Lulu mall – Peepal Media

ವೈರಲ್ ವಿಡಿಯೋದಲ್ಲಿ ಯುವತಿ ಜೊತೆ ಅಶ್ಲೀಲವಾಗಿ ನಡೆದುಕೊಂಡಾತ ಯಾರು ಗೊತ್ತಾ? ಈ ಸ್ಟೋರಿ ಓದಿ
ಇತ್ತೀಚೆಗೆ ಬೆಂಗಳೂರಿನ ಲುಲು ಮಾಲ್ ನಲ್ಲಿ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಮಧ್ಯವಯಸ್ಕ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಧ್ಯ ಈ ವೈರಲ್ ವಿಡಿಯೋ ಹಿಂದೆ ಬಿದ್ದ ಬೆಂಗಳೂರು ಪೊಲೀಸರು ಆ ವ್ಯಕ್ತಿ ಯಾರು ಎಂಬುದನ್ನು ಕಂಡುಹಿಡಿದಿದ್ದಾರೆ.

ಜನನಿಬಿಡ ಪ್ರದೇಶಗಳಾದ ಮಾಲ್, ಮಾರ್ಕೆಟ್, ಫುಟ್ ಪಾತ್, ಸಾರ್ವಜನಿಕ ಸಾರಿಗೆ, ಬಸ್ ಸ್ಟಾಂಡ್ ಗಳಲ್ಲಿ ಮೈಗೆ ಮೈ ತಾಗಿಸಿಕೊಂಡು ಓಡಾಡುವವರ ವಿಕೃತಿ ಇಂದು ನಿನ್ನೆಯಲ್ಲ, ಹಿಂದಿನಿಂದಲೂ ಇಂತಹ ಕಾಮುಕರ ಸಂಖ್ಯೆ ಹೆಚ್ಚೇ ಇದೆ. ಮೂರ್ನಾಲ್ಕು ದಿನಗಳ ಹಿಂದೆ ಎಲ್ಲಾ ಕಡೆ ವೈರಲ್ ಆಗಿದ್ದು ಸಹ ಇಂತಹವರ ಅಸಭ್ಯತೆಗೆ ಸಾಕ್ಷಿಯಂತಿತ್ತು.

ಈ ವಿಡಿಯೋವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಮಾಲ್ ವ್ಯವಸ್ಥಾಪಕರ ಕಡೆಯಿಂದ ಕೇಸ್ ಪಡೆದು ತನಿಖೆಗೆ ಇಳಿದಿತ್ತು. ಈ ಮಧ್ಯೆ ಯುವತಿ ದೇಹವನ್ನ ವಿಕೃತವಾಗಿ ಮುಟ್ಟಿದ್ದ ವ್ಯಕ್ತಿ ಯಾರೂ ಎಂಬುದನ್ನು ಪೊಲೀಸ್ ಇಲಾಖೆ ಭೇದಿಸಿದೆ. ತನಿಖೆಗೆ ಇಳಿದಿದ್ದ ಇಲಾಖೆಯ ಅಧಿಕಾರಿಗಳಿಗೇ ಈ ವ್ಯಕ್ತಿಯ ಹಿನ್ನೆಲೆ ಕೇಳಿ ಆಶ್ಚರ್ಯ ಕಾದಿತ್ತು.

ಯುವತಿಯ ಮೈಯನ್ನು ಅಶ್ಲೀಲವಾಗಿ ಮುಟ್ಟಿದ್ದ ವ್ಯಕ್ತಿ, ದಶಕಗಳ ಕಾಲ ಮಕ್ಕಳಿಗೆ ಪಾಠ ಹೇಳಿದ ಶಿಕ್ಷಕನೇ ಈ ವ್ಯಕ್ತಿ ಎಂಬುದು ತಿಳಿದು ಬಂದಿದೆ. ಆತನ ಹಿನ್ನೆಲೆ ಜಾಲಾಡಿದ ಪೊಲೀಸರಿಗೆ ಆತ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯ ನಿವೃತ್ತಿ ಮುಖ್ಯ ಶಿಕ್ಷಕ ಅಶ್ವತ್ ನಾರಯಣ ಎನ್ನುವುದು ದೃಢವಾಗಿ ಪತ್ತೆಯಾಗಿದೆ.

ಶಿವನಹಳ್ಳಿ ಬಳಿ ಇರೋ ಮಠದ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತಿಯಾಗಿರೋ ಅಶ್ವತನಾರಯಣ ಸದ್ಯ ನಿವೃತ್ತ ಜೀವನ ನಡೆಸುತ್ತಿದ್ದಾರೆ. ತುಂಬು ಕುಟುಂಬದಲ್ಲಿ ಇದ್ದರೂ ನಿವೃತ್ತ ಶಿಕ್ಷಕ ಇಂಥಹ ಕುಕೃತ್ಯಕ್ಕೆ ಕೈ ಹಾಕಿ ತಲೆ ಮರೆಸಿಕೊಂಡಿರೋದು ವಿಪರ್ಯಾಸವೇ ಸರಿ.

ಸಧ್ಯ ಪೊಲೀಸರು ಈತನ ಬೆನ್ನ ಹಿಂದೆ ಬೀಳುವುದು ಖಚಿತವಾಗುತ್ತಿದ್ದಂತೆ, ಶಿಕ್ಷಕ ಮನೆಯಿಂದ ಕಾಲ್ಕಿತ್ತಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲ ಸಮಯ ಕಾದ ನಂತರ ಶಿಕ್ಷಕ ಪೊಲೀಸರಿಗೆ ಸೆರೆ ಆಗಿದ್ದಾನೆ ಎಂದು ತಿಳಿದು ಬಂದಿದೆ.