love marriage – Peepal Media

ಗೇ ಜೋಡಿಗಳನ್ನೂ ಆಶೀರ್ವದಿಸಿ: ಪಾದ್ರಿಗಳಿಗೆ ಪೋಪ್‌ ಫ್ರಾನ್ಸಿಸ್ ಕರೆ
“ನಾವು ಗೇ ಜೋಡಿಗಳನ್ನು ನಿರಾಕರಿಸುವ, ತಿರಸ್ಕರಿಸುವ ಮತ್ತು ಹೊರಗಿಡುವ ನ್ಯಾಯಾಧೀಶರಾಗಲು ಸಾಧ್ಯವಿಲ್ಲ,” ಎಂದು ಕ್ಯಾಥೋಲಿಕ್ ಚರ್ಚ್ ಸಮ ಲೈಂಗಿಕ ಜೋಡಿಗಳನ್ನು ಆಶೀರ್ವದಿಸಲು ಮುಕ್ತವಾಗಿರುತ್ತದೆ ಎಂದು ಪೋಪ್ ಫ್ರಾನ್ಸಿಸ್ ಸೂಚಿಸಿದ್ದಾರೆ.

ಆಶೀರ್ವಾದವನ್ನು ಪ್ಯಾಸ್ಟೋರಲ್‌ ಚಾರಿಟಿಯಂದೇ ಪರಿಗಣಿಸಬೇಕು ಎಂದು ಈ ವಿಷಯದ ಬಗ್ಗೆ ಸ್ಪಷ್ಟತೆ ಕೇಳಿದ ಕಾರ್ಡಿನಲ್‌ಗಳಿಗೆ ತಿಳಿಸಿದರು. ಆದರೆ ಚರ್ಚ್ ಇನ್ನೂ ಗೇ ಸಂಬಂಧಗಳನ್ನು “ಪಾಪ” ಎಂದೇ ಪರಿಗಣಿಸುತ್ತದೆ ಮತ್ತು ಗೇ ವಿವಾಹಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಅವುಗಳನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ನಿರ್ಧರಿಸಬೇಕು ಮತ್ತು ಭಿನ್ನ ಲಿಂಗಗಳ ನಡುವಿನ ವಿವಾಹ ಸಮಾರಂಭಗಳಿಗೆ ಸಮಾನವಾಗಿ ನೋಡಬಾರದು ಎಂದು ಫ್ರಾನ್ಸಿಸ್ ಎಚ್ಚರಿಕೆ ನೀಡಿದ್ದಾರೆ.

2021 ರಲ್ಲಿ ವ್ಯಾಟಿಕನ್ ಗೇ ಸಂಬಂಧಗಳನ್ನು ಕ್ಷಮಿಸಲು ಸಾಧ್ಯವಿಲ್ಲ, “ದೇವರು ಪಾಪಿಗಳನ್ನು ಆಶೀರ್ವದಿಸುವುದಿಲ್ಲ,” ಎಂದು ಹೇಳಿಕೆ ನೀಡಿತ್ತು.  ಆದರೆ ಸೋಮವಾರ, ಈ ನಿಲುವಿನಲ್ಲಿ ಅಪವಾದಗಳಿರಬಹುದು ಎಂದು ಫ್ರಾನ್ಸಿಸ್ ಸೂಚಿಸಿದ್ದಾರೆ. “ನಾವು ನಿರಾಕರಿಸುವ, ತಿರಸ್ಕರಿಸುವ ಮತ್ತು ಅವರನ್ನು ಹೊರಗಿಡುವ ನ್ಯಾಯಾಧೀಶರಾಗಲು ಸಾಧ್ಯವಿಲ್ಲ” ಎಂದು ಪೋಪ್ ಐದು ಸಂಪ್ರದಾಯವಾದಿ ಕಾರ್ಡಿನಲ್‌ಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಏಷ್ಯಾ, ಯುರೋಪ್, ಆಫ್ರಿಕಾ, ಅಮೇರಿಕಾ ಮತ್ತು ಲ್ಯಾಟಿನ್ ಅಮೆರಿಕದ ಐದು ಸಂಪ್ರದಾಯವಾದಿ ಕಾರ್ಡಿನಲ್‌ಗಳು ವ್ಯಕ್ತಪಡಿಸಿರುವ “ದುಬಿಯಾ” (ಸಂಶಯಗಳು – ಪ್ರಶ್ನೆಗಳು) ಗಳಿಗೆ ಪೋಪ್ ಪ್ರತಿಕ್ರಿಯಿಸಿದ್ದಾರೆ.

ನೈಸರ್ಗಿಕವಾದ ಲೈಂಗಿಕಾಸಕ್ತಿಯನ್ನು ಧರ್ಮದ ಆಧಾರದದಲ್ಲಿ ಹತ್ತಿಕ್ಕುವ, LGBTQ+ ಲೈಂಗಿಕ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಂಡಿರುವ ಈ ಸಂದರ್ಭದಲ್ಲಿ ಪೋಪ್‌ನ ಈ ನಡೆಯನ್ನು ಗೇ, ಲೆಸ್ಬಿಯನ್‌ಗಳು ಒಂದು ಸುಧಾರಣೆಯೆಂಬಂತೆ ನೋಡುತ್ತಿದ್ದಾರೆ.

ಬುರ್ಖಾ ಧರಿಸಲು ನಿರಾಕರಣೆ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ ಇಕ್ಬಾಲ್‌
ಮುಂಬೈ : ಪ್ರೀತಿಸಿ ಮದುವೆಯಾದ ಯುವಕ ಬುರ್ಖಾ ಧರಿಸಲಿಲ್ಲವೆಂಬ ಕಾರಣಕ್ಕೆ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮುಂಬೈನ ಚೆಂಬೂರ್‌ ಪ್ರದೇಶದಲ್ಲಿ ನಡೆದಿದೆ.

ಕಳೆದ ಮೂರು  ವರ್ಷಗಳ ಹಿಂದೆ ಇಕ್ಬಾಲ್‌ ಮೊಹಮ್ಮದ್‌ ಶೇಖ್‌ ಎಂಬ ಮುಸ್ಲಿಂ ಯುವಕ ಮತ್ತು ರೂಪಾಲಿ ಎಂಬ ಹಿಂದೂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಇಕ್ಬಾಲ್‌ ಮನೆಯಲ್ಲಿಯೇ ವಾಸವಿದ್ದರು.  ಇಬ್ಬರೂ ಒಂದು ಮಗುವನ್ನೂ ಪಡೆದಿದ್ದರು. ದಿನ ಕಳೆದಂತೆ ಇಕ್ಬಾಲ್‌ನ ಕುಟುಂಬಸ್ಥರು ಮುಸ್ಲಿಂ ಆದ ಕಾರಣ ರೂಪಾಲಿಗೆ ಬುರ್ಖಾ ಧರಿಸಲು ಒತ್ತಾಯಿಸುತ್ತಿದ್ದರು. ಆದರೆ ರೂಪಾಲಿ ಅದಕ್ಕೆ ನಿರಾಕರಿಸಿದ ಕಾರಣ ಇಬ್ಬರ ಮಧ್ಯೆ ಜಗಳ ಉಂಟಾಗಿರುವುದು ಭೀಕರ ಹತ್ಯೆಗೆ ಕಾರಣವಾಗಿದೆ.

ರೂಪಾಲಿ ಹಿಂದೂ ಆಗಿದ್ದರಿಂದ ಮದುವೆಯ ನಂತರ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಇಕ್ಬಾಲ್‌ ಮತ್ತು ಅವನ ಕುಟುಂಬಸ್ಥರು ಅವಳ ಮೇಲೆ ಹಿಜಾಬ್‌ ಹೇರಿಕೆ ಮಾಡುತ್ತಿದ್ದದ್ದು ಪ್ರತಿದಿನ ಜಗಳಕ್ಕೆ ಕಾರಣವಾಗಿತ್ತು. ಇದರಿಂದ ಮನನೊಂದ ರೂಪಾಲಿ ಇಕ್ಭಾಲ್‌ನಿಂದ ವಿಚ್ಛೇದನ ಬೇಕೆಂದು ಹೇಳಿ ಅವರ ಮನೆಯವರಿಂದ  ದೂರವಾಗಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು.

ಆದರೆ ಸೋಮಾವಾರ ರಾತ್ರಿ  ರೂಪಾಲಿ ಜೊತೆ ಮಾತನಾಡಬೇಕೆಂದು ಹೇಳಿ ಚೆಂಬೂರು ಪ್ರದೇಶದ ಲೋಖಂಡೆ ಮಾರ್ಗದಲ್ಲಿನ ನಾಗೇವಾಡಿಯ ಬಳಿಗೆ ಅವಳನ್ನು ಕರೆಸಿಕೊಂಡಿದ್ದ. ಈ ವೇಳೆ ಬುರ್ಖಾ, ವಿಚ್ಚೇಧನ ಕುರಿತಂತೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಇಕ್ಭಾಲ್‌ ರೂಪಾಲಿಯ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದ ಪೋಲೀಸರು ಸ್ಥಳಕ್ಕೆ ಆಗಮಿಸಿ ರೂಪಾಲಿಯ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಇಕ್ಬಾಲ್‌ನನ್ನು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ  ವಿಚಾರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಪೋಲೀಸರು ತಿಳಿಸಿದ್ದಾರೆ.