ludo – Peepal Media

ಹೆಚ್ಚಿದ ಆನ್ಲೈನ್‌ ಗೇಮ್‌ ಹಾವಳಿ: ಹಣ ಕಳೆದುಕೊಂಡು ಎರಡು ಮಕ್ಕಳೊಡನೆ ಮನೆ ಬಿಟ್ಟ ಮಹಿಳೆ
ಬೆಂಗಳೂರು: ದಿನೇ ದಿನೇ ಆನ್ಲೈನ್‌ ಗ್ಯಾಂಬ್ಲಿಂಗ್‌ ಗೇಮ್‌ಗಳ ಹಾವಳಿ ಹೆಚ್ಚುತ್ತಿದ್ದು ಇದಕ್ಕೆ ಮಹಿಳೆಯರೂ ಬಲಿಯಾಗತೊಡಿದ್ದಾರೆ. ದೊಡ್ಡ ಮೊತ್ತದ ಬಹುಮಾನದ ಆಸೆ ತೋರಿಸಿ ಯುವ ಜನರನ್ನು ತನ್ನತ್ತ ಸೆಳೆದುಕೊಳ್ಳುವ ಈ ಗೇಮ್‌ಗಳು ಅವರನ್ನು ಸಾಲ ಕೂಪದಲ್ಲಿ ತಳ್ಳುತ್ತಿದೆ. ಹೀಗೆ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ನಾಪತ್ತೆಯಾಗುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ.

ಪ್ರಸ್ತುತ ಬೆಂಗಳೂರಿನ ಗರದ ಮಹಾಲಕ್ಷ್ಮಿ ಲೇಔಟ್​​ನ 26 ವರ್ಷದ ಮಹಿಳೆಯೊಬ್ಬಳು ಆನ್​ಲೈನ್​ ಲೂಡೋ​​​ಗೇಮ್ ಆಡಿ 4.6 ಲಕ್ಷ ರೂ. ಕಳೆದುಕೊಂಡಿದ್ದಲ್ಲದೇ, ಇದರಿಂದ ಹತಾಶೆಗೆ ಒಳಗಾಗಿ ಎರಡು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಪತ್ನಿ ಹಾಗೂ ಒಂದು ಮತ್ತು ಏಳು ವರ್ಷದ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪತಿ ದೂರು ನೀಡಿದ್ದಾರೆ.

ಈ ಮಹಿಳೆಯು ಕಳೆದ ವರ್ಷದಿಂದ ಆನ್​ಲೈನ್​ ಲೂಡೋ ಆಡಲು ಶುರುಮಾಡಿದ್ದು, ದಿನಗಳು ಕಳೆದಂತೆ ಮಹಿಳೆಗೆ ಇದು ಚಟವಾಗಿ ಪರಿಣಮಿಸಿದೆ. ಈ ಆಟದಿಂದಾಗಿ ಮಹಿಳೆ ಸಾಕಷ್ಟು ಹಣ ಕಳೆದುಕೊಂಡಳು. ಆದರೂ ಆಡುವುದನ್ನು ಬಿಡದೆ, ತನ್ನ ಚಿನ್ನಾಭರಣಗಳನ್ನು ಗಿರವಿ ಇಟ್ಟು 50,000 ರೂ. ಪಡೆದು ಆನ್​​ಲೈನ್​ ಲೂಡೋ ಆಡಿದ್ದಾಳೆ. ಇದೇ ಆನಲೈನ್‌ ಲೂಡೋ ಆಡುವ ಸಲುವಾಗಿ ಸಂಬಂಧಿಕರಿಂದ 1.7 ಲಕ್ಷ ರೂಪಾಯಿ ಸಾಲ ಪಡೆದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಮತ್ತೆ ಬೇರೆಡೆಯಿಂದ ಬರೊಬ್ಬರಿ 3.4 ಲಕ್ಷ ರೂ. ಸಾಲ ಮಾಡಿ ತನ್ನ ಆಟವನ್ನು ಮುಂದುವರೆಸಿ ಮತ್ತೆ ಕೈ ಸುಟ್ಟುಕೊಂಡಿದ್ದಾಳೆ.

ಇದನ್ನು ತಿಳಿದು ಗಾಬರಿಗೊಂಡ ಗಾಬರಿಗೊಂಡ ಪತಿ ಆನ್​ಲೈನ್​ ಗೇಮಿಂಗ್ ಆಡುವುದನ್ನು ನಿಲ್ಲಿಸುವಂತೆ ಹೇಳಿದ್ದಾನೆ. ಆದರೂ ಬಿಡದೆ ತನ್ನ ಆಟವನ್ನು ಮುಂದುವರೆಸಿದ್ದು, ಇದಕ್ಕಾಗಿ ಆಗಸ್ಟ್ ತಿಂಗಳಲ್ಲಿ ಮತ್ತೆ ತನ್ನ ಚಿನ್ನಾಭರಣಗಳನ್ನು ಗಿರವಿ ಇಟ್ಟು 1.2 ಲಕ್ಷ ರೂ. ಹಣ ಪಣಕ್ಕಿಟ್ಟು ಆಡಿ ಸೋತಿದ್ದಾಳೆ. ಈ ಮೂಲಕ ಮಹಿಳೆ ಬರೊಬ್ಬರಿ ಟ್ಟು 4.6 ಲಕ್ಷ ರೂ. ಹಣ ಕಳೆದುಕೊಂಡಿದ್ದಾಳೆ.

ಇದರಿಂದ ಬೇಸರಗೊಂಡ ಪತಿ ವಿಷಯವನ್ನು ಆಕೆಯ ತವರು ಮನೆಯಲ್ಲಿ ತಿಳಿಸಿದ್ದಾನೆ. ಪತಿ ಹೀಗೆ ಮಾಡಿದ್ದಕ್ಕೆ ಮಹಿಳೆ ಹೆದರಿಯೋ, ಬೇಸರಗೊಂಡೋ ತನ್ನ ಇಬ್ಬರು ಪುಟ್ಟ ಮಕ್ಕಳೊಡನೆ ಮನೆ ಬಿಟ್ಟು ಹೋಗಿದ್ದಾಳೆ.

ಮೊದಲೋ ಎಲ್ಲೋ ಅಡ್ಡೆಗಳಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಇಂತಹ ಜೂಜುಗಳು ಈಗ ಜನರ ಅಂಗೈಯ ಮೇಲೆ ಬಂದು ತಲುಪಿದ್ದು ಇದು ಇಂತಹ ಇನ್ನಷ್ಟು ಅನಾಹುತಗಳನ್ನು ಸೃಷ್ಟಿಸುವ ಮೊದಲು ಸರ್ಕಾರ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.