malayalam – Peepal Media

ವಿವಿಗಳ ವಿಸಿಗಳ ನೇಮಕಾತಿಗೆ ಸಂಬಂಧಿಸಿದ ಕೇಂದ್ರದ ಹೊಸ ನಿಯಮಗಳ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಯುಜಿಸಿಯ 2025ರ ಕರಡು ನಿಯಮಾವಳಿಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಜನವರಿ 6 ರಂದು ಹೊರಡಿಸಲಾದ ನಿಯಮಾವಳಿಗಳು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ನೇಮಿಸಲು ಮೂರು ಸದಸ್ಯರ ಸಮಿತಿಯನ್ನು ರಚಿಸುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಲು ಪ್ರಸ್ತಾಪಿಸುತ್ತದೆ.

ಹೊಸ ನಿಯಮಗಳು ಉದ್ಯಮ ತಜ್ಞರು ಮತ್ತು ಸಾರ್ವಜನಿಕ ವಲಯದ ಅನುಭವಿಗಳನ್ನು ಉಪಕುಲಪತಿಗಳಾಗಿ ನೇಮಿಸಲು ಅವಕಾಶ ನೀಡುತ್ತವೆ, ಕೇವಲ ಶಿಕ್ಷಣ ತಜ್ಞರನ್ನು ಮಾತ್ರ ಆಯ್ಕೆ ಮಾಡುವ ವ್ಯವಸ್ಥೆಯನ್ನು ತೆಗೆದುಹಾಕಿದೆ.

“ರಾಜ್ಯ ಸರ್ಕಾರಗಳು ಮತ್ತು ಶೈಕ್ಷಣಿಕ ತಜ್ಞರು ಕಳವಳ ವ್ಯಕ್ತಪಡಿಸಿರುವ ಸಮಯದಲ್ಲಿ ನಾವು ಈ ನಿರ್ಣಯವನ್ನು ಮಂಡಿಸುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಕೇರಳ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದರು.

ಪ್ರತಿ ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳು ತಮ್ಮ ರಾಜ್ಯ ಶಾಸಕಾಂಗ ಸಭೆ ಅಂಗೀಕರಿಸಿದ ಕಾನೂನುಗಳ ಪ್ರಕಾರ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು. ಸಮಾಲೋಚನೆಯಿಲ್ಲದೆ ಕೇಂದ್ರೀಯ ನಿಬಂಧನೆಗಳನ್ನು ಹೇರುವ ಯಾವುದೇ ಕ್ರಮವು ಭಾರತದ ಫೆಡರಲ್ ರಚನೆಯನ್ನು ದುರ್ಬಲಗೊಳಿಸುತ್ತದೆ ಎಂದು ವಿಜಯನ್ ಹೇಳಿದ್ದಾರೆ.

ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳದಂತಹ ವಿರೋಧ ಪಕ್ಷದ ಆಡಳಿತದ ರಾಜ್ಯಗಳಿಗೆ ಹೊಸ ನಿಯಮಗಳು ಪ್ರಮುಖ ಪರಿಣಾಮಗಳನ್ನು ಬೀರಬಹುದು. ಹಿಂದೆ, ಈ ರಾಜ್ಯಗಳಲ್ಲಿನ ಸರ್ಕಾರಗಳು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳಾದ ಗವರ್ನರ್‌ಗಳೊಂದಿಗೆ ಶೈಕ್ಷಣಿಕ ನೇಮಕಾತಿಗಳ ವಿಚಾರದಲ್ಲಿ ಅನೇಕ ಬಾರಿ ಜಗಳವಾಡಿದ್ದವು.

ಜನವರಿ 9 ರಂದು ತಮಿಳುನಾಡು ವಿಧಾನಸಭೆಯು ನಿಯಮಗಳ ವಿರುದ್ಧ ಇದೇ ರೀತಿಯ ನಿರ್ಣಯವನ್ನು ಅಂಗೀಕರಿಸಿತು.

ನಿರ್ಣಯವನ್ನು ಓದಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕರಡು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿ ಮತ್ತು ಬಡ್ತಿಗಾಗಿ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಕ್ರಮಗಳು) ನಿಯಮಗಳು, 2025 ರ ನಿಯಮಾವಳಿಗಳು ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಗೆ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾನಿಕಾರಕ ಎಂದು ವಿವರಿಸಿದರು.

“ಇದು ತಮಿಳುನಾಡಿನ ಯುವಕರ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ” ಎಂದು ಸ್ಟಾಲಿನ್ ಹೇಳಿದ್ದರು, ಉದ್ದೇಶಿತ ನಿಯಮಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.

ಸೋಮವಾರ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸ್ಟಾಲಿನ್ ಪತ್ರ ಬರೆದಿದ್ದು, ತಮಿಳುನಾಡಿನ ಮಾದರಿಯಲ್ಲಿ ನಿಯಮಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವಂತೆ ಒತ್ತಾಯಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ ನಂತರ, ರಾಜ್ಯದ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವ ಆರ್ ಬಿಂದು “ನಾವು ಸಮಾನ ಮನಸ್ಕ ರಾಜ್ಯ ಸರ್ಕಾರಗಳ ಜಂಟಿ ವೇದಿಕೆಗಳನ್ನು ರಚಿಸಲು ನಿರ್ಧರಿಸಿದ್ದೇವೆ, ಏಕೆಂದರೆ ನಾವು ಇದನ್ನು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳ ಹಕ್ಕುಗಳ ಮೇಲಿನ ಹಲ್ಲೆ ಎಂದು ಪರಿಗಣಿಸುತ್ತೇವೆ,” ಎಂದು ಹೇಳಿದರು.

ಹಾಗಿದ್ದೂ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ನಿಯಮಗಳನ್ನು ಸಮರ್ಥಿಸಿಕೊಂಡಿದೆ ಮತ್ತು ಪರಿಷ್ಕೃತ ಪ್ರಕ್ರಿಯೆಯು “ಅಸ್ಪಷ್ಟತೆಯನ್ನು ನಿವಾರಿಸುತ್ತದೆ ಮತ್ತು ಪಾರದರ್ಶಕತೆಯನ್ನು ಖಾತ್ರಿಗೊಳಿಸುತ್ತದೆ” ಎಂದು ಹೇಳಿದೆ.

ಜನವರಿ 10 ರಂದು, ಆಯೋಗದ ಅಧ್ಯಕ್ಷ ಎಂ ಜಗದೀಶ್ ಹೊಸ ನಿಯಮಗಳು ಉಪಕುಲಪತಿ-ಶೋಧನೆ- ಮತ್ತು-ಆಯ್ಕೆ ಸಮಿತಿಯ ಸಂಯೋಜನೆಯನ್ನು ನಿರ್ದಿಷ್ಟಪಡಿಸುವ ಮೂಲಕ “ಹೆಚ್ಚು-ಅಗತ್ಯವಿರುವ ಸ್ಪಷ್ಟತೆಯನ್ನು” ತರುತ್ತವೆ ಎಂದು ಹೇಳಿದರು.

ಸಮಿತಿಯು ಮೂವರು ಸದಸ್ಯರನ್ನು ಹೊಂದಿರುತ್ತದೆ – ಒಬ್ಬರನ್ನು ಕುಲಪತಿಗಳು, ಇನ್ನೊಬ್ಬರನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರು ಮತ್ತು ಮೂರನೆಯವರು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಅಥವಾ ಸೆನೆಟ್‌ನಿಂದ ಆಯ್ಕೆ ಮಾಡುತ್ತಾರೆ ಎಂದು ಜಗದೀಶ್ ಹೇಳಿದರು.

2023 ರಲ್ಲಿ, ಕೇರಳ ಸರ್ಕಾರವು ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿ ರಾಜ್ಯಪಾಲರನ್ನು ತೆಗೆದುಹಾಕಲು ಪ್ರಯತ್ನಿಸಿತು, ಅದಕ್ಕಾಗಿ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತು.

ಸರ್ಕಾರ ಮತ್ತು ಮಾಜಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವಿನ ಘರ್ಷಣೆಯ ನಡುವೆ ಇದನ್ನು ಮಾಡಲಾಗಿದೆ. ಖಾನ್ ಈ ವಿಚಾರವನ್ನು ರಾಷ್ಟ್ರಪತಿಗಳ ಮುಂದೆ ಇಟ್ಟಿದ್ದರು, ಆದರೆ ಅವರು ಇನ್ನೂ ಇನ್ನೂ ಒಪ್ಪಿಗೆಯನ್ನು ನೀಡಿಲ್ಲ.

ಮೇ 2024 ರಲ್ಲಿ, ಕೇರಳ ಹೈಕೋರ್ಟ್ ಖಾನ್ ಅವರು ಕೇರಳ ವಿಶ್ವವಿದ್ಯಾನಿಲಯದ ಸೆನೆಟ್‌ಗೆ ಮಾಡಿದ ನಾಲ್ಕು ನಾಮನಿರ್ದೇಶನಗಳನ್ನು ರದ್ದುಗೊಳಿಸಿತು ಮತ್ತು ಕುಲಪತಿಯಾಗಿ ಅವರ ಪಾತ್ರವು ಅವರಿಗೆ “ಹೆಚ್ಚಿನ ಅಧಿಕಾರವನ್ನು” ಅನುಮತಿಸುವುದಿಲ್ಲ ಎಂದು ಹೇಳಿತು.

ಕರ್ನಾಟಕದಲ್ಲಿ ನಟನಿಂದ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ
ಬೆಂಗಳೂರು: ಕರ್ನಾಟಕದಲ್ಲಿ ನಟರೊಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮಾಡಿ ದೂರು ದಾಖಲಿಸಿದ್ದಾರೆ.

31 ವರ್ಷದ ಈ ನಟನ ಈ ದೂರಿನ ಮೇಲೆ ಶನಿವಾರದಂದು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ನ ಪ್ರಕಾರ, 2012 ರಲ್ಲಿ ಬಾವುಟ್ಟಿಯುಡೆ ನಾಮತಿಲ್ ಚಿತ್ರದ ಶೂಟಿಂಗ್‌ನಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಹೋದಾಗ ಕೇರಳದ ಕೋಝಿಕ್ಕೋಡ್‌ನಲ್ಲಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಿದ್ದಾಗಿ ನಟ ಹೇಳಿಕೊಂಡಿದ್ದಾರೆ. ಈ ಚಲನಚಿತ್ರವನ್ನು ಬಾಲಕೃಷ್ಣನ್ ಬರೆದು ನಿರ್ದೇಶಿಸಿದ್ದರು.

ಇದಾದ ಬಳಿಕ, ಬಾಲಕೃಷ್ಣನ್ ಡಿಸೆಂಬರ್ 2012 ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ಗೆ ದೂರುದಾರರನ್ನು ಕರೆದಿದ್ದಾರೆ. ನಿರ್ದೇಶಕರು ಈ ನಟನಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಕೇರಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ನಗರದ ಹೋಟೆಲ್‌ನಲ್ಲಿ ಘಟನೆ ನಡೆದಿರುವ ಕಾರಣ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಈ ಘಟನೆಯು 2012 ರಲ್ಲಿ ನಡೆದಿದೆ ಎಂದು ಹೇಳಲಾಗಿದೆ ಆದರೆ ಮಲಯಾಳಂ ಚಲನಚಿತ್ರೋದ್ಯಮದ ಅನೇಕ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಹೇಮಾ ಕಮಿಟಿಯ ನಂತರ ಹೊರಬಂದಿರುವ ಹಿನ್ನೆಲೆಯಲ್ಲಿ ದೂರುದಾರರು ಈಗ ಈ ವಿಚಾರವನ್ನು ಹೊರಹಾಕಿದ್ದಾರೆ, ಕೇರಳದ ಈ ಬೆಳವಣಿಗೆ ತನಗೆ ಈ ಧೈರ್ಯ ನೀಡಿತು ಎಂದು ಅವರು ಹೇಳಿದ್ದಾರೆ.

ಜಸ್ಟಿಸ್ ಹೇಮಾ ಸಮಿತಿಯ ವರದಿಯ ಬಿಡುಗಡೆಯ ನಂತರ ತಮ್ಮ ಸಹೋದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವ ಮಲಯಾಳಂ ಚಲನಚಿತ್ರೋದ್ಯಮದ ಹಲವಾರಲ್ಲಿ ಈ ನಟ ಕೂಡ ಸೇರಿದ್ದಾರೆ .

ಬಾಲಕೃಷ್ಣನ್ ವಿರುದ್ಧ ಅಸ್ವಾಭಾವಿಕ ಅಪರಾಧಗಳು ಮತ್ತು ಖಾಸಗಿತನದ ಉಲ್ಲಂಘನೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. “ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

ಆಗಸ್ಟ್‌ನಲ್ಲಿ, 2009 ರಲ್ಲಿ ನಟನೊಬ್ಬ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ನಂತರ ಬಾಲಕೃಷ್ಣನ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪಲೇರಿ ಮಾಣಿಕ್ಯಂ: ಒರು ಪತಿರಕೋಲಪಾಠಕತಿಂತೆ ಕಥಾ ಸಿನಿಮಾ ನಿರ್ಮಾಣವಾಗುತ್ತಿದ್ದಾಗ ನಿರ್ದೇಶಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದರು.

ಈ ಆರೋಪಗಳು ತನ್ನ ಮೇಲಿನ ಸಂಘಟಿತ ದಾಳಿಯ ಭಾಗವಾಗಿದೆ ಎಂದು ನಿರ್ದೇಶಕ ಆ ಸಮಯದಲ್ಲಿ ಹೇಳಿಕೊಂಡಿದ್ದರು.

“ಒಬ್ಬ ವ್ಯಕ್ತಿಯಾಗಿ ಆರೋಪವು ನನ್ನ ಮೇಲೆ ಉಂಟು ಮಾಡಿದ ಹಾನಿಯನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು. “ಆದರೂ, ಆರೋಪ ತಪ್ಪು ಎಂದು ನಾನು ಸಾಬೀತುಪಡಿಸಬೇಕಾಗಿದೆ. ಅದು ಸುಳ್ಳು ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತೇನೆ. ಆಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾಳೆ. ಏನೇ ಆಗಲಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ,” ಎಂದು ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು.

ಹಿಂದುತ್ವ ರಾಜಕಾರಣದ ಕಥೆ : ಚಿತ್ಪಾವನ ಬ್ರಾಹ್ಮಣರ ಸಾಮ್ರಾಜ್ಯ ಮತ್ತು ಸಾಮ್ರಾಜ್ಯ ನಷ್ಟ
ಹಿಂದುತ್ವದ ಹುಟ್ಟು ಒಂದು ವಿಶೇಷ ಉಪಜಾತಿಯೊಂದಿಗೆ ಅಭೇದ್ಯ ಸಂಬಂಧ ಹೊಂದಿರುವುದರಿಂದ ಹಿಂದುತ್ವದ ಇತಿಹಾಸ ಕೆದಕುವಾಗ ಅದರ ಮೂಲಕ್ಕೂ ಹೋಗಬೇಕಾಗುತ್ತದೆ.

ಜಾತಿಪದ್ದತಿಯ ಕುರಿತ ಚರ್ಚೆಗಳು ಒಂದು ಕಾಲದ ಕೇರಳದಲ್ಲಿ ಅತಿಯಾಗಿ ನಡೆದಿದ್ದವು. ಆದರೆ, ಜಾತಿ ಎಂಬ ಸಾಮಾಜಿಕ ವಿದ್ಯಮಾನದ ಭೌತಿಕ ಸ್ವರೂಪವನ್ನು ಒಟ್ಟು ಭಾರತೀಯ ಆಯಾಮದಲ್ಲಿ ಅಷ್ಟಾಗಿ ಅನ್ವೇಷಿಸಬೇಕಾದ ಅಗತ್ಯ ಇಲ್ಲಿ ಬರಲಿಲ್ಲ. ಆದ್ದರಿಂದಲೇ ಉತ್ತರ ಭಾರತದ ಜಾತಿಬಲಗಳನ್ನು ಅರ್ಥಮಾಡಿಕೊಳ್ಳುವಷ್ಟು ಸಾಕ್ಷರತೆಯೂ ನಮಗೆ ಅಗತ್ಯವಿಲ್ಲದ ಸಂಗತಿಯಾಗಿತ್ತು, ಅಲ್ಲಿನ ಜಾತಿಬೇಧಗಳು ಕೂಡ. ಅದರ ಫಲವಾಗಿ ಜಾತಿ ಕುರಿತ ನಮ್ಮ ಚರ್ಚೆಗಳೆಲ್ಲವು ಸರ್ವನಾಮಗಳಿಗೆ ಸೀಮಿತವಾದವು. ಬ್ರಾಹ್ಮಣರು, ಬ್ರಾಹ್ಮನಿಸಂ, ಬ್ರಾಹ್ಮಣ್ಯ ಎಲ್ಲ ನಮಗೆ ಅರ್ಥವಾಗುತ್ತವೆಯಾದರೂ ಅದರ ಉಪಜಾತಿ ಚರಿತ್ರೆಯನ್ನೆಲ್ಲ ನಾವು ಮಾನವಸಾಸ್ತ್ರ ಪಂಡಿತರ ಸಂಶೋಧನಾ ವಾಪ್ತಿಗೆ ಬಿಟ್ಟುಕೊಟ್ಟು ನಿರುಮ್ಮಳಾದೆವು. ನಿಜದಲ್ಲಿ ಅದೇ ಬೇಕಾಗಿರುವುದು ಕೂಡ.

ಆದರೆ, ಹಿಂದುತ್ವದ ಹುಟ್ಟು ಒಂದು ವಿಶೇಷ ಉಪಜಾತಿಯೊಂದಿಗೆ ಅಭೇದ್ಯ ಸಂಬಂಧ ಹೊಂದಿರುವುದರಿಂದ ಹಿಂದುತ್ವದ ಇತಿಹಾಸ ಕೆದಕುವಾಗ ಅದರ ಮೂಲಕ್ಕೂ ಹೋಗಬೇಕಾಗುತ್ತದೆ. ಜೊತೆಗೆ ಆ ಉಪಜಾತಿ ಸಮೂಹ ಕಾರ್ಯಾಚರಿಸುತ್ತಿದ್ದ ಭೌಗೋಳಿಕತೆಯನ್ನೂ ನೋಡಬೇಕಾಗುತ್ತದೆ.

೧೮ನೇ ಶತಮಾನದ ಆರಂಭದಿಂದಲೇ, ಮರಾಠಿ ಭಾಷೆ ಮಾತನಾಡುವ ಡೆಕ್ಕನ್‌ ಪ್ರದೇಶದ ಅತ್ಯಂತ ಪ್ರಬಲ ಸಮುದಾಯ ಚಿತ್ಪಾವನ ಬ್ರಾಹ್ಮಣರದ್ದಾಗಿತ್ತು. ೧೯ನೇ ಶತಮಾನದ ಆರಂಭದಲ್ಲಿ ಆ ಪ್ರದೇಶ ಬ್ರಿಟಿಷ್‌ ಇಂಡಿಯಾದ ಭಾಗವಾಗಿ ಬದಲಾದಾಗಲೂ ಈ ಪ್ರಾಬಲ್ಯವನ್ನು ಅವರು ಬಿಟ್ಟುಕೊಡಲಿಲ್ಲ. ಇಂದಿನ ಮಹಾರಾಷ್ಟ್ರದ ಒಂದು ಭಾಗ, ಗುಜರಾತ್‌, ವಾಯುವ್ಯ ಕರ್ನಾಟಕ, ಒಂದು ಹಂತದವರೆಗೆ ಇಂದು ಪಾಕಿಸ್ತಾನದ ಭಾಗವಾಗಿರುವ ಸಿಂಧ್‌ ತನಕದ ಭೂಭಾಗ ಸೇರಿದ ದೊಡ್ಡದೊಂದ ಪ್ರಾಂತ್ಯವಾಗಿತ್ತು ಬಾಂಬೆ ಪ್ರೆಸಿಡೆನ್ಸಿ. ಬಾಂಬೆ ಪ್ರೆಸಿಡೆನ್ಸಿಯ ದೇಸೀಯರ ನಡುವೆ, ಅದರಲ್ಲೂ ಮರಾಠಿ ಭಾಷೆ ಮಾತನಾಡುವವರ ನಡುವೆ, ಸಾಮಾನ್ಯ ಜನರ ಪ್ರಜ್ಞೆಯನ್ನು ಕಟ್ಟಿಬೆಳೆಸುವಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಿದ ಹಲವರು ಈ ಚಿತ್ಪಾವನ ಬ್ರಾಹ್ಮಣ ವಂಶಕ್ಕೆ ಸೇರಿದವರಾಗಿದ್ದರು. ಜನಸಂಖ್ಯೆಯ ಹಿನ್ನೆಲೆಯಲ್ಲಿ ನೋಡಿದರೆ ಅವರು ಮರಾಠ ಬ್ರಾಹ್ಮಣರಲ್ಲಿ ಬಹುಸಂಖ್ಯಾತರೇನು ಆಗಿರಲಿಲ್ಲ. ಮರಾಠ ಪ್ರಾಂತ್ಯದಲ್ಲಿದ್ದ ದೇಶಸ್ತ, ಚಿತ್ಪಾವನ್‌, ಕರಾಡೆ, ಸಾರಸ್ವತ, ಗೌಡ ಸಾರಸ್ವತ ಮೊದಲಾದ ಬ್ರಾಹ್ಮಣ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡರೆ, ೧೯೦೧ರ ಜನಗಣತಿ ಪ್ರಕಾರ ಚಿತ್ಪಾವನ ಬ್ರಾಹ್ಮಣರು ಕೇವಲ ೨೦% ಮಾತ್ರವಿದ್ದರು. ಅಂದರೆ, ಬಾಂಬೆ ಪ್ರೆಸಿಡೆನ್ಸಿಯಲ್ಲಿ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹೊಂದಿದ್ದ ಪ್ರಾಬಲ್ಯ ಜನಸಂಖ್ಯಾನುಪಾತಕ್ಕೆ ತಾಳೆಯಾಗುತ್ತಿರಲಿಲ್ಲ. ಜಾತಿಪದ್ಧತಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ದೊಡ್ಡ ಪ್ರಭಾವ ಇರುವುದರಿಂದ ಆ ವಲಯಗಳಲ್ಲಿ ಮೇಲ್ಜಾತಿ ಪಾರುಪತ್ಯ ಎಂಬುದು ಆಶ್ಚರ್ಯ ಪಡುವ ಸಂಗತಿಯೇನಲ್ಲ. ಆದರೆ, ಜಾತಿವ್ಯವಸ್ಥೆಯ ಪಿರಮಿಡ್ಡಿನಲ್ಲಿ ಮೇಲಿನ ಹಂತವನ್ನು ಆವರಿಸಿಕೊಂಡಿರುವ ಬ್ರಾಹ್ಮಣರ ಒಳಗೆಯೆ ಅತ್ಯಂತ ಮೇಲಕ್ಕೆ ಏರಲು ಈ ಅಲ್ಪಸಂಖ್ಯಾತರಿಗೆ ಸಾಧ್ಯವಾದುದರ ಹಿನ್ನೆಲೆಯಲ್ಲಿ ಐತಿಹಾಸಿಕವಾದ ಕಾರಣಗಳಿವೆ.

ಬಾಂಬೆ ಪ್ರೆಸಿಡೆನ್ಸಿಯಲ್ಲಿ ತುಲನಾತ್ಮಕವಾಗಿ ಆರ್ಥಿಕ ದುರ್ಬಲ ಪ್ರದೇಶವಾಗಿದ್ದ ಕೊಂಕಣ್‌ ಪ್ರಾಂತ್ಯದ ಬೆಟ್ಟಗಳ ನಡುವಿನ ಜನವಾಸಕೇಂದ್ರಗಳಲ್ಲಿ ಇವರು ವಾಸವಿದ್ದರು. ಆದ್ದರಿಂದಲೇ ಇವರನ್ನು ಕೊಂಕಣಸ್ತ ಬ್ರಾಹ್ಮಣರು ಎಂದೂ ಕರೆಯುತ್ತಿದ್ದರು. ಹಿಂದೂ ಜಾತಿವ್ಯವಸ್ಥೆ ನೀಡಿದ್ದ ತಮ್ಮ ಪ್ರಾಥಮಿಕ ಸ್ಥಾನವನ್ನು ಬ್ರಾಹ್ಮಣರು ತಮ್ಮದೇ ರೀತಿಯಲ್ಲಿ ಸ್ವಯಂ ಕಲ್ಪಿತ ಹಲವು ತರದ ಪುರಾಣಕತೆಗಳ ಮೂಲಕ ಮತ್ತಷ್ಟು ವೈಭವೀಕರಿಸುತ್ತಿದ್ದರು. ಚಿತ್ಪಾನವನ ಬ್ರಾಹ್ಮಣರಿಗೂ ಅಂಥದ್ದೊಂದು ಪುರಾಣಕತೆ ಖಂಡಿತವಾಗಿ ಇತ್ತು. ಚಿತ್ಪಾವನ ಬ್ರಾಹ್ಮಣರು ಒಂಭತ್ತನೇ ಶತಮಾನದಲ್ಲಿ ಮಧ್ಯಏಷ್ಯಾದಿಂದ ವಲಸೆ ಬಂದವರು ಎಂದು ಹೇಳುತ್ತಾರೆ. ಉಳಿದೆಲ್ಲ ಆರ್ಯ ವರ್ಗಗಳ ಹಾಗೆಯೆ, ಭಾರತ ಉಪಖಂಡದಲ್ಲಿ ಅವರ ಚರಿತ್ರೆಯ ಭಾಗವನ್ನು, ಸಹ್ಯಾದ್ರಿ ಖಾಂಡ ಎಂಬ ಪುರಾಣ ಭಾಗದಲ್ಲಿ ಹೀಗೆ ಸೃಜನಶೀಲವಾಗಿ ತಿರುಚಿ ಬರೆದರು:

ʼಸತ್ತು ಹೆಣಗಳಾಗಿ ತೀರಕ್ಕೆ ಬಂದ ಅವರನ್ನು ಪರಶುರಾಮ, ಕ್ಷಾತ್ರತೇಜಸ್ಸಿನ ಬ್ರಾಹ್ಮಣ, ಚಿತೆಯಿಂದ ಜೀವಂತವಾಗಿ ಮೇಲೆತ್ತಿದ.ʼ ಹೀಗೆ ಸಾಮಾನ್ಯವಾಗಿ ಹುಟ್ಟಿನಿಂದ ಶುರುವಾಗುವ ಕಥೆಯನ್ನು ಇವರು ಚಿತೆಯಿಂದ ಶುರುವಾಗುವ ಕಥೆಯಾಗಿ ಬದಲಿಸಿ ಬರೆದರು. ಚಿತೆ ಅವರನ್ನು ಪಾವನಗೊಳಿಸಿದ್ದರಿಂದ ಅವರು ಚಿತ್‌ಪಾವನರಾದರು. ಜನನದಿಂದಲೇ ತಮ್ಮನ್ನು ತಾವು ಉತ್ತಮರಾಗಿಸಿಕೊಂಡ ಅವರು ಈ ಪುರಾಣವನ್ನು, ಇಂಡಿಯನ್‌ ಬ್ರಾಹ್ಮಣ ಚರಿತ್ರೆಯಲ್ಲಿ ಸಾಮಾನ್ಯವಾಗಿ ಕಾಣುವ ಹಾಗೆ ಇತರ ಜಾತಿಗಳ ಮೇಲೆ ಅಧಿಪತ್ಯ ಸ್ಥಾಪಿಸಲು ಮಾತ್ರವೇ ಬಳಸಲಿಲ್ಲ. ಬದಲಿಗೆ ಇತರ ಬ್ರಾಹ್ಮಣ ವಿಭಾಗಗಲ್ಲಿ ನಡೆಯುತ್ತಿದ್ದ ಸಂಘರ್ಷಗಳಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಕೂಡ ಇದನ್ನು ಬಳಸಿದರು.

ಬ್ರಿಟಿಷ್‌ ಪೂರ್ವ ಇಂಡಿಯಾದಲ್ಲಿ ಬೆಳೆದಿದ್ದ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ಛತ್ರಪತಿ ಶಿವಾಜಿಯ ಮರಾಠ ಸಾಮ್ರಾಜ್ಯದ ಕಾಲದಲ್ಲಿ ದೊಡ್ಡ ಮಟ್ಟದ ಸಾಮಾಜಿಕ ಚಲನೆ ಚಿತ್ಪಾವನ ಬ್ರಾಹ್ಮಣರಿಗೆ ಲಭಿಸಿತ್ತು. ಕೊಂಕಣ್‌ ಪ್ರದೇಶ ಬಿಟ್ಟು ಹೊರ ಬಂದ ಅವರು ಹೊಸದಾಗಿ ಕಟ್ಟಲ್ಪಟ್ಟಿದ್ದ ಆಡಳಿತ ವ್ಯವಸ್ಥೆಯೊಳಗೆ ಸೇರಿಕೊಂಡರು. ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದಲ್ಲಿ ಅವರಿಗಿಂತ ಮೇಲೆ ಇದ್ದ ದೇಶಸ್ತ ಬ್ರಾಹ್ಮಣರು ಮಾತ್ರ ಬಹುತೇಕ ಹಳೆಯ ಸ್ಥಾನಮಾನಗಳಾದ ಕೃಷಿ, ಪೌರೋಹಿತ್ಯ, ಸಣ್ಣ ವ್ಯಾಪಾರ ಮೊದಲಾದ ಕಡೆಯಲ್ಲೇ ನಿಂತಿದ್ದಾಗ ಚಿತ್ಪಾವನ ಬ್ರಾಹ್ಮಣರು ಮಾತ್ರ ಅಧಿಕಾರ, ಉದ್ಯೋಗ ಮತ್ತು ರಾಜತಾಂತ್ರಿಕತೆಯ ಹೊಸ ಸಾಧ್ಯತೆಗಳಿಗೆ ಏರುತ್ತಲೇ ಹೋದರು. ಶಿವಾಜಿಯ ದರ್ಬಾರಿನಲ್ಲಿ ಪ್ರಮುಖ ಸ್ಥಾನ ಅಲಂಕರಿಸಿದ್ದ ಬಾಲಾಜಿ ವಿಶ್ವನಾಥ ಭಟ್ ಎಂಬ ಚಿತ್ಪಾವನ ಬ್ರಾಹ್ಮಣ ನಂತರ ಶಿವಾಜಿಯ ಉತ್ತರಾಧಿಕಾರಿಯಾದ ಶಾಹುಜಿ ಮಹಾರಾಜ್ ಕಾಲದಲ್ಲಿ ಪ್ರಧಾನಮಂತ್ರಿ ಪದವಿಯಾದ ಪೇಶ್ವೆ ಸ್ಥಾನಕ್ಕೇರಿದ. ಅದರೊಂದಿಗೆ ನಿಜಾರ್ಥದಲ್ಲಿ ಮರಾಠ ಸಾಮ್ರಾಜ್ಯದ ಅಧಿಕಾರ ಚಿತ್ಪಾವನ ಬ್ರಾಹ್ಮಣರ ಹಿಡಿತಕ್ಕೆ ಸಿಲುಕಿತು. ಬಾಲಾಜಿ ವಿಶ್ವನಾಥ ಭಟ್‌ ಆಡಳಿತದ ಆಯಕಟ್ಟಿನ ಜಾಗಗಳಲ್ಲಿ ಚಿತ್ಪಾವನ ಬ್ರಾಹ್ಮಣರನ್ನು ತಂದು ಕೂರಿಸಿದ್ದು ಮಾತ್ರವಲ್ಲ, ಅವರಿಗೆ ಧಾರಾಳ ಭೂದಾನವನ್ನೂ ನೀಡಿದ. ಈ ಕಾಲದಲ್ಲಿ ಚಿತ್ಪಾವನ ಬ್ರಾಹ್ಮಣರು ಉಳಿದ ವಿಭಾಗಗಳ ಮೇಲೆ ತಮ್ಮ ಸಂಪೂರ್ಣ ಅಧಿಪತ್ಯ ಸ್ಥಾಪಿಸಿದರು ಎಂದು ಮಾತ್ರವಲ್ಲ, ನೇರವಾಗಿ ಅಧಿಕಾರ ಚಲಾಯಿಸುವ ಆಧುನಿಕ ಕಾಲದ ಬಹುಷಃ ಮೊದಲನೇ ಬ್ರಾಹ್ಮಣ ವರ್ಗವಾಗಿ ಹೊಮ್ಮಿದರು. ಹಿಂದೂ ಧರ್ಮದ ಜಾತಿಶ್ರೇಣಿಯಲ್ಲಿ ಉಚ್ಛ ಪರಿಗಣನೆಯ ಜೊತೆಗೆ ರಾಜಾಡಳಿತದ ಅಧಿಕಾರವನ್ನು ಈ ಬ್ರಾಹ್ಮಣ ವಿಭಾಗವು ಕನಿಷ್ಠ ೧೭೧೩ರಿಂದಲೇ ಅನುಭವಿಸಿದರು.

ಸುಮಾರು ಒಂದು ಶತಮಾನಗಳ ಕಾಲ ಅನುಭವಿಸಿದ, ಇಂಡಿಯಾದ ಉಳಿದ ಬ್ರಾಹ್ಮಣ ವಿಭಾಗಗಳಿಗೆ ಸಿಗದ ಈ ಮನ್ನಣೆ ೧೮೧೮ರಲ್ಲಿ ಕೊನೆಯಾಯಿತು. ಆ ವರ್ಷ ಶನಿವಾರವಾಡದಲ್ಲಿ ನಡೆದ ಯುದ್ಧದಲ್ಲಿ ಪೇಶ್ವೆಗಳು ಬ್ರಿಟಿಷರ ವಿರುದ್ಧ ಸೋತು ಶರಣಾದರು. ಅವರಿಗೆ ಮನ್ನಣೆ ನೀಡಿದ್ದ ಮರಾಠ ಸಾಮ್ರಾಜ್ಯವು ಬ್ರಿಟಿಷ್‌ ಇಂಡಿಯಾದಲ್ಲಿ ಲೀನವಾಯಿತು.

ಒಂದು ಶತಮಾನ ಕಾಲ ಸಾಮಾಜಿಕ ಸ್ಥಾನಮಾನದ ಉನ್ನತ ಪದವಿಯಲ್ಲಿ ಕೂತಿದ್ದ ಚಿತ್ಪಾವನ ಬ್ರಾಹ್ಮಣರಿಗೆ ಈ ಸೋಲು ದೊಡ್ಡ ಆಘಾತವಾಗಿತ್ತು. ಆದರೂ, ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಲು ಬೇಕಾದ ಅಧಿಕಾರ ಶೈಲಿಯನ್ನು ಅವರು ಆಗಲೇ ಕಲಿತುಕೊಂಡಿದ್ದರಿಂದ ಈ ಹಂತದಲ್ಲಿ ಅದರಿಂದ ಪಾರಾಗಲು ಸಹಾಯವಾಯಿತು ಎಂದು ಹೇಳಬಹುದು. ಬ್ರಿಟಿಷ್‌ ಆಡಳಿತದ ಅಡಿಯಲ್ಲೂ ಸ್ವದೇಶಿಗಳಿಗೆ ಸಿಗಬಹುದಾದ ಹುದ್ದೆಗಳಲ್ಲಿ ಬಹುತೇಕ ಕಡೆ ಅವರು ಆವರಿಸಿಕೊಂಡರು. ಸ್ವದೇಶೀ ಸಾಮಂತರನ್ನು ಸೃಷ್ಠಿಸಲು ವಸಾಹತುಶಾಹಿ ವಿದ್ಯಾಭ್ಯಾಸ ಪದ್ಧತಿಯನ್ನು ಬಾಂಬೆಯಲ್ಲಿ ಶುರು ಮಾಡಿದಾಗ, ಅದರ ಮೊದಲ ಫಲಶೃತಿಗಳನ್ನು ಒಂದು ಸಮುದಾಯವಾಗಿ ತಮ್ಮದಾಗಿಸಿಕೊಂಡವರು ಕೂಡ ಇದೇ ಚಿತ್ಪಾವನ ಬ್ರಾಹ್ಮಣರು.  ದೇಸೀ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಬಾರದ ಹಾಗೆ ಆಡಳಿತ ನಡೆಸಬೇಕೆಂಬ ಬ್ರಿಟಿಷರ ನೀತಿ ಕೂಡ ಮರಾಠ ಬ್ರಾಹ್ಮಣರಿಗೆ ಅನುಕೂಲಕರವಾಗಿತ್ತು. ಅಂಕಿಅಂಶಗಳ ಪ್ರಕಾರ ಒಂದು ಕಾಲದಲ್ಲಿ ಬಾಂಬೆ ಪ್ರಾಂತ್ಯದ ಅತ್ಯಂತ ಉನ್ನತ ಹುದ್ದೆಗಳಲ್ಲಿ ಒಂದಾಗಿದ್ದ ಮಮ್ಲತ್‌ದಾರ್‌ (ಜಿಲ್ಲಾ ಕಲೆಕ್ಟರ್)‌ ಸ್ಥಾನದಲ್ಲಿ ಎಪ್ಪತ್ತೈದು ಶೇಕಡ ಆವರಿಸಿಕೊಂಡಿದ್ದವರು ಮರಾಠ ಬ್ರಾಹ್ಮಣರು, ಅದರಲ್ಲೂ ಬಹುತೇಕ ಚಿತ್ಪಾವನ ಬ್ರಾಹ್ಮಣರು. ೧೮೮೬ರ ಅಂಕಿಅಂಶಗಳ ಪ್ರಕಾರ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇದ್ದ ೧೦೪ ಸಬ್‌ ಆರ್ಡಿನೇಟ್‌ ಜಡ್ಜುಗಳಲ್ಲಿ ೩೩ ಮಂದಿ ಚಿತ್ಪಾವನ ಬ್ರಾಹ್ಮಣರಾಗಿದ್ದರು.

ಹೀಗೆ ಆಡಳಿತ ವ್ಯವಸ್ಥೆಯಲ್ಲೂ ಪ್ರಾಮುಖ್ಯತೆ ವಹಿಸುವ ಮೂಲಕ ಅವರಿಗೆ ಸಿಕ್ಕ ಸಾಮಾಜಿಕ ಚಲನೆ, ಮರಾಠ ಪ್ರಾಂತ್ಯದ ಸಾಮಾಜಿಕ ಸಾಂಸ್ಕೃತಿಕ ವಲಯಗಳಲ್ಲಿ ಕೂಡ ದೊಡ್ಡ ಮಟ್ಟದ ಅಧಿಕಾರವನ್ನು ಅವರಿಗೆ ನೀಡಿತು. ಹತ್ತೊಂಬತ್ತನೇ ಶತಮಾನದ ಮಹಾರಾಷ್ಟ್ರದಲ್ಲಿ ಸಾಮಾಜಿಕ ಸುಧಾರಣಾವಾದಿಗಳೆಂದೂ ಸಾಂಸ್ಕೃತಿಕ ನಾಯಕರೆಂದೂ ಗುರುತಿಸಲ್ಪಟ್ಟ ಹಲವರು ಈ ಬ್ರಾಹ್ಮಣ ವಂಶದಿಂದ ಪ್ರಭಾವಿತರಾಗಿದ್ದರು. ಮಹಾದೇವ್‌ ಗೋವಿಂದ ರಾಣಡೆ, ವಿಷ್ಣುಶಾಸ್ತ್ರಿ ಕೃಷ್ಣಶಾಸ್ತ್ರಿ ಚಿಪ್ಲುಂಕರ್‌, ಗಣೇಶ್‌ ಅಗರ್ಕರ್‌, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್‌ ಮೊದಲಾದವರು ಅವರಲ್ಲಿ ಕೆಲವರು ಮಾತ್ರ. ಅದೇ ಹೊತ್ತು ಆರ್ಥಿಕವಾಗಿ ಅವರು ಕುಸಿಯತೊಡಗಿದ್ದರು. ಹುಂಡಿ ಮತ್ತು ಬಡ್ಡಿ ವಹಿವಾಟು ನಡೆಸುತ್ತಿದ್ದ ಚಿತ್ಪಾವನ ಬ್ರಾಹ್ಮಣರು ತಾತ್ಕಾಲಿಕವಾಗಿ ಹಿಮ್ಮೆಟ್ಟಬೇಕಾಯಿತು. ಅವರ ಕೇಂದ್ರವಾಗಿದ್ದ ಪುಣೆಗೆ ಬದಲಾಗಿ ಬ್ರಿಟಿಷರ ಪಾಲನೆಯಲ್ಲಿ ಬಾಂಬೆ ಹೊಸ ಆರ್ಥಿಕ ಶಕ್ತಿಯಾಗಿ ಹೊಮ್ಮಿತು. ೧೮೩೦ರ ಹೊತ್ತಿಗೆ ಬ್ರಿಟಿಷರು ಚೀನಾದೊಂದಿಗೆ ವ್ಯಾಪಾರ ಸಂಬಂಧ ಸ್ಥಾಪಿಸಿದ ನಂತರ ಈಸ್ಟ್‌ ಇಂಡಿಯಾ ಕಂಪೆನಿಯ ವ್ಯಾಪಾರ ಸಾಮ್ರಾಜ್ಯದಲ್ಲಿ ಬಾಂಬೆ ಅತ್ಯುನ್ನತಿಗೇರಿತು. ಅಲ್ಲಿ ಬಟ್ಟೆ ಮಿಲ್‌ಗಳು ಸ್ಥಾಪನೆಗೊಂಡವು. ೧೮೫೪ರಲ್ಲಿ ಮೊದಲ ಮಿಲ್‌ ಬಾಂಬೆಯಲ್ಲಿ ಸ್ಥಾಪನೆಗೊಂಡಿತು. ೧೮೮೫ರ ಹೊತ್ತಿಗೆ ಅವುಗಳ ಸಂಖ್ಯೆ ೭೪ಕ್ಕೆ ಏರುತ್ತವೆ. ಈ ಮಿಲ್‌ಗಳು ಮತ್ತು ಅವು ನಿರ್ಮಿಸಿದ ಹೊಸ ಆರ್ಥಿಕ ವ್ಯವಸ್ಥೆಯ ಲಾಭ ಪಡೆದವರು ಬಾಂಬೆಗೆ ಹೊರಗಿನಿಂದ ವಲಸೆ ಬಂದವರೇ ಆಗಿದ್ದರು. ಬ್ರಿಟಿಷರು, ಪಾರ್ಸಿಗಳು, ಭಾಟಿಯರು, ಖೋಜಾಗಳು ಮೊದಲಾದವರು. ಚಿತ್ಪಾವನ ಬ್ರಾಹ್ಮಣರ ಅದುವರೆಗಿನ ಆರ್ಥಿಕ ಪಾರಮ್ಯ ಅಲ್ಲಿಗೆ ಕೊನೆಯಾಯಿತು. ಇದೇ ಹೊತ್ತಲ್ಲಿ ಮೌಂಟ್‌ ಸ್ಟುವರ್ಟ್‌ ಎಲ್ಫಿನ್ಸ್ಟೈನ್‌ ಹಲವು ವಿದ್ಯಾಭ್ಯಾಸ ಕೇಂದ್ರಗಳನ್ನು ಬಾಂಬೆಯಲ್ಲಿ ಶುರು ಮಾಡುತ್ತಾನೆ.ಇದರೊಂದಿಗೆ ಚಿತ್ಪಾವನ ಬ್ರಾಹ್ಮಣರ ಆಸ್ಥಾನವಾಗಿದ್ದ ಪುಣೆ ಪ್ರೇತನಗರವಾಗಿ ಬದಲಾಯಿತು.

೧೮೧೮ರ ಅಧಿಕಾರ ನಾಶ ಮತ್ತು ಅದರ ಹಿಂದೆಯೇ ಸಂಭವಿಸಿದ ಆರ್ಥಿಕ ಪಾರಮ್ಯದ ಕುಸಿತವೂ ಸೇರಿ ಮುಗಿಯದ ಕಣ್ಣೀರ ಕಥೆಯಾಗಿ ಚಿತ್ಪಾವನ ಬ್ರಾಹ್ಮಣ ಸಮುದಾಯದಲ್ಲಿ ನೆಲೆ ನಿಂತಿತ್ತು. ೧೮೪೯ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಚಿತ್ಪಾವನ ಬ್ರಾಹ್ಮಣರಲ್ಲಿ ಪ್ರಮುಖರೂ ಮತ್ತು ಲೋಕಹಿತವಾದಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಲೂ ಇದ್ದ ಗೋಪಾಲ ಹರಿ ದೇಶ್‌ಮುಖ್‌ ಹೀಗೆ ಬರೆದಿದ್ದರು:

ʼ…ಯಾವಾಗ ದೇವರು ಬ್ರಾಹ್ಮಣರ ಈ ಅಳಲು ಕೇಳಿಸಿಕೊಳ್ಳುತ್ತಾನೆ? ಆಗ ವಿವೇಕವಂತ (ಬ್ರಾಹ್ಮಣ) ಸಂಪ್ರದಾಯಸ್ಥ ಹೇಳುತ್ತಾನೆ: ಜನರೇ, ಹಿಂದೆ ಯಾದವರು ಹೇಗೆ ಸತ್ತು ನಾಶವಾದರು? ರಾವಣ ತನ್ನ ಕೋಪದಿಂದ ಯಾರನ್ನಾದರು ಬಿಟ್ಟಿದ್ದನೇ? ಎಲ್ಲ ದೇವರುಗಳನ್ನು ಬಂಧಿಸಿಡಲಾಗಿತ್ತು. ಆದರೆ, ವಾನರರ ಸಹಾಯದಿಂದ ರಾಮನು ಲಂಕೆಯನ್ನು ಮತ್ತೆ ಗೆಲ್ಲಲಿಲ್ಲವೇ? ನೀರಿನ ಮೇಲೆ ಕಲ್ಲುಗಳು ತೇಲಲಿಲ್ಲವೇ? ಹಾಗೆಯೇ ಬ್ರಿಟಿಷರು ಒಂದು ದಿನ ಇಲ್ಲಿಂದ ಹೋಗುತ್ತಾರೆ. ಧರ್ಮ ಸ್ಥಾಪನೆಯಾಗುತ್ತದೆ. ಬ್ರಾಹ್ಮಣರು ಸಂತುಷ್ಠರಾಗುತ್ತಾರೆ.ʼ

ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದಿದ್ದ, ಒಂದರ್ಥದಲ್ಲಿ ಸುಧಾರಣಾವಾದಿ ಎಂದು ಹೆಸರು ಪಡೆದಿದ್ದ, ಲೋಕಹಿತವಾದಿಯ ಕನಸು ಬ್ರಿಟಿಷರನ್ನು ಓಡಿಸಬೇಕು ಎಂಬುದರ ಆಚೆಗೆ ಬ್ರಾಹ್ಮಣರ ಉದ್ಧಾರವೂ ಆಗಿತ್ತು ಎಂಬುದನ್ನು ಈ ಮೇಲಿನ ಮಾತು ಪುಷ್ಠೀಕರಿಸುತ್ತದೆ. ಅವರು ತನ್ನ ಸಮುದಾಯದಲ್ಲಿದ್ದ ಬಾಲ್ಯವಿವಾಹ ಮತ್ತು ಬಹುಪತ್ನಿತ್ವ/ಬಹುಪತಿತ್ವದ ಜೊತೆಗೆ ಜಾತಿ ಪದ್ಧತಿಯನ್ನೂ ಖಂಡಿಸಿದ್ದರು. ಅವರ ಹಿಂದೂ ಅಷ್ಟಕ್‌  ಎಂಬ ಪ್ರಸಿದ್ಧ ಪುಸ್ತಕದಲ್ಲಿ ಈ ವಾದಗಳನ್ನು ಕಾಣಬಹುದು. ಆದರೆ, ಇದು ಧರ್ಮಾತೀತ ಆಧುನಿಕ ಬದುಕಿನೆಡಗಿನ ದಾರಿ ಆಗಿರಲಿಲ್ಲ. ಬದಲಾಗಿ, ಚಿತ್ಪಾವನರ ಅಧಿಕಾರವನ್ನು ಪುನರುಜ್ಜೀವನಗೊಳಿಸಬೇಕೆಂಬ ಗುರಿಯೊಂದಿಗೆ ಬ್ರಾಹ್ಮಣಪರವಾದ, ಆದರೆ ಹಳೆಯದರೊಂದಿಗೆ ತುಲನೆ ಮಾಡುವಾಗ ಸುಧಾರಣಾವಾದವಾಗಿಯೂ ಕಾಣುವ ಧಾರ್ಮಿಕ ಪ್ರಜ್ಞೆಯಿಂದ ಮಾತ್ರವೇ ಬ್ರಿಟಿಷರನ್ನು ಎದುರಿಸುತ್ತಿದ್ದರು. ತಮ್ಮ ಕನಸನ್ನು ಹದಿನೆಂಟನೆ ಶತಮಾನದ ಚಿತ್ಪಾವನ ಪ್ರಾಬಲ್ಯದ ಮೂಸೆಯಲ್ಲಿ ಕಟೆದು ನಿಲ್ಲಿಸಲು ಹೊಸಕಾಲದ ಪರಿಸ್ಥಿತಿಗಳಿಂದಾಗಿ ಅಸಾದ್ಯವೆಂಬ ಅರಿವು ತಮ್ಮನ್ನು ತಾವೇ ಒಡೆದು ಕಟ್ಟುವ ಪ್ರಕ್ರಿಯೆಗೆ ಒಳಪಡಿಸಿತ್ತು.

ಆದರೆ, ಹತ್ತೊಂಬತ್ತನೇ ಶತಮಾನದಲ್ಲಿಯೇ ಆಧುನಿಕಮುಖಿಯಾದ ಚಳುವಳಿಗಳು ಚಿತ್ಪಾವನರ ನಡುವೆ ಹುಟ್ಟಿಕೊಳ್ಳುತ್ತವೆ. ರಾಮಕೃಷ್ಣ ಗೋಪಾಲ್‌ ಭಂಡಾರ್ಕರ್‌ (೧೮೩೭-೧೯೨೫), ಜಸ್ಟಿಸ್‌ ಮಹಾದೇವ್‌ ಗೋವಿಂದ್‌ ರಾಣಡೆ (೧೮೪೨-೧೯೦೧) ಮೊದಲಾದವರು ಬ್ರಾಹ್ಮಣರ ಆಂತರಿಕ ಸುಧಾರಣೆ ಎಂಬುದಕ್ಕಿಂತ ಒಟ್ಟು ಸಾಮಾಜಿಕ ಸುಧಾರಣೆಗೆ ತಮ್ಮ ಸಾಂಸ್ಕೃತಿಕ ಶಕ್ತಿಯನ್ನು ವಿನಿಯೋಗಿಸಿದರು. ಅವರು ಜಾತಿವ್ಯವಸ್ಥೆ ಎಂಬ ಸಾಮಾಜಿಕ ಪಿಡುಗನ್ನು ಪಿಡುಗಾಗಿಯೇ ಕಂಡರು. ಅವರು ಕೂಡ ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದವರಾಗಿದ್ದರು. ಪಾಶ್ಚಾತ್ಯ ದೇಶಗಳ ಸಮಕಾಲೀನ ಸಮಾನಮನಸ್ಕ ಚಳುವಳಿಗಳು ಅವರನ್ನು ಪ್ರಚೋದಿಸಿದವು. ಆದರೆ, ಮರಾಠ ಪ್ರಾಂತ್ಯದಲ್ಲಿ ಅದನ್ನು ಹಾಗೆಯೇ ಎತ್ತಿ ಪ್ರಯೋಗಿಸಲು ವಿಭಿನ್ನ ಸಾಮಾಜಿಕ ಕಾರಣಗಳಿಂದಾಗಿ ಅವರಿಂದ ಸಾಧ್ಯವಾಗಲಿಲ್ಲ. ಅದೇ ಹೊತ್ತು, ರಾಜಕೀಯವಾಗಿ ಮುನ್ನೇರಬೇಕಾದರೆ ಸಾಂಸ್ಕೃತಿಕವಾಗಿ ಒಡೆದು ಕಟ್ಟುವುದು ಅನಿವಾರ್ಯ ಎಂಬುದನ್ನೂ ಅವರು ಮನಗಂಡಿದ್ದರು. ಅದರ ಫಲವಾಗಿಯೇ ಬ್ರಹ್ಮ ಸಮಾಜ, ಪರಮಹಂಸ ಸಭೆ, ಪ್ರಾರ್ಥನಾ ಸಮಾಜ ಮೊದಲಾದವು ಬಂಗಾಳದಲ್ಲಿ ಎಂಬಂತೆ ಮರಾಠ ಪ್ರಾಂತ್ಯದಲ್ಲೂ, ಮುಖ್ಯವಾಗಿ ಪುಣೆಯಲ್ಲೂ ಬೇರುಬಿಟ್ಟವು. ಇವೆಲ್ಲವೂ ಮೇಲ್ಜಾತಿ ಚಳುವಳಿಗಳಾಗಿದ್ದವು. ಆದರೆ, ಮೇಲ್ಜಾತಿ ಪ್ರಾಬಲ್ಯವನ್ನು ಹೊಸ ಸಂದರ್ಭಕ್ಕೆ ತಕ್ಕುದಾಗಿ ವಿಕಸನಗೊಳಿಸುವುದು ಎಂಬುದಕ್ಕಿಂತ, ಅದನ್ನು ಮುಂದೆ ಬರಲಿರುವ ಆಧುನಿಕ ಸಮಾಜದ ಜೊತೆ ವಿಲೀನಗೊಳಿಸಲು ಬೇಕಾದ ತಯಾರಿಗೆ ಈಗಲೇ ಕಾಲುದಾರಿಯೊಂದನ್ನು ಕಡಿಯುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅವರು ತಮ್ಮ ಪಾಶ್ಚಾತ್ಯ ವಿದ್ಯಾಭ್ಯಾಸದಿಂದ ಪಡೆದ ಜ್ಞಾನಭಂಡಾರವನ್ನು ಇದಕ್ಕಾಗಿ ಬಳಸಲಿಲ್ಲ. ಬದಲಿಗೆ ಆ ಜ್ಞಾನದ ಬೆಳಕಲ್ಲಿ ತಮ್ಮ ಬ್ರಾಹ್ಮಣ ವಂಶಕ್ಕೆ ಚಿರಪರಿಚಿತವಾದ ವೇದೋಕ್ತಿಗಳು ಮತ್ತು ಉಪನಿಷತ್‌ ವಾಕ್ಯಗಳ ಹೊಚ್ಚ ಹೊಸ ವ್ಯಾಖ್ಯಾನಗಳನ್ನು ತಂದರು. ಹಾಗಾಗಿಯೆ ಅರವಿಂದ್‌ ಗಣಾಚಾರಿ ಈ ಕಾಲವನ್ನು ವಿಚಾರಶೀಲ ಪುನರುಜ್ಜೀವನ (Rational Revivalism) ಎಂದು ಕರೆಯುತ್ತಾರೆ.

ಪುಣೆ ಕೇಂದ್ರವಾಗಿ ನಡೆದ ಈ ವಿಚಾರಶೀಲ ಪುನರುಜ್ಜೀವನಕ್ಕೆ ದೊಡ್ಡ ಮಟ್ಟದ ಶಕ್ತಿ ನೀಡಿದ ಪ್ರಮುಖರಲ್ಲಿ ಮಹಾದೇವ್‌ ಗೋವಿಂದ್‌ ರಾಣಡೆ ಒಬ್ಬರಾಗಿದ್ದರು. ಬಾಂಬೆ ಹೈಕೋರ್ಟಿನ ಜಡ್ಜ್‌ ಆಗಿದ್ದ ಆ ಚಿತ್ಪಾವನ ಬ್ರಾಹ್ಮಣ ೧೮೭೧ರಲ್ಲಿ ಪುಣೆಗೆ ವರ್ಗವಾಗಿ ಬಂದರು. ಅದರೊಂದಿಗೆ ಚಿತ್ಪಾವನರ ನಡುವಿನ ಪ್ರಗತಿಪರರು ಎಚ್ಚರವಾದರು. ಮಹಿಳಾ ವಿದ್ಯಾಭ್ಯಾಸ ಮತ್ತು ವಿಧವಾ ವಿವಾಹಗಳೆಂಬ ಎರಡು ಸಾಮಾಜಿಕ ಸುಧಾರಣೆಗಳನ್ನು ಅವರು ಕೈಗೆತ್ತಿಕೊಂಡರು. ಅದರ ಜೊತೆಗೆ ಹಲವಾರು ಬರಹಗಳ ಮೂಲಕ ಬ್ರಿಟಿಷ್‌ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸುತ್ತಾ ಅದಕ್ಕೆ ಬದಲಾಗಿ ಸ್ವದೇಶಿ ಪರಿಕಲ್ಪನೆಯ ಕೈಗಾರೀಕರಣ ಮತ್ತು ಬಂಡವಾಳ ಹೂಡಿಕೆಯ ಕುರಿತು ನಿರ್ದೇಶನಗಳನ್ನು ನೀಡಿದರು.

ರಾಣಡೆ ಪುಣೆಗೆ ಬರುವ ಮೊದಲೇ ಜನರು ಸಾರ್ವಜನಿಕ್‌ ಕಾಕಾ ಎಂದು ಗೌರವಪೂರ್ವಕವಾಗಿ ಕರೆಯುತ್ತಿದ್ದ ಗಣೇಶ್‌ ವಾಸುದೇವ್‌ ಜೋಷಿ ಸಾರ್ವಜನಿಕ್‌ ಸಭಾಎಂಬ ಪ್ರಗತಿಪರ ಸಂಘಟನೆಯೊಂದನ್ನು ಆರಂಭಿಸಿದ್ದರು. ಪುಣೆಯ ಚಿತ್ಪಾವನ ಬ್ರಾಹ್ಮಣರ ವಾಪ್ತಿಯನ್ನು ಮೀರಿ ಸಾರ್ವಜನಿಕ್‌ ಸಭಾದ ಚಟುವಟಿಕೆಗಳು ಬಾಂಬೆ ಪ್ರಾಂತ್ಯದ ಮರಾಠಿ ಮಾತನಾಡುವ ಎಲ್ಲ ಜನರ ಬಳಿಗೆ ತಲುಪಿತ್ತು. ಡೆಕ್ಕನ್‌ ಪ್ರದೇಶದಲ್ಲಿ ಅತಿ ಕಠಿಣ ಬರಗಾಲದಲ್ಲಿ ಬರ ನೀಗಿಸಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು, ಸಾಮಾಜಿಕ ಸುಧಾರಣೆಯನ್ನು ಜಾರಿಗೊಳಿಸಲು ಮತ್ತು ಆಡಳಿತದಲ್ಲಿ ಭಾರತೀಯ ಪ್ರಾತಿನಿದ್ಯ ಖಾತರಿ ಪಡಿಸಲು ಸಭಾದ ನೇತೃತ್ವದಲ್ಲಿ ಹಲವು ನಿವೇದನೆಗಳು ಸರಕಾರಕ್ಕೆ ಸಲ್ಲಿಕೆಯಾದವು. ರಾಣಡೆ ಸಭಾದ ಇಂತಹ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪೇಶ್ವೆಗಳ ಪತನದ ನಂತರ ಮತ್ತೊಮ್ಮೆ ಪುಣೆ ಕೇಂದ್ರವಾಗಿರಿಸಿಕೊಂಡ ರಾಜಕೀಯ ಚಟುವಟಿಕೆಗಳನ್ನು ಅವರು ಆರಂಭಿಸಿದ್ದರು.

ಆದರೆ, ಈ ಕಾಲವೂ ಹೆಚ್ಚು ನಿಲ್ಲಲಿಲ್ಲ. ಸುಧಾರಣೆಗಳ ಸಂಪ್ರದಾಯವಾದಿ ಎಳೆಯೊಂದು ಚಿತ್ಪಾವನರ ನಡುವೆ ಮತ್ತು ಉಳಿದ ಬ್ರಾಹ್ಮಣರ ನಡುವೆ ವ್ಯಾಪಕವಾಗಿ ಹಬ್ಬತೊಡಗಿತ್ತು. ಈ ಸಂಪ್ರದಾಯವಾದಿ ಸುಧಾರಣೆಗಳಿಗೆ ನಾಯಕತ್ವ ನೀಡಿದವರು ವಿಷ್ಣು ಬಿಕ್ಕಾಜಿ ಗೋಖಲೆ (೧೮೨೫-೭೧) ಎಂಬ ವಿಷ್ಣುಸಭಾ ಬ್ರಹ್ಮಚಾರಿಯಾಗಿದ್ದರು. ಧರ್ಮವನ್ನು ಅದರ ಶುದ್ಧರೂಪದಲ್ಲಿ ಬೆಳಗಿಸುವುದು ವಿಷ್ಣುಸಭಾ ಬ್ರಹ್ಮಚಾರಿಯ ತತ್ವವಾಗಿತ್ತು. ಪಾಶ್ಚಿಮಾತ್ಯ ಚಿಂತನೆಗಳ ಮೂಸೆಯಲ್ಲಿ ಧರ್ಮವನ್ನು ಸಂಸ್ಕರಿಸುವ ರೀತಿಯನ್ನು ಖಂಡಿಸಿ ಅವರು ಬರೆದ ವೇದೋಕ್ತ ಧರ್ಮಪ್ರಕಾಶಂ ಸಂಪ್ರದಾಯವಾದಿ ಬ್ರಿಟಿಷ್‌ ವಿರೋಧಿ ಬ್ರಾಹ್ಮಣರಿಗೆ ಪ್ರೊಚೋದನೆ ನೀಡಿತು. ಅದು ಮನುಸ್ಮೃತಿಯನ್ನು ಮರಳಿ ತಂದಿತು. ಜಾತಿ ವ್ಯವಸ್ಥೆಯನ್ನು ನ್ಯಾಯೀಕರಿಸಿತು.

ಮುಖ್ಯವಾಹಿನಿ ಇತಿಹಾಸದಲ್ಲಿ ಅತಿಯಾಗಿ ಹೊಗಳಲ್ಪಟ್ಟ ವಿಷ್ಣುಶಾಸ್ತ್ರಿ ಚಿಪ್ಲುಂಕರ್‌ (೧೮೫೦-೧೮೮೨) ಸಂಪ್ರದಾಯವಾದಿಗಳನ್ನು ಖುಷಿಪಡಿಸುತ್ತಾ ಈ ಧಾರೆಯನ್ನು ಮುಂದಕ್ಕೊಯ್ದ ಮತ್ತೊಬ್ಬ ವ್ಯಕ್ತಿ. ಚಿತ್ಪಾವನ ಬ್ರಾಹ್ಮಣರ ನಡುವೆ ಬೇರೂರಲು ಶ್ರಮಿಸುತ್ತಿದ್ದ ಬ್ರಹ್ಮ ಸಮಾಜ ಮತ್ತಿತರ ಪ್ರಗತಿಶೀಲ ಸುಧಾರಣಾ ಚಳುವಳಿ ಧಾರೆಗಳನ್ನು ತನ್ನ ನಿಬಂಧಮಾಲಾ ರೀತಿಯ ಪುಸ್ತಕಗಳ ಮೂಲಕ ನುಚ್ಚುನೂರು ಮಾಡಿದರು.

ಇದೇ ಹೊತ್ತಲ್ಲಿ ಜ್ಯೋತಿಬಾ ಫುಲೆಯ ಸತ್ಯಶೋಧಕ ಸಮಾಜದಂತಹ ಕೆಳಜಾತಿ ಚಳುವಳಿಗಳು ಕೂಡ ಪ್ರಬಲವಾಗುತ್ತಿತ್ತು. ಅವರ ಪತ್ನಿ ಸಾವಿತ್ರಿ ಫುಲೆ ಮತ್ತು ನಂತರದ ಕಾಲದಲ್ಲಿ ಆಳವಾಗಿ ಗುರುತಿಸಲ್ಪಟ್ಟ ಪಂಡಿತ ರಮಾಬಾಯಿ ತರಹದ ಮಹಿಳೆಯರು ಆ ಚಳುವಳಿಯ ಭಾಗವಾಗಿದ್ದರು. ಜಾತಿವಿನಾಶ ಮತ್ತು ಮಹಿಳಾ ಸಮಾನತೆಯ ಗುರಿಗಳನ್ನು ಹೊಂದಿದ್ದ ಸಂಘಟನೆಯಾಗಿತ್ತು ಸತ್ಯಶೋಧಕ ಸಮಾಜ. ವಿದ್ಯಾಭ್ಯಾಸವನ್ನು ಮುಂದಿಟ್ಟುಕೊಂಡು ವಿದ್ಯಾಕೇಂದ್ರಗಳ ಚಟುವಟುಕೆಗಳ ಸಹಿತ ಹಲವು ಸುಧಾರಣೆಗಳನ್ನು ಅವರು ಮುಂದಿಟ್ಟರು. ಅದಕ್ಕೆ ದೊಡ್ಡ ಮಟ್ಟದ ಸಾರ್ವಜನಿಕ ಬೆಂಬಲವೂ ದೊರೆಯಿತು.

ವೈಚಾರಿಕ ಮೇಲ್ಜಾತಿ ನವೋತ್ಥಾನ ಚಳುವಳಿಗಳು ಮತ್ತು ಜಾತಿ ವಿರೋಧಿ ಕೆಳಜಾತಿ ಚಳುವಳಿಗಳೆರಡನ್ನು ಒಟ್ಟಿಗೆ ನಿರಾಕರಿಸಿಕೊಂಡು ಸಂಪ್ರದಾಯವಾದಿ ಬ್ರಾಹ್ಮನಿಸಮ್ಮಿಗೆ ಚಿಪ್ಲುಂಕರ್‌ ಭಾರೀ ಪ್ರಚಾರ ನೀಡಿದರು. ರಾಣಡೆ ಮತ್ತು ಫುಲೆಯನ್ನು ಅವರು ಒಟ್ಟಿಗೆ ವಿರೋಧಿಸಿದರು. ಅದೇ ಹೊತ್ತು ಹಳೆಯ ಪೇಶ್ವಾ ಸಾಮ್ರಾಜ್ಯ, ಚಿತ್ಪಾವನ ಅಸ್ಮಿತೆಯಲ್ಲಿ ಗಟ್ಟಿಯಾಗಿ ನಿಂತುಕೊಂಡೇ ಬ್ರಿಟಿಷ್‌ ವಿರೋಧವನ್ನೂ ರೂಪಿಸಿಕೊಂಡರು. ಹೀಗೆ ಚಿಪ್ಲುಂಕರ್‌ ಸಾಧ್ಯವಾಗಿಸಿದ ಹೊಸ ಸಂಪ್ರದಾಯವಾದಿ ಬ್ರಾಹ್ಮಣ ಅಸ್ಮಿತೆಯನ್ನು ರಾಜಕೀಯವಾಗಿ ಪರಿವರ್ತಿಸುವುದು ಲೋಕಮಾನ್ಯ ಬಾಲಗಂಗಾಧರ ತಿಲಕ್ (೧೮೫೬-೧೯೨೦). ಚಿಪ್ಲುಂಕರ್‌ ಮರಣದ ನಂತರ, ಮೇಲೆ ಹೇಳಿದ ವೈಚಾರಿಕ‌ ಮೇಲ್ಜಾತಿ ನವೋತ್ಥಾನ ಚಳುವಳಿಗಳ, ಜಾತಿ ವಿರೋಧಿ ಕೆಳಜಾತಿ ಚಳುವಳಿಗಳ ಮತ್ತು ಬ್ರಿಟಿಷರ ಎದುರಾಳಿಯಾಗಿ ಹೊಸ ಸಂಪ್ರದಾಯವಾದಿ ಬ್ರಾಹ್ಮಣ್ಯದ ಪ್ರಶ್ನಿಸಲಾಗದ ಅದ್ವಿತೀಯ ನಾಯಕ ಸ್ಥಾನಕ್ಕೆ ತಿಲಕ್‌ ಏರಿದರು.

ಹಿಂದುತ್ವ ರಾಜಕಾರಣದ ಕಥೆ – ಯಾಕಾಗಿ ಈ ಕಥನ?
ಮೂಲ ಮಲಯಾಳಂ: ಪಿ. ಎನ್‌. ಗೋಪಿಕೃಷ್ಣನ್‌
ಕನ್ನಡಕ್ಕೆ: ಸುನೈಫ್

ಅಧ್ಯಾಯ ೧

ಯಾಕಾಗಿ ಈ ಕಥನ
ಭಾಗಶಃ ನಮ್ಮ ದೇಶವು ಹಿಂದುತ್ವವೆಂಬ ಚಿಂತನೆಯು ಮುಂದಿಡುವ ಸಾಮಾಜಿಕ ವ್ಯವಸ್ಥೆಯೊಂದಿಗೆ ಬಹಳವೇ ಸಂಬಂಧ ಹೊಂದಿರುವ ಕಾಲದಲ್ಲಿ ಈ ಲೇಖನ ಸರಣಿಯನ್ನು ಬರೆಯುತ್ತಿದ್ದೇನೆ. ಎಪ್ಪತ್ತಮೂರು ವರ್ಷ ದಾಟಿದ ಇಂಡಿಯನ್‌ ರಿಪಬ್ಲಿಕ್‌ನ ಅಡಿಪಾಯಕ್ಕೆ ಈ ಕಾಲಮಾನದಲ್ಲಿ ಸಂಭವಿಸಿದ ಗಾಯಗಳು ಮಾತ್ರವೇ ಇದಕ್ಕೆ ಕಾರಣವಲ್ಲ. ಶತಮಾನಗಳಿಂದ ಜನರೇ ಕಟ್ಟಿ ಬೆಳೆಸಿದ್ದ, ಬದುಕನ್ನು ಮುನ್ನಡೆಸುತ್ತಿದ್ದ ಆಂತರಿಕ ಶಕ್ತಿ ಮೂಲಕ್ಕೇ ಅದು ನಿರಂತರವಾಗಿ ಘಾಸಿ ಮಾಡುತ್ತಿದೆ ಎಂಬುದೂ ಪ್ರಮುಖ ಕಾರಣ. ಕಮ್ಮಿಯೆಂದರೂ ಕಳೆದೊಂದು ಶತಮಾನದಿಂದ ಇಂಡಿಯಾವನ್ನು ಸಾಮಾಜಿಕವಾಗಿ ಅಡಿಯಾಳಾಗಿಸಲು ಇಂತಹ ಹಲವು ಪ್ರಯತ್ನಗಳು ನಡೆದಿವೆ. ಅವೆಲ್ಲ ಒಂದೇ ರೂಪದವೂ ಅಲ್ಲ. ರಾಜಕಾರಣವೆಂದು ನಾವು ಗುರುತಿಸುವ ಕ್ಷೇತ್ರವೊಂದರಲ್ಲಿ ಮಾತ್ರ ಅದು ನಡೆದಿರುವುದೂ ಅಲ್ಲ. ಹಿಂದುತ್ವ ಫ್ಯಾಸಿಸಮ್ಮಿನ ಬಹಳ ಮುಖ್ಯವಾದ ವಿಶೇಷತೆಯೆಂದರೆ ಅದು ಸಾಂಸ್ಕೃತಿಕ ರಾಜಕಾರಣ ಎಂಬುದು. ಭಾರತದ ಚರಿತ್ರೆಯಲ್ಲಿ ತನ್ನ ಕಪಿಮುಷ್ಠಿಯನ್ನು ಬಿಗಿಗೊಳಿಸುತ್ತಾ ಸಾಂಸ್ಕೃತಿಕ ಅಧಿಪತ್ಯ ಸ್ಥಾಪಿಸುವುದು ಅದರ ಗುರಿ. ಹಾಗಾಗಿಯೇ ಇತಿಹಾಸದ ಮೇಲೆ ಅದಕ್ಕೆ ಇನ್ನಿಲ್ಲದ ಆಸಕ್ತಿ. ಹಿಂಸೆಯನ್ನು ಎತ್ತಿಹಿಡಿಯುವ ಶಕ್ತಿ ಅದು. ಮನುಷ್ಯರು ತಮ್ಮೊಳಗೆ ಕಟ್ಟಿಬೆಳೆಸಿರುವ ಮೌಲ್ಯಗಳೆಲ್ಲವು ಪೊಳ್ಳೆಂದೂ ಬಿಗಿ ಹಿಡಿತಕ್ಕೆ ಅವು ನುಚ್ಚು ನೂರಾಗುತ್ತವೆಯೆಂದೂ ಅದು ನಂಬಿಸುತ್ತದೆ. ಅದು ತನ್ನ ಅನುಯಾಯಿಗಳನ್ನೂ ವಿರೋಧಿಗಳನ್ನೂ ಒಟ್ಟಿಗೆ ದಾಳವಾಗಿಸುತ್ತದೆ. ವಾಸ್ತವದಿಂದ ಗುಳೇ ಎಬ್ಬಿಸುವ ಅಜೆಂಡಾಗಳನ್ನು ಅದು ನಿರಂತರವಾಗಿ ನಿರ್ಮಿಸುತ್ತಿರುತ್ತದೆ. ಅಷ್ಟೇ ಅಲ್ಲ, ಪ್ರಜ್ಞಾಪೂರ್ವಕವಾಗಿ ಸುಳ್ಳು ಸುಳ್ಳೇ ವೈರುಧ್ಯಗಳನ್ನೂ ಸೃಷ್ಠಿಸುತ್ತಿರುತ್ತದೆ. ಜೊತೆಗೆ, ಎಂದೂ ಕಂಡಿಲ್ಲದಷ್ಟು ಬೃಹತ್ತಾದ ಗಂಡಸ್ತನದ ಲೋಕವನ್ನು ಸೃಷ್ಠಿಸುತ್ತದೆ. ರಾಜಿಯಾಗಬೇಕಾದಲ್ಲಿ ರಾಜಿಯಾಗುತ್ತಾ, ಕಬಳಿಸಬೇಕಾದಲ್ಲಿ ಕಬಳಿಸುತ್ತಾ ಅದು ಮುನ್ನೇರುತ್ತಲೇ ಇದೆ.

ಫ್ಯಾಸಿಸಮ್ಮಿನ ಚರ್ಚೆಗಳು ನಮಗೆ ಹೊಸತೇನಲ್ಲ. ಕಡಿಮೆಯೆಂದರೂ ೧೯೪೦ರ ದಶಕಗಳಿಂದಲೆ ಫ್ಯಾಸಿಸಂ ನಮ್ಮ ಚರ್ಚಾವಿಷಯವಾಗಿತ್ತು. ಹಿಟ್ಲರ್‌ ಮತ್ತು ಮುಸೊಲಿನಿ ಯಾರೆಂದೂ, ಅವರ ವಿಚಾರಗಳಿಂದ ಲೋಕದಲ್ಲಿ ಏನೆಲ್ಲ ನಡೆದವು ಎಂದೂ ಕನಿಷ್ಟ ಎರಡು ತಲೆಮಾರುಗಳ ಹಿಂದೆಯೇ ತಿಳಿದುಕೊಂಡವರು ನಾವು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೇ ಅದರ ಕುರಿತಾದ ಚರ್ಚೆಗಳು ಜೀವಂತವಾಗಿದ್ದವು. ನೆಹರು ತನ್ನ ಭಾರತ ದರ್ಶನ ಶುರು ಮಾಡುವುದೇ ಫ್ಯಾಸಿಸಂ ಅನ್ನು ಎದುರಿಸಬೇಕಾದ ತುರ್ತಿನ ಕುರಿತು ವಿವರಿಸುವ ಮೂಲಕ. ಇವತ್ತಿಗೂ ಕಮ್ಯೂನಿಸ್ಟ್‌ ಇತಿಹಾಸದ ಪ್ರಮುಖ ಚರ್ಚಾವಿಷಯಗಳಲ್ಲಿ ಒಂದು ೧೯೪೨ರ ಕ್ವಿಟ್‌ ಇಂಡಿಯಾ ಚಳುವಳಿಯಿಂದ ಅವರು ಹಿಂದೆ ಸರಿದ ಕಾರಣಗಳ ಕುರಿತೇ ಆಗಿದೆ. ಈ ಚರ್ಚೆಗಳ ಸಂದರ್ಭಗಳಲ್ಲಿ, ಎರಡನೇ ವಿಶ್ವಯುದ್ಧವು ಫ್ಯಾಸಿಸಂ ವಿರುದ್ಧದ ಹೋರಾಟವೂ ಆಗಿತ್ತು ಎಂಬ ಕಮ್ಯುನಿಸ್ಟ್‌ ಚಳುವಳಿಗಳ ಅಂತರಾಷ್ಟ್ರೀಯ ನಿಲುವನ್ನೇ ಎಡಚಳುವಳಿಗಾರರು ಎತ್ತಿ ತೋರಿಸುತ್ತಾರೆ. ಫ್ಯಾಸಿಸಂ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರಿಗಿದ್ದ ಸುಸ್ಪಷ್ಟ ದೃಷ್ಟಿಕೋನಕ್ಕೆ ನಿದರ್ಶನವೂ ಇದರಲ್ಲಿದೆ, ಆ ಕಾಲದಲ್ಲಿ ಅದನ್ನು ರಾಷ್ಟ್ರೀಯ ಚರಿತ್ರೆಯ ಭಾಗವಾಗಿಸುವಾಗ ಉಂಟಾಗಬಹುದಾದ ಸಂಕೀರ್ಣತೆಗಳ ಸಿಕ್ಕು ಬಿಡಿಸಲು ಅವರಿಂದ ಸಾಧ್ಯವಾಗದಿದ್ದರು ಕೂಡ. ಮತ್ತೊಂದು ಕಡೆ ಕಮ್ಯುನಿಸ್ಟ್‌ ಪಕ್ಷಗಳ ವಿರೋಧಿಗಳು ಅವರನ್ನು ವಿರೋಧಿಸುತ್ತಿದ್ದದ್ದು ಸ್ಟಾಲಿನ್-ಹಿಟ್ಲರ್‌ ಒಪ್ಪದಂದವನ್ನು ಎತ್ತಿತೋರಿಸಿಕೊಂಡಾಗಿತ್ತು. ಸ್ಟಾಲಿನ್‌ನ ರಷ್ಯಾದಲ್ಲಿಯೇ ಹಿಟ್ಲರ್‌ ತನ್ನ ದಾರುಣ ಸೋಲನ್ನು ಕಂಡ ಎಂದು ಹೇಳುವ ಮೂಲಕ ಕಮ್ಯುನಿಸ್ಟರು ಅದಕ್ಕೆ ಉತ್ತರವನ್ನು ನೀಡಿದ್ದಾರೆ.

ಅಂತರಾಷ್ಟ್ರೀಯ ಫ್ಯಾಸಿಸ್ಟ್‌ ವಿರೋಧಿ ಸಾಹಿತ್ಯ ಮತ್ತು ಕಲೆಗೆ ಅತ್ಯಂತ ಹೆಚ್ಚು ಓದುಗರು ಸೃಷ್ಠಿಯಾದ ತೃತೀಯ ಜಗತ್ತಿನ ಒಂದು ಭೂಭಾಗವಿದ್ದರೆ ಅದು ಕೇರಳವೆಂದು ಖಂಡಿತವಾಗಿ ಹೇಳಬಹುದು. ನಮ್ಮ ಎಲ್ಲ ಲೈಬ್ರರಿಗಳ ಒಂದು ಕಪಾಟಿನಲ್ಲಿ ಆನ್‌ ಫ್ರಾಂಕಳ ಡೈರಿ ಇದ್ದೇ ಇರುತ್ತಿತ್ತು. ಸ್ವಂತ ಮಕ್ಕಳಲ್ಲಿ ಒಬ್ಬಳನ್ನಾಗಿಯೇ ನಾವು ಆನ್‌ ಫ್ರಾಂಕಳನ್ನು ಕಂಡಿದ್ದೆವು. ಸಾಕ್ಷರತೆ, ಸಾಹಿತ್ಯ ಚಳುವಳಿ, ವಿಶಿಷ್ಠ ಸಾಮಾಜಿಕ ಚರಿತ್ರೆ ಮೊದಲಾಗಿ ಹಲವು ಕಾರಣಗಳ ಫಲದಿಂದ ಕೇರಳದ ಒಂದು ಉಪಸಾಮಾಜಿಕ ವಿಭಾಗವೆಂದು ಧೈರ್ಯವಾಗಿ ಕರೆಯಬಹುದಾದ ʻಓದುಗ ಸಮಾಜʻಕ್ಕೆ ಏಲಿ ವೀಸೆಲ್‌ ಸೇರಿದಂತೆ ಹಲವು ಫ್ಯಾಸಿಸ್ಟ್‌ ವಿರೋಧಿ ಬರಹಗಾರರು ಅಪರಿಚಿತರಾಗಿರಲಿಲ್ಲ. ಕಾನ್ಸಂಟ್ರೇಷನ್‌ ಕ್ಯಾಂಪಿನ ತನ್ನ ಅನುಭವಗಳನ್ನು ವಿವರಿಸಿದ್ದ ರಾತ್ರಿ (The Night) ಎಂಬ ಪುಸ್ತಕದ ಬಗ್ಗೆ ಸಾಹಿತ್ಯವಾರಫಲ ಎಂಬ ಜನಪರ ಅಂಕಣದಲ್ಲಿ ಎಂ. ಕೃಷ್ಣನ್‌ ನಾಯರ್‌ ಒಂದಕ್ಕಿಂತ ಹೆಚ್ಚು ಸಲ ಬರೆದರು. ಲೈಬ್ರರಿ ಚಳುವಳಿ ಬಿಟ್ಟರೆ ಎಪ್ಪತ್ತರ ದಶಕದ ಕೇರಳದಲ್ಲಿ ಆಳವಾಗಿ ಬೇರೂರಿದ್ದ ಫಿಲಂ ಸೊಸೈಟಿ ಚಳುವಳಿಗಳೂ ಫ್ಯಾಸಿಸ್ಟ್‌ ವಿರೋಧಿ ಸಿನಿಮಾಗಳನ್ನು ಕೊಂಡಾಡಿದವು. ಅಲನ್‌ ರೆನೇಯ ನೈಟ್‌ ಆಂಡ್‌ ಫಾಗ್‌ ಯುರೋಪಿನಿಂದ ಹೊರಗೆ ಅತ್ಯಂತ ಹೆಚ್ಚು ಪ್ರದರ್ಶನ ಕಂಡ ಜಾಗ ಕೇರಳವೇ ಆಗಿರಬೇಕು. ಹಿಟ್ಲರನ ತದ್ರೂಪಿಯಾಗಿ ಚಾಪ್ಲಿನ್‌ ಅತ್ಯದ್ಭುತವಾಗಿ ನಟಿಸಿದ ದಿ ಗ್ರೇಟ್‌ ಡಿಕ್ಟೇಟರ್‌ ಎಂಬ ಸಿನಿಮಾ ಕೂಡ ಮಲಯಾಳಿಗರಿಗೆ ಚಿರ ಪರಿಚಿತ.

ಮಲಯಾಳಿಗರಿಗೆ ಆಧುನಿಕ ಚಿತ್ರಕಲೆಯನ್ನು ಎದುರುಗೊಳ್ಳುವ ಸಂದರ್ಭ ಬಂದಿದ್ದರೆ, ಅವುಗಳಲ್ಲಿ ಅತ್ಯಂತ ಸುಪರಿಚಿತ ಚಿತ್ರ ಪಿಕಾಸೊನ ಗೋರ್ಣಿಕಾ ಆಗಿರಬಹುದು. ಕೆ ಜಿ ಶಂಕರಪಿಳ್ಳೆ ಅನುವಾದಿಸಿದ ಮಾರ್ಟಿನ್‌ ನೀಮೋಳರನ ʼಮೊದಲು ಅವರು ಜ್ಯೂಗಳನ್ನು ಹುಡುಕಿ ಬಂದರು, ನಾನು ಸುಮ್ಮನಿದ್ದೆʼ ಎಂದು ಶುರುವಾಗುವ ಕವಿತೆಯನ್ನು ಮಲಯಾಳಂ ಕವಿತೆಯ ಹಾಗೆಯೆ ಮಲಯಾಳಿಗಳು ಸ್ವೀಕರಿಸಿದರು. ಹಿಟ್ಲರ್‌ ಕಾರಣದಿಂದ ದಾರುಣಸ್ಥಿತಿ ತಲುಪಿದ್ದ ಪೌಲ್‌ ಸೆಲಾನೆ ಕುರಿತು ಸಚ್ಚಿದಾನಂದನ್‌ ಕವಿತೆ ಬರೆದರು. ಆತನ ಡೆತ್‌ ಫ್ಯೂಗ್‌ ಎಂಬ ಕವಿತೆಯನ್ನು ಬಾಲಚಂದ್ರನ್‌ ಚುಳ್ಳಿಕಾಡ್‌ ಅನುವಾದ ಮಾಡಿದರು. ಹಿಟ್ಲರ್‌ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಮಾರ್ಟಿನ್‌ ಬೆಂಜಮಿನ್‌ ಮತ್ತು ಆತನ ಬರಹಗಳು ತತ್ವಶಾಸ್ತ್ರ ವಿದ್ಯಾರ್ಥಿಗಳಾಚೆ ಕೇರಳದ ಸಾಮಾನ್ಯ ಜನತೆಯ ನಡವಲ್ಲೂ ಬಹಳಷ್ಟು ಚರ್ಚೆಯಾಗಿದ್ದವು. ʼಆಪತ್ತಿನ ಕ್ಷಣಗಳಲ್ಲಿ ಮಿಂಚಿ ಮರೆಯಾಗುವ ನೆನಪುಗಳನ್ನು ಹೆಕ್ಕಿಟ್ಟುಕೊಳ್ಳುವುದೇ ಚರಿತ್ರೆʼ ಎಂಬ ಆತನ ಪ್ರಸಿದ್ಧ ಮಾತನ್ನು ಹಲವಾರು ಮಲಯಾಳಿಗಳು ತಮ್ಮ ಬದುಕಿನ ದಾಸ್ತಾನಿನಲ್ಲಿ ಗುರುತಿಸಿಟ್ಟುಕೊಂಡಿದ್ದಾರೆ. ಈ ಮೇಲಿನ ಮಾತನ್ನು ಮಲಯಾಳಂ ಭಾಷೆಗೆ ಅನುವಾದ ಮಾಡಿದ ಡಾ. ಟಿ.ಕೆ. ರಾಮಚಂದ್ರನ್‌ ಸಹಿತ ಹಲವರು ಫ್ಯಾಸಿಸಮ್ಮಿನ ಆಳ-ಅಗಲವನ್ನು ವಿಮರ್ಶಿಸಿ ಬರೆದಿದ್ದಾರೆ. ವಿಲ್‌ಹೆಮ್‌ ರೀಹನ ಫ್ಯಾಸಿಸಮ್ಮಿನ ಗುಂಪು ಮನಸ್ಥಿತಿ (The Mass Psychology of Fascism) ತರಹದ ಕೃತಿಗಳು ಮಲಯಾಳಂ ಭಾಷೆಗೆ ಅನುವಾದಗೊಂಡವು, ಓದಲ್ಪಟ್ಟವು. ಸುಕುಮಾರನ್‌ ಅಳಿಕೋಡ್‌, ಎಂ.ಎನ್.‌ ವಿಜಯನ್‌, ಬಿ. ರಾಜೀವನ್, ಕೆ.ಇ.ಎನ್‌., ಕೆ.ಎಸ್‌. ಹರಿಹರನ್‌, ಸುನಿಲ್‌ ಪಿ. ಇಲಯಿಡಂ, ಒ.ವಿ. ವಿಜಯನ್‌, ಸಕರಿಯಾ, ಸಚ್ಚಿದಾನಂದನ್‌, ಕೆ.ಜಿ.ಎಸ್.‌, ಸಾರಾ ಜೋಸೆಫ್‌, ಟಿ.ಟಿ. ಶ್ರೀಕುಮಾರ್‌, ಜೆ. ದೇವಿಕ, ಎನ್.‌ಎಸ್‌. ಮಾಧವನ್‌, ಕೆ. ಅರವಿಂದಾಕ್ಷನ್‌, ಎನ್.‌ ಪ್ರಭಾಕರನ್‌ ಮತ್ತು ಇನ್ನೂ ಅನೇಕರು ಫ್ಯಾಸಿಸಂ ವಿರುದ್ಧವಾಗಿ ಬರವಣಿಗೆ ಮತ್ತು ಭಾಷಣಗಳ ಮೂಲಕ ದನಿ ಎತ್ತಿದರು. ಮಲಯಾಳಿಯಾದ ಕೆ.ಎನ್‌. ಪಣಿಕ್ಕರ್‌ ಸತತವಾಗಿ ಮೂರು ದಶಕಗಳ ಕಾಲ ಇಂಡಿಯನ್‌ ಫ್ಯಾಸಿಸಂ ಕುರಿತು ಮುನ್ನೆಚ್ಚರಿಕೆಗಳನ್ನು ನೀಡಿದರು. ರೋಮಿಲಾ ಥಾಪರ್‌, ಆಶಿಶ್ ನಂದಿ, ಸುಧೀರ್‌ ಕಾಕರ್‌, ತೀಸ್ತಾ ಸೆಟಲ್ವಾಡ್‌, ಅಕ್ಷಯ ಮುಕುಲ್‌ ಮೊದಲಾದವರನ್ನು ಮಲಯಾಳದಲ್ಲಿ ವ್ಯಾಪಕವಾಗಿ ಓದಲಾಯಿತು.

ಇದರ ಜೊತೆಗೆ, ಕೆಲವೇ ಕೆಲವು ಮಲಯಾಳಿಗಳು ಹಿಟ್ಲರ್‌ ಫ್ಯಾಸಿಸಮ್ಮಿನ ʼರುಚಿʼ ನೇರವಾಗಿ ಅನುಭವಿಸಿದರು ಎಂಬುದನ್ನು ನಾವಿಲ್ಲಿ ಮರೆಯಬಾರದು. ೧೯೩೩ ಫೆಬ್ರವರಿ ೨೭ರಂದು ಬರ್ಲಿನ್‌ನಲ್ಲಿ ಏ.ಸಿ.ಎನ್‌. ನಂಬಿಯಾರ್‌ ಎಂಬ ಮಲಯಾಳಿ ಪತ್ರಕರ್ತನನ್ನು ಹಿಟ್ಲರನ ʼಸ್ಟೋರ್ಮ್‌ ಟ್ರೂಪರ್ಸ್‌ʼ ಅರೆಸ್ಟ್‌ ಮಾಡಿತು. ಜರ್ಮನ್‌ ಚರಿತ್ರೆ ಮತ್ತು ಫ್ಯಾಸಿಸ್ಟ್‌ ಚರಿತ್ರೆಯ ಪ್ರಧಾನ ಬಿಂದುಗಳಲ್ಲಿ ಒಂದಾಗಿದ್ದ ಜರ್ಮನ್ ಪಾರ್ಲಿಮೆಂಟ್‌ (ರೀಕ್‌ಸ್ಟಾಗ್)‌ ಕಟ್ಟಡಕ್ಕೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿ ನಂಬಿಯಾರನ್ನು ಅರೆಸ್ಟ್‌ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಅದು ನಾಜಿಗಳದ್ದೇ ಕೆಲಸವಾಗಿತ್ತು ಎಂಬ ಸತ್ಯ ಹೊರಬಿದ್ದಿತ್ತು. ಆದರೆ, ೧೯೩೩ ಫೆಬ್ರವರಿ ೨೬ರ ಅರ್ಧರಾತ್ರಿಯಲ್ಲಿ ನಡೆದ ಆ ಘಟನೆಯನ್ನು ಆಗ ಕಮ್ಯುನಿಸ್ಟರ ತಲೆಗೆ ಕಟ್ಟಲಾಗಿತ್ತು. ಅದಕ್ಕೂ ನಾಲ್ಕು ವಾರಗಳ ಮೊದಲು ಹಿಟ್ಲರ್‌ ಜರ್ಮನ್‌ ಚಾನ್ಸಲರ್‌ ಆಗಿ ಅಧಿಕಾರಕ್ಕೇರಿದ್ದ. ಎದುರಾಳಿಗಳನ್ನು ಹೊಡೆದು ಹಾಕಲು ಬೇಕಾದ ತಂತ್ರಗಳನ್ನು ಆಗಲೇ ಶುರು ಮಾಡಿದ್ದ. ಅದರ ಭಾಗವಾಗಿ ನಡೆದ ದೊಡ್ಡದೊಂದು ಪಿತೂರಿಯೇ ರೀಕ್‌ಸ್ಟಾಗ್‌ ದಾಳಿ.

ಕೇರಳದ ಕಣ್ಣೂರು ಮೂಲದ ಏ.ಸಿ.ಎನ್.‌ ನಂಬಿಯಾರ್‌ ಮದ್ರಾಸ್‌ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾಭ್ಯಾಸದ ನಂತರ, ಲಂಡನ್ನಿಗೆ ಹೋಗಿ ಅಲ್ಲಿಂದ ೧೯೨೪ರಲ್ಲಿ ಬರ್ಲಿನ್‌ಗೆ ತಲುಪಿದ್ದರು. ಲಂಡನ್ನಿನಲ್ಲಿ ಆಗ ಇದ್ದ ಭಾರತೀಯ ಕ್ರಾಂತಿಕಾರಿಗಳ ಗೆಳೆತನ ಸಿಕ್ಕಿತ್ತು. ಜೊತೆಗೆ ಯೂರೋಪಿಯನ್‌ ಸೋಶ್ಯಲಿಸ್ಟ್‌ ಮತ್ತು ಕಮ್ಯುನಿಸ್ಟುಗಳ ಸಂಪರ್ಕ ಸಿಕ್ಕಿ, ನಂತರ ಕಮ್ಯುನಿಸ್ಟ್‌ ಆಗಿಯೂ ಬದಲಾದರು. ಅವರು ಬರ್ಲಿನ್ನಿನ ವಿಲ್‌ಹೆಮ್‌ಸ್ಟ್ರಾಸೆಯಲ್ಲಿ ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್ಸಿನ ಸಹಾಯದಿಂದ ಇಂಡಿಯನ್‌ ಇನ್ಫರ್ಮೇಶನ್‌ ಬ್ಯೂರೋ ನಡೆಸುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅನುಕೂಲಕರವಾದ ಜನಾಭಿಪ್ರಾಯ ರೂಪಿಸುವ ಪ್ರಯತ್ನದ ಭಾಗವಾಗಿ ನಂಬಿಯಾರ್‌ ಇದನ್ನು ನಡೆಸುತ್ತಿದ್ದರು. ೧೯೨೭ರಲ್ಲಿ ಬ್ರಸೆಲ್ಸಲ್ಲಿ ನಡೆದ ಸಾಮ್ರಾಜ್ಯವಾದ ಮತ್ತು ವಸಾಹತುಶಾಹಿ ವಿರೋಧಿ ಅಂತರಾಷ್ಟ್ರೀಯ ಸಮಾವೇಶದಲ್ಲಿ ನೆಹರು ಜೊತೆಗಿನ ಭೇಟಿ ನಂಬಿಯಾರನ್ನು ಇಂತಹದ್ದೊಂದು ಕೆಲಸಕ್ಕೆ ಹಚ್ಚಿತ್ತು.

ಸರೋಜಿನಿ ನಾಯ್ಡು ಅವರ ಸಹೋದರಿ ಮತ್ತು ಇಂಡಿಯಾದ ಮೊದಲ ಕಮ್ಯುನಿಸ್ಟ್‌ ಪಾರ್ಟಿಯ ಮಹಿಳಾ ಸದಸ್ಯರಲ್ಲಿ ಒಬ್ಬರಾಗಿದ್ದ ಸುಹಾಸಿನಿ ಚಟ್ಟೋಪಾಧ್ಯಾಯರನ್ನು ನಂಬಿಯಾರ್‌ ಮದುವೆಯಾಗಿದ್ದರು. ೧೯೨೦ರ ಹೊತ್ತಿಗೆ ಆ ದಾಂಪತ್ಯದಲ್ಲಿ ಬಿರುಕುಗಳು ಮೂಡಿ, ನಂತರ ಬವೇರಿಯಾದ ಕಮ್ಯುನಿಸ್ಟ್‌ ಇವಾ ಗೆಸ್ಟರ್‌ ಅನ್ನು ಮದುವೆಯಾದರು.

ಸ್ಟೋರ್ಮ್‌ ಟ್ರೂಪರ್ಸ್‌ ನಂಬಿಯಾರನ್ನು ಬಂಧಿಸಿ ಅವರ ಕೇಂದ್ರ ಕಛೇರಿಗೆ ಕೊಂಡು ಹೋಗಿದ್ದರು. ಅಲ್ಲಿ ಕಠಿಣ ಹಿಂಸೆಗೆ ಗುರಿ ಪಡಿಸಿದರು. ನಂತರ ಅವರನ್ನು ಅಲೆಕ್ಸಾಂಡರ್‌ ಪ್ಲಾಟ್ಸಿನ ಪೊಲಿಸ್‌ ಕೇಂದ್ರದಲ್ಲಿ ಹಾಜರುಪಡಿಸಿದರು. ಅಲ್ಲಿ ಏಕಾಂಗಿ ಶಿಕ್ಷೆಗೆ ಗುರಿಯಾದರು. ಕೊನೆಗೆ ಜರ್ಮನಿಯಿಂದ ಗಡಿಪಾರು ಮಾಡಲಾಯಿತು.

ಓ.ವಿ ವಿಜಯನ್‌ರ ಕೊನೆಯ ಕಾದಂಬರಿ ತಲಮುರ ದಲ್ಲಿ ಕಾನ್ಸಂಟ್ರೇಷನ್‌ ಕ್ಯಾಂಪಿಗೆ ಬೀಳುವ ಒಬ್ಬ ಮಲಯಾಳಿ ಕಥಾಪಾತ್ರದ ಚಿತ್ರೀಕರಣವಿದೆ.

ಇದರ ಜೊತೆಗೆ ನೆನೆಯಲೇಬೇಕಾದ ಇನ್ನೊಂದು ಘಟನೆ ಇದೆ. ಮಲಯಾಳದಲ್ಲಿ ಸಿನಿಮಾ ಕ್ಷೇತ್ರಕ್ಕೆ ನಾಗಾಲೋಟದ ವೇಗ ನೀಡಿದ ಪ್ರಮುಖ ನಿರ್ಮಾಣ ಕಂಪೆನಿಗಳಲ್ಲಿ ಒಂದಾದ ಉದಯಾ ಸ್ಟುಡಿಯೋಸ್‌ ಬ್ಯಾನರಲ್ಲಿ ಹೊರಬಂದ ಮೊದಲ ಸಿನಿಮಾ ವೆಳ್ಳಿನಕ್ಷತ್ರಂ. ಇದರ ನಿರ್ದೇಶಕ ಫೆಲಿಕ್ಸ್‌ ಜೆ. ಬೇಯ್ಸ್‌ ಎಂಬ ಜರ್ಮನ್ನನಾಗಿದ್ದ. ಮಲಯಾಳದ ಆರಂಭದ ನಟರಲ್ಲಿ ಒಬ್ಬರೂ, ತಿರುವಾಂಕೂರು ಕಾಂಗ್ರೆಸಿನ ಪ್ರಮುಖ ಕಾರ್ಯಕರ್ತರೂ ಆಗಿದ್ದ ಆಲಪ್ಪಿ ವಿನ್ಸಂಟ್‌ ಚೆನ್ನೈಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದ ಫೊಟೊಗ್ರಾಫರ್‌ ಈ ಫೆಲಿಕ್ಸ್.‌ ಆ ಪರಿಚಯ ಆತನನ್ನು ಆಲೆಪ್ಪಿಗೆ ಕರೆಸಿಕೊಂಡಿತು. ಚಿತ್ರೀಕರಣದ ಉದ್ದಕ್ಕೂ ಯಾವ ಲೊಕೇಶನ್‌ ಚಿತ್ರದಲ್ಲೂ ತಾನು ಕಾಣಿಸದಂತೆ ಫೆಲಿಕ್ಸ್‌ ಅತಿ ಎಚ್ಚರ ವಹಿಸಿದ್ದ. ಆದ್ದರಿಂದ ಫೆಲಿಕ್ಸ್‌ನ ಒಂದೇ ಒಂದು ಫೋಟೋ ಕೂಡ ಉದಯಾ ಸ್ಟುಡಿಯೋದ ಶೇಖರದಲ್ಲಿಲ್ಲ. ಬಂದ ಹಾಗೆಯೇ ಆತ ಕಣ್ಮರೆಯೂ ಆಗಿದ್ದ.

ನಂತರದ ಕಾಲದಲ್ಲಿ ಆಲೆಪ್ಪಿ ವಿನ್ಸಂಟ್‌ ತನ್ನೊಂದಿಗೆ ಹೇಳಿಕೊಂಡಿದ್ದ ರಹಸ್ಯವಿದೆಂದು ಚೇಲಂಗಾಟ್ಟ್‌ ಗೋಪಾಲಕೃಷ್ಣನ್‌ ಎಂಬ ಸಿನಿಮಾ ಚರಿತ್ರೆಗಾರ, ಫೆಲಿಕ್ಸ್‌ ಜೆ. ಬೇಯ್ಸ್ ಒಬ್ಬ ನಾಜಿ ಗೂಢಚಾರನಾಗಿದ್ದ ಎಂದು ಹೇಳಿದ್ದರು. ಎರಡನೇ ವಿಶ್ವಯುದ್ಧದ ಕಾಲದಲ್ಲಿ ಜರ್ಮನಿಯ ಎದುರಾಳಿಯಾಗಿದ್ದ ಬ್ರಿಟಿಷ್‌ ಇಂಡಿಯಾದ ಆಯಕಟ್ಟಿನ ಜಾಗಗಳ ಫೋಟೋ ತೆಗೆದು ನಾಜಿಗಳಿಗೆ ತಲುಪಿಸುವ ಜವಾಬ್ದಾರಿಯೊಂದಿಗೆ ಫೆಲಿಕ್ಸ್‌ ಇಂಡಿಯಾ ತಲುಪಿದ್ದ. ಎರಡನೇ ವಿಶ್ವಯುದ್ಧದಲ್ಲಿ ನಾಜಿಗಳು ಸೋತು, ಹಿಟ್ಲರ್‌ ಆತ್ಮಹತ್ಯೆ ಮಾಡಿಕೊಂಡ. ಅದರೊಂದಿಗೆ ನಾಜಿ ಖೈದಿಗಳನ್ನು ಶಿಕ್ಷಿಸಲು ನ್ಯೂರಂಬರ್ಗ್‌ ವಿಚಾರಣೆ ಕೂಡ ಶುರುವಾಯಿತು. ಅದಕ್ಕಾಗಿ ತನ್ನ ಒಂದೇ ಒಂದು ಭಾವಚಿತ್ರ ಕೂಡ ಹೊರಬಾರದಂತೆ ಫೆಲಿಕ್ಸ್‌ ಎಚ್ಚರ ವಹಿಸಿದ್ದ ಎಂದು ಚೇಲಂಗಾಟ್ಟ್‌, ವಿನ್ಸಂಟ್‌ ಅನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ.

ಆದರೆ, ಈ ಕಥೆ ಸುಳ್ಳೆಂದೂ ಬ್ರಿಟಿಷ್‌ ಸರಕಾರದ ತನಿಖೆಯಲ್ಲಿ ಆತನಿಗೆ ನಾಜಿಗಳ ಜೊತೆಗೆ ಸಂಬಂಧವಿಲ್ಲವೆಂದು ಸಾಬೀತಾಗಿದೆಯೆಂದೂ ನಂಬುವವರು ಇದ್ದಾರೆ.

ನಾನಿಲ್ಲಿ ಹೇಳಲು ಪ್ರಯತ್ನಿಸುತ್ತಿರುವುದು, ಫ್ಯಾಸಿಸಮ್ಮಿನ ಜೀವವಿರೋಧಿ ತತ್ವವನ್ನು ನಿರಂತರವಾಗಿ ಬೆತ್ತಲಾಗಿಸುತ್ತಲೇ ಬಂದ ಒಂದು ಸಮುದಾಯ ಮಲಯಾಳಿ ಸಮುದಾಯ ಎಂಬುದು. ಇವೆಲ್ಲದರ ಫಲವಾಗಿ, ಫ್ಯಾಸಿಸಮ್ಮಿಗೆದುರಾದ ಮನೋಭಾವವೊಂದು ಸಾಮಾನ್ಯವೆಂಬಂತೆ ಮಲಯಾಳಿಗಳ ನಡುವೆ ಉಳಿದಿದೆ.

ಆದರೆ, ಈ ಫ್ಯಾಸಿಸ್ಟ್‌ ವಿರೋಧಿ ಮಲಯಾಳಿ ಬದುಕಿಗೆ ಇನ್ನೊಂದು ಮುಖವೂ ಇದೆ. ೧೯೯೬ರಲ್ಲಿ ಹೊರಬಂದ ಮಲಯಾಳಂ ಸಿನಿಮಾ ಕಾಲಾಪಾನಿ. ಮಲಯಾಳಂ ಸಿನಿಮಾ ರಂಗದ ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್‌ ನಿರ್ದೇಶನದಲ್ಲಿ, ಅಲ್ಲಿಯ ತನಕದ ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಹೆಚ್ಚು ದುಡ್ಡು ಖರ್ಚು ಮಾಡಿ ತಯಾರಿಸಿದ ಸಿನಿಮಾ. ೧೯೧೫ರ ಕಾಲಘಟ್ಟದ ಹಿನ್ನೆಲೆಯಲ್ಲಿ ತಯಾರಾದ, ಕಾಲ್ಪನಿಕವೆಂದು ಹೇಳಬಹುದಾದ ಆ ಸಿನಿಮಾವನ್ನು ಹಿಂದಿ ಸಹಿತ ಹಲವು ಭಾಷೆಗಳಿಗೆ ಡಬ್‌ ಮಾಡಿ ಪ್ರದರ್ಶಿಸಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದ ಗಾಂಧಿಪೂರ್ವ ಕಾಲದ ಹಿನ್ನೆಲೆಯಲ್ಲಿ ನಿರ್ಮಿಸಿದ ಆ ಚಿತ್ರದಲ್ಲಿ ಐತಿಹಾಸಿಕವೂ ಅಲ್ಲದವೂ ಆದ ಕಥಾಪಾತ್ರಗಳು ಇದ್ದವು. ಮೋಹನ್‌ ಲಾಲ್‌ ಅಭಿನಯಿಸಿದ ಗೋವರ್ಧನ್‌ ಮೆನನ್‌ ಇಡಿಯಾಗಿ ಇತಿಹಾಸದಲ್ಲಿ ಇಲ್ಲದ ಪಾತ್ರವಾಗಿತ್ತು. ಆದರೆ, ಐತಿಹಾಸಿಕವೆಂದು ಹೇಳಬಹುದಾದ ಮೂರು ಕಥಾಪಾತ್ರಗಳಿದ್ದವು. ಅವು ಅನ್ನು ಕಪೂರ್‌ ನಟಿಸಿದ ವಿ.ಡಿ. ಸಾವರ್ಕರ್‌, ಅಮರೀಶ್‌ ಪುರಿ ನಟಿಸಿದ ಮಿರ್ಜಾಖಾನ್‌ ಮತ್ತು ಅಲೆಕ್ಸ್‌ ಡ್ರೇಪರ್‌ ನಟಿಸಿದ ಐರ್ಲಾಂಡಿನ ಡೇವಿಡ್‌ ಬಾರಿ ಪಾತ್ರಗಳು. ನಿಜದಲ್ಲಿ ಈ ಮೂರೂ ಪಾತ್ರಗಳನ್ನು ವಿ.ಡಿ. ಸಾವರ್ಕರ್‌ ಬರೆದ My transportaion for life ಎಂಬ ಅಂಡಮಾನ್‌ ಸೆಲ್ಯುಲಾರ್‌ ಜೈಲ್‌ ನೆನಪಿನ ಪುಸ್ತಕದ ಆಧಾರದಲ್ಲಿ ಕಟ್ಟಲಾಗಿತ್ತು.

ಸಾವರ್ಕರ್‌ ಯಾರು ಎಂಬ ಪ್ರಶ್ನೆಗೆ ಇವತ್ತು ಮಲಯಾಳಿಗಳು ಉತ್ತರ ಹೇಳಬಲ್ಲರು. ಕಾರಣ, ಇಂದಿನ ಹಿಂದುತ್ವ ಫ್ಯಾಸಿಸ್ಟ್‌ ಸರಕಾರ ಉದ್ದೇಶಪೂರ್ವಕವಾಗಿ ಕೆತ್ತಲು ಶ್ರಮಿಸುತ್ತಿರುವ ದೇಸೀ ಪ್ರತಿಮೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಈ ಸಾವರ್ಕರ್.‌ ಇತಿಹಾಸದ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಬಿಂಬವಾಗಿತ್ತು ಸಾವರ್ಕರ್.‌ ಅದಕ್ಕೆ ಪ್ರಮುಖ ಕಾರಣ, ಸ್ವತಂತ್ರ ಭಾರತದ ಅತ್ಯಂತ ದಾರುಣ ಘಟನೆಗಳಲ್ಲಿ ಪ್ರಮುಖವಾದ ಗಾಂಧಿ ಹತ್ಯೆಯಲ್ಲಿ ಆತನಿಗೆ ಪಾಲಿತ್ತು ಎಂದು ಹೇಳಲಾದ ಸಂಗತಿ. ಅಷ್ಟೇ ಅಲ್ಲ, ಅಂಡಮಾನಿನ ಸೆಲ್ಯುಲಾರ್‌ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿದ್ದಾಗ ಬ್ರಿಟಿಷರಿಗೆ ಬರೆದಿದ್ದ ಕ್ಷಮಾಪಣಾ ಪತ್ರಗಳು ಪುನಹ ಈ ಕಾಲದ ಸಾರ್ವಜನಿಕ ವಲಯದಲ್ಲಿ ಚರ್ಚಾವಿಷಯವಾಯಿತು.‌ ಹಿಂದುತ್ವ ಫ್ಯಾಸಿಸ್ಟರು ಸಾವರ್ಕರನ್ನು ರಾಷ್ಟ್ರೀಯ ಬಿಂಬವಾಗಿ, ಒಂದರ್ಥದಲ್ಲಿ ಗಾಂಧಿಗೆ ಬದಲಿಯಾಗುವ ರೀತಿಯಲ್ಲಿ, ಕೊಂಡಾಡುತ್ತಿರುವುದು ಆತ ಹಿಂದುತ್ವ ಎಂಬ ಸಿದ್ಧಾಂತದ ಪಿತಾಮಹ ಆಗಿರುವುದರಿಂದ. ಆತ ೧೯೨೩ರಲ್ಲಿ ಬರೆದ Essentials of Hindutva ಎಂಬ ಪುಸ್ತಕವೇ ಹಿಂದುತ್ವ ಎಂಬ ಕಲ್ಪನೆಗೆ ಜನ್ಮ ನೀಡಿರುವುದು.

ಅಂತಹಾ ಸಾವರ್ಕರ್‌ ಬರೆದ ನೆನಪಿನ ಪುಸ್ತಕದ ಆಧಾರದಲ್ಲಿ, ಅಲ್ಲಿಯ ತನಕ ಕೇರಳ ಕಂಡು ಕೇಳಿರದಿದ್ದ ಬಜೆಟ್ಟಿನಲ್ಲಿ, ಜನಪ್ರಿಯ ನಿರ್ದೇಶಕನೊಬ್ಬ, ಮಲಯಾಳಂ, ತಮಿಳು, ಹಿಂದಿ ಭಾಷೆಗಳ ದೊಡ್ಡ ದೊಡ್ಡ ನಟರನ್ನು (ಮೋಹನ್‌ ಲಾಲ್‌, ಪ್ರಭು, ಅಮರೀಶ್‌ ಪುರಿ, ಅನ್ನು ಕಪೂರ್‌ ಇತ್ಯಾದಿ) ಇಟ್ಟುಕೊಂಡು ದೃಶ್ಯ ವಿಸ್ಮಯದ ಚಿತ್ರ ತಯಾರಿಸಿಯೂ, ಅಂಡಮಾನ್‌ ಜೈಲಿಂದ ಸಾವರ್ಕರ್‌ ಬರೆದ ಕ್ಷಮಾಪಣಾ ಪತ್ರಗಳ ಬಗ್ಗೆಯಾಗಲೀ, ಮುಸ್ಲಿಂ ದ್ವೇಷ ಹೊತ್ತಿ ಉರಿಸುವ ರೀತಿಯಲ್ಲಿ ಆ ನೆನಪಿನ ಪುಸ್ತಕದಲ್ಲಿ ಮಾಡಿದ್ದ ವಿಮರ್ಶೆಗಳ ಬಗ್ಗೆಯಾಗಲೀ ಯಾವ ವಿಧದ ಚರ್ಚೆಯೂ ಅಂದು ಹುಟ್ಟಿಕೊಳ್ಳಲಿಲ್ಲ. ಆ ವರ್ಷದ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದಾಗ ಎಂ.ಪಿ. ಸುಕುಮಾರನ್‌ ನಾಯರ್‌ ಅವರ ಕಳಗಂ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿತು. ಕಾಲಾಪಾನಿಗೆ ಎರಡನೇ ಅತ್ಯುತ್ತಮ ಪ್ರಶಸ್ತಿ ಸಹಿತ ಏಳು ಪ್ರಶಸ್ತಿಗಳು ಸಂದವು. ಅಂದು ಪ್ರಶಸ್ತಿ ಸಮಿತಿಯಲ್ಲಿದ್ದ ಪ್ರಸಿದ್ಧ ನಟಿ ಸೀಮಾ, ಪ್ರಶಸ್ತಿ ಘೋಷಣೆಯ ನಂತರ ಅತ್ಯುತ್ತಮ ಚಿತ್ರ ಪ್ರಶಸ್ತಿ ಕಾಲಾಪಾನಿಗೆ ಕೊಡಬೇಕಿತ್ತು ಎಂದು ಹೇಳುವ ಮೂಲಕ ದೊಡ್ಡದೊಂದು ವಿವಾದಕ್ಕೆ ಕಾರಣವಾಗಿದ್ದರು. ಆ ವರ್ಷದ ರಾಷ್ಟ್ರ ಪ್ರಶಸ್ತಿಗಳು ಘೋಷಣೆಯಾದಾಗ ನಾಲ್ಕು ಪ್ರಶಸ್ತಿಗಳು ಕಾಲಾಪಾನಿಗೆ ಬಂದವು.

ಹೀಗೆ ಕಾಲಾಪಾನಿಯ ಕುರಿತು ಬಹಳಷ್ಟು ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುವಾಗಲೂ, ಹಿಂದುತ್ವ ಫ್ಯಾಸಿಸಮ್ಮಿನ ಪಿತಾಮಹ ಎಂದು ಕರೆಯಬಹುದಾದ ವಿ.ಡಿ. ಸಾವರ್ಕರ್‌ ಕುರಿತ ಆ ಚಿತ್ರದ ಸಂಬಂಧದ ಬಗ್ಗೆ ಯಾರೂ ತನಿಖೆ ಮಾಡಲಿಲ್ಲ. ಅದರಲ್ಲಿ ಸಾವರ್ಕರ್‌ ಒಂದು ಕಥಾಪಾತ್ರವಾಗಿ ಬಂದಿದ್ದರೂ ಕೂಡ. ಸಾವರ್ಕರ್‌ ಮಾತ್ರವಲ್ಲ, ಹಿಂದುತ್ವ ಫ್ಯಾಸಿಸಮ್ಮಿನ ಇನ್ನೊಬ್ಬ ಪ್ರಮುಖ ವ್ಯಕ್ತಿ, ಭಾಯ್‌ ಪರಮಾನಂದ ಕೂಡ ಅದರಲ್ಲಿ ಕಥಾಪಾತ್ರವಾಗಿ ಪ್ರತ್ಯಕ್ಷನಾಗಿದ್ದ. ಫ್ಯಾಸಿಸ್ಟ್‌ ಕುರಿತು ಹಲವು ರೀತಿಯಲ್ಲಿ ಅರಿತುಕೊಂಡವರಾಗಿದ್ದುಕೊಂಡೂ, ಹಿಂದುತ್ವವಾದಿಗಳು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಪರಿಸ್ಥಿತಿಯಲ್ಲಿ ಪ್ರದರ್ಶನಕಂಡರೂ ಆ ಸಿನಿಮಾ ನಿರ್ವಹಿಸಿದ ʼಸಾವರ್ಕರ್‌ ಯೋಜನೆʼಯನ್ನು ಮಲಯಾಳಿಗಳು ಗುರುತಿಸಲೇ ಇಲ್ಲ.

ಇದರ ಜೊತೆಗೆ ನೆನೆಯಲೇಬೇಕಾದ ಮತ್ತೊಂದು ಸಿನಿಮಾ ರಾಜ್‌ ಕಮಲ್‌ ಇಂಟರ್ನಾಷನಲ್‌ ಬ್ಯಾನರಿನಲ್ಲಿ ಕಮಲ್‌ ಹಾಸನ್‌ ನಿರ್ದೇಶನದಲ್ಲಿ ೨೦೦೦ದಲ್ಲಿ ತೆರೆಗೆ ಬಂದ ʼಹೇ ರಾಮ್.ʼ ಗಾಂಧಿ ಹತ್ಯೆಯ ಹಿನ್ನೆಲೆಯ ಕಥಾಎಳೆಯನ್ನು ಅದು ಒಳಗೊಂಡಿತ್ತು. ಕಾಲಾಪಾನಿಯನ್ನು ನೆನಪಿಸುವ ರೀತಿಯಲ್ಲಿ ಪ್ಯಾನ್‌ ಇಂಡಿಯನ್‌ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡ ದೃಶ್ಯ ವಿಸ್ಮಯವಾಗಿ ಅದು ತೆರೆಕಂಡಿತ್ತು. ಕಮಲ್‌ ಹಾಸನ್‌, ಶಾರುಖ್‌ ಖಾನ್‌, ಅತುಲ್‌ ಕುಲಕರ್ಣಿ, ಓಂ ಪುರಿ, ಹೇಮಮಾಲಿನಿ, ನಸೀರುದ್ದೀನ್‌ ಶಾ, ರಾಣಿ ಮುಖರ್ಜಿ ಮೊದಲಾಗಿ ವಿವಿಧ ಭಾಷೆಗಳ ದೊಡ್ಡ ನಟರುಗಳು ಆ ಸಿನಿಮಾದಲ್ಲಿ ನಟಿಸಿದ್ದರು. ಕಾಲಾಪಾನಿಗೆ ವಿರುದ್ಧವಾಗಿ ಭಾರತದ ಚರಿತ್ರೆಯಲ್ಲಿ ವಿ.ಡಿ ಸಾಮರ್ಕರ್‌ ಪಾತ್ರವನ್ನು ವಿಮರ್ಶಾತ್ಮಕವಾಗಿ ಶೋಧಿಸುವ ಮುಖ್ಯವಾಹಿನಿ ಸಿನಿಮಾ ಅದಾಗಿತ್ತು. ಅತುಲ್‌ ಕುಲಕರ್ಣಿ ಅಭಿನಯಿಸಿದ ಶ್ರೀರಾಂ ಅಭಯಂಕರ್‌ ಎಂಬ ಕಥಾಪಾತ್ರ ʼಸಾವರ್ಕರ್‌ ಹಿಂದುತ್ವʼ ಕಲ್ಪನೆಯನ್ನು ಪೂರ್ತಿಯಾಗಿ ಆವಾಹಿಸಿಕೊಂಡಿದ್ದ ಪಾತ್ರವಾಗಿತ್ತು. ಅಭಯಂಕರ್‌ ಪಾತ್ರದ ಹಿನ್ನೆಲೆಯಲ್ಲಿ ಸಾವರ್ಕರ್‌ ಭಾವಚಿತ್ರವನ್ನು ತೋರಿಸುವ ಫ್ರೇಮ್‌ಗಳು ಕೂಡ ಆ ಸಿನಿಮಾದಲ್ಲಿದ್ದವು. ಹಿಂದು-ಮುಸ್ಲಿಂ ಸೌಹಾರ್ದತೆಯ ಕ್ಲೀಷೆಯಾಗಿ ಹೋಗಿರುವ ಶೈಲಿ ಮತ್ತು ಪ್ರಯೋಗಗಳು ಇವೆಯಾದರೂ, ದೇಶ ವಿಭಜನೆಯ ಹಿನ್ನೆಲೆಯಲ್ಲಿ ಹಿಂದುತ್ವ ಫ್ಯಾಸಿಸಮ್ಮಿನ ಹಿಂದೆ ಇರುವ ನವಬ್ರಾಹ್ಮನಿಸಂ ಅನ್ನು ಕಾಣುವ ಹಾಗೂ ವಿಭಜನೆ ಮತ್ತು ಗಾಂಧಿ ಹತ್ಯೆಯ ತನಕದ ಕಾಲದಲ್ಲಿ ಅದು ಹೇಗೆ ಕೆಲಸ ಮಾಡಿತು ಎಂದು ಸೃಜನಶೀಲವಾಗಿ ಶೋಧಿಸುವ ನಿಸ್ವಾರ್ಥ ಪ್ರಯತ್ನ ಆ ಸಿನಿಮಾದ ಹಿಂದೆ ಇತ್ತು. ಅದು ತೆರೆಕಂಡಾಗಲೂ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಲಾಯಿತು. ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಅದು ಪಡೆದುಕೊಂಡಿತು. ಆದರೂ, ಕೇರಳದಲ್ಲಿ ಸಾವರ್ಕರ್‌ ವಿಷಯವಾಗಿ ಬಂದ ಈ ಸಿನಿಮಾದ ವಿಮರ್ಶಾತ್ಮಕ ನೋಟವನ್ನು ಯಾರೂ ಗಮನಿಸಲಿಲ್ಲ.

ಇಂಡಿಯನ್‌ ಫ್ಯಾಸಿಸಂ ಕುರಿತು ಬೀದಿಬೀದಿಯಲ್ಲಿ ಚರ್ಚೆ ನಡೆಸುವಷ್ಟು ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಾಗಲೂ, ಆ ಫ್ಯಾಸಿಸಂ ಅನ್ನು ಸಾಧ್ಯವಾಗಿಸಿದ ಇಂಡಿಯನ್‌ ಬೇರುಗಳ ಚರಿತ್ರೆಯ ಕುರಿತು ಅಪ್ರಜ್ಞರಾಗಿಯೇ ಇರುವ ವಿಮುಖತೆಯೊಂದು ಮಲಯಾಳಿಗಳೊಳಗೆ ಎಲ್ಲ ಕಾಲದಲ್ಲಿಯೂ ಇತ್ತು. ಹಿಟ್ಲರ್‌ ಸೋಲಿಸಿದ ದೇಶಗಳ ಕುರಿತು ಬಹಳ ಚೆನ್ನಾಗಿ ಗೊತ್ತಿರುವ ಜನರಿಗೆ, ಸಾವರ್ಕರ್‌ ಕೇರಳ ಭೇಟಿಯ ಬಗ್ಗೆ ಕೇಳಿದರೆ ಗೊಂದಲವಿದೆ. ಸರ್‌ ಸಿ.ಪಿ. ತಿರುವಾಂಕೂರನ್ನು ಸ್ವಂತಂತ್ರವಾಗಿ ಘೋಷಿಸಿದ್ದನ್ನು ಚರ್ಚಿಸುವಾಗ, ಅವರು ಎತ್ತಿ ಹಿಡಿದ ಅಮೇರಿಕಾ ಮಾದರಿಯನ್ನು ಮಾತ್ರ ವಿಮರ್ಶಿಸಲಾಗುತ್ತದೆ. ಅದೇ ಹೊತ್ತು, ಅದು ಹಿಂದುತ್ವ ರಿಪಬ್ಲಿಕಿನ ಮಿನಿಯೇಚರ್‌ ರೂಪವಾಗಿತ್ತು ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಸಾವರ್ಕರ್‌ ಮತ್ತು ಸಿ.ಪಿ. ಎಂಬುದು ನಮ್ಮ ಇತಿಹಾಸ ಅನ್ವೇಷಣೆಯಲ್ಲಿ ಒಂದು ಕುತೂಹಲ ಸುದ್ದಿಯೇ ಅಲ್ಲ.

ಗಾಂಧಿಹತ್ಯೆ ಹಿಂದುತ್ವ ಫ್ಯಾಸಿಸಮ್ಮಿನ ಅತ್ಯಂತ ಪ್ರಧಾನ ಪ್ರಯೋಗವಾಗಿತ್ತು. ಅದು ಆ ದಿನಗಳಲ್ಲೇ ಎಲ್ಲರಿಗೂ ತಿಳಿದ ಸಂಗತಿಯಾಗಿತ್ತು. ನಾಥುರಾಂ ವಿನಾಯಕ್‌ ಗೋಡ್ಸೆ ಬರಿಯ ಒಬ್ಬ ಮತಭ್ರಾಂತನಾಗಿರಲಿಲ್ಲವೆಂದೂ, ಹಿಂದುತ್ವ ಫ್ಯಾಸಿಸಮ್ಮಿನ ಪಿತೂರಿಯನ್ನು ಹೆಗಲಿಗೇರಿಸಿಕೊಂಡು ಕಾರ್ಯಗತಗೊಳಿಸಿದ ಒಬ್ಬ ಮುಂಚೂಣಿ ಕಾರ್ಯಕರ್ತ ಎಂದೂ ಮೊದಲ ವಿಚಾರಣೆಯಲ್ಲಿಯೇ ಬಹಿರಂಗಗೊಂಡಿತ್ತು. ನಂತರ ಗಾಂಧಿಹತ್ಯೆಯ ಗೂಢಾಲೋಚನೆಯ ಕುರಿತು ವಿಚಾರಣೆ ನಡೆಸಲು ನೇಮಿಸಲ್ಪಟ್ಟ ಕಪೂರ್‌ ಕಮಿಷನ್ ಇದರ ಕುರಿತು ಧಾರಾಳ ಮಾಹಿತಿಗಳನ್ನು ಹೊರ ತಂದಿತು. ಸಾವರ್ಕರ್‌ ಸರ್ವಾಧಿಕಾರಿಯಾಗಿದ್ದ ಹಿಂದೂ ರಾಷ್ಟ್ರ ದಳ್‌ ಎಂಬ ಒಳಹಿಂದುತ್ವ ಸಂಘಟನೆಯಲ್ಲಿ ಗೋಡ್ಸೆ ಎರಡನೇ ನಾಯಕನಾಗಿದ್ದ ಎಂಬದು ಸಹಿತ. ಗಾಂಧಿ ಮಲಯಾಳದ ಸಾಂಸ್ಕೃತಿಕ ಚಿಂತನೆಯ ಅತ್ಯಂತ ಪ್ರಮುಖ ಬಿಂಬವಾಗಿದ್ದರು ಕೂಡ ಗಾಂಧಿಹತ್ಯೆ ಎಂಬುದು ಕೇರಳದಲ್ಲಿ ಒಂದು ಸುದ್ದಿ ಮಾತ್ರವಾಗಿ ಉಳಿಯಿತು. ಎನ್.ವಿ. ಕೃಷ್ಣವಾರ್ಯರ್‌ ಅವರಂತಹ ಒಬ್ಬ ಮಹಾಮನುಷ್ಯ ಗಾಂಧಿ ಮತ್ತು ಗೋಡ್ಸೆಯನ್ನು ತುಲನೆ ಮಾಡಿ ಬರೆದ, ಮಲಯಾಳದಲ್ಲಿ ಮತ್ತೆ ಮತ್ತೆ ಜಗಿಯುತ್ತಲೇ ಇರುವ ಒಂದು ಕವಿತೆಯಿದೆ. ಅದರಲ್ಲಿ ಗಾಂಧಿಯ ಮೌಲ್ಯಗಳಿಗೆ ಎದುರಾಗಿ ನಿಲ್ಲುವ ಕಾಳಸಂತೆಯ ಭ್ರಷ್ಟ ವ್ಯಕ್ತಿಯಾಗಿಯೆಲ್ಲ ಗೋಡ್ಸೆ ಪ್ರತ್ಯಕ್ಷನಾಗುತ್ತಾನೆ. ಆದರೆ, ಕಪೂರ್‌ ಕಮಿಷನ್‌ ವಾರ್ತೆಯಲ್ಲಿ ತುಂಬಿ ನಿಂತಿದ್ದ ಕಾಲದಲ್ಲಿಯೇ ಬರೆದ ಕವಿತೆಯಾಗಿದ್ದು ಕೂಡ, ಗೋಡ್ಸೆಯ ಹಿಂದುತ್ವ ಸಂಬಂಧವನ್ನು ಅದು ಚೂರೇ ಚೂರು ಮುಟ್ಟುವುದಿಲ್ಲ. ಅದರಲ್ಲಿ ಬರುವ ಗೋಡ್ಸೆ ಇತಿಹಾಸದ ಗೋಡ್ಸೆಯೊಂದಿಗೆ ಯಾವ ಸಂಬಂಧವೂ ಇಲ್ಲದ ಒಬ್ಬ ವ್ಯಕ್ತಿ ಮಾತ್ರ.

ಇಂತಹಾ ಕಾಲಘಟ್ಟದಲ್ಲಿ ಈ ಲೇಖನ ಸರಣಿ ಬರೆಯುತ್ತಿದ್ದೇನೆ. ಫ್ಯಾಸಿಸಮ್ಮಿನ ಇಂಡಿಯನ್‌ ಬೇರುಗಳನ್ನು ಮಲಯಾಳದ ಸಾರ್ವಜನಿಕ ಪ್ರಜ್ಞೆಯಲ್ಲಿ ಅಚ್ಚೊತ್ತುವುದರಿಂದ, ನಮ್ಮದೇ ಚರಿತ್ರೆ ಮತ್ತು ಮನಸ್ಸೊಳಗೆ ಗಟ್ಟಿಯಾಗಿ ಕುಳಿತಿರುವ ವಿಮುಖತೆಯಷ್ಟು ಎತ್ತರಕ್ಕೆ ಬೆಳೆದಿರುವ ಅಜ್ಞತೆಯನ್ನು ಒಮ್ಮೆ ಅಲುಗಾಡಿಸಲು ಸಾಧ್ಯವಾಗಬಹುದು ಎಂಬ ಬಯಕೆಯೊಂದಿಗೆ.

ಪ್ರತಿಭಟನೆಗಳನ್ನು ವರದಿ ಮಾಡುವುದು ಅಪರಾಧವಲ್ಲ: ಪಿಣರಾಯಿ ಸರ್ಕಾರಕ್ಕೆ ಎಡಿಟರ್ಸ್ ಗಿಲ್ಡ್
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವರದಿ ಮಾಡಿದ್ದಕ್ಕಾಗಿ ಕೇರಳದ ಪತ್ರಕರ್ತರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು “ತೀವ್ರ ನೋವುಂಟು ಮಾಡಿದೆ” ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.

ಸುದ್ದಿ ವಾಹಿನಿ 24 ನ್ಯೂಸ್‌ನ ಪತ್ರಕರ್ತೆ ವಿಜಿ ವಿನೀತಾ ಅವರು ಡಿಸೆಂಬರ್ 10 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ನಡೆದ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದರು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಿಣರಾಯಿ ವಾಹನದ ಮೇಲೆ ಶೂಗಳನ್ನು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಂಘಟನೆಯ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರುಪ್ಪಂಪಾಡಿ ಪೊಲೀಸರು, ಪತ್ರಕರ್ತೆ ವಿನೀತಾ ಅವರನ್ನು ಐದನೇ ಆರೋಪಿ ಎಂದು ಕರೆದಿದ್ದಾರೆ. ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.  “ವಿನೀತಾ ಕೆಲವು ಕೆಎಸ್‌ಯು ಕಾರ್ಯಕರ್ತರೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದರು,” ಪೊಲೀಸ್ ಮೂಲಗಳು ಆರೋಪಿಸಿ, ಈ ಯೋಜಿತ ಪ್ರತಿಭಟನೆಯ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಹೇಳಿವೆ.  ಅವರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪ ಹೊರಿಸಲಾಗಿದೆ.

EGI is deeply disturbed by the registration of an FIR by the Kerala police against a news reporter in connection with her coverage of a students' protest on Dec 10. Guild urges the Govt of Kerala to desist from punishing the reporter for discharging her professional duty. pic.twitter.com/1hIo8rjcXt
— Editors Guild of India (@IndEditorsGuild) December 29, 2023

ಈ ಪಿತೂರಿ ಏನೂ ಇಲ್ಲ ಎಂಬುದನ್ನು ಸಾಬೀತು ಪಡಿಸುವಂತೆ ವಿಜಯನ್‌ ಮಾಧ್ಯಮಕ್ಕೆ ತಿಳಿಸಿರುವುದಾಗಿ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ಕೇರಳ ಸರ್ಕಾರ ನಡೆಯನ್ನು ಖಂಡಿಸಿ ಎಡಿಟರ್ಸ್‌ ಗಿಲ್ಡ್ “ಪ್ರತಿಭಟನೆಗಳನ್ನು ವರದಿ ಮಾಡುವುದು ಮಾಧ್ಯಮದ ಜವಾಬ್ದಾರಿ, ಅದು ಅಪರಾಧವಲ್ಲ. ಪ್ರತಿಭಟನಾ ಸ್ಥಳದಲ್ಲಿ ವರದಿಗಾರನ ಉಪಸ್ಥಿತಿಯು ನಡೆಯಬಹುದಾದ ಯಾವುದೇ ಅಹಿತಕರ ಘಟನೆಗೆ ಅವನು/ಅವಳಿಗೆ ಸಂಬಂಧ ಇರುವುದಿಲ್ಲ,” ಅವನು ಅಥವಾ ಅವಳ ಸಹಭಾಗಿಯಾಗುವುದಿಲ್ಲ.” ಎಂದು ಹೇಳಿಕೆ ನೀಡಿದೆ.

ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್‌ ಮೀಡಿಯಾ

ತನ್ನ ಪ್ರಕಟಣೆಯಲ್ಲಿ ಎಡಿಟರ್ಸ್‌ ಗಿಲ್ಡ್‌  “ವರದಿಗಾರನನ್ನು ಶಿಕ್ಷಿಸುವುದನ್ನು ನಿಲ್ಲಿಸಬೇಕು” ಎಂದು ಕೇರಳ ಸರ್ಕಾರವನ್ನು ಒತ್ತಾಯಿಸಿದೆ. ವರದಿಗಾರನ ವಿರುದ್ಧ ಇರುವ ಆರೋಪಗಳನ್ನು ಹಿಂಪಡೆದು, ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಪೊಲೀಸರಿಗೆ ಸೂಚನೆ ನೀಡಿದೆ.

ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವೂ ಪೊಲೀಸರು ಈ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದು, ಇದು “ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಮತ್ತು ನ್ಯಾಚುರಲ್ ಜಸ್ಟೀಸ್‌ಗೆ ವಿರುದ್ಧ” ಎಂದು ಕರೆದಿದೆ.