mahisha – Peepal Media

ಇಂದು ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ : 6 ದಿನಗಳ ನಿಷೇಧಾಜ್ಞೆ
ಚಿಕ್ಕಮಂಗಳೂರಿನಲ್ಲೂ ಕೂಡ ಮಹೇಶ ದಸರಾ ಆಚರಣೆ ಹಿನ್ನೆಲೆಯಲ್ಲಿ ಇಂದಿನಿಂದ 6 ದಿನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಮಹಿಷ ದಸರ ಆಚರಣೆ ವಿಚಾರವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದರ ಜೊತೆಗೆ ಈ ಕಾರ್ಯಕ್ರಮಕ್ಕೆ ಪ್ರೋ.ಕೆ.ಎಸ್.ಭಗವಾನ್ ಅವರು ಆಗಮಿಸುವ ಹಿನ್ನೆಲೆಯಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಚಿಕ್ಕಮಂಗಳೂರಿನಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಹಿಷ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಘಟನೆಗಳಿಂದ ಮಹಿಷ ದಸರಾ ಆಯೋಜನೆ ಮಾಡಿದೆ. ಕಾರ್ಯಕ್ರಮಕ್ಕೆ ಸಂಘಟನೆಗಳ ಕಡೆಯಿಂದ ಮುಖ್ಯ ಅತಿಥಿಯಾಗಿ ಪ್ರೊ. ಕೆಎಸ್ ಭಗವಾನ್ ಅವರಿಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.

ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಪ್ರೊ. ಕೆಎಸ್ ಭಗವಾನ್ ಆಗಮನಕ್ಕೆ ಜಿಲ್ಲೆಯಯಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜರಿಂದ ಆದೇಶ ಹೊರಡಿಸಲಾಗಿದೆ.

ಉಡುಪಿ: ಬೆದರಿಕೆ,ನಿಷೇಧಗಳನ್ನು ಮೀರಿ ಶಾಂತಿಯುತ ಮಹಿಷ ದಸರಾ ಮೆರವಣಿಗೆ
ಅಂಬೇಡ್ಕರ್ ಯುವ ಸೇನೆ ಮತ್ತು ದಲಿತ ಸಂಘರ್ಷ ಸಮಿತಿ (ಭೀಮವಾದ) ಉಡುಪಿಯಲ್ಲಿ ಆಯೋಜಿಸಿದ್ದ ಮೊದಲ ‘ಮಹಿಷ ದಸರಾ’ ಭಾನುವಾರ ಅಕ್ಟೋಬರ್ 15ರಂದು ಶಾಂತಿಯುತವಾಗಿ ಜರುಗಿತು.

ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಹಾಗೂ ಬೈರಂಪಳ್ಳಿಯಲ್ಲಿ ‘ಮಹಿಷ ದಸರಾ’ ಶೀರ್ಷಿಕೆಯನ್ನು ‘ಮಹಿಷೋತ್ಸವ’ ಎಂದು ಬದಲಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮಹಿಷ ದಸರಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಕ್ಟೋಬರ್ 14 ಮತ್ತು ಅಕ್ಟೋಬರ್ 15ರಂದು ಉಡುಪಿ ಜಿಲ್ಲೆಯಾದ್ಯಂತ ಮೆರವಣಿಗೆ ನಡೆಸುವುದನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಯುವಸೇನೆ ಜೋಡುಕಟ್ಟೆಯಿಂದ ಅಂಬೇಡ್ಕರ್ ಭವನದವರೆಗೆ ನಡೆಯಬೇಕಿದ್ದ ಮೆರವಣಿಗೆಯನ್ನು ಕೈಬಿಟ್ಟಿತ್ತಯ.

ಹಿಂದಿನ ದಿನ ಆದಿ ಉಡುಪಿಯಲ್ಲಿ. ಮಹಿಷಾ ದಸರಾವನ್ನು ಬೆಂಬಲಿಸುವ ಅಥವಾ ಅದರ ವಿರುದ್ಧ ಬ್ಯಾನರ್ ಮತ್ತು ಪೋಸ್ಟರ್‌ಗಳ ಪ್ರದರ್ಶನವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರು.

ಆದಾಗ್ಯೂ, ಅಂಬೇಡ್ಕರ್ ಯುವ ಸೇನೆಯ ಕೆಲವು ಕಾಂಗ್ರೆಸ್ ಮುಖಂಡರು ಮತ್ತು ಇತರ ಕಾರ್ಯಕರ್ತರು ಆದಿ ಉಡುಪಿಯ ಅಂಬೇಡ್ಕರ್ ಭವನದ ಆವರಣದಲ್ಲಿ ಸಾಂಕೇತಿಕವಾಗಿ ಅಲ್ಪ ದೂರದ ಮೆರವಣಿಗೆ ನಡೆಸಿದರು. ನಂತರ ಸ್ಥಳದಲ್ಲಿ ಅಂಬೇಡ್ಕರ್ ಯುವ ಸೇನೆಯ ಆಶ್ರಯದಲ್ಲಿ ವಿಚಾರ ಸಂಕಿರಣ ನಡೆಯಿತು.

‘ಯಾರು ಮಹಿಷ ಸುರ’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿದ ಕಲಬುರಗಿಯ ಸಂಶೋಧಕ ಹಾಗೂ ಸಾಹಿತಿ ವಿಠಲ್ ವಗ್ಗನ್ ಅವರು ಬಿ.ಆರ್. ಅಂಬೇಡ್ಕರ್ ಅವರು ದಲಿತರ ಸಬಲೀಕರಣಕ್ಕಾಗಿ ಸಂವಿಧಾನವನ್ನು ನೀಡಿದರು ಮತ್ತು ಸಮಾಜದಲ್ಲಿನ ಅಸಂಗತತೆಗಳ ವಿರುದ್ಧ ಹೋರಾಡಲು ಅವರು ಯಾವುದೇ ಅಸ್ತ್ರಗಳನ್ನು ನೀಡಲಿಲ್ಲ. ವರ್ಗ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ನಡೆಯುತ್ತಿರುವ ತಾರತಮ್ಯದ ವಿರುದ್ಧ ಹೋರಾಡುವ ಮಹತ್ತರ ಜವಾಬ್ದಾರಿ ದಲಿತರ ಮೇಲಿದೆ ಎಂದರು.

ಶ್ರೀ ವಗ್ಗನ್ ಅವರು ಮಹಿಷ ಚಕ್ರವರ್ತಿ ಮತ್ತು ಐತಿಹಾಸಿಕ ವ್ಯಕ್ತಿ ಮತ್ತು ಅವನು ಭಾರತದಾದ್ಯಂತ ಹರಡಿರುವ ಹಿಂದಿನ ‘ಮಹಿಷ ಮಂಡಲ’ ಸಾಮ್ರಾಜ್ಯದಲ್ಲಿ ವಾಸಿಸುತ್ತಿದ್ದ ಬಹುಸಂಖ್ಯಾತ ಜನರ ರಕ್ಷಕರಾಗಿದ್ದ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ (ಭೀಮವಾದ) ಕೂಡ ಇದೇ ಸಂದರ್ಭದಲ್ಲಿ ಬೈರಂಪಳ್ಳಿಯ ಅಂಬೇಡ್ಕರ್ ಭವನದಲ್ಲಿ ‘ರಾಜ ಮಹಿಷಾಸುರ ಹಬ್ಬ’ ಎಂಬ ಶೀರ್ಷಿಕೆಯಡಿ ಆಯೋಜಿಸಿತ್ತು.

ಈ ಹಿಂದೆ ಉಡುಪಿಯಲ್ಲಿ ಮಹಿಷ ದಸರಾ ನಡೆಸಲು ಬಿಡುವುದಿಲ್ಲ ಎಂದು ವಿಎಚ್‌ಪಿ, ಬಜರಂಗದಳ ಮುಖಂಡರು ಬೆದರಿಕೆ ಹಾಕಿದ್ದರು.

ಈ ವರ್ಷವೂ ಮಹಿಷ ದಸರಾ ಆಚರಣೆಗಿಲ್ಲ ಅವಕಾಶ
ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾ ದಸರಾ ಆಚರಣಾ ಸಮಿತಿಯಿಂದ ದಸರಾ ಸಂಭ್ರಮಾಚರಣೆಗೆಂದು ಅನುಮತಿ ಕೇಳಿದಾಗ ಪೋಲೀಸರು ಅದನ್ನು ನಿರಾಕರಿಸಿದ್ದಾರೆ.

ಮಹಿಷಾ ದಸರಾ ಆಚರಣೆಯನ್ನು ಯಾರು ತಡೆಯಲು ಬಂದರೂ ನಮ್ಮ ನಿರ್ಧಾರ ಬದಲಾಗುವುದಿಲ್ಲ. ಈ ಆಚರಣೆ ಯಾರಿಗೂ ಅಪಮಾನ ಮಾಡುವ ಉದ್ದೇಶ ಹೊಂದಿಲ್ಲ. ಆದರೂ ಕಳೆದ ಮೂರು ವರ್ಷಗಳಿಂದ ಪೋಲೀಸ್‌ ಇಲಾಖೆ ಅಡ್ಡಿಪಡಿಸುತ್ತಿದೆ. ಈ ಬಾರಿ ಮಾಡೇ ಮಾಡುತ್ತೇವೆ ಎಂದು ಮಹಿಷ ದಸರಾ ಸಮಿತಿಯ ಮುಖಂಡರು ಮೂರು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಈಗ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ಕಳೆದ ಮೂರು ವರ್ಷದಿಂದ ಮಹಿಷ ದಸರಾ ಆಚರಿಸಲು ಮುಂದಾದವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದರು. ಇದಲ್ಲದೆ ಪೋಲೀಸರಿಗೆ ಇಲ್ಲಿ ಯಾವುದೇ ರೀತಿಯ ಆಚರಣೆಗೆ ಅವಕಾಶ ಕಲ್ಪಿಸದಂತೆ ಸೂಚನೆ ನೀಡಿದ್ದರು. ಅದರಂತೆ ಮೂರು ವರ್ಷಗಳ ಕಾಲ ಮಹಿಷ ದಸರಾಗೆ ಯಾವುದೇ ರೀತಿಯ ಅವಕಾಶ ನೀಡಿರಲಿಲ್ಲ‌. ಈ ಒಂದು ನಿಲುವಿಗೆ ಮಹಿಷಾ ಸಮಿತಿಯಲ್ಲದೇ ಅನೇಕ ದಲಿತಪರ ಸಂಘಟನೆಗಳು ಮತ್ತು ಬೌದ್ಧ ಸಮಾಜ ವಿರೋಧ ವ್ಯಕ್ತಪಡಿಸಿತ್ತು.

ಮೈಸೂರು ಎಂಬ ಹೆಸರು ಬಂದಿರುವುದೇ ಮಹಿಷನಿಂದ. ಕೆಟ್ಟ ವ್ಯಕ್ತಿ ಹೆಸರನ್ನು ಯಾರಾದರೂ ಒಂದು ರಾಜ್ಯಕ್ಕೆ, ಊರಿಗೆ ಇಡುತ್ತಾರಾ? ಆತ ಬೌದ್ಧ. ಅತ್ಯುತ್ತಮವಾದ ಕೆಲಸ ಮಾಡಿದವನು. ಅವನು ಅಸುರ ಆಗಿರುವುದಕ್ಕೆ ಸಾಧ್ಯವಾ?  ಆ ಕಾರಣಕ್ಕೆ ಮಹಿಷ ದಸರಾ ಆಚರಿಸುತ್ತೇವೆ ಎಂದು ಅನೇಕ ಸಂಘಟನೆಗಳು ಕಳೆದ ಮೂರು ವರ್ಷಗಳಿಂದ ವಾದ ಮಂಡಿಸುತ್ತಲೇ ಇದ್ದಾರೆ. ಆದರೆ ಈ ವರ್ಷವೂ ಮಹಿಷ ದಸರಾ ಆಚರಣೆಗೆ ಅವಕಾಶ ಇಲ್ಲದಂತಾಗಿದೆ.

ಈ ಹಿನ್ನಲೆ ಪ್ರತಿಮೆಯ ಸುತ್ತ ಪೋಲೀಸರಿಂದ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರತಿಮೆಗೆ ಹೂವಿನಿಂದ ಅಲಂಕಾರಿಸಬಾರದೆಂದು ಅದನ್ನು ಬಟ್ಟೆಯಿಂದ ಮುಚ್ಚಲ್ಪಟ್ಟಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿಯೇ ಬಿಡಲಾಗುತ್ತಿದ್ದು ಅಲ್ಲಿನ ಪೋಲೀಸರು ಕಣ್ಗಾವಲಿನಂತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಚಂದ್ರಗುಪ್ತ ಅವರು “ಮಹಿಷಾ ದಸರಾ ಆಚರಿಸುವಂತೆ ಅನುಮತಿ ಕೋರಿ ನಮ್ಮ ಕಚೇರಿಗೆ ಈ ವರೆಗೂ ಯಾರೂ ಮನವಿ ಸಲ್ಲಿಸಿಲ್ಲ” ಎಂದು ಹೇಳಿದ್ದಾರೆ.