Mangalore District Sessions Court – Peepal Media

ಅಕ್ರಮ ಆಸ್ತಿ ಪ್ರಕರಣ: ನಾಗರಿಕ ಅಧಿಕಾರಿಗೆ ನಾಲ್ಕು ವರ್ಷ ಜೈಲು, ಒಂದು ಕೋಟಿ ದಂಡ
ಮಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ (ಎಂಸಿಸಿ) ಅಧಿಕಾರಿಯೊಬ್ಬರಿಗೆ ಮಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯವು 4ವರ್ಷ ಜೈಲು, ಮತ್ತು 1 ಕೋಟಿ ರೂ. ದಂಡ ವಿಧಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ (ಎಂಸಿಸಿ) ನೈರ್ಮಲ್ಯ ನಿರೀಕ್ಷಕರಾಗಿದ್ದ ಶಿವಲಿಂಗ ಕೊಂಡಗೂಳಿ ಅವರು, ಫೆಬ್ರವರಿ 15, 2013 ರಂದು ಭ್ರಷ್ಟಾಚಾರ ತಡೆ ಕಾಯಿದೆ, 1988, ಸೆಕ್ಷನ್ 13(1)ಇ ಮತ್ತು 13(2) ಅಡಿಯಲ್ಲಿ ದಾಖಲಾದ ಲಂಚ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧನಕ್ಕೊಳಗಾಗಿದ್ದರು.

ಈ ಕುರಿತು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು, ಶುಕ್ರವಾರ ತೀರ್ಪು ನೀಡಿದ್ದು,  ಪ್ರಕರಣದ ಆರೋಪಿಯಾಗಿರುವ ಶಿವಲಿಂಗ ಕೊಂಡಗೂಳಿ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿದಿಸಲಾಗಿದೆ. ಒಂದು ವೇಳೆ ಆರೋಪಿಯು ದಂಡವನ್ನು ಪಾವತಿಸದಿದ್ದಲ್ಲಿ, ಜೈಲು ಶಿಕ್ಷೆಯನ್ನು ಇನ್ನೊಂದು ವರ್ಷ ವಿಸ್ತರಿಸಲಾಗುವುದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್ ಉಮೇಶ್ ಕೆ. ಶೇಟ್ ಅವರು ಎಂಸಿಸಿ ಅಧಿಕಾರಿ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ರವೀಂದ್ರ ಮುನ್ನಿಪಾಡಿ ಅವರು ಕಾನೂನು ಕ್ರಮದ ಪರವಾಗಿ ವಾದ ಮಂಡಿಸಿದ್ದರು.

ಮಾಹಿತಿ ಪ್ರಕಾರ, ಆರೋಪಿಯು 76 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಅದು ಅವರ ಆದಾಯದ ಮೂಲಗಳಿಗೆ ಅನುಗುಣವಾಗಿಲ್ಲ ಎಂದು ತಿಳಿದುಬಂದಿದೆ.