male hani – Peepal Media

ಮಳೆ ಹಾನಿ: ಜನರ ಆಕ್ರೋಶಕ್ಕೆ ಕಾರಣವಾದ ಕೇಂದ್ರ ಅಧ್ಯಯನದ ಸಮೀಕ್ಷೆ
ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ತತ್ತರಿಸಿದ್ದು, ಪ್ರವಾಹದಿಂದ  ಹಾನಿಗೀಡಾಗಿದ್ದ ಪ್ರದೇಶಗಳ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸಮೀಕ್ಷಾ ತಂಡವು ಬೇಕೋ-ಬೇಡವೋ ಎಂಬಂತೆ ಕೆಲವು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದು, ತಂಡವು ಸಮರ್ಪಕ ಮಾಹಿತಿ ಸಂಗ್ರಹಿಸದೇ ವಾಪಸ್‌ ತರಳಿದೆ ಎಂದು ಹಾನಿಪೀಡಿತ ಪ್ರದೇಶಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್‌, ಅತಿವೃಷ್ಟಿ ಹಾನಿಯಿಂದ ಇಡೀ ರಾಜ್ಯ ನಲುಗಿದೆ, ಆದರೆ ಕೇಂದ್ರ ಅಧ್ಯಯನ ತಂಡದಿಂದ ಫೋಟೋಶೂಟ್‌ಗಾಗಿ ಕೇವಲ 5 ನಿಮಿಷದಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಲಾಗಿದೆ, ಇನ್ನು ಪರಿಹಾರ ಎಷ್ಟರ ಮಟ್ಟಿಗೆ ಬರಲಿದೆ? ಎಂದು ಕಿಡಿಕಾರಿದೆ.

ಸಚಿವರಿಗೆ ಬಿಜೆಪಿಭ್ರಷ್ಟೋತ್ಸವದಲ್ಲಿ ಇರುವ ಆಸಕ್ತಿ ಜನರ ಕಷ್ಟ ಕೇಳುವುದರಲ್ಲಿ ಏಕಿಲ್ಲ ಬೊಮ್ಮಾಯಿ ಅವರೇ? ಇದೇನಾ ನಿಮ್ಮ ಜನಸ್ಪಂದನೆ? ಎಂದು ಕಾಂಗ್ರೆಸ್ ಟೀಕಿಸಿದೆ.

ಅತಿವೃಷ್ಟಿ ಹಾನಿಯಿಂದ ಇಡೀ ರಾಜ್ಯ ನಲುಗಿದೆ,
ಆದರೆ ಕೇಂದ್ರ ಅಧ್ಯಯನ ತಂಡದಿಂದ ಫೋಟೋಶೂಟ್‌ಗಾಗಿ ಕೇವಲ 5 ನಿಮಿಷದಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಲಾಗಿದೆ,
ಇನ್ನು ಪರಿಹಾರ ಎಷ್ಟರ ಮಟ್ಟಿಗೆ ಬರಲಿದೆ?

ಸಚಿವರಿಗೆ #BJPBrashtotsava ದಲ್ಲಿ ಇರುವ ಆಸಕ್ತಿ ಜನರ ಕಷ್ಟ ಕೇಳುವುದರಲ್ಲಿ ಏಕಿಲ್ಲ.@BSBommai ಅವರೇ, ಇದೇನಾ ನಿಮ್ಮ ಜನಸ್ಪಂದನೆ? pic.twitter.com/rDV1Gbuhy5
— Karnataka Congress (@INCKarnataka) September 9, 2022

ಮಳೆ ಹಾನಿ ಸ್ಥಳಗಳಿಗೆ ಸಿಎಂ ಬೇಟಿ ಕುರಿತು ರಾಜ್ಯ ಕಾಂಗ್ರೆಸ್‌ ಟೀಕೆ
ಬೆಂಗಳೂರು: ನಗರದಲ್ಲಿ  ಮೂರುದಿನಗಳಿಂದ  ಧಾರಾಕಾರ ಮಳೆ ಸುರಿಯುತ್ತಿದ್ದು, ನಗರದಲ್ಲಿನ ಅನೇಕ ಸ್ಥಳಗಳು ಜಲಾವೃತಗೊಂಡು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಈ ಕಾರಣ ಮಳೆ ಹಾನಿ ಸ್ಥಳಗಳ ವೀಕ್ಷಣೆಗೆ ಹೊರಟಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡುವ ಮೂಲಕ ಟೀಕಿಸಿದೆ.

ಮಳೆಯಿಂದ ಬೆಂಗಳೂರು ನಗರ ಮುಳುಗಿ ಮೂರು ದಿನ ಕಳೆದ ಮೇಲೆ ಮಳೆ ಹಾನಿ ಪ್ರದೇಶದ ವೀಕ್ಷಣೆಗೆ ಹೋಗುತ್ತಿರುವ ಬೊಮ್ಮಯಿ ಅವರೇ, ಬೋಟ್‌ನಲ್ಲಿ ಹೋಗ್ತಿದೀರಾ, ಡ್ರೋನ್‌ನಲ್ಲಿ ನೋಡ್ತಿದೀರಾ!? ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಬೆಂಗಳೂರು ಮುಳುಗಿ 3 ದಿನ ಕಳೆದ ಮೇಲೆ ಹಾನಿ ವೀಕ್ಷಿಸಲು ಮುಂದಾದ ಮುಖ್ಯಮಂತ್ರಿಗಳೇ. ನೀವು ಎಚ್ಚರವಾಗಲು ಕಾಂಗ್ರೆಸ್ ಪಕ್ಷ ಧ್ವನಿ ಎತ್ತಬೇಕಾಯ್ತೆ? ಸ್ವಯಂಪ್ರೇರಣೆಯ ಕಾಳಜಿ ನಿಮಗೆ ಇಲ್ಲವಾಯ್ತೆ? ಪರಿಹಾರ ಕ್ರಮಗಳಲ್ಲಿ 50% ಕಮಿಷನ್ ಅಡ್ಜಸ್ಟ್‌ಮೆಂಟ್‌ಗೆ ಈ ವೀಕ್ಷಣೆ ನಾಟಕವೇ? ಅಥವಾ 50% ಕಮಿಷನ್ನಿನ ಪ್ರತಿಫಲವನ್ನು ವೀಕ್ಷಿಸಲೇ? ಎಂದು ಟೀಕಿಸಿದೆ.

ಕಾಂಗ್ರೆಸ್ ಚಾಟಿ ಬೀಸಿದ ಮೇಲೆ ಸಿಎಂಗೆ ಮಳೆ ಹಾನಿ ವೀಕ್ಷಿಸಲು ಜ್ಞಾನೋದಯವಾಗಿದೆ. ಜನರ ಸಂಕಷ್ಟದ ಬದಲು ಯಾವುದಾದರೂ ಸಿನಿಮಾ ಪ್ರದರ್ಶನ ಇದ್ದಿದ್ದರೆ ತಕ್ಷಣ ಹೋಗಿರುತ್ತಿದ್ದರು ಎಂದು ರಾಜ್ಯ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.