mata – Peepal Media

ರವೀಂದ್ರ ವೆಂಶಿ ನಿರ್ದೇಶನದ ‘ಮಠ’ ಟ್ರೇಲರ್ ರಿಲೀಸ್ : ನವೆಂಬರ್ 18ಕ್ಕೆ ಚಿತ್ರ ಬಿಡುಗಡೆ
ಬೆಂಗಳೂರು: ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘ಮಠ’ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಅದೇ ಹೆಸರಲ್ಲಿ ಬರೋಬ್ಬರಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿ ಇದೇ ತಿಂಗಳ 18ರಂದು ತೆರೆಗೆ ಬರುತ್ತಿದೆ. ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶನ ಸಾರಥ್ಯದ ಬಹು ತಾರಾಗಣ ಒಳಗೊಂಡ ‘ಮಠ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಫಿಲಾಸಫಿಕಲ್ ಹಾಗೂ ಕಾಮಿಡಿ ಮಿಶ್ರಿತ ಕಥಾಹಂದರ ಈ ಸಿನಿಮಾದಲ್ಲಿದೆ. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ.  ರವೀಂದ್ರ ವೆಂಶಿ ‘ಪುಟಾಣಿ ಸಫಾರಿ’, ‘ವರ್ಣಮಯ’, ‘ವಾಸಂತಿ ನಲಿದಾಗ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಈ ಬಾರಿ ‘ಮಠ’ ಮೂಲಕ ಡಿಫ್ರೆಂಟ್ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ.

ವಿ ಆರ್ ಕಂಬೈನ್ಸ್ ಬ್ಯಾನರ್ ನಡಿ ಆರ್.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹು ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ಸಂತೋಷ್ ದಾವಣಗೆರೆ ನಾಯಕ ನಟನಾಗಿ ನಟಿಸಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ, ಮಂಡ್ಯ ರಮೇಶ್, ಗುರುಪ್ರಸಾದ್, ಬಿರಾದರ್ ಒಳಗೊಂಡ ತಾರಾಗಣವಿದೆ. ಜೀವನ್ ಗೌಡ ಛಾಯಾಗ್ರಾಹಣ, ಸಿ. ರವಿಚಂದ್ರನ್ ಸಂಕಲನ, ಶ್ರೀ ಗುರು ಸಂಗೀತ ನಿರ್ದೇಶನ ಚಿತ್ರಕ್ಕಿದೆ.ಯೋಗ ರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಗೌಸ್ ಫಿರ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟರ್ ಹೊತ್ತ ‘ಮಠ’ ಸಿನಿಮಾ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇಂದು ಶಿವಮೂರ್ತಿಗಳು ಜಾಮೀನು ಅರ್ಜಿ ಸಲ್ಲಿಕೆ ಸಾಧ್ಯತೆ
ಮಠದ ಹಾಸ್ಟೆಲ್ ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿರುವ ಶಿವಮೂರ್ತಿಗಳು ಇಂದೂ ಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಈ ಹಿಂದೆ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಶಿವಮೂರ್ತಿಗಳ ಜಾಮೀನು ಅರ್ಜಿ ವಿಚಾರಣೆಗೂ ಮುನ್ನವೇ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದರು. ಯಾವುದೇ ವಿಚಾರಣೆ ನಡೆಯದ ಹಿನ್ನೆಲೆಯಲ್ಲಿ ಪೊಲೀಸರು 5 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆಗೆ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ತಮ್ಮ ಗಮನಕ್ಕೆ ತರದೇ ಶಿವಮೂರ್ತಿಗಳನ್ನು ಆಸ್ಪತ್ರೆಗೆ ಕೊಂಡೊಯ್ದ ಬಗ್ಗೆ ಕೋರ್ಟ್ ಪೊಲೀಸರನ್ನು ಪ್ರಶ್ನಿಸಿತ್ತು. ನಂತರ ಜಾಮೀನು ಅರ್ಜಿ ವಜಾ ಮಾಡಿ 3 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಅನಾರೋಗ್ಯದ ನೆಪದಿಂದ ಪೊಲೀಸ್ ವಿಚಾರಣೆಯಿಂದ ದೂರವಿದ್ದ ಶಿವಮೂರ್ತಿಗಳು ನಿನ್ನೆ ರಾತ್ರಿಗೆ ಚಿತ್ರದುರ್ಗದ ಡಿವೈಎಸ್ಪಿ ಕಛೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ. ಇಂದೂ ಸಹ ಶಿವಮೂರ್ತಿಗಳ ವಿಚಾರಣೆ ನಡೆಯಲಿದ್ದು ಇದರ ಬೆನ್ನಲ್ಲೇ ಆರೋಪಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಸಧ್ಯ ಪೋಕ್ಸೊ ಕಾಯ್ದೆ ಮತ್ತು ಅಟ್ರಾಸಿಟಿ ಕಾಯ್ದೆಯ ಅಡಿಯಲ್ಲಿ ಶಿವಮೂರ್ತಿಗಳ ಮೇಲೆ ಪ್ರಕರಣ ದಾಖಲಾಗಿವೆ. ಇವು ಗಂಭೀರ ಪ್ರಕರಣಗಳಾಗಿದ್ದು, ವಿಚಾರಣೆ ನಂತರ ಆರೋಪ ಸಾಭೀತಾದರೆ ಜೈಲು ಶಿಕ್ಷೆ ಕಾಯಂ ಆಗುವ ಸಾಧ್ಯತೆಯಿದೆ.

ಬಸವಶ್ರೀ ಪ್ರಶಸ್ತಿ ಹಿಂತಿರುಗಿಸಿದ ಪತ್ರಕರ್ತ ಪಿ ಸಾಯಿನಾಥ್
ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಬಂಧನದ ಹಿನ್ನಲೆಯಲ್ಲಿ ಖ್ಯಾತ ಪತ್ರಕರ್ತ ಪಿ ಸಾಯಿನಾಥ್ ಅವರು ಮಠವು ಅವರಿಗೆ ನೀಡಿರುವ ಬಸವಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

2017 ರಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಯಿನಾಥ್ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿತ್ತು. ಈ ಪ್ರಶಸ್ತಿ ಐದು ಲಕ್ಷ ರೂಪಾಯಿಗಳನ್ನು ಒಳಗೊಂಡಿದ್ದು ಸಾಯಿನಾಥ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

ಅದೇ ಸಂದರ್ಭದಲ್ಲಿ ಸಾಯಿನಾಥ್ ಮಠದ ಸ್ವಾಮೀಜಿ ಹೈಸ್ಕೂಲ್ ಮಕ್ಕಳ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಸ್ವಾಮೀಜಿಗಳೂ ಮಠ ಮಾನ್ಯಗಳೂ..
ಜನರಿಗೆ ರಕ್ಷಣೆ ಕೊಡಲು ಸರ್ಕಾರ ಒಂದು ಸಾಕು. ಅಥವಾ ಮಾರ್ಗಸೂಚಿಗಾಗಿ ಸಂವಿಧಾನ ಇರುವುದು ಸಾಕು. ಹೀಗಿರುವಾಗ  ಇಂತೆಲ್ಲ ಮಠಗಳು ಹುಟ್ಟಿಕೊಂಡು ಇಷ್ಟೆಲ್ಲಾ ಅವ್ಯವಹಾರಗಳ ಕೇಂದ್ರಗಳಾಗಿ ಮಠಗಳು ಬೆಳೆಯಬೇಕಿದೆಯೇ? ಇವರ ಶಾಲೆಗಳ ಮಕ್ಕಳು, ಹಾಸ್ಟೆಲ್ ನಲ್ಲಿರುವ ಮಕ್ಕಳು, ಮಠಕ್ಕೆ ಬರುವ ಮಹಿಳೆಯರು ಇವರೆಲ್ಲರೂ ಇವರ ಕಾಮ ತೃಷೆಗೆ ಬಲಿಯಾಗುತ್ತಿರಬೇಕೇ? ಸ್ವಾಮೀಜಿ ಹುದ್ದೆಯ ಗೌರವವನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಒಬ್ಬ ಸ್ವಾಮೀಜಿ ಶಕ್ತರೇ? ಈ ಎಲ್ಲ ಪ್ರಶ್ನೆಗಳನ್ನು ಮುರುಘಾ ಮಠದ‌ ಘಟನೆಯ ಹಿನ್ನೆಲೆಯಲ್ಲಿ ಎತ್ತಿದ್ದಾರೆ ಲೇಖಕಿ, ಚಿಂತಕಿ ಮಮತಾ ಆರ್.

ಮುರುಘಾ ಮಠದ ಸ್ವಾಮಿಗಳ ವಿಚಾರದಲ್ಲಿ ಇದೊಂದು ಪೊಲಿಟಿಕಲ್ ಗೇಮ್ ಆಗಿರಬಹುದು. ಚುನಾವಣಾ ಸಮಯದಲ್ಲಿ ಈ ರಾದ್ಧಾಂತ ಆಚೆ ಬಂದಿರುವುದರಿಂದ ಯಾರಾದರೂ ಮಠದ ಏಳ್ಗೆಯನ್ನು ಸಹಿಸದೇ ಪಿತೂರಿ ನಡೆಸಿದ್ದಿರಬಹುದು. ಸ್ವಾಮಿಗಳು ಹಾಸ್ಟೆಲ್ ಬಾಲಕಿಯರನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡಿರಬಹುದು, ಇಲ್ಲದೆಯೂ ಇರಬಹುದು. ಇದೆಲ್ಲ ನಿರಂತರವಾಗಿ ನಡೆದು ಬಂದಿದ್ದು ಕಾರಣಾಂತರಗಳಿಂದ ಈ ಸಮಯದಲ್ಲಿ ವಿಷಯ ಬೆಳಕಿಗೆ ಬಂದಿರಬಹುದು ಎಂಬೆಲ್ಲ ಬಹು ಆಯಾಮಗಳಲ್ಲಿ ಈಗ ಚರ್ಚೆಯಾಗುತ್ತಿದೆ.

ಮೊದಲಿಗೆ ಮಠಗಳು ಹೇಗೆ ಹುಟ್ಟಿಕೊಂಡವು, ಸ್ವಾಮೀಜಿಗಳು ಹೇಗೆ ಮಠಗಳಲ್ಲಿ ಪೀಠಾಧಿಪತಿಗಳಾಗುವರು ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಧಾರ್ಮಿಕ ಶಕ್ತಿ ಪ್ರದರ್ಶನಗಳಿಗೆ ಮಠಗಳು ಹುಟ್ಟಿಕೊಂಡವು. ಯಾವುದೇ ಸ್ವಾಮೀಜಿಗೆ ಇಂತಿಷ್ಟೇ ವಿದ್ಯಾರ್ಹತೆ ಎನ್ನುವುದು ನಿಗದಿಯಾಗಿರುವುದಿಲ್ಲ. ಸ್ವಾಮೀಜಿಗಳಿಗಾಗಿಯೇ ಯಾವುದೇ ಪವಿತ್ರ ಗ್ರಂಥಗಳು ಇರುವುದಿಲ್ಲ. ಆಯಾ ಜಾತಿಗಳನ್ನು ಪ್ರತಿನಿಧಿಸುವ ಗಣ್ಯರೊಬ್ಬರು ದೀಕ್ಷೆ ತೆಗೆದುಕೊಂಡು ಸುಲಭದಲ್ಲಿ ಸ್ವಾಮೀಜಿಗಳಾಗುತ್ತಾರೆ. ಹಿಂದಿನ ದಿನಗಳಲ್ಲಿ ಜನರಲ್ಲಿ ಮುಗ್ಧತೆ ಇತ್ತು. ಸ್ವಾಮೀಜಿಗಳಲ್ಲೂ ಇತ್ತು. ನನ್ನಲ್ಲಿ ದೈವೀ ಶಕ್ತಿ ಇದೆ ಎಂದು ಅವರು ಹೇಳಿದರೆ ನೂರಾರು ಜನರು ನಂಬುತ್ತಿದ್ದರು .ಆ ಪೀಠಾಧಿಪತಿಗಳ ಸ್ಥಾನಕ್ಕೆ ಗೌರವವೂ ಇತ್ತು. ಅದರೆ ಈಗ ಹಾಗಿಲ್ಲ. ಮೊದಲು ಜನರಿಗೆ ಸ್ವಾಮೀಜಿಗಳ ಬಗೆಗಿದ್ದ ಧಾರ್ಮಿಕ ಭಾವನೆಗಳು ಈಗೀಗ ಕಡಿಮೆಯಾಗುತ್ತಿವೆ. ಒಂದು ಮಠ ಎಂದರೆ ಅಲ್ಲಿ ಸಾವಿರ ಕೋಟಿ ರುಪಾಯಿಗಳ ವ್ಯವಹಾರ ನಡೆಯುತ್ತಿರುತ್ತದೆ. ಸ್ವಾಮೀಜಿಗಳ ಮಾಲ್ ಗಳು ಅಂಗಡಿ ಮಳಿಗೆಗಳು ಮಠದ ಹಣದಲ್ಲಿ ನಡೆಯುತ್ತಿರುತ್ತವೆ.  ಮುಗ್ಧ ಮಕ್ಕಳು ಮಹಿಳೆಯರು ಇವರಿಗೆ ಆಹಾರವಾಗುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಮಠಗಳಿಗೆ ಭೇಟಿ ಕೊಟ್ಟು ಅಲ್ಲಿಯ ಒಳ ವಿಚಾರಗಳನ್ನು ಗಮನಿಸಿದರೆ ಬಹುತೇಕ ಮಠಗಳು ಹಣ, ಮೋಜು, ಮಸ್ತಿಗಳಲ್ಲಿ ತೇಲಾಡುತ್ತಿರುವುದರ ಪ್ರತೀಕವಾಗಿ ಆ ದಿನದಲ್ಲಿ ಸಂಗ್ರಹವಾದ ಹಣ ಮತ್ತು ಇಶ್ಯೂ ಆದ ಚೆಕ್ ಗಳು ಇವೆಲ್ಲ ಗಮನಕ್ಕೆ ಬರುತ್ತವೆ.

ಸ್ವಾಮೀಜಿ ಒಂದು ಮಠ ಕಟ್ಟಿದರೆ ಗಂಡಸೊಬ್ಬ ಸಂಸಾರಿಯಾಗಿ ಬಂಧನದಲ್ಲಿ ಸಿಲುಕಿದ ಕತೆ ನೆನಪಾಗುತ್ತದೆ..ಒಬ್ಬನೇ ಇದ್ದ ಎಂದು ಹಸು ತರುತ್ತಾನೆ ಹಸು ನೋಡಿಕೊಳ್ಳಲು ಹೆಂಗಸನ್ನು ಮದುವೆಯಾಗುತ್ತಾನೆ. ನಂತರ ಹಸುವಿನ ಹಾಲು ಕುಡಿಯಲು ಬೆಕ್ಕು ಬಂದು ಸೇರಿಕೊಳ್ಳುತ್ತದೆ. ನಂತರ ಇಲಿಗಳು ಬಂದು ಸೇರಿದಂತೆ ಸ್ವಾಮೀಜಿಯೊಬ್ಬರು ಮಠ ಕಟ್ಟಿದರೆ ಅಲ್ಲೊಂದು ಹೆಡ್ ಆಫೀಸ್ ಬರುತ್ತದೆ ಅದೊಂದು ಧಾರ್ಮಿಕ ಸ್ಥಳವಾಗುತ್ತದೆ. ನಂತರ ʼಕ್ಯಾಸ್ಟ್ ಕಾರ್ಡ್ʼ ಆಗಿ ರಾಜಕಾರಣಿಗಳಿಗೆ ಲಾಭಕ್ಕೆ ಬರುತ್ತದೆ. ಟ್ಯಾಕ್ಸ್ ಲೆಕ್ಕಕ್ಕೆ ಸಿಗದ ರಾಜಕಾರಣಿಗಳ ಹಣಕ್ಕೆ ಮಠಗಳಲ್ಲಿ ಭಧ್ರತೆ ಸಿಗುತ್ತದೆ. ಒಂದರ್ಥದಲ್ಲಿ ರಾಜಕಾರಣಿಗಳ ಪ್ರೋತ್ಸಾಹದಿಂದಲೇ ಅವುಗಳು ನಡೆಯುತ್ತವೆ ಅಂದರೆ ಅದು ನಿಜವೇ ಆಗಿರುತ್ತದೆ!.

ಈ ಮಠಗಳು ಜನರಿಗೆ ಯಾವುದೇ ಗೈಡಿಂಗ್ಸ್ ಗಳನ್ನು ಕೊಡುವುದಿಲ್ಲ. ಆದರೆ ವಿಪುಲವಾದ ಧಾರ್ಮಿಕ ಗುಂಪುಗಳು ತಮ್ಮ ಧಾರ್ಮಿಕ ಭಕ್ತಿಗನುಗುಣವಾಗಿ ಇಂತಹ ಧಾರ್ಮಿಕ ಕೇಂದ್ರಗಳನ್ನು ಸ್ಥಾಪನೆ ಮಾಡಿಕೊಳ್ಳುತ್ತಾರೆ. ಇಂದು ಯಾವ ಸ್ವಾಮೀಜಿಗಳೂ ಹೇಳಿರುವ ಮಾತುಗಳು ನಿಜವಾಗಿಲ್ಲ. ಇಂತಹ ಕಡೆ ಬೆಂಕಿ ಬೀಳುತ್ತದೆ ಎಂದರೆ ಬಿದ್ದಿಲ್ಲ. ಅವರಲ್ಲಿ ಯಾವುದೋ ಒಂದು ಅತಿಮಾನುಷ ಶಕ್ತಿ ಇದೆ ಎಂಬುದೂ ಗೋಚರವಾಗಿಲ್ಲ. ಹೀಗಿರುವಾಗ, ಕೆಲವೊಂದು ಸಾಂಪ್ರದಾಯಿಕ ಮೌಲ್ಯಗಳ ಸಲುವಾಗಿ ಮಠಗಳನ್ನು ಕಾಯ್ದಿರಿಸಿಕೊಳ್ಳಬೇಕೇ ವಿನಃ ಸ್ವಾಮೀಜಿಗಳು ಸುಪರ್ ಪವರ್ ಎಂದಾಗಲಿ ಸ್ವಾಮೀಜಿಗಳು ಹೇಳಿದ್ದೆಲ್ಲ ನಿಜವಾಗುತ್ತದೆ ಎಂದಾಗಲೀ ಇವರನ್ನು ಮೇಲಿನ ಸ್ಥಾನದಲ್ಲಿ ಕೂಡಿಸಿದರೆ ಒಂದಲ್ಲಾ ಒಂದು ಇಂತಹ ಅವಘಡಗಳು ಘಟಿಸಿ ಹೋಗುತ್ತಿರುತ್ತವೆ.

ದೂರದ ಊರುಗಳಿಂದ, ಮಠದ ಹಾಸ್ಟೆಲ್ ಗಳಲ್ಲಿ ಭದ್ರತೆ ಸಿಗುತ್ತದೆ ಮತ್ತು ಸುರಕ್ಷೆಯ ದೃಷ್ಟಿಯಿಂದ ಮಠಗಳು ಒಳ್ಳೆಯದೆಂದು ಪೋಷಕರು ಹೊರಗಡೆ ಹೆಚ್ಚಿನ ಹಣ ಭರಿಸಲಾಗದೇ ಇಲ್ಲಿಗೆ ತಂದು ಸೇರಿಸುತ್ತಾರೆ. ಆಗ ಬೇಲಿಯೇ ಎದ್ದು ಹೊಲ ಮೇಯ್ದರೆ ಕೇಳುವವರಾರು? ಈಗಾಗಲೇ ಹಲವಾರು ಆಪಾದನೆಗಳು ಬೇರೆ ಮಠದ ಸ್ವಾಮೀಜಿಗಳ ಮೇಲೂ ಬಂದಿರುವುದರಿಂದ ಮತ್ತು ಬಾಲಕಿಯರ ಮೇಲೆ ನಡೆಸಿದ ಈ ಅತ್ಯಾಚಾರ ಘಟನೆಗಳಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕಾವಿಧಾರಿಗಳಿಂದ ಎಚ್ಚರದಲ್ಲಿರಬೇಕಾಗಿ ಬಂದಿರುವುದು ಜನರ ದುರ್ದೈವ.

ಸರ್ಕಾರ ಒಂದು ಸಾಕು ಜನರಿಗೆ ರಕ್ಷಣೆ ಕೊಡಲು. ಅಥವಾ ಮಾರ್ಗಸೂಚಿಗಾಗಿ ಸಂವಿಧಾನ ಇರುವುದು ಸಾಕು. ಹೀಗಿರುವಾಗ  ಇಂತೆಲ್ಲ ಮಠಗಳು ಹುಟ್ಟಿಕೊಂಡು ಇಷ್ಟೆಲ್ಲಾ ಅವ್ಯವಹಾರಗಳ ಕೇಂದ್ರಗಳಾಗಿ ಮಠಗಳು ಬೆಳೆಯಬೇಕಿದೆಯೇ? ಇವರ ಶಾಲೆಗಳ ಮಕ್ಕಳು, ಹಾಸ್ಟೆಲ್ ನಲ್ಲಿರುವ ಮಕ್ಕಳು, ಮಠಕ್ಕೆ ಬರುವ ಮಹಿಳೆಯರು ಇವರೆಲ್ಲರೂ ಇವರ ಕಾಮ ತೃಷೆಗೆ ಬಲಿಯಾಗುತ್ತಿರಬೇಕೇ? ಸ್ವಾಮೀಜಿ ಹುದ್ದೆಯ ಗೌರವವನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಒಬ್ಬ ಸ್ವಾಮೀಜಿ ಶಕ್ತರೇ? ಈ ಎಲ್ಲ ಪ್ರಶ್ನೆಗಳು ಇಂದು ಮುಖ್ಯವಾಗುತ್ತವೆ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳಾಗಿರುತ್ತವೆ)

ಮಮತಾ ಆರ್
ಚಿಂತಕರು