love – Peepal Media

ದಿನನಿತ್ಯ ಪುಶ್‌-ಅಪ್‌ ಮಾಡಿದರೆ ಏನಾಗುತ್ತದೆ?
ಪ್ರತಿದಿನ ಪುಷ್-ಅಪ್‌ ಮಾಡಿದರೆ ಸ್ನಾಯುವಿನ ತೂಕದಿಂದ ಹಿಡಿದು ಭಂಗಿಯ ವರೆಗೆ ನಿಮ್ಮ ದೇಹದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ. ಪುಷ್‌-ಅಪ್ಸ್‌ ಮಾಡುವುದನ್ನು ನೀವು ದಿನನಿತ್ಯ ರೂಡಿಸಿಕೊಂಡರೆ ನಿಮಗೆ ಹಲವಾರು ಪ್ರಯೋಜನವಾಗಲಿದೆ.  ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯಿರಿ.

ಸ್ನಾಯುವಿನಲ್ಲಿ ಶಕ್ತಿ ಹೆಚ್ಚಾಗುತ್ತದೆ

ಪುಷ್-ಅಪ್‌ಗಳನ್ನು ಮಾಡುವುದರಿಂದ ಮೊದಲು ಎದೆ, ಭುಜಗಳು, ಟ್ರೈಸ್ಪ್‌ಗಳು ಮತ್ತು ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳಲ್ಲಿ ಬದಲಾವಣೆಗಳಾಗುತ್ತದೆ. ಇದು ದೇಹದ ಮೇಲ್ಭಾಗದ ಶಕ್ತಿ ಹೆಚ್ಚಲು ಇರುವ ಅತ್ಯುತ್ತಮ ವ್ಯಾಯಾಮ. ದಿನನಿತ್ಯ ಈ ವ್ಯಾಯಾಮ ಮಾಡಿದರೆ ದೇಹದ ಈ ಮೇಲ್ಭಾಗದ ಸ್ನಾಯುವಿನ ತೂಕ ಮತ್ತು ಟೋನ್‌ (ರಚನೆ)ಯಲ್ಲಿ ಆಗುವ ಬದಲಾವಣೆಗಳನ್ನು ನೀವು ಗಮನಿಸಬಹುದು.

ಹೃದಯದ ರಕ್ತನಾಳದ ಆರೋಗ್ಯ ಹೆಚ್ಚಾಗುತ್ತದೆ

ಪುಷ್-ಅಪ್‌ಗಳನ್ನು ಪ್ರಾಥಮಿಕವಾಗಿ ಶಕ್ತಿ ಕೊಡುವ ವ್ಯಾಯಾಮ ಎಂದು ಕರೆಯಲಾಗುತ್ತದೆಯಾದರೂ, ಇದನ್ನು ಮೆಲ್ಲಗೆ ಆರಂಭಿಸಿ ವೇಗವಾಗಿ ಮಾಡುವುದರಿಂದ ಹೃದಯದ ರಕ್ತನಾಳಕ್ಕೂ ಪ್ರಯೋಜನವಾಗಲಿದೆ. ಸ್ನಾಯುಗಳಿಗೆ ಆಮ್ಲಜನಕವನ್ನು ತಲುಪಿಸಲು ಹೃದಯವು ಹೆಚ್ಚು ರಕ್ತವನ್ನು ಪಂಪ್ ಮಾಡುವ ಅಗತ್ಯವಿರುವುದರಿಂದ ರಕ್ತನಾಳಗಳಿಗೂ ವ್ಯಾಯಾಮವಾದಂತಾಗುತ್ತದೆ. ಕಾಲಾನಂತರದಲ್ಲಿ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಹೃದಯದ ರಕ್ತನಾಳದ ಕಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದೇಹದ ಭಂಗಿಯಲ್ಲಿ ಬದಲಾವಣೆ

ಪುಷ್-ಅಪ್‌ಗಳು ಕೋರ್ ಸ್ನಾಯುಗಳನ್ನು (ಕಿಬ್ಬೊಟ್ಟೆ ಮತ್ತು ಬೆನ್ನು) ಬಲಪಡಿಸುತ್ತವೆ, ಇದು ದೇಹಕ್ಕೆ ಸರಿಯಾದ ಭಂಗಿಯನ್ನು ನೀಡಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬಾಗಿದ ಬೆನ್ನನ್ನು ತಡೆಯುತ್ತದೆ. ನಿಯಮಿತವಾಗಿ ಪುಷ್-ಅಪ್‌ ಬೆನ್ನು ನೋವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ.

ಜಾಯಿಂಟ್‌ ಸಪೋರ್ಟ್‌ ಮತ್ತು ಸ್ಟೆಬಿಲಿಟಿ ಹೆಚ್ಚುತ್ತದೆ

ಪುಶ್-ಅಪ್‌ಗಳನ್ನು ಮಾಡುವಾಗ ನಿಮ್ಮ ಭುಜಗಳು, ಮೊಣಕೈಗಳು ಮತ್ತು ಮಣಿಕಟ್ಟುಗಳ ಸುತ್ತಲಿನ ಸ್ನಾಯುಗಳು ಹಾಗೂ ಸ್ನಾಯುರಜ್ಜುಗಳಿಗೆ ವ್ಯಾಯಾಮವಾಗುತ್ತದೆ. ಆ ಸಮಯದಲ್ಲಿ ಜಾಯಿಂಟ್‌ ಸಪೋರ್ಟ್‌, ಸ್ಥಿರತೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಗಾಯಗಳಾಗುವುದನ್ನು ತಡೆಯುತ್ತದೆ ಮತ್ತು ಇತರ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕರಿಸುತ್ತದೆ.

ಚಯಾಪಚಯ ಹೆಚ್ಚಾಗುತ್ತದೆ

ಪುಷ್-ಅಪ್‌ಗಳಂತಹ ವ್ಯಾಯಾಮಗಳು ಸ್ನಾಯುವಿನ ತೂಕವನ್ನು ಹೆಚ್ಚಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚಿನ ಚಯಾಪಚಯವನ್ನು ಹೊಂದಿರುವ ನಿಮ್ಮ ದೇಹವು ವಿಶ್ರಾಂತಿ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತದೆ, ಸರಿಯಾದ ತೂಕವನ್ನು ಕಾಯ್ದುಕೊಂಡು ದೇಹದ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಪುಷ್-ಅಪ್‌ಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಮತ್ತು  ಚಯಾಪಚಯಕ್ಕೆ ಉಪಯೋಗವಾಗಲಿದೆ.

ಮಾನಸಿಕ ಆರೋಗ್ಯ ಹೆಚ್ಚಾಗುತ್ತದೆ

ಪುಷ್-ಅಪ್‌ಗಳನ್ನು ಒಳಗೊಂಡಂತೆ ವ್ಯಾಯಾಮಗಳನ್ನು ಮಾಡುವುದರಿಂದ ನ್ಯಾಚುರಲ್‌ ಮೂಡ್‌ ಎಲವೇಟರ್‌ಗಳಾದ ಎಂಡಾರ್ಫಿನ್‌ಗಳ ಉತ್ಪಾದನೆಯಾಗುತ್ತದೆ. ಇದು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಪುಷ್-ಅಪ್‌ಗಳನ್ನು ಮಾಡಲು ಅಗತ್ಯವಿರುವ ಶಿಸ್ತು ಮತ್ತು ಬದ್ಧತೆಯು ನಿಮ್ಮ ಸಾಮರ್ಥ್ಯದಲ್ಲಾಗುವ ಪ್ರಗತಿಯನ್ನು ನೋಡುವುದರಿಂದ ನಿಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಸುಧಾರಿತ ಸಮತೋಲನ ಮತ್ತು ಸಮನ್ವಯತೆ

ಪುಷ್-ಅಪ್‌ಗಳಿಗೆ ವಿವಿಧ ಸ್ನಾಯು ಗುಂಪುಗಳ ಸಮನ್ವಯತೆ ಮತ್ತು ದೇಹದ ಸ್ಥಿರೀಕರಣದ ಅಗತ್ಯವಿರುತ್ತದೆ. ಅವುಗಳನ್ನು ನಿಯಮಿತವಾಗಿ ನಿರ್ವಹಿಸುವುದು ನಿಮ್ಮ ಸಮತೋಲನ ಮತ್ತು ಸಮನ್ವಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ದೈನಂದಿನ ಚಟುವಟಿಕೆಗಳಿಗೆ ಮತ್ತು ಇತರ ರೀತಿಯ ವ್ಯಾಯಾಮಗಳಿಗೆ ಪ್ರಯೋಜನಕಾರಿಯಾಗಿದೆ.

ಪುಶ್‌-ಅಪ್‌ಗಳಿಂದ ಆಗುವ ಅಪಾಯಗಳು ಮತ್ತು ಎಚ್ಚರಿಕೆ

ಪ್ರತಿದಿನ ಪುಷ್-ಅಪ್‌ಗಳನ್ನು ಮಾಡುವುದರಿಂದ ಹಲವು ಪ್ರಯೋಜನಗಳಿದ್ದರೂ, ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಸಾಕಷ್ಟು ವಿಶ್ರಾಂತಿ ಇಲ್ಲದೆ ಈ ವ್ಯಾಯಾಮ ಮಾಡಿದರೆ ಸ್ನಾಯು ಗುಂಪುಗಳು ಅತಿಯಾಗಿ ಕೆಲಸ ಮಾಡುವುದರಿಂದ ಟೆಂಡೈನಿಟಿಸ್ ಅಥವಾ ಸ್ನಾಯುವಿನ ಗಾಯಕ್ಕೆ ಕಾರಣವಾಗಬಹುದು. ನಿಮ್ಮ ಸ್ನಾಯುಗಳು ಚೇತರಿಸಿಕೊಳ್ಳಲು ಮತ್ತು ಬಲಗೊಳ್ಳಲು ಸಮಯ ನೀಡಬೇಕು. ಅದಕ್ಕಾಗಿ ವಿಶ್ರಾಂತಿಯ ಅಗತ್ಯವಿದೆ. ಪರ್ಯಾಯ ದಿನಗಳಲ್ಲಿ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.

ಪ್ರೀತಿಯೆಂಬ ಮಾಯೆ
ಪ್ರೀತಿ ಪ್ರೇಮದ ಕುರಿತು ಪುಟಗಟ್ಟಲೆ ಭಾವನೆಗಳ ಹರಿಬಿಡುವ ವಯಸು ಹದಿ ವಯಸು. ಹರೆಯದ ಬಾಗಿಲು ತೆರೆದಿರುವ ಹೊತ್ತಿಗೆ ಪ್ರೀತಿಯೆಂಬ ಮಾಯೆ ಆವರಿಸುವಾಗ ಅದನ್ನು ಜಾಗರೂಕತೆಯಿಂದ ನಿರ್ವಹಿಸುವ ತಿಳುವಳಿಕೆ ಪ್ರತಿಯೊಬ್ಬರಿಗೂ ಇರಬೇಕು. ಇತ್ತೀಚೆಗಷ್ಟೇ ಪತ್ರಿಕೋದ್ಯಮ ಪದವಿ ಮುಗಿಸಿರುವ ಉಡುಪಿಯ ಮಹಾಲಕ್ಷ್ಮಿ ದೇವಾಡಿಗ ಮಧುರವಾದ ಪ್ರೀತಿಯ ಬಗ್ಗೆ ಕ್ಯಾಂಪಸ್‌ ಅಂಕಣದಲ್ಲಿ ಬರೆದಿದ್ದಾರೆ.

ಈ ಲೋಕದಲ್ಲಿ ಅದೆಷ್ಟೋ ತರಹದ ಭಾವನೆಗಳು ತನ್ನದೇ ಆದ ಹಾವ, ಭಾವ, ಸ್ವರೂಪವನ್ನು ಹೊಂದಿವೆ. ಪ್ರತಿಯೊಂದು ಭಾವನೆಯನ್ನು ವ್ಯಕ್ತ ಪಡಿಸೋ ವಿಧಾನ ಬೇರೆ. ಅಂತಹದರಲ್ಲಿ ಮನುಷ್ಯನ ಅತಿ ಮುಖ್ಯ ಹಾಗೂ ನಮ್ಮ ಬದುಕಿಗೆ ಒಂದು ಹೊಸ ತಿರುವು ಕೊಡೋ ಅಸಾಮಾನ್ಯ ಶಕ್ತಿ ಇರೋದು ಈ ಪ್ರೀತಿಗೆ. ಹಾಗಾದ್ರೆ ಈ ಪ್ರೀತಿ ಅಂದ್ರೆ ಏನು? ನಿಜ ಹೇಳ್ಬೇಕಂದ್ರೆ ಪ್ರೀತಿಗೆ ಯಾವುದೇ ತರಹದ ವಿವರಣೆ ಇಲ್ಲ, ಆದ್ರೆ ಪರಸ್ಪರ ಮನಸಿನ ಇಚ್ಛೆಯಿಂದ ಹುಟ್ಟುವುದೇ ಪ್ರೀತಿ ಅನ್ನಬಹುದು.

ಪ್ರೀತಿಯನ್ನು ಹೇಳಲು ತನ್ನದೇ ಆದ ಭಾಷೆಯಿದೆ, ಪ್ರೀತಿಯ ಭಾವನೆಯನ್ನು ವ್ಯಕ್ತ ಪಡಿಸಲು ತನ್ನದೇ ಆದ ವಿಧಾನವಿದೆ. ಪ್ರಪಂಚದ ಅತಿ ಸುಂದರ ಹಾಗೂ ಮೊದಲ ಪ್ರೇಮಕಥೆ ರಾಧಾಕೃಷ್ಣರ ಪ್ರೇಮಕಥೆ. ಪವಿತ್ರ ಹಾಗೂ ನಿಷ್ಕಲ್ಮಶ ಪ್ರೇಮ ತಮ್ಮ ಕೊನೆಗಾಲದವರೆಗೂ ಜೊತೆಯಾಗಿ ಬಾಳಿಲ್ಲ ಅಂದ್ರೂ, ಜಗತ್ತು ಅಂತ್ಯ ಕಾಣೋವರೆಗೂ ಕೂಡ ನಿರಂತರವಾಗಿ ನೆನಪಲ್ಲಿ ಜೀವಂತವಾಗಿ ಪ್ರೀತಿಯ ನಿಜ ರೂಪವನ್ನು ಅರ್ಥ ಮಾಡಿಸೋ ಪ್ರೇಮ ಕಥೆ ಅದೇ ರಾಧಾಕೃಷ್ಣರ ಪ್ರೇಮಕಥೆ. ತದನಂತರದಲ್ಲಿ ನಾವು ಹಲವು ಪ್ರೇಮಕಥೆಗಳನ್ನು ಕೇಳಿದ್ದೇವೆ. ಅದರ ಸಾಕ್ಷಿ ಹಾಗೂ ಸಂಕೇತಗಳನ್ನು ನೋಡಿದ್ದೇವೆ.

ನಮ್ಮ ಕಲಿಯುಗದಲ್ಲಿ ಎಲ್ಲ ಸಂಬಂಧಗಳು ಹಿಂದೆ ಇದ್ದ ಹಾಗೆ ಈಗಿಲ್ಲ. ಅದೇ ತರ ಈ ಪವಿತ್ರವಾದ ಪ್ರೀತಿಯನ್ನ ತಮ್ಮ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡ ಹಾಗೂ ಬಳಸಿಕೊಳ್ತಾ ಇರೋ ಅದೆಷ್ಟೋ ಘಟನೆಗಳನ್ನು ಕೇಳ್ತಾನೆ, ನೋಡ್ತಾನೆ ಇದ್ದೇವೆ. ಒಂದು ಲೆಕ್ಕದಲ್ಲಿ ಪ್ರೀತಿ ಅಂದಾಗ ಹಿಂದೆ ಇದ್ದ ಕಲ್ಪನೆಗೂ ಈಗ ಮೂಡೋ ಪರಿಕಲ್ಪನೆಗೂ ಆಕಾಶ ಭೂಮಿ ಅಂತರ. ಯಾಕಂದ್ರೆ ಈಗಿನ ಕಾಲ ಹಾಗಿದೆ, ಇಲ್ಲಿ ನಿಜ ಯಾವುದು ಸುಳ್ಳು ಯಾವುದು ಅನೋದನ್ನ ಪತ್ತೆ ಮಾಡೋದರಲ್ಲೆ ನಮ್ಮ ಅರ್ಧ ಜೀವನ ಕಳೆದು ಬಿಡ್ತೇವೆ. ಇನ್ನು ಉಳಿದ ಅರ್ಧ ಜೀವನದಲ್ಲಿ ದುಡಿಮೆ, ಕಷ್ಟ, ಸುಖ, ಕುಟುಂಬ ಕೊನೆಗೆ ಸಾವು ಅನ್ನೋದರ ಪೂರ್ಣವಿರಾಮ ಬೀಳ್ತದೆ. ಹೀಗಿರುವಾಗ ಪ್ರೀತಿಯನ್ನೂ ಕೂಡ ವ್ಯಾಪಾರ ಅನ್ನೋ ಹಾಗೆ ಮಾಡಿಟ್ಟಿರೋ ಇಂತ ಕಾಲದಲ್ಲಿ ನಿಜವಾದ ಪ್ರೀತಿಯನ್ನ ಗುರುತಿಸೋದು ಮನಸಿಗೆ ಸುಲಭವಾದ್ರೂ ನೋಡೋ ಕಣ್ಣಿಗೆ, ಪರಿಸ್ಥಿತಿಗೆ ಸ್ಪಂದಿಸೋ ಬುದ್ಧಿಗೆ ತುಂಬಾ ಕಷ್ಟ.

ಪ್ರೀತಿನ ನಂಬಿಕೆ ಅನ್ನೋ ಬುನಾದಿ ಮೇಲೆ ಕಟ್ಟಿರೋ ನಮ್ಗೆ ಅಂತ ನಂಬಿಕೆ ಒಮ್ಮೆ ಬಿರುಕು ಬಿಟ್ಟರೆ ಮತ್ತೆ ಒಂದು ಮಾಡಲು ಅದೆಷ್ಟೋ ವರ್ಷ ತಕೊಳ್ತದೆ. ಕೆಲವೊಮ್ಮೆ ಆ ಬಿರುಕು ಶಾಶ್ವತವಾಗಿ ಬಿಡುತ್ತದೆ. ತಂದೆ ತಾಯಿಯ ಪ್ರೀತಿ, ಸಹೋದರ ಸಹೋದರಿಯರ ಪ್ರೀತಿ, ಕುಟುಂಬದ ಪ್ರೀತಿ, ಸ್ನೇಹಿತರ ಪ್ರೀತಿ ಎಲ್ಲವೂ ಕೂಡ ಅದರದೇ ಆದ ಸ್ವರೂಪ ಹೊಂದಿರುತ್ತದೆ. ಹಾಗೆ ಸಂಗಾತಿಯ ಪ್ರೀತಿ ಕೂಡ. ಪ್ರೀತಿ ಅಂದ್ರೆ ಪ್ರೀತಿ ಮಾತ್ರ. ಹಾಗಾಗಿ ಅದನ್ನ ಅದರದೇ ರೀತಿಯಲ್ಲಿ ನೋಡೋದು ಬಹಳ ಒಳ್ಳೆಯದು. ಪ್ರೀತಿನ ನಾವು ಯಾವ ರೀತಿಯಲ್ಲಿ  ನೋಡ್ತೇವೋ ಅದು ಅಂತಹದೇ ರೂಪದಲ್ಲಿ  ನಮಗೆ ಸುತ್ತಲೂ ಕಾಣ್ತದೆ. ಇನ್ನೊಂದು, ಪ್ರೀತಿ ಬಗ್ಗೆ ಮಾತಾಡೋರೆಲ್ಲ ಪ್ರೀತಿಸಿರ್ಲೇ ಬೇಕು. ನಿಜ. ಅದು ಯಾರಾದ್ರೂ ಆಗಿರ್ಬಹುದು. ಅಮ್ಮ, ಅಪ್ಪ, ಕುಟುಂಬ, ಸ್ನೇಹಿತರು ಯಾರಾದ್ರೂ ಆಗಿರಬಹುದು. ಎಲ್ಲವನ್ನ ಒಂದೇ ಮಾಪನದಲ್ಲಿ ಅಳೆದು ನೋಡೋದು ತಪ್ಪು.

ಆದ್ರೂ ಕೊನೆಯಲ್ಲಿ ಒಂದು ಮಾತು- ನಮ್ಮ ಹುಟ್ಟಿನ ಮೊದಲೇ ನಮ್ಮನ್ನು ಕಲ್ಪಿಸಿಕೊಂಡು ಪ್ರೀತಿಮಾಡೋ ಫ್ಯಾಮಿಲಿಗೆ ಮೋಸ ಮಾಡ್ಬೇಡಿ. ಹಾಗೇ ಯಾರದೋ ಕುರುಡು ಪ್ರೀತಿಗೆ ಬಲಿಯಾಗಿ ಮೋಸ ಹೋಗಲು ಬೇಡಿ. ಪ್ರೀತಿ ಯಾವಾಗ, ಯಾರಿಗೆ, ಎಲ್ಲಿ, ಹೇಗೆ ಆಗ್ತದೆ ಅಂತ ಹೇಳಲು ಆಗೋಲ್ಲ. ಹಾಗಾಗಿ ಎಲ್ಲವೂ ಶಾಶ್ವತ ಅನ್ನೋ ಭ್ರಮೆಯೂ ಬೇಡ. ಎಲ್ಲರಿಗೂ ಎಲ್ಲ ಮಾತನ್ನು ಹೇಳಲೂ ಆಗದು, ಕೇಳಿ ತಿಳಿಯಲೂ ಆಗದು. ನಾವಾಗೆ ಅರ್ಥ ಮಾಡಿಕೊಳ್ಳೋ ಬುದ್ಧಿವಂತಿಕೆ ಹೊಂದಿರಬೇಕು.

ಕೊನೆಯಲ್ಲಿ ಹೇಳೋದಿಷ್ಟೆ- ಪ್ರೀತಿನ ಟೈಂ ಪಾಸ್ ಅಂತಾನೋ ಅಥವಾ ಅದನ್ನ  ವ್ಯಾಪಾರ ಅನ್ನೋ ರೀತಿಲಿ ಬಳಕೆ ಮಾಡೋ ಮುಂಚೆ ಒಂದಲ್ಲ ನೂರು ಸಲ ಯೋಚ್ನೆ ಮಾಡಿ ನೋಡೋದರಲ್ಲಿ ತಪ್ಪೇನಿಲ್ಲ. ನಮ್ಮ ಈಗಿನ ಯುಗದ  ಅದೆಷ್ಟೋ ಬುದ್ಧಿವಂತ ಜೀವಿಗಳಲ್ಲಿ  ವೇಗ ಹೆಚ್ಚಾಗಿದೆ ಆದ್ರೆ ಮಾನವೀಯತೆ, ಚಿಂತನಾ ಶಕ್ತಿ ಅನ್ನೋದು ಕಡಿಮೆಯಾಗಿದೆ. ಅಂತವರಿಗೆ ಇದೊಂದು ನನ್ನ ಪುಟ್ಟ ಕಿವಿಮಾತು..

ಮಹಾಲಕ್ಷ್ಮಿ ದೇವಾಡಿಗ

ಪತ್ರಿಕೋದ್ಯಮ ಪದವೀಧರೆ, ಉಡುಪಿ