mohan dasari – Peepal Media

ಆಮ್ ಆದ್ಮಿ ಪಾರ್ಟಿಗೆ ಹಲವು ಮುಖಂಡರ ಸೇರ್ಪಡೆ
ಬೆಂಗಳೂರು: ಮಾಜಿ ಜೆಡಿಎಸ್‌ ಹಾಗೂ ರೋಟರಿ ಕ್ಲಬ್‌ ಮುಖಂಡರಾದ ಬಿ. ಕರಿ ಗೌಡ, ಸಮಾಜವಾದಿ ಪಾರ್ಟಿ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶಾಂತಾ ಮೋಹನ್‌, ಕಿರುತೆರೆ ಹಾಗೂ ಹಿರಿತೆರೆ ನಟ ಕಿಶನ್‌, ಹೊಳಲ್ಕೆರೆ ಮಾಜಿ ಶಾಸಕ ಜಿ.ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪ, ಸಮಾಜವಾದಿ ಪಾರ್ಟಿ ಯುವ ನಾಯಕ ರವಿ (ದೇವೇಂದ್ರ ಚೌಡಿ) ಆಮ್‌ ಆದ್ಮಿ ಪಾರ್ಟಿಗೆ ಗುರುವಾರ ಸೇರ್ಪಡೆಯಾಗಿದ್ದಾರೆ. ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಇವರನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ  ಮೋಹನ್ ದಾಸರಿಯವರು ʼಬಿ. ಕರಿ ಗೌಡರವರು ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳು. ಎಂಕಾಂ, ಎಂಬಿಎ, ಸಿಎ ಶಿಕ್ಷಣವನ್ನು ಪೂರೈಸಿದ್ದಲ್ಲದೇ, ಕಂಪನಿ ಸೆಕ್ರೆಟರಿ ಶಿಕ್ಷಣದ ಇಂಟರ್‌ಮೀಡಿಯೇಟ್‌ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ಲೆಕ್ಕ ಪರಿಶೋಧನೆ ಹಾಗೂ ತೆರಿಗೆಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ʻರೋಟರಿ ಬೆಂಗಳೂರು ಬನಶಂಕರಿʼ ಅಧ್ಯಕ್ಷರಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ, ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಮಾಜವಾದಿ ಪಾರ್ಟಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಾ ಮೋಹನ್‌ರವರು ಮಹಿಳೆಯರ ಸಂಘಟನೆಯಲ್ಲಿ ನಿಪುಣರಾಗಿದ್ದು, ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಹಲವು ವರ್ಷಗಳ ಕಾಲ ಹೋರಾಟ ಮಾಡಿದ ಅನುಭವ ಹೊಂದಿದ್ದಾರೆ. ಹೊಳಲ್ಕೆರೆಯಲ್ಲಿ 20 ವರ್ಷಗಳ ಕಾಲ ಶಾಸಕರಾಗಿದ್ದ ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪರವರು ಸಮಾಜವಾದಿ ಪಾರ್ಟಿಯ ಎಸ್‌ಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಿಶನ್‌ರವರು ನಟನೆಯ ಜೊತೆಗೆ ಸಮಾಜವಾದಿ ಪಕ್ಷದ ರಾಜ್ಯ ಯುವಘಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರವಿ (ದೇವೇಂದ್ರ ಚೌಡಿ) ಕೂಡ ಅದೇ ಪಕ್ಷದ ಯುವನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆʼ ಎಂದು ಪರಿಚಯಿಸಿದರು.

ಪಕ್ಷ ಸೇರಿದ ಬಿ. ಕರಿ ಗೌಡ ಮಾತನಾಡಿ, ʼಶಿಕ್ಷಣದ ಮಹತ್ವವನ್ನು ಅರಿತು, ಶೈಕ್ಷಣಿಕ ಕ್ರಾಂತಿ ತರುವುದರಲ್ಲಿ ಆಮ್‌ ಆದ್ಮಿ ಪಾರ್ಟಿ ನಿರತವಾಗಿದೆ. ದೆಹಲಿ ಹಾಗೂ ಪಂಜಾಬ್‌ನ ಎಎಪಿ ಸರ್ಕಾರಗಳು ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಆದ್ಯತೆ ನೀಡುತ್ತಿವೆ. ಆಮ್‌ ಆದ್ಮಿ ಪಾರ್ಟಿಯ ಭಯದಿಂದಾಗಿ ಬೇರೆ ಪಕ್ಷಗಳು ಕೂಡ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡಲು ಆರಂಭಿಸಿರುವುದನ್ನು ನೋಡುತ್ತಿದ್ದೇವೆ. ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಕುರಿತ ಚರ್ಚೆಯು ಆಮ್‌ ಆದ್ಮಿ ಪಾರ್ಟಿಯಿಂದಾಗಿ ಮುನ್ನೆಲೆಗೆ ಬರುತ್ತಿದೆʼ ಎಂದು ಹೇಳಿದ್ದಾರೆ.

ಶಾಂತಾ ಮೋಹನ್‌ ಮಾತನಾಡಿ, ʼಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಪಕ್ಷವೆಂದರೆ ಆಮ್‌ ಆದ್ಮಿ ಪಾರ್ಟಿ. ಪಕ್ಷವು ಹಲವು ಚುನಾವಣೆಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದೆ. ಬೇರೆ ಪಕ್ಷಗಳು ದುರ್ಬಲ ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸಿ, ಅವರು ಗೆಲುವು ಸಾಧಿಸಿದರೆ ಅವರ ಹೆಸರಿನಲ್ಲಿ ಬೇರೆ ಪುರುಷರು ಅಧಿಕಾರ ನಡೆಸುವಂತಹ ವ್ಯವಸ್ಥೆಯನ್ನು ಸೃಷ್ಟಿಸಿವೆ. ಆದರೆ ಆಮ್‌ ಆದ್ಮಿ ಪಾರ್ಟಿಯು ಸುಶಿಕ್ಷಿತ ಹಾಗೂ ಸಶಕ್ತ ಮಹಿಳೆಯರಿಗೆ ಆದ್ಯತೆ ನೀಡಿ, ಮಹಿಳಾ ಪ್ರಾತಿನಿಧ್ಯದ ಆಶಯಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆʼ ಎಂದು ಹೇಳಿದ್ದಾರೆ.

ಸೇರ್ಪಡೆ ಸಮಾರಂಭದಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಹಾಜರಿದ್ದರು.

ಹಿಂದಿ ಇವರಪ್ಪನ ಭಾಷೆಯಲ್ಲ ಬಿಡಿ: ಪ್ರಹ್ಲಾದ್‌ ಜೋಶಿ ವಿರುದ್ದ ಮೋಹನ್‌ ದಾಸರಿ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆ ನಂತರದ ಸ್ಥಾನವನ್ನು ಇಂಗ್ಲೀಷ್‌ ಬದಲು ಹಿಂದಿಗೆ ನೀಡಿ ಎಂಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿಯವರ ಹೇಳಿಕೆ ಕುರಿತು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೊಹನ್‌ ದಾಸರಿ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಆದ್ಯತೆ ಕನ್ನಡಕ್ಕೆ ನೀಡಬೇಕು. ನಂತರದ ಸ್ಥಾನವನ್ನು ಇಂಗ್ಲೀಷ್‌ಗೆ ನೀಡುವ ಬದಲು ಹಿಂದಿಗೆ ನೀಡಬೇಕು. ಹಿಂದಿ ಫಲಕಗಳಿಗೆ ಮಸಿ ಬಳಿಯುತ್ತಾರೆ,ಆದರೆ ಇಂಗ್ಲೀಷ್‌ ಭಾಷೆಯನ್ನು ಮಾತ್ರ ಸರಳವಾಗಿ ಸ್ವೀಕರಿಸುತ್ತಾರೆ. ಇಂಗ್ಲೀಷ್‌ ನಮ್ಮ ಅಪ್ಪನ ಭಾಷೇನಾ? ಎಂದು ಜೋಶಿಯವರು ಪ್ರಶ್ನಿಸಿದ್ದರು.

ಇದಕ್ಕೆ ಹಲವರು ಟೀಕೆ ಮಾಡಿದ್ದು, ಜೋಶಿಯವರೆ, ನಿಮ್ಮ 3 ಜನ ಹೆಣ್ಣು ಮಕ್ಕಳಲ್ಲಿ ಒಬ್ಬರು ವಿದೇಶದಲ್ಲಿ ಪದವಿ, ಇನಿಬ್ಬರು ಪ್ರತಿಷ್ಠಿತ ಕ್ರಶ್ಚಿಯನ್‌ ವಿದ್ಯಾಕೇಂದ್ರದಲ್ಲಿ CBSE ಇಂಗ್ಲೀಷ್‌ ಮಾದ್ಯಮದಲ್ಲಿ ವಿದ್ಯಾಭ್ಯಾಸ ಪಡೆದವರು, ಇವರಲ್ಲಿ ಒಬ್ಬರು ಸಹ ಕನ್ನಡ ಮತ್ತು ನಿಮ್ಮ ಹಿಂದಿ ಭಾಷೆಯನ್ನು 2ನೇ ಭಾಷೆಯಾಗಿ ಕಲಿತಿಲ್ಲ. ಮೊದಲು ಕಂಡವರ ಮಕ್ಕಳನ್ನು ಹಿಂದಿ ಬಾವಿಗೆ ತಳ್ಳೋ ದುರ್ಬುದ್ದಿ ಬಿಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಪೋಸ್ಟ್‌ ಮಾಡುವ ಮೂಲಕ ಕಿಡಿಕಾರಿದ್ದರು.

ಈ ಕುರಿತು ಮೋಹನ್‌ ದಾಸರಿ ಟ್ವೀಟ್‌ ಮಾಡಿದ್ದು, ಹಿಂದಿಯಂತೂ ಇವರಪ್ಪರ ಭಾಷೆಯಲ್ಲ ಅಂತ ಗೊತ್ತಯಿತು ಬಿಡಿ. ತಮ್ಮ ತಮ್ಮ ಮಕ್ಕಳನ್ನು ಮಾತ್ರ ವಿದೇಶಗಳಲ್ಲಿ, CBSE ಮತ್ತಿತರ ಇಂಗ್ಲೀಷ್ ಪಠ್ಯದಲ್ಲಿ ಓದಿಸಿ ಬಡ ಮಕ್ಕಳು ಮಾತ್ರ ಹಿಂದಿ ಹಿಂದಿ ಅಂತ ನಿರುದ್ಯೊಗಿಗಳಾಗಿ ಬದುಕುತ್ತಿರ ಬೇಕಲ್ಲವೇ ಜೋಶಿಗಳೇ.? ಎಂದು ಪ್ರಶ್ನಿಸಿದ್ದಾರೆ.

ಹಿಂದಿಯಂತೂ ಇವರಪ್ಪರ ಭಾಷೆಯಲ್ಲ ಅಂತ ಗೊತ್ತಯಿತು ಬಿಡಿ. ತಮ್ಮ ತಮ್ಮ ಮಕ್ಕಳನ್ನು ಮಾತ್ರ ವಿದೇಶಗಳಲ್ಲಿ, CBSE ಮತ್ತಿತರ ಇಂಗ್ಲೀಷ್ ಪಠ್ಯದಲ್ಲಿ ಓದಿಸಿ ಬಡ ಮಕ್ಕಳು ಮಾತ್ರ ಹಿಂದಿ ಹಿಂದಿ ಅಂತ ನಿರುದ್ಯೊಗಿಗಳಾಗಿ ಬದುಕುತ್ತಿರ ಬೇಕಲ್ಲವೇ ಜೋಶಿಗಳೇ..??? pic.twitter.com/gHN9wvUbc8
— Mohan Dasari – ಮೋಹನ್ ದಾಸರಿ (@MohanDasari_) December 13, 2022

ಆಂಧ್ರದಲ್ಲಿದೆಯಂತೆ ತುಂಗಭದ್ರಾ ಯೋಜನೆ! : ಪಠ್ಯಪುಸ್ತಕದಲ್ಲಿನ ತಪ್ಪು ಮಾಹಿತಿಗೆ ಮೋಹನ್‌ ದಾಸರಿ ಖಂಡನೆ
ಬೆಂಗಳೂರು: ಅತಿದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರಪ್ರದೇಶದಲ್ಲಿದೆ ಎಂದು ಸಿಬಿಎಸ್‌ಇ ಪಠ್ಯಪುಸ್ತಕದಲ್ಲಿ ತಪ್ಪು ಮಾಹಿತಿ ನೀಡಿರುವುದಕ್ಕೆ ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ʼನನ್ನ ಮಗನ ಪಠ್ಯಪುಸ್ತಕದ ನೀರಿನ ಸಂಪನ್ಮೂಲಗಳು ಪಾಠದಲ್ಲಿ ತುಂಗಭದ್ರ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ. ಇಂದೆಂತಹಾ ನಾಚಿಕೆಯ ವಿಷಯ ಸಿಎಂ ಬಸವರಾಜ ಬೊಮ್ಮಾಯಿಯವರೇ? ನಿಮ್ಮ ಶಿಗ್ಗಾವಿ ಕ್ಷೇತ್ರದಲ್ಲೂ ಹರಿಯುವ ತುಂಗಭದ್ರಾ ನದಿಗೆ ಸಂಬಂಧಿಸಿದ ಯೋಜನೆ ಬಗ್ಗೆಯೇ ತಪ್ಪು ಮಾಹಿತಿ ನೀಡಲಾಗಿದೆʼ ಎಂದು ಮುಖ್ಯಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ʼಸಿಬಿಎಸ್‌ಇ ನಾಲ್ಕನೇ ತರಗತಿ ಪಠ್ಯಪುಸ್ತಕದಲ್ಲಿ ದೇಶದ ಪ್ರಮುಖ ವಿವಿಧೋದ್ದೇಶ ನದಿ ಯೋಜನೆಗಳ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ, ಬರೋಬ್ಬರಿ 135 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟು ಅಥವಾ ಪಂಪ ಸಾಗರವನ್ನು ಆಂಧ್ರ ಪ್ರದೇಶದಲ್ಲಿರುವ ಯೋಜನೆ ಎಂದು ಮಕ್ಕಳಿಗೆ ಕಲಿಸುವುದು ಎಷ್ಟು ಸರಿ?ʼ ಎಂದು ಮೋಹನ್‌ ದಾಸರಿ ಪ್ರಶ್ನಿಸಿದ್ದಾರೆ.

My son Yash’s CBSE Class 4 book on Water Resources chapter says “Tungabhadra project on the Tungabhadra River in Andhra Pradesh”.
What a SHAME @BSBommai avare, Tunga & Bhadra rivers originate, merge & flow as Tungabhadra 100s of KM in Karnataka including ur Shiggaon constituency pic.twitter.com/y5T084kBt7
— Mohan Dasari – ಮೋಹನ್ ದಾಸರಿ (@MohanDasari_) December 8, 2022

ಬಿಬಿಎಂಪಿ ಚುನಾವಣೆಗೆ ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ ಮುಖಂಡರ ಉಪವಾಸ ಸತ್ಯಾಗ್ರಹ
ಬೆಂಗಳೂರು: ಕಳೆದೆರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆಗೆ ಅಡ್ಡಗಾಲು ಹಾಕುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವವಿರೋಧಿ ನಡೆ ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಮುಖಂಡರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಉಪವಾಸ ಕುಳಿತ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್‌ ದಾಸರಿಯವರು, ʼಸೋಲಿನ ಭಯದಿಂದಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿಯು ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿದೆ. ಬಿಜೆಪಿಯ ಈ ಕುತಂತ್ರ ರಾಜಕೀಯದಿಂದಾಗಿ ಬೆಂಗಳೂರಿನ ಜನತೆ ನೂರಾರು ತೊಂದರೆ ಅನುಭವಿಸುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಾರ್ಪೊರೇಟರ್‌ಗಳೇ ಇಲ್ಲ. ಶಾಸಕರು ಹಾಗೂ ಸಂಸದರು ಇದ್ದರೂ ಕೈಗೆ ಸಿಗುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯವನ್ನೇ ಬುಡಮೇಲು ಮಾಡುತ್ತಿರುವ ಬಿಜೆಪಿಯ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರಿಗೆ ನಾಚಿಕೆಯಾಗಬೇಕುʼ ವಾಗ್ದಾಳಿ ನಡೆಸಿದ್ದಾರೆ.

ʼಬಿಬಿಎಂಪಿ ಚುನಾವಣೆಗೆ ಒತ್ತಾಯಿಸಿ ಕಳೆದ ಮೂರು ದಿನಗಳು ಬೆಂಗಳೂರಿನಾದ್ಯಂತ ಎಎಪಿ ಕಾರ್ಯಕರ್ತರು ಸಹಿಸಂಗ್ರಹ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರು ನಿಲುವು ತಾಳಿರುವುದು ಈ ವೇಳೆ ನಮ್ಮ ಗಮನಕ್ಕೆ ಬಂದಿದೆ. ಬೆಂಗಳೂರಿನಾದ್ಯಂತ ಆಮ್‌ ಆದ್ಮಿ ಪಾರ್ಟಿಗೆ ಜನಬೆಂಬಲ ಹೆಚ್ಚಾಗುತ್ತಿದ್ದು, ಇದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ಪ್ರಾಮಾಣಿಕ ಆಡಳಿತವನ್ನು ತರಬೇಕೆಂಬ ಬೆಂಗಳೂರಿಗರ ನಿಲುವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಬಿಜೆಪಿಯು ಚುನಾವಣೆಯನ್ನು ಮುಂದೂಡುತ್ತಿದೆ. ಸರ್ಕಾರವು ಚುನಾವಣೆ ಮುಂದೂಡಲು ತೋರಿದ ಉತ್ಸಾಹವನ್ನು ಬೆಂಗಳೂರನ್ನು ಅಭಿವೃದ್ಧಿ ಪಡಿಸಲು ತೋರಿಸಿದ್ದರೆ, ಇದು ಇಂದು ಜಗತ್ತಿನ ನಂಬರ್‌ ಒನ್‌ ನಗರವಾಗುತ್ತಿತ್ತುʼ ಎಂದು ಮೋಹನ್‌ ದಾಸರಿ ತಿಳಿಸಿದರು.

ʼಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬಿಬಿಎಂಪಿ ಚುನಾವಣೆ ನಡೆಯಬೇಕೆಂದು ಆಗ್ರಹಿಸುತ್ತಿಲ್ಲ. ಆಮ್‌ ಆದ್ಮಿ ಪಾರ್ಟಿಯೊಂದೇ ನಿರಂತರವಾಗಿ ಹೋರಾಟ ಮಾಡುತ್ತಾ, ಪ್ರಜಾಪ್ರಭುತ್ವ ಉಳಿಸಲು ಆಗ್ರಹಿಸುತ್ತಿದೆ. ನಾವು ಚುನಾವಣೆಗೆ ಸಂಪೂರ್ಣ ಸಿದ್ಧವಾಗಿದ್ದು, ಯಾವಾಗ ಚುನಾವಣೆ ನಡೆದರೂ ನಾವೇ ಗೆಲ್ಲುವ ದೃಢ ವಿಶ್ವಾಸವಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಭರ್ಜರಿ ಬಹುಮತದಿಂದ ಜಯಗಳಿಸಲಿದ್ದು, ಬಿಬಿಎಂಪಿ ಚುನಾವಣೆಯಲ್ಲೂ ಅಂತಹದೇ ಫಲಿತಾಂಶ ಬರಲಿದೆʼ ಎಂದು ಮೋಹನ್‌ ದಾಸರಿ ಹೇಳಿದರು.

ಈ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಜಗದೀಶ್‌ ವಿ ಸದಂ, ಅಶೋಕ್‌ ಮೃತ್ಯುಂಜಯ, ಗೋಪಿನಾಥ್‌, ಶ್ರೀನಿವಾಸ್‌ ರೆಡ್ಡಿ, ವೀಣಾ ಸೆರ್ರಾವ್‌, ಡಾ. ಕೇಶವ ಕುಮಾರ್‌ ಮತ್ತಿತರ ನಾಯಕರು, ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

ಬಿಬಿಎಂಪಿ ಚುನಾವಣೆ ನಡೆಸಿ, ಬೆಂಗಳೂರು ಉಳಿಸಿ: ಡಿ. 3ರಿಂದ ಆಮ್‌ ಆದ್ಮಿ ಪಾರ್ಟಿಯ ಬೃಹತ್‌ ಸಹಿಸಂಗ್ರಹ ಅಭಿಯಾನ
ಬೆಂಗಳೂರು: ಬಿಬಿಎಂಪಿ ಚುನಾವಣೆ ಮುಂದೂಡಲು ಕುತಂತ್ರ ಮಾರ್ಗ ಅನುಸರಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ, ʼಬಿಬಿಎಂಪಿ ಚುನಾವಣೆ ನಡೆಸಿ, ಬೆಂಗಳೂರು ಉಳಿಸಿʼ ಹೆಸರಿನಲ್ಲಿ ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ಬೃಹತ್‌ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿಯವರು, ʼಡಿಸೆಂಬರ್ 3ರಿಂದ 5ರ ತನಕ ಬೆಂಗಳೂರಿನಾದ್ಯಂತ ಮೂರು ದಿನಗಳ ಬೃಹತ್‌ ಸಹಿಸಂಗ್ರಹ ಅಭಿಯಾನ ನಡೆಸಲು ಆಮ್‌ ಆದ್ಮಿ ಪಾರ್ಟಿ ನಿರ್ಧರಿಸಿದೆ. ಸುಮಾರು ಐದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಡಿಸೆಂಬರ್‌ 6ರ ಮಂಗಳವಾರದಂದು ಎಎಪಿ ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಬೆಂಗಳೂರಿನಾದ್ಯಂತ ಸಂಗ್ರಹಿಸಿದ ಸಹಿಗಳನ್ನು ರಾಜ್ಯಪಾಲರಿಗೆ ನೀಡಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಶೀಘ್ರ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಆಗ್ರಹಿಸಲಾಗುತ್ತದೆʼ ಎಂದು ತಿಳಿಸಿದರು.

ʼ2020ರಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಬಿಜೆಪಿ ಸರ್ಕಾರ ಕುಂಟುನೆಪಗಳನ್ನು ಮುಂದಿಟ್ಟುಕೊಂಡು ಮುಂದೂಡುತ್ತಲೇ ಬಂದಿದೆ. ಇದರಿಂದ ಬೆಂಗಳೂರಿನ ಅಭಿವೃದ್ಧಿ ಕುಂಠಿತಗೊಳ್ಳುವುದರ ಜೊತೆಗೆ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗಿದೆ. ಚುನಾವಣೆ ನಡೆಯುವುದಕ್ಕೆ ಪದೇಪದೇ ಅಡ್ಡಗಾಲು ಹಾಕುವ ಮೂಲಕ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಎಸಗಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಲ್ಲಿನ ದುರಾಡಳಿತದಿಂದಾಗಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವುದು ಶತಸಿದ್ಧ ಎಂದು ಬಿಜೆಪಿಗೆ ಮನವರಿಕೆ ಆಗಿರುವುದರಿಂದ ಬಿಜೆಪಿಯು ಚುನಾವಣೆ ಮುಂದೂಡುವ ಕುತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಕೂಡ ಈ ವಿಷಯದಲ್ಲಿ ಮೌನ ವಹಿಸಿರುವುದನ್ನು ಗಮನಿಸಿದರೆ, ಅವು ಬಿಜೆಪಿಯೊಂದಿಗೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತದೆʼ ಎಂದು ಮೋಹನ್‌ ದಾಸರಿ ಆರೋಪಿಸಿದರು.

ʼಮೇಯರ್‌ ಹಾಗೂ ಕಾರ್ಪೊರೇಟರ್‌ಗಳು ಇಲ್ಲದ ಕಾರಣ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. 2022-23ನೇ ವಾರ್ಡ್‌ ಮಟ್ಟದ 2,543 ಕಾಮಗಾರಿಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ 867 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ ಎಂಟು ತಿಂಗಳಾದರೂ ಈ ಪೈಕಿ ಕೇವಲ 76 ಕಾಮಗಾರಿಗಳು ಆರಂಭಗೊಂಡಿವೆ. ಅಧಿಕಾರಿಗಳು ನಾಮಕಾವಸ್ಥೆಗೆ ವಾರ್ಡ್‌ ಮಟ್ಟದ ಸಭೆಗಳನ್ನು ನಡೆಸುತ್ತಿದ್ದರೂ ಪ್ರಶ್ನಿಸುವವರು ಇಲ್ಲವಾಗಿದೆ. ಕಸದ ಸಮಸ್ಯೆ, ರಸ್ತೆ ಗುಂಡಿಗಳು, ಅವ್ಯವಸ್ಥಿತ ಒಳಚರಂಡಿ, ಕೆಟ್ಟು ಹೋಗಿರುವ ವಿದ್ಯುತ್‌ ದೀಪ, ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು ಬೆಂಗಳೂರಿನಲ್ಲಿ ತಾಂಡವವಾಡುತ್ತಿವೆ. ಇದರಿಂದಾಗಿ ನಾಗರಿಕರು ಬೆಂಗಳೂರನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆʼ ಎಂದು ಮೋಹನ್‌ ದಾಸರಿ ಹೇಳಿದರು.

ಬಿಬಿಎಂಪಿ ಚುನಾವಣೆಗೆ ಮೂರು ಪಕ್ಷಗಳಿಗೂ ಸೋಲಿನ ಭಯವಿದೆ: ಮೋಹನ್‌ ದಾಸರಿ ವ್ಯಂಗ್ಯ
ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆದರೆ ರಾಜ್ಯದ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್ ಪಕ್ಷಗಳಿಗೆ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭಯ ಕಾಡುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿಯವರು ವ್ಯಂಗಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ, ಮೀಸಲಾತಿ ನಿಗದಿಗೆ ಮೂರು ತಿಂಗಳು ಸಮಯ ಬೇಕೆಂದು ರಾಜ್ಯ ಸರ್ಕಾರವು ಕೋರ್ಟ್‌ಗೆ ಮನವಿ ಸಲ್ಲಿಸಿರುವ ಕುರಿತು ಮಾದ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼ2020ರಲ್ಲಿ ನಡೆಯಬೇಕಾಗಿದ್ದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು, ಕೋರ್ಟ್‌ ಛೀಮಾರಿ ಹಾಕಿದ ನಂತರವೂ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿರುವುದು ಬಿಜೆಪಿಯ ಹೇಡಿತನಕ್ಕೆ ಸಾಕ್ಷಿ. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಬೆಂಗಳೂರು ಶಾಸಕರು ಕೂಡ ಬಿಬಿಎಂಪಿ ಚುನಾವಣೆಗೆ ಒತ್ತಾಯಿಸುತ್ತಿಲ್ಲ. ಮೂರೂ ಪಕ್ಷಗಳಿಗೆ ಸೋಲುವ ಭಯ ಕಾಡುತ್ತಿದ್ದು, ಆದ್ದರಿಂದಲೇ ಚುನಾವಣೆ ಮುಂದೂಡುವುದರಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿವೆʼ ಎಂದು ಟೀಕಿಸಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿನ ಮುಖಭಂಗವು ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿಗೆ ತಿಳಿದಿದೆ. ಆದ್ದರಿಂದ ವಿಧಾನಸಭಾ ಚುನಾವಣೆಯ ಜೊತೆಗೆ ಅಥವಾ ಅದರ ನಂತರದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪಿತೂರಿ ನಡೆಸುತ್ತಿದೆ. ಆದರೆ ಬೆಂಗಳೂರು ಹಾಗೂ ರಾಜ್ಯಾದ್ಯಂತ ಆಮ್‌ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದ್ದು, ಯಾವುದೇ ಸಮಯದಲ್ಲಿ ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆ ನಡೆದರೂ ನಮಗೆ ಬಹುಮತ ದೊರೆಯಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಸಮರ್ಥ ಶಿಕ್ಷಣ ಸಚಿವ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ 1.62 ಲಕ್ಷ ದಾಖಲಾತಿ ಕುಸಿತ: ಮೋಹನ್‌ ದಾಸರಿ ಆರೋಪ
ಬೆಂಗಳೂರು: ರಾಜ್ಯದ 1.62 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಸರ್ಕಾರಿ ಶಾಲೆಯನ್ನು ತ್ಯಜಿಸಿ ಖಾಸಗಿ ಶಾಲೆ ಸೇರಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಮೇಲಿರುವ ನಿರ್ಲಕ್ಷ್ಯ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರ ಅಸಮರ್ಥತೆ ಕಾರಣ ಎಂದು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿಯವರು, ʼಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಕ್ಕೂ ಅಧಿಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ, ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆದರೆ ಈಗ ಸರ್ಕಾರಿ ಶಾಲೆಗಳ ದುಸ್ಥಿತಿಯಿಂದ ಬೇಸತ್ತು ಅವರು ತಮ್ಮ ಮಕ್ಕಳನ್ನು ಪುನಃ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಪರಿಣಾಮವಾಗಿ, ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 1.62 ಲಕ್ಷ ಕುಸಿದಿದೆʼ ಎಂದು ಹೇಳಿದ್ದಾರೆ.

ʼಕರ್ನಾಟಕದಲ್ಲಿರುವ 47,585 ಸರ್ಕಾರಿ ಶಾಲೆಗಳ ಪೈಕಿ 6,529 ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ಬಹುತೇಕ ಶಾಲೆಗಳಲ್ಲಿ ಮೂಲಸೌಕರ್ಯಗಳು ಹಾಗೂ ಶಿಕ್ಷಕರ ಕೊರತೆಯಿದೆ. ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಕೋಮು ರಾಜಕೀಯಕ್ಕೆ ನೀಡುವ ಆದ್ಯತೆಯನ್ನು ಅಭಿವೃದ್ಧಿಗೆ ನೀಡದಿರುವುದು ದುರಂತ. ದೆಹಲಿಯ ಆಮ್‌ ಆದ್ಮಿ ಪಾರ್ಟಿ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಳವಡಿಸಿದ್ದು, ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲೂ ಅಂತಹ ಶೈಕ್ಷಣಿಕ ಕ್ರಾಂತಿಗಾಗಿ ಆಮ್‌ ಆದ್ಮಿ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬರಬೇಕುʼ ಎಂದು ಮೋಹನ್‌ ದಾಸರಿ ಹೇಳಿದ್ದಾರೆ.

ಬೆಳಗಾವಿ ಗಡಿ ವಿವಾದ: ಸರ್ವಪಕ್ಷ ಸಭೆಗೆ ಆಮ್‌ ಆದ್ಮಿ ಪಾರ್ಟಿ ಆಗ್ರಹ, ಭಾಗವಹಿಸಲು ಅವಕಾಶಕ್ಕೆ ಮನವಿ
ಬೆಂಗಳೂರು: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಕೂಡ ಸರ್ವಪಕ್ಷಗಳ ಸಭೆ ನಡೆಸಿ ದಿಟ್ಟ ನೆಲುವು ತೆಗೆದುಕೊಳ್ಳಬೇಕೆಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದ್ದು, ಸಭೆಯಲ್ಲಿ ಭಾಗವಹಿಸಲು ಆಮ್‌ ಆದ್ಮಿ ಪಾರ್ಟಿ ಪ್ರತಿನಿಧಿಗೂ ಅವಕಾಶ ನೀಡಬೇಕೆಂದು ಕೋರಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ಹಿತಾಸಕ್ತಿ ಕಾಪಾಡಲು ಆಮ್‌ ಆದ್ಮಿ ಪಾರ್ಟಿ ಬದ್ಧವಾಗಿದೆ ಎಂದು ತಿಳಿಸಿರುವ ಪೃಥ್ವಿ ರೆಡ್ಡಿಯವರು, ʼನಮ್ಮ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಪ್ರಯತ್ನಗಳ ವಿರುದ್ಧ ಎಲ್ಲ ಪಕ್ಷಗಳೂ ಒಗ್ಗೂಡಿ ಹೋರಾಡಬೇಕಾದ ಸಮಯ ಬಂದಿದೆ. ಈ ವಿಷಯದಲ್ಲಿ ನಮ್ಮ ಆಮ್‌ ಆದ್ಮಿ ಪಾರ್ಟಿಯು ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧವಾಗಿದ್ದು, ಸರ್ವಪಕ್ಷ ಸಭೆಗೆ ರಾಜ್ಯ ಸರ್ಕಾರವು ಆಮ್‌ ಆದ್ಮಿ ಪಾರ್ಟಿಯನ್ನೂ ಆಹ್ವಾನಿಸಬೇಕು. ಭಾರತದ ಚುನಾವಣಾ ಆಯೋಗದ ಕಾನೂನಿನ ಪ್ರಕಾರ ಆಮ್‌ ಆದ್ಮಿ ಪಾರ್ಟಿಗೆ ಇನ್ನೂ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗದಿದ್ದರೂ, ಪ್ರಸ್ತುತ ವಸ್ತುಸ್ಥಿತಿಯ ಪ್ರಕಾರ ಆಮ್‌ ಆದ್ಮಿ ಪಾರ್ಟಿಯನ್ನು ರಾಷ್ಟ್ರೀಯ ಪಕ್ಷವೆಂದು ಪರಿಗಣಿಸಿ ಸಭೆಗೆ ಕರೆಯಬಹುದುʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ʼನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡಲು ಸದಾ ಬದ್ಧವಾಗಿರುವ ಅನುಭವಿ ಹಾಗೂ ಜ್ಞಾನವುಳ್ಳ ವ್ಯಕ್ತಿಗಳು ಆಮ್‌ ಆದ್ಮಿ ಪಾರ್ಟಿಯಲ್ಲಿ ಇದ್ದಾರೆ. ಉದಾಹರಣೆಗೆ, ಕಳೆದ ಒಂದು ದಶಕದಿಂದ ನೀರುಹಂಚಿಕೆ ವಿವಾದ ಹಾಗೂ ಗಡಿ ವಿವಾದಕ್ಕೆ ಸಂಬಂಧಿಸಿದ ಸರ್ವಪಕ್ಷ ಸಭೆಗಳಲ್ಲಿ ಭಾಗವಹಿಸಿರುವ ಬ್ರಿಜೇಶ್‌ ಕಾಳಪ್ಪರವರು ಇದ್ದಾರೆ. ಆದ್ದರಿಂದ ಸರ್ವಪಕ್ಷ ಸಭೆಗೆ ನಮ್ಮ ಪಕ್ಷದ ಕೊಡುಗೆಯು ಸತ್ವಯುತವಾಗಿ, ಹೊಸತನವಾಗಿ ಹಾಗೂ ಯೋಗ್ಯವಾಗಿ ಇರುತ್ತದೆ ಎಂದು ಭರವಸೆ ನೀಡುತ್ತಿದ್ದೇನೆ. ರಾಜ್ಯದ ಹಿತಾಸಕ್ತಿಗಾಗಿ ಮುಖ್ಯಮಂತ್ರಿಯವರು ಪರಿಪೂರ್ಣವಾದ ಪ್ರಯತ್ನಗಳನ್ನು ಮಾಡಬೇಕುʼ ಎಂದು ಪೃಥ್ವಿ ರೆಡ್ಡಿ ಪತ್ರದಲ್ಲಿ ಹೇಳಿದ್ದಾರೆ.

ರಸ್ತೆಗುಂಡಿಯಿಂದ ಸಾವುಗಳು: ನವೆಂಬರ್‌ 19ಕ್ಕೆ ಎಎಪಿಯಿಂದ ಬೃಹತ್‌ ಪ್ರತಿಭಟನೆ, ವಿಧಾನಸೌಧಕ್ಕೆ ಮುತ್ತಿಗೆ
ಬೆಂಗಳೂರು: ರಸ್ತೆ ಗುಂಡಿಗಳಿಗೆ ವಾಹನ ಸವಾರರು ಬಲಿಯಾಗುತ್ತಿರುವ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಈ ಕುರಿತು ನಿರ್ಲಕ್ಷ್ಯ ವಹಿಸಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರದಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಅವರು, ʼಇತ್ತೀಚಿನ ದಿನಗಳಲ್ಲಿ ರಸ್ತೆಗುಂಡಿಗಳಿಂದಾಗಿ ಅಪಘಾತಗಳು, ಗಾಯಗಳು, ಸಾವುಗಳು ಸಾಮಾನ್ಯವಾಗಿವೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದಾಗಿ ಅಮಾಯಕ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗುಂಡಿಗಳಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವ ತಾಕತ್ತು ಈ ಸರ್ಕಾರಕ್ಕೆ ಇಲ್ಲ. ಜನವಿರೋಧಿಯಾಗಿರುವ ಈ ಲಜ್ಜೆಗೇಡಿ ಸರ್ಕಾರದ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು ನವೆಂಬರ್‌ 19ರ ಶನಿವಾರದಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ, ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ. ಈ ಮೂಲಕ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದೆʼಎಂದು ಹೇಳಿದರು.

ʼರಸ್ತೆ ಗುಂಡಿಗೆ ಬಲಿಯಾದವರ ಕುಟುಂಬದವರ ಅನೇಕ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಲಿದ್ದಾರೆ. ಸಾಮಾಜಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ನಮ್ಮ ಈ ಜನಪರ ಹೋರಾಟಕ್ಕೆ ಕೈಜೋಡಿಸಬೇಕು. ಬೆಂಗಳೂರಿನ ಸಮಸ್ತ ಜನತೆ, ಅದರಲ್ಲೂ ವಿಶೇಷವಾಗಿ ವಾಹನ ಸವಾರರು ಹಾಗೂ ಯುವಜನತೆ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು. ಉತ್ತಮ ರಸ್ತೆ ಪಡೆಯುವುದು ಎಲ್ಲರ ಹಕ್ಕಾಗಿದ್ದು, ಇದಕ್ಕಾಗಿ ಜನರು ಒಂದುಗೂಡಬೇಕುʼಎಂದು ಮೋಹನ್‌ ದಾಸರಿ ಮನವಿ ಮಾಡಿದರು.

ಬೆಂಗಳೂರು ನಗರ ಎಎಪಿ ಸಂಘಟನಾ ಕಾರ್ಯದರ್ಶಿ ಸುರೇಶ್‌ ರಾಥೋಡ್‌ ಮಾತನಾಡಿ, ʼರಸ್ತೆಗುಂಡಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವುದು ಹಾಗಿರಲಿ, ರಸ್ತೆಗುಂಡಿಗಳಿಂದ ಕೈಕಾಲು ಮುರಿದುಕೊಂಡವರಿಗೆ ಹಾಗೂ ಬಲಿಯಾದವರ ಕುಟುಂಬದವರಿಗೆ ಪರಿಹಾರ ನೀಡಲೂ ಬಿಜೆಪಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಮುಖ್ಯಮಂತ್ರಿಯವರು, ಸಚಿವರು, ಶಾಸಕರು, ಅಧಿಕಾರಿಗಳು ಯಾರೂ ಕೂಡ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರುತ್ತಿಲ್ಲ. ಹೈಕೋರ್ಟ್‌ ಪದೇಪದೇ ಛೀಮಾರಿ ಹಾಕಿದರೂ ತಲೆಕೆಡಿಸಿಕೊಳ್ಳದಷ್ಟು ಈ ಬಿಜೆಪಿ ಸರ್ಕಾರ ಹಾಗೂ ಬಿಬಿಎಂಪಿ ಭಂಡತನ ಮೆರೆಯುತ್ತಿದೆ. ಪದೇಪದೇ ಡೆಡ್‌ಲೈನ್‌ ಮುಂದಕ್ಕೆ ಹಾಕುವ ಮೂಲಕ ಬೆಂಗಳೂರಿಗರನ್ನು ವಂಚಿಸಲಾಗುತ್ತಿದೆʼ ಎಂದು ಹೇಳಿದರು.

ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕಾಗಿ ಆಮ್ ಆದ್ಮಿ ಪಕ್ಷ ಒಂದೇ ಆಯ್ಕೆ : ಪೃಥ್ವಿರೆಡ್ಡಿ
ಬೆಂಗಳೂರು: ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದ ಬಾಪೂಜಿನಗರ ವಾರ್ಡ್ ನಲ್ಲಿ ನಿನ್ನೆ ಆಮ್ ಆದ್ಮಿ ಪಕ್ಷದ ವತಿಯಿಂದ ಬೃಹತ್ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು .

ಸುದ್ದಿಗಾರರೊಂದಿಗೆ ಮಾತನಾಡುತ್ತ ಪೃಥ್ವಿ ರೆಡ್ಡಿಯವರು ರಾಜಪ್ರಭುತ್ವದಿಂದ ಸ್ವತಂತ್ರಗೊಂಡು 75 ವರ್ಷಗಳಾದರೂ ಸಹ ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳು ಅದೇ ರಾಜಪ್ರಭುತ್ವ ವನ್ನು ಉಳಿಸಿಕೊಂಡು ಪ್ರಜಾಪ್ರಭುತ್ವವನ್ನು ದಮನ ಮಾಡುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ. ಕೂಡಲೇ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಆಮ್ ಆದ್ಮಿ ಪಕ್ಷದ ಜನಸಾಮಾನ್ಯನನ್ನು ಗೆಲ್ಲಿಸುವುದೊಂದೇ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದು ಜನತೆಯನ್ನುದ್ದೇಶಿಸಿ ಮಾತನಾಡಿದರು. ಈ ಮೂಲಕ ರಾಜಕೀಯ ಕಲುಷಿತ ತ್ವಚೆಯನ್ನು ಹೋಗಲಾಡಿಸಿ ಜನಸಾಮಾನ್ಯನ ಅಳಲನ್ನು, ನೋವು – ದುಮ್ಮಾನ ಗಳ ಪರಿಹಾರಕ್ಕಾಗಿ  ಆಮ್ ಆದ್ಮಿ ಪಕ್ಷವನ್ನು ಅಪ್ಪಿಕೊಳ್ಳುವುದು ಈಗ ಇರುವ ಏಕೈಕ ದಾರಿ ಎಂದು ತಿಳಿಸಿದರು.

ಮುಂಬರುವ  ಬೆಂಗಳೂರು ಬೃಹತ್  ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಬೃಹತ್ ಬಹುಮತದಿಂದ ಪಾಲಿಕೆಯ ಕೈ ಹಿಡಿಯಲಿದೆ ಎಂದು ತಿಳಿಸಿದರು.

ಪಾದಯಾತ್ರೆ ಸ್ಥಳೀಯ ಬೃಹತ್ ಜನಸ್ತೋಮದೊಂದಿಗೆ ಯಶಸ್ವಿಯಾಯಿತು. ಪಾದಯಾತ್ರೆಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಸೇರಿದಂತೆ ಡಾ. ರಮೇಶ್  ಬೆಲ್ಲಮಕೊಂಡ, ರಹೀಂಖಾನ್, ಅರ್ಚನಾ ಹಾಗೂ ಇನ್ನಿತರ ಸ್ಥಳೀಯ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿದ್ದರು.