಯ್ಕೆ ಮಾಡಿಕೊಳ್ಳುವ ವಸ್ತುವನ್ನು ಕುರಿತು ಈಗಾಗಲೇ ನಡೆದಿರುವ ಸಂಶೋಧನೆಯನ್ನು ಪರಾಮರ್ಶೆ ಮಾಡುವುದು ಔಚಿತ್ಯಪೂರ್ಣವಾದುದು. ಪೂರ್ವಸೂರಿಗಳ ಮಾರ್ಗದಲ್ಲಿ ನಾಲ್ಕು ಹೆಜ್ಜೆ ಮುನ್ನಡೆದು ಸ್ವೋಪಜ್ಞತೆಯಿಂದ ಹೊಸತಾದ ಸಂಶೋಧನೆಯನ್ನು ಕೈಗೊಳ್ಳಬೇಕು. ಹೇಳಿದ್ದನ್ನೇ ಹೇಳಿದರೆ ಸಂಶೋಧನೆಯಾಗದು. ಹಳೆ ಮಾತಿಗೆ ಹೊಸಮಾತನ್ನು ಕೂಡಿಸಿದರೆ ಕರಿಮೋಡಕ್ಕೆ ಬಿಳಿಚೌಕಟ್ಟು ಕಟ್ಟಿದಂತಾಗುತ್ತದೆ ಎಂದರು.

ಇಂದಿನ ಯುವಸಮುದಾಯವು ಸೃಜನಶೀಲ ಕ್ಷೇತ್ರದಲ್ಲಿ ಮಾಡುವಷ್ಟು ಕೆಲಸವನ್ನು ಸಂಶೋಧನ ಕ್ಷೇತ್ರದಲ್ಲೂ ಮಾಡಲು ಸಾಧ್ಯವಿದೆ. ಕನ್ನಡ ಸಂಶೋಧನ ಕ್ಷೇತ್ರಕ್ಕೆ ಇಂದು ದೊಡ್ಡ ದೊಡ್ಡ ವಿದ್ವಾಂಸರ ಬರಗಾಲ ಬಂದಿದೆ ಎಂದುಕೊಳ್ಳಬಾರದು. ಈಗಿನ ಹೊಸ ತಲೆಮಾರಿನ ಸಂಶೋಧಕರೇ ದೊಡ್ಡ ವಿದ್ವಾಂಸರಾಗಿ ರೂಪುಗೊಳ್ಳಬೇಕು. ಹಿಂದಿನ ಅನೇಕ ವಿದ್ವಾಂಸರ ಮಾದರಿಗಳು ನಮ್ಮ ಮುಂದಿವೆ. ಅವುಗಳನ್ನು ಅನುಸರಿಸಿ ಪುನರವಲೋಕನ ಮಾಡುವ ಮೂಲಕ ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡದ ಆದಿಕವಿಯಾದ ಪಂಪನು ಸಂಸ್ಕೃತ ಮೂಲದ ಮಹಾಭಾರತವನ್ನು ಮೊಟ್ಟಮೊದಲ ಬಾರಿಗೆ ತರುವಾದ ಪ್ರಾದೇಶಿಕ ಭಾಷೆಗಲ್ಲಿ ಒಂದಾದ ಕನ್ನಡಕ್ಕೆ ತಕ್ಕುದಾಗಿ ಪುನರ್ ಸೃಷ್ಠಿ ಮಾಡಿದನೇ ಹೊರತು ಯಥಾವತ್ತು ಅನುಸೃಷ್ಠಿ ಮಾಡಲಿಲ್ಲ. ಪಂಪನ ಸೃಜನಶೀಲ ಪ್ರತಿಭಾ ವ್ಯಕ್ತಿತ್ವದಿಂದ ಮೂಡಿಬಂದ ಪಂಪಭಾರತವು ತದನಂತರ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಹಾಭಾರತಗಳ ಸೃಷ್ಟಿಗೆ ಪ್ರೇರಣೆಯಾಯ್ತು. ತೆಲುಗಿನಲ್ಲಿ ನನ್ನಯ, ಎರ್ರನ, ತಿಕ್ಕನರ ಭಾರತಗಳು ಮೂಡಿಬಂದವು. ಪಂಪನು ಕನ್ನಡದ ಆದಿಕವಿಯಾದಂತೆ, ಆತನ ತಮ್ಮನಾದ ಜಿನವಲ್ಲಭನು ತೆಲುಗಿನ ಆದಿಕವಿಯೇ ಆಗಿದ್ದಾನೆ. ಯಾಕೆಂದರೆ ತಾಯಿ ಭಾಷೆಯಾದ ಕನ್ನಡದಲ್ಲಿ ಪಂಪ ಬರೆದರೆ, ತಂದೆ ಭಾಷೆಯಾದ ತೆಲುಗಿನಲ್ಲಿ ಜಿನವಲ್ಲಭನು ಕಾವ್ಯ ನೀಡುವ ಮೂಲಕ ಕನ್ನಡ ಹಾಗೂ ತೆಲುಗಿಗೆ ತನ್ನದೇ ಆದ ಅಮೂಲ್ಯ ಕಾಣಿಕೆ ನೀಡಿದ್ದಾನೆ. ಪಂಪನ ಮಹಾಕಾವ್ಯಗಳನ್ನು ಇತರ ಪ್ರಾದೇಶಿಕ ಹಾಗೂ ಜಾಗತಿಕ ಮಹಾಕಾವ್ಯಗಳೊಂದಿಗೆ ತೌಲನಿಕವಾಗಿ ಅಧ್ಯಯನ ನಡೆಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆಶಯ ಮಾತುಗಳನ್ನಾಡಿದ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಹಾಗೂ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕರೂ ಆದ ಫಾ.ಡಾ.ಜೋಶಿ ಮ್ಯಾಥ್ಯೂ ಅವರು, ಸಂಶೋಧನೆ ಎಂಬುದು ನಿರಂತರ ಹುಡುಕಾಟದ ಮೂಲಕ ನಿಚ್ಚಂಪೊಸತಾಗಿ ಮೂಡುವ ಲೋಕದ ಬೆಳಗು. ಕನ್ನಡ ಸಂಶೋಧನ ಚರಿತ್ರೆಯಲ್ಲಿ ವಿದ್ವನ್ಮಣಿಗಳಾಗಿ ಬೆಳಗಿದ ಹಿಂದಿನ ಸಂಶೋಧಕ ದೀಪಗಳನ್ನು ಇಂದಿನ ಸಂಶೋಧಕರು ತಮ್ಮೊಳಗೆ ಅಂತಸ್ಥ ಮಾಡಿಕೊಂಡು ಸಾಗಬೇಕಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಪ್ರಾಧ್ಯಾಪಕರೂ ಆದ ಪ್ರೊ.ಎನ್.ಕೆ.ಲೋಲಾಕ್ಷಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಡೀನರಾದ ಡಾ.ಎ.ವಿ.ಗೋಪಕುಮಾರ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್. ಅವರು ವಂದಿಸಿದರು. ಕಾರ್ಯಾಗಾರದ ಸಂಯೋಜಕರಾದ ಕನ್ನಡ ಪ್ರಾಧ್ಯಾಪಕ ಡಾ.ಎಂ.ಭೈರಪ್ಪ ಅವರು ನಿರ್ವಹಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ಡಾ.ಪ್ರೇಮಕುಮಾರ್ ಕೆ., ಡಾ.ಕಿರಣಕುಮಾರ್ ಹೆಚ್.ಜಿ. ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತ ಸುಮಾರು 300 ಜನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ದಾವಣಗೆರೆಯಲ್ಲಿ ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ
ದಾವಣಗೆರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಕ್ಷರ ಹಬ್ಬ  ಪ್ರಯುಕ್ತ ದಾವಣಗೆರೆ ಲಿಟರರಿ ಫೋರಂ ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಪಲ್ಲವಿ ಯಡೆಯೂರು ಅವರ ʼಕಣಗಿಲೆʼ, ಎಸ್‌ ನಟರಾಜ್‌ ಅವರ ʼಮಗಳುʼ ಹಾಗೂ ತಿರುಪತಿ ಭಂಗಿ ಅವರ ʼನಾಯಿಯ ಹೆಜ್ಜೆʼ ಕಥೆಗಳು ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಪ್ರಶಸ್ತಿ ವಿಜೇತರು ತಲಾ ಐದು ಸಾವಿರ ರೂಪಾಯಿಗಳ ನಗದು ಹಾಗೂ ಸ್ಮರಣ ಫಲಕ ಪಡೆಯಲಿದ್ದಾರೆ.

ಸ್ಮಿತಾ ಅಮೃತರಾಜ ಅವರ ‘ಕಮಲಿ’ ಕತೆಯೂ ಮಹಿಳಾ ಕೇಂದ್ರಿತ’ ವಿಶೇಷ ಕಥಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ಈ ಪ್ರಶಸ್ತಿಯನ್ನು ‘ಅವಳ ಹೆಜ್ಜೆ’ ತಂಡವು ಪ್ರಯೋಜಿಸಿದೆ.

ಕತೆಗಾರ ಹಾಗೂ ವಿಮರ್ಶಕರಾದ ಕಂನಾಡಿಗ ನಾರಾಯಣ ಹಾಗೂ ಕತೆಗಾರ ಹನಮಂತ ಹಾಲಿಗೆರೆ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಸ್ಪರ್ಧೆಗೆ ಹೊರನಾದಿನಿಂದ ಸೇರಿದಂತೆ 120ಕ್ಕೂ ಹೆಚ್ಚು ಕತೆಗಳು ಬಂದಿದ್ದವು.

ಉಳಿದಂತೆ ಅತ್ಯುತ್ತಮ 20 ಕತೆಗಳಿಗೆ ಪ್ರಶಸ್ತಿ ಫಲಕ ಸ್ಮರಣಿಕೆಗಳನ್ನು ನೀಡಲಾಗುವದು. ಈ ಆಯ್ದ ಕತೆಗಳನ್ನು ದಾವಣಗೆರೆ ಲಿಟರರಿ ಪೋರಂ ಪುಸ್ತಕ ರೂಪದಲ್ಲಿ ಪ್ರಕಟಿಸಲಿದ್ದು, ಪುಸ್ತಕ ಬಿಡುಗಡೆಯೂ ಫೆಬ್ರುವರಿ 7, 8 ಹಾಗೂ 9 ರಂದು ಮೂರು ದಿನಗಳ ಕಾಲ ದಾವಣಗೆರೆಯ MBA ಕಾಲೇಜಿನಲ್ಲಿ ನಡೆಯಲಿರುವ ರಾಷ್ಟ್ರೀಯ ಅಕ್ಷರ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಲಿಟರರಿ ಪೋರಂ ಸಂಚಾಲಕ ಶ್ರೀ ಹರ್‌ ಸಾಲಿಮಠ ತಿಳಿಸಿದ್ದಾರೆ.

ಮೆಚ್ಚುಗೆಯ ಬಹುಮಾನ ಪಡೆದ 20 ಕತೆಗಳು ಹಾಗೂ ಕತೆಗಾರರು

ಹರಿಯಲಾರದವಳು – ಉಷಾ ನರಸಿಂಹನ್
ಎರಡು ಮೋತಿಯ ಪೆನ್ನು – ಕಲಕೇಶ ಗೊರವರ
ನೀವು ಕಾಣಿರೆ – ನಂದಿನಿ ಹೆದ್ದುರ್ಗ
ಸಂಗ್ರಾಮ – ಪ್ರೇಮಲತಾ ಬಿ
ನಿಯೋಗ – ರವಿಕುಮಾರ್ ಕುಮಾರಪುರ
ದಡವನರಸಿದ ನದಿ – ಪಾಪು ಗುರು
ಬೆಳಕು ಕುಡಿದ ಸಂಜೆ – ಸದಾಶಿವ ಸೊರಟೂರು
ಬಳಪದ ಕಲ್ಲು
ಶ್ರೀರಮಣ ನಿರ್ಯಾಣ – ಅಜಿತ ಹರೀಶಿ
ಸ್ವಾಭಿಮಾನ ಸಮುದ್ರ
ಗೋಧೂಳಿ
ಅಲೈ ಹಬ್ಬ – ಶಿವಪ್ಪ ಬಡಿಗೇರ
ತುಪ್ಪದ ಗಿಂಡಿ – ಸನಾವುಲ್ಲಾ ನವಿಲೆಹಾಳ
ಇಣುಕು – ಪೂರ್ಣಿಮಾ ಮಾಳಗಿಮನಿ
ಶಕುನದ ಚುಕ್ಕಿ – ನಾಗರಾಜ ಕೋರಿ
ಹಂಗು – ಭದ್ರಪ್ಪ ಹೆನ್ಲಿ
ಅಕ್ಕನ ಗಂಟು – ಪ್ರಕಾಶ ಖಾಡೆ
ಗಾಳಕ್ಕೆ ಸಿಕ್ಕ ಮೀನು – ಇಸ್ಮಾಯಿಲ್ ತಳಕಲ್

ಕಾಗೆ ಕೂರುವುದಕ್ಕೂ… ಕೊಂಬೆ ಮುರಿಯುವುದಕ್ಕೂ…
ಬೊಗಸೆಗೆ ದಕ್ಕಿದ್ದು – 7

ನಿಖಿಲ್ ಕೋಲ್ಪೆ

ಕಾಕತಾಳೀಯ! ಒಂದಕ್ಕೊಂದು ಸಂಬಂಧವೇ ಇಲ್ಲದ ಎರಡು ಘಟನೆಗಳು ಅವಿನಾಭಾವ ಸಂಬಂಧ ಇವೆಯೋ ಎಂಬಂತೆ ಭ್ರಮೆ ಹುಟ್ಟಿಸುವ ರೀತಿಯಲ್ಲಿ ನಡೆದರೆ ಅದನ್ನು ಕಾಕತಾಳೀಯ ಎನ್ನುತ್ತೇವೆ. ಅದೊಂದು ಮ್ಯಾಜಿಕಲ್ ಕ್ಷಣ! “ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿಹೋಯ್ತು” ಎಂದೋ “ಕಾಗೆ ಕೂರುವುದಕ್ಕೂ ಹಣ್ಣು ಉದುರುವುದಕ್ಕೂ ಸರಿಹೋಯ್ತು” ಎಂದೋ ಹೇಳುತ್ತಾರೆ. ವಾಸ್ತವದಲ್ಲಿ ಎರಡಕ್ಕೂ ಸಂಬಂಧ ಒಂದು ಚೂರೂ ಇಲ್ಲದಿದ್ದರೂ ಕಾಗೆ ಕೂತದ್ದೇ ಕೊಂಬೆ ಮುರಿದದ್ದಕ್ಕೋ, ಹಣ್ಣು ಉದುರಿದ್ದಕ್ಕೋ ಕಾರಣ ಎಂಬ ಭ್ರಮೆ ನಮ್ಮನ್ನು ಆವರಿಸುತ್ತದೆ.

ಕೆಟ್ಟು ಹೋದ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ ಎಂಬುದು ಹಳೆಯ ಮಾತು. ಬಹಳಷ್ಟು ಜನರಿಗೆ ಇದನ್ನು ಹೇಳಿದರೆ, ಅದು ಹೇಗೆ ಎಂದು ಕೇಳುತ್ತಾರೆ! “ಗಡಿಯಾರದ ಮುಳ್ಳು ೬.೦೦ ಗಂಟೆಯ ಹೊತ್ತು ತೋರಿಸುವ ಹೊತ್ತಿಗೇ ಕೆಟ್ಟು ನಿಂತಿತು ಎಂದಿಟ್ಟುಕೊಳ್ಳಿ. ನಂತರವೂ ಪ್ರತೀ ದಿನ ನೀವು ಬೆಳಗ್ಗೆ ಮತ್ತು ಸಂಜೆ ೬.೦೦ ಗಂಟೆ ಹೊತ್ತಿಗೆ ಗಡಿಯಾರ ನೋಡಿದರೆ ಅದು ಸರಿಯಾದ ಸಮಯವನ್ನೇ ತೋರಿಸುತ್ತದಲ್ಲ?” ಎಂದೆಲ್ಲಾ ಅಂತವರಿಗೆ ವಿವರಿಸಬೇಕಾಗುತ್ತದೆ.

ಬಹುಶಃ ಇಂತಹ “ಬುದ್ಧಿವಂತ” ಜನರೇ ಪ್ರಪಂಚದಲ್ಲಿ ತುಂಬಿರುವಂತಿದೆ. ಇಲ್ಲವಾದಲ್ಲಿ ಯಾವುದೇ ಒಬ್ಬ ಜ್ಯೋತಿಷಿ ಹೇಳಿದ್ದು ನಿಜವಾಗುತ್ತದೆ ಎಂದೋ, ಅಸ್ತಿತ್ವದಲ್ಲಿಯೇ ಇಲ್ಲದ ರಾಹು- ಕೇತುಗಳು ನಮ್ಮ ಜೀವನ, ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದು ಯಾರಾದರೂ ನಂಬುತ್ತಾರೆಯೇ? ಮಂತ್ರಿಸಿದ ನೂಲಿನಿಂದ, ಅಥವಾ ನೀರಿನಿಂದ ರೋಗ ಗುಣವಾಗುತ್ತದೆ ಎಂದರೆ ಯಾರಾದರೂ ನಂಬುತ್ತಾರೆಯೇ? ಇವುಗಳಿಗೆ ದೇವರ, ನಂಬಿಕೆಯ, ಡೋಂಗಿ ವಿಜ್ಞಾನದ ಬಣ್ಣ ನೀಡಿ ನಂಬಿಸಲಾಗುತ್ತದೆ. ವಿಜ್ಞಾನಿಗಳೇ ಇಂತವುಗಳನ್ನು ನಂಬುವಾಗ ಸಾಮಾನ್ಯ ಜನರ ಪಾಡೇನು? ಮಂತ್ರದಿಂದ ಆಥವಾ ಪಾಯಸದಿಂದ ಮಕ್ಕಳಾಗುತ್ತವೆ ಎಂದು ಪುರಾಣಗಳಲ್ಲಿ ಹೇಳಿದ್ದರೂ, ಹಾಗೆಂದು ಈಗ ಯಾರಾದರೂ ಯಾರಾದರೂ ನಂಬುತ್ತಾರೆಯೆ? ಅದೂ ಮಕ್ಕಳಾಗುವುದು ಹೇಗೆ ಎಂದು ಸ್ವಲ್ಪ ದೊಡ್ಡ ಮಕ್ಕಳಿಗೂ ಗೊತ್ತಿರುವಾಗ?! ಅಥವಾ ನಂಬುವುದಿಲ್ಲ ಎಂದು ನಂಬುವುದಾದರೂ ಹೇಗೆ?- ನವಿಲಿಗೆ ಕಣ್ಣೀರಿನಿಂದ ಮಕ್ಕಳಾಗುತ್ತವೆ ಎಂದೊಬ್ಬ ಬೃಹಸ್ಪತಿ ನ್ಯಾಯಾಧೀಶನೇ ಹೇಳಿರುವಾಗ!?

ಅದಿರಲಿ, ನಾನೀಗ ನನ್ನ ಬಾಲ್ಯದಲ್ಲಿ ನಡೆದ, ನಿಮಗೆ ನಂಬಲು ಕಷ್ಟವಾಗಬಹುದಾದ ಎರಡು ಕಾಕತಾಳೀಯ ಘಟನೆಗಳನ್ನು ನಿಮಗೆ ಹೇಳುತ್ತೇನೆ.

ನಾಲ್ಕು ದಶಕಗಳಿಗೂ ಹಿಂದಿನ ಕತೆಯಿದು. ನಾನಾಗ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಒಂದು ದಿನ ಸಂಜೆ ಹೈಸ್ಕೂಲಿನಿಂದ ಮನೆಗೆ ಬರುತ್ತಿದ್ದಂತೆ ಹಿತ್ತಿಲಲ್ಲಿ ಆರನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ತಮ್ಮನೂ, ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ದೊಡ್ಡ ತಂಗಿಯೂ ಹಿತ್ತಿಲಲ್ಲಿ ಬಹಳ ತನ್ಮಯತೆಯಿಂದ ಏನೋ ಮಹಾನ್ ಕೆಲಸದಲ್ಲಿ ತೊಡಗಿದ್ದಾರೆ. ಕುತೂಹಲ ತಾಳದೆ ಹೋಗಿ ಏನೆಂದು ನೋಡಿದರೆ ಇಬ್ಬರೂ ಹಳೆಯ ನೇಗಿಲ ಮೊನೆಯಲ್ಲಿ ಗುಂಡಿ ತೋಡಿ ತುಳಸಿ ಗಿಡ ನೆಡಲು ಸಿದ್ಧತೆ ನಡೆಸುತ್ತಿದ್ದಾರೆ. ಬದಿಯಲ್ಲಿ ಒಂದು ಚಿಕ್ಕ ಬುಟ್ಟಿಯಲ್ಲಿ ಬೂದಿ, ಬಳೆಚೂರುಗಳು, ಅದೂ ಇದೂ ಮಣಿ ಸರಕುಗಳೆಲ್ಲಾ ಇದ್ದವು!

ಇದೇನಿದೆಂದು ಕೇಳಿದರೆ, ಯಾರೋ ಶಾಲೆಯಲ್ಲಿ ಹೇಳಿದ್ದಂತೆ: ಹಿತ್ತಿಲಲ್ಲಿ ಗುಂಡಿ ತೋಡಿ, ಬೂದಿ, ಬಳೆಚೂರು ಮಣ್ಣು ಮಸಣ ಎಲ್ಲಾ ಹಾಕಿ ತುಳಸಿ ಗಿಡ ನೆಡಬೇಕಂತೆ. ಪ್ರತಿದಿನ ಬೆಳಿಗ್ಗೆ, ಸಂಜೆ ನೀರು ಹಾಕಬೇಕಂತೆ! ಒಂದು ವಾರ ಬಿಟ್ಟು ಗಿಡ ಅಗೆದರೆ ಅಡಿಯಲ್ಲಿ ಚಿನ್ನ ಸಿಗುತ್ತದಂತೆ! ನಾನು ನಕ್ಕು ಮನೆಗೆ ಹೋದೆ. ಇವರ ಚಿನ್ನದ ಬೇಸಾಯ ಮುಂದುವರಿದಿತ್ತು. ಪ್ರತೀ ನಿತ್ಯ ಬೆಳಿಗ್ಗೆ ಬೇಗನೇ ಎದ್ದು ನೀರು ಹಾಕುವುದು ನಡೆದೇ ಇತ್ತು.

ಒಂದು ವಾರ ಕಳೆಯಿತು. ನಾನು ಸಂಜೆ ಮನೆಗೆ ಬಂದು ನೋಡುತ್ತೇನೆ: ತಮ್ಮ, ತಂಗಿ, ತಂದೆ, ತಾಯಿ, ಅಜ್ಜಿಯಂದಿರು, ಎಲ್ಲಾ ಭಾರೀ ಖುಷಿಯಲ್ಲಿ ಇದ್ದಾರೆ! ಹಾಗೆ ಹೀಗೆ ಮಾತುಗಳು! ಏನೆಂದು ಕೇಳಿದರೆ, “ಚಿನ್ನ ಸಿಕ್ಕಿತು! ಮಕ್ಕಳಿಗೆ ಚಿನ್ನ ಸಿಕ್ಕಿತು!” ಎಂದರು ತಂದೆ! ಹೌದು! ಗಿಡವನ್ನು ಅಗೆದು ತೆಗೆದಾಗ ಮಕ್ಕಳಿಗೆ ಚಿನ್ನದ ಬೆಂಡೋಲೆಯೊಂದು ಸಿಕ್ಕಿತ್ತು. ಆದರೆ, ಅದು ಸ್ವಲ್ಪ ಕರಕಲಾಗಿತ್ತು. ಸಹಜವಾಗಿಯೇ ಅದು ಗಿಡದಲ್ಲಿ ಬೆಳೆದ ಚಿನ್ನವಾಗಿರದೆ, ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಚಿನ್ನದ ಬೆಂಡೋಲೆಗಳಲ್ಲಿ ಒಂದಾಗಿತ್ತು. ತಾಯಿಯ ಬಳಿ ಇದ್ದ ಎರಡು ಜೊತೆ ಬೆಂಡೋಲೆಗಳಲ್ಲಿ ಒಂದು ಜೊತೆ ಕಪಾಟಿನಲ್ಲಿ ಇತ್ತು. ಅದನ್ನವರು ಕಾಗದದಲ್ಲಿ ಸುತ್ತಿ ಇಟ್ಟಿದ್ದರಂತೆ. ಅದನ್ನು ಎಷ್ಟು ಹುಡುಕಿದರೂ, ಮನೆಯ ಬೂತಗಳಿಗೆ ಹರಕೆ ಹೊತ್ತರೂ ಅವು ಸಿಕ್ಕಿರಲಿಲ್ಲ. ಕಪಾಟಿನಿಂದ ಅದನ್ನು ಯಾರೂ ಕದ್ದೊಯ್ಯುವಂತೆಯೂ ಇರಲಿಲ್ಲ.

ನನ್ನ ತಂದೆ ಶೆರ್ಲಾಕ್ ಹೋಮ್ಸ್ ತರ ಲೆಕ್ಕಾಚಾರ ಹಾಕಿ ಒಂದು ವಿಶ್ಲೇಷಣೆ ಮಾಡಿದರು. ತಾಯಿ ಕಪಾಟು ತೆರೆದಾಗ ಅದು ಹೇಗೋ ಬೆಂಡೋಲೆ ಇದ್ದ ಕಾಗದದ ಪೊಟ್ಟಣ ಕೆಳಗೆ ಬಿದ್ದಿರಬೇಕು. ಗುಡಿಸುವಾಗ ಕಸದ ಜೊತೆಗೆ ಮನೆಯ ಒಲೆ ಸೇರಿರಬೇಕು. ಕೃಷಿಕರಾದ ನಮ್ಮ ಬಚ್ಚಲ ಪಕ್ಕದಲ್ಲೇ ದೊಡ್ಡ ಬೂದಿ ಗುಂಡಿ ಇತ್ತು. ಮನೆ ಒಲೆಗಳ ಬೂದಿ, ಬಚ್ಚಲು ಒಲೆಯ ಬೂದಿ, ಭತ್ತ ಬೇಯಿಸುವ ಒಲೆಗಳ ಬೂದಿ, ಎಮ್ಮೆ ದನ ಕೋಣಗಳಿಗೆ ಕಲಗಚ್ಚು ಕಾಯಿಸುವ ಒಲೆಯ ಬೂದಿ ಬಂದು ಸೇರುವುದು ಈ ಬೂದಿ ಗುಂಡಿಯನ್ನೇ. ಮಕ್ಕಳು ಗಿಡ ನೆಡುವಾಗ ಅಲ್ಲಿಂದ ತೆಗೆದು ಹಾಕಿದ ಬೂದಿಯಲ್ಲಿ ಈ ಬೆಂಡೋಲೆಯೂ ಇತ್ತು. ಇದು ಸರಿಯಾದ ವಿಶ್ಲೇಷಣೆ.

ಆದರೆ, ಅಗಾಧವಾದ ಬೂದಿ ರಾಶಿಯೊಳಗಿನಿಂದ ಮಕ್ಕಳು ತೆಗೆದ ಒಂದು ಚಿಕ್ಕ ಬುಟ್ಟಿ ಬೂದಿಯಲ್ಲೇ ಬೆಂಡೋಲೆ ಬರುವ ಸಾಧ್ಯತೆ ತೀರಾ ತೀರಾ ಕಡಿಮೆಯಾದುದರಿಂದ ಮುದುಕರೆಲ್ಲಾ ಅದರಲ್ಲೂ ಬೂತದ ಕಾರಣಿಕ ಹುಡುಕಿ, ಅದನ್ನೇ ನಂಬಿದರು. ನನ್ನ ದೊಡ್ಡ ಅಜ್ಜಿ ಹೋದದ್ದು ಹೋಯ್ತು, ಬಂದದ್ದು ಬಂತು ಎಂಬಂತೆ ಸಮಾಧಾನದಿಂದ ಇದ್ದರೂ, ಅಸಾಧ್ಯ ಪಿಟ್ಟಾಸಿಯಾದ ಚಿಕ್ಕ ಅಜ್ಜಿ ಆ ಬೂದಿ ಗುಂಡಿ ಜಾಲಾಡಿದರೂ ಇನ್ನೊಂದು ಬೆಂಡೋಲೆ ಸಿಗಲಿಲ್ಲ! ಮಕ್ಕಳು ಮತ್ತೆ ಗಿಡ ನೆಟ್ಟರೂ ಸಿಗಲಿಲ್ಲ.

ಮತ್ತೊಂದು ಘಟನೆ ಅದಕ್ಕಿಂತಲೂ ಮೊದಲು, ನಾನೇ ಮೂರನೆಯೋ, ನಾಲ್ಕನೆಯೋ ಕ್ಲಾಸಿನಲ್ಲಿ ಇದ್ದಾಗ ನಡೆದದ್ದು. ಒಂದು ಸಂಜೆ ನಾನು ಅಂಗಳದಲ್ಲಿ ಆಟವಾಡುತ್ತಾ ಇದ್ದೆ. ಅಲ್ಲೇ ಅಡುಗೆ ಮನೆ ಬಾಗಿಲ ಹೊರಗೆ ಇದ್ದ ತೆರೆದ ಜಾಗದಲ್ಲಿ ದೊಡ್ಡದೊಂದು ಅರೆಯುವ ಕಲ್ಲಿನಲ್ಲಿ ಅಕ್ಕಿ ಕಡೆಯುತ್ತಾ ತಾಯಿ ಮತ್ತು ಮೀನ್‌ದ ಅಬ್ಬ (ಮೀನಿನ ಅಜ್ಜಿ) ಪಟ್ಟಾಂಗದಲ್ಲಿ ತೊಡಗಿದ್ದರು. ಆಗ ಗದ್ದೆ ಕೆಲಸಕ್ಕೆ ತುಂಬಾ ಜನ ಬರುತ್ತಿದ್ದರಿಂದ ತುಂಬಾ ಅಕ್ಕಿ ಕಡೆಯಬೇಕಾಗಿತ್ತು.

ಇಲ್ಲಿ ಮೀನಿನ ಅಬ್ಬನ ಬಗ್ಗೆ ಕರಾವಳಿಯಲ್ಲಿ ಇದ್ದ ಒಂದು ರೀತಿಯ ಸೌಹಾರ್ದಕ್ಕೆ ಸಾಕ್ಷಿಯಾಗಿ ಎರಡು ಮಾತುಗಳನ್ನು ಬರೆಯಬೇಕು. ಅವರು ನಮ್ಮ ಸಂಬಂಧಿ ಅಲ್ಲ. ಉಪ್ಪಳ, ಮಂಜೇಶ್ವರ ಕಡೆಯ ಮೊಗವೀರರು. ತನಿಯಾರು ಎಂದವರ ಹೆಸರು. ಒಣ ಮೀನಿನ ಮಾರಾಟಕ್ಕೆ ಈ ಕಡೆ ಬಂದರೆ, ವಾರಗಳ ತನಕ ನಮ್ಮ ಮನೆಯಲ್ಲೇ ವಾಸ. ಬೆಳಗಾತ ಎದ್ದು ಸುತ್ತಲಿನ ಒಂದೊಂದೇ ಊರು ತಿರುಗಿ ಮೀನು ಮಾರಿ ಸಂಜೆ ಬರುತ್ತಿದ್ದರು. ಅವರು ಪಡೆದ ಅಕ್ಕಿ, ಮುಡಿಯಾಗಿ ನಮ್ಮ ಅಟ್ಟದಲ್ಲೇ ದಾಸ್ತಾನು. ಅದನ್ನು ನಂತರ ಪೇಟೆಯಲ್ಲಿ ಮಾರುತ್ತಿದ್ದರು. ಗಂಡ ಸತ್ತಿದ್ದರೂ ಬಾಯಿ ಬರದ ಮಗಳನ್ನು ಒಬ್ಬಂಟಿಯಾಗಿ ಸಾಕಿದ ಗಟ್ಟಿಗಿತ್ತಿ. ಬಹಳ ವಯಸ್ಸಾಗುವ ವರೆಗೂ ಬರುತ್ತಿದ್ದರು.

ಇರಲಿ, ಅಕ್ಕಿ ಕಡೆಯುತ್ತಿದ್ದ ತಾಯಿ ಮತ್ತು ಅವರ ಪಟ್ಟಾಂಗ ಕೇರೆ ಹಾವಿನ ಕಡೆ ಹರಿಯಿತು. ನನ್ನ ಕಿವಿ ನೆಟ್ಟಗಾಯಿತು. ಅವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು.

ತಾಯಿ: ಕೇರೆ ಹಾವನ್ನು ಮೊರಜ (ಬತ್ತದ ಹುಲ್ಲಿನ ಹಗ್ಗ), ಮಹಾರಾಜ ಎಂದೆಲ್ಲಾ ಕರೆಯುವುದು ಯಾಕೆ?

ಅಬ್ಬ: ಹಾಗೆಲ್ಲಾ ಹೆಸರು ಹಿಡಿದು ಕರೆದರೆ ಅದಕ್ಕೆ ಅವಮಾನವಾಗಿ ಹೋಗಿಬಿಡುತ್ತದೆ.

(ಆಗೆಲ್ಲಾ ಕೇರೆ ಮನೆಗೆ ಬಂದರೆ, ಜನರಿಗೆ ಕುಶಿ. ಇಲಿ ಕಾಟ ಕಡಿಮೆ ಆಗುತ್ತದೆ ಎಂದು. ನಿರುಪದ್ರವಿ ಕೇರೆಯನ್ನು ಯಾರು “ಕ್ಯಾರೆ?” ಎನ್ನುತ್ತಿರಲಿಲ್ಲ. ಆದರೆ ಕೇರೆ ಎಂದು ಹೆಸರು ಹೇಳಿ ಕರೆಯುತ್ತಿರಲಿಲ್ಲ!)

ತಾಯಿ: ಕೇರೆ ರಾತ್ರಿ ಹೊತ್ತು ಮನೆಯಲ್ಲಿ ನಿಲ್ಲುವುದಿಲ್ಲ ಅಲ್ಲವಾ?

ಅಬ್ಬ: ಅದಕ್ಕೆ ಮರ್ಯಾದೆ ಇಲ್ಲವಾ? ದಿನಕ್ಕೆ ಒಂದು ಮುಡಿ ಉಪ್ಪು ಖರ್ಚಾಗುವ ದೊಡ್ಡ ದೊಡ್ಡ ಮಹಾರಾಜ ಮನೆಯಲ್ಲಿ ಮಾತ್ರ ಅದು ರಾತ್ರಿ ನಿಲ್ಲುವುದು!

ತಾಯಿ: ಕೇರೆಗೆ ಹೆದರುವುದು ಯಾಕೆ ಅಲ್ವಾ? ಅದೇನೂ ಕಚ್ಚುವುದಿಲ್ಲ. ಕಚ್ಚಿದರೂ ವಿಷವೇನೂ ಇಲ್ಲ!

ಅಬ್ಬ: ಏನು?! ವಿಷ ಇಲ್ಲವ?! ಅದು ಕಚ್ಚುವುದಿಲ್ಲವ?! ಕಚ್ಚಿದರೆ ಮನುಷ್ಯ ಬದುಕುತ್ತಾನ?! ಕೇರೆ ಅಂದರೆ….

ಅವರು ಮಾತು ಮುಗಿಸುವ ಮೊದಲೇ ದೊಡ್ಡದೊಂದು ಕೇರೆ ಹಾವು ಮೇಲೆ ಮಾಡಿನಲ್ಲಿ ಓಡಾಡುತ್ತಿದ್ದದ್ದು ದೊಪ್ಪನೇ ಇವರ ಪಕ್ಕದಲ್ಲಿ ಬಿತ್ತು. ಕೇರೆ, ತಾಯಿ, ಅಬ್ಬ ಮೂವರೂ ಬದುಕಿದರೆ ಬೇಡಿ ತಿಂದೇವು ಎಂದು ಮೂರು ದಿಕ್ಕಿಗೆ ಓಡಿದರು. ನಾನು ಬಿದ್ದು ಬಿದ್ದು ನಕ್ಕು, ನಂತರ ಸರಿಯಾಗಿ ಬೈಗುಳ ತಿಂದೆ!

ಇವರು ಕೇರೆ ಹಾವಿನ ಬಗ್ಗೆ ಮಾತನಾಡುತ್ತಿರುವಾಗಲೇ ಅದು ಅವರ ಪಕ್ಕದಲ್ಲೇ ಉದುರಿ ಬೀಳುವುದು ಕಡಿಮೆ ಕಾಕತಾಳೀಯವೇ!?

ನಮ್ಮ ನಿತ್ಯ ಜೀವನದಲ್ಲಿ ನೂರಾರು ಕಾಕತಾಳೀಯಗಳು ನಡೆಯುತ್ತಿರುತ್ತವೆ. ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ಮಾತಾಡುತ್ತಲೋ, ಯೋಚಿಸುತ್ತಲೋ ಇರುತ್ತೀರಿ. ಟಿವಿಯಲ್ಲಿ ಪಕ್ಕನೇ ಅದುವೇ ಮಾತು ಬರುತ್ತದೆ! ಆದರೂ ನಾವು ಅದನ್ನು ಗಮನಿಸುವುದಿಲ್ಲ. ಹಾಳಾದ ಗಡಿಯಾರದಂತೆ ಯಾವುದೋ ಜ್ಯೋತಿಷಿ ಹೇಳಿದ್ದು ಒಂದೆರಡು ಸಲ ನಿಜವಾದರೆ ಅದನ್ನೇ ಪ್ರಚಾರ ಮಾಡುತ್ತೇವೆ. ನೂರು ಬಾರಿ ಸುಳ್ಳಾದರೂ ಪಾಠ ಕಲಿಯುವುದಿಲ್ಲ. ಒಂದು ವೇಳೆ ಕಲಿಯುತ್ತಿದ್ದರೆ ಟಿವಿಯಲ್ಲಿ ಬರುವ ಬ್ರಹ್ಮಾಂಡ ಜ್ಯೋತಿಷಿಗಳ ಒಂದು ಅಂಡವಾದರೂ ಉಳಿದಿರುತ್ತಿತ್ತೆ!? ಸುಳ್ಳುಗಳನ್ನು ನಂಬುವುದು ನಮಗೆ ಅಭ್ಯಾಸವಾಗಿದೆ, ರಕ್ತಗತವಾಗಿದೆ. ಹಾಗಾಗಿಯೇ ದೇಶದಲ್ಲಿ ಸುಳ್ಳರದ್ದೇ ಕಾರುಬಾರು ನಡೆಯುತ್ತಿದೆ. ಸತ್ಯ ನಮಗೆ ಬೇಕಾಗಿಲ್ಲ! ವಿಜ್ಞಾನದ ಲಾಭಗಳು ಬೇಕು, ವಿಜ್ಞಾನ ಬೇಕಾಗಿಲ್ಲ. ನಮಗೆ ಆಜ್ಞಾನದ ಕೊಳಚೆ ಗುಂಡಿಯೇ ಇಷ್ಟ!

ಕವಿ ಗೋಷ್ಠಿಯ ಅಧ್ಯಕ್ಷತೆಯಿಂದ ಹೊರಗೆ ಬಂದದ್ದು
ಕನ್ನಡಿಗರ ಪ್ರಾಧಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ ನಿಂದ ಜನರ ಹಣದಲ್ಲಿ ನಡೆಯುವ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಬಾ ಸಾಹೇಬರ ಆಶಯವಾದ ಸಮಾನತೆಗೆ ಮತ್ತು ವಿಶ್ವಮಾನವ ಕವಿ ಕುವೆಂಪು ಪ್ರತಿಪಾದಿಸಿದ ಸರ್ವಜನಾಂಗದ ಶಾಂತಿಯ ತೋಟಕ್ಕೆ ಅವಕಾಶ ಇಲ್ಲದಿರುವುದನ್ನು ಗಮನಿಸಿ ಅನೇಕ ಪ್ರಜ್ಞಾವಂತ ಮನಸುಗಳು ಆ ಸಮ್ಮೇಳನದಿಂದ ಹೊರಬಂದಿವೆ. ಹೀಗೆ ಹೊರ ಬಂದಿರುವವರಲ್ಲಿ ಬಹು ಮುಖ್ಯ ಹೆಸರು ಹೆಚ್. ಆರ್. ಸುಜಾತಾ ಅವರದು. ಅವರೇಕೆ ಹೊರಬಂದರು ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳಿ…

ನನ್ನ ಸ್ನೇಹಿತೆಯೊಬ್ಬರು ಆ ದಿನ ನನ್ನೊಡನೆ ಮಾತನಾಡಿ ಬಹಳ ಪ್ರೀತಿಯಿಂದ ಹಾವೇರಿ ಸಾಹಿತ್ಯ ಸಮ್ಮೇಳನದ ಮೂರು ಕವಿಗೋಷ್ಠಿಯಲ್ಲಿ ಒಂದು ಕವಿಗೋಷ್ಠಿಯೊಂದರ ಅಧ್ಯಕ್ಷರಾಗಿ ನೀವು ಬನ್ನಿ ಎಂದು ಕರೆದಾಗ ನಾನು ಏಳನೇ ತಾರೀಕಿನಂದು ಆಗಬಹುದು ಎಂದು ಹೇಳಿದ್ದು ನಿಜ. ಆದರೂ ಒಳಗೊಳಗೆ ಅನುಮಾನ ಇದ್ದುದೂ ನಿಜ. ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಇಂದಿನ ಸರ್ಕಾರದ ಜಾಳುಜಾಳಾದ ಧೋರಣೆಗಳನ್ನು ಮೀರಿ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಧರ್ಮದವರನ್ನು, ಒಳಗೊಂಡು ಭಿನ್ನಬೇಧವಿಲ್ಲದೆ ಪ್ರಬುದ್ಧತೆಯಿಂದ ಕಾರ್ಯಕ್ರಮವನ್ನು ನಿರ್ವಹಿಸುವರೇ? ಈಗಿನ ಅಧ್ಯಕ್ಷರು ರಾಜಕೀಯವನ್ನು ಮೀರಿ ಕನ್ನಡ ಸಾಹಿತ್ಯದ ತಿರುಳನ್ನು ಗಟ್ಟಿಗೊಳಿಸುವರೇ?’

ಸ್ನೇಹಿತೆ ಆಮಂತ್ರಿಸಿದವರ ಲಿಸ್ಟನ್ನು ನನಗೆ ಕಳಿಸುವೆ ಎಂದಿದ್ದ ಕಾರಣ ನಾನು ಅದನ್ನು ಮರೆತು ನನ್ನ ಊರಿನ ತಿರುಗಾಟವನ್ನು ಮುಗಿಸಿ ಬಂದಾಗ ಎರಡು ದಿನದಲ್ಲೇ ಆಮಂತ್ರಣ ಪತ್ರಿಕೆ ವಾಟ್ಸ್ಅಪ್ ಗೆ ಬಂದಿತ್ತು. ಅಂದು ಸೋಮವಾರ. ನಾನು ಆ ಆಮಂತ್ರಣ ಪತ್ರಿಕೆಯನ್ನು ಕಂಡಕೂಡಲೇ ಯೋಚಿಸತೊಡಗಿದೆ. ಒಂದೆಡೆ ನಾನು ಕೊಟ್ಟ ಒಪ್ಪಿಗೆ. ಇನ್ನೊಂದೆಡೆ ನಿರಾಕರಣೆಯ ಯೋಚನೆ. ಏನು ಮಾಡಲಿ? ಆಗ ಮನಸ್ಸು ಬಲವಾಗಿ ನಿಂತಿದ್ದು ನಿರಾಕರಣೆಯ ಕಡೆಗೆ….

ತಕ್ಷಣವೇ ಆಮಂತ್ರಣ ಪತ್ರಿಕೆಯಲ್ಲಿದ್ದ ನ್ಯೂನತೆಗಳನ್ನು ಅಧ್ಯಕ್ಷರಿಗೆ ಬರೆದು ತಿಳಿಸಿ ನಿರಾಕರಣೆಯ ಪತ್ರ ಬರೆದು ನಿರಾಳವಾದೆ. ಆ ನಂತರದ ನಾಲ್ಕು ದಿನ ಮಾಧ್ಯಮಗಳಲ್ಲಿ ಓಡಾಡುತ್ತಿದ್ದ ಪ್ರತಿರೋಧದ ಮಾತುಗಳನ್ನು ಕೇಳುತ್ತ ಸುಮ್ಮನಾದೆ. ಆಗ ನನ್ನ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನೋಡಿದ ಸ್ನೇಹಿತೆ ಜನವಾದಿಯ ಕೆ. ಎಸ್. ವಿಮಲ ಶುಕ್ರವಾರ ಮೆಸೇಜ್ ಮೂಲಕ ನನ್ನನ್ನು ಕೇಳಿದಳು. ‘ನಿನ್ನ ಹೆಸರನ್ನು ನೋಡಿ ಅಲ್ಲೇ ಕಣ್ಣು ಕೀಲಿಸಿತು’ ಎಂದು. ನಾನು, ನನ್ನ ನಿರಾಕರಣೆಯ ಪತ್ರದ ವಿಚಾರವನ್ನು ತಿಳಿಸಿದಾಗ ಅದನ್ನು ಆಕೆ ಗ್ರೂಪಲ್ಲಿ ಹಾಕಲಾಗಿ ಇದು ಪ್ರಚಾರಕ್ಕೂ ಬಂತು.

ಇನ್ನು ಮುಂದೆ ಯಾವುದೇ ಕಾರ್ಯಕ್ರಮ ಒಪ್ಪಿಕೊಳ್ಳುವಾಗ ಇಂಥ ಗೊಂದಲಗಳಿಂದ ದೂರವಿರಲು ಮೊದಲೇ ನಮ್ಮೊಡನೆ ಯಾರಿರುತ್ತಾರೆ ಅನ್ನುವುದನ್ನು ಗಮನಕ್ಕೆ ತಂದು ಒಪ್ಪಿಗೆ ನೀಡುವುದು ಸರಿ ಎಂದುಕೊಳ್ಳುತ್ತೇನೆ. ತರತಮದ ವಾತಾವರಣಕ್ಕಿಂತ ಎಲ್ಲರನ್ನೂ ಗೌರವಿಸುವ ಕಡೆಗೆ, ತರತಮವಿಲ್ಲದೆಡೆಗೆ ನಿಲುವಿರಬೇಕು ಎಂದು ನಿಶ್ಚಯಿಸಿದ್ದೇನೆ.

ನಮ್ಮ ನಡೆಗಳು ಪರಿಷತ್ತಿನಂಥ ಸಂಸ್ಥೆಯನ್ನು ಸ್ಥಾಪಿಸಿದವರ ಶ್ರಮ, ಹಂಬಲ, ಅದನ್ನು ಮುಂದುವರೆಸಿದವರ ಸದುದ್ದೇಶಗಳನ್ನು ಮರೆಯದಂತೆ, ಇದೇ ಸಂಸ್ಥೆಯಲ್ಲಿ ಮುಂದುವರೆಯಲು ಮುಂದಿನವರು ಮೂಗು ಮುರಿಯದಂತೆ ನಿರ್ವಹಿಸುವ ಜವಾಬ್ದಾರಿಯೂ ಇರುತ್ತದೆ ಎನ್ನುವ ನಂಬಿಕೆ ನನ್ನದು.

ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಇರಬೇಕಾದ ಸಕಾರಾತ್ಮಕ ನಡೆಗಳು :

೧. ನಾವು ಹಿಂದಿನಿಂದಲೂ ನೋಡಿಕೊಂಡು ಬಂದ ಗಂಭೀರವಾದ ಸಾಹಿತ್ಯ ಸಮ್ಮೇಳನಗಳು ಯಾವುದೇ ಇರಲಿ, ಸಾಹಿತಿಗಳನ್ನು ಹತ್ತಿರದಿಂದ ಕಾಣುವ, ಅವರ ಮಾತುಗಳನ್ನು ಮನಕ್ಕಿಳಿಸುವ ಹಾಗೂ ಅನನ್ಯ ವಿಚಾರಗಳನ್ನು ಅರಗಿಸಿಕೊಳ್ಳುವ ವೇದಿಕೆಯಾಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ.

೨. ದೂರದೂರದ ಸಾಹಿತಿಗಳನ್ನು ಸ್ನೇಹಿತರನ್ನು ಒಂದಾಗಿಸುವ, ಭೆಟ್ಟಿಯಾಗುವ ತಾಣವಾಗಿರುತ್ತವೆ.

೩. ಅತ್ಯಂತ ಗಂಭೀರ ಹಾಗೂ ಪ್ರಬುದ್ಧ ಯೋಚನಾಲಹರಿಯನ್ನು ಸಾಹಿತ್ಯ ಹುಟ್ಟು ಹಾಕಬಲ್ಲದು ಎನ್ನುವುದರಲ್ಲಿ ಎರಡು ಮಾತಿಲ್ಲ.
೪. ಎಷ್ಟೊಂದು ಪುಸ್ತಕಗಳನ್ನು ಕೊಳ್ಳುವ, ಹಾಗೂ ಪ್ರಕಟಣೆಗಳನ್ನು ಕಣ್ಣಾರೆ ಕಾಣುವ  ಅವಕಾಶ

೫.ಅವರವರ ಸಾಹಿತ್ಯಕ್ಕೆ ಸಂಬಂಧಿಸಿದ ಅನುಭವಗಳನ್ನು, ಆತಂಕಗಳನ್ನು ಹಂಚಿಕೊಳ್ಳುವ ಸಮಯವೂ ಹೌದು.

೬. ಸಾಹಿತಿಗಳ ಸಮ್ಮೇಳನದಲ್ಲಿ ಸಾಹಿತಿಗಳ ಚಹರೆಗಳು, ಅಲೋಚನಾಲಹರಿಗಳು ಹೇಗೆ ಸಾಮಾನ್ಯರಿಗಿಂತ ಭಿನ್ನವಾಗಿರುತ್ತವೆ, ಅವರು ಈ ನೆಲದ ಜನಪರ ಕಾಳಜಿಯ ಪ್ರಶ್ನೆಗಳನ್ನು ಪ್ರಭುತ್ವದ ಎದುರು ಹುಟ್ಟುಹಾಕುತ್ತಿರುತ್ತಾರೆ ಎಂಬುದೂ ನಿಜ !

ಆದರೆ ವರ್ತಮಾನದಲ್ಲಿ-

೧. ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯಕ್ಕೆ ಪೂರಕವಾಗಿರದೇ ಭಿನ್ನವಾಗಿ ಮತ್ತೇನೋ ಚಟುವಟಿಕೆಗಳಲ್ಲಿ ರಾಜಕೀಯವನ್ನು ಬೆರೆಸಿಕೊಂಡು, ಅಧ್ಯಕ್ಷ ಸ್ಥಾನ ಹಣ ಹಾಗೂ ಬಲ ಪ್ರದರ್ಶನದ ಪೀಠವಾಗಿ, ಆಸೆಬುರುಕರ, ಜೊಲ್ಲುಬಡುಕರ ಸ್ಥಾನವಾಗಿದೆ.
೨. ಮೂಲ ಉದ್ದೇಶ ಇಲ್ಲಿ ಮರೆಯಾಗಿದೆ ಎಂದರೂ ತಪ್ಪಾಗಲಾರದು. ಪುಸ್ತಕ ಪ್ರಕಟಣೆಯ ಕಡೆಯಂತೂ ಗಮನವೇ ಇಲ್ಲ.
೩. ದೌಡಾಯಿಸುತ್ತಿರುವ ಈ ಕಾಲಮಾನದಲ್ಲಿ ಸಾವಧಾನದ ಕಾಲವು ಅವಸರದ ಬೆನ್ನಿಗೇರಿ ನಿಂತಿರುವುದರಿಂದ ಹಳೆಯ ಜಾಡಿನಲ್ಲಿ ಸಾಗುತ್ತಿರುವ ಸಾಹಿತ್ಯ ಸಮ್ಮೇಳನ ಅರ್ಥ ಕಳೆದುಕೊಂಡಿದೆ.

೪. ನಮ್ಮ ಭೇಟಿಗಳಿಗೂ ಸಹ ಕಾಲವನ್ನೇ ನಿಗದಿಪಡಿಸುವ ಕಾಲವಿದು. ಯಾರ ಬಗ್ಗೆಯೂ ಯಾರಿಗೂ ಕುತೂಹಲವಾಗಲಿ,       ಅವಲೋಕನವಾಗಲಿ ಇಲ್ಲದಿರುವ ತಾಳ್ಮೆ ಯುವ ಜನತೆಯಲ್ಲಿ ಮರೆಯಾಗಿರುವುದೂ ಇದಕ್ಕೆ ಕಾರಣ.

೫. ಈಗ ತೆಳುವಾದ ವಿಚಾರ ವಿನಿಮಯ ಅಂಗೈ ಮೇಲಿನ ಮೊಬೈಲಿನಲ್ಲಿ ಬಂದು ಕೂತಿದೆ. ಗಂಭೀರ ಚಿಂತನೆ ಆಲೋಚನೆ ಇಳಿಮುಖವಾಗಿರುವುದು ಕೂಡಾ ಸಮ್ಮೇಳನಗಳ ಆಕರ್ಷಣೆ ಕುಂದಿಸಿದೆ ಎನ್ನಬಹುದು.

೬. ಜಾಗತೀಕರಣದ ಪ್ರಭಾವದಿಂದಾಗಿ ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಾಗಿ ಇಂಥ ಒಳಗೊಳ್ಳುವಿಕೆಗಳು ಸಾಹಿತ್ಯದಲ್ಲಿ ಹೊರತಾಗಿವೆ. ಸ್ಪರ್ಧೆಗಳು, ಸೋಲು, ಗೆಲುವು ಹಾಗೂ ವೈಯಕ್ತಿಕವಾಗಿ ನೆಲೆಗೊಳ್ಳುವ ಕಡೆಗೆ ಯುವ ಮನಸ್ಸು ತುಡಿಯುವುದಲ್ಲದೆ, ಸಾರ್ವತ್ರಿಕ ವಿದ್ಯಮಾನಗಳು ಮರೆಯಾಗಿ ವೈಯಕ್ತಿಕ ಹಂಬಲ ಮುಂದಾಗಿದೆ.

ಈ ಎಲ್ಲದರ ನಡುವೆಯೂ ಬದುಕು- ಬರಹ ಬೇರೆಯಲ್ಲ ಎಂಬ ನಂಬಿಕೆ, ತಮ್ಮೊಳಗನ್ನು ಎಲ್ಲರೊಳಗೊಂದಾಗಿಸುವ
ಸಾಹಿತ್ಯದ ಜವಾಬ್ದಾರಿ ಬಹು ದೊಡ್ಡದು. ಅದಕ್ಕಾಗಿ ದುಡಿಯುವ ಹಾವೇರಿ ಸಮ್ಮೇಳನದ ಉದ್ದೇಶಗಳು ತುಳು, ಕೊಂಕಣಿ ಹಾಗೂ ಇತರೆ ಅಕಾಡೆಮಿಗಳ ಜೊತೆ ಬ್ಯಾರಿ ಅಕಾಡೆಮಿಯನ್ನು ಒಳಗೊಂಡಿದ್ದರೆ, ಧರ್ಮ ಅಧರ್ಮಗಳನ್ನು ಮರೆತು ಭಿನ್ನಭೇಧವಿಲ್ಲದೆ ಅಪರೂಪದ ಸಾಹಿತಿಗಳೆಲ್ಲರನ್ನು ಸಮ್ಮೇಳನಕ್ಕೆ ಕರೆತಂದಿದ್ದರೆ ಅದು ಘನತೆಯಿಂದ ಜರುಗುತ್ತಿತ್ತೇನೋ….ಹಾಗೇ ನಡೆಯಬೇಕು ಎಂಬುದು ಎಲ್ಲರ ಆಶಯ. ಎಲ್ಲ ಸಮ್ಮೇಳನದಲ್ಲಿ ಹುಟ್ಟುವ ಇಂಥ ಭಿನ್ನಾಭಿಪ್ರಾಯಗಳು ನಮ್ಮ ಯುವ ಮನಸ್ಸುಗಳನ್ನು ಸಾಹಿತ್ಯದಿಂದ ದೂರವಾಗಿಸದಂತೆ ಒಳಗೊಳ್ಳುವ ಜವಾಬ್ದಾರಿ ಕೂಡಾ ನಮ್ಮ ಹೆಗಲ ಮೇಲಿದೆ.

ಇಂಥ ಸಮ್ಮೇಳನಗಳು ನವೀಕರಣಗೊಂಡು ಜನಪರ ಕಾಳಜಿಗಳನ್ನು, ಉತ್ಸಾಹದ ಯುವಮನಸ್ಸುಗಳನ್ನು ಕೂಡಿಕೊಂಡು ಹೆಜ್ಜೆ ಹಾಕಲಿ. ಕನ್ನಡವೆಂಬುದು ಭಾಷೆಯಲ್ಲ, ಮನಸ್ಸುಗಳ ಸಂಗಮ. ಹತ್ತಾರು ಕವಲುಗಳು ಸೇರಿದ ಈ ಮಣ್ಣೊಳಗೆ ಅರಳಿದ ಅನಾದಿ ಕಾಲದ ಮರ. ಬೇರುಗಳು ಆರೋಗ್ಯವಾಗಿದ್ದಲ್ಲಿ ಮಾತ್ರ ಕವಲೊಡೆದ ಕೊಂಬೆ, ಚಿಗುರು, ಹೂವು, ಹಣ್ಣು, ಹಕ್ಕಿ ಸಂಸಾರ. ಆಗಸಕ್ಕೆ ಚಿಗಿತ ಚಿಗುರು ಎಲೆಗಳು ತಮ್ಮ ಬೊಗಸೆಯಲ್ಲಿ ಮಳೆನೀರನ್ನಲ್ಲದೆ, ಇಬ್ಬನಿಯನ್ನೂ ಹಿಡಿದು ತನ್ನ ಬೇರಿಗೆ ಉಣಿಸುತ್ತವೆ ಎಂಬುದು ಸತ್ಯದರ್ಶನ.

ಇದರೊಡನೆ ನನ್ನ ತವರಿನ ನೆನಪೊಂದು ಒತ್ತಿ ಬರುತ್ತಿದೆ. ನಮ್ಮ ಹೊಲದ ಬದಿಯಲ್ಲೊಂದು ಹಳೆಯ ಹಲಸಿನ ಮರ. ಅದಕ್ಕೊಂದು ದೊಡ್ಡ ಪೊಟರೆ. ಪ್ರತಿ ವರ್ಷವೂ ಮರೆಯದೆ ನನ್ನಪ್ಪ ಅದಕ್ಕೆ ಕಲ್ಲು ತುಂಬಿಸಿ ಮಣ್ಣು ಒತ್ತರಿಸಿ ಬುಡವನ್ನು ಗಟ್ಟಿಗೊಳಿಸುತ್ತಿತ್ತು. ಮೇಲೆ ನೋಡಿದರೆ ಹಗ್ಗದಲ್ಲಿ ಇಳಿಸಬೇಕಾದ ದೊಡ್ಡ ದೊಡ್ಡ ಹಣ್ಣುಗಳು. ಅವನ್ನು ಜೋಕೇಲಿ ಇಳಿಸಿ ಬಚ್ಚಲುಮನೆಯ ಮೂಲೆಯಲ್ಲಿ ಒಟ್ಟು ಹಾಕಿರುತ್ತಿದ್ದರು. ನಾವು ಮಾತ್ರವಲ್ಲದೆ ಆಳುಕಾಳು, ಇಡೀ ಊರೇ ಬಂದು ಹಣ್ಣು ಕೊಯ್ದು ತಿನ್ನುತ್ತಿತ್ತು. ಅಟ್ಟಣಿಗೆಯ ಮೇಲೊಂದು ಕುಡಲು, ಎಣ್ಣೆ ಬಟ್ಟಲು ಇರುತಿತ್ತು. ಹಣ್ಣು ಕೊಯ್ದಾಗ ಒಸರುವ ಮೇಣವನ್ನು ಕೊಟ್ಟಿಗೆಯಲ್ಲಿನ ಹುಲ್ಲುತಂದು ಅಂಟು ಒರೆಸಿ ನೀರೊಲೆಗೆ ಎಸೆದರೆ ಮುಗಿಯಿತು. ಮಾತುಮಾತು, ಹಣ್ಣಿನ ಘಮ ಹಿಂದಿನ ಅರಿಯನ್ನು ತುಂಬಿರುತ್ತಿತ್ತು.

ಈಗ ಹೈವೇಗಳಲ್ಲಿ ಕಾಯಿಕಸಿಯನ್ನೇ ಕಿತ್ತು ತಂದು ಗುಡ್ಡೆಹಾಕಿ ಹಲಸು ಮಾರುವುದನ್ನು ಕಂಡಾಗ, ಹತ್ತಾರು ಹಲಸಿನ ಮರವಿದ್ದರೂ ಪೊಟರೆಯಾಗಿದ್ದ ಆ ಮರವನ್ನು ಕಾಪಾಡುತ್ತಿದ್ದ ಅಪ್ಪ, ಮನೆಮಕ್ಕಳನ್ನು ಮೀರಿ ಹೊಟ್ಟೆ ತುಂಬ ಹಣ್ಣು ತಿಂದು ಮಾತಾಡಿ ಹೋಗುತ್ತಿದ್ದ ನಮ್ಮವರೆಲ್ಲರ ನೆನಪಾಗುತ್ತದೆ. ನೆಲದಲ್ಲಿ ನಿಂತು ತಲೆಯೆತ್ತಿ ನೋಡಿದಾಗ ಆ ಹಳೆ ಮರದ ತುಂಬ ಹಣ್ಣನ್ನು ಕುಕ್ಕುತ್ತಿದ್ದ ಥರಥರದ ಹೊಸ ಹಕ್ಕಿಗಳು, ಕಾಗೆಗಳು. ಹಣ್ಣು ಕೊಯ್ದಾಗ ಮನೆ ಮನ ತುಂಬುತ್ತಿದ್ದ ಹಲಸಿನ ಸೇಡೆಗೆ ಮುಸುಮುಸನೆ ಸದ್ದು ಮಾಡುತ್ತಿದ್ದ ಕೊಟ್ಟಿಗೆಯ ದನಕರುಗಳು, ಎಷ್ಟೊಂದು ನಂಟು ಬಾಯಿ ತೆರೆಯುತ್ತಿದ್ದವು ನಮ್ಮೊಡನೆ. ಅಂಥ ಸಾವಯವ ಸಂಬಂಧವನ್ನು ಕಾಯುವಂಥ ತಾಳ್ಮೆ ಎಲ್ಲ ಸಾಹಿತ್ಯ ಸಮ್ಮೇಳನದಲ್ಲಿ ನಮಗೆ ಸಿಗಲಿ.

ಹೆಚ್. ಆರ್. ಸುಜಾತಾ

ಲೇಖಕರು, ಕವಿಗಳು, ಕಥೆಗಾರರು, ಅಂಕಣಕಾರರು.

ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಅನ್ನಿ ಎರ್ನಾಕ್ಸ್
ಸಾಹಿತ್ಯ ವಿಭಾಗದಲ್ಲಿ ೨೦೨೨ನೇ ಸಾಲಿನ ನೊಬೆಲ್‌ ಪ್ರಶಸ್ತಿಯು ಫ್ರೆಂಚ್‌ ಲೇಖಕಿ ಅನ್ನಿ ಥೆರೆಸ್‌ ಬ್ಲಾಂಚೆ ಎರ್ನಾಕ್ಸ್ ಮುಡಿಗೇರಿದೆ. ನೊಬೆಲ್‌ ಸಾಹಿತ್ಯ  ಪ್ರಶಸ್ತಿಯನ್ನು ಗೆದ್ದ ಈ ಮೊದಲ ಮಹಿಳೆಯನ್ನು ಪರಿಚಯಿಸಿದ್ದಾರೆ ಲೇಖಕಿ ಶ್ರೀದೇವಿ ಕೆರೆಮನೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಸಪ್ಟೆಂಬರ್ 1, 1940ರಂದು ಅಲ್ಫೋನ್ಸ್ ಹಾಗೂ ಬ್ಲಾಂಚೆ ಡುಚ್ನೆಸ್‍ರವರ ಮಗಳಾಗಿ ನಾರ್ಮಂಡಿಯ ಜರ್ಮನ್ ಆಕ್ರಮಿತ ಫ್ರಾನ್ಸ್‌ನ ಲಿಲ್ಲೆಬೋನ್‍ನಲ್ಲಿ ಜನಿಸಿದ ಅನ್ನಿ ಥೆರೆಸ್ ಬ್ಲಾಂಚೆ ಡುಚೆಸ್ನೆ ಒಬ್ಬರು ಫ್ರೆಂಚ್ ಬರೆಹಗಾರ್ತಿ, ಸಾಹಿತ್ಯದ ಪ್ರಾಧ್ಯಾಪಕಿ. ಇವರ ಜನನವಾದ ಕೆಲವು ವರ್ಷಗಳ ನಂತರ ಲಿಲ್ಲೆಬೋನ್ ಹತ್ತಿರದ ಯ್ವೆಟಾಟ್ ಪ್ರದೇಶಕ್ಕೆ ಸ್ಥಳಾಂತರಗೊಂಡ ಅವರ ಪೋಷಕರು ಪಟ್ಟಣದ ಕಾರ್ಮಿಕ ವರ್ಗದ ಭಾಗದಲ್ಲಿ ಕೆಫೆ ಕಮ್ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು. ಯ್ವೆಟಾಟ್‍ನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆಯುವಾಗಲೇ ಕಾರ್ಮಿಕ ವರ್ಗದಿಂದ ಬಂದಂತಹ ಹೆಣ್ಣುಮಕ್ಕಳು ಅನುಭವಿಸಬೇಕಾದ ಅವಮಾನ ಎಂತಹುದು ಎಂಬುದನ್ನು ಅರಿತುಕೊಂಡ ಇವರು ಅದನ್ನು ಮೆಟ್ಟಿ ಮುಂದುವರೆಯಲು ನಿರ್ಧರಿಸಿದ್ದು ಆಗಲೇ. 1958ರಲ್ಲಿ ಅಂದರೆ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿಯೇ ಬೇಸಿಗೆ ಶಿಬಿರದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕಾಗಿ ಮನೆಯನ್ನು ತೊರೆದು ತಮ್ಮದೆ ವಯಸ್ಸಿನ ಮಕ್ಕಳೊಡನೆ ವಾಸಿಸಲಾರಂಭಿಸಿದರು. ಆ ಸಮಯದಲ್ಲಿಯೇ ತಮ್ಮ ಮೊದಲ ಲೈಂಗಿಕ ಅನುಭವವನ್ನು ಪಡೆದಿದ್ದಾಗಿ ತಮ್ಮ ಇತ್ತೀಚಿನ ಕೃತಿ ಎ ಗರ್ಲ್ಸ್‌ ಸ್ಟೋರಿ (ಮೆಮೊಯಿರ್ ಡಿ ಫಿಲ್ಲೆ-೨೦೧೬) ನಲ್ಲಿ ಹೇಳಿಕೊಂಡಿದ್ದಾರೆ.

1960ರಲ್ಲಿ ಲಂಡನ್‍ಗೆ ಪ್ರಯಾಣ ಬೆಳೆಸಿದ ಅವರು ಅಲ್ಲಿ  ಔ ಫೇರ್ (ಮನೆಗೆಲಸ, ಮಕ್ಕಳನ್ನು ನೋಡಿಕೊಳ್ಳುವುದು, ಆಹಾರ ಸರಬರಾಜು ಮಾಡುವುದು ಮುಂತಾದ ಕೆಲಸಗಳು) ಆಗಿ ಕೆಲಸ ಪ್ರಾರಂಭಿಸಿದರಾದರೂ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ರೂಯೆನ್ ಮತ್ತು ನಂತರ ಬೋರ್ಡೆಕ್ಸ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ  ಶಾಲಾ-ಶಿಕ್ಷಕಿಯಾಗುವ ತರಬೇತಿಯನ್ನು ಮುಗಿಸಿ ಅರ್ಹತೆ ಪಡೆದರು. ಅದೇ ವರ್ಷದ ಕೊನೆಗೆ ಫಿಲಿಪ್ ಎರ್ನಾಕ್ಸ್ ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಗಾಗಿ ದಂಪತಿಗಳು 1980 ರ ದಶಕದ ಆರಂಭದಲ್ಲಿ ಬೇರ್ಪಟ್ಟರು.

1970 ರ ದಶಕದ ಆರಂಭದಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. 1971ರಲ್ಲಿ ಆಧುನಿಕ ಸಾಹಿತ್ಯದಲ್ಲಿ ಉನ್ನತ ಪದವಿಯನ್ನು ಗಳಿಸಿದರು. ಪೆಂಟೊಯಿಸ್‍ನಲ್ಲಿ ರಾಷ್ಟ್ರೀಯ ದೂರ ಶಿಕ್ಷಣ ಕೇಂದ್ರಕ್ಕೆ ಸೇರುವ ಮೊದಲು 23 ವರ್ಷಗಳ ಕಾಲ ಅಲ್ಲಿಯೇ ಕೆಲಸ ಮಾಡಿದರು. ಆಸಮಯದಲ್ಲಿಯೇ ತಮ್ಮ ಮೊದಲ ಕಾದಂಬರಿಯ ಬರವಣಿಗೆಯನ್ನು ಪ್ರಾರಂಭಿಸಿದರು.

ಸಾಹಿತ್ಯಿಕ ಜೀವನ..

ಅನ್ನಿ ಎರ್ನಾಕ್ಸ್ 1974ರಲ್ಲಿ ʼಕ್ಲೀನ್ಡ್ ಔಟ್ʼ ಎಂಬ ಆತ್ಮಚರಿತ್ರೆಯ ಕಾದಂಬರಿಯನ್ನು ಬರೆಯುವ ಮೂಲಕ ತಮ್ಮ ಸಾಹಿತ್ಯಿಕ ಜೀವನವನ್ನು ಪ್ರಾರಂಭಿಸಿದರು. 1984ರಲ್ಲಿ ಲಾ ಪ್ಲೇಸ್ ( ಎ ಮ್ಯಾನ್ಸ್ ಪ್ಲೇಸ್ ) ಗೆ ರೆನಾಡಾಟ್ ಪ್ರಶಸ್ತಿಯನ್ನು ಪಡೆದುಕೊಂಡರು. ಇದು ತಮ್ಮ ತಂದೆಯೊಂದಿಗಿನ ಸಂಬಂಧ ಮತ್ತು ಫ್ರಾನ್ಸ್ ನ ಸಣ್ಣ ಪಟ್ಟಣದಲ್ಲಿ ಬೆಳೆದ ಅವರ ಅನುಭವಗಳ ಮೇಲೆ ಮತ್ತು ಅವರ ನಂತರದ ಪ್ರೌಢಾವಸ್ಥೆ ಮತ್ತು ಪೋಷಕರಿಂದ ದೂರವಾಗುವಂತಹ ಹಲವಾರು ಸನ್ನಿವೇಶಗಳನ್ನು ಕೇಂದ್ರೀಕರಿಸುವ ಆತ್ಮಚರಿತ್ರೆಯ ನಿರೂಪಣೆಯಾಗಿದೆ.

ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ಕಾಲ್ಪನಿಕ ಕಥೆಯಿಂದ ಆತ್ಮಚರಿತ್ರೆಯತ್ತ ಗಮನ ಹರಿಸಿದರಾದರೂ ಅವರ ಬರಹಗಳಲ್ಲಿರುವ ಐತಿಹಾಸಿಕ ಮತ್ತು ವೈಯಕ್ತಿಕ ಅನುಭವಗಳ ಸಂಯೋಜನೆ ವಿಶಿಷ್ಟ ಹೊಳಹನ್ನು ನೀಡುತ್ತದೆ. ತಮ್ಮ ಹೆತ್ತವರ ಸಾಮಾಜಿಕ ನಡುವಳಿಕೆಗಳು ಹಾಗೂ ಸಂಬಂಧಗಳು, ತಮ್ಮ ಹದಿಹರೆಯದ ನೆನಪುಗಳು, ಅವರ ಮದುವೆ, ಯುರೋಪಿಯನ್ ವ್ಯಕ್ತಿಯೊಂದಿಗೆ ಅವರ ಭಾವೋದ್ರಿಕ್ತ ಸಂಬಂಧ , ಅವರ ಗರ್ಭಪಾತ, ಆಲ್ಝೈಮರ್ನ ಕಾಯಿಲೆ, ಅವಳ ತಾಯಿಯ ಸಾವು, ಸ್ತನ ಕ್ಯಾನ್ಸರ್ ಇತ್ಯಾದಿಗಳ  ಮೇಲೆ ಬರೆದರು.

ಎ ವುಮನ್ಸ್ ಸ್ಟೋರಿ, ಎ ಮ್ಯಾನ್ಸ್ ಪ್ಲೇಸ್, ಮತ್ತು ಸಿಂಪಲ್ ಪ್ಯಾಶನ್ ಅನ್ನು ದಿ ನ್ಯೂಯಾರ್ಕ್ ಟೈಮ್ಸ್ ಅತ್ಯಂತ ಮಹತ್ವದ ಕೃತಿಗಳು ಎಂದು ಗುರುತಿಸಿತು. ಎ ವುಮನ್ಸ್ ಸ್ಟೋರಿ ಲಾಸ್ ಏಂಜಲೀಸ್ ಟೈಮ್ಸ್ ಬುಕ್ ಪ್ರೈಜ್‍ನ ಕೊನೆಯ ಹಂತ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು. 1998ರ ಪಬ್ಲಿಷರ್ಸ್ ವೀಕ್ಲಿಯು ಶೇಮ್ ಕೃತಿಯನ್ನು ಬೆಸ್ಟ್ ಬುಕ್ ಎಂದು ಹೆಸರಿಸಿತು.  ʼಐ ರಿಮೇನ್ ಇನ್ ಡಾರ್ಕ್‌ ನೆಸ್ ಎ ಟಾಪ್ ಮೆಮೊಯಿರ್ ಆಫ್ 1999ʼ ಕೃತಿಯನ್ನು ದಿ ವಾಷಿಂಗ್ಟನ್ ಪೋಸ್ಟ್ ಮತ್ತು ʼದಿ ಪೊಸೆಷನ್ʼ ಅನ್ನು ಮೋರ್ ಮ್ಯಾಗಜೀನ್ 2008 ರ ಟಾಪ್ ಟೆನ್ ಬುಕ್ ಎಂದು ಪಟ್ಟಿ ಮಾಡಿದೆ.

ಅವರ 2008 ರ ಐತಿಹಾಸಿಕ ಆತ್ಮಚರಿತ್ರೆ ʼದ ಇಯರ್ಸ್ʼ  (ಲೆಸ್ ಅನ್ನೀಸ್)  ಫ್ರೆಂಚ್ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು, ಇದನ್ನು ಅನೇಕರು ಅವರ ಅತ್ಯಂತ ಮಹತ್ವದ ಕೃತಿ ಎಂದು ಪರಿಗಣಿಸಿದ್ದಾರೆ.  ಈ ಪುಸ್ತಕದಲ್ಲಿ, ಎರ್ನಾಕ್ಸ್ ತಮ್ಮ ಬಗ್ಗೆ ಮೊದಲ ಬಾರಿಗೆ ಮಧ್ಯಮ ಪುರುಷದಲ್ಲಿಟ್ಟು (‘ಎಲ್ಲೆ’ ಅಥವಾ ಇಂಗ್ಲಿಷ್‍ನಲ್ಲಿ ‘ಆಕೆ’) ಬರೆದಿದ್ದಾರೆ. ಇದು ಎರಡನೇ ವಿಶ್ವಯುದ್ಧದ ನಂತರ 2000ರ ದಶಕದ ಆರಂಭದವರೆಗೆ ಫ್ರೆಂಚ್ ಸಮಾಜದ ಮೇಲೆ ಎದ್ದುಕಾಣುವ ನೋಟವನ್ನು ನೀಡುತ್ತದೆ.  ಇದು ಮಹಿಳೆಯ ಕಥೆಯಷ್ಟೇ ಆಗಿರದೆ ಅವಳು ವಾಸಿಸುತ್ತಿದ್ದ ಸಮಾಜದ ಕಥೆಯಾಗಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

ʼದಿ ಇಯರ್ಸ್ʼ ಕೃತಿಯು 2008  ಮಾರ್ಗುರೈಟ್ ಡುರಾಸ್ ಪ್ರಶಸ್ತಿ, 2008‌ ರ ಪ್ರಿಕ್ಸ್ ಡಿ ಲಾ ಲಾಂಗ್ಯೂ ಫ್ರಾಂಚೈಸ್ , 2009 ರ ಟೆಲಿಗ್ರಾಮ್ ರೀಡರ್ಸ್ ಪ್ರಶಸ್ತಿ ಮತ್ತು 2016 ಸ್ಟ್ರೆಗಾ ಯುರೋಪಿಯನ್ ಪ್ರಶಸ್ತಿ, 31 ನೇ ವಾರ್ಷಿಕ ಫ್ರೆಂಚ್-ಅಮೇರಿಕನ್ ಫೌಂಡೇಶನ್ ಅನುವಾದ ಪ್ರಶಸ್ತಿಗೆ ಅಲಿಸನ್ ಎಲ್ ಸ್ಟ್ರೇಯರ್ ಅನುವಾದಿಸಿದ ʼದಿ ಇಯರ್ಸ್ʼ ಕೃತಿ ಅಂತಿಮ ಸ್ಪರ್ಧಿಯಾಗಿತ್ತು ಮತ್ತು 2019 ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಅದು  ಅನುವಾದದಲ್ಲಿ ಮಹಿಳೆಯರಿಗಾಗಿ ಕೊಡಮಾಡುವ 2019 ವಾರ್ವಿಕ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಒಟ್ಟಾರೆಯಾಗಿ ತಮ್ಮ ಸಾಹಿತ್ಯಿಕ ಔಟ್‍ಪುಟ್‍ಗಾಗಿ ಪ್ರೀಮಿಯೊ ಹೆಮಿಂಗ್‍ವೇ ಪ್ರಶಸ್ತಿಯನ್ನು ಪಡೆದಿರುವುದು ಗಣನೀಯ ಸಾಧನೆ. 2019ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳ ಸರಮಾಲೆಯನ್ನೇ ಮುಡಿಗೇರಿಸಿಕೊಂಡಿರುವ ಇವರಿಗೆ 6 ಅಕ್ಟೋಬರ್ 2022ರಂದು 2022 ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ನೊಬೆಲ್‌ ಪ್ರಶಸ್ತಿ ಎಂದರೆ..

ಆಲ್ಫ್ರೆಡ್ ನೊಬೆಲ್ ಅವರು ತಮ್ಮ ಕೊನೆಯ ಉಯಿಲಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ, ಶರೀರಶಾಸ್ತ್ರ ಅಥವಾ ಔಷಧ ಮತ್ತು ಸಾಹಿತ್ಯದಲ್ಲಿ “ಮನುಕುಲಕ್ಕೆ ಹೆಚ್ಚಿನ ಪ್ರಯೋಜನವನ್ನು” ನೀಡುವವರಿಗೆ ಬಹುಮಾನಗಳ ಸರಣಿಯನ್ನು ರಚಿಸಲು ತನ್ನ ಹಣವನ್ನು ಬಳಸಬೇಕೆಂದು ಷರತ್ತು ವಿಧಿಸಿದರು. ನೊಬೆಲ್ ತಮ್ಮ ಜೀವಿತಾವಧಿಯಲ್ಲಿ ಹಲವಾರು ಉಯಿಲುಗಳನ್ನು ಬರೆದರೂ, ಕೊನೆಯದನ್ನು ಅವರು ಸಾಯುವ ಒಂದು ವರ್ಷದ ಮೊದಲು ಬರೆದು 27 ನವೆಂಬರ್ 1895 ರಂದು ಪ್ಯಾರಿಸ್‍ನಲ್ಲಿರುವ ಸ್ವೀಡಿಷ್-ನಾರ್ವೇಜಿಯನ್ ಕ್ಲಬ್‍ನಲ್ಲಿ ಸಹಿ ಹಾಕಿದರು. ನೊಬೆಲ್ ಐದು ನೊಬೆಲ್ ಪ್ರಶಸ್ತಿಗಳನ್ನು ಸ್ಥಾಪಿಸಲು ಮತ್ತು ನೀಡಲು ತನ್ನ ಒಟ್ಟು ಆಸ್ತಿಯ 94%  ಅಂದರೆ 31 ಮಿಲಿಯನ್ ಸ್ವೀಡಿಷ್ ಕ್ರೋನರ್ ಬಳಸಲು ಅನುಮತಿ ನೀಡಿದ್ದರು.

ಪ್ರತಿ ವರ್ಷ, ಸ್ವೀಡಿಷ್ ಅಕಾಡೆಮಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗಾಗಿ ಅಭ್ಯರ್ಥಿಗಳ ನಾಮನಿರ್ದೇಶನಗಳಿಗಾಗಿ ವಿನಂತಿಗಳನ್ನು ಕಳುಹಿಸುತ್ತದೆ. ಅಕಾಡೆಮಿಯ ಸದಸ್ಯರು, ಸಾಹಿತ್ಯ ಅಕಾಡೆಮಿಗಳು ಮತ್ತು ಸಮಾಜಗಳ ಸದಸ್ಯರು, ಸಾಹಿತ್ಯ ಮತ್ತು ಭಾಷೆಯ ಪ್ರಾಧ್ಯಾಪಕರು, ಮಾಜಿ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತರು ಮತ್ತು ಬರಹಗಾರರ ಸಂಘಟನೆಗಳ ಅಧ್ಯಕ್ಷರು ಹೀಗೆ ಬಹಳಷ್ಟು ಜನರಿಗೆ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ. ಸ್ವತಃ ನಾಮನಿರ್ದೇಶನ ಮಾಡಲು ಅನುಮತಿ ಇಲ್ಲ.

ಸ್ವೀಡಿಷ್ ಅಕಾಡೆಮಿಯು ಜೀವಿತಾವಧಿ ಚುನಾಯಿತರಾದ 18 ಸದಸ್ಯರನ್ನು ಹೊಂದಿದೆ. 2018ರವರೆಗೆ ಯಾರಿಗೂ ತಾಂತ್ರಿಕವಾಗಿ ಹೊರಹೋಗಲು ಅನುಮತಿಯಿರಲಿಲ್ಲ. 2 ಮೇ 2018 ರಂದು ಕಿಂಗ್ ಕಾರ್ಲ್ ಗುಸ್ತಾಫ್ ಅಕಾಡೆಮಿಯ ನಿಯಮಗಳನ್ನು ತಿದ್ದುಪಡಿ ಮಾಡಿ ಸದಸ್ಯರು ರಾಜೀನಾಮೆ ನೀಡಲು ಅವಕಾಶ ನೀಡಿದರು. ಎರಡು ವರ್ಷಕ್ಕಿಂತ ಹೆಚ್ಚು ಕಾಲ ಅಕಾಡೆಮಿಯ ಕೆಲಸದಲ್ಲಿ ನಿಷ್ಕ್ರಿಯರಾಗಿರುವ ಸದಸ್ಯರಿಗೆ ರಾಜೀನಾಮೆ ನೀಡುವಂತೆಯೂ ಹೊಸ ನಿಯಮಗಳಲ್ಲಿ ಹೇಳಲಾಗಿದೆ. ನೊಬೆಲ್ ಸಮಿತಿಯ ಸದಸ್ಯರು ಅಕಾಡೆಮಿಯ ಸದಸ್ಯರಲ್ಲಿ ಮೂರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ ಮತ್ತು ವಿಶೇಷವಾಗಿ ನೇಮಕಗೊಂಡ ಪರಿಣಿತ ಸಲಹೆಗಾರರಿಂದ ಸಹಾಯ ಪಡೆಯುತ್ತಾರೆ.

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ..

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯು 1901 ರಿಂದ ಪ್ರತಿವರ್ಷ ಯಾವುದೇ ದೇಶದ ಲೇಖಕರಿಗೆ ನೀಡಲಾಗುವ ಸ್ವೀಡಿಷ್ ಸಾಹಿತ್ಯ ಪ್ರಶಸ್ತಿಯಾಗಿದ್ದು ಸ್ವೀಡಿಷ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ, ಆದರ್ಶವಾದಿ ದಿಕ್ಕಿನಲ್ಲಿ ಅತ್ಯುತ್ತಮ ಕೆಲಸ ಮಾಡಿದ ಲೇಖಕರಿಗೆ ನೀಡಲಾಗುತ್ತದೆ.  ಕೆಲವೊಮ್ಮೆ ವೈಯಕ್ತಿಕ ಕೃತಿಗಳನ್ನು ವಿಶೇಷವಾಗಿ ಗಮನಾರ್ಹವೆಂದು ಉಲ್ಲೇಖಿಸಲಾಗಿದೆಯಾದರೂ, ಪ್ರಶಸ್ತಿಯು ಒಟ್ಟಾರೆಯಾಗಿ ಲೇಖಕರ ಕೃತಿಯ ಮೇಲೆ ಆಧಾರಿತವಾಗಿದೆ. ಸ್ವೀಡಿಷ್ ಅಕಾಡೆಮಿ ಇದನ್ನು ತೀರ್ಮಾನಿಸುವ ಹಕ್ಕನ್ನು ಪಡೆದಿದೆ. ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಇದನ್ನು ಘೋಷಿಸಲಾಗುತ್ತದೆ. 1901 ರಲ್ಲಿ, ಫ್ರೆಂಚ್ ಕವಿ ಮತ್ತು ಪ್ರಬಂಧಕಾರ ಸುಲ್ಲಿ ಪ್ರುದೊಮ್ಮೆ (1839-1907) ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಸಾಹಿತಿ.

ಈ ನಿಟ್ಟಿನಲ್ಲಿ ನೋಡಿದೆರೆ ನೊಬೆಲ್ ಪಡೆದವರಲ್ಲಿ ಎರ್ನಾಕ್ಸ್ 16ನೇ ಫ್ರೆಂಚ್ ಸಾಹಿತಿಯಾದರೂ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಮೊದಲ ಫ್ರೆಂಚ್ ಮಹಿಳೆ. ಅವರ  ಕಲೆಕ್ಟಿವ್ ಆಟೋಬಯಾಗ್ರಫಿ (Les Annees) ಗೆ ಅಂದರೆ ಅವರ ಸಮಗ್ರ ಆತ್ಮಚರಿತ್ರೆಗೆ ನೊಬೆಲ್ ಬಹುಮಾನ ದೊರೆತಿದೆ. ಅವರನ್ನು ಅಭಿನಂದಿಸುತ್ತಾ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್  ಅವರು “ಮಹಿಳೆಯರ ಮತ್ತು ಮರೆತು ಹೋದವರ ಸ್ವಾತಂತ್ರ್ಯದ ಧ್ವನಿ” ಎಂದು ಹೇಳಿರುವುದು ಎರ್ನಾಕ್ಸ್‌ ಗೆ ಸಂದ ಮತ್ತೊದು ಹೆಮ್ಮೆಯ ಗರಿ ಎಂದೇ ಹೇಳಬಹುದು.

ಶ್ರೀದೇವಿ ಕೆರೆಮನೆ
ವೃತ್ತಿಯಿಂದ ಫ್ರೌಢ ಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ.