Madya pradesha – Peepal Media

‘ಸತ್ತರೂ ಹೈಕಮಾಂಡ್ ಮುಂದೆ ಕೈ ಚಾಚುವುದಿಲ್ಲ’ ಎಂದದ್ದೇಕೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ?
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಆಯ್ಕೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಬಿಜೆಪಿ ಪಕ್ಷದಲ್ಲೇ ಈಗ ಅಸಮಾಧಾನದ ಗಾಳಿ ಬೀಸಿದೆ. ಸ್ವತಃ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಹೈಕಮಾಂಡ್ ವಿರುದ್ಧ ತಿರುಗಿ ನಿಂತಿದ್ದಾರೆ. ರಾಜ್ಯದ ನೂತನ ಮುಖ್ಯಮಂತ್ರಿ ನೇಮಕದ ವಿರುದ್ಧ ಭಾರತೀಯ ಜನತಾ ಪಕ್ಷದ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮಧ್ಯಪ್ರದೇಶದ ನಾಲ್ಕು ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು, ‘ತಾನು ಪಕ್ಷಕ್ಕಾಗಿ ಇಷ್ಟು ವರ್ಷ ಕೆಲಸ ಮಾಡಿದ್ದೇನೆ, ನಾಲ್ಕು ಅವಧಿಯಲ್ಲಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಆದರೆ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನೂ ಹೈಕಮಾಂಡ್ ಪರಿಗಣಿಸದೇ ಇರುವುದು ಬೇಸರ ತಂದಿದೆ ಎಂದು ಆಪ್ತ ವಲಯದಲ್ಲಿ ಅಸಮಾಧಾನ ಹೊರಹಾಕಿದ್ದರು. ಈಗ ಬಹಿರಂಗವಾಗಿ ಪಕ್ಷದ ನಿರ್ಧಾರದ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೊಸ ಸರ್ಕಾರ ರಚನೆಯಲ್ಲಿ ನಿಮ್ಮ ಅಭಿಪ್ರಾಯ ಪರಿಗಣಿಸಿದ್ದಾರೆಯೇ, ಮುಖ್ಯಮಂತ್ರಿಯಾಗಿದ್ದ ತಮಗೆ ಮುಂದಿನ ಅವಧಿಯಲ್ಲಿ ಮಹತ್ತರ ಜವಾಬ್ದಾರಿಗಳು ಏನಾದರೂ ಸಿಗಲಿವೆಯೇ, ನಿಮಗಾಗಿ ನೀವು ಏನನ್ನಾದರೂ ಹೈಕಮಾಂಡ್ ಮುಂದೆ ಕೇಳಿದ್ದೀರಾ ಎನ್ನುವ ಪ್ರಶ್ನೆಗೆ ʻನಾನು ಸಾಯುತ್ತೇನೇ ಹೊರತು ದೆಹಲಿಗೆ ಹೋಗಲ್ಲʼ ಎಂದು ಹೇಳಿದರು.

“ನಾನು ಹೋಗಿ ನನಗಾಗಿ ಏನಾದರೂ ಕೇಳುವುದಕ್ಕಿಂತ ಸಾಯುತ್ತೇನೆ..‌‌. ಅದಕ್ಕಾಗಿಯೇ ನಾನು ದೆಹಲಿಗೆ ಹೋಗುವುದಿಲ್ಲ ಎಂದು ಹೇಳಿದೆ” ಎಂದು ನಿರ್ಗಮಿತ ಮಧ್ಯಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.

#WATCH | Bhopal: Former Madhya Pradesh Chief Minister Shivraj Singh Chouhan says, "…Apne liye kuchh maangne jaane se behtar, main marna samjhunga…Isiliye meine kaha tha main dilli nahi jaunga." pic.twitter.com/pnWaAd9Wqm
— ANI (@ANI) December 12, 2023

ಬಿಜೆಪಿ ಸಚಿವರಿಂದ ಮತ್ತೊಮ್ಮೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ! ; ಪತ್ರಕರ್ತನ ಮೇಲೆ 11 ಎಫ್ಐಆರ್
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪತ್ರಕರ್ತರ ಹಕ್ಕುಗಳನ್ನು ಕಸಿಯುತ್ತಿದೆ, ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಆರೋಪದ ನಡುವೆಯೇ ಈಗ ಬಿಜೆಪಿ ವಿರುದ್ಧ ವರದಿ ಮಾಡಿದ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರ ಮೇಲೆ 11 ಎಫ್ಐಆರ್ ದಾಖಲಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರು ಮಹಿಳೆಯೊಬ್ಬಳ ಜೊತೆಗಿದ್ದರೆನ್ನಲಾದ ವಿವಾದಿತ ವೀಡಿಯೊ ಹಲವು ಸದ್ದು ಮಾಡಿದೆ. ಮಧ್ಯಪ್ರದೇಶ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ವಿಡಿಯೋ ಬಗ್ಗೆ ಅವರ ಹೆಸರನ್ನೂ ಉಲ್ಲೇಖಿಸದೇ ವರದಿ ಮಾಡಲಾಗಿತ್ತು.

ಈ ಬಗ್ಗೆ ಮಧ್ಯಪ್ರದೇಶ ಮೂಲದ ದೈನಿಕ್ ಖುಲಾಸಾ ಪತ್ರಿಕೆಯ ವರದಿಗಾರ ಜಲಂ ಸಿಂಗ್ ಕಿರಾರ್ ಅವರು ಸೆ. 7 ರಂದು ಮಹಿಳೆಯೊಬ್ಬಳ ಜೊತೆಗಿದ್ದರೆನ್ನಲಾದ ವಿವಾದಿತ ವೀಡಿಯೊದ ಬಗ್ಗೆ ಉಲ್ಲೇಖಿಸಿ ಬರೆಯಲಾಗಿತ್ತು.

ಆದರೆ ವರದಿಗಾರ ಜಲಂ ಸಿಂಗ್ ಕಿರಾರ್ ಅವರು ಎಲ್ಲೂ ಸಹ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರ ಹೆಸರನ್ನು ನೇರವಾಗಿ ಎಲ್ಲೂ ಸಹ ಉಲ್ಲೇಖಿಸಿ ಬರೆದಿರಲಿಲ್ಲ. ವಿವಾದಿತ ವೀಡಿಯೊ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜಕಾರಣಿಯೊಬ್ಬರಿಗೆ ಗುನಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ ಎಂದು ಬರೆಯಲಾಗಿತ್ತು.

ವರದಿ ಮಾಡಿದ ಬೆನ್ನಲ್ಲೇ ವರದಿಗಾರ ಜಲಂ ಸಿಂಗ್ ಕಿರಾರ್ ಮೇಲೆ 11 ಎಫ್ಐಆರ್ ದಾಖಲಾಗಿದೆ. ಬೇರೆ ಮೂರನೇ ವ್ಯಕ್ತಿಗಳ ಹೆಸರಿನಲ್ಲಿ ಬ್ಲಾಕ್ ಮೇಲ್, ಸುಲಿಗೆ, ಫೋರ್ಜರಿ ಇತರೆ ಆರೋಪಗಳನ್ನು ಹೊರಿಸಿ ಅವರ ವಿರುದ್ಧ ಒಂದರ ಹಿಂದೆ ಒಂದರಂತೆ ಪ್ರಕರಣ ದಾಖಲಿಸಲಾಗಿದೆ.

ವರದಿಯಲ್ಲಿ ಯಾವುದೇ ರಾಜಕಾರಣಿಗಳ ಹೆಸರನ್ನೂ ಉಲ್ಲೇಖಿಸದಿದ್ದರೂ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ ಎಂದು ದೈನಿಕ್ ಖುಲಾಸಾ ಪತ್ರಿಕೆಯ ಸಂಪಾದಕ ಸುರೇಶ್ ಆಚಾರ್ಯ ವಾದಿಸಿದ್ದಾರೆ. ಸಚಿವರೊಬ್ಬರು, ಸಿಂಗ್ ವಿರುದ್ಧ ಇತರಿಂದ ಬಹುಸಂಖ್ಯೆಯ ದೂರುಗಳು ದಾಖಲಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಒಂದು ಕಡೆ ನರೇಂದ್ರ ಮೋದಿ ಅಮೇರಿಕಾ ಸಂಸತ್ತಿನಲ್ಲಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ದಕ್ಕೆ ಆಗಿಲ್ಲ ಎಂದು ಪ್ರತಿಪಾದಿಸಿದರೆ, ಇನ್ನೊಂದು ಕಡೆ ಅವರದೇ ಪಕ್ಷದ ಸಚಿವರೊಬ್ಬರು ಪತ್ರಕರ್ತರ ಮೇಲೆ ಈ ರೀತಿಯಲ್ಲಿ ಸ್ವಾತಂತ್ರ್ಯ ಕಸಿಯುವ ಕೆಲಸಕ್ಕೆ ಮುಂದಾಗಿದ್ದು ವಿಪರ್ಯಾಸವೇ ಸರಿ ಎಂದು ಹಲವು ಪತ್ರಿಕೆಗಳು ಇದನ್ನು ಖಂಡಿಸಿ ವರದಿ ಮಾಡಿವೆ.

ಪಂಚರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ ಮಾಡಿದ ಕೇಂದ್ರ ಚುನಾವಣಾ ಆಯೋಗ
ಬಹು ನಿರೀಕ್ಷಿತ 5 ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಅದರಂತೆ ದೇಶದ ಐದು ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಹಾಗೂ ಮಿಜೋರಾಂ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ.

ಕೇಂದ್ರ ಚುನಾವಣಾ ಆಯುಕ್ತರಾದ ರಾಜೀವ್‌ ಕುಮಾರ್‌ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಂಚರಾಜ್ಯಗಳ ಚುನಾವಣೆ ಮತ್ತು ಅವು ನಡೆಯುವ ಹಂತ ಹಾಗೂ ಫಲಿತಾಂಶದ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಮುಖವಾಗಿ ಛತ್ತೀಸ್‌ಗಢದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್‌ 7 ಹಾಗೂ 17 ರಂದು ಚುನಾವಣಾ ದಿನಾಂಕ ನಿಗದಿಯಾಗಿದೆ. ಇನ್ನು ಮಿಜೋರಾಂನಲ್ಲಿ ನವೆಂಬರ್‌ 7 ರಂದು ಚುನಾವಣೆ ನಡೆಯಲಿದೆ. ಹಾಗೆಯೇ ಮಧ್ಯಪ್ರದೇಶದಲ್ಲಿ ನವೆಂಬರ್‌ 17ರಂದು ಹಾಗೂ ರಾಜಸ್ಥಾನದಲ್ಲಿ ನವೆಂಬರ್ 23 ರಂದು ಚುನಾವಣೆ ನಡೆಯಲಿದೆ. ಹಾಗೂ ಕೊನೆಯದಾಗಿ ತೆಲಂಗಾಣದಲ್ಲಿ ನವೆಂಬರ್‌ 30 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಆಯುಕ್ತರಾದ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ‌.

ಈ ಐದೂ ರಾಜ್ಯಗಳ ಚುನಾವಣಾ ಫಲಿತಾಂಶ ಒಂದೇ ದಿನದಲ್ಲಿ ಹೊರಬೀಳುವ ಬಗ್ಗೆಯೂ ಮಾಹಿತಿ ಹೊರಹಾಕಿದ್ದಾರೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್‌ 3 ರಂದು ನಡೆಯಲಿದೆ.

ತೆಲಂಗಾಣ (Telangana), ರಾಜಸ್ಥಾನ (Rajasthan), ಛತ್ತೀಸ್‌ಗಢ (Chhattisgarh, ) ಮತ್ತು ಮಧ್ಯಪ್ರದೇಶದ (Madhya Pradesh) ಶಾಸಕಾಂಗ ಸಭೆಗಳ ಅವಧಿಯು ಜನವರಿ 2024 ರಲ್ಲಿ ವಿವಿಧ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿದೆ, ಆದರೆ ಮಿಜೋರಾಂ (Mizoram) ವಿಧಾನಸಭೆಯ ಅವಧಿಯು ಈ ವರ್ಷ ಡಿಸೆಂಬರ್ 17 ರಂದು ಕೊನೆಗೊಳ್ಳಲಿದೆ. ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಆಡಳಿತ ನಡೆಸುತ್ತಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ಈಶಾನ್ಯ ರಾಜ್ಯದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ NDA ಮೈತ್ರಿಕೂಟದ ಪಕ್ಷ ಅಧಿಕಾರದಲ್ಲಿದೆ.

ಒಟ್ಟು ಐದು ರಾಜ್ಯಗಳಲ್ಲಿ 679 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಈ ಐದೂ ರಾಜ್ಯಗಳಲ್ಲಿ 16.14 ಕೋಟಿ ಮತದಾರರು ಇದ್ದಾರೆ ಎಂದು ರಾಜೀವ್‌ ಕುಮಾರ್‌ ವಿವರ ನೀಡಿದರು. ಮಿಜೋರಾಮ್‌ನಲ್ಲಿ 8.52 ಲಕ್ಷ, ಛತ್ತೀಸ್‌ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಹಾಗೂ ತೆಲಂಗಾಣದಲ್ಲಿ 3.17 ಕೋಟಿ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗ (Election Commission Of India) ಮಾಹಿತಿ ನೀಡಿದೆ. ಈ ಐದೂ ರಾಜ್ಯಗಳಲ್ಲಿ 60.2 ಲಕ್ಷ ಹೊಸ ಮತದಾರರು ಇದ್ದಾರೆ. ಮುಂಬರುವ 5 ರಾಜ್ಯಗಳಲ್ಲಿ 7.8 ಕೋಟಿ ಮಹಿಳೆಯರು ಮತ ಚಲಾವಣೆ ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ; ಆರೋಪಿಗೆ ಬಿಜೆಪಿ ಜೊತೆಗೆ ನಂಟು!
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಬುಡಕಟ್ಟು ಕಾರ್ಮಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ಆರು ದಿನಗಳ ಹಳೆಯದಾಗಿದ್ದು, ಮಂಗಳವಾರ ಸಂಜೆಯ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆರೋಪಿಯನ್ನು ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಪೊಲೀಸರು ಅವರ ವಿರುದ್ಧ ಐಪಿಸಿಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ವೀಡಿಯೋವನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲು ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಯನ್ನು ಜಾರಿಗೊಳಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

https://twitter.com/ChouhanShivraj/status/1676216922243997697?t=AXfV3nT2xe_nXUFCtBZCsg&s=19

ಆರೋಪಿಗೆ ಬಿಜೆಪಿ ಜತೆ ನಂಟು ಇದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಪ್ರವೇಶ್ ಶುಕ್ಲ ಮಧ್ಯಪ್ರದೇಶದ ಬಿಜೆಪಿ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದದ್ದು ಆತನ ಸಾಮಾಜಿಕ ಜಾಲತಾಣಗಳ ಚಿತ್ರಗಳಲ್ಲಿ ಕಾಣಬಹುದು. ‘ಸುಸಂಸ್ಕೃತ ಸಮಾಜದಲ್ಲಿ ಬುಡಕಟ್ಟು ಸಮುದಾಯದ ಯುವಕರೊಂದಿಗೆ ಇಂತಹ ಹೇಯ ಕೃತ್ಯಕ್ಕೆ ಅವಕಾಶವಿಲ್ಲ. ಆರೋಪಿ ಬಿಜೆಪಿ ಪಕ್ಷದವನೇ ಆಗಿದ್ದು ಬಿಜೆಪಿ ಪಕ್ಷ ಇದರ ಹೊಣೆ ಹೊರಬೇಕು” ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆಯು ಇಡೀ ಮಧ್ಯಪ್ರದೇಶವನ್ನು ನಾಚಿಕೆಗೇಡು ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಮತ್ತು ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು. ಈಗಾಗಲೇ ಮಧ್ಯಪ್ರದೇಶ ರಾಜ್ಯ ಆದಿವಾಸಿಗಳ ಮೇಲಿನ ದೌರ್ಜನ್ಯದ ವಿಷಯದಲ್ಲಿ ಮೊದಲ ಸಾಲಿನಲ್ಲಿದೆ. ಇದನ್ನು ನಿಯಂತ್ರಣಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ಉಸ್ತುವಾರಿ ಆಶಿಶ್ ಅಗರ್ವಾಲ್, ಆರೋಪಿಯು ಪಕ್ಷದೊಂದಿಗಿನ ಸಂಬಂಧ ಹೊಂದಿರುವುದನ್ನು ನಿರಾಕರಿಸಿದ್ದಾರೆ. “ಬುಡಕಟ್ಟು ಸಮುದಾಯದ ವಿರುದ್ಧ ನಡೆಯುವ ಪ್ರತಿಯೊಂದು ಹೇಯ ಕೃತ್ಯವನ್ನು ಬಿಜೆಪಿ ಸದಾ ವಿರೋಧಿಸುತ್ತದೆ. ಈ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಬಿಜೆಪಿ ಕೂಡಾ ಆಗ್ರಹಿಸುತ್ತದೆ” ಎಂದು ಹೇಳಿದ್ದಾರೆ.

ಆದರೆ ಹಲವಷ್ಟು ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳಲ್ಲಿ ಆರೋಪಿ ಪ್ರವೇಶ್ ಶುಕ್ಲ ಬಿಜೆಪಿ ಪಕ್ಷದ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದು ಬಹಿರಂಗಪಡಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳು ಹಲವಷ್ಟು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಆರೋಪಿ ಬಿಜೆಪಿ ಪಕ್ಷದ ಸಂಪರ್ಕದಲ್ಲಿ ಇರುವವನು ಎಂದು ಸಾಕ್ಷೀಕರಿಸುತ್ತಿವೆ.

ಭಾರತ್ ಜೋಡೋ ಯಾತ್ರೆ ವೇಳೆ ಎಡವಿ ಬಿದ್ದ ದಿಗ್ವಿಜಯ್ ಸಿಂಗ್ : ಕೆಟ್ಟ ರಸ್ತೆಗಳೇ ಇದಕ್ಕೆ ಕಾರಣ ಎಂದ ಕಾಂಗ್ರೆಸ್
ಮಣಿಹಾರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಬರ್ವಾಹಾ ಬಳಿ ಶನಿವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾಗ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಯತಪ್ಪಿ ಬಿದ್ದಿದ್ದಾರೆ. ಈ ಘಟನೆಯು ರಾಜ್ಯದ ರಸ್ತೆಗಳ ಸ್ಥಿತಿಯ ಬಗ್ಗೆ ವಿರೋಧ ಪಕ್ಷ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಮೆರವಣಿಗೆಯ ನಡುವೆ ಚಹಾ ವಿರಾಮದ ಸಮಯದಲ್ಲಿ ರಸ್ತೆ ಬದಿಯ ರೆಸ್ಟೋರೆಂಟ್ ಕಡೆಗೆ ಚಲಿಸುವಾಗ ದಿಗ್ವಿಜಯ್ ಸಿಂಗ್ ಬಿದ್ದು ಗಾಯಗೊಂಡಿದ್ದಾರೆ.

ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ದಿಗ್ವಿಜಯ್ ಸಿಂಗ್ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಈವರೆಗೆ ನಾಲ್ಕು ಬಾರಿ ನೆಲಕ್ಕೆ ಬಿದ್ದಿದ್ದಾರೆ. ಆದಾಗ್ಯೂ, ಮಧ್ಯಪ್ರದೇಶದಲ್ಲಿ ಅವರು ಮೊದಲ ಬಾರಿಗೆ ಕುಸಿದಿದು ಬಿದ್ದಿದ್ದು, ರಾಜ್ಯವು ಕೆಟ್ಟ ರಸ್ತೆಗಳನ್ನು ಹೊಂದಿರುವುದು ಇದಕ್ಕೆ ಕಾರಣʼ ಎಂದು ವ್ಯಂಗಿಸಿದ್ದಾರೆ.

ಆಡಳಿತಾರೂಢ ಬಿಜೆಪಿಯನ್ನು ಅಣಕಿಸಿದ ರಮೇಶ್‌ರವರು, ಮಧ್ಯಪ್ರದೇಶದ ರಸ್ತೆಗಳು ಅಮೆರಿಕದ ವಾಷಿಂಗ್ಟನ್ ಡಿಸಿಗಿಂತ ಉತ್ತಮವಾಗಿವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.

ʼಮಧ್ಯಪ್ರದೇಶದ ರಸ್ತೆಗಳು ಕಿಲ್ಲರ್ ರಸ್ತೆಗಳಾಗಿವೆ ಮತ್ತು ವಾಷಿಂಗ್ಟನ್ ಡಿಸಿಗಿಂತ ಉತ್ತಮವಾಗಿಲ್ಲ. ಕೆಟ್ಟ ರಸ್ತೆಗಳಿಂದಾಗಿ ರಾಜ್ಯದಲ್ಲಿ ಮೂರು ಬಾರಿ ಬೀಳುವುದರಿಂದ ನನ್ನನ್ನು ನಾನು ರಕ್ಷಿಸಿಕೊಂಡಿದ್ದೇನೆʼ ಎಂದು ರಮೇಶ್ ಹೇಳಿದ್ದಾರೆ.

ಬಿಜೆಪಿ ನಾಯಕ ನರೇಂದ್ರ ಸಲೂಜಾ ಅವರು ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿ, ರಾಜ್ಯಸಭಾ ಸಂಸದರು ರಸ್ತೆ ಸ್ಥಿತಿಗಿಂತ ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ತಳ್ಳುವ ಕಾರಣದಿಂದಾಗಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

अरे ये कैसा अनुशासन…?

यात्रा में धक्का मुक्की से वरिष्ठ नेता गिर रहे है…

चलो हटो यहाँ से… pic.twitter.com/mazFezGR1Q
— Narendra Saluja (@NarendraSaluja) November 26, 2022

ಜಬಲ್ಪುರದಲ್ಲಿ ನಡೆದ ಭೀಕರ ಕೊಲೆ ; ಜಾಲತಾಣದಲ್ಲಿ ಕೊಲೆಯ ಮಾಹಿತಿ ಬಿಟ್ಟ ಆರೋಪಿ
ದೇಶದಾದ್ಯಂತ ಸಂಚಲನ ಮೂಡಿಸಿ ಭಯಾನಕ ವಿವರಗಳೊಂದಿಗೆ ಸುದ್ದಿಯಾಗಿರುವ ದೆಹಲಿ ಶ್ರದ್ಧಾ ಕೊಲೆ ಪ್ರಕರಣದ ಬೆನ್ನಲ್ಲೇ, ಇದೇ ರೀತಿಯ ಮತ್ತೊಂದು ಭಯಾನಕ ಪ್ರಕರಣ ಮಧ್ಯಪ್ರದೇಶದ ಕಡೆಯಿಂದ ಸುದ್ದಿಯಾಗುತ್ತಿದೆ. ಅಭಿಜಿತ್ ಪಾಟಿದಾರ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣಗಳ ಮೂಲಕ ತಾನು ಕೊಲೆ ಮಾಡಿದ್ದನ್ನು ಬಹಿರಂಗಪಡಿಸಿದ್ದಾನೆ.

ಇಂತಹ ಭಯಾನಕ ಪ್ರಕರಣವೊಂದು ನಡೆದು ಒಂದು ವಾರದ ಮೇಲಾದರೂ ಕೊಲೆಗಾರ ಅಭಿಜಿತ್ ಪಾಟಿದಾರ್ ನನ್ನು ಬಂಧಿಸಲು ಮಧ್ಯಪ್ರದೇಶ ಪೊಲೀಸರು ವಿಫಲರಾಗಿದ್ದಾರೆ. ದುರಂತ ಎಂದರೆ ದೆಹಲಿ ಶ್ರದ್ಧಾ ಕೊಲೆ ಪ್ರಕರಣದ ಬಗ್ಗೆ ಮೇಲಿಂದ ಮೇಲೆ ವರದಿ ನೀಡುತ್ತಿರುವ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಮಧ್ಯಪ್ರದೇಶದ ಇಂತಹ ಭಯಾನಕ ಪ್ರಕರಣವನ್ನು ಕಂಡೂ ಕಾಣದಂತೆ ಕೇವಲ Flash News ನ್ನು ಅಷ್ಟೆ ಬಿತ್ತರಿಸಿ ಕೆಲಸ ಮುಗಿಸಿವೆ.

ಮಧ್ಯಪ್ರದೇಶದ ಜಬಲ್ಪುರ್ ನ ಮೇಕ್ಲಾ ರೆಸಾರ್ಟ್ ನಲ್ಲಿ ಕೊಲೆ ನಡೆದ ನಂತರ ಕೊಲೆಗಾರ ಅಭಿಜಿತ್ ಪಾಟಿದಾರ್ ಜಾಲತಾಣಗಳ ಮೂಲಕ ವಿಡಿಯೋ ಮಾಡಿದ್ದು ಸಧ್ಯ ವಿಡಿಯೋ ವೈರಲ್ ಆಗಿದೆ. ಶಿಲ್ಪಾ ರಜಿಯಾ (25) ಎಂಬ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವುದನ್ನು ಕೊಲೆಗಾರ ವಿಡಿಯೋ ಮೂಲಕ ಸಾಕ್ಷಿ ಬಿಟ್ಟಿದ್ದಾನೆ. ನಂತರ “ಬೇವಾಫೈ ನಹೀ ಕರ್ನೆ ಕಾ” (ನಂಬಿಕೆಗೆ ದ್ರೋಹ ಮಾಡಬೇಡಿ) ಎನ್ನುವ ಮೂಲಕ ಕೊಲೆ ಪ್ರಕರಣದ ಗಂಭೀರ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ನಂತರ ಆತ ಹಾಸಿಗೆ ಮೇಲಿರುವ ಹೊದಿಕೆಯನ್ನು ತಗೆದು ಕೊಲೆ ಮಾಡಿರುವ ಹೆಣ್ಣಿನ ಮೃತದೇಹವನ್ನು ತೋರಿಸಿದ್ದಾನೆ. ಶಿಲ್ಪಾ ರಜಿಯಾ ಎಂಬ ಯುವತಿ ಕತ್ತು ಸೀಳಿದ ಭಯಾನಕ ಸ್ಥಿತಿಯಲ್ಲಿ ವಿಡಿಯೋದಲ್ಲಿ ಪತ್ತೆಯಾಗಿದೆ.

ಅಭಿಜಿತ್ ಪಾಟಿದಾರ್ ನಡೆಸಿದ ಕೊಲೆಯ ಹಿನ್ನೆಲೆಯಲ್ಲಿ ಇದೊಂದು ಹಣಕಾಸಿನ ವ್ಯವಹಾರದ ಕೊಲೆ ಎಂಬುದು ಸಾಭೀತಾಗಿದೆ. ಅಭಿಜಿತ್ ನ ಸ್ನೇಹಿತ ಜಿತೇಂದ್ರ ಎಂಬ ವ್ಯಕ್ತಿಯ ಸೂಚನೆಯ ಮೇಲೆ ಈ ಕೊಲೆ ಮಾಡಿರುವುದಾಗಿ ಅಭಿಜಿತ್ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಶಿಲ್ಪಾ ರಜಿಯಾ ಅವರು ಜಿತೇಂದ್ರನ ಬಳಿಯಿಂದ 12 ಲಕ್ಷ ರೂಪಾಯಿ ತಗೆದುಕೊಂಡಿರುತ್ತಾರೆ. ನಡುವೆ ವ್ಯವಹಾರದಲ್ಲಿ ಬಂದ ವೈಮನಸ್ಸಿನಿಂದ ಜಿತೇಂದ್ರ ಆಕೆಯನ್ನು ಕೊಲೆಗೈಯಲು ಅಭಿಜಿತ್ ಗೆ ತಿಳಿಸಿದ್ದಾನೆ. ವಿಡಿಯೋ ನಡೆಸಿದ ಸಂದರ್ಭದಲ್ಲಿ ಅಭಿಜಿತ್, ಜಿತೇಂದ್ರ ಮತ್ತು ಸುಮಿತ್ ಪಟೇಲ್ ಎಂಬ ಹೆಸರು ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗಾರ ಅಭಿಜಿತ್ ಪಾಟಿದಾರ್ ನ ಹುಡುಕಾಟ ಇನ್ನೂ ಮುಂದುವರೆದಿದೆ.

ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ಶುಕ್ಲಾ ಮಾಧ್ಯಮಗಳೊಂದಿಗೆ ಮಾತನಾಡಿ, ಅಭಿಜಿತ್ ಪಾಟ್ನಾದಲ್ಲಿರುವ ಜಿತೇಂದ್ರ ಅವರ ಮನೆಯಲ್ಲಿ ಒಂದು ತಿಂಗಳ ಕಾಲ ತಂಗಿದ್ದರು. ಈ ಸಂದರ್ಭದಲ್ಲಿ ಕೊಲೆ ವಿಚಾರವಾಗಿ ಮಾತುಕತೆ ನಡೆದಿರಬಹುದು. ಸಧ್ಯ ಬಿಹಾರದ ಹೊರತಾಗಿ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ವಿವಿಧ ಭಾಗಗಳಿಗೆ ಅಭಿಜಿತ್‌ನ ಹುಡುಕಾಟಕ್ಕಾಗಿ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಲೆಯ ವಿವರಗಳನ್ನು ಹಂಚಿಕೊಂಡ ಪೊಲೀಸರು “ಆರೋಪಿ ಅಭಿಜಿತ್ ನವೆಂಬರ್ 6 ರಂದು ಮೇಖ್ಲಾ ರೆಸಾರ್ಟ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದಾನೆ. ರಾತ್ರಿ ಅವನು ತನ್ನ ಕೋಣೆಯಲ್ಲಿ ಒಬ್ಬನೇ ಇದ್ದನು. ಮರುದಿನ ಮಧ್ಯಾಹ್ನ ಅವನನ್ನು ಭೇಟಿಯಾಗಲು ಶಿಲ್ಪಾ ರಜಿಯಾ ರೆಸಾರ್ಟ್‌ಗೆ ಬಂದಿರುತ್ತಾರೆ. ನಂತರ ಅವರು ಊಟಕ್ಕೆ ಆರ್ಡರ್ ಮಾಡುತ್ತಾರೆ. ಸುಮಾರು ಒಂದು ಗಂಟೆಯ ನಂತರ, ಆರೋಪಿ ಹೋಟೆಲ್‌ಗೆ ರೂಂ ಗೆ ಬೀಗ ಹಾಕಿ ಒಬ್ಬರೇ ಹೊರಟಿದ್ದಾನೆ. ನಂತರ ನವೆಂಬರ್ 8 ರಂದು ಹೋಟೆಲ್ ಆಡಳಿತ ಮಂಡಳಿ ಬಾಗಿಲು ಒಡೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ” ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಸಧ್ಯ ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ಸೈಬರ್ ಸೆಲ್ ಜೊತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಅಭಿಜಿತ್ ಸೇರಿದಂತೆ ಇನ್ನಿತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ಚುರ್ಹತ್ ಬೈಪಾಸ್‌ ಕಾಮಗಾರಿ ಬಹುತೇಕ ಪೂರ್ಣ: ನಿತಿನ್ ಗಡ್ಕರಿ
ಮಧ್ಯಪ್ರದೇಶ: ಮಧ್ಯಪ್ರದೇಶದ ರಾಷ್ಟ್ರೀಯ ಹೆದ್ದಾರಿ NH 75E ನ ರೇವಾ-ಸಿಧಿ ವಿಭಾಗದಲ್ಲಿನ ಅವಳಿ ಸುರಂಗ ಸೇರಿದಂತೆ ಚುರ್ಹತ್ ಬೈಪಾಸ್‌ನ ಕಾಮಗಾರಿ ಕೆಲಸ ಬಹುತೇಕ ಪೂರ್ಣಗೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ನಿತಿನ್‌ ಗಡ್ಕರಿ

ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಅವರು, ಸುಸ್ಥಿರ ಅಭಿವೃದ್ಧಿ ಮತ್ತು ಮಾನವ, ಪ್ರಕೃತಿ ಮತ್ತು ವನ್ಯಜೀವಿಗಳ ಸಾಮರಸ್ಯದ ಸಹಬಾಳ್ವೆಯನ್ನು ಖಾತ್ರಿಪಡಿಸುವ ದೃಷ್ಟಿಯೊಂದಿಗೆ ಮುಂದುವರಿಯುತ್ತಿರುವ ಈ ಬೈಪಾಸ್, ಅವಳಿ ಸುರಂಗವನ್ನು ಹೊಂದಿದ್ದು ಕಾಡಿನಲ್ಲಿರುವ ವನ್ಯಜೀವಿಗಳ ಚಲನೆಗೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸೂಕ್ತ ಸಂಖ್ಯೆಯ ಅಂಡರ್‌ಪಾಸ್‌ ಗಳಿಂದ ರಸ್ತೆ ಅಪಘಾತಗಳ ಸಾಧ್ಯತೆಗಳು ಕಡಿಮೆಯಾಗುತ್ತದೆ ಮತ್ತು ರಸ್ತೆ ಸುರಕ್ಷತೆಯೂ ಹೆಚ್ಚುತ್ತದೆ. ಇನ್ನೂ ಸುರಂಗದ ನಿರ್ಮಾಣವು ಮೊಹಾನಿಯಾ ಘಾಟ್‌ನಲ್ಲಿನ ಟ್ರಾಫಿಕ್‌ ಅಡಚಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಪ್ರಯಾಣಿಕರು ಸುಗಮವಾಗಿ ಸಂಚಾರ ನಡೆಸಬಹುದು ಎಂದು ಹೇಳಿದ್ದಾರೆ.

ರೇವಾ-ಸಿಧಿ ವಿಭಾಗದಲ್ಲಿನ ಅವಳಿ ಸುರಂಗ

ʼಟ್ವಿನ್ ಟ್ಯೂಬ್ʼ ಸುರಂಗದ ನಿರ್ಮಾಣವು ರೇವಾದಿಂದ ಸಿಧಿ ನಡುವಿನ ದೂರವನ್ನು ಕಡಿತಗೊಳಿಸಿದ್ದು, ಸುಮಾರು 7 ಕಿಮೀ ಕಡಿಮೆಗೊಳಿಸಿದೆ. ಇದರಿಂದ ಪ್ರಯಾಣಿಕರ ಪ್ರಯಾಣದ ಸಮಯವು 45 ನಿಮಿಷಗಳಷ್ಟು ಕಡಿಮೆಯಾಗುತ್ತದೆ ಎಂದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಸುಸ್ಥಿರತೆಯೊಂದಿಗೆ ನವ ಭಾರತವನ್ನು ಪರಿವರ್ತಿಸುವುದು ನಮ್ಮ ಉತ್ತಮ ಆಡಳಿತದ ವಿಶಿಷ್ಟ ಲಕ್ಷಣವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Suitable number of Underpasses will reduce possibilities for road accidents and ensure the road safety. The construction of the tunnel will reduce bottleneck traffic at Mohaniya Ghat and provide smooth transit.#PragatiKaHighway #GatiShakti pic.twitter.com/5wTMwF9g7Y
— Nitin Gadkari (@nitin_gadkari) October 18, 2022

ಹೆಂಡತಿ ಕೊಲ್ಲಲು ಗಂಡನ ಸಂಚು: ಹೆಂಡತಿಯೊಂದಿಗೆ ಅತ್ತೆ ಬಲಿ
ಬೆತುಲ್: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲ್ಲಲು ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಹಾಕಿದ್ದು, ಆತನ ಹೆಂಡತಿ ಮತ್ತು ಅತ್ತೆ ಬಾಗಿಲನ್ನು ಮುಟ್ಟಿದ ಕಾರಣ ವಿದ್ಯುತ್ ಆಘಾತದಿಂದ ಸಾವನ್ನಪ್ಪಿರುವ ಘಟನೆ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೈಖೇಡಾ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಈ ಕುರಿತು ಕೊತ್ವಾಲಿ ಪೊಲೀಸ್‌ ಠಾಣೆಯ ಉಸ್ತುವಾರಿ ಅಪಲಾ ಸಿಂಗ್‌ ಅವರು ಮಾಹಿತಿ ನೀಡಿದ್ದು, ವ್ಯಕ್ತಿಯು ತೀರಾ ಮಧ್ಯಪಾನ ಮಾಡುತ್ತಿದ್ದ ಹಿನ್ನಲೆಯಲ್ಲಿ, ಆತನಿಗೂ ಮತ್ತು ಹೆಂಡತಿಗೂ ಜಗಳಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಭಾನುವಾರ ರಾತ್ರಿ, ದಂಪತಿಗಳು ಮತ್ತೆ ಜಗಳವಾಡಿದ್ದು, ಹೆಂಡತಿ ತನ್ನ ತಾಯಿಯ ಮನೆಗೆ ಹೋಗಿದ್ದಳು ಎಂದು ತಿಳಿಸಿದರು.

ಈ ಕಾರಣ ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡ ವ್ಯಕ್ತಿ, ತನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿ ಕಬ್ಬಿಣದಿಂದ ಮಾಡಿದ್ದ ಮುಖ್ಯ ಪ್ರವೇಶ ದ್ವಾರವನ್ನು ವಿದ್ಯುತ್ ತಂತಿಯಿಂದ ಜೋಡಿಸಿ ಪತ್ನಿಯನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವೇಳೆ ಅವರ ಅತ್ತೆ ಬಾಗಿಲಿನ ಸಂಪರ್ಕಕ್ಕೆ ಬಂದಿದ್ದು, ಬಾಗಿಲನ್ನು ಮುಟ್ಟಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ಮುಂದುವರೆದಿದೆ ಹಾಗೂ ಆತನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಮಧ್ಯಪ್ರದೇಶ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ನಮೀಬಿಯಾದಿಂದ ತರಲಾಗಿದ್ದ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು.

ಪ್ರಧಾನಿ ಮೋದಿ ಅವರ ಜನ್ಮದಿನದ ವೀಶೇಷವಾಗಿ ಸೆಪ್ಟಂಬರ್‌ 17ರಂದೇ ನಮೀಬಿಯಾದ ವಿಂಡ್‌ಹೋಕ್‌ನಲ್ಲಿರುವ ಚಿರತೆಗಳನ್ನು ಮಧ್ಯಪ್ರದೇಶಕ್ಕೆ ತಂದು ಬಿಡುಗಡೆ ಮಾಡಬೇಕೆಂದು ದಿನಾಂಕವನ್ನು ಆಯೋಜಿಸಿಕೊಂಡಿದ್ದರು. ಆದ್ದರಿಂದ ಇಂದು ಬೆಳಗ್ಗೆ ವಿಮಾನದಲ್ಲಿ ತರಿಸಲಾಗಿದ್ದ ನಮೀಬಿಯಾದ ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹೆಜ್ಜೆ ಇಡಲು ಸ್ವತಃ ಮೋದಿಯವರೇ ಅವುಗಳನ್ನು ಬಿಡುಗಡೆ ಮಾಡಿದ್ದಾರೆ.

https://video.twimg.com/amplify_video/1571017921178247170/pl/128×720/SBogeIY1zMqGUvPc.m3u8?container=fmp4

ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಉಸ್ತುವಾರಿಯಾಗಿ ಜೈ ಪ್ರಕಾಶ್‌ ಅಗರ್ವಾಲ್‌ ನೇಮಕ
ಮಧ್ಯ ಪ್ರದೇಶ: ಮುಕುಲ್ ವಾಸ್ನಿಕ್ ಅವರನ್ನು ಮಧ್ಯಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಜವಾಬ್ದಾರಿಯಿಂದ ಬಿಡುಗಡೆ ಮಾಡಿದ ನಂತರ, ಜೈ ಪ್ರಕಾಶ್ ಅಗರ್ವಾಲ್ ಅವರನ್ನು ಮಧ್ಯಪ್ರದೇಶದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಮುಕುಲ್ ವಾಸ್ನಿಕ್ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಮಧ್ಯಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಅವರು ನೀಡಿದ ಕೊಡುಗೆಯನ್ನು ಪಕ್ಷವು ಶ್ಲಾಘಿಸುತ್ತದೆ ಎಂದು ಭಾರತ ಕಾಂಗ್ರೆಸ್ ಸಮಿತಿ ತಿಳಿಸಿದೆ.

ಎಐಸಿಸಿ ಪತ್ರಿಕಾ ಪ್ರಕಟಣೆ