modiji – Peepal Media

ನಮೋ ಮಂತ್ರ ಜಪಿಸಲು ವಿಸ್ಮೃತಿ ಈರಾಣಿ ಜಾಗಕ್ಕೆ ಟಾವೆಲ್‌ ಹಾಕಿದ ಮಂಗನಾ ಶೇಫೌಟ್‌ (ರಾಜಕೀಯ ವಿಡಂಬನೆ)
*ಚಂದ್ರಪ್ರಭ ಕಠಾರಿ

ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂದರ್ಶನದ ಅಂಗವಾಗಿ ʼಹಾರರ್ ನ್ಯೂಸ್ʼ ಟಿವೀ ಚಾನೆಲ್ಲಿನ ಮುಖ್ಯ  ಸಂಪಾದಕ ಬಕೆಟ್ ಗೋಸ್ವಾಮಿ ಕುಳಿತ ಕುರ್ಚಿಯಲ್ಲೇ ಬ್ರೇಕ್ ಡ್ಯಾನ್ಸ್ ಮಾಡಲು ಸ್ಟುಡಿಯೊದಲ್ಲಿ ಕೈಕಾಲುಗಳನ್ನು ಗಾಳಿಯಲ್ಲಿ ಜಾಡಿಸುತ್ತ ತಾಲೀಮು ನಡೆಸಿದ್ದ. ಆದರೆ, ಎಷ್ಟು ಹೊತ್ತಾದರೂ ಮೇಕಪ್ ರೂಮಿನಿಂದ ಹೊರಬರದ ನಮೋ ಆಸ್ಥಾನದ ಹೊಸ ಮಂತ್ರಿ, ನಟಿಮಣಿ ಮಂಗನಾ ಶೇಪೌಟ್ ಹೊರಬರದಿದ್ದಾಗ ಕುಳಿತ ಚೇರಿಗೆ ಅಂಟಿಸಿದ್ದ ಮುಳ್ಳುಗಳು ಚುಚ್ಚಿ, ಕೂರಲು ಆಗದೆ ಡ್ಯಾನ್ಸ್ ಆರಂಭಿಸುವಂತಾಗಿತ್ತು.

ಬಾಲಿವುಡ್ಡಿನಲ್ಲಿ ನಟಿಸುತ್ತಲೇ, ಶೂಟಿಂಗ್ ನಡುವೆ ವಿರಾಮ ಸಿಕ್ಕಾಗೆಲ್ಲ ಜಪಸರ ಹಿಡಿದು ʼನಮೋ…ನಮೋ…ನಮೋʼ ಎಂದು ಜಪಿಸುತ್ತ ಸಾಮ್ರಾಟನ ಅಖಂಡಭಕ್ತಳಾಗಿದ್ದ ಮಂಗನಾಳಿಗೆ ಮಂತ್ರಿಗಿರಿ ಸಿಕ್ಕಿದ್ದು ಬರೀ ಭಜನೆಯಿಂದಲ್ಲ. ಅದಕ್ಕೆ ಹರುಕುಬಾಯಿಯಲ್ಲಿ ಅವಳ ಹಿರಿಯಕ್ಕನಂತಿದ್ದ ಮಾಜಿಮಂತ್ರಿ ವಿಸ್ಮೃತಿ ಈರಾಣಿಯೂ ಕಾರಣ.

ಸಿಲಿಂಡರ್ ರಾಣಿ ಎಂದೇ ಕುಖ್ಯಾತಿಯಾಗಿದ್ದ ವಿಸ್ಮೃತಿ ಈರಾಣಿ ಜನಾದೇಶದಲ್ಲಿ ಸೋತು, ಸಾಮ್ರಾಟ ನಮೋ ವಿರೋಧಿಗಳ ಎಲೆಅಡಿಕೆ ತಾಂಬೂಲಕ್ಕೆ ಸುಣ್ಣವಾಗಿದ್ದು ಈಗ ಇತಿಹಾಸ. ಭಾರೀ ಬಹುಮತದಲ್ಲಿ ಗೆಲ್ಲುತ್ತೇನೆಂದು ದೆವ್ವ ಮೆಟ್ಟಿದವಳಂತೆ ಕುಣಿಯುತ್ತಿದ್ದವಳಿಗೆ ಜನರು ಗಂಜಲ ಎರಚಿ ಎಚ್ಚರಿಸಿ, ಮುಖಕ್ಕೆ ಮಂಗಳಾರತಿ ಎತ್ತಿ ʼಗಂಟೆಮೂಟೆ ಕಟ್ಟಿ ಹೊರಡುʼ ಎಂದದ್ದು ಈರಾಣಿಗೆ ಕನಸಿನಲ್ಲಿಯೂ ಎಣಿಸದ ಸಂಗತಿಯಾಗಿತ್ತು. ಅವಳೇನೊ ರಾತ್ರೋರಾತ್ರಿ ಸೋಲಿನ  ಅಪಮಾನದಿಂದ ಸೆರಗಲ್ಲಿ ಮುಖ ಮುಚ್ಚಿ, ʼಹೋಂ ಸ್ವೀಟ್ ಹೋಂʼ ಎಂದು ಮನೆದಾರಿ ಹಿಡಿದಿದ್ದಳು. ಆದರೆ – ಸಾಮ್ರಾಟ ನಮೋನನ್ನು ಹೊಗಳಿ ಅಟ್ಟಕ್ಕೇರಿಸಲು, ವಿರೋಧಿಗಳನ್ನು ಮಣಿಸಲು ಬಾಯಿ ಬಡಿದುಕೊಳ್ಳುವ ನಾರಿಮಣಿಗಳೇ ಕಮಲಪಕ್ಷದಲ್ಲಿ ಇಲ್ಲವಾಗಿ ಪರಿಸ್ಥಿತಿ ದಯನೀಯವಾಗಿತ್ತು.

ಹರುಕು ಬಾಯಿಯ ಸ್ಥಾನ ಖಾಲಿ ಬಿಡಬಾರದೆಂದು ವಿಧಿ ಇಲ್ಲದೆ, ಡಾಬರ್ ಮನ್ ತಳಿ ಅಲ್ಲದ ಪೊಮೆರಿಯನ್ ಜಾತಿಯ ಮಂಗನಾ ಶೇಪೌಟ್ ಳನ್ನು ಬೊಗಳೊ ಮಂತ್ರಿಯನ್ನಾಗಿ ನೇಮಕ ಮಾಡಲಾಯಿತು. ಕೆಸರು ಮೆತ್ತಿಕೊಂಡ ಕೆಲ ಕಮಲೀಗಳು ಇದ್ದರಾದರೂ ಮಂಗನಾಳನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಅವಳ ಬೇವ್ಕೂಫಿತನ. ಕಿರಿಗಂಟಲಿನಿಂದ ಹೊರಡುವ ಅಸಂಬದ್ಧ ಪ್ರಲಾಪಗಳಿಗೆ ಡಾಲ್ಬಿ ಸೌಂಡ್ ಎಫೆಕ್ಟ್ ಇರದಿದ್ದರೂ, ಬಳಸುವ ಪದಗಳ ಗುರುತ್ವ ಅಗಾಧವಾಗಿದ್ದು ಅಟ್ಮೊಸ್ ಸೌಂಡಿಗೆ ಸರಿಸಮವಾಗಿತ್ತು.

ಕೊನೆಗೂ ಸ್ಟುಡಿಯೊಗೆ ಹಂಸದಂತೆ ಬಳುಕುತ್ತ ಮಂಗನಾಳು ಬಂದಾಗ, ʼಆಕಾಶದಿಂದ ಧರೆಗಿಳಿದ ಗೊಂಬೆ…ಇವಳೇ…ಇವಳೇ ಚಂದನದ ಗೊಂಬೆʼ ಎಂಬ ಹಾಡು ಬಕೆಟ್ ಗೋಸ್ವಾಮಿಯ ಕಿವಿಯಲ್ಲಿ ಮಾರ್ದನಿಸಿ ಮೈಯಲ್ಲಿ ಕರೆಂಟ್ ಪಾಸಾಯಿತು.

ಬಕೆಟ್ ಸ್ವಾಮಿ: ಪ್ಲೀಸ್…ಟೇಕ್ ಯುರ್ ಸೀಟ್…

ಮಂಗನಾ: ಧನ್ಯವಾದ್…ಬಕೆಟ್ ಜೀ.

ಬಕೆಟ್ ಸ್ವಾಮಿ: ಇಂಟರ್ ವ್ಯೂ…ಶುರುಮಾಡೋಕೆ ಮುಂಚೆ ಒಂದು ಪ್ರಶ್ನೆ. ಆಫ್ ದ ರೆಕಾರ್ಡ್…ಅದೇನು ನಿಮ್ಮ ಹೆಸ್ರು…ಮಂಗ…ಸಾರಿ…ಮಂಗನಾ…ಶೇಪೌಟ್ ಅಂತ ಬೇರೆ ಸೇರಿಸ್ಕೊಂಡಿದ್ದೀರ?

ಮಂಗನಾ: (ಮಲ್ಲಿಗೆಯ ನಗೆ ಚೆಲ್ಲುತ್ತ) ಅದು…ನಮ್ಮನೇಲಿ ಇಟ್ಟ ಹೆಸ್ರು….ನಂದು ಕೋತಿ ಬುದ್ದಿ ಅಂತ… ಶೇಪೌಟ್ ಅಂದರೆ ನನ್ನ ಶೇಪು…ಔಟ್ ಟು ದಿ ಸ್ಟಾಂಡಿಂಗ್ ಅಂತ.

ಬಕೆಟ್ ಸ್ವಾಮಿ: (ಅಣಕಿಸುವಂತೆ) ಸೊ ವಿಯರ್ಡ್…!

ಮಂಗನಾ: (ಕೋಪಗೊಂಡು) ನಿಮ್ ಹೆಸ್ರು…ಭಾರೀ ಚೆಂದಾನ…ಬಕೆಟ್ ಅಂತೆ…ಪ್ಲಾಸ್ಟಿಕ್ದಾ ಅಥ್ವಾ ಐರನ್ದಾ?

ಬಕೆಟ್ ಸ್ವಾಮಿ: (ದೇಶಾವರಿ ನಗೆ) ಎರಡು ಅಲ್ಲ…ಅದು ತಾಮ್ರದ್ದು… ನಮೋ ಸಾಹೇಬರಿಗೆ ಹೆಚ್ಚು ಬಕೆಟ್ ಹಿಡಿಯೋದು ನಾನೇ! ʼಬಕೆಟ್ ಸ್ವಾಮಿʼ ಅವರೇ ಕೊಟ್ಟ ಬಿರುದು. ಇರಲಿ…ಇಂಟರ್ ವ್ಯೂ ಶುರು ಮಾಡೋಣ್ವ?

ಹಿಂಬದಿಯ ಎಲ್ಇ‌ಡಿಯ ದೊಡ್ಡ ಪರದೆಯಲ್ಲಿ “ಸಾಮ್ರಾಟ್ ನಮೋ ಅಮರ್ ಹೈ…ವಿಶ್ವಗುರು ಜಿಂದಾಬಾದ್…ಫೇಕ್ ಫಕೀರನಿಗೆ ಜಯವಾಗಲಿ” ಎಂದು ಬೃಹತ್ತಾದ ಸ್ಟೇಡಿಯಮ್ ನಲ್ಲಿ ಗುಡ್ಡೆ ಹಾಕಿದ್ದ ಸಾವಿರಾರು ಭಕ್ತಗಣಗಳು ಜೈಕಾರ ಹಾಕುತ್ತಿರುವ ದೃಶ್ಯಾವಳಿಯು ಬಿತ್ತರಿಸಲಿತ್ತು.

ಬಕೆಟ್ ಸ್ವಾಮಿ: ಹಾರರ್ ನ್ಯೂಸ್ ಚಾನೆಲ್ಲಿನ ಸಮಸ್ತ ಭಕ್ತ ವೀಕ್ಷಕರಿಗೆ ಎಪ್ಪತ್ತೆಂಟನೇ ಸ್ವಾತಂತ್ರೋತ್ಸದ ಶುಭಾಶಯಗಳು. ಇವತ್ತಿನ ನಮ್ಮ ವಿಶೇಷ ಸಂದರ್ಶನದಲ್ಲಿ ನಿಮ್ಮೆಲ್ಲರ ಮತ್ತು ಸಾಮ್ರಾಟರ ಮೆಚ್ಚಿನ ಮಂಗನಾ ಶೇಪೌಟ್….

ಮಂಗನಾ: ಸಾರಿ…ಒಂದ್ ಸೆಕೆಂಡ್…ಇದು ದೇಶದ ಹತ್ತನೇ ಸ್ವಾತಂತ್ರೋತ್ಸವ…

ಬಕೆಟ್ ಸ್ವಾಮಿ: ಮರೆತಿದ್ದೆ…ಥ್ಯಾಂಕ್ಸ್…ನಮೋ ಸಾಹೇಬರು ಕೊಟ್ಟ ಹತ್ತನೇ ದ್ವಿತೀಯ ಸ್ವಾತಂತ್ರೋತ್ಸದ ಶುಭಾಶಯಗಳು.

ಮಂಗನಾ: ಹೌದು…ದೇವಾಂಶ ಸಂಭೂತ ನಮೋರು ಅವತರಿಸದಿದ್ದರೆ ನಾವೆಲ್ಲ ಗುಲಾಮರಾಗಿ ಬಾಳ ಬೇಕಾಗಿತ್ತು. ಹೊಟ್ಟೆಗೆ ಪಿಜ್ಜಾ, ಬರ್ಗರ್ ಇಲ್ಲದೆ…ತೊಡಲು ಮೇಡಮ್, ಬಿಬಾ, ಜಾರ ಕ್ಲೋತಿಂಗ್ ಇಲ್ಲದೇ…ಮ್ಯಾನ್ ಷನ್ ಇಲ್ಲದೆ ಜೋಪಡಿಯಲ್ಲಿ ಅನಾಥರಂತೆ ಇರಬೇಕಿತ್ತು.

ಬಕೆಟ್ ಸ್ವಾಮಿ: ಯೆಸೆಸ್…ಮಂಗನಾ ಅವರೇ…ಎಂದಿನಿಂದ ನಿಮಗೆ ನಮೋ ದೇವರು ಮತ್ತು ಹೇಗೆ ಸ್ಪೂರ್ತಿ?

ಮಂಗನಾ: ಅದೊಂದು ಬ್ಯೂಟಿಫುಲ್ ಎಕ್ಸ್ ಪಿರೀಯನ್ಸ್…ಒಂದಾದ ಮೇಲೊಂದರಂತೆ ನನ್ನ ಸಿನಿಮಾಗಳು ತೋಪೆದ್ದು ಮಕಾಡೆ ಮಲಗುತ್ತಿದ್ದಾಗ,  ಕಾಲ್ ಶೀಟ್ ಕೇಳೋರು ಗತಿ ಇಲ್ಲದೆ ಏನು ಮಾಡುವುದೆಂದು ತೋಚದೆ ಡಿಪ್ರೆಶನ್ನಿಗೆ ಹೋಗಿದ್ದೆ. ಒಂದು ರಾತ್ರಿ ಮಲಗಿದ್ದಾಗ “ಮಂಗಾ! ಎದ್ದೇಳು ನಿನ್ನ ಕಷ್ಟಗಳು ಮಾಯವಾಗುವ ದಿನಗಳು ಹತ್ತಿರದಲ್ಲಿದೆ” ಎಂದು ಯಾರೋ ಕೂಗಿದ ಹಾಗಾಯ್ತು. ಭಯದಿಂದ ಎದ್ದರೆ, ನಮೋ ಭಗವಾನರು ಸಾಕ್ಷಾತ್ ವಿಷ್ಣುವಿನ ಹನ್ನೊಂದನೇ ಅವತಾರದಲ್ಲಿ ಗಡ್ಡ ನೀವುತ್ತ ನಿಂತಿದ್ದರು.

ಬಕೆಟ್ ಸ್ವಾಮಿ: (ಸ್ವಗತ – ನಾನೇ ರೀಲ್ ಮಾಸ್ಟರ್ ಅಂದ್ರೆ ಇವ್ಳು ನನ್ನೇ ಮೀರಿಸ್ತಾಳೆ…ಏನ್ ಸೂಪರ್ ಆಕ್ಟಿಂಗ್!)

ಖಂಡಿತ…ಅವರು ದೇಶವನ್ನು ಕಾಪಾಡಲು ಬಂದ ಅವತಾರ ಪುರುಷ. ಅವರ ಮಾತಲ್ಲೇ ಹೇಳೋದಾದರೆ…ಕೋಟ್…ನಾನು, ನನ್ನ ಅಮ್ಮನ ಹೊಟ್ಟೇಲಿ ಹುಟ್ಟಿಲ್ಲ. ನಾನು, ನಾನ್ ಬಯೊಲಾಜಿಕಲ್ ಬಾರ್ನ್…ನನ್ನನ್ನು ಈ ಭೂಮಿಗೆ ಆಕಾಶದಿಂದ ದೇವರೇ ಸೀದಾ ಉದುರಿಸಿದ್ದು….ಅನ್ ಕೋಟ್…ಇಂಟೆರೆಸ್ಟಿಂಗ್…ಆಮೇಲೆ…

ಮಂಗನಾ: ಆವತ್ತಿನಿಂದ ಅವರನ್ನು ಜಪಮಾಲೇಲಿ ಸ್ತುತಿಸುತ್ತ ಭಕ್ತಿಯ ಸಾಗರದಲ್ಲಿ ಜಂಪ್ ಮಾಡಿ…         ವೇವ್ಸ್ ಗಳಲ್ಲಿ ಮುಳುಗಿ ಏಳುತ್ತಿದ್ದೇನೆ…ಓಂ ನಮೋ ( ಕಣ್ಮುಚ್ಚಿ, ಕೆನ್ನೆ ಬಡಿದುಕೊಂಡು ವಂದಿಸಿದಳು)

ಬಕೆಟ್ ಸ್ವಾಮಿ: ಹೌದೌದು…ನನಗೂ ಆಗಾಗ ಖುದ್ದಾಗಿ ಬಂದು ಪೆಡಿಗ್ರೆ ಬಿಸ್ಕತ್ ಹಾಕಿ ಹೋಗ್ತಾರೆ. ಅದಿರಲಿ…ನೀವು ಬಾಲಿವುಡ್ಡು…ಹಾಲಿವುಡ್ಡು…ಟಾಲಿವುಡ್ಡು…ಅಂತ ಎಷ್ಟೊಂದು ವುಡ್ಡುಗಳಲ್ಲಿ ಆಕ್ಟಿಂಗ್ ಮಾಡ್ತಾ ಫೇಮಸ್ ಆಗಿದ್ದೀರಿ…

ಮಂಗನಾ: ವೇಟ್…ಸಧ್ಯಕ್ಕೆ ಬಚ್ಚನ್, ಖಾನ್ ಗಳಿಗಿಂತ ನಾನೇ ಮುಂದು…ನಂಬರ್ ಒನ್ ಆಕ್ಟರ್…

ಬಕೆಟ್ ಸ್ವಾಮಿ: ಓಹ್…ಅಮೇಜಿಂಗ್…ನನ್ನ ಪ್ರಶ್ನೆಯ ಎರಡನೇ ಭಾಗ…ನಮೋ ಭಗವಾನರು ನಿಮಗೆ ಹೇಗೆ ಸ್ಪೂರ್ತಿ? ಆ ಬಗ್ಗೆ ಹೇಳಿ.

ಮಂಗನಾ: ಓಹ್…ಆ ಬಗ್ಗೆ ಏನ್ ಹೇಳೋದು…ಅವರು ಫೆಂಟಾಸ್ಟಿಕ್, ಹಾರಿಬಲ್, ವೆರ್ಸಟೈಲ್ ಆಕ್ಟರ್…ಅವರನ್ನು ಮೀರಿಸೋರು ಜಗತ್ತಲ್ಲೇ ಯಾರೂ ಇಲ್ಲ…ಮುಂದೆ ಹುಟ್ಟೋದು ಇಲ್ಲ. ಮಹಾನ್ ನಟ. ಅವರ ಮುಂದೆ ನಂದು ಯಾವ ಆಕ್ಟಿಂಗ್! ಅವರ ಡ್ರೆಸ್ ಸೆನ್ಸ್…ಮ್ಯಾನರಿಸಮ್…ವಾಯ್ಸ್ ಮಾಡುಲೇಷನ್…ಅಬ್ಬಾ…ನಟ ಭಯಂಕರ…ಅವರಿಂದ ಕಲಿಯೋದು ಬಹಳಷ್ಟಿದೆ. ಅವರನ್ನು ನೋಡಿ ಚೂರುಪಾರು ಕಲೀತಿದ್ದೇನೆ.

ಬಕೆಟ್ ಸ್ವಾಮಿ: ಮತ್ತೆ…ನಮೋ ಅವರಿಗೆ ಆಸ್ಕರ್ ಅವಾರ್ಡ್  ಯಾಕೆ ಇನ್ನು ಸಿಕ್ಕಿಲ್ಲ?

ಮಂಗನಾ: ಓ…ಆಸ್ಕರ್ ಗೆ ನಿಜಕ್ಕೂ ಆ ಯೋಗ್ಯತೆ ಇದ್ಯಾ? ನಮೋ ಅವರಿಗೆ ಕೊಡುವಂಥ ಅವಾರ್ಡ್ ಗಳು ಭೂಮಿ ಮೇಲೆ ಯಾವುದು ಇಲ್ಲ. ಮಂಗಳ ಅಥವಾ ಶನಿಗ್ರಹದಲ್ಲಿ ಹುಡುಕಬೇಕು.

ಬಕೆಟ್ ಸ್ವಾಮಿ: (ಮಾತಾಡುತ್ತ ತನ್ನ ಆಕ್ಟಿಂಗ್ ಮಿಸ್ ಆಗುತ್ತಿರುವುದು ನೆನಪಿಗೆ ಬಂದು, ತಲೆಕೊಡವಿ, ಜೋರಾಗಿ ಮೇಜು ಕುಟ್ಟುತ್ತ) ಮಂಗನಾ ಮೇಡಮ್…ಹಾಗಾದರೆ, ದೇಶದ ಜನರಿಗೋಸ್ಕರ ಜನ್ಮ ತಾಳಿದವನಿಗೆ ವಿರೋಧಿಗಳು ಯಾಕಿದ್ದಾರೆ? ಅವರೆಲ್ಲ ಫೇಕು, ಜುಮ್ಲಾ, ಕಿಂಗ್ ಆಫ್ ಕರಪ್ಷನ್, ಬಾಯಿಹರುಕ ಅಂತೆಲ್ಲಾ ಏಕೆ ಟನ್ ಗಟ್ಟಲೆ ಬೈಯ್ತಿದ್ದಾರೆ?

ಮಂಗನಾ: ಅವರೆಲ್ಲ ದುಷ್ಟರು…ದೇಶದ್ರೋಹಿಗಳು…ನಮೋಬಾಬಾರು ಬಂದ ಮೇಲೆ ದೇಶದಲ್ಲಿ ಬಡತನ ಮಾಯವಾಗಿದೆ. ಆದರೂ ತಿಂಗಳಿಗೆ ಪುಕ್ಕಟೆ ಸಿಗುವ ಐದು ಕೇಜಿ ಅಕ್ಕಿ ತಿಂದು ವಿಷ ಕಾರುತ್ತಿದ್ದಾರೆ… ಬೆಗ್ಗರ್ಸ್…ಹತ್ತುವರ್ಷಗಳ ಹಿಂದೆ  ಭಿಕಾರಿಗಳ ದೇಶ ಎಂದು ಮುಖ ತಿರುಗಿಸುತ್ತಿದ್ದ ಫಾರಿನರ್ಸ್ ಗಳು…ಈಗ ನಮ್ಮ ದೇಶದತ್ತ ಎಗರಿ ಎಗರಿ ನೋಡುತ್ತಿದ್ದಾರೆ.

ಬಕೆಟ್ ಸ್ವಾಮಿ: ಹೌದು…ಹಾಗೆ ನಮೋರ ಬೆಸ್ಟ್ ಫ್ರೆಂಡ್ಸ್ ಗಳಾದ ಅಂದಾನಿ, ತುಂಬಾನಿಯರಂಥ ಮಹನೀಯರನ್ನು ಬಿಡುತ್ತಿಲ್ಲ. ಅವರ ಬಾಯಿಗೆ ನಮೋ ದೇಶವನ್ನು ತುರುಕುತ್ತಿದ್ದಾನೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹಿಂಡನ್ ಬರ್ಗ್ ರಿಪೋರ್ಟ್ ಅಂತೆಲ್ಲ ಕೂಗಾಡುತ್ತಿದ್ದಾರೆ.

ಮಂಗನಾ: ಅಂದಾನಿ ಅಂಕಲ್, ತುಂಬಾನಿ ಅಂಕಲ್ ಗಳು ಇಲ್ಲದಿದ್ದರೆ ಈ ದೇಶವೇ ಇರುತ್ತಿರಲಿಲ್ಲ. ಕೆಲಸವಿಲ್ಲದೆ ಯಂಗ್ ಸ್ಟರ್ ಗಳು ತಿರುಪೆ ಎತ್ತಬೇಕಿತ್ತು. A1 A2 ಅಂಕಲ್ ಗಳಿಂದ ವಿಶ್ವದಲ್ಲೇ ನಮ್ಮ ದೇಶ ಆರ್ಥಿಕತೆಯಲ್ಲಿ ನಂಬರ್ ಒನ್ ರ್ಯಾಂಕ್ ಲ್ಲಿದೆ.

ಬಕೆಟ್ ಸ್ವಾಮಿ: ಮತ್ತೆ ಈ ರಾಗಾ…ನ್ಯಾಯ…ನ್ಯಾಯ ಅಂತ ರಾಗ ತೆಗೀತ್ತಿದ್ದಾನೆ. ಜಾತಿ ಜನಗಣತಿ ಮಾಡಿದ್ರೆ ಮಾತ್ರ ದೇಶೋದ್ಧಾರ ಆಗೋದು ಅಂತಿದ್ದಾನೆ. ಆ ಬಗ್ಗೆ ಬೊಗಳೆ ಮಂತ್ರಿಯಾಗಿ ನಿಮ್ಮ ಒಪಿನಿಯನ್ ಏನು?

ಮಂಗನಾ: ಅಯ್ಯೋ…ರಾಗಾ ಒಬ್ಬ ಶತದಡ್ಡ. ಕಳೆದ ಹತ್ತು ವರ್ಷದಲ್ಲಿ ಸನಾತನ ಬಿಟ್ಟು ಉಳಿದ ಜಾತಿಗಳನ್ನೆಲ್ಲ ನಮೋಬಾಬಾರು ಖತಮ್ ಮಾಡಿದ್ದಾರೆ. ದೇಶದಲ್ಲಿ ಈಗ ಜಾತಿ ಎಲ್ಲಿದೆ? ಮಹಿಳೆ, ಯುವ, ಬಡವರು ಮತ್ತು ರೈತರು – ಇವಿಷ್ಟೇ ಮಾತ್ರ ಜಾತಿಗಳು ಅಂತ ನಮೋಬಾಬಾರೇ ಹೇಳಿಲ್ವೇ?

ಬಕೆಟ್ ಸ್ವಾಮಿ: ಹೌದೌದು…ಕೊನೆಯಲ್ಲಿ ನಮ್ಮ ಭಕ್ತ ವೀಕ್ಷಕರಿಗೆ ಮತ್ತು ದೇಶಕ್ಕೆ ಹತ್ತನೇ ಸ್ವತಂತ್ರ ದಿನಾಚರಣೆಯ ದಿನ ನಿಮ್ಮ ಸಂದೇಶವೇನು?

ಮಂಗನಾ: ನಾನು ಹೇಳೋದಿಷ್ಟು…ತಮ್ಮ ತಪಶ್ಯಕ್ತಿಯಿಂದ ನಮೋ ಭಗವಾನ್ ದೇಶವನ್ನು ಮುಂದಕ್ಕೆ ತಳ್ಳುತ್ತಿದ್ದಾರೆ. ದೇಶವಾಸಿಗಳೆಲ್ಲ ನಮೋ ಭಜನೆ ಮಾಡುತ್ತ, ತಮ್ಮ ಕೈಲಿ ಆದಷ್ಟು ದೇಶವನ್ನು ಮುಂದೆ ತಳ್ಳಬೇಕು. ಅದು ಬಿಟ್ಟು, ನಮೋ ಅವರ ಪೈಜಾಮ ಎಳೆದು ದೇಶದ್ರೋಹಿಗಳಾಗ ಬಾರದು. ಹ…ಮರೆತಿದ್ದೆ. ಮುಂದಿನ ತಿಂಗಳು ನನ್ನ ಹೊಸ ಸಿನಿಮಾ ʼಆಪತ್ಕಾಲ್ʼ ರಿಲೀಸ್ ಆಗ್ತಿದೆ. ಮನೆಮಠ ಎಲ್ಲಾ ಮಾರಿ ಸಿನಿಮಾ ಮಾಡಿದ್ದೇನೆ. ಎಲ್ರೂ ಸಿನಿಮಾ ನೋಡಿ ದೇಶ ಸೇವೆ ಮಾಡ್ಬೇಕು. ʼಮತ್ತೆ ಸಿನಿಮಾ ತೋಪಾದ್ರೆ ಕೈಗೆ ತೆಂಗಿನ ಕರಟ ಗ್ಯಾರಂಟಿ!ʼ ಎಂಬ ಮಂಗನಾಳ ಸ್ವಗತದ ಮಾತುಗಳು –  ಲೈಟುಗಳು ನಂದಿ, ಸ್ಟುಡಿಯೊದ ಕತ್ತಲಲ್ಲಿ ಕರಗಿ ಹೋದವು

ಸಂವಿಧಾನ ಬದಲಿಸಲು ಪ್ರಯತ್ನಿಸಿದರೆ ರಾಜೀನಾಮೆ ನೀಡುತ್ತೇನೆ: ಕೇಂದ್ರ ಸಚಿವ ಅಠವಳೆ
ಭಂಡಾರಾ (ಮಹಾರಾಷ್ಟ್ರ): ಸಂವಿಧಾನವನ್ನು ಬದಲಿಸುವ ಉದ್ದೇಶ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಖಂಡಿತ ಇಲ್ಲ. ಅಂಥ ಒಂದು ಉದ್ದೇಶ ಇದ್ದದ್ದು ಗೊತ್ತಾದರೆ ನಾನು ಅವತ್ತೇ ರಾಜಿನಾಮೆ ನೀಡುತ್ತೇನೆ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಘೋಷಿಸಿದ್ದಾರೆ.

ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುನಿಲ್ ಮೆಂಧೆ ಪರ ಪ್ರಚಾರ ಜಾಥಾದಲ್ಲಿ ಭಾಗವಹಿಸಿದ್ದ ಸಂದರ್ಭಧಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂವಿಧಾನವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ತಳ್ಳಿ ಹಾಕಿದ್ದಾರೆ.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಆರೋಪ ಮಾಡುವ ಮೂಲಕ ಕಾಂಗ್ರೆಸ್‌ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಅವರ ಆರೋಪ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಒಂದು ವೇಳೆ ಸರ್ಕಾರ ಅಂತಹ ಪ್ರಯತ್ನ ನಡೆಸಿದರೆ, ನಾನು ಸಂಪುಟಕ್ಕೆ ರಾಜೀನಾಮೆ ನೀಡುತ್ತೇನೆ. ಅಲ್ಲದೆ, ಬಿಜೆಪಿಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಅದಕ್ಕಾಗಿ, ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದಿದ್ದರು. ಅವರ ಹೇಳಿಕೆಯ ಬಳಿಕ, ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ, ‘ಆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ’ ಎಂದಷ್ಟೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇಲ್ಲಿ ನಮ್ಮವರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನದಿಂದ ಕರೆತಂದು ಉದ್ಯೋಗ ಕೊಡುವುದು ಸರಿಯೇ?: CAA ಕುರಿತು ಕೇಜ್ರಿವಾಲ್‌ ಪ್ರತಿಕ್ರಿಯೆ
ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ ಸಂಖ್ಯೆಯ ಹಿಂದೂ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಬರುವಂತೆ ಮಾಡುತ್ತೇವೆ,  ಕರೆ ತರುತ್ತೇವೆ. ಅವರಿಗೆ ಉದ್ಯೋಗ ಕೊಡಿಸುತ್ತೇವೆ, ಮನೆ ಕಟ್ಟಿಸಿಕೊಡುತ್ತೇವೆ, ಇಲ್ಲೇ ನೆಲೆಸುವಂತೆ ಮಾಡುತ್ತೇವೆ ಅನ್ನುವುದು ವಿಚಿತ್ರ ಅಲ್ಲವೇ ಎಂದು ಪ್ರಶ್ನಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರಕ್ಕೆ ಯಾವ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಚುನಾವಣೆ ಸಂದರ್ಭದಲ್ಲಿ CAA ಜಾರಿಗೆ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಸರ್ಕಾರ ಏನಾದರು ಒಳ್ಳೆ ಕೆಲಸ ಮಾಡಿದ್ದರೆ ಇವತ್ತು CAA ಬದಲಾಗಿ ತಾವು ಮಾಡಿದ ಕೆಲಸ ತೋರಿಸಿ ಓಟು ಕೇಳಬಹುದ್ದೀತು ಎಂದರು.

ಹಣದುಬ್ಬರ ಮತ್ತು ನಿರುದ್ಯೋಗ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಮಧ್ಯಮವರ್ಗದ ಕುಟುಂಬಕ್ಕೂ ಇಂದು ಮನೆ ನಡೆಸುವುದು ಕಷ್ಟವಾಗುತ್ತಿದೆ. ಹಣದುಬ್ಬರ ಬೆನ್ನು ಮುರಿಯುತ್ತಿದೆ, ಮತ್ತೊಂದೆಡೆ ನಮ್ಮ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಅವರ ಮೇಲೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗ, ಮತ್ತು ಹಣದುಬ್ಬರಕ್ಕೆ ಸರಕಾರ ಪರಿಹಾರ ಹುಡುಕುವ ಬದಲು ಸಿಎ ಬಗ್ಗೆ ಮಾತನಾಡುತ್ತಿರುವುದು ತುಂಬಾ ದುಖಃಕರ ಸಂಗತಿ ಎಂದರು.

ಭಾರತದ ಅನೇಕ ಜನರು ನಿರಾಶ್ರಿತರಾಗಿದ್ದಾರೆ.  ಆದರೆ ಬಿಜೆಪಿಯವರು ಪಾಕಿಸ್ತಾನದಿಂದ ಜನರನ್ನು ಕರೆತಂದು ಭಾರತದಲ್ಲಿ ನೆಲೆಸಲು ಬಯಸುತ್ತಾರೆ.  ಅವರಿಗೆ ಮನೆಗಳನ್ನು ನೀಡಲು ಬಯಸುತ್ತಾರೆ.  ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಖರ್ಚು ಮಾಡಬೇಕಾದ ಭಾರತ ಸರ್ಕಾರದ ಸರ್ಕಾರಿ ಹಣ ಬೇರೆ ದೇಶದ ಜನರಿಗೆ ಖರ್ಚು ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.

ಆ ಮೂರು ದೇಶಗಳಲ್ಲಿ ಸುಮಾರು 2.5 ರಿಂದ 3 ಕೋಟಿ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಈ ಮೂರು ದೇಶಗಳು ಬಡ ದೇಶಗಳು ಹೌದು. ಭಾರತದ ಬಾಗಿಲು ತೆರೆದ ತಕ್ಷಣ ಈ ಮೂರು ದೇಶಗಳಿಂದ ಭಾರಿ ಜನಸಮೂಹವು ನಮ್ಮ ಭಾರತಕ್ಕೆ ಬರುತ್ತದೆ, ಈ 2.5 ಕೋಟಿ ಜನರಲ್ಲಿಯೂ ಸಹ. 1.5 ಕೋಟಿ ಜನರು ಭಾರತಕ್ಕೆ ಬರುತ್ತಾರೆ. ಹಾಗಾದರೆ ಅವರಿಗೆಲ್ಲ  ಯಾರು ಉದ್ಯೋಗ ಕೊಡುತ್ತಾರೆ?  ನೀವು ಅವರನ್ನು ಎಲ್ಲಿ ನೆಲೆಗೊಳಿಸುತ್ತೀರಿ? ಇವರಿಗೆಲ್ಲ ಬಿಜೆಪಿಯವರು ತಮ್ಮ  ಮನೆಯಲ್ಲಿ ಪಾಲು ಕೊಡುತ್ತಾರೆಯೇ? ಅವರು ತಮಗೆ ಸಿಗುವ ಉದ್ಯೋಗವನ್ನು ಇವರಿಗೆಲ್ಲ ಬಿಟ್ಟುಕೊಡುತ್ತಾರೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

ಹಾಗಾದರೆ ಬಿಜೆಪಿ ಏಕೆ ಇಂಥ ಮಹಾನ್‌ ತಪ್ಪನ್ನು ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.̤ ಉತ್ತರ ಬಹಳ ಸರಳವಾಗಿದೆ. ಕೇವಲ ವೋಟ್ ಬ್ಯಾಂಕ್ ಸೃಷ್ಟಿಸುವ ಕೊಳಕು ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಒಂದೂವರೆ ಕೋಟಿ ಜನರನ್ನು ಭಾರತಕ್ಕೆ ಕರೆತಂದು ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿ ಉದ್ದೇಶ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಭಾರೀ ಲಾಭವಾಗಬಹುದು. ಒಂದೆಡೆ  ಹರಿಯಾಣದ ಬಿಜೆಪಿಯ ಸರ್ಕಾರಕ್ಕೆ ಅಲ್ಲಿನ ಮಕ್ಕಳಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಕ್ಕಳನ್ನು ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಕಳುಹಿಸುತ್ತಿದೆ.  ನಮ್ಮ ಮಕ್ಕಳನ್ನು ಯುದ್ಧಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇಡೀ ಪ್ರಪಂಚದ ಯಾವುದೇ ದೇಶವು ತನ್ನ ನೆರೆಹೊರೆಯವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ದೇಶಗಳ ಬಡವರನ್ನು ನೆರೆಯ ದೇಶಗಳ ಜನರು ತಮ್ಮ ದೇಶಕ್ಕೆ ಬರುವುದನ್ನು ತಡೆಯಲು ವಿವಿಧ ರೀತಿಯ ಕಾನೂನುಗಳನ್ನು ಮಾಡುತ್ತದೆ. ಗಡಿಗಳಲ್ಲಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತಿದೆ.  ಪಕ್ಕದ ದೇಶದ ಬಡವರಿಗೆ ದೇಶವನ್ನು ಪ್ರವೇಶಿಸಲು ಬಾಗಿಲು ಪ್ರವೇಶಿಸುವುತ್ತಿರುವುದು ನಮ್ಮಲ್ಲಿಯೇ ಮೊದಲು. ಇಂಥ ಕೊಳಕು ರಾಜಕೀಯ ಮಾಡುತ್ತಿರುವ ಪ್ರಪಂಚದಲ್ಲೇ ಏಕೈಕ ಪಕ್ಷವೆಂದರೆ ಅದು ಬಿಜೆಪಿಯಾಗಿದೆ ಎಂದು ಹರಿಹಾಯ್ದರು.

ಯೋಚಿಸಬೇಕಾದ ವಿಷಯವೆಂದರೆ ಕಳೆದ 10 ವರ್ಷಗಳಲ್ಲಿ ಭಾರತದ 11 ಲಕ್ಷಕ್ಕೂ ಹೆಚ್ಚು ದೊಡ್ಡ ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಭಾರತವನ್ನು ತೊರೆದಿದ್ದಾರೆ. ಈ ಜನರು ಭಾರತದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳನ್ನು ನಡೆಸುತ್ತಿದ್ದರು.  ಜನರಿಗೆ ಉದ್ಯೋಗ ನೀಡುತ್ತಿದ್ದರು.  ಬಿಜೆಪಿಯ ತಪ್ಪು ನೀತಿಗಳು ಮತ್ತು ಅವರ ದೌರ್ಜನ್ಯಗಳಿಂದ ಬೇಸತ್ತು ಅವರು ಭಾರತವನ್ನು ತೊರೆದರು. ನಿಜವಾಗಿಯೂ ವಾಪಸ್‌ ಕರೆತರಬೇಕಾದರೆ ಆ ಉದ್ಯಮಿಗಳನ್ನು ಕರೆತನ್ನಿ. ಅವರು ಭಾರತದಲ್ಲಿ ಹೂಡಿಕೆ ಮಾಡುತ್ತಾರೆ.  ಅವರು ಹೊಸ ಕಾರ್ಖಾನೆಗಳನ್ನು ಮತ್ತು  ಹೊಸ ಉದ್ಯಮಗಳನ್ನು ತೆರೆಯುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.

2014ರ ಹಿಂದೆ ಬಂದ ನುಸುಳುಕೋರರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು. ಇದು ಕೇವಲ ಆರಂಭ.  ಒಮ್ಮೆ ಬಾಗಿಲು ತೆರೆದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಸಮುದ್ರೋಪಾದಿಯಲ್ಲಿ ಜನ ಬರುತ್ತಾರೆ.  ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಈಶಾನ್ಯ ರಾಜ್ಯಗಳು ಅದರಲ್ಲೂ ವಿಶೇಷವಾಗಿ ಅಸ್ಸಾಂ ಈ ವಲಸೆ ಜನರ ಭಾರವನ್ನು ಹೊರಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಒಂದು ದೇಶ-ಒಂದು ಚುನಾವಣೆ: ಸರ್ವಾಧಿಕಾರದ ಕೈಗೆ ಭಾರತ?
ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ʼಒಂದು ದೇಶ – ಒಂದು ಚುನಾವಣೆʼ ವರದಿಗೆ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ಪೀಪಲ್‌ ಮೀಡಿಯಾದಲ್ಲಿ ಬಂದಿರುವ ಚರಣ್‌ ಐವರ್ನಾಡುರವರ ಹಿಂದಿನ ಲೇಖನವನ್ನು ಓದಿ.

2023ರ ಮೇನಲ್ಲಿ ಟರ್ಕಿ ದೇಶದ ಅಧ್ಯಕ್ಷರಾಗಿ ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತೆ ಆಯ್ಕೆಯಾದಾಗ, ಅವರನ್ನು ಅಭಿನಂದಿಸಿವರಲ್ಲಿ ಮೊದಲಿಗರು ನಮ್ಮ ದೇಶದ ಘನವೆತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಹೇಳಿಕೇಳಿ ಪಾಶ್ಚಿಮಾತ್ಯ ಚಿಂತಕರು  ಎರ್ಡೊಗನ್ ಅವರನ್ನು ಚುನಾಯಿತ ಸರ್ವಾಧಿಕಾರಿ ಎಂದು ಕರೆಯುತ್ತಾರೆ. ಮೊದಲು ಪ್ರಧಾನಿಯಾಗಿ, ನಂತರ ಟರ್ಕಿಯ ಅಧ್ಯಕ್ಷರಾದ ಇವರು 20 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ.

ನೀವು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೋದಿಜಿ ಈ ಚುನಾಯಿತ ಸರ್ವಾಧಿಕಾರಿಯಿಂದ ಸ್ಪೂರ್ತಿಯನ್ನು ಪಡೆದಂತೆ ಕಾಣುತ್ತದೆ. ಇದೇನು ಬಿಜೆಪಿ ಹಾಗೂ ಅದರ ಅಡುಗೆ ಮನೆ ಆರ್‌ಎಸ್‌ಎಸ್‌ಗೆ ಹೊಸದೇನಲ್ಲ.

ಪ್ರಾದೇಶಿಕ ರಾಷ್ಟ್ರೀಯತೆಯನ್ನು ಸದಾ ವಿರೋಧಿಸುತ್ತಿದ್ದ ಆರ್‌ಎಸ್‌ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಲ್ವಾಲ್ಕರ್‌ ತಮ್ಮ We, or Our Nationhood Defined ಎಂಬ ಪುಸ್ತಕದಲ್ಲಿ ಈ ಪ್ರಪಂಚ ಕಂಡ ಅತ್ಯಂತ ಕ್ರೂರ ಸರ್ವಾಧಿಕಾರಿ ಜರ್ಮನಿಯ ಹಿಟ್ಲರ್‌ನನ್ನು ಹಾಡಿ ಹೊಗಳುತ್ತಾರೆ. ಪ್ರಾದೇಶಿಕ ರಾಷ್ಟ್ರೀಯತೆಯನ್ನು ಬಿಟ್ಟು ಭಾರತ, ಜನಾಂಗೀಯ ರಾಷ್ಟ್ರೀಯತೆಯನ್ನು ಒಪ್ಪಲು ಹಿಟ್ಲರ್‌ನಿಂದ ಸ್ಪೂರ್ತಿ ಪಡೆಯುವಂತೆ ಹೇಳುತ್ತಾರೆ. ಜರ್ಮನಿಯನ್ನು ಧ್ವಂಸ ಮಾಡಿದ ಹಿಟ್ಲರ್‌ ಸರ್ವಾಧಿಕಾರದ ಜನಾಂಗೀಯ ಶುದ್ಧೀಕರಣವನ್ನು ಅವರು ಭಾರತದ ಅಗತ್ಯ ಎಂದು ಹೇಳುತ್ತಾರೆ.

ಇದನ್ನು ಓದಿ: ‘ಒಂದು ದೇಶ ಒಂದು ಚುನಾವಣೆ’ ವರದಿಗೆ ಕೇಂದ್ರದ ಅನುಮೋದನೆ

ಹಾಗಾಗಿ, ಸರ್ವಾಧಿಕಾರಿಗಳು ಇನ್ನೊಂದು ದೇಶದ ಸರ್ವಾಧಿಕಾರಿಯನ್ನು ಹೊಗಳುವುದು, ಮತ್ತು ಅವನಿಗಿಂತ ಒಂದು ಹೆಜ್ಜೆ ಮುಂದೆ ಹೋಗುವುದು ಚರಿತ್ರೆಯಲ್ಲಿ ಆಗಾಗ ಕಂಡುಬಂದಿದೆ.

2017 ರಲ್ಲಿ ಎರ್ಡೋಗನ್ ದೇಶದ ಸರ್ವಶಕ್ತ ಅಧ್ಯಕ್ಷರಾಗಿ ಹೊರಹೊಮ್ಮಲು ಅವರು ಅಲ್ಪಸಂಖ್ಯಾತ ಕುರ್ದಿಗಳ ಮೇಲೆ ಸಾಂಪ್ರದಾಯಿಕ ಇಸ್ಲಾಮಿಸ್ಟ್‌ಗಳನ್ನು ಎತ್ತಿಕಟ್ಟಿದ್ದರು. ಇದರಿಂದ ಮೋದಿಯವರು ಸ್ಪೂರ್ತಿ ಪಡೆದಿದ್ದಾರಾ? ಇದನ್ನು ನೀವೇ ಯೋಚಿಸಬೇಕು.

Congratulations @RTErdogan on re-election as the President of Türkiye! I am confident that our bilateral ties and cooperation on global issues will continue to grow in the coming times.
— Narendra Modi (@narendramodi) May 29, 2023

ಎರ್ಡೋಗನ್ ನಂತೆ ಮೋದಿಯವರಲ್ಲಿ ಕಂಡು ಬರುವ ಮಹತ್ವದ ಸಾಮ್ಯತೆ ಎಂದರೆ ತನಗೆ ಬೇಕಾದವರನ್ನು ಶಾಸನಬದ್ಧ ಸ್ಥಾನಗಳಿಗೆ ನೇಮಿಸುವುದು. ಸರ್ವಾಧಿಕಾರಿಯ ಪ್ಲೈಬುಕ್‌ನಲ್ಲಿ ಇರುವ ರಹಸ್ಯ, ಕುತಂತ್ರ ಮತ್ತು ಆಶ್ಚರ್ಯ ಈ ಮೂರನ್ನೂ ನೀಡಬಹುದು.

ಇಡೀ ದೇಶವನ್ನು ರಹಸ್ಯವಾಗಿ ಇಡಲಾಗಿದೆ. ಮುಕ್ತವಾಗಿ ನಡೆಯಬೇಕಾದ ಸಂಸದೀಯ ಚರ್ಚೆಗಳನ್ನು ನಿಲ್ಲಿಸಲಾಗುತ್ತಿದೆ. ಇತ್ತೀಚೆಗೆ ಸಂಸತ್‌ ಅಧಿವೇಶನ ಹೇಗೆ ನಡೆಯಿತು ಎಂಬುದನ್ನೇ ಗಮನಿಸಿ, ಇದ್ದಕ್ಕಿದ್ದಂತೆ 2023ರ ಆಗಸ್ಟ್ 31 ರಂದು, ಸಂಸದೀಯ ವ್ಯವಹಾರಗಳ ಸಚಿವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವಿಚಿತ್ರದ ಸಂದೇಶವೊಂದನ್ನು ನೀಡಿದರು. ಸೆಪ್ಟೆಂಬರ್ 18 ರಿಂದ 22 ರವರೆಗೆ ಪ್ರಶ್ನೋತ್ತರ ಅವಧಿಯಿಲ್ಲದೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಅವರು ಘೋಷಿಸಿದರು

ಅಧಿವೇಶನದ ಅಜೆಂಡಾವನ್ನು 2023ರ ಸೆಪ್ಟೆಂಬರ್ 13 ರ ಬುಧವಾರದವರೆಗೆ ರಹಸ್ಯವಾಗಿಡಲಾಗಿತ್ತು. ಇದು ಕಾರ್ಯಸೂಚಿಯ ಬಗ್ಗೆ ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಯಿತು. ಅಜೆಂಡಾವನ್ನು ರಹಸ್ಯವಾಗಿ ಇಟ್ಟ ಮೇಲೆ ಪ್ರಹ್ಲಾದ್‌ ಜೋಶಿ ಒಂದು ರಾಷ್ಟ್ರ- ಒಂದು ಚುನಾವಣೆಯ ಸಾಧ್ಯತೆಯನ್ನು ಅಧ್ಯಯನ ಮಾಡಲು ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದರು. ಮರುದಿನ, ಅಮಿತ್ ಶಾ ಅವರನ್ನೊಳಗೊಂಡ ಎಂಟು ಸದಸ್ಯರ ಸಮಿತಿಗೆ ಔಪಚಾರಿಕವಾಗಿ ಸೂಚಿಸಲಾಯಿತು.

ಇದು ಸರ್ವಾಧಿಕಾರದ ಎಲ್ಲಾ ಲಕ್ಷಣಗಳನ್ನೂ ತೋರಿಸುತ್ತದೆ. ಆದರೆ ಅಮಿತ್‌ ಶಾ ಅವರು ಕೋವಿಂದ್ ಅವರನ್ನು ಜೂನ್ 2 ಕ್ಕೂ ಮೊದಲೇ ಇದಕ್ಕೆ ನಿಯೋಜಿಸಿದ್ದರು. ಕೋವಿಂದ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಹನ್ನೆರಡು ರಾಜ್ಯಗಳ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಸಮಿತಿಯಲ್ಲಿನ ಎಲ್ಲಾ ಎಂಟು ಸದಸ್ಯರು ಕೇಂದ್ರ ಸರ್ಕಾರದ ಬೆಂಬಲಿಗರು. ಇದರ ಓರ್ವ ಸದಸ್ಯ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಸಮಿತಿಗೆ ರಾಜೀನಾಮೆ ನೀಡಿ ಹೊರಬಂದರು.

ಅಂದರೆ, ಪ್ರಹ್ಲಾದ್‌ ಜೋಶಿ ಅಧಿಕೃತವಾಗಿ ಒಂದು ದೇಶ-ಒಂದು ಚುನಾವಣೆಯ ಪರಿಶೀಲನೆಗೆ ಸಮಿತಿ ರಚಿಸುವ ಅಧಿಕೃತ ಘೋಷಣೆ ಮಾಡುವ ಮೊದಲೇ ಅಮೀತ್‌ ಶಾ ಈ ಸಮಿತಿಯನ್ನು ಮಾಡಿದ್ದರು. ಅಂದರೆ, ಈ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗದಂತೆ ರಹಸ್ಯವಾಗಿ ಇಡಲಾಗಿತ್ತು.

ಈಗ 2029ಕ್ಕೆ ಲೋಕಸಭಾ, ರಾಜ್ಯ ವಿಧಾನ ಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ “ಒಂದು ದೇಶ- ಒಂದು ಚುನಾವಣೆ”ಯನ್ನು ಜಾರಿಗೊಳಿಸಲು ಭಾರತದ ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲು ಕಾನೂನು ಆಯೋಗ ಶಿಫಾರಸ್ಸುಗಳನ್ನು ನೀಡಲಿದೆ.

ನಿವೃತ್ತ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಈ ಆಯೋಗವು ಐದು ವರ್ಷಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಚುನಾವಣೆಗಳನ್ನು ಸಿಂಕ್ರೊನೈಸೇಶನ್ ಮಾಡಲು ಶಿಫಾರಸು ಮಾಡುವ ಸಾಧ್ಯತೆಯಿದೆ.

ಈ ಒಂದು ದೇಶ-ಒಂದು ಚುನಾವಣೆ ಯಾಕೆ ಬೇಕು ಎಂಬುದಕ್ಕೆ ಮೋದಿ ಕೊಡುವ ಕಾರಣಗಳು ತುಂಬಾ ವಿಚಿತ್ರವಾಗಿದೆ. ದೇಶದ ಬೇರೆ ಬೇರೆ ಕಡೆ ಆಗಾಗ ಚುನಾವಣೆಗಳಿ ನಡೆಯುತ್ತಿದ್ದರೆ ಖರ್ಚು ಜಾಸ್ತಿ, ಚುನಾವಣೆಯ ಸಂದರ್ಭದಲ್ಲಿ ಪದೇ ಪದೇ Model Code of Conduct (MCC) ಜಾರಿಗೆ ತಂದರೆ ಅಗತ್ಯ ಸೇವೆಗಳನ್ನು ಪೂರೈಸುವಂತ ಸರ್ಕಾರದ ಕೆಲಸಗಳಿಗೆ ತೊಡಕಾಗುತ್ತದೆ, ಚುನಾವಣೆಗಳನ್ನು ನಡೆಸಲು ನಿಯೋಜಿಸಲಾದ ಸರ್ಕಾರಿ ಸಿಬ್ಬಂದಿಯ ಮೇಲೆ ಅನಗತ್ಯ ಹೊರೆ ಬೀಳುತ್ತದೆ.

ಎಂಸಿಸಿ ಮೂಲಭೂತ ಸೇವೆಗಳನ್ನು ನೀಡಲು ಸರ್ಕಾರಕ್ಕೆ ತೊಡಕನ್ನು ಉಂಟು ಮಾಡುತ್ತದೆ ಎಂದರೆ ಇದು ಬೇರೆ ಬೇರೆ ಪಕ್ಷಳು ಚುನಾವಣಾ ಆಯೋಗದ ಜೊತೆಗೆ ಕುಳಿತು ಮಾತನಾಡಿ ಪರಿಹರಿಸಬಹುದಾದ ಸಮಸ್ಯೆ. ಆದರೆ ಮಾರ್ಚ್ 2016 ರ ನಂತರ ಯೋಜನೆಗೆ ಬೇಕಾದ ಉಭಯಪಕ್ಷೀಯ ಬೆಂಬಲವನ್ನು ಪಡೆಯಲು ಸರ್ಕಾರವು ಯಾವುದೇ ರೀತಿಯ ಪ್ರಯತ್ನವನ್ನು ಮಾಡಲಿಲ್ಲ.

ಸೆಪ್ಟೆಂಬರ್ 2023 ರಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕೋವಿಂದ್ ನೇತೃತ್ವದ ಸಮಿತಿಯನ್ನು ನೇಮಿಸಿತು ಮತ್ತು ಒಪ್ಪಿಗೆಯಿಲ್ಲದೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನು ಸಮಿತಿಗೆ ಸೇರಿಸಿತು. ಅವರು ತಮ್ಮ ಸ್ಥಾನಕ್ಕೆ ಒಪ್ಪಿಗೆ ಇಲ್ಲದೆ ನೇಮಕ ಮಾಡಿದ ಕಾರಣ ರಾಜೀನಾಮೆಯನ್ನು ನೀಡಿದರು.

ನಿಮಗೆ ಅಚ್ಚರಿ ಆಗಬಹುದು, ಇವರ ತಂತ್ರ ಎಷ್ಟು ಗುಪ್ತವಾಗಿ, ಪರಿಣಾಮಕಾರಿಯಾಗಿ ಮಾಡಲಾಗಿದೆ ಎಂಬುದು. 1984 ರಿಂದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವನ್‌ ನೇಷನ್‌ – ವನ್‌ ಇಲೆಕ್ಷನ್‌ ಭರವಸೆಯನ್ನು ನೀಡುತ್ತಾ ಬಂದಿದೆ. 2017 ರ ಜುಲೈಯಲ್ಲಿ ರಾಮ್‌ ನಾಥ್‌ ಕೋವಿಂದ್‌ ರಾಷ್ಟ್ರಪತಿಯಾಗಿ ಆಯ್ಕೆಯಾದ ಮೇಲೆ 2018 ರ ಜನವರಿಯಲ್ಲಿ ಸಂಸತ್ತಿನ ಉಭಯ ಸದನಗಳಿಗೆ ತಮ್ಮ ಮೊದಲ ರಾಷ್ಟ್ರಪತಿ ಭಾಷಣ ನೀಡುತ್ತಾರೆ. ಅದರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪ ಮಾಡುತ್ತಾರೆ. ಅಲ್ಲಿಂದಲೇ ಪ್ರಧಾನಿ ಮೋದಿಯವರ ಈ ಒಂದು ದೇಶ-ಒಂದು ಚುನಾವಣೆಗೆ ರಾಷ್ಟ್ರಪತಿ ಮುದ್ರೆ ಬೀಳಲು ಶುರುವಾಯ್ತು.

ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳ್ಳುವುದು ನಿಶ್ಚಿತ. ಆದರೆ ಇದು ಪ್ರಪಂಚದ ಆತ್ಯಂತ ದೊಡ್ಡ ಪ್ರಜಾಪ್ರಭುತ್ವ ಭಾರತದ ಮೇಲೆ ಹೊಡೆಯುವ ಪೆಟ್ಟು ಅಂತಿಂಥ ಹೊಡೆತ ಅಲ್ಲ. ಇದು ಪ್ರಜಾಪ್ರಭುತ್ವದಿಂದ ಚುನಾಯಿತ ಸರ್ವಾಧಿಕಾರಕ್ಕೆ ಭಾರತ ಮಗ್ಗಲು ಬದಲಿಸುವ ಸಾಧ್ಯತೆ ಇದೆ.

ಭಾರತದಂತಹ ರಾಜಕೀಯವಾಗಿ ವೈವಿಧ್ಯಮಯವಾಗಿರುವ ರಾಷ್ಟ್ರದಲ್ಲಿ, ಆವರ್ತಕ ಚುನಾವಣೆಗಳು ಒಂದೇ ಪಕ್ಷಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವುದಿಲ್ಲ. ಜನರು ಬೇರೆ ಬೇರೆ ಚುನಾವಣೆಗಳಿಗೆ ಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಸ್ಥಳೀಯ ಮಟ್ಟದಲ್ಲಿ ಅವರು ತಮ್ಮ ಮತವನ್ನು ಯಾರಿಗೆ, ಯಾಕೆ ಹಾಕಬೇಕು ಎಂಬುದನ್ನು ಸ್ಥಳೀಯ ಆದ್ಯತೆಗಳು, ಸಮಸ್ಯೆಗಳ ಮೇಲೆ ನಿರ್ಧರಿಸುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬಂದಾಗ ಜನರ ಉದ್ದೇಶ, ಆಭಿಪ್ರಾಯಗಳು ಬದಲಾಗುತ್ತದೆ. ಬದಲಾಗಲೇ ಬೇಕು. ಆಗ ಮಾತ್ರ ಅಧಿಕಾರದ ವಿಕೇಂದ್ರೀಕರಣ ಸಮರ್ಪಕವಾಗಿ ಜಾರಿಯಾಗುವುದು.

ನೀವೇ ಈ ಉದಾಹರಣೆಗಳನ್ನು ನೋಡಿ, ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಂಸತ್ತಿನ ಚುನಾವಣೆಯ ಜೊತೆ ಜೊತೆಗೆ ಪ್ರತಿಯೊಂದು ರಾಜ್ಯ ಚುನಾವಣೆಗಳು ನಡೆದಿದ್ದರೆ, ಭಾರತದ ರಾಜಕೀಯ ಇತಿಹಾಸವು ಬೇರೆ ಆಗಿರುತ್ತಿತ್ತು. 1989 ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸೋತ ನಂತರೂ ಅವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದರು. ಹಾಗೆಯೇ, 2019 ರಲ್ಲಿ ಪುಲ್ವಾಮಾ-ಬಾಲಾಕೋಟ್ ಅವಳಿ ಘಟನೆಗಳು ನಡೆದಾಗಲೂ ಬಿಜೆಪಿ ಅಧಿಕಾರಕ್ಕೆ ಬಂತು.

ಅಮೆರಿಕದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್ ಹೇಳುವಂತೆ 2014ರಲ್ಲಿ ಸಂಸತ್‌ ಚುನಾವಣೆಯ ಜೊತೆಗೆ ಎಲ್ಲಾ ರಾಜ್ಯಗಳ ಚುನಾವಣೆಗಳು ನಡೆದಿದ್ದರೆ, ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತು.

2020 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ದಿ ಅಡ್ವಾನ್ಸ್ಡ್ ಸ್ಟಡಿ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ಏಕಕಾಲಕ್ಕೆ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಮತದಾರರು ಅಭ್ಯರ್ಥಿಗಿಂತ ಪಕ್ಷದ ಕಡೆಗೆ ನೋಡಿ ಮತ ಹಾಕುತ್ತಾರೆ ಎಂದು ಹೇಳಲಾಗಿದೆ. ಒಂದೇ ಪಕ್ಷದ ಅಭ್ಯರ್ಥಿ ಎಷ್ಟೇ ಬರಗೆಟ್ಟ ನಾಯಕನಾಗಿದ್ದರೂ, ಭ್ರಷ್ಟನಾಗಿದ್ದರೂ ಅವನು ಗೆಲ್ಲುವ ಸಾಧ್ಯತೆ 20% ಹೆಚ್ಚಾಗುತ್ತದೆ ಎಂದು ಈ ವರದಿ ಹೇಳುತ್ತದೆ.

ಬಿಜೆಪಿ ಸರ್ಕಾರ 2019ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅವ್ಯವಸ್ಥೆ ಮತ್ತು ಸಾಂವಿಧಾನಿಕ ಅಸ್ತವ್ಯಸ್ತತೆಗೆ ಕಾರಣ Fixed-term Parliaments Act, 2011ನಿಂದ ಪಾಠ ಕಲಿತಿಲ್ಲ. ಈ ಕರಾಳ ಕಾಯ್ದೆಯನ್ನು ಮಾರ್ಚ್ 2022ರಲ್ಲಿ ಎಲ್ಲಾ ಪಕ್ಷಗಳೂ ಆ ದೇಶದಲ್ಲಿ ತೀರ್ಮಾನಿಸಿ ರದ್ದು ಮಾಡಲಾಯಿತು.

ಆದರೆ, ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಮೇ 12, 2021 ರಂದು The Dissolution and Calling of Parliament Bill ಜಾರಿಗೆ ತಂದು, ಅದಕ್ಕೆ ಮಾರ್ಚ್ 24, 2022 ರಂದು ರಾಜ ಸಮ್ಮತಿಯೂ ಸಿಕ್ಕಿತು. ಇದು ಸ್ಥಿರ ಅವಧಿಯ ಸಂಸತ್ತಿನ ಕಾಯ್ದೆ 2011ಯನ್ನು ತೆಗೆದು ಹಾಕಿತು. ರಾಜ ಪರಿವಾರದ ಒಪ್ಪಿಗೆಯಂತೆ ಈ ದೇಶದಲ್ಲಿ ತನಗೆ ಬೇಕಾದಾಗ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ನಡೆಸುವ ಅಧಿಕಾರವನ್ನು ಅಲ್ಲಿನ ಪ್ರಧಾನಿಗೆ ನೀಡಲಾಯ್ತು. ಇದು ಪ್ರಜಾಸತಾತ್ಮಕತೆಗೆ ವಿರುದ್ಧವಾಗಿದೆ.

Fixed-term Parliaments Act, 2011 ಹೇಗೆ ಬ್ರಟೀಷ್‌ ಸಂವಿಧಾನದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿತೋ, ಮೋದಿಯವರ ಏಕಕಾಲಕ್ಕೆ ಚುನಾವಣೆ ಎಂಬ ಯೋಜನೆಯೂ ಇದೇ, ಇದಕ್ಕೂ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಸಂವಿಧಾನದಲ್ಲಿ ತಿದ್ದುಪಡಿ ಜೊತೆಗೆ, ಏಕಕಾಲದ ಚುನಾವಣೆಗೆ ಬೇಕಾದ ಒಂದು ಸ್ಥಿರ ಕ್ಯಾಲೆಂಡರನ್ನು ಸಂವಿಧಾನಕ್ಕೆ ಸೇರಿಸಬೇಕಾಗುತ್ತದೆ.

ಮುಖ್ಯವಾಗಿ,  ಮುಂದಿನ ಸಂಸದೀಯ ಚುನಾವಣೆ ನಡೆದಾಗ, ಎಲ್ಲಾ ರಾಜ್ಯಗಳ ಅಸೆಂಬ್ಲಿಗಳನ್ನು ವಿಸರ್ಜಿಸಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಹಲವಾರು ರಾಜ್ಯಗಳ ಅಸೆಂಬ್ಲಿಗಳ ಅಧಿಕಾರಾವಧಿಯನ್ನು 2024 ಮತ್ತು 2029 ರ ನಡುವೆ ಮೊಟಕುಗೊಳಿಸಬೇಕಾಗುತ್ತದೆ, ಇಲ್ಲವೇ ವಿಸ್ತರಿಸಬೇಕಾಗುತ್ತದೆ.

ಒಂದು ವೇಳೆ ಹೀಗಾದರೆ, ಈ ದೇಶ ಪ್ರಜಾಪ್ರಭುತ್ವವಾಗಿ ಉಳಿಯುವುದಿಲ್ಲ. ಜನಾದೇಶವನ್ನು ಏಕಾಏಕಿಯಾಗಿ ಮೊಟುಕುಗೊಳಿಸುವುದು, ಅಸೆಂಬ್ಲಿಗಳನ್ನು ವಿಸರ್ಜಿಸುವುದು ಎಂದರೆ ದೇಶದ ನಾಗರಿಕನ ಅಧಿಕಾರ, ಹಕ್ಕುಗಳನ್ನು ಕಸಿದುಕೊಂಡ ಹಾಗೆಯೇ.

ಮೋದಿಯವರ ಈ ಯಾವುದೇ ಯೋಜನೆ, ಯೋಚನೆಗಳು ಭಾರತದ ಒಳಿತಿಗಲ್ಲ. ಇದು ಭಾರತದ ಕೇಡುಗಾಲ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೇ, ಮೋದಿಯವರು ಒಂದು ದೇಶ-ಒಂದು ಚುನಾವಣೆಯ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತಂತ್ರಗೊಳಿಸಲು ಮುಂದಾಗಿದ್ದಾರೆ.

ಅವರ ಉದ್ದೇಶ ತುಂಬಾ ಸ್ಪಷ್ಟ. ಈ ದೇಶವನ್ನು ಒಂದು ಕಾರ್ಪೋರೇಟ್‌ ಕಂಪನಿಯ ರೀತಿಯಲ್ಲಿ ನಡೆಸುವುದು. ಆಗ ಭಾರತ  ಜನಾದೇಶವೇ ಸರ್ವೋಚ್ಚವಾಗಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ.

ಭಿನ್ನ ರಾಜಕೀಯ ಪಕ್ಷಗಳು ರಾಜ್ಯಗಳಲ್ಲಿ ಆಡಳಿತ ನಡೆಸುವ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ನಾಶ ಮಾಡಿ, ಇಡೀ ದೇಶದ ರಾಜಕೀಯ ವ್ಯವಸ್ಥೆಯನ್ನು ಏಕಪಕ್ಷೀಯಗೊಳಿಸುವುದು. ಇದನ್ನು ಜನರಿಗೆ ಅರ್ಥಮಾಡಿಸಿ, ಈ ಸರ್ವಾಧಿಕಾರಕ್ಕೆ ಜನರು ಒಗ್ಗುವಂತೆ ಮಾಡಲು ಬಿಜೆಪಿ ಅನೇಕ ಪ್ರಯತ್ನಗಳನ್ನು ಮಾಡಿದೆ. ಇದರಲ್ಲಿ ತುಂಬಾ ಅಪಾಯಕಾರಿ ನಡೆ ಎಂದರೆ, ವಿರೋಧ ಪಕ್ಷದ ನಾಯಕರು ಇಲ್ಲದೆ ಸಂಸತ್‌ ಕಲಾಪಗಳು ನಡೆದದ್ದು, ಮೂರು ಕ್ರಿಮಿನಲ್‌ ಕಾನೂನು ಕಾಯಿದೆಗಳನ್ನು, ಟೆಲಿಕಾಮ್‌ ಬಿಲ್‌ಗಳನ್ನು ಅವರ ಉಪಸ್ಥಿತಿ ಇಲ್ಲದೇ ಜಾರಿಗೆ ತಂದದ್ದು.

ಇದನ್ನು ಜನ ಸಂಭ್ರಮಿಸಿದರೆ, ಈ ಜನರನ್ನು ಸರ್ವಾಧಿಕಾರಕ್ಕೆ ಮತ್ತು ಗುಲಾಮಗಿರಿಗೆ ಒಗ್ಗಿಸುವುದು ತುಂಬಾ ಸುಲಭ ಎಂಬುದು ಬಿಜೆಪಿಗೆ ಅರ್ಥವಾಗಿದೆ.

ವನ್‌ ನೇಷನ್‌ – ವನ್‌ ಇಲೆಕ್ಷನ್‌ ಕಾಂಗ್ರೇಸಿಗೆ ಮಾತ್ರ ದೊಡ್ಡ ಪೆಟ್ಟು ಎಂದು ಇತರ ರಾಜಕೀಯ ಪಕ್ಷಗಳು ಭಾವಿಸಿದರೆ ಅದು ಮೂರ್ಖತನ. ಈಗ ಬಿಜೆಪಿ ಜೊತೆಗೆ ದೋಸ್ತಿ ಮಾಡಿ ಹಸಿರು ಶಾಲಿನಿಂದ ಕೇಸರಿ ಶಾಲಿಗೆ ಬದಲಾಗಿರುವ ಕುಮಾರ ಸ್ವಾಮಿಯವರ ಮೂರ್ಖತನವೂ ಕೂಡ. ಇದು ಕೇವಲ ವಿರೋಧ ಪಕ್ಷಗಳಿಗೆ ಸಂಕಷ್ಟ ಮಾತ್ರವಲ್ಲ, ಬಿಜೆಪಿಯ ರಾಜಕೀಯ ಮಿತ್ರಪಕ್ಷಗಳ ಅಸ್ತಿತ್ವಕ್ಕೂ ಅಪಾಯ ತಂದಿಡಲಿದೆ ಎಂಬುದನ್ನು ಮರೆಯಬಾರದು. ಏಕಕಾಲದ ಚುನಾವಣೆ ಎಂಬ ಬಿಜೆಪಿಯ ಕಪಟ, ಕ್ರೂರ ತಂತ್ರ ಭಾರತದ ಪ್ರಾದೇಶಿಕ ಪಕ್ಷಗಳನ್ನು ಕೊಂದು ಹಾಕಲಿದೆ.

ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಒಂದು ದೇಶ-ಒಂದು ಚುನಾವಣೆ ಎಂಬ ಬಿಜೆಪಿಯ ನಡೆ ದೇಶಕ್ಕೆ ಮುಂದೆ ಒದಗಬಹುದಾದ ಕರಾಳ ದಿನಗಳ ಮುನ್ಸೂಚನೆ, ಇದನ್ನು ದೇಶದ ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಂಡು, ಈ ದೇಶ ವಿರೋಧಿ ನಡೆಯನ್ನು ವಿರೋಧಿಸಬೇಕು.

– ಚರಣ್‌ ಐವರ್ನಾಡು, ಬೆಂಗಳೂರು

ನನ್ನನ್ನು ಮೋದಿʼಜೀʼ ಎಂದು ಕರೆಯಬೇಡಿ, ಮೋದಿ ಅನ್ನಿ ಸಾಕು!
ಹೊಸದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರು ರಾಜ್ಯಗಳ ಗೆಲುವಿಗೆ ಭಾರತೀಯ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ತಮ್ಮನ್ನು ಬಿಜೆಪಿ ಸಂಸದರು ‘ಮೋದಿʼ ಎಂದು ಸಂಬೋಧಿಸುವಂತೆ ಒತ್ತಾಯಿಸಿದ್ದಾರೆ. ಪೂರ್ವಪ್ರತ್ಯಯಗಳು ಅಥವಾ “ಆದರನೀಯ ಮೋದೀಜಿ” (ಗೌರವಾನ್ವಿತ ಶ್ರೀ ಮೋದಿ) ಅಥವಾ “ಮೋದೀಜಿ” ನಂತಹ ಪ್ರತ್ಯಯಳಗನ್ನು ಸೇರಿಸದೇ ಸಂಬೋಧಿಸಲು ಸೂಚಿಸಿದ್ದಾರೆ.

ಮೋದೀಜಿ, ಆದರನೀಯ ಮೋದೀಜಿ ಎಂದೆಲ್ಲಾ ಕರೆದದ್ದರಿಂದ ಪ್ರಧಾನಮಂತ್ರಿ ಹಾಗೂ ಜನರ ನಡುವೆ ಅಂತರವನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಮೂರು ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, “ಬಿಜೆಪಿ ಈಗ ದೇಶಾದ್ಯಂತ ಆದ್ಯತೆಯ ಪಕ್ಷವಾಗಿದೆ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ ಇದನ್ನು ಸಾಧಿಸಲು ಸಾಧ್ಯವಾಯಿತು. ಈ ಮೂರು ರಾಜ್ಯಗಳಲ್ಲಿ ತಂಡ ಮಾಡಿದ ಕೆಲಸದ ಫಲಿತಾಂಶವಾಗಿದೆ. ನನ್ನದು ಮಾತ್ರವಲ್ಲದೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಗುರಿಯನ್ನು ಸಾಧಿಸಲು ಅವಿರತವಾಗಿ ಶ್ರಮಿಸಿದರು,” ಎಂದು ಅವರು ಹೇಳಿದ್ದಾರೆ.

“ಮೋದೀಜೀ ಕಾ ಸ್ವಾಗತ್ ಹೈ [ಮೋದಿ ಜಿ ಅವರಿಗೆ ಸ್ವಾಗತ]” ಮತ್ತು “ಮೋದಿ ಹ ತೋಹ್ ಮುಮ್ಕಿನ್ ಹೈ [ಮೋದಿ ಇದ್ದರೆ ಅದು ಸಾಧ್ಯ]” ಎಂಬ ಘೋಷಣೆಗಳೊಂದಿಗೆ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲಾಗಿತ್ತು.

ಸಭೆಯಲ್ಲಿ ಉಪಸ್ಥಿತರಿದ್ದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಾನು ಪಕ್ಷದ ಪುಟಾಣಿ ಕಾರ್ಯಕರ್ತ ಮತ್ತು ಜನರು ನನ್ನನ್ನು ತಮ್ಮ ಕುಟುಂಬದ ಭಾಗವೆಂದು ಭಾವಿಸುತ್ತಾರೆ. ಗೌರವಾರ್ಥಗಳನ್ನು ಸೇರಿಸುವುದರಿಂದ ನಮ್ಮ ನಡುವೆ ಅಂತರ ಸೃಷ್ಟಿಯಾಗುತ್ತದೆ, ಆದ್ದರಿಂದ ನನ್ನನ್ನು ಮೋದಿ ಎಂದು ಮಾತ್ರ ಸಂಬೋಧಿಸಿ,” ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.