lokasabha – Peepal Media

ಇಂಡಿಯಾ ಕೂಟ ಗೆಲ್ಲಲಿದ್ದು, 48 ಗಂಟೆಯಲ್ಲಿ ಹೊಸ ಪ್ರಧಾನಿ ಆಯ್ಕೆ: ಜೈರಾಮ್ ರಮೇಶ್
ನವದೆಹಲಿ:  ಇನ್ನೇನು ಫಲಿತಾಂಶದ ನಿರೀಕ್ಷೆಯಲ್ಲಿರುವ ಲೋಕಸಭಾ ಚುನಾವಣೆಯು ಈ ಸಲ ನಿರ್ಣಾಯಕ ಜನಾಭಿಪ್ರಾಯ ಪಡೆಯಲಿದೆ. ಇಂಡಿಯಾ ಕೂಟ ಆಧಿಕಾರ ಹಿಡಿಯಲಿದ್ದು,  48 ಗಂಟೆಯಲ್ಲಿ ‍ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟವು ಸರಳ ಬಹುಮತಕ್ಕೆ ಅಗತ್ಯ ಇರುವ 272ಕ್ಕಿಂತ ಅಧಿಕ ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಇಂಡಿಯಾ ಒಕ್ಕೂಟದ ಪಕ್ಷದ ಪರವಾಗಿ ಜನಾಭಿಪ್ರಾಯ ಇರಲಿದೆ. ಎನ್‌ಡಿಎ ಮೈತ್ರಿಕೂಟದ ಕೆಲವೊಂದು ಪಕ್ಷಗಳು ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಂಪರ್ಕದಲ್ಲಿವೆ. ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

‘2004ರಲ್ಲಿ ಬಿಜೆಪಿ  ಭಾರತ ಪ್ರಕಾಶಿಸಲಿದೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿತು. ಆಗ ಕಾಂಗ್ರೆಸ್ ಗೆಲುವು ಸಾಧಿಸಿ ಮೈತ್ರಿ ಸರ್ಕಾರ ರಚಿಸಿತ್ತು. 2024ರಲ್ಲಿ ಅದೇ ಪುನರಾವರ್ತನೆಯಾಗಲಿದೆ. ರಾಜಸ್ಥಾನ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಸೀಟುಗಳಿಕೆ ಹೆಚ್ಚಳವಾಗಲಿದೆ. ಛತ್ತೀಸಗಢ, ಮಧ್ಯಪ್ರದೇಶ ಹಾಗೂ ಅಸ್ಸಾಂನಲ್ಲೂ ನಮಗೆ ಹೆಚ್ಚು ಸೀಟುಗಳು ಲಭಿಸುವ ನಿರೀಕ್ಷೆ ಇದೆ.   ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಸೀಟು ಗಳಿಕೆ ಹೆಚ್ಚಳವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬಿಜೆಪಿ 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ. ಪಶ್ಚಿಮ ಬಂಗಾಳದಲ್ಲೂ ಅವರ ಗಳಿಕೆ ಕಡಿಮೆಯಾಗಲಿದೆ ಎಂದರು.

ಕಾಂಗ್ರೆಸ್‌ ಮುಖಂಡರು ಸಂಪರ್ಕಿಸಿದ್ದಾರೆ, ನಾಳೆ ನಿರ್ಧಾರ ತಿಳಿಸುತ್ತೇನೆ: ಡಿವಿಎಸ್
​ಬೆಂಗಳೂರು: ಕಾಂಗ್ರೆಸ್‌ ವರಿಷ್ಠರು ನನಗೆ ಕರೆ ಮಾಡಿದ್ದರು,  ನನ್ನ ನಿರ್ಧಾರವನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿದ್ದೇನೆ ಎಂದು ಬಿಜೆಪಿಯಿಂದ ಟಿಕೇಟ್‌ ವಂಚಿತರಾದ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಅವರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದೆ.  ಬಿಜೆಪಿಯ ಕೆಲವು ನಾಯಕರೇ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಹಾಗಾಗಿ  ತಾವೂ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡಿದ್ದೆ. ಆದರೆ ಬಿಜೆಪಿಯಿಂದ ನನಗೆ ಟಿಕೇಟ್‌ ಸಿಗದೇ ಮೋಸವಾಗಿದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಘೋಷಿಸಿದ ಬೆನ್ನಲ್ಲೇ ಸದಾನಂದಗೌಡರು ಮುನಿಸಿಕೊಂಡಿದ್ದರು.  ‘ತಮಗೆ ಟಿಕೆಟ್‌ ತಪ್ಪಿದ ಕಾರಣ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ದೂರಿದ್ದ ಗೌಡರು, ಇದೀಗ ತಮ್ಮ ಮುಂದಿನ ರಾಜಕೀಯ ನಡೆಯನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ.

‘ಬಿಜೆಪಿ ನಾಯಕರು ನಿನ್ನೆ ನನ್ನ ಮನೆಗೆ ಬಂದಿದ್ದರು. ನನ್ನ ಮನವೊಲಿಸಲು ಪ್ರಯತ್ನಿಸಿದರು. ನನ್ನ ಕುಟುಂಬದ ಸದಸ್ಯರ ಮತ್ತು ಕಾರ್ಯಕರ್ತರ ಜೊತೆ ಸದಸ್ಯರ ಜತೆ ಚರ್ಚೆ ನಡೆಸಬೇಕಾಗಿದೆ. ಕಾಂಗ್ರೆಸ್‌ ನಾಯಕರೂ ನನ್ನನ್ನು ಸಂಪರ್ಕಿಸಿದ್ದರು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನನಗೆ ಟಿಕೇಟ್‌ ತಪ್ಪಿಸಿದ್ದಕ್ಕೆ ಕಾರಣ ಕೊಡಿ, ನಾನೇನು ಗುಜರಿ ರಾಜಕಾರಣಿಯೇ?: ಸಂಗಣ್ಣ ಕರಡಿ ತರಾಟೆ
ಕೊಪ್ಪಳ: ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್‌ ತಪ್ಪಿಸಿರುವುದಕ್ಕೆ ಸಮರ್ಥ ಕಾರಣ ಕೊಡಿ. ನನ್ನನ್ನೇನು ಗುಜರಿ ರಾಜಕಾರಣಿ ಅಂದುಕೊಂಡಿರುವಿರಾ ಎಂದು ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಗಿಣಿಗೇರಿ ಗ್ರಾಮದಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದ ಒಬ್ಬ ನಾಯಕ ಕೂಡ ಸೌಜನ್ಯಕ್ಕೂ ಫೋನ್‌ ಕರೆ ಮಾತನಾಡಲಿಲ್ಲ. ಯಾಕೆ ಟಿಕೇಟ್‌ ತಪ್ಪಿತು ಎಂದು ಸಮಾಧಾನಕ್ಕೂ ಯಾರೂ ತಿಳಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಯಾರು ನನಗೆ ಟಿಕೆಟ್‌ ತಪ‍್ಪಿಸಿದರು ಮತ್ತು ಯಾಕೆ ತಪ್ಪಿಸಿದರು  ಎನ್ನುವ ಪ್ರಶ್ನೆಗಳಿಗೆ ನನಗೆ ಉತ್ತರ ಬೇಕೇ ಬೇಕು. ಉತ್ತರ ಬಂದ ಬಳಿಕವಷ್ಟೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವೆ. ರಾಜಕೀಯವಾಗಿ ನಿವೃತ್ತಿಯಾಗುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿಯೇ ಇರುವೆ. ಮಾಡಬೇಕಾದ ಸಾಕಷ್ಟು ಕೆಲಸಗಳು ಬಾಕಿ ಇವೆ’ ಎಂದು ಅವರು ಮಾರ್ಮಿಕವಾಗಿ ನುಡಿದರು.

ಟಿಕೆಟ್‌ ಕೈ ತಪ್ಪಿದ ಬಳಿಕ ಸಂಗಣ್ಣ ಅಸಮಾಧಾನಗೊಂಡ ವಿಷಯ ತಿಳಿದ ಸ್ಥಳೀಯ ಬಿಜೆಪಿಯ ಕೆಲ ನಾಯಕರು ಶುಕ್ರವಾರ ಅವರಿಗೆ ಫೋನ್‌ ಕರೆ ಮಾಡಿದರೂ ಸಂಗಣ್ಣ ಸ್ವೀಕರಿಸಲಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರೂ ಆದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ  ಅವರು ಮುನಿಸು ಮರೆತು ಪ್ರಚಾರಕ್ಕೆ ಬನ್ನಿ ಕೇಳಿಕೊಂಡರು. ಆದರೆ, ಸಂಗಣ್ಣ ಅವರು  ಪ್ರಶ್ನೆಗಳಿಗೆ ಉತ್ತರ ಸಿಕ್ಕ ಬಳಿಕವೇ ಬರುವೆ ಎಂದು ಕಡಾಖಂಡಿತವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಸಂಪರ್ಕ:  ಸಂಗಣ್ಣ ಕರಡಿಯವರ ಜೊತೆ ಕಾಂಗ್ರೆಸ್‌ ಕೆಲ ನಾಯಕರು ಸಂಪರ್ಕದಲ್ಲಿದ್ದಾರೆ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಕ್ಷೇತ್ರದ ಮತದಾರರಲ್ಲಿ ಕುತೂಹಲ ಮನೆ ಮಾಡಿದೆ. ಸದ್ಯ ಮುನಿಸಿಕೊಂಡಿರುವ ಸಂಗಣ್ಣ ಅವರು ಕಾಂಗ್ರೆಸ್‌ ಕಡೆ ವಾಲಬಹುದು ಎನ್ನಲಾಗುತ್ತಿದೆ.

17 ರಾಜ್ಯಗಳ 195 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ ಬಿಜೆಪಿ, ಇಲ್ಲಿದೆ ಪೂರ್ಣ ಪಟ್ಟಿ
ಹೊಸದೆಹಲಿ: ಬಿಜೆಪಿ ಇಂದು 17 ರಾಜ್ಯಗಳಿಂದ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಎಲ್ಲ ಅಭ್ಯರ್ಥಿಗಳ ಹೆಸರನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗಿದೆ ಎಂದು ವಿನೋದ್ ತಾವಡೆ ತಿಳಿಸಿದ್ದಾರೆ. ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳದಿಂದ 20, ಮಧ್ಯಪ್ರದೇಶದಿಂದ 24, ಗುಜರಾತ್‌ನಿಂದ 15, ರಾಜಸ್ಥಾನದಿಂದ 15, ಕೇರಳದಿಂದ 12, ತೆಲಂಗಾಣದಿಂದ 9, ಅಸ್ಸಾಂನಿಂದ 11, ಜಾರ್ಖಂಡ್‌ನಿಂದ 11, ಛತ್ತೀಸ್‌ಗಢದಿಂದ 11, ದೆಹಲಿಯಿಂದ 5 ಜಮ್ಮು ಮತ್ತು ಕಾಶ್ಮೀರದಿಂದ 2, ಅರುಣಾಚಲ ಪ್ರದೇಶದಿಂದ 2, ಗೋವಾದಿಂದ 1, ತ್ರಿಪುರಾದಿಂದ 1, ಅಂಡಮಾನ್-ನಿಕೋಬಾರ್‌ನಿಂದ 1 ಮತ್ತು ದಮನ್ ಮತ್ತು ದಿಯುನಿಂದ 1 ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗಿದೆ.

ಫೆಬ್ರವರಿ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮತ್ತು ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಚುನಾವಣಾ ಸಮಿತಿಯ ಸಭೆಯನ್ನು ಆಯೋಜಿಸಲಾಗಿದೆ ಎಂದು ವಿನೋದ್ ತಾವ್ಡೆ ಹೇಳಿದರು. ಸಭೆಯಲ್ಲಿ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ 195 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಬನಾರಸ್‌ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಉತ್ತರ ಪ್ರದೇಶ
ವಾರಣಾಸಿ – ನರೇಂದ್ರ ಮೋದಿ
ಕೈರಾನಾ- ಪ್ರದೀಪ್ ಕುಮಾರ್
ಮುಜಾಫರ್‌ನಗರ- ಸಂಜೀವ್ ಬಲ್ಯಾನ್
ರಾಂಪುರ- ಘನಶ್ಯಾಮ್ ಲೋಧಿ
ಸಂಭಾಲ್- ಪರಮೇಶ್ವರ ಲಾಲ್ ಸೈನಿ
ಅಮ್ರೋಹ- ಕನ್ವರ್ ಸಿಂಗ್ ತನ್ವರ್
ಗೌತಮ್ ಬುದ್ಧ ನಗರ- ಮಹೇಶ್ ಶರ್ಮಾ
ಬುಲಂದ್‌ಶಹರ್- ಭೋಲಾ ಸಿಂಗ್
ಮಥುರಾ- ಹೇಮಾ ಮಾಲಿನಿ
ಆಗ್ರಾ- ಸತ್ಯಪಾಲ್ ಸಿಂಗ್ ಬಾಘೇಲ್
ಎತಾಹ್- ರಾಜವೀರ್ ಸಿಂಗ್ ರಾಜು ಭಯ್ಯಾ
ಶಹಜಹಾನ್‌ಪುರ- ಅರುಣ್ ಕುಮಾರ್ ಸಾಗರ್
ಖೇರಿ- ಅಜಯ್ ಮಿಶ್ರಾ ತೇನಿ
ಸೀತಾಪುರ- ರಾಜೇಶ್ ವರ್ಮಾ
ಹರ್ದೋಯಿ- ಜೈ ಪ್ರಕಾಶ್ ರಾವತ್
ಉನ್ನಾವೋ- ಸಾಕ್ಷಿ ಮಹಾರಾಜ್
ಮೋಹನ್‌ಲಾಲ್‌ಗಂಜ್- ಕೌಶಲ್ ಕಿಶೋರ್
ಲಕ್ನೋ- ರಾಜನಾಥ್ ಸಿಂಗ್
ಅಮೇಥಿ- ಸ್ಮೃತಿ ಇರಾನಿ
ಫರೂಕಾಬಾದ್- ಮುಖೇಶ್ ರಜಪೂತ್
ಇಟಾವಾ – ರಾಮಶಂಕರ್ ಕಟಾರಿಯಾ
ಝಾನ್ಸಿ- ಅನುರಾಗ್ ಶರ್ಮಾ
ಬಂದಾ- ಆರ್ ಕೆ ಸಿಂಗ್ ಪಟೇಲ್
ಬಾರಾಬಂಕಿ- ಉಪೇಂದ್ರ ಸಿಂಗ್ ರಾವತ್
ಫೈಜಾಬಾದ್- ಲಲ್ಲು ಸಿಂಗ್
ಶ್ರಾವಸ್ತಿ- ಸಾಕೇತ್ ಮಿಶ್ರಾ
ಗೊಂಡಾ – ಕೀರ್ತಿ ವರ್ಧನ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ
ಬಸ್ತಿ- ಹರೀಶ್ ದ್ವಿವೇದಿ
ಗೋರಖ್‌ಪುರ- ರವಿ ಕಿಶನ್
ಕುಶಿನಗರ- ವಿಜಯ್ ಕುಮಾರ್ ದುಬೆ
ಅಜಂಗಢ- ದಿನೇಶಲಾಲ್ ಯಾದವ್ ನಿರ್ಹುವಾ
ಜಾನ್ಪುರ್- ಕೃಪಾಶಂಕರ್ ಸಿಂಗ್

ದೆಹಲಿ
ಚಾಂದಿನಿ ಚೌಕ್- ಪ್ರವೀಣ್ ಖಂಡೇಲ್ವಾಲ್
ಈಶಾನ್ಯ ದೆಹಲಿ- ಮನೋಜ್ ತಿವಾರಿ
ನವದೆಹಲಿ- ಕೊಳಲು ಸ್ವರಾಜ್
ಪಶ್ಚಿಮ ದೆಹಲಿ- ಕಮಲ್ಜೀತ್ ಸೆಹ್ರಾವತ್
ದಕ್ಷಿಣ ದೆಹಲಿ- ರಾಮ್‌ವೀರ್ ಬಿಧುರಿ

ಅರುಣಾಚಲ ಪ್ರದೇಶ
ಅರುಣಾಚಲ ಪಶ್ಚಿಮ- ಕಿರಣ್ ರಿಜಿಜು
ಅರುಣಾಚಲ ಪೂರ್ವ- ತಾಪಿರ್ ಗ್ರಾಮ

ಗುಜರಾತ್
ಗಾಂಧಿನಗರ- ಅಮಿತ್ ಶಾ
ರಾಜ್‌ಕೋಟ್- ಪುರುಷೋತ್ತಮ ರೂಪಲಾ
ಪೋರಬಂದರ್- ಮನ್ಸುಖ್ ಮಾಂಡವಿಯಾ
ಪಂಚಮಹಲ್- ರಾಜಪಾಲ್ ಸಿಂಗ್ ಮಹೇಂದ್ರಸಿಂಗ್ ಯಾದವ್
ದಾಹೋದ್- ಜಸ್ವಂತ್ ಸಿಂಗ್
ಭರೂಚ್- ಮನ್ಸುಖ್ ಭಾಯಿ ವಾಸವ
ನವಸಾರಿ- ಸಿಆರ್ ಪಾಟೀಲ್

ಜಮ್ಮು ಮತ್ತು ಕಾಶ್ಮೀರ
ಉಧಂಪುರ- ಜಿತೇಂದ್ರ ಸಿಂಗ್
ಜಮ್ಮು- ಜುಗಲ್ ಕಿಶೋರ್ ಶರ್ಮಾ

ಜಾರ್ಖಂಡ್
ಗೊಡ್ಡಾ- ನಿಶಿಕಾಂತ್ ದುಬೆ
ರಾಂಚಿ- ಸಂಜಯ್ ಸೇಠ್
ಜಮ್ಶೆಡ್‌ಪುರ- ವಿದ್ಯುತ್ ಮಹತೋ
ಕುಂತಿ- ಅರ್ಜುನ್ ಮುಂಡ
ಪಲಮು- ವಿಷ್ಣು ದಯಾಳ್ ರಾಮ್

ಛತ್ತೀಸ್‌ಗಢ
ಕೊರ್ಬಾ-ಸರೋಜ್ ಪಾಂಡೆ
ರಾಜನಂದಗಾಂವ್- ಸಂತೋಷ್ ಪಾಂಡೆ
ದುರ್ಗ್- ವಿಜಯ್ ಬಾಘೆಲ್,
ರಾಯಪುರ- ಬ್ರಿಜ್ಮೋಹನ್ ಅಗರ್ವಾಲ್,
ಬಸ್ತಾರ್- ಮಹೇಶ್ ಕಶ್ಯಪ್
ಕಂಕರ್- ಭೋಜರಾಜ್

ಮಧ್ಯಪ್ರದೇಶ
ಗುಣ- ಜ್ಯೋತಿರಾದಿತ್ಯ ಸಿಂಧಿಯಾ,
ದಾಮೋಹ್- ರಾಹುಲ್ ಲೋಧಿ,
ಖಜುರಾಹೊ- ವಿಡಿ ಶರ್ಮಾ,
ರೇವಾ- ಜನಾರ್ದನ್ ಮಿಶ್ರಾ,
ಶಹದೋಲ್- ಹಿಮಾದ್ರಿ ಸಿಂಗ್
ಜಬಲ್ಪುರ್- ಆಶಿಶ್ ದುಬೆ
ಹೋಶಂಗಾಬಾದ್- ದರ್ಶನ್ ಚೌಧರಿ
ವಿದಿಶಾ- ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್- ಅಲೋಕ್ ಶರ್ಮಾ
ರಾಜಗಢ- ರೋಡ್ಮಲ್ ನಗರ
ಖಾಂಡ್ವಾ- ನ್ಯಾನೇಶ್ವರ್ ಪಾಟೀಲ್

ರಾಜಸ್ಥಾನ
ಬಿಕಾನೆರ್- ಅರ್ಜುನ್ ಮೇಘವಾಲ್
ಅಲ್ವಾರ್- ಭೂಪೇಂದ್ರ ಯಾದವ್
ಭರತಪುರ- ರಾಮಸ್ವರೂಪ ಕೋಲಿ
ನಾಗೌರ್- ಜ್ಯೋತಿ ಮಿರ್ಧಾ
ಜೋಧಪುರ- ಗಜೇಂದ್ರ ಶೇಖಾವತ್
ಬಾರ್ಟೆಂಡರ್- ಕೈಲಾಶ್ ಚೌಧರಿ
ಉದಯಪುರ- ಮನ್ನಾಲಾಲ್ ರಾವತ್
ಬನ್ಸ್ವಾರಾ- ಮಹೇಂದ್ರ ಮಾಳವೀಯ
ಕೋಟಾ- ಓಂ ಬಿರ್ಲಾ

ಪಶ್ಚಿಮ ಬಂಗಾಳ
ಕೂಚ್ ಬೆಹರ್- ನಿಸಿತ್ ಪ್ರಮಾಣಿಕ್
ಹೂಗ್ಲಿ- ಲಾಕೆಟ್ ಚಟರ್ಜಿ
ಬೆಳ್ಳೂರಹಟ್- ಸುಕಾಂತ ಮಜುಂದಾರ್