MLA – Peepal Media

ಸಿಎಂ-ಶಾಶಕರ ವೇತನ 100% ಹೆಚ್ಚಳ: ಐದನೇ ಸ್ಥಾನದಲ್ಲಿ ಕರ್ನಾಟಕ
ಶುಕ್ರವಾರ ಕರ್ನಾಟಕ ವಿಧಾನಸಭೆಯು ಮುಖ್ಯಮಂತ್ರಿ ಮತ್ತು ಎಲ್ಲಾ ಶಾಸಕರಿಗೆ ಶೇ. 100 ರಷ್ಟು ವೇತನ ಹೆಚ್ಚಳವನ್ನು ಮಾಡುವ ಮಸೂದೆಗಳನ್ನು ಅಂಗೀಕರಿಸಿತು. ಇಷ್ಟಾಗಿಯೂ ಇವರು ಇತರ ನಾಲ್ಕು ರಾಜ್ಯಗಳ ಶಾಸಕರಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಶಾಸಕರಿಗೆ ಅತಿ ಹೆಚ್ಚು ಸಂಬಳ ನೀಡುವ ಐದು ರಾಜ್ಯಗಳು:

ತೆಲಂಗಾಣ

ಮುಖ್ಯಮಂತ್ರಿಗಳ ವೇತನ – ವಸತಿ, ಪ್ರಯಾಣ ಮತ್ತು ಭದ್ರತೆಗೆ ಸಂಬಂಧಿಸಿದ ಭತ್ಯೆಗಳು ಸೇರಿದಂತೆ ತಿಂಗಳಿಗೆ – 4.10 ಲಕ್ಷ ರೂ.

ಸಚಿವರ ವೇತನ – 3-3.5 ಲಕ್ಷ ರೂ.

ಶಾಸಕರ ವೇತನ – 2.5 ಲಕ್ಷ ರೂ.

ದೆಹಲಿ

ಮುಖ್ಯಮಂತ್ರಿಗಳ ವೇತನ – 3.90 ಲಕ್ಷ ರೂ.

ಸಚಿವರ ಸಂಬಳ – 3 ಲಕ್ಷ ರೂ.

ಶಾಸಕರ ವೇತನ – 90,000 ರೂ.

ಉತ್ತರ ಪ್ರದೇಶ

ಮುಖ್ಯಮಂತ್ರಿಗಳ ವೇತನ – 3.65 ಲಕ್ಷ ರೂ.

ಸಚಿವರ ವೇತನ – 2-2.5 ಲಕ್ಷ ರೂ.

ಶಾಸಕರ ವೇತನ – 1.87 ಲಕ್ಷ ರೂ.

ಮಹಾರಾಷ್ಟ್ರ

ಮುಖ್ಯಮಂತ್ರಿಗಳ ವೇತನ – 3.40 ಲಕ್ಷ ರೂ.

ಸಚಿವರ ವೇತನ – 2.5-3 ಲಕ್ಷ ರೂ.

ಶಾಸಕರ ವೇತನ – 1.60 ಲಕ್ಷ ರೂ.

ಕರ್ನಾಟಕ (ಮಾರ್ಚ್ ನಂತರ)

ಮುಖ್ಯಮಂತ್ರಿಗಳ ಸಂಬಳ – 3 ಲಕ್ಷ ರೂ.

ಸಚಿವರ ವೇತನ – 2-2.5 ಲಕ್ಷ ರೂ.

ಶಾಸಕರ ವೇತನ – 1.60 ಲಕ್ಷ ರೂ.

ಈ‌ ಪಟ್ಟಿಯನ್ನು ಡೆಕ್ಕನ್‌ ಹೆರಾಲ್ಡ್‌ ಪ್ರಕಟಿಸಿದೆ. ಸಂಬಳವು ವಸತಿ, ಪ್ರಯಾಣ ಭತ್ಯೆಗಳು, ಭದ್ರತಾ ಪ್ರದೇಶ ಭತ್ಯೆಗಳು ಮತ್ತು ವೈದ್ಯಕೀಯ ಸೌಲಭ್ಯಗಳ ಜೊತೆಗೆ ವಿಧಾನಸಭಾ ಅಧಿವೇಶನಗಳಿಗೆ ಹಾಜರಾಗಲು ಒಂದು ದಿನದ ವೇತನವನ್ನು ಒಳಗೊಂಡಿದೆ. ಭತ್ಯೆಗಳ ಸಂಖ್ಯೆ ಮತ್ತು ಪ್ರಕಾರವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಭತ್ಯೆಗಳನ್ನು ಹೊರತುಪಡಿಸಿ ಸಿದ್ದರಾಮಯ್ಯ ಅವರ ಸಂಬಳ 1.5 ಲಕ್ಷ ರೂ. (ಹೆಚ್ಚಳದ ನಂತರ). ವಿವಿಧ ಭತ್ಯೆಗಳನ್ನು ಸೇರಿಸಿದರೆ ತಿಂಗಳಿಗೆ ಒಟ್ಟು 3 ಲಕ್ಷ ರೂ.

ಅದೇ ರೀತಿ, ಶಾಸಕರು ತಿಂಗಳಿಗೆ 1.25 ಲಕ್ಷ ರೂ. ಗಳಿಸುತ್ತಾರೆ ಮತ್ತು 25,000 ರೂ. ಪ್ರದೇಶ ಭತ್ಯೆ, ಪ್ರತಿ ಕಿ.ಮೀ.ಗೆ 35 ರೂ. ಪ್ರಯಾಣ ಭತ್ಯೆ ಮತ್ತು ವಿಧಾನಸಭಾ ಅಧಿವೇಶನಗಳ ಸಮಯದಲ್ಲಿ ದಿನಕ್ಕೆ 2,500 ರೂ. ಪಡೆಯುತ್ತಾರೆ.

ಹೆಚ್ಚುವರಿಯಾಗಿ, ಅವರಿಗೆ ಕ್ಷೇತ್ರ ಅಭಿವೃದ್ಧಿಗಾಗಿ ವಾರ್ಷಿಕವಾಗಿ 2 ಕೋಟಿ ರೂ.ಗಳನ್ನು ನಿಗದಿಪಡಿಸಲಾಗುತ್ತದೆ.

ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ಶಾಸಕಾಂಗ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು, ವಿರೋಧ ಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

“ಜೀವನ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮುಖ್ಯಮಂತ್ರಿ ಸಚಿವರು, ರಾಜ್ಯ ಸಚಿವರು ಮತ್ತು ಉಪ ಮಂತ್ರಿಗಳ ವೇತನ ಮತ್ತು ಭತ್ಯೆಗಳನ್ನು ಬಹಳ ಸಮಯದಿಂದ ಪರಿಷ್ಕರಿಸಲಾಗಿಲ್ಲ,” ಎಂದು ಮಸೂದೆಯಲ್ಲಿ ಹೇಳಲಾಗಿದೆ.

ವಾಟ್ಸಪ್ ನಲ್ಲಿ ಯುವತಿಯ ನಗ್ನ ಚಿತ್ರಕ್ಕೆ ಬೆನ್ನುಬಿದ್ದ ಬಿಜೆಪಿ ಶಾಸಕ: ಪ್ರಕರಣ ದಾಖಲು
ಕುಲು:  20 ವರ್ಷದ ಯುವತಿಯೊಬ್ಬಳಿಗೆ ವಾಟ್ಸಪ್‌ ಚಾಟ್‌ನಲ್ಲಿ ನಗ್ನ ವಿಡಿಯೋಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಬಿಜೆಪಿ ಶಾಸಕ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಯ ಮಾಜಿ ಉಪಸ್ಪೀಕರ್ ಹನ್ಸ್ ರಾಜ್ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ಯುವತಿಯ ಜೊತೆ ಚಾಟಿಂಗ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಲ್ಲದೇ, ನಗ್ನಚಿತ್ರಕ್ಕೆ ಒತ್ತಾಯಿಸಿದ್ದ ಎಂದುಬಿಜೆಪಿ ಕಾರ್ಯಕರ್ತರೊಬ್ಬರ ಪುತ್ರಿ ಆರೋಪಿಸಿದ್ದಾಳೆ.

ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 75 (ಲೈಂಗಿಕತೆ ಒತ್ತಾಯಿಸುವುದು, ಅಶ್ಲೀಲತೆ ಪ್ರದರ್ಶನ ಅಥವಾ ಲೈಂಗಿಕ ಲೇಪನದ ಪ್ರತಿಕ್ರಿಯೆ) ಮತ್ತು 351(2) (ಅಪರಾಧ ಪಿತೂರಿ) ಅನ್ವಯ 41 ವರ್ಷ ವಯಸ್ಸಿನ ಶಾಸಕನ ಮೇಲೆ ಚಂಬಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆಗಸ್ಟ್ 9ರಂದೇ ಪ್ರಕರಣ ದಾಖಲಾಗಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. “ಪುತ್ರಿಯ ಜತೆ ಆನ್ಲೈನ್ ಚಾಟಿಂಗ್ ವೇಳೆ ಆಕೆಯ ನಗ್ನಚಿತ್ರಕ್ಕೆ ಒತ್ತಾಯಿಸಿದ್ದಲ್ಲದೇ ಅಶ್ಲೀಲ ಸಂದೇಶಗಳನ್ನೂ ಹನ್ಸ್ರಾಜ್ ಕಳುಹಿಸಿದ್ದಾನೆ” ಎಂದು ಬಿಜೆಪಿ ಪದಾಧಿಕಾರಿಯೂ ಆಗಿರುವ ಸಂತ್ರಸ್ತೆಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.

ಕೆಲ ಕೆಲಸಗಳ ಬಗ್ಗೆ ಕೇಳಿದಾಗಲೆಲ್ಲ ಶಾಸಕ ವೈಯಕ್ತಿಕವಾಗಿ ಭೇಟಿ ಮಾಡುವಂತೆ ಒತ್ತಾಯಿಸುತ್ತಿದ್ದ ಹಾಗೂ ಏನು ಬೇಕೋ ಅದೆಲ್ಲವನ್ನೂ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದ. ಶಾಸಕ ಹಾಗೂ ಶಾಸಕನ ಬೆಂಬಲಿಗರು ಈ ಚಾಟ್ಗಳನ್ನು ಡಿಲೀಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದೂ ಯುವತಿ ದೂರಿದ್ದಾರೆ.

“ಈ ಸಂದೇಶಗಳನ್ನು ಡಿಲೀಟ್ ಮಾಡಿಸಲು ಶಾಸಕರ ಬೆಂಬಲಿಗರು ಏನು ಮಾಡಲೂ ಸಿದ್ಧ. ನನಗೆ ಅಥವಾ ನಮ್ಮ ಕುಟುಂಬಕ್ಕೆ ಏನೇ ಆದರೂ ಅದಕ್ಕೆ ಶಾಸಕರು ಮತ್ತು ಅವರ ಬೆಂಬಲಿಗರು ಹೊಣೆ” ಎಂದು ಯುವತಿ ಹೇಳಿದ್ದಾರೆ. ನನ್ನ ಹತ್ತಿರ ಎರಡು ಫೋನ್‌ ಗಳಿದ್ದವು.  ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸುವ ಸಲುವಾಗಿ ಆ ಪೈಕಿ ಒಂದನ್ನು ಶಾಸಕರ ಬೆಂಬಲಿಗರು ಜಜ್ಜಿ ಹಾಳು ಮಾಡಿದ್ದಾರೆ ಎಂದು ಯುವತಿ ಎಫ್‌ಐಆರ್‌ನಲ್ಲಿ ದೂರಿದ್ದಾರೆ.

ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ‘ಕಿಡ್ನಾಪ್’ ಆರೋಪ: ‘FIR’ ದಾಖಲು
ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ಬೆದರಿಕೆಯೊಡ್ಡಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆಂದು ಆರೋಪಿಸಿ ಆರ್ ಆರ್ ನಗರ ಬಿಜೆಪಿ ಶಾಸಕ ಎಂ.ಮುನಿರತ್ನ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಲಕ್ಷ್ಮಿ ದೇವಿನಗರದ ಪೇಂಟರ್ ಸ್ಯಾಮ್ಯುಯೆಲ್ ಎಂಬವರು ಈ ಆರೋಪವನ್ನು ಶಾಸಕರ ಮೇಲೆ ಹೊರಿಸಿದ್ದು, ದೂರುದಾರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮುನಿರತ್ನ ಮತ್ತು ಬೆಂಬಲಿಗರಾದ ಸುರೇಶ್, ವಸಂತ್, ವಾಸಿಂ ಮತ್ತು ಸೀನಾ ಎನ್ನುವವರ ವಿರುದ್ಧ ಅಪಹರಣದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಎರಡು ದಿನಗಳ ಕೆಳಗೆ ಮಾತನಾಡುವ ನೆಪದಲ್ಲಿ ಅವರನ್ನು ಶಾಸಕ ಮುನಿರತ್ನ ಅವರ ಕಚೇರಿಗೆ ಬಲವಂತವಾಗಿ ಶಾಸಕರ ಹಿಂಬಾಲಕರು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಬಿಜೆಪಿ ಸೇರಿಸಿದ್ದಾರೆ ಎಂದು ಸಂತ್ರಸ್ಥ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಶಾಸಕ ಮುನಿರತ್ನ ನಿರಾಕರಿಸಿದ್ದಾರೆ.

ನಾನು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಏ.1ರಂದು ಶಾಸಕ ಮುನಿರತ್ನ ಮಾತನಾಡುವುದಿದೆ ಎಂದು ತಮ್ಮ ಹಿಂಬಾಲಕರಾದ ಸುರೇಶ್, ವಸಂತ್, ವಾಸಿಂ, ಸೀನಾ ಅವರನ್ನು ರಾಜ್‌ಕುಮಾರ್ ಸಮಾಧಿ ಬಳಿ ನನ್ನನ್ನು ಕರೆಸಲು ಕಳಿಸಿದ್ದರು. ಬಳಿಕ ವೈಯಾಲಿಕಾವಲ್‌ನಲ್ಲಿರುವ ಶಾಸಕರ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಶಾಸಕ ಮುನಿರತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ಯಾಮುಯಲ್ ದೂರಿದ್ದಾರೆ.

ದ್ವೇಷ ಭಾಷಣದಲ್ಲಿ ಬಿಜೆಪಿಗೆ ಪ್ರಥಮ ಸ್ಥಾನ! -ಎಡಿಆರ್‌ ವರದಿ: ಕರ್ನಾಟಕದಲ್ಲಿ ಯಾರು ವಿಜೇತರು?
ಬೆಂಗಳೂರು, ಅಕ್ಟೋಬರ್‌.06:  ಒಟ್ಟು 107 ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳಿದ್ದು, ಅವರಲ್ಲಿ  ಸುಮಾರು 40% ಮಂದಿ ಬಿಜೆಪಿಯವರು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.

Association of Democratic Reforms (ADR) ಮತ್ತು National Election Watch (New) ತಯಾರಿಸಿರುವ ಈ ವರದಿ ಅಕ್ಟೋಬರ್‌ 3, ಮಂಗಳವಾರದಂದು ಬಿಡುಗಡೆಯಾಗಿದ್ದು, ಇದನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ಹಾಲಿ ಸಂಸದ, ಶಾಸಕರು ಸಲ್ಲಿಸಿರುವ ಅಫಿಡವಿಟ್‌ನ ಮಾಹಿತಿಗಳಿಂದ ತಯಾರು ಮಾಡಲಾಗಿದೆ.

ವರದಿಯನ್ನು ಇಲ್ಲಿ ಓದಿ: Analysis of Sitting MPs/MLAs with Declared Cases Related to Hate Speech

ಭಾರತೀಯ ಕಾನೂನಿನಲ್ಲಿ ದ್ವೇಷಕಾರಿ ಭಾಷಣಕ್ಕೆ ಸಂಬಂಧ ಪಟ್ಟ ಯಾವುದೇ ವ್ಯಾಖ್ಯಾನಗಳಿಲ್ಲ. ಆದರೆ ಕಾನೂನು ಆಯೋಗದ ವರದಿ ಸಂಖ್ಯೆ 267 ರ ಪ್ರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(A), 153(B), 295(A), 298, 505(1) ಮತ್ತು 505 (2) ದ್ವೇಷದ ಭಾಷಣಕ್ಕೆ ಸಂಬಂಧಿಸಿದೆ. ಅಲ್ಲದೇ ಸೆಕ್ಷನ್ 8, ಸೆಕ್ಷನ್ 123 (3A) ಮತ್ತು ಸೆಕ್ಷನ್ 125 ಸೆಪ್ರೆಸೆಂಟೇಷನ್ ಆಫ್ ಪೀಪಲ್ ಆಕ್ಟ್, 1951‌ ಮೂಲಕ ದ್ವೇಷ ಭಾಷಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಕಾನೂನು ಆಯೋಗದ ವರದಿ-267ಯನ್ನು ಇಲ್ಲಿ ಓದಿ: Law Commission Report No. 267- on Hate Speech

ಏನಿದೆ ವರದಿಯಲ್ಲಿ?

ಎಡಿಆರ್‌ ವರದಿಯ ಪ್ರಕಾರ, ಒಟ್ಟು 763 ಹಾಲಿ ಸಂಸದರಲ್ಲಿ 33 ಮತ್ತು ಒಟ್ಟು 4,005 ಹಾಲಿ ಶಾಸಕರ ಪೈಕಿ 74 ಮಂದಿ ತಮ್ಮ ಅಫಿಡವಿಟ್‌ನಲ್ಲಿ ದ್ವೇಷ ಭಾಷಣಕ್ಕೆ ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಬಿಜೆಪಿಯೇ ಇಂತಹ ಹೆಚ್ಚು ಶಾಸಕ ಹಾಗೂ ಸಂಸದರನ್ನು ಹೊಂದಿದೆ.

ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿರುವ 33 ಹಾಲಿ ಸಂಸದರ ಪೈಕಿ 22 ಮಂದಿ ಬಿಜೆಪಿಯವರೇ ಆಗಿದ್ದಾರೆ.

ಇತರ ಪಕ್ಷಗಳ ಸಂಸದರ ಪೈಕಿ ಕಾಂಗ್ರೆಸ್‌ನ ಇಬ್ಬರು, ಆಮ್ ಆದ್ಮಿ ಪಕ್ಷ (AAP), AIMIM, AIUDF, DMK, MDMK , ಪಟ್ಟಾಲಿ ಮಕ್ಕಳ್ ಕಚ್ಚಿ, ಶಿವಸೇನೆ (ಉದ್ಧವ್ ಠಾಕ್ರೆ), ವಿಡುತಲೈ ಚಿರುತೈಗಲ್ ಕಚ್ಚಿಯ ತಲಾ ಒಬ್ಬರು ಮತ್ತು ಮತ್ತು ಒಬ್ಬ ಸ್ವತಂತ್ರ ಸಂಸದನ ಮೇಲೆ ಈ ಪ್ರಕರಣ ದಾಖಲಾಗಿದೆ.

74 ಶಾಸಕರ ಪೈಕಿ 20 ಮಂದಿ ಬಿಜೆಪಿಯವರು, ಕಾಂಗ್ರೆಸ್‌ನ 13, ಎಎಪಿಯ 6, ಸಮಾಜವಾದಿ ಪಕ್ಷ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ತಲಾ 5, ಡಿಎಂಕೆ ಮತ್ತು ಆರ್‌ಜೆಡಿಯ ತಲಾ 4, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಮೂರು ಶಾಸಕರ ಮೇಲೆ ದ್ವೇಷ ಭಾಷಣದ ಕೇಸ್‌ ದಾಖಲಾಗಿದೆ.

AIUDFನ ಇಬ್ಬರು ಮತ್ತು AIMIM, CPI(M), NCP, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ, ಟಿಡಿಪಿ, ಟಿಪ್ರ ಮೋಥಾ ಪಾರ್ಟಿ ಮತ್ತು ಬಿಆರ್‌ಎಸ್‌ನ ತಲಾ ಒಬ್ಬರ ಹಾಗೂ ಇಬ್ಬರು ಸ್ವತಂತ್ರ ಶಾಸಕರ ವಿರುದ್ಧವೂ ದ್ವೇಷ ಭಾಷಣದ ಪ್ರಕರಣಗಳಿವೆ.

ಯಾವ ರಾಜ್ಯಕ್ಕೆ ಪ್ರಥಮ ಸ್ಥಾನ?

ದ್ವೇಷಕಾರುವ ಭಾಷಣ ಮಾಡುವ ಹೆಚ್ಚು ಸಂಸದರನ್ನು ಹೊಂದಿರುವ ಉತ್ತರ ಪ್ರದೇಶ ಪ್ರಥಮ ಸ್ಥಾನವನ್ನು ಪಡೆದಿದೆ. ಇಲ್ಲಿನ ಏಳು ಹಾಲಿ ಸಂಸದರ ಮೇಲೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ದ್ವಿತೀಯ ಸ್ಥಾನ ಪಡೆದಿರುವ ತಮಿಳುನಾಡಿನ ನಾಲ್ಕು ಸಂಸದರ, ಬಿಹಾರ, ಕರ್ನಾಟಕ ಮತ್ತು ತೆಲಂಗಾಣದ ತಲಾ ಮೂರು ಸಂಸದರ ಮೇಲೆ ಈ ಕೇಸುಗಳಿವೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಸಂಸದರಿದ್ದು, ಈ ರಾಜ್ಯಗಳು ತೃತೀಯ ಸ್ಥಾನ ಪಡೆದಿವೆ.  ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್‌ನಿಂದ ತಲಾ ಒಬ್ಬ ಸಂಸದರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ದ್ವೇಷ ಕಾರುವ ಭಾಷಣ ಮಾಡುವ ಶಾಸಕರ ಪೈಕಿ ತಲಾ ಒಂಬತ್ತು ಮಂದಿ ಬಿಹಾರ ಮತ್ತು ಉತ್ತರ ಪ್ರದೇಶದವರಾಗಿದ್ದು, ಈ ರಾಜ್ಯಗಳು ಶಾಸಕರ ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಪಡೆದಿವೆ.

ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದ ಆರು ಶಾಸಕರು ತಮ್ಮ ರಾಜ್ಯಗಳನ್ನು ದ್ವಿತೀಯ ಸ್ಥಾನಕ್ಕೆ ತಂದಿದ್ದಾರೆ, ಅಸ್ಸಾಂ ಮತ್ತು ತಮಿಳುನಾಡಿನ ತಲಾ ಐವರು ಹಾಗೂ ದೆಹಲಿ, ಗುಜರಾತ್, ಪಶ್ಚಿಮ ಬಂಗಾಳದ ತಲಾ ನಾಲ್ಕು ಜನ ಶಾಸಕರು ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಜಾರ್ಖಂಡ್ ಮತ್ತು ಉತ್ತರಾಖಂಡದಿಂದ ತಲಾ ಮೂವರು ಶಾಸಕರು, ಕರ್ನಾಟಕ, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರದ ತಲಾ ಇಬ್ಬರು ಶಾಸಕರು ಹಾಗೂ ಮಧ್ಯಪ್ರದೇಶ, ಒಡಿಶಾದ ತಲಾ ಓರ್ವ ಶಾಸಕರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಫಿಡವಿಟ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.

ಎಡಿಆರ್‌ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ದ್ವೇಷ ಭಾಷಣದ ಪ್ರಕರಣವನ್ನು ಹೊಂದಿರುವ ಒಟ್ಟು 480 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗಳು, ಲೋಕಸಭೆ ಮತ್ತು ರಾಜ್ಯಸಭೆಯ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ.

“ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಮತೀಯ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯಗಳನ್ನು ಎಸಗುವ ಆರೋಪ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಪಕ್ಷಗಳು ಗುಂಪುಗಳ ನಡುವೆ ಹಿಂಸಾಚಾರ – ಕೋಮುಗಲಭೆಯಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ,” ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿ ದ್ವೇಷ ಭಾಷಣ ಸ್ಪರ್ಧೆಯ ವಿಜೇತರು ಯಾರ್ಯಾರು?

ಕರ್ನಾಟಕದಲ್ಲಿ ಕಾರ್ಕಳ ಶಾಸಕ ವಿ ಸುನೀಲ್‌ ಕುಮಾರ್‌ ಅವರ ಮೇಲೆ ದ್ವೇಷಕಾರಿ ಭಾಷಣಕ್ಕಾಗಿ IPC Sections – 153A, 505A ಅಡಿಯಲ್ಲಿ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (FIR No. – Crime No.16/2018)

ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರ ಮೇಲೆ ಎಂಟು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಶ್ಲೀಲ ಪುಸ್ತಕ, ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ IPC Section-292, ಮಹಿಳೆಯ ಮೇಲೆ ಹಲ್ಲೆ IPC Section-354B, ಲೈಂಗಿಕ ದೌರ್ಜನ್ಯ IPC Section-354A, ಮೋಸ IPC Section420, ಫೋರ್ಜರಿ IPC Section-468, ಲಂಚ IPC Section-171B ಇತ್ಯಾದಿ ಕೇಸುಗಳೂ ಮುನಿರತ್ನ ಮೇಲೆ ದಾಖಲಾಗಿವೆ.

“ದ್ವೇಷ ಭಾಷಣವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಸಂಕೀರ್ಣ ಸವಾಲು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸಲು ಐಪಿಸಿಯಲ್ಲಿ ಹೊಸ ನಿಬಂಧನೆಗಳನ್ನು ಸೇರಿಸುವ ಅಗತ್ಯವಿದೆ. IPC, 1860 ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 (the Code of Criminal Procedure, 1973) ಗೆ ತಿದ್ದುಪಡಿಗಳು, ಕೆಲವು ಪ್ರಕರಣಗಳಲ್ಲಿ ಹಿಂಸಾಚಾರದ ಪ್ರಚೋದನೆಯನ್ನು ‘ದ್ವೇಷಕ್ಕೆ ಪ್ರಚೋದನೆಯನ್ನು ನಿಷೇಧಿಸುವುದು – Prohibiting incitement to hatred’ ಎಂಬ ಹೊಸ ನಿಬಂಧನೆಗಳನ್ನು ಸೇರಿಸುವ ಮೂಲಕ IPC ಸೆಕ್ಷನ್ 505 ಅನ್ನು ಅನುಸರಿಸಿ, ಮತ್ತು ಅದಕ್ಕೆ ಅನುಗುಣವಾಗಿ CrPC ಯ ಮೊದಲ ಪರಿಚ್ಛೇದದಲ್ಲಿ ತಿದ್ದುಪಡಿ ಮಾಡಬೇಕು,” ಎಂಬ ಕಾನೂನು ಆಯೋಗದ ವರದಿಯ ಶಿಫಾರಸ್ಸನ್ನು ಎಡಿಆರ್‌ ವರದಿ ಒಪ್ಪಿಕೊಂಡಿದೆ.

ಚುನಾವಣೆಯ ಮೊದಲು, ಚುನಾವಣಾ ಸಮಯದಲ್ಲಿ ಮತ್ತು ನಂತರ ದ್ವೇಷಪೂರಿತ ಭಾಷಣ ಮಾಡುವ ಅಭ್ಯರ್ಥಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. “ಕಾನೂನುಬಾಹಿರ” ಹೇಳಿಕೆಗಳನ್ನು ನೀಡಲು ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅದು ಎಡಿಆರ್ ಹೇಳಿದೆ. “ಆದ್ದರಿಂದ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿರುವ ಇಂತಹ ಕಾನೂನುಬಾಹಿರ ಹೇಳಿಕೆಗಳನ್ನು ಪರಿಶೀಲಿಸಬೇಕು ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಬೇಕು” ಎಂದು ಎಡಿಆರ್ ಶಿಫಾರಸು ಮಾಡಿದೆ.

ಹನಿಟ್ರಾಪ್ ಗೆ ಯತ್ನ ; ಶಾಸಕ ತಿಪ್ಪಾರೆಡ್ಡಿ ಕಡೆಯಿಂದ ದೂರು ದಾಖಲು
ಹನಿಟ್ರಾಪ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಪರಿಚಿತ ಯುವತಿಯ ಕಡೆಯಿಂದ ಬಂದ ವಿಡಿಯೋ ಕಾಲ್ ಗಮನಿಸಿದಾಗ ಹನಿಟ್ರಾಪ್ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಶಾಸಕ ತಿಪ್ಪಾರೆಡ್ಡಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಸಕರ ಮೊಬೈಲ್ ಗೆ ವಿಡಿಯೋ ಕರೆ ಮಾಡಿ ಅಶ್ಲೀಲವಾಗಿ ಯುವತಿ ಮಾತನಾಡಿದ್ದಾರೆ. ಅನಿರೀಕ್ಷಿತವಾಗಿ ಬಂದ ಈ ಕರೆಯ ಬಗ್ಗೆ ಶಾಸಕ ತಿಪ್ಪಾರೆಡ್ಡಿಗೆ ಅನುಮಾನ ಬಂದು ಕರೆ ಸ್ಥಗಿತಗೊಳಿಸಿದ್ದಾರೆ. ಆದರೆ ಆ ಕಡೆಯಿಂದ ಕರೆ ಮಾಡಿದ ಯುವತಿ ಮತ್ತೆ ಮತ್ತೆ ಮೂರು ಬಾರಿ ಕರೆ ಮಾಡಿದ್ದು, ಇದರಿಂದ ಇರಿಸುಮುರಿಸುಗೊಂಡ ಶಾಸಕರು ಕರೆಯನ್ನು ನಿರಾಕರಿಸಿದ್ದಾರೆ.

ಈ ಸಂಬಂಧ ಐಟಿ ಕಾಯ್ದೆಯ 66(ಎ) ಅಡಿಯಲ್ಲಿ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಈ ವಿಡಿಯೋ ಕರೆಯು ರಾಜಸ್ಥಾನ ಅಥವಾ ಒಡಿಶಾ ಕಡೆಯಿಂದ ಬಂದಿರಬಹುದು ಎಂಬ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಶೀಘ್ರ ತನಿಖೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಸ್ಸಿ ಎಸ್ಟಿ ಸಮುದಾಯವರಿಗೆ ನ್ಯಾಯ ಕೊಡಿಸುತ್ತೇನೆ: ಸಿಎಂ ಬೊಮ್ಮಾಯಿ
ಹೊಸಪೇಟೆ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯವರ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಈ ಸಮುದಾಯಗಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಡಾ. ಪುನಿತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಸಂಕಲ್ಪ ಯಾತ್ರೆ ಯನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಭಯವಿಲ್ಲ. ನಮ್ಮ ಸರ್ಕಾರ ರೈತ ಕೂಲಿಕಾರ್ಮಿಕರಿಗೆ, ನೇಕಾರರು, ಮೀನುಗಾರರು, ಟ್ಯಾಕ್ಸಿ ಹಾಗೂ ಆಟೋಚಾಲಕರ ಮಕ್ಕಳಿಗೂ ವಿದ್ಯಾನಿಧಿ ಕೊಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಬಡಿಗರು, ಕಮ್ಮಾರರು, ವಿಶ್ವಕರ್ಮರು, ಮೇದಾರರು ಸೇರಿದಂತೆ ಕುಶಲಕರ್ಮಿಗಳಿಗೆ 50 ಸಾವಿರ ಧನಸಹಾಯ ನೀಡಲಾಗುತ್ತಿದೆ. ಜಗಜೀವನರಾಂ ಹೆಸರಿನಲ್ಲಿ 100 ಯುವಕರಿಗೆ ಸ್ವಯಂ ಉದ್ಯೋಗ, ಸ್ತ್ರೀಶಕ್ತಿ ಸಂಘಗಳಿಗೆ ಸ್ತ್ರೀಸಾಮರ್ಥ್ಯ ಯೋಜನೆಯಡಿ 5 ಲಕ್ಷ ಮಹಿಳೆಯರಿಗೆ ಉದ್ಯೋಗ, ಯುವಕರ ಸಂಘಕ್ಕೆ ಆರ್ಥಿಕ ನೆರವು ನೀಡಿ, ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ 5 ಲಕ್ಷ ಯುವಕರಿಗೆ ಉದ್ಯೋಗ ದೊರೆಯಲಿದೆ.

ಈಗ ಜನರಿಗೆ ಭಯವಿಲ್ಲ:

ದೀನದಲಿತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರಿಗೆ ಭಯವಿಲ್ಲ. ಎಸ್ಸಿ ಎಸ್ಟಿ ಸಮುದಾಯವರಿಗೆ ಮೀಸಲಾತಿ ಹೆಚ್ಚಳ ಮಾಡುವ ಬೇಡಿಕೆ ಇದ್ದರೂ ನೀವು ನಿರ್ಧಾರ ಮಾಡಿಲ್ಲ. ನಾವು ನಿರ್ಧಾರ ಮಾಡಿದರೆ ಅದನ್ನು ಪ್ರಶ್ನಿಸುತ್ತೀರಾ. ನಮಗೂ ಕಾನೂನು ಗೊತ್ತಿದೆ.‌ಈ ಸಮುದಾಯಕ್ಕೆ ನ್ಯಾಯ ಕೊಡಿಸಲು ನಾನು ನಿಲ್ಲುತ್ತೇನೆ‌ ಎಂಬ ವಚನ ಕೊಡುತ್ತೇನೆ.
ಬಿಜೆಪಿ ಸರ್ಕಾರದಲ್ಲಿ ದೀನ ದಲಿತರು ಭಯಭೀತರಾಗಿದ್ದಾರೆ‌. ಅಂತ ಹೇಳಿದ್ದಿರಿ, ಆದರೆ ನೀವು ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಪ್ರಯತ್ನ ಮಾಡಿದ್ದಿರಿ ಆಗ ಜನರಿಗೆ ಭಯ ಇತ್ತು. ನಾವು ವೀರಶೈವ ಲಿಂಗಾಯತರನ್ನು ಒಂದಾಗುವಂತೆ ಮಾಡಿದ್ದೇವೆ.
ನಿಮ್ಮ ಕಾಲದಲ್ಲಿ ಕೊಲೆಗಳು ನಡೆಯುತ್ತಿದ್ದವು ಜನರು ಭಯಭೀತರಾಗಿದ್ದರು‌ . ಆ ಭಯ ಈಗ ಇಲ್ಲ ಎಂದರು.

ಏಕ್ ಭಾರತ ಶ್ರೇಷ್ಟ ಭಾರತ:

ಪ್ರಧಾನಿ ನರೇಂದ್ರ ಮೊದಿಯವರು ಏಕ್ ಭಾರತ ಶ್ರೇಷ್ಟ ಭಾರತ ಎಂದು ಹೇಳಿದ್ದಾರೆ‌. ಪ್ರಧಾನಿಮೋದಿಯವರ ನಾಯಕತ್ವದಲ್ಲಿ ದೇಶ ಮುನ್ನಡೆಯಲು ಜನ ಬಯಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು, ನವಕರ್ನಾಟಕ ನಿರ್ಮಾಣಕ್ಕಾಗಿ ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಗೋವಿಂದ್ ಕಾರಜೋಳ, ಶ್ರೀರಾಮುಲು, ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಶೀಲ್ ನಮೋಶಿ, ಶಾಸಕರಾದ ರಾಜು ಗೌಡ, ಬಸವರಾಜ ದಡೆಸುಗೂರು, ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿಗಳು ಸಿದ್ದೇಶ್ ಯಾದವ್, ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಸಿಎಂ ಬೊಮ್ಮಾಯಿ

ವಿಜಯನಗರ: ದಲಿತರ ಆತಿಥ್ಯ ಸ್ವೀಕರಿಸಿದ ಸಿ.ಎಂ ಬೊಮ್ಮಾಯಿ
ಹೊಸಪೇಟೆ: ಇಂದು ಕಮಲಾಪುರ ಗ್ರಾಮದ ಅಂಬೇಡ್ಕರ್ ನಗರದ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಡಗರದ ವಾತಾವರಣ ಮನೆಮಾಡಿತ್ತು. ಅಡುಗೆ ಮನೆಯಲ್ಲಿ ಅವರ ಪುತ್ರಿಯರಾದ ಹುಲಿಗೆಮ್ಮ ಹಾಗೂ ರೇಣುಕಾ ಬೆಳಗಿನ ಉಪಾಹಾರದ ತಯಾರಿಯಲ್ಲಿ ನಿರತರು.

ಕೆಲವೇ ಕ್ಷಣದಲ್ಲಿ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಿ ಕೇಸರಿಬಾತ್, ಮಂಡಕ್ಕಿ ಒಗ್ಗರಣೆ, ಮಿರ್ಚಿ, ಉಪ್ಪಿಟ್ಟಿನ ತಯಾರಿಯಲ್ಲಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್ ಅವರೊಂದಿಗೆ ಆಗಮಿಸಿದ ಮುಖ್ಯಮಂತ್ರಿಗಳು ಕಮಲಾಪುರ ಅಂಬೇಡ್ಕರ್ ನಗರದ ದಲಿತ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸವಿದರು.

ಕೊಲ್ಲಾರಪ್ಪ ಕುಟುಂಬದವರೊಂದಿಗೆ ಕುಶಲೋಪರಿ ವಿಚಾರಿಸಿ, ಕೊಲ್ಲಾರಪ್ಪ ನವರ ಮೊಮ್ಮಗಳು ಅಶ್ವಿನಿ ತಡಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿಷಯ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅವಳ ಶಿಕ್ಷಣ, ಕಾಲೇಜು ವಾತಾವರಣ ಮೊದಲಾದ ಕುರಿತು ಮಾಹಿತಿ ಪಡೆದರು.

ಕಾಲೇಜು ಚೆನ್ನಾಗಿದೆ, ಆದರೆ ಮೆಸ್ ಬಿಲ್ ದುಬಾರಿ ಎಂದು ಆಕೆ ಮುಖ್ಯಮಂತ್ರಿಯವರ ಗಮನ ಸೆಳೆದಾಗ ಇದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ಮನೆಯವರು ಪ್ರೀತಿಯಿಂದ ಉಣಬಡಿಸಿದ ಉಪಾಹಾರ, ಚಹಾ ಸೇವಿಸಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.

ಬಿಬಿಎಂಪಿ ಶಾಲೆಯ ಭೂ ಕಬಳಿಕೆ: ಬಿಜೆಪಿ ಶಾಸಕ ಎಂ.ಚಂದ್ರಪ್ಪ ವಿರುದ್ಧ ಲೋಕಾಯುಕ್ತಕ್ಕೆ ಎಎಪಿ ದೂರು
ಕೆಂಗೇರಿಯ ಸರ್. ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಿಬಿಎಂಪಿಯ ಕನ್ನಡ ಶಾಲೆಗೆ ಮಂಜೂರಾಗಿದ್ದ 20 ಕೋಟಿ ರೂ. ಮೌಲ್ಯದ ನಿವೇಶನವನ್ನು ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಕಬಳಿಸಿದ್ದಾರೆಂದು ಆರೋಪಿಸಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್‌ ಅಧಿಕಾರಿ ಕೆ.ಮಥಾಯಿಯವರು ಲೋಕಾಯುಕ್ತರಿಗೆ ದೂರು ನೀಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಮಥಾಯಿ, “ಕೆಂಗೇರಿ ಉಪನಗರದದಲ್ಲಿರುವ ಸರ್. ಎಂ.ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನಲ್ಲಿರುವ ಬಿಡಿಎಗೆ ಸೇರಿದ 25,225 ಚದರ ಅಡಿ ವಿಸ್ತೀರ್ಣದ ಸಿಎ ನಿವೇಶನವನ್ನು ಫೆಬ್ರುವರಿ 2, 2010ರಂದು ಬಿಬಿಎಂಪಿಯ ಕನ್ನಡ ಶಾಲೆಗೆ ಹಂಚಿಕೆ ಮಾಡಲಾಗಿತ್ತು. ಜುಲೈ 17, 2010ರಂದು ಶಾಲೆಗೆ ಹಂಚಿಕೆ ಪತ್ರವನ್ನು ಕೂಡ ನೀಡಲಾಗಿತ್ತು. ಆದರೆ ಅಲ್ಲಿ ಶಾಲೆ ನಿರ್ಮಿಸುವುದಾಗಿ ಹೇಳಿದ್ದ ಶಾಸಕ ಎಂ.ಚಂದ್ರಪ್ಪರವರು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪನವರ ಸಹಾಯದಿಂದ ನಿವೇಶನವನ್ನು ತಮ್ಮ ಹೆಸರಿಗೆ ಕಾನೂನುಗಳನ್ನು ಗಾಳಿಗೆ ತೂರಿ ವರ್ಗಾಯಿಸಿಕೊಂಡಿದ್ದಾರೆ” ಎಂದು ಹೇಳಿದರು.

“ಈ ನಿವೇಶನಕ್ಕೆ ಮಾರುಕಟ್ಟೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಬೆಲೆಯಿದೆ. ಆದರೆ ಡಿಸೆಂಬರ್ 27, 2021ರಂದು ಬಿಡಿಎಯು ಕೇವಲ 10 ಕೋಟಿ ರೂಪಾಯಿಗೆ ಚಂದ್ರಪ್ಪನವರಿಗೆ ಮಾರಾಟ ಮಾಡಿ, ಶುದ್ಧ ಕ್ರಯಪತ್ರ ನೀಡಲು ನಿರ್ಣಯ ಕೈಗೊಂಡಿದೆ. 2022ರ ಏಪ್ರಿಲ್ 5ರಂದು ಚಂದ್ರಪ್ಪರವರು 1 ಕೋಟಿ ರೂಪಾಯಿಯನ್ನು ಬಿಡಿಎಗೆ ಪಾವತಿಸಿದ್ದಾರೆ. ಚಂದ್ರಪ್ಪರವರಿಗೆ ಸಿಎ ನಿವೇಶನ ಮಂಜೂರಾಗದೇ ಇದ್ದರೂ ಬದಲಿ ನಿವೇಶನ ನೀಡಲಾಗಿದೆ. ಕಳೆದ 11 ವರ್ಷಗಳಿಂದ ಚಂದ್ರಪ್ಪರವರು ಈ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದು, ಅಲ್ಲಿ ಸಿಮೆಂಟ್‌ ಇಟ್ಟಿಗೆ ತಯಾರಿಸಲಾಗುತ್ತಿದೆ” ಎಂದು ಕೆ.ಮಥಾಯಿ ಹೇಳಿದರು.

ಸ್ಥಳೀಯ ಆಮ್‌ ಆದ್ಮಿ ಪಾರ್ಟಿ ಮುಖಂಡ ರಾಹುಲ್‌ ಧರ್ಮಸೇನಾ ಮಾತನಾಡಿ, “ಬಿಜೆಪಿ ಶಾಸಕ ಚಂದ್ರಪ್ಪರವರ ಈ ಹಗರಣದಿಂದಾಗಿ ಬಿಡಿಎ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸರ್ಕಾರದ ಅಮೂಲ್ಯ ಸ್ವತ್ತು ಶಾಸಕರ ಪಾಲಾಗಿದೆ. ಶಾಸಕರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸಬೇಕು. ಕನ್ನಡ ಶಾಲೆಯ ಸ್ವತ್ತಿನ ದುರ್ಬಳಕೆಗೆ ಅವಕಾಶ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ವಿರುದ್ಧವೂ ಸೂಕ್ತ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.

ಸಿ.ಟಿ ರವಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಚಿಕ್ಕಮಗಳೂರು: ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತು ಅವಾಚ್ಯವಾಗಿ ನಿಂದಿಸಿದ್ದರು.

ಈ ಕುರಿತು ಚಿಕ್ಕಮಗಳೂರಿನಲ್ಲಿ ಕಾಂಗ್ರೇಸ್‌ ಕಾರ್ಯಕರ್ತರು ಶಾಸಕ ಸಿ.ಟಿ. ರವಿ ಅವರ ವಿರುದ್ದ ಅವಾಚ್ಯವಾಗಿ ಮಾತನಾಡಿದ್ದನ್ನು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ವಿರುದ್ಧ ಲೋಕಾಯುಕ್ತಕ್ಕೆ ದೂರು
ಬೆಂಗಳೂರು: ಕೆಂಗೇರಿಯ ಬಿಬಿಎಂಪಿ ಶಾಲೆ ನಿರ್ಮಾಣಕ್ಕೆ ಮಂಜೂರಾಗಿದ್ದ ಭೂಮಿಗೆ ಸಂಬಂಧಿಸಿದ ಹಗರಣದಲ್ಲಿ ನೇರ ಪಾತ್ರಧಾರಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ವಿರುದ್ಧ ಇಂದು ಮಧ್ಯಾಹ್ನ 3.30 ಗಂಟೆಗೆ ಮಾನ್ಯ ಲೋಕಾಯುಕ್ತರ ಬಳಿ ಎಲ್ಲಾ ದಾಖಲೆಗಳ ಸಮೇತ ಮಾಜಿ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ವಕ್ತಾರ ಕೆ. ಮಥಾಯಿಯವರ ನೇತೃತ್ವದಲ್ಲಿ ದೂರನ್ನು ಸಲ್ಲಿಸಲಾಗುತ್ತಿದೆ ಎಂದು ಸುದ್ದಿ ಮೂಲಗಳು ತಿಳಿಸುವೆ.