mallikarjun karge – Peepal Media

ಕಾಂಗ್ರೆಸ್ಸಿನಿಂದ ಇಂದು 17 ಅಭ್ಯರ್ಥಿಗಳ ಪಟ್ಟಿ ಘೋಷಿಸುವ ಸಾಧ್ಯತೆ: ಕುಟುಂಬ ರಾಜಕಾರಣಕ್ಕೆ ಮಣೆ
ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗಾಗಿ ಮಂಗಳವಾರವಷ್ಟೇ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಚುನಾವಣಾ ಸಮಿತಿಯು ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.

ಪಟ್ಟಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದ್ದು, ಐವರು ಸಚಿವರ ಮಕ್ಕಳಿಗೆ ಟಿಕೇಟ್‌ ನೀಡಲು ನಿರ್ಧರಿಸಲಾಗಿದೆ. ಇಂದು (ಬುಧವಾರ) ಬುಧವಾರ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕ್ಕರ್‌ ಪುತ್ರ ಮೃಣಾಲ್‌ಗೆ ಹಾಗೂ ಚಿಕ್ಕೋಡಿಯಿಂದ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಅವಕಾಶ ನೀಡಲಾಗಿದ್ದು, ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತ ಪಾಟೀಲ್‌ಗೆ ಬಾಗಲಕೋಟೆಯಿಂದ ಟಿಕೆಟ್‌ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನಗೆ ದಾವಣಗೆರೆಯಿಂದ ಹಾಗೂ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್‌ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಈ ನಾಲ್ಕು  ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.

ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದ ಸಿಇಸಿ ಸಭೆಯಲ್ಲಿ ಒಟ್ಟು 17 ಕ್ಷೇತ್ರಗಳ ಟಿಕೆಟ್‌ ಅಂತಿಮಗೊಳಿಸಲಾಗಿದೆ. ಇನ್ನು ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಈಗಾಗಲೇ ಟಿಕೆಟ್‌ ಘೋಷಣೆಯಾಗಿತ್ತು.

ಬಿಜೆಪಿ ಪಕ್ಷದಲ್ಲೂ ಕುಟುಂಬ ರಾಜಕಾರಣ: ಬಿಜೆಪಿ ಪಕ್ಷದಿಂದ ಯಡಿಯೂರಪ್ಪನವರ ಮಗ ಬಿ.ವೈ ವಿಜಯೇಂದ್ರ ಅವರಿಗೆ ಮತ್ತು ಡಾವಣಗೆರೆ ಕ್ಷೇತ್ರದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಟಿಕೇಟ್‌ ನೀಡಿರುವುದಕ್ಕೂ  ವಿರೋಧ ಕೇಳಿ ಬಂದಿತ್ತು. ಅಪ್ಪ ಮಕ್ಕಳು ಇಬ್ಬರೇ ಸೇರಿಕೊಂಡು ಮನಸೋ ಇಚ್ಚೆ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಕ್ಷದ ಒಳಗಡೆಯಿಂದಲೇ ವಿರೋಧ ಬುಗಿಲೆದ್ದಿತ್ತು. ಈಶ್ವರಪ್ಪನವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರೆ, ಕೆಲವರು ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿನಲ್ಲಿ ಇಷ್ಟೊಂದು ಅಭ್ಯರ್ಥಿಗಳಿಗೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದರಿಂದ ಈ ಪಕ್ಷದಲ್ಲೂ ವಿರೋಧ ದಟ್ಟವಾಗಿ ಕೇಳಿ ಬರಬಹುದು ಎನ್ನಲಾಗುತ್ತಿದೆ.

ವಲಸಿಗರಿಗೆ ಮಣೆ: ಬಿಜೆಪಿ ಪಕ್ಷದಿಂದ ಟಿಕೇಟ್‌ ವಂಚಿತರಾಗಿ ಅಸಮಾದಾನಿತರಾಗಿವ ಮಾಜಿ ಸಿಎಂ ಸದಾನಂದಗೌಡರಿಗೆ ಹಾಗೂ ಮಾಜಿ ಸಚಿವ ಜಿ.ಸಿ. ಮಾಧುಸ್ವಾಮಿಯವರಿಗೆ 3ನೇ ಪಟ್ಟಿಯಲ್ಲಿ ಟಿಕೇಟ್‌ ನೀಡುವ ಸಾದ್ಯತೆ ಇದೆ. ಈ ಕಾರಣಕ್ಕಾಗಿಯೇ ಕೆಲವು ಕ್ಷೇತ್ರಗಳಿಗೆ ಇನ್ನು ಟಿಕೇಟ್‌ ಘೋಷಿಸದೇ ಉಳಿಸಿಕೊಳ್ಳಲಾಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇಂದು ಘೋಷಣೆಯಾಗಲಿರುವ ಸಂಭಾವ್ಯ ಅಭ್ಯರ್ಥಿಗಳ ವಿವರ

ಚಿತ್ರದುರ್ಗ -ಬಿ.ಎನ್‌.ಚಂದ್ರಪ್ಪ

ಬೆಳಗಾವಿ – ಮೃಣಾಲ್‌ ಹೆಬ್ಬಾಳಕರ್‌

ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ

ಬಾಗಲಕೋಟೆ – ಸಂಯುಕ್ತಾ ಪಾಟೀಲ್‌

ಧಾರವಾಡ – ವಿನೋದ್‌ ಅಸುಟಿ

ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ

ಕೊಪ್ಪಳ – ರಾಜಶೇಖರ ಹಿಟ್ನಾಳ್‌

ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ

ಬೀದರ್‌ – ರಾಜಶೇಖರ್‌ ಪಾಟೀಲ್‌

ದಕ್ಷಿಣ ಕನ್ನಡ – ಪದ್ಮರಾಜ್‌

ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್‌ ಹೆಗ್ಡೆ

ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ

ಬೆಂಗಳೂರು ಸೆಂಟ್ರಲ್‌ -ಮನ್ಸೂರ್‌ ಅಲಿಖಾನ್‌

ಬೆಂಗಳೂರು ಉತ್ತರ -ಪ್ರೊ.ರಾಜೀವ್‌ ಗೌಡ

ಮೈಸೂರು -ಎಂ.ಲಕ್ಷ್ಮಣ್‌

ರಾಯಚೂರು -ಜಿ.ಕುಮಾರ ನಾಯಕ್‌

ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್‌

ಸಂಸತ್‌ ಮೇಲೆ ʼನಿರುದ್ಯೋಗದʼ ಹೊಗೆ!
ಡಿಸೆಂಬರ್‌ 13, ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ನುಗ್ಗಿ, ಹಳದಿ ಬಣ್ಣದ ಹೊಗೆಯನ್ನು ಹಾರಿಸಿ ʼಸರ್ವಾಧಿಕಾರʼದ ವಿರುದ್ದ ಘೋಷಣೆಗಳನ್ನು ಕೂಗಿದರು. ಸಂಸತ್‌ ದಾಳಿ ಎಂಬಂತೆ ಬಿಂಬಿಸಲ್ಪಟ್ಟ ಆರು ಮಂದಿ ಯುವಕರ ಈ ನಾಟಕೀಯ ಸಂಭವ ದೇಶದಾದ್ಯಂತ ನಿರುದ್ಯೋಗದ ವಿರುದ್ಧದ ಪ್ರತಿಭಟನೆಯಾಗಿ ಬದಲಾಯಿತು.

ಉದ್ಯೋಗ ಸಿಗದೆ ಈ ʼಪ್ರತಿಭಟನಾಕಾರರುʼ ಹತಾಶರಾಗಿ ಹೋಗಿದ್ದರು. ಹರಿಯಾಣ ಮೂಲದ ನೀಲಂ ಆಜಾದ್ ಎಂಬ ಮಹಿಳೆ ಉನ್ನತ ಸ್ನಾತಕೋತ್ತರ ಪದವಿಯನ್ನು ಪಡೆದೂ ನಿರುದ್ಯೋಗಿಯಾಗಿದ್ದರು.. ಇವರೆಲ್ಲಾ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅಭಿಮಾನಿಗಳಾಗಿದ್ದರೆಂದೂ, 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ಸ್ಫೋಟಿಸಿದಂತೆ ಇದನ್ನೂ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿಯವರೂ ಈ ಘಟನೆಯ ಹಿಂದೆ ʼನಿರುದ್ಯೋಗʼದ ಕಾರಣವನ್ನು ಕಂಡಿದ್ದಾರೆ.

ಮೋದಿ ಸರ್ಕಾರವು ಆರೋಪಿಗಳನ್ನು ಭಯೋತ್ಪಾದನೆಯ ಆರೋಪದಡಿಯಲ್ಲಿ ಬಂಧಿಸಿದರೂ ಎಷ್ಟೇ ನಾಟಕೀಯವಾಗಿದ್ದರೂ, ಇದು ಹೇಗೆ ಭಯೋತ್ಪಾದಕ ಕೃತ್ಯವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ಮೂಲಕ ಇಡೀ ಕೃತ್ಯ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ನಿರುದ್ಯೋಗದ ಬಗೆಗಿನ ಚರ್ಚೆಗೆ ಕಾರಣವಾಗಿದೆ.

ನಿರುದ್ಯೋಗ ಎಂಬ ಮಹಾಮಾರಿ!

ಈ ಘಟನೆಯ ಹೊರತಾಗಿಯೂ ದೇಶದಾದ್ಯಂತ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ವರದಿಗಳು ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನು ನಮ್ಮ ಮುಂದೆ ಇಟ್ಟಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿಅಂಶಗಳು, ಔದ್ಯೋಗಿಕ ವಲಯದಲ್ಲಿ 15-29 ವರ್ಷ ವಯಸ್ಸಿನ ಯುವಕರ ಪ್ರಮಾಣ 2016-17 ರಲ್ಲಿ 25% ಇದ್ದದ್ದು, 2022-23 ರಲ್ಲಿ 17% ಕ್ಕೆ ಗಂಭೀರವಾಗಿ ಕುಸಿದಿರುವುದನ್ನು ತೋರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, 45 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣ 37% ರಿಂದ 49% ಕ್ಕೆ ಏರಿದೆ.

ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ತೀವ್ರವಾಗಿ ಹೆಚ್ಚಾಗಿದೆ. ಪಕ್ಕದ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ತಮ್ಮ ದೇಶದ ಯುವಕ-ಯುವತಿಯರಿಗೆ ಉದ್ಯೋಗ ನೀಡುವಲ್ಲಿ ಉತ್ತಮ ಕೆಲಸವನ್ನು ಮಾಡಿದೆ ಎಂದು ವಿಶ್ವ ಬ್ಯಾಂಕ್‌ನ ಡೇಟಾ ತೋರಿಸುತ್ತದೆ. ಭಾರತ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಬದಲು ಜನಸಂಖ್ಯೆಯ ಬೆಳವಣಿಗೆಯನ್ನು ಮುಂದುವರಿಸಿದೆ. HSBC ಯ ಭಾರತೀಯ ಅರ್ಥಶಾಸ್ತ್ರಜ್ಞ ಪ್ರಾಂಜುಲ್ ಭಂಡಾರಿ, ಮುಂದಿನ ಒಂದು ದಶಕದಲ್ಲಿ ಭಾರತವು 70 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಆದರೆ, ಅದು ಕೇವಲ 24 ಮಿಲಿಯನ್‌ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣ ಪರಸ್ಪರ ವಿರುದ್ಧ ಸಂಬಂಧವನ್ನು ಹೊಂದಿರುವಂತೆ ಕಾಣುತ್ತಿದೆ ಎಂದರೆ ದುರಾದೃಷ್ಟ. ಒಂದು ಹೆಚ್ಚಾದರೆ ಇನ್ನೊಂದು ಕಡಿಮೆಯಾಗುತ್ತದೆ. ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023 ರ ಪ್ರಕಾರ ಭಾರತದ ನಿರುದ್ಯೋಗ ಮಟ್ಟ ಯುವ ಪದವೀಧರರಲ್ಲಿಯೇ ಹೆಚ್ಚು, ಅಂದರೆ 42%. ಸಂಸತ್ತಿನಮೇಲೆ ದಾಳಿ ಮಾಡಿದ ಯುವಕರು ಭಾರತದಲ್ಲಿ ವಿದ್ಯಾವಂತ ಯುವಕ ಜನತೆ ಭಾರತದ ಜಾಬ್‌ ಮಾರ್ಕೆಟ್‌ನ ಮೇಲೆ ಅತ್ಯಂತ ಕಳಪೆ ನಿರೀಕ್ಷೆಗಳನ್ನು ಹೊಂದಿರುವುದನ್ನು ತೋರಿಸುತ್ತದೆ.

ಈ ಎಲ್ಲಾ ಪರಿಸ್ಥಿತಿಗಳನ್ನು ನೋಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ದೇಶದ ಜನತೆ ನಿರುದ್ಯೋಗವನ್ನು ಅತ್ಯಂತ ಕರಾಳ ಸಮಸ್ಯೆಯೆಂಬಂತೆ ನೋಡುತ್ತಿರುವುದು ಅತಿಶಯೋಕ್ತಿಯಲ್ಲ. ದೆಹಲಿ ಮೂಲದ ಥಿಂಕ್ ಟ್ಯಾಂಕ್ ಲೋಕ್‌ನೀತಿ ಗುಜರಾತ್‌ನ 88% ಜನರು ನಿರುದ್ಯೋಗವನ್ನು “ದೊಡ್ಡ ಸಮಸ್ಯೆ” ಎಂದು ಪರಿಗಣಿಸಿದ್ದಾರೆ ಎಂದು ಹೇಳಿದೆ. ಇತರ ರಾಜ್ಯಗಳ ಜನರೂ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ.

ರಾಜಕೀಯವಾಗಿ ಸೋತಿದೆಯೇ ದೇಶ?

ನಿರುದ್ಯೋಗದ ಸಮಸ್ಯೆ ದೇಶದ ರಾಜಕೀಯ ವೈಫಲ್ಯ ಎಂಬಂತೆ ಯಾಕೆ ಪರಿಗಣಿಸಲ್ಪಟ್ಟಿಲ್ಲ ಎಂಬುದೇ ಅಚ್ಚರಿ. ಅದೊಂದು ರಾಜಕೀಯ ಚರ್ಚೆಯ ವಿಷಯವಾಗಿ ಯಾಕೆ ಬದಲಾಗಿಲ್ಲ? ಹಾಗೊಂದು ವೇಳೆ ಜನರು ನಿರುದ್ಯೋಗವನ್ನು ರಾಜಕೀಯ ಸಮಸ್ಯ ಎಂಬಂತೆ ಪರಿಗಣಿಸಿದರೂ, ಅದು ರಾಜ್ಯ ಮಟ್ಟದಲ್ಲಿ ಮಾತ್ರ. ಇದು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿತ್ತು. ಭಾರತ್ ರಾಷ್ಟ್ರ ಸಮಿತಿಯು ಅಧಿಕಾರವನ್ನು ಕಳೆದುಕೊಳ್ಳಲು ಮತ್ತು ಮತದಾರರು ಕಾಂಗ್ರೆಸ್ ಸರ್ಕಾರವನ್ನು ರಾಜ್ಯಕ್ಕೆ ತರಲು ಮುಖ್ಯ ಕಾರಣವೇ ನಿರುದೈೋಗ ಸಮಸ್ಯೆ. ಪಶ್ಚಿಮ ಬಂಗಾಳದ ಎಸ್‌ಎಸ್‌ಸಿ ಹಗರಣ ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣದಂತಹ ಸರ್ಕಾರಿ ನೇಮಕಾತಿಯಲ್ಲಿನ ಭ್ರಷ್ಟಾಚಾರಗಳು ರಾಜ್ಯ ಸರ್ಕಾರಗಳ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿವೆ. ʼಕೆಲಸ ಕೊಡದೆ ವಂಚಿಸಿದ್ದಾರೆʼ ಎಂಬುದೇ ಉದ್ಯೋಗ ಇಲ್ಲದ ವಿದ್ಯಾವಂತ ಯುವಕರ ಕೋಪ!

ಇದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರಗಳು ಈಗ ಅನೇಕ ನೀತಿಗಳನ್ನು ಜಾರಿಗೆ ತರುತ್ತಿವೆ. ನಿಮಗೆ ಗೊತ್ತಿರುವಂತೆ ಬಿಹಾರ ಜಾತಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಜಾತಿ ಆಧಾರಿತ ಕೋಟಾಗಳನ್ನು 50% ರಿಂದ 65% ಕ್ಕೆ ವಿಸ್ತರಿಸಿದೆ. ಇದು ಇತರ ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಉತ್ತಮ ಅವಕಾಶವನ್ನು ನೀಡಬಹುದು.

ಆದರೆ ಸರ್ಕಾರಿ ಉದ್ಯೋಗಗಳ ಸಂಖ್ಯೆ ತೀರಾ ಕಡಿಮೆ. ಹಾಗಾಗಿ, ಸರ್ಕಾರಗಳು ತಳಮಟ್ಟದ ಯುವಕನ್ನು ತಲುಪಲು ನಗದು ವರ್ಗಾವಣೆಯಂತಹ ಕ್ರಮಗಳ ಕಡೆಗೆ ಗಮನ ಹರಿಸಿವೆ. ಕರ್ನಾಟಕದಲ್ಲಿ ಕಾಂಗ್ರೇಸ್‌ ಮಾಡಿದ್ದೂ ಇದನ್ನೇ. ಮಿರುದ್ಯೋಗಿ ಯುವಕರಿಗೆ ಉದ್ಯೋಗ ಕಂಡುಕೊಳ್ಳುವ ಅವಧಿಯ ವರೆಗೆ ಆರ್ಥಿಕ ನೆರವು ನೀಡುವುದು. ಸಹಜವಾಗಿಯೇ ಇದು ನಿರುದ್ಯೋಗಿಗಳಿಗೆ ಒಂದು ಮಟ್ಟದ ವರೆಗೆ ಆರ್ಥಿಕ ಬೆಂಬಲವಾಗುತ್ತದೆ.

ಸಾಂವಿಧಾನಿಕವಾಗಿ ಆರ್ಥಿಕ, ಹಣಕಾಸು ಮತ್ತು ವಾಣಿಜ್ಯದಂತಹ ಬಹುತೇಕ ಅಧಿಕಾರಗಳು ಕೇಂದ್ರಕ್ಕೆ ಸೇರಿದ್ದು. ಉದ್ಯೋಗಗಳನ್ನು ಸೃಷ್ಟಿಸುವುದು ಮುಖ್ಯವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿ. ವಿಪರ್ಯಾಸವೆಂದರೆ, ಜನರ ನಿರುದ್ಯೋಗ ಪ್ರೇರಿತ ಕೋಪ ಕೇಂದ್ರದ ಕಡೆಗೆ ತುಂಬಾ ತುಂಬಾ ಕಡಿಮೆ. ಇದರ ಹಿಂದೆ ಕೆಲಸ ಮಾಡಿರುವುದು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆ. ಉದ್ಯೋಗ ಕೇಳಬೇಕಾದ ಯುವಕರಿಗೆ ಚರ್ಚಿಸಲು ಹಾಗೂ ಯೋಚಿಸಲು, ಅವರನ್ನು ಉದ್ಯೋಗದ ಬಗ್ಗೆ ಯೋಚಿಸದಂತೆ ಮಾಡಲು ಬಿಜೆಪಿಯ ನರೇಟಿವ್‌ಗಳು ಪ್ರಖರವಾಗಿ ಕೆಲಸ ಮಾಡಿವೆ. ನಿರುದ್ಯೋಗಿ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಲು ಬೇಕಾದ ಅಗತ್ಯಗಳ ಬಗ್ಗೆ ಯೋಚನೆ ಮಾಡದಂತೆ ಬಿಜೆಪಿ ಮಾಡಿದೆ. ಕೊನೆಯಲ್ಲಿ, ʼಉದ್ಯೋಗ ಇಲ್ಲದಿದ್ದರೂ ಏನಂತೆ, ಮೋದಿ ಇರಬೇಕು!ʼ ಎಂಬ ಯೋಚನೆಗಳನ್ನು ಬಿತ್ತಲಾಗಿದೆ.

ದೆಹಲಿಯ ಕಡೆಗಿಲ್ಲ ಜನಾಕ್ರೋಶ!

ಉದ್ಯೋಗ ನೀಡುವುದು ಕೇಂದ್ರದ ಜವಬ್ದಾರಿ. ಜನತೆ ಕೇಂದ್ರದ ಮೇಲೆ ತಮ್ಮ ಆಕ್ರೋಶವನ್ನು ತೋರಿಸಬೇಕು. ಆದರೆ, ನಿರುದ್ಯೋಗದ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಮುಖ್ಯವಾಹಿನಿಗಳ ಮಾಧ್ಯಮಗಳು ತಮ್ಮ ಜವಬ್ದಾರಿಯನ್ನು ಮರೆತಿವೆ. ಅವುಗಳು ಅನಧಿಕೃತವಾಗಿ ಬಿಜೆಪಿಯ ಐಟಿ ಸೆಲ್‌ಗಳಾಗಿ ಬದಲಾಗಿವೆ.

ಮೇಲ್ವರ್ಗಗಳ ಜನರು ತಾವು ವೈಯಕ್ತಿಕವಾಗಿ ನಿರುದ್ಯೋಗದಿಂದ ಬಳಲುತ್ತಿದ್ದರೂ, ಕೇಸರಿ ಪಕ್ಷದ ಮೇಲೆ ತಮ್ಮ ಕೋಪವನ್ನು ತೋರಿಸುತ್ತಿಲ್ಲ. ಇಲ್ಲಿ ನಿರುದ್ಯೋಗ ಎಂಬುದು ಚರ್ಚೆಯ ವಿಷಯವೇ ಅಲ್ಲ. ದೇವಾಲಯ, ರಾಷ್ಟ್ರೀಯ ಭದ್ರತೆ ಅಪಾಯದಲ್ಲಿದೆ, ಧರ್ಮ ಅಪಾಯದಲ್ಲಿದೆ ಎಂಬ ನರೇಟಿವ್‌ಗಳು 2014 ರಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿ ಕೆಲಸ ಮಾಡಿವೆಯೋ, ಇವತ್ತಿಗೂ ಹಾಗೆಯೇ ಚರ್ಚಿಸಬೇಕಾದ ಅಗತ್ಯ ವಿಷಯಗಳಿಂದ ಜನರನ್ನು ಹಾದಿತಪ್ಪಿಸುತ್ತಿವೆ. ಒಂದು ಲೆಕ್ಕದಲ್ಲಿ ನೋಡಿದರೆ, ಈ ನರೇಟಿವ್‌ಗಳ ಪ್ರಭಾವ ಈಗ ಹೆಚ್ಚೇ ಇದೆ.

ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳ ಹೊರತಾಗಿಯೂ, ನಿರುದ್ಯೋಗ ಎಂಬ ʼರಾಜಕೀಯವಲ್ಲದೇ ಹೋಗಿರುವʼ ಸಮಸ್ಯೆ ಆಗಾಗ ಹೆಡೆ ಎತ್ತಿ ಬುಸುಗುಡುತ್ತಾ, ಇದ್ದಕ್ಕಿದ್ದಂತೆ ವಿಷಗಾಳಿ ಬಿಡುತ್ತದೆ. ಆಗ ಸಂಸತ್‌ ಮೇಲೆ ನಡೆಸಿದ ಹಳದಿ ಹೊಗೆ ದಾಳಿಯಂತಹ ಘಟನೆಗಳು ನಡೆಯುತ್ತವೆ. 1980 ರ ದಶಕದ ಉತ್ತರಾರ್ಧದಿಂದ ಭಾರತವು ಆರ್ಥಿಕವಾಗಿ ಸಮರ್ಪಕವಾಗಿ ಬೆಳೆಯುತ್ತಿದ್ದರೂ, ನಿರುದ್ಯೋಗ, ಅದರಲ್ಲೂ ಕಾರ್ಮಿಕ ಶಕ್ತಿಯನ್ನು ಕಡಿಮೆ ಬಳಸಿಕೊಳ್ಳುತ್ತಿರುವ ಕ್ಷೇತ್ರಗಳಲ್ಲಿ ಬೆಳೆಯುತ್ತಲೇ ಇದೆ. ಅಂದರೆ, ಆರ್ಥಿಕವಾಗಿ ಬೆಳೆಯುವುದು ಮತ್ತು ಉದ್ಯೋಗ ಹೆಚ್ಚಳದ ಮಧ್ಯೆ ಸಂಬಂಧವೇ ಇಲ್ಲ.

ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023 ರ ವರದಿಯೂ ಇದನ್ನೇ ಹೇಳುತ್ತದೆ. ಇದರ ಪ್ರಕಾರವೂ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗದ ಬೆಳವಣಿಗೆಯ ನಡುವೆ ಯಾವುದೇ ಸಂಬಂಧವಿಲ್ಲ . ಇದಲ್ಲದೆ, ಭಾರತದ ನಿರುದ್ಯೋಗ ಸಮಸ್ಯೆಯ ಇನ್ನೊಂದು ಕರಾಳ ಆಧ್ಯಾಯವೆಂದರೆ, ಮಹಿಳರೂ ಸಂಬಳದ ಕೆಲಸವನ್ನು ಅತೀ ಕಡಿಮೆ ಮಾಡುತ್ತಿದ್ದಾರೆ. ಭಾರತದ ಮಹಿಳಾ ಕಾರ್ಮಿಕ ಬಲ ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿದೆ.

ನಿರುದ್ಯೋಗದ ಸಮಸ್ಯೆಯನ್ನು ಸುಧಾರಿಸಲು ಬೃಹತ್ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯೊಂದರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ತುಂಬಾ ಸಮಯ ಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ಮತದಾರರು, ಉದ್ಯೋಗ ಸಮಸ್ಯೆಯನ್ನು ಸರ್ಕಾರ ನಿವಾರಿಸಬಹುದು ಎಂದು ಯೋಚಿಸುವುದೂ ಅಸಂಭನೀಯ. ಇದು ನನ್ನ ವೈಯಕ್ತಿಕ ನಿರಾಶವಾದವಾಗಿದ್ದರೆ ಸಾಕು! ಹಿಂದುತ್ವದಂತಹ ಐಡೆಂಟಿಟಿ ಪಾಲಿಟಿಕ್ಸ್ ಆಡವಾಡುವ ವರೆಗೆ ಇದು ಸಾದ್ಯವಾಗುತ್ತದೆಯೋ ಇಲ್ಲವೋ.

ಭದ್ರತಾ ಲೋಪ ಎಂದು ಕೈ ತೊಳೆದುಕೊಳ್ಳುತ್ತಿದೆ ಕೇಂದ್ರ: ರಾಜ್ಯ ಕಾಂಗ್ರೆಸ್
ಬೆಂಗಳೂರು: ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ, ಆದರೂ ಕ ಭದ್ರತಾ ಲೋಪ ಎಂದು ಬಿಂಬಿಸಿ ಸಂಸತ್ ಮೇಲಿನ ದಾಳಿಯನ್ನ ಮರೆಸುವ ಹುನ್ನಾರ ನೆಡೆಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ದೂರಿದೆ.

ಈ ಹಿನ್ನಲೆಯಲ್ಲಿ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ ಎಂದು ತಿಳಿಸುವ ಮೂಲಕ, ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಸಂಬಂಧವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ.

ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ.@mepratap ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ?
ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ?…
— Karnataka Congress (@INCKarnataka) December 15, 2023

ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ?
ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ? ದಾಳಿಕೋರರ ಮೇಲೆ UAPAಯಂತಹ ಗಂಭೀರ ಪ್ರಕರಣ ದಾಖಲಿಸಲಾಗಿದೆ, ಅಪರಾಧಕ್ಕೆ ಸಹಕಾರ ನೀಡಿದವರನ್ನೂ ತನಿಖೆಗೆ ಒಳಪಡಿಸುವುದು ಸಹಜ ಕಾನೂನು ಪ್ರಕ್ರಿಯೆ.ಇಂತಹ ಸಹಜ ಕಾನೂನು ಪ್ರಕ್ರಿಯೆಯನ್ನೂ ಮಾಡದೆ ಪ್ರತಾಪ್ ಸಿಂಹರವರ ರಕ್ಷಣೆಗೆ ನಿಂತಿರುವುದೇಕೆ?ಕೇಂದ್ರ ಸರ್ಕಾರ ಕೇವಲ ಭದ್ರತಾ ಲೋಪ ಎನ್ನುವುದನ್ನು ಬಿಂಬಿಸಿ ಕೈ ತೊಳೆದುಕೊಳ್ಳಲು ಹೊರಟಿರುವುದೇಕೆ? ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರೆಶ್ನೆಗಳ ಸುರಿಮಳೆ ಸುರಿಸಿದೆ.

ಪ್ರಧಾನಿಗಳನ್ನೇ ರಕ್ಷಿಸಲು ಬಿಜೆಪಿಗೆ ಸಾಧ್ಯವಿಲ್ಲ! ಮುಂದುವರಿದ ವಿಪಕ್ಷಗಳ ಧರಣಿ
ನವದೆಹಲಿ: ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಚರ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆಗೆ ನಡೆಸಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಇಂದು ಮುಂದೂಡಲಾಗಿದೆ. ಸತತ ಎರಡು ದಿನಗಳ ಕಾಲ ಸಂಸತ್ತಿನಲ್ಲಿ ಅಸ್ತವ್ಯಸ್ತ ಉಂಟಾಗಿದೆ.

ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನ್‌ಕರ್‌ ಅವರು ಈ ವಿಷಯದ ಬಗ್ಗೆ ಚರ್ಚೆಗಾಗಿ ವಿರೋಧ ಪಕ್ಷದ ಸದಸ್ಯರಿಂದ ಹಲವಾರು ನೋಟಿಸ್‌ಗಳನ್ನು ಸ್ವೀಕರಿಸಿದರೂ, ಈ ವಿನಂತಿಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ಮುಂದೂಡಲಾಗಿತ್ತು. ಲೋಕಸಭೆಯಲ್ಲೂ ಪರಿಸ್ಥತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಸಂಸತ್ತಿನ ಹೊರಗೆ ಮಕರ ದ್ವಾರದ ಮೆಟ್ಟಿಲುಗಳು ಹೊಸ ಪ್ರತಿಭಟನೆಯ ಪಾಯಿಂಟ್ ಆಗಿ ಬದಲಾಗಿದ್ದು, ಅಮಾನತುಗೊಂಡ ಸಂಸದರು ಭಿತ್ತಿಪತ್ರಗಳೊಂದಿಗೆ ಸರ್ಕಾರ ಹಠಮಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಅಮಾನತುಗೊಂಡ ಸಂಸದರ ಜೊತೆ ಸೇರಿಕೊಂಡಿದ್ದಾರೆ.

ಸದನದ ಹೊರಗಿರುವ ಗಾಂಧಿ ಪ್ರತಿಮೆ ಎದುರು ಇತರ ಸಂಸದರೊಂದಿಗೆ ಪ್ರತಿಭಟನೆ ನಡೆಸಿದ ಡಿಎಂಕೆ ಸಂಸದೆ ಕನಿಮೊಳಿ, ‘ಈ ದೇಶವನ್ನು ರಕ್ಷಿಸುವವರು ತಮ್ಮಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ. ಅವರಿಗೆ ಸಂಸತ್ತಿನ ರಕ್ಷಣೆಯನ್ನೇ ಮಾಡಲಾಗಿಲ್ಲ. ಪ್ರಧಾನಿಯವರು ಅಲ್ಲಿದ್ದರೆ, ಅವರನ್ನೂ  ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಯಾವುದೇ ಭದ್ರತೆಯ ಉಲ್ಲಂಘನೆಗೆ ದೇಶ ಮತ್ತು ಸರ್ಕಾರ ಹೊಣೆಯಾಗಬೇಕು. ಪ್ರಧಾನಿ ಮತ್ತು ಗೃಹಮಂತ್ರಿ ಸಂಸತ್ತಿಗೆ ಬಂದು ಏನಾಯಿತು ಎಂದು ನಮಗೆ ತಿಳಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅವರು ಅದನ್ನೂ ಮಾಡಲಿಲ್ಲ,” ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಕ್ಕಟ್ಟಿಗೆ ಕೇಂದ್ರ ಗೃಹ ಸರ್ಕಾರವನ್ನು ದೂಷಿಸಿ, ಇದನ್ನು ತಡೆಯಲು ಏನೂ ಮಾಡಿಲ್ಲ  ಎಂದು ಆರೋಪಿಸಿದ್ದಾರೆ.

“ಗೃಹ ಸಚಿವರು ದೆಹಲಿ ಪೊಲೀಸ್ ಮತ್ತು ದೇಶದ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಹೊರಗೆ ಮಾಧ್ಯಮದ ವಾಹಿನಿಗಳೊಂದಿಗೆ ಮಾತನಾಡುತ್ತಿದ್ದಾರೆ, ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ, ಸಂಸತ್ತಿನ ಅಧಿವೇಶನದಲ್ಲಿ ಸದಸ್ಯರಾಗಿರುವ ಅವರು ತಮ್ಮ ಹೊಣೆಗಾರಿಕೆಯಂತೆ ಸಂಸತ್ತಿನ ಸದನದಲ್ಲಿ ಇರಬೇಕು. ಅವರು ಸಂಸದರೊಂದಿಗೆ ಮಾತನಾಡಲು ಇಲ್ಲಿಗೆ ಬರಬೇಕು,” ಎಂದು ತರೂರ್‌ ಹೇಳಿದ್ದಾರೆ.

ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪರಿಸ್ಥಿತಿಯನ್ನು ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾ, “ಸಭಾಧ್ಯಕ್ಷರು ಈಗಾಗಲೇ ಸರ್ವಪಕ್ಷ ಸಭೆಯಲ್ಲಿ ಸದಸ್ಯರೊಂದಿಗೆ [ಭದ್ರತಾ ಉಲ್ಲಂಘನೆ ಬಗ್ಗೆ] ಚರ್ಚಿಸಿದ್ದಾರೆ. ಸಂಸತ್ತಿನ ಉಭಯ ಸದನಗಳ ಜವಾಬ್ದಾರಿ ಅವರ ಮೇಲಿದೆ ಎಂದು ಅವರು ಈಗಾಗಲೇ ಹೇಳಿದ್ದಾರೆ ಮತ್ತು ನಾವು ಅನುಸರಿಸಬೇಕಾದ ನಿರ್ದೇಶನಗಳನ್ನು ಅವರು ನೀಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಸದನ ನಡೆಸಲು ಬಿಡುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗಳು ಅವರಿಗೆ ತಕ್ಕುದಲ್ಲ. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು,” ಎಂದು ಹೇಳಿದ್ದಾರೆ.

ಖರ್ಗೆ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ, ಕೃಪೆ:X/@kharge

ಸಂಸತ್ತು ಪ್ರಾರಂಭವಾಗುವ ಮೊದಲು, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯು ಕಾರ್ಯತಂತ್ರವನ್ನು ರೂಪಿಸಲು, ಇಡೀ ವಿರೋಧ ಪಕ್ಷದ ಸದಸ್ಯರು ಒಗ್ಗಟ್ಟನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.

BJP ಹಾಗೂ RSS ಬೆಂಬಲಿತ ಸರ್ಕಾರ ಸಂವಿಧಾನಕ್ಕೆ ತಿಲಾಂಜಲಿ ಕೊಟ್ಟಿದ್ದು: ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಕಲ್ಯಾಣ ಕರ್ನಾಟಕದ ಬಳ್ಳಾರಿ ಭಾಗಕ್ಕೆ ಆಗಮಿಸಿದ್ದೇನೆ.

ಆರ್ಟಿಕಲ್ 371 ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ. ಸಂಸತ್ತಿನಲ್ಲಿ ಕಾಂಗ್ರೆಸ್ ಗೆ ಕೇವಲ 208 ಸಂಸದರಿದ್ದರು. ಈ ವಿಶೇಷ ಸ್ಥಾನಮಾನ ನೀಡಲು ಅಂಗೀಕರಿಸಲು 381 ಸಂಸದರ ಬೆಂಬಲ ಬೇಕಿತ್ತು. ಆದರೂ ಸೋನಿಯಾ ಗಾಂಧಿ ಅವರು ವಿಶೇಷ ಆದ್ಯತೆ ನೀಡಿ ಎಲ್ಲಾ ಬೆಂಬಲ ಪಡೆದು ಈ ಭಾಗಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಹೀಗಾಗಿ ಈ ಭಾಗದ ಕಾರ್ಯಕ್ರಮಕ್ಕೆ ಭಾಗಿಯಾಗಲು ಬಂದಿದ್ದೇನೆ.

ನಾನು ಕಾಂಗ್ರೆಸ್ ಪಕ್ಷದ ಸಂಘಟನೆಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದೇನೆ.

ಗಾಂಧಿ ಕುಟುಂಬ ಚುನಾವಣೆಯಿಂದ ಹಿಂದೆ ಸರಿದು, ಬೇರೆಯವರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಆರಂಭದಲ್ಲಿ ನನಗೆ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ರಾಜ್ಯ ಪ್ರಮುಖ ನಾಯಕರು, ರಾಷ್ಟ್ರ ಹಾಗೂ ಬೇರೆ ರಾಜ್ಯದ ನಾಯಕರ ಸಲಹೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ.

ಕಳೆದ 55 ವರ್ಷಗಳಿಂದ ನೀವು ಪಕ್ಷವನ್ನು ಸಂಘಟಿಸುತ್ತಿದ್ದು, ನೀವು ಸ್ಪರ್ಧಿಸಬೇಕು ಎಂದು ಹಲವು ನಾಯಕರು ನನಗೆ ಒತ್ತಾಯಿಸಿದರು.

ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಇತ್ತಾದರೂ ಎಲ್ಲರೂ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸುವುದರಿಂದ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಸಾಮಾನ್ಯ ಸದಸ್ಯತ್ವದಿಂದ, ಬ್ಲಾಕ್, ಜಿಲ್ಲಾ ಮಟ್ಟದ ಸಮಿತಿಯಿಂದ ಕೆಪಿಸಿಸಿ ಅಧ್ಯಕ್ಷನಾಗಿ, ಶಾಸಕ, ಮಂತ್ರಿಯಿಂದ ಸಿಎಲ್ ಪಿ ನಾಯಕನಾಗಿ ಕೆಲಸ ಮಾಡಿದ್ದು ನನ್ನ ರಾಜಕೀಯ ಜೀವನ ಕರ್ನಾಟಕದಿಂದಲೇ ಆರಂಭವಾಗಿದೆ.

ರಾಜ್ಯ ನಾಯಕರು ನನಗೆ ಬೆಂಬಲ ನೀಡುವುದರಲ್ಲಿ ಸಂಶಯವಿಲ್ಲ. ಆದರೆ ನನ್ನ ಕರ್ತವ್ಯ ಹಿನ್ನೆಲೆಯಲ್ಲಿ ನಾನು ಎಲ್ಲರಿಗೂ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ.

ಇಂದು ದೇಶದಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಬೆಂಬಲಿತ ಸರ್ಕಾರ ಸಂವಿಧಾನಕ್ಕೆ ತಿಲಾಂಜಲಿ ಕೊಟ್ಟಿದ್ದು, ಸಂವಿಧಾನ ರೀತಿ ನಡೆದುಕೊಳ್ಳುತ್ತಿಲ್ಲ. ಐಟಿ ಇಡಿ ಮೂಲಕ ಚುನಾಯಿತ ಸರ್ಕಾರ ಕೆಡವುತ್ತಿದ್ದಾರೆ. ಅವರ ಪಕ್ಷ ಸೇರಲು ಒಪ್ಪದಿದ್ದರೆ ಕೇಸ್ ಮುಂದುವರಿಸುತ್ತಾರೆ. ಇಲ್ಲಿ ಕಳಂಕಿತರು ಅಲ್ಲಿ ಹೋಗಿ ಕ್ಲೀನ್ ಆಗುತ್ತಾರೆ.

ದೇಶದ 6-7 ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಕೆಡವಲಾಗಿದೆ. ಇನ್ನು ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಇದೆಲ್ಲವನ್ನೂ ಎದುರಿಸಲು ಕಾಂಗ್ರೆಸ್ ಶಕ್ತಿಶಾಲಿಯಾಗಬೇಕು.

ಇದು ಒಬ್ಬರಿಂದ ಆಗುವ ಕೆಲಸ ಅಲ್ಲ. ಎಲ್ಲರೂ ಒಟ್ಟಾಗಿ ಸೇರಿ ಸಂಘಟನೆ ಮಾಡಬೇಕು. ಆಮೂಲಕ ನಿರುದ್ಯೋಗ, ಹಣದುಬ್ಬರ, ಜಿಡಿಪಿ ಕುಸಿತ, ರೂಪಾಯಿ ಮೌಲ್ಯ ಕುಸಿತ, ಆರ್ಥಿಕ ಹಿನ್ನಡೆ, ಖಾಸಗೀಕರಣ, ಉದ್ಯೋಗ ನಷ್ಟ ಕಡಿಮೆ ಆಗುತ್ತಿದೆ. ದುರ್ಬಲ ವರ್ಗದವರಿಗೆ ಮೀಸಲಾತಿ ಉದ್ಯೋಗ ಸಿಗುತ್ತಿಲ್ಲ.

ನಾನು ವಿದ್ಯಾರ್ಥಿ ಘಟ್ಟದಿಂದ ಈ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಪಕ್ಷಕ್ಕೆ ಬಲ ತುಂಬುತ್ತಾ ಬಂದಿದ್ದೇನೆ. ನಾವು ಸಂಘಟನೆಗೆ ಶಕ್ತಿ ತುಂಬಲು ಈ ಮನವಿ ಮಾಡುತ್ತಿದ್ದೇನೆ.

ಶಶಿ ತರೂರ್ ಅವರಿಗೆ ಯಾವ ಸಲಹೆ ನೀಡುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ ನಾನು ಈ ವಿವಾದಾತ್ಮಕ ವಿಚಾರವಾಗಿ ಮಾತನಾಡುವುದಿಲ್ಲ. ನಾನು ನನ್ನ ವಿಚಾರವನ್ನು ಮಾತ್ರ ಮಾತನಾಡುತ್ತೇನೆ. ಅವರ ವಿಚಾರದ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ. ಇದು ನಮ್ಮ ಮನೆ ವಿಚಾರ. ಇಲ್ಲಿ ಅವರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಇದೆ. ಇದು ಪಕ್ಷದ ಆಂತರಿಕವಾಗಿ ನಡೆಯುತ್ತಿರುವ ಸ್ನೆಹಯುತ ಸ್ಪರ್ಧೆ. ನಾನು ಕಾಂಗ್ರೆಸ್ ಪಕ್ಷದ ತಳಮಟ್ಟದಿಂದ ಇಲ್ಲಿಯವರೆಗೂ ನಾನು ಬೆಳೆದು ಬಂದಿದ್ದು, ಆ ಬಗ್ಗೆ ನಾನು ಮಾತನಾಡುತ್ತೇನೆ ‘ ಎಂದರು.

ಖರ್ಗೆ ಅವರು ಗಾಂಧಿ ಕುಟುಂಬದ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ ಅವರಿಗೆ ಚರ್ಚೆ ಮಾಡಲು ಬೇರೆ ವಿಷಯ ಸಿಗುತ್ತಿಲ್ಲ. ಕಳೆದ 20 ವರ್ಷಗಳಿಂದ ಸೋನಿಯಾ ಗಾಂಧಿ ಅವರು ಪಕ್ಷ ಸಂಘಟನೆ ಮಾಡಿ ಹಲವು ಕಾನೂನು ತಂದು ಬಡವರ ಹೊಟ್ಟೆ ತುಂಬುವ ಆಹಾರ ಭದ್ರತೆ, ಶಿಕ್ಷಣ ಹಕ್ಕು, ನರೆಗಾದಂತಹ ಯೋಜನೆ ತಂದಿದ್ದಾರೆ. ಇಂತಹ ಯೋಜನೆಗಳಿಗೆ ಬೆಂಬಲ ನೀಡಬೇಕು. ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 6 ರಾಜ್ಯಗಳಲ್ಲಿ ಸರ್ಕಾರ ಮಾಡಿದ್ದೆವು. ಮೋದಿ ಹಾಗೂ ಅಮಿತ್ ಶಾ ಅವರು ಸಾಂವಿಧಾನಿಕ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಒಂದೊಂದಾಗಿ ಸರ್ಕಾರ ಕೆಡವಿದರು. ಆ ಕುಟುಂಬ ಪಕ್ಷಕ್ಕೆ ಸೇವೆ ಸಲ್ಲಿಸಿಕೊಂದು ಬಂದಿದೆ. ಪಂಡಿತ್ ನೆಹರೂ ಅವರಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹತ್ತು ಹಲವು ಯೋಜನೆಗಳು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಂತರ ಪಕ್ಷ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಧಿಕಾರ ಸ್ವೀಕಾರ ಮಾಡಲಿಲ್ಲ. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಆ ಹುದ್ದೆ ನೀಡಿದರು. 10 ವರ್ಷಗಳಲ್ಲಿ ಹಲವು ಪ್ರಗತಿಪರ ಯೋಜನೆಗಳು ಬಂದವು. ಕೆಲ ಚುನಾವಣೆ ಕಳೆದುಕೊಂಡ ಹಿನ್ನೆಲೆಯಲ್ಲಿ ಇಂತಹ ಮಾತು ಹೇಳುವುದು ಸರಿಯಲ್ಲ. ಒಳ್ಳೆಯ ವಿಚಾರಗಳು ಇದ್ದರೆ ಅವರ ಸಲಹೆ ಪಡೆಯುತ್ತೇನೆ. ಉತ್ತಮ ಸಲಹೆ ನೀವು ಕೊಟ್ಟರೂ ಸ್ವೀಕರಿಸುತ್ತೇವೆ. ಅವರು ಈ ಪಕ್ಷಕ್ಕೆ ದುದಿದಿದ್ದು, ಅವರ ಸಲಹೆ ಪಡೆಯುತ್ತೇನೆ. ಅದು ನನ್ನ ಕರ್ತವ್ಯ. 20 ವರ್ಷಗಳ ಅವರ ಅನುಭವ ನಾನು ಕಲಿಯಬೇಕಿದೆ ‘ ಎಂದರು.

ಈ ಚುನಾವಣೆ ರಾಜ್ಯದ ಮೇಲೆ ಪ್ರಭಾವ ಬೀರುತ್ತದೆಯೆ ಎಂಬ ಪ್ರಶ್ನೆಗೆ, ‘ ನಮ್ಮ ರಾಜ್ಯದಲ್ಲಿ ಸಾಕಷ್ಟು ಮುಖಂಡರು ಇದ್ದಾರೆ. ರಾಜ್ಯದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಡುತ್ತಿದ್ದಾರೆ. ಹೀಗಾಗಿ ನನ್ನಿಂದ ಎಲ್ಲಾ ಪ್ರಯೋಜನ ಆಗಲಿದೆ ಎಂದು ನಾನು ಹೇಳುವುದಿಲ್ಲ. ಏನೇ ಆದರೂ ಅದು ಎಲ್ಲಾ ನಾಯಕರ ಸಾಮೂಹಿಕ ನೇತೃತ್ವದ ಫಲ. ಇದನ್ನೇ ನಾನು ನಂಬಿದ್ದೇನೆ ‘ ಎಂದರು.

ಕಾಂಗ್ರೆಸ್ ನಾಯಕರು ಸಹಕಾರ ನೀಡುತ್ತಿಲ್ಲ ಎಂಬ ಶಶಿ ತರೂರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ ನಾನು ಹಾಗೂ ನನ್ನ ಚುನಾವಣಾ ಪ್ರಚಾರದ ಅಧಿಕಾರಿಗಳು ನನ್ನ ಪರವಾಗಿ ಸಂಘಟನೆ ಮಾಡುತ್ತಿದ್ದಾರೆ. ನಮ್ಮ ಬಳಿ ಬಂದವರನ್ನು ಬೇರೆಯವರ ಜೊತೆ ಕಳಿಸಲು ಆಗುತ್ತದೆಯೇ? ನನಗೆ ಹಲವು ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳು ಬೆಂಬಲ ನೀಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದಾರೆ. ನಾನು ಇದನ್ನು ನಿರೀಕ್ಷೆ ಮಾಡಿಲ್ಲದಿದ್ದರೂ ನನಗೆ ಬೆಂಬಲ ನೀಡಿದ್ದಾರೆ. ನನಗೆ ಸಂಪುಟ ಸ್ಥಾನಮಾನಕ್ಕಿಂತ ಸಂಘಟನೆಯೇ ಮುಖ್ಯ. ನಾನು 50 ವರ್ಷಗಳಲ್ಲಿ ಎಲ್ಲವೂ ಒಂದೊಂದಾಗಿ ಸಿಕ್ಕಿದೆ. ಎಲ್ಲರಿಗೂ ನಾನು ಏನು ಎಂದು ಗೊತ್ತಿದೆ. ಹಾಗೆಂದು ಇನ್ನೊಬ್ಬರನ್ನು ನಾನು ಟೀಕಿಸುವಿದಿಲ್ಲ. ಅವರ ಹೇಳಿಕೆ ಅವರದ್ದಾಗಿದೆ ‘ ಎಂದು ತಿಳಿಸಿದರು.

2019ರ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿ ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದವರಿಗೆ ಏನು ಹೇಳಬಯಸುತ್ತೀರಿ ಎಂದು ಕೇಳಿದಾಗ, ‘ ನಾನು ಎಂದಿಗೂ ಯಾವುದೇ ಸ್ಥಾನ ಬಯಸಿರಲಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ, ಈ ಅವಕಾಶವನ್ನು ನಿರೀಕ್ಷೆ ಮಾಡಿರಲಿಲ್ಲ. 1994ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಬಿದ್ದ ನಂತರ ವಿರೋಧ ಪಕ್ಷದ ನಾಯಕ ಆಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. 2008ರಲ್ಲಿ ಶಾಸಗಾಂಗ ಪಕ್ಷದ ನಾಯಕನಾಗಿದ್ದೆ. ನಾನು ಪಕ್ಷಕ್ಕಾಗಿ ಇದ್ದೇನೆ ಹೊರತು ಬೇರೆ ವಿಚಾರಕ್ಕೆ ಅಲ್ಲ. ನನ್ನಂತಹ ಹಲವರು ಪಕ್ಷದಲ್ಲಿ ಇದ್ದಾರೆ. ಹೀಗಾಗಿ ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದರಂತೆ ನಡೆಯುತ್ತೇನೆ. ನನಗೆ ಯಾರೂ ವಿರೋಧಿಗಳಿಲ್ಲ ‘ ಎಂದರು.

ಪಕ್ಷದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬಣದ ಜತೆ ಖರ್ಗೆ ಅವರ ಬಣ ಬರುತ್ತದೆಯೇ ಎಂದು ಕೇಳಿದಾಗ, ‘ ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾವೆಲ್ಲರೂ ಸಮಾನರು. ಒಗ್ಗಟ್ಟಿದ್ದರೆ ನಮ್ಮ ಸರ್ಕಾರ ಬರುವುದು ಖಚಿತ ‘ ಎಂದು ತಿಳಿಸಿದರು.