maluru – Peepal Media

ಉಳ್ಳೇರಹಳ್ಳಿ ಊರದೇವರ ಗುಡಿ ಮುಂದೆ ಜಮಾಯಿಸಿ ಪ್ರತಿಭಟನೆ
ಮಾಲೂರು: ಇತ್ತೀಚಿಗೆ ದಲಿತ ಕುಟುಂಬದ ಮೇಲೆ ಊರದೇವರ ಉತ್ಸವ ಮೂರ್ತಿಯನ್ನು ದಲಿತ ಬಾಲಕ ಚೇತನ್‌ ಎಂಬ ಹುಡುಗ ಮುಟ್ಟಿದ್ದು ಮೈಲಿಗೆ ಆಗಿದೆ ಎಂದು ಹೇಳಿ ಬಾಲಕನ ಮೇಲೆ ಅಸ್ಪೃಶ್ಯತಾ ಆಚರಣೆ ಹಾಗೂ ಅರವತ್ತು ಸಾವಿರ ಜುಲ್ಮಾನೆ ಹಾಕಿದ್ದ ಘಟನೆಯ ಉಳ್ಳೇರಹಳ್ಳಿ ಮಾಲೂರು ತಾಲೂಕಿನಲ್ಲಿ ನಡೆದಿತ್ತು.

ಈ ಘಟನೆ ಸಂಭಂದ ಕೋಲಾರ ಜಿಲ್ಲೆಯ ಮಾಲೂರಿ ಉಳ್ಳೇರಹಳ್ಳಿಯ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಊರದೇವರ ಗುಡಿ ಮುಂದೆ ಜಮಾಯಿಸಿ ಜೈ ಭೀಮ್‌ ಘೋಷಣೆ ಕೂಗುತ್ತಾ ಭೃಹತ್‌ ಪ್ರತಿಭಟನೆ ನಡೆಸಿದರು.

https://www.facebook.com/100084642174064/videos/628574741953816/

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾಯಕ ಡಿ.ಆರ್.ರಾಜಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ
ಮಾಲೂರು: ಗಡಿ ನಾಡ ಸಾಂಸ್ಕೃತಿಕ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಖ್ಯಾತ ಜಾನಪದ ಹಿನ್ನೆಲೆ ಗಾಯಕರು ಹಾಗೂ ಮಾಜೀ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಶುರುವಾದ ‘ಸಾರಂಗ ರಂಗ’ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಇಂದಿನ ‘ದೇಸಿ ದರುವು’ ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವಂತಹ ಡಿ.ಆರ್.ರಾಜಪ್ಪ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಜಿಎಫ್ ನ ಪೋಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಾಹಿತಿಗಳಾದ ಡಾ. ಧರಣಿದೇವಿ ಮಾಲಗತ್ತಿ ರವರು ಜಾನಪದ ಗೀತೆಗಳ ಇತಿಹಾಸದೊಂದಿಗೆ ಮಾತನಾಡುತ್ತಾ ಜಾನಪದ ಗಾಯನ ಯಾವತ್ತಿಗೂ ಸಮೂಹ ಗಾಯನ, ಅದು  ವೈಯಕ್ತಿಕವಾದದ್ದಲ್ಲ. ಜಾನಪದ ಗಾಯನದಲ್ಲಿ ವೈಯಕ್ತಿಕ ಮೇಲುಗೈ ಇಲ್ಲವೇ ಇಲ್ಲ ಇದೊಂದು ಸಮೂಹದಲ್ಲೇ ಹಾಡುವಂತದ್ದು ಮತ್ತು ಇದು ಸಂಕೇತಿಸುವಂತದ್ದು ಸಮೂದಲ್ಲೇ ಹಾಡುವಂತವರು, ಕೆಲಸ ಮಾಡುವಂತವರು ಮತ್ತು ಸಮೂಹಕ್ಕಾಗಿ ಬದುಕುವಂತವರು ಎಂದು ಸೂಚಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ನಂತರ ಡಿ.ಆರ್.ರಾಜಪ್ಪ ಅವರನ್ನ ಸನ್ಮಾನಿಸಿದ ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ತಮ್ಮ ಜಾನಪದ ಹಾಡುಗಾರರೊಟ್ಟಿಗೆ ಬೆಳೆದ ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ಕೆಲಸಗಳನ್ನ ಹಂಚಿಕೊಂಡಿದ್ದಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಂಬಲವಾಗಿ ಇರುವುದಾಗಿ ತಿಳಿಸಿದರು.

ಗಾಯಕರಾದ ಡಾ.ಕೆ.ಆನಂದ್ ಮಾಲೂರು , ದೊಡ್ಡಮಲ್ಲೆ ರವಿ, ಜಿ. ಮುನಿರೆಡ್ಡಿ, ಮಾರುತಿ ಪ್ರಸಾದ್, ರತ್ನ ಸಕಲೇಶ್ವರ, ಸೊಣ್ಣೂರು ಗೋವಿಂದ್, ಯಡಹಳ್ಳಿ ಶ್ರೀನಿವಾಸ್ ರವರು ತಮ್ಮ ಗಾಯನದ ಮೂಲಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಡಿ.ಆರ್.ರಾಜಪ್ಪ ರವರನ್ನ ಅಭಿನಂದಿಸಿದರು.

ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಿರೂಪಿಸಿದ ಪಿಚ್ಚಳ್ಳಿ ಶ್ರೀನಿವಾಸ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ವಂದಿಸಿ ತಮ್ಮ ಹಾಡುಗಾರಿಕೆಯ ಆರಂಭದ ಕುರಿತು ಮೆಲುಕು ಹಾಕಿದ್ದಲ್ಲದೆ ಒಂದು ಹಾಡನ್ನ ಹಾಡುವುದರ ಮುಖಾಂತರ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಕೆ.ಜಿ ಹಳ್ಳಿ ಗ್ರಾ.ಪಂ ಯ ಉಲ್ಲೇರಹಳ್ಳಿಗೆ ಮಾಲೂರು ಶಾಸಕರಾದ ವೈ.ಕೆ ನಂಜೇಗೌಡ ಭೇಟಿ: ನೊಂದ ಕುಟುಂಬಕ್ಕೆ ಸಾಂತ್ವನ
ಮಾಲೂರು: ಇತ್ತೀಚಿಗೆ ದಲಿತ ಕುಟುಂಬದ ಮೇಲೆ ಊರದೇವರ ಉತ್ಸವ ಮೂರ್ತಿಯನ್ನು ದಲಿತ ಬಾಲಕ ಚೇತನ್‌ ಎಂಬ ಹುಡುಗ ಮುಟ್ಟಿದ್ದು ಮೈಲಿಗೆ ಆಗಿದೆ ಎಂದು ಹೇಳಿ ಬಾಲಕನ ಮೇಲೆ ಅಸ್ಪೃಶ್ಯತಾ ಆಚರಣೆ ಹಾಗೂ ಅರವತ್ತು ಸಾವಿರ ಜುಲ್ಮಾನೆ ಹಾಕಿದ್ದ ಘಟನೆಯ ಸಂತ್ರಸ್ತ ಕುಟುಂಬಕ್ಕೆ ಸ್ವಾಂತಾನ ಹಾಗೂ ಸಹಾಯದ ಆಸರೆ ನೀಡುವ ಸಲುವಾಗಿ ಇಂದು ಟೇಕಲ್ ಹೋಬಳಿಯ ಕೆ.ಜಿ.ಹಳ್ಳಿ ಗ್ರಾ.ಪಂ ವ್ಯಾಪ್ತಿಯ ಉಳ್ಳೇರಹಳ್ಳಿ ಗ್ರಾಮಕ್ಕೆ ಶಾಸಕರಾದ ಶ್ರೀ ಕೆ.ವೈ. ನಂಜೇಗೌಡ ರವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿ ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದು ತಿಳಿಸಿದರು.

ಸ್ವತಂತ್ರ ಬಂದು ಎಪ್ಪತೈದು ವರ್ಷಗಳಾಗಿ ಸಂವಿಧಾನ ಜಾರಿಗೆ ಬಂದು ಎಪ್ಪತ್ತು ವರ್ಷಗಳಾದರೂ ಇಂತಹ ಅಸ್ಪೃಶ್ಯತೆಯ ಘಟನೆಗಳು ನಡೆಯುತ್ತಿರುವುದು ಖೇದಕರ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿರುವ ಭಾರತದ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಜಾತಿ, ಬೇದ ಮರೆತು ಸಮಾನತೆಯ ಹಾದಿಯಲ್ಲಿ ನಡೆಯಬೇಕು, ಅಂತಹ ಹಾದಿಯಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಸಂವಿಧಾನದ ವಿರುದ್ಧ ನಡೆದುಕೊಳ್ಳುವ ಇಂತಹ ಘಟನೆಗಳಿಗೆ ಕಾರಣವಾಗಿರುವ ಕೆಲವು ಜನರ ವಿರುದ್ಧ ಕಾನೂನು ಸೂಕ್ತ ಕ್ರಮಗಳನ್ನು ವಹಿಸುತ್ತದೆ. ಅವರಿಗೆ ಶಿಕ್ಷೆ ಆಗಬೇಕಾಗುತ್ತದೆ ಎಂದು ಹೇಳಿದ ಅವರು, ಸಂತ್ರಸ್ತ ಕುಟುಂಬದ ಮನೆಯಲ್ಲಿ ಊಟವನ್ನು ಮಾಡುವ ಮೂಲಕ ಮನುಷ್ಯರಾದ ನಾವೆಲ್ಲ ಒಂದೇ ಎಂದು ಕರೆ ನೀಡಿ, ಆಹಾರ ಸಾಮಗ್ರಿಗಳು ಹಾಗೂ ವೈಯುಕ್ತಿಕ ಧನ ಸಹಾಯ ನೀಡಿದರು.

ಸಂತ್ರಸ್ತ ಕುಟುಂಬಕ್ಕೆ ಆತ್ಮ ಸ್ಥೈರ್ಯ ತುಂಬುವ ಸಲುವಾಗಿ ಶಾಸಕರು ಮತ್ತು ತಾಲ್ಲೂಕು ಆಡಳಿತ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಸಾಮಾಜಿಕ ಸುಧಾರಣೆ ಕಟಿಬದ್ಧರಾಗಲು ಕರೆ ನೀಡಿದರು.
ಇದೆ ಸಮಯದಲ್ಲಿ ಮಾತನಾಡಿ ಆದಷ್ಟು ಬೇಗ ಉದ್ಯೋಗ ಹಾಗೂ ಮನೆ ನಿರ್ಮಾಣ ಮಾಡಿಕೊಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಮಯದಲ್ಲಿ ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ರವರು, ಮಾಸ್ತಿ ಪೋಲಿಸ್ ವೃತ್ತ ನಿರೀಕ್ಷ ವಸಂತ್ ಕುಮಾರ್, ಇತರೆ ತಾಲ್ಲೂಕು ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹೆಚ್.ಎಂ.ವಿಜಯನರಸಿಂಹ ಹಾಗೂ ಎಂ.ಜಿ.ಮಧುಸೂದನ್, ಆನೇಪುರ ಹನುಮಂತಪ್ಪ, ಎ.ಅಶ್ವತ್ಥರೆಡ್ಡಿ, ಕೆಂಪಸಂದ್ರ ಶ್ರೀನಿವಾಸ್, ನಾಗಾಪುರ ನವೀನ್, ಉಸರಳ್ಳಿ ಮಂಜುನಾಥಗೌಡ, ಜಯಮಂಗಲ ಅಂಜಿನಪ್ಪ, ಮಾಜಾರಳ್ಳಿ ಕಾಕಪ್ಪ, ಕೆ.ಜಿ.ಹಳ್ಳಿ ಮುರುಗೇಶ್, ಶಶಿಧರ್, ಸಿದಾರ್ಥ್ ಆನಂದ್, ಬ್ಯಾಲಹಳ್ಳಿ ರಮೇಶ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಮಾಲೂರಿನಲ್ಲಿ ಪ್ರತಿಭಟನೆ
ಮಾಲೂರು: ಮಳೆಯಿಂದಾಗಿ ಹಾನಿಗೊಳಗಿ ಸಾರ್ವಜನಿಕ ಆಸ್ತಿ, ಬೆಳೆ ನಷ್ಟವನ್ನು ವೀಕ್ಷಿಸಿ ಸಂಕಷ್ಟದಲ್ಲಿರುವ ಮಡಿಕೇರಿ ಜನರ ನೋವಿಗೆ ಸ್ಪಂದಿಸಲು ಹೋಗಿದ್ದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಪ್ರತಿಭಟನೆ ಸೋಗಿನಲ್ಲಿ ಪೋಲಿಸ್ ರ ಮುಂದೆಯೆ ಅವರ ಮೇಲೆ ಮೊಟ್ಟೆ ಎಸೆದ ಕೃತ್ಯವನ್ನು ಖಂಡಿಸಿ, ಇಂದು ಮಾಲೂರಿನಲ್ಲಿ ಶಾಸಕ ಕೆ.ವೈ. ನಂಜೇಗೌಡ ರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡರು:
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೊಡಗು ಜಿಲ್ಲೆಯ ಜನರ, ರೈತರ ಸಂಕಷ್ಟ ಆಲಿಸಲು ಹೋಗಿದ್ದ ಸಿದ್ದರಾಮಯ್ಯ ರವರ ಮೇಲೆ‌ ಮೊಟ್ಟೆ ಎಸೆದಿರುವಂತದ್ದು ಖಂಡನೀಯ ಇದೊಂದು ಹೇಡಿತನಕ ಕೃತ್ಯ. ಮಾಜಿ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರ ಮೇಲೆ ಈ ರೀತಿಯ ಕೃತ್ಯ ಎಸಗುವುದು ದೌರ್ಜನ್ಯದ ಪರಮಾವಧಿಯಾಗಿದ್ದು. ಬಿಜೆಪಿ ಮತ್ತು ಆರ್‌.ಎಸ್.ಎಸ್ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಒಂದೆಡೆ ಭ್ರಷ್ಟ ತನದ ಕಮೀಷನ್ ಆಡಳಿತ, ಇನ್ನೊಂದೆಡೆ ಕೋಮುದ್ವೇಷದಿಂದ ರಾಜ್ಯವನ್ನು ಗೂಂಡಾ ಸಂಸ್ಕೃತಿಯತ್ತಾ ಕೊಂಡೊಯವ ಪರಿಸ್ಥಿತಿ ರಾಜ್ಯ ಸರ್ಕಾರದ ಆಡಳಿತ ವೈಕರಿಯಾಗಿದೆ ಎಂದು ಕಟುವಾಗಿ ಟೀಕಿಸಿದರು.

ಇದಕ್ಕೂ ಮೊದಲು ಪಟ್ಟಣದ ಮಾರಿಕಾಂಬಾ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗೃಹ ಮಂತ್ರಿಯಾದ ಅರಗ ಜ್ಙಾನೇಂದ್ರ ರವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ಹೊರ ಹಾಜಿದರು. ನಂತರ ತಹಸೀಲ್ದಾರ್ ಕಛೇರಿ ವರೆಗೆ ಪ್ರತಿಭಟನೆ ಜಾತ ನಡೆಸಿ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಸರಿಪಡಿಸಲು, ತಪ್ಪಿತಸ್ಥ ದಾಳಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನೀಲ್ ಕುಮಾರ್, ಮಾಜಿ ಶಾಸಕ ಎ.ನಾಗರಾಜ್, ಮಾಲೂರು,ಮಾಸ್ತಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಎಂ.ಜಿ.ಮಧುಸೂದನ್, ಹೆಚ್.ಎಂ.ವಿಜಯನರಸಿಂಹ, ಮುಖಂಡರಾದ ಸಿ.ಲಕ್ಷ್ಮೀನಾರಾಯಣ್, ಎಂ.ವಿ.ಸೋಮಶೇಖರ್, ಎಟ್ಟಕೋಡಿ ವೀರಭದ್ರಪ್ಪ, ಎ.ಅಶ್ವತ್ಥರೆಡ್ಡಿ, ಬಿ.ಆರ್.ಶ್ರೀನಿವಾಸ್, ಪ್ರದೀಪ್ ರೆಡ್ಡಿ, ಪಿಚ್ಚಳ್ಳಿ ಶ್ರೀನಿವಾಸ್, ನಾಗಾಪುರ ನವೀನ್, ಸಂತ್ತೆಹಳ್ಳಿ ನಾರಾಯಣಸ್ವಾಮಿ, ನಹೀಮ್ ಉಲ್ಲಾ, ಆನೆಪುರ ದೇವರಾಜ್ ಪುರಸಭಾ ಸದಸ್ಯರಾದ ಭಾರತಮ್ಮ ಶಂಕರಪ್ಪ, ಕೊಮಲ ನಾರಾಯಣ್, ವಿಜಯಲಕ್ಷ್ಮಿ ಲಕ್ಮೀನಾರಾಯಣ್, ಎನ್. ವಿ.ಮುರಳೀಧರ್, ಆರ್.ವೆಂಕಟೇಶ್, ಮಂಜುನಾಥ್, ಜಾಕೀರ್ ಖಾನ್ ಹಾಗೂ ಎರಡು ಬ್ಲಾಕ್ ಕಾಂಗ್ರೆಸ್ ನ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.