MCD – Peepal Media

ಎಮ್‌ಸಿಡಿ ಚುನಾವಣೆ ಅತ್ಯಂತ ಕಷ್ಟಕರವಾಗಿತ್ತು: ಕೇಜ್ರಿವಾಲ್‌ ವಿಶ್ಲೇಷಣೆ
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಹಾಗು ಆಮ್‌ ಆದ್ಮಿ ಪಾರ್ಟಿಯ ಸರ್ವೋಚ್ಛ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ ದಿಲ್ಲಿ ಮುನ್ಸಿಪಲ್‌ ಕೌನ್ಸಿಲ್‌ (ಎಂಸಿಡಿ) ಚುನಾವಣೆ ಎದುರಿಸುವುದು ಹಿಂದಿನ ಎಲ್ಲ ಚುನಾವಣೆಗಳಿಗಿಂತ ಹೆಚ್ಚು ಕಷ್ಟಕರವಾಗಿತ್ತು ಎಂದು ವಿಶ್ಲೇಷಿಸಿದ್ದಾರೆ.

ನೂತನವಾಗಿ ಚುನಾಯಿತರಾದ ತಮ್ಮ ಪಕ್ಷದ ಮಹಾನಗರ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಎದುರಿಸಲು ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದರಲ್ಲದೆ, ಇಂಥ ಸಂಕಷ್ಟದಲ್ಲಿಯೂ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಎಂಸಿಡಿಯಲ್ಲಿ ಎಎಪಿ ಈ ಬಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಎಎಪಿ ಮತ್ತು ಬಿಜೆಪಿ ನಡುವಿನ ತೀವ್ರ ಹಣಾಹಣಿಯಲ್ಲಿ ಎಎಪಿ ದಿಲ್ಲಿ ಎಂಸಿಡಿಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾದ ಸ್ಥಾನಗಳನ್ನು ಗಳಿಸಲು ಯಶಸ್ವಿಯಾಗಿತ್ತು.

ಎಂಸಿಡಿಯಲ್ಲಿ ಪರಿಣಾಮಕಾರಿಯಾಗಿ ಆಡಳಿತವನ್ನು ಜಾರಿಗೊಳಿಸಲು ಎಲ್ಲರ ಬೆಂಬಲ ಬೇಕಿದೆ ಎಂದು ಪುನರುಚ್ಚರಿಸಿದ ಕೇಜ್ರಿವಾಲ್‌ ತಮಗೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದವೂ ಬೇಕಿದೆ ಎಂದು ಹೇಳಿದರು.

ಬಿಜೆಪಿ ಚುನಾವಣೆ ಸಮಯದಲ್ಲಿ ಎಎಪಿ ವಿರುದ್ಧ ಮೇಲಿಂದ ಮೇಲೆ ಅಪಪ್ರಚಾರ ಮಾಡುತ್ತ ಬಂದಿತು. 7 ಮುಖ್ಯಮಂತ್ರಿಗಳು, 17 ಕೇಂದ್ರ ಸಚಿವರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಎಲ್ಲರೂ ಈ ಅಪಪ್ರಚಾರದಲ್ಲಿ ತೊಡಗಿದ್ದರು. ಇದಕ್ಕೆ ಮಾಧ್ಯಮಗಳನ್ನೂ ಬಳಸಿಕೊಂಡರು. ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿರುವ ವಿಡಿಯೋಗಳನ್ನು ಚುನಾವಣೆಯ ಸಮಯದಲ್ಲಿ ಬಿಡುಗಡೆಗೊಳಿಸಲಾಯಿತು. ನಮಗೆ ಸತ್ಯವನ್ನು ನಿರೂಪಿಸಲು ಸಹ ಅವಕಾಶ ನೀಡಲಿಲ್ಲ ಎಂದು ಅವರು ತಮ್ಮ ಭಾಷಣದಲ್ಲಿ ಹರಿಹಾಯ್ದರು.

ಪ್ರಚಾರ ಸಂದರ್ಭದಲ್ಲಿ ಬಿಜೆಪಿ ನಾಯಕರು ತಾವು ಪ್ರಾಮಾಣಿಕರು ಎಂದು ಹೇಳಿಕೊಳ್ಳಲಿಲ್ಲ. ಬದಲಾಗಿ ಎಎಪಿ ಕೂಡ ತಮ್ಮಂತೆ ಭ್ರಷ್ಟಾಚಾರಿ ಪಕ್ಷ ಎಂದು ಹೇಳುತ್ತ ಬಂದರು ಎಂದು ಕೇಜ್ರಿವಾಲ್‌ ಟೀಕಿಸಿದರು.

ಎಂಸಿಡಿ ಚುನಾವಣೆಗೆ ಮುನ್ನ ದೆಹಲಿಯಲ್ಲಿ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧದ ಆರೋಪಗಳು ಸೇರಿದಂತೆ ಹಲವಾರು ವಿವಾದಗಳು ಹೊರಬಂದಿದ್ದವು. ಬಿಜೆಪಿ ಮತ್ತು ಎಎಪಿಯ ನಡುವೆ ಮಾತಿನ ಸಂಘರ್ಷಗಳು ನಡೆಯುತ್ತಿದ್ದವು. ಇದೆಲ್ಲದರ ನಡುವೆಯೂ ಎಎಪಿ ಎಂಸಿಡಿ ಚುನಾವಣೆ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ದೆಹಲಿಯ ಮೂರು ಮುನ್ಸಿಪಾಲ್ ಆಡಳಿತಗಳು ಏಕೀಕರಣಗೊಂಡ ನಂತರದ ಮೊದಲ ಎಂಸಿಡಿ ಚುನಾವಣೆ ಇದಾಗಿದ್ದು, ದೆಹಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಆಮ್‌ ಆದ್ಮಿ ಪಾರ್ಟಿಗೆ ನಗರದಲ್ಲಿ ತನ್ನ ಆಡಳಿತದ ಅಧಿಕಾರವನ್ನು ವಿಸ್ತರಿಸಲು ಅವಕಾಶ ಕಲ್ಪಿಸಿದಂತಾಗಿದೆ.

ದೆಹಲಿ MCD ಗೆ ಇಂದು ಮತದಾನ : BJP-AAP ಹಣಾಹಣಿ
ಹೊಸದಿಲ್ಲಿ : ಇಂದು ದೆಹಲಿಯ ಮುನಿಸಿಪಲ್‌ ಕಾರ್ಪೋರೇಶನ್(MC̈D) ಚುನಾವಣೆ ನಡೆಯುತ್ತಿದ್ದು, ಕಸದ ಸಮಸ್ಯೆಯನ್ನೇ ಕೇಂದ್ರ ವಿಷಯವನ್ನಾಗಿಸಿಕೊಂಡು ಎಂಸಿಡಿ ವಿರುದ್ಧ ಎಎಪಿ ನೇರ ಹಣಾಹಣಿ ನಡೆಸಿದೆ. ಒಂದೆಡೆ ಬಿಜೆಪಿ ತನ್ನ ಆಳ್ವಿಕೆಯನ್ನು ವಿಸ್ತರಿಸುವ ವಿಶ್ವಾಸವನ್ನು ಹೊಂದಿದ್ದರೆ, ಕಾಂಗ್ರೆಸ್‌ ಕೆಲವು ನೆಲೆಗಳನ್ನು ಮರಳಿ ಗೆಲ್ಲುವ ಭರವಸೆ ಹೊಂದಿದೆ.

ಸುಮಾರು 1.5 ಕೋಟಿ ಜನರು 250 ವಾರ್ಡ್‌ಗಳಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, 2011 ರಲ್ಲಿ ಪ್ರದೇಶವಾರು ರಚನೆಯಾದ ಮೂರು ಎಂಸಿಡಿಯನ್ನು ಮರುಸಂಘಟಿಸಲಾಗಿದೆ ಮತ್ತು ಈ ವರ್ಷದ ಆರಂಭದಲ್ಲಿ ಬಿಜೆಪಿಯ ಕೊನೆಯ ಅವಧಿ ಮುಗಿದ ನಂತರ ವಾರ್ಡ್‌ಗಳನ್ನು ಮರುವಿನ್ಯಾಸಗೊಳಿಸಲಾಗಿದೆ.

ಬೆಳಗ್ಗೆ ಎಂಟು ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 5.30 ಮತಗಟ್ಟೆಯ ಮುಚ್ಚಲಾಗುತ್ತಿದ್ದು, ನಂತರ ಈಗಾಗಲೇ ಒಳಗೆ ಇರುವವರು ಮಾತ್ರ ಚಲಾಯಿಸಬಹುದಾಗಿದೆ. ದಿನನಿತ್ಯದ ಮೆಟ್ರೋ ರೈಲು ಸೇವೆಗಳು ಮುಂಜಾನೆ 4 ಗಂಟೆಗೆ ಪ್ರಾರಂಭವಾಗಿ ತಮ್ಮ ಸೇವಗಳನ್ನು ಆರಂಭಿಸಿವೆ.

1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ದೆಹಲಿಯ ಆಡಳಿತದ ಭಾಗಗಳನ್ನು ನಿಯಂತ್ರಿಸುವ ಎಎಪಿ ಮತ್ತು ಬಿಜೆಪಿ ಎಲ್ಲಾ ಸ್ಥಾನಗಳಿಗೂ ಹೋರಾಡುತ್ತಿವೆ. ಎಎಪಿ ಶುರುವಾದಾಗಿನಿಂದ  ತನ್ನ ನೆಲೆಯನ್ನು ಮರಳಿ ಪಡೆಯಲು ಕಾಂಗ್ರೆಸ್‌ ಹೆಣಗಾಡುತ್ತಿದ್ದು, ತನ್ನ ಮೂವರು ಅಭ್ಯರ್ಥಿಗಳ ನಾಮಪತ್ರಗಳನ್ನು ತಾಂತ್ರಿಕತೆಯ ಆಧಾರದ ಮೇಲೆ ತಿರಸ್ಕರಿಸಿದ್ದರಿಂದ 247 ಸ್ಥಾನಗಳಲ್ಲಿ ಸ್ಪರ್ಧೆಗಿಳಿಯುತ್ತಿದೆ.

ಡಿಸೆಂಬರ್‌ 7 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ನಗರದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಅರವತ್ತೆಂಟು ಮಾದರಿ ಮತಗಟ್ಟೆಗಳು ಮತ್ತು ಹಲವು ಪಿಂಕ್‌ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಉಪಮುಖ್ಯಮತ್ರಿ ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವಾರು ಎಎಪಿ ಸಚಿವರ ಮೇಲೆ ಬಿಜೆಪಿ ವಸತಿ ಭರವಸೆಗಳನ್ನು ನೀಡಿದ್ದಲ್ಲದೇ ಭ್ರಷ್ಟಾಚಾರದ ಆರೋಪಗಳನ್ನೂ ಸಹ ಹೊರಿಸಿದೆ. ಬಂಧಿತ ಸಚಿವ ಸತ್ಯೇಂದರ್‌ ಜೈನ್‌ ಅವರು ತಿಹಾರ್‌ ಜೈಲಿನಲ್ಲಿ ವಿಶೇಷವಾಗಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋಗಳು ಸಿಸಿಟಿವಿ ದೃಶ್ಯಗಳ ಮುಖಾಂತರ ಬಯಲಾಗಿದೆ. ಎಎಪಿ ಯನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಇದನ್ನೂ ಕೂಡ ಬಳಸಿಕೊಂಡಿದೆ.

ಕಳೆದ 24 ವರ್ಷಗಳಲ್ಲಿ ಬಿಜೆಪಿ ದೆಹಲಿ ರಾಜ್ಯ ಸರ್ಕಾರವನ್ನು ರಚಿಸದಿದ್ದರೂ, ಕಾಂಗ್ರೆಸ್ ಮತ್ತು ಎಎಪಿಯ ರಾಜ್ಯ ಸರ್ಕಾರಗಳ ಮೂಲಕ ಎಂಸಿಡಿಯ ಮೇಲೆ ಅದರ ನಿಯಂತ್ರಣವು ಬಲವಾಗಿ ಇಟ್ಟುಕೊಂಡಿದೆ. 2015 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ದಾಖಲೆಯ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿವೆ. ಆ ನಂತರವೂ ಎರಡು ವರ್ಷಗಳಾದ ಬಳಿಕ, ಬಿಜೆಪಿ ತನ್ನ 272 ಸ್ಥಾನಗಳಲ್ಲಿ 181 ಸ್ಥಾನಗಳನ್ನು ಗೆಲ್ಲುವ ಮೂಲಕ ನಾಗರಿಕ ಸಂಸ್ಥೆಯನ್ನು ಉಳಿಸಿಕೊಂಡಿದೆ. ಎಎಪಿ 48 ಮತ್ತು ಕಾಂಗ್ರೆಸ್ 30 ಸ್ಥಾನಗಳೊಂದಿಗೆ  ಮೂರನೇ ಸ್ಥಾನದಲ್ಲಿದೆ.

ಆಮ್‌ ಆದ್ಮಿ ಪಕ್ಷವು ಕಳೆದ ವರ್ಷದ ಆರಂಭದಿಂದಲೇ ತಯಾರಿ ನಡೆಸಿದ್ದು. ಕಸದ ಸಮಸ್ಯೆಯನ್ನೇ ತನ್ನ ಕೇಂದ್ರ ವಿಷಯವನ್ನಾಗಿ ಇಟ್ಟುಕೊಂಡಿದೆ. ಎಎಪಿ ನೈರ್ಮಲ್ಯದ ಬಗ್ಗೆಯೂ ಗಮನ ಕಾಳಜಿ ವಹಿಸೋಣ ಎಂದು ʼಕೇಜ್ರೀವಾಲ್‌ ಸರ್ಕಾರ, ಕೇಜ್ರೀವಾಲ್‌ ಕಾರ್ಪೋರೇಟರ್‌ʼ ಎಂದು ಘೋಷಣೆಗಳನ್ನು ಕೂಗಿತ್ತಿದ್ದು, ಬಿಜೆಪಿಯು ಅದೇ ರೀತಿ ಮೋದಿಯ ʼಡಬಲ್‌ ಇಂಜಿನ್‌ ಸರ್ಕಾರʼ ಎಂಬ ಘೋಷಣೆಯಿಂದ ಎಎಪಿಗೆ ಪ್ರತಿಸ್ಫರ್ಧಿಯಾಗಿದೆ.

ದೆಹಲಿಯಲ್ಲಿ ಹೆಚ್ಚಿದ ಡೆಂಗ್ಯೂ : 500 ರ ಗಡಿ ದಾಟಿದ ಸೋಂಕು
ನವದೆಹಲಿ: ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,  ಒಂದೇ ವಾರದಲ್ಲಿ 129 ಸೋಂಕುಗಳು ವರದಿಯಾಗಿವೆ. ಈ ಹಿನ್ನಲೆ ಹೊಸ ಪ್ರಕರಣಗಳೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು 500 ರ ಗಡಿ ದಾಟಿದೆ.

ನಗರದಲ್ಲಿ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಇದು ಕೂಡ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರಬಹುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ನಗರವನ್ನು 12 ವಲಯಗಳಾಗಿ ವಿಂಗಡಿಸಿದೆ. ಅದರಲ್ಲಿ ಕೇಂದ್ರ ವಲಯದಿಂದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದು ಬಂದಿದೆ.