munirathna – Peepal Media

ಎದುರಾಳಿಗಳ ಮಟ್ಟ ಹಾಕಲು ಹನಿಟ್ರಾಪ್ ಪ್ರಯೋಗ ; ಬಿಜೆಪಿ ಶಾಸಕ ಮುನಿರತ್ನ ಮೇಲೆ ಗಂಭೀರ ಆರೋಪ
ತನಗೆ ಆಗದವರ ಮಟ್ಟ ಹಾಕಲು, ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳ ಸುಮ್ಮನಾಗಿಸಲು, ಓಟು ಗಿಟ್ಟಿಸಲು ಬಿಜೆಪಿ ಶಾಸಕ ಮುನಿರತ್ನ ಹನಿಟ್ರಾಪ್ ಮಾಡುತ್ತಿದ್ದರು. ಅದಕ್ಕಾಗಿಯೇ ಎರಡ್ಮೂರು ಪ್ರತ್ಯೇಕ ಸ್ಟುಡಿಯೋ ಸೆಟಪ್ ಕೂಡಾ ಮಾಡಿಕೊಂಡಿದ್ದಾರೆ ಎಂದು ಶಾಸಕ ಮುನಿರತ್ನ ಬೆಂಬಲಿಗ, ಜುಲೈ 23 ರ ಭಾನುವಾರ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಬಿಬಿಎಂಪಿ ಸದಸ್ಯ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ವೇಲು ನಾಯ್ಕರ್ ಒಂದು ಕಾಲದಲ್ಲಿ ಶಾಸಕ ಮುನಿರತ್ನ ಆಪ್ತ ವಲಯದಲ್ಲಿದ್ದು, ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದವರು. ಚುನಾವಣೆ ಸಂದರ್ಭದಲ್ಲಿ ಚುನಾವಣೆ ಎದುರಿಸುವುದು ಹೇಗೆ ಅಂದಾಗ ಈಸ್ಟಮನ್ ಕಲರ್ ಸಿನಿಮಾ ಇದೆ, ಅದನ್ನು ತೋರಿಸಿ ಓಟು ಗಿಟ್ಟಿಸೋದು ಅನ್ನೋ ಮತನ್ನು ಹೇಳಿದ್ದರು. ಇದು ಮುನಿರತ್ನ ಚುನಾವಣೆ ಎದುರಿಸೋ ರೀತಿ ಅಂತಲೇ ವೇಲು ನಾಯ್ಕರ್ ನೇರವಾಗಿ ಆರೋಪಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಕಾರ್ಪೊರೇಟರ್ ಗಳಾದ ವೇಲು ನಾಯ್ಕರ್, ಮೋಹನ್ ಕುಮಾರ್, ಶ್ರೀನಿವಾಸ್ ಮೂರ್ತಿ, ಸಿದ್ದೇಗೌಡರು ಸೇರಿದಂತೆ ನೂರಾರು ಮಂದಿ ಅವರ ಅನುಯಾಯಿಗಳು ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಆ ಕಾರ್ಯಕ್ರಮದಲ್ಲಿ ಮುನಿರತ್ನ ಮೇಲೆ ವೇಲು ನಾಯ್ಕರ್ ಮೇಲಿನಂತೆ ಆರೋಪಿಸಿದ್ದಾರೆ.

ಮುನಿರತ್ನ ನಿರ್ಮಾಪಕನಾಗಿ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಸಚಿವರಾದ ಮೇಲೂ ಇದನ್ನೇ ಮುಂದುವರಿಸಿಕೊಂಡೇ ಬಂದಿದ್ದಾರೆ. ಅವರ ಕಚೇರಿಗಳಲ್ಲಿ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ ಚೇಂಬರ್‌ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು. ಆಗದವರ ಮೇಲೆ ಹನಿಟ್ರ್ಯಾಪ್ ಮಾಡಿ ಹೆದರಿಸುವುದು ಮಾಡುತ್ತಾರೆ. ಜೆ.ಪಿ.ಪಾರ್ಕ್‌, ಡಾಲರ್ಸ್‌ ಕಾಲೋನಿಯಲ್ಲಿ ಇದಕ್ಕಾಗಿ ಒಂದು ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಹೇಗಿದ್ದರೂ ಅವರು ಸಿನಿಮಾ ನಿರ್ಮಾಪಕರಲ್ಲವೇ. ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ ಎಂಬ ಆರೋಪ ಮಾಡಿದ್ದಾರೆ.

IFS ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣ:ಆರೋಪಿಯ ರಕ್ಷಣೆಗೆ ನಿಂತರೇ ಮಾಜಿ ಸಚಿವ‌ ಮುನಿರತ್ನ?
ಬೆಂಗಳೂರು: IFS ಅಧಿಕಾರಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಕುರಿತು ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ದೂರು ಹಿಂಪಡೆಯಲು ಬೆದರಿಕೆ ಒಡ್ಡಿದ್ದ ಶಾಸಕರು, ಪೊಲೀಸರ ಸಮೇತ ಹಲವರ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.

ದೂರು ಹಿಂಪಡೆಯುವಂತೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಇನ್ಸ್ಪೆಕ್ಟರ್‌, ಎಸ್‌ ಐ, ರೈಟರ್‌ ಹಾಗೂ ಇತರ ಸಿಬ್ಬಂದಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ಥ ಮಹಿಳೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಿದ್ದಾರೆ.

ದಾಖಲಾಗಿರುವ ದೂರಿನ ಪ್ರತಿ ಪೀಪಲ್‌ ಟಿವಿಗೆ ದೊರಕಿದ್ದು, ಅದರಲ್ಲಿನ ವಿವರಗಳು ಬೆಚ್ಚಿಬೀಳಿಸುವಂತಿವೆ.

ಏನಿದು ಪ್ರಕರಣ?

2022ರ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಐಎಫ್ಎಸ್‌ ಅಧಿಕಾರಿ ರವಿಶಂಕರ್‌ ಎನ್ನುವವರ ವಿರುದ್ಧ ವಿರುದ್ಧ ದೆಹಲಿಯ ಚಾಣಕ್ಯಪುರಿ ಪೊಲೀಸ್‌ ಠಾಣೆಯಲ್ಲಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ ಕುರಿತು ದೂರು ದಾಖಲಿಸಿದ್ದರು. ಈ ಕುರಿತು ಮಾಹಿತಿ ಪಡೆದ ಐಪಿಎಸ್‌ ಅಧಿಕಾರಿ ರವಿಶಂಕರ್ ತನ್ನ ಪತ್ನಿಯ ಪರಿಚಯವನ್ನು ಬಳಸಿಕೊಂಡು ಮಾಜಿ ಸಚಿವ, ಹಾಗೂ ಹಾಲಿ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಸಂಪರ್ಕಿಸಿ ಅವರ ಪ್ರಭಾವವನ್ನು ಬಳಸಿಕೊಂಡು ನಗರದ ಅನ್ನಪೂರ್ಣ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಲೋಹಿತ್‌ ಎನ್ನುವವರ ಮೂಲಕ ವ್ಯಕ್ತಿತ್ವ ಹರಣ ಮಾಡುವಂತಹ ದೂರನ್ನು ಕೊಡಿಸಿದ್ದಾರೆʼ ಎಂಬುದು ಮಹಿಳೆಯ ಆರೋಪ.

ಲೋಹಿತ ಎನ್ನುವ ವ್ಯಕ್ತಿಯು ಮುನಿರತ್ನ ಅವರ ಆಪ್ತೆ ಲಕ್ಷ್ಮೀಯವರ ಮೂಲಕ ಪರಿಚಯವಾಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಲಕ್ಷ್ಮೀ, ಯಶೋಧಾ, ಕಾಮಾಕ್ಷಿ, ಲೋಹಿತ, ಕಿರಣ, ಮಂಜು ಎಂಬುವವರು ತನ್ನ ಸ್ನೇಹ ಸಂಪಾದಿಸಿ ಗುಹಾಂತರ, ಅಗಲಗುರ್ಕಿ ರೆಸಾರ್ಟುಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಮತ್ತು ಬರಿಸುವ ಔಷಧಿ ನೀಡಿರುತ್ತಾರೆ. ನಂತರ ತನ್ನ ಅಸಭ್ಯ ಫೋಟೊಗಳನ್ನು ತೆಗೆದ ಅವರು ಅದನ್ನು ಶಾಸಕ ಮುನಿರತ್ನರಿಗೆ ಕೊಟ್ಟಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯು 2022ರ ಅಕ್ಟೋಬರ್‌ 6ರಂದು ದೆಹಲಿಯಲ್ಲಿ ದೂರು ನೀಡಿದ್ದನ್ನು ಅರಿತು ಅದೇ ದಿನ ಶಾಸಕ ಮುನಿರತ್ನ ಅವರು ಲೋಹಿತನ ಮೂಲಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಕೊಡಿಸಿದ್ದಾರೆ. ದೂರಿನಲ್ಲಿ ಮಹಿಳೆಯು ಲೋಹಿತನ ಫೋಟೊಗಳನ್ನು ಇರಿಸಿಕೊಂಡು ಬ್ಲಾಕ್‌ ಮೇಲ್ ಮಾಡುತ್ತಿರುವುದಾಗಿ ಆರೋಪಿಸಲಾಗಿತ್ತು. ಈ ದೂರಿನನ್ವಯ 225/2021 – FIR ಸಂಖ್ಯೆಯಡಿ ಕಲಂ 420, 385, 506, R|W 34ರ ಅನ್ವಯ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಇದಾದ ನಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ ವಿಜಯನಗರದಲ್ಲಿದ್ದ ಮಹಿಳೆಯ ಮನೆಗೆ ನುಗ್ಗಿ, ʼನಿನ್ನ ಮನೆಯಲ್ಲಿ ಗಾಂಜಾ ಇದೆʼ ಎಂದು ಆರೋಪಿಸಿ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಆಕೆಯ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು ಮಹಿಳೆಯ ಮನೆ ಮಾಲಿಕನ ಬಳಿ ಆಕೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಆದಷ್ಟು ಬೇಗ ಮನೆ ಖಾಲಿ ಮಾಡಿಸುವಂತೆ ಹೇಳಿದ್ದಾಗಿ ಸಂತ್ರಸ್ಥೆ ದೂರಿದ್ದಾರೆ.‌

ಅಲ್ಲಿಂದ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಗೆ ಕರೆದೊಯ್ದ ಅವರು ಅಲ್ಲಿ ಮಹಿಳೆಯನ್ನು ಕೂರಿಸಿಕೊಂಡು ನಿನಗೆ ದೊಡ್ಡವರ ಸಹವಾಸ ಯಾಕೆ ಬೇಕು, ರವಿಶಂಕರ್‌ ವಿರುದ್ಧ ಏಕೆ ದೂರು ಕೊಟ್ಟಿದ್ದೀಯ ಎಂದು ಕೇಳಿರುತ್ತಾರೆ.
ಅಂದು ಮಹಿಳಾ ಪಿಸಿಗಳೊಡನೆ ಮಹಿಳೆಯನ್ನು ಮನೆಗೆ ಕಳುಹಿಸಿದ ಅಧಿಕಾರಿಯು, ನಂತರ 2021ರ ಅಕ್ಟೋಬರ್‌ 12ರಂದು ಮಹಿಳೆಯನ್ನು ಅಂದಿನ ಸಚಿವ ಮುನಿರತ್ನರ ಮನೆಗೆ ಕರೆದೊಯ್ದಿದ್ದಾರೆ. ಅಂದು ಅಧಿಕಾರಿಯ ಜೊತೆಯಲ್ಲಿ ಲೋಹಿತ, ಸಿಬ್ಬಂದಿ ಉಮೇಶ, WPC ಕೂಡಾ ಇದ್ದರು. ಅಲ್ಲಿ ಸಚಿವ ಮುನಿರತ್ನ ಲೋಹಿತನನ್ನು ಕರೆಸಿ “ನಾನು ಈ ಕ್ಷೇತ್ರದ ಶಾಸಕ ಕ್ಷೇತ್ರದಲ್ಲಿನ ಘಟನೆಗಳಿಗೆ ಸ್ಪಂದಿಸುವ ಜವಬ್ದಾರಿ ನನಗಿದೆ. ಈ ಕೇಸನ್ನು ಹಿಂದಕ್ಕೆ ತೆಗೆದುಕೋ, ಆಕೆ ಜೈಲಿಗೆ ಹೋಗುವುದು ನಿನಗೆ ಬೇಕೇ?” ಎಂದು ಕೇಳಿ ಲೋಹಿತನ ಬಳಿ ಕೇಸು ವಾಪಸ್‌ ಪಡೆಯುವಂತೆ ಮುನಿರತ್ನ ಹೇಳಿದ್ದಾರೆ.

ಅದಾದ ನಂತರ ಅಲ್ಲಿಯೇ ಲೋಹಿತನು ಆಕೆಗೆ “ಇನ್ನೊಂದು ಸಲ ಹೆಂಡತಿಗೆ ತಿಳಿದರೆ ನಿನ್ನನ್ನು ನನ್ನ ಕಾರಿನಿಂದ ಸಾಯಿಸಿಬಿಡುತ್ತೇನೆ” ಎಂದು ಗದರಿದ್ದಾನೆ. ಮತ್ತು ಅದೇ ದಿನ ನ್ಯಾಯಾಲಯದ ಮುಂದೆ ಮಹಿಳೆಗೆ ಹರ್ಷ ಎನ್ನುವ ವಕೀಲರನ್ನು ಸಹ ನೇಮಿಸಿಕೊಡಲಾಗಿತ್ತು. ಅಂದು ಲೋಹಿತ ತಾನು ಪ್ರಕರಣ ವಾಪಸ್‌ ಪಡೆಯುತ್ತಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದನಾದರೂ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.

ಇದಲ್ಲದೆ ಅನ್ನಪೂರ್ಣ ನಗರ ಪೊಲೀಸ್‌ ಠಾಣೆಯ ರೈಟ್‌ ವೆಂಕಟೇಶ್‌ ಎನ್ನುವಾತ ಸಂತ್ರಸ್ತ ಮಹಿಳೆಗೆ ಮತ್ತೆ ಮತ್ತೆ ಫೋನ್‌ ಮಾಡಿರುವ ದಾಖಲೆಯು ಪೀಪಲ್‌ ಮೀಡಿಯಾಕ್ಕೆ ಲಭ್ಯವಾಗಿದ್ದು, ಅದರಲ್ಲಿ ಆತ ಸಂತ್ರಸ್ಥ ಮಹಿಳೆಗೆ “ಸಾಹೇಬರು ಮಾತನಾಡಬೇಕು, ವಾಟ್ಸಾಪ್‌ ಹಾಕಿಸಿಕೊಳ್ಳಿ, ಇಂಟರ್ನೆಟ್‌ ಆನ್‌ ಮಾಡಿಕೊಳ್ಳಿ” ಎಂದು ಪದೇ ಪದೇ ಒತ್ತಾಯಿಸುತ್ತಿರುವುದನ್ನು ಕೇಳಬಹುದಾಗಿದೆ. ದೂರಿನ ಪ್ರತಿಯೂ ನಮಗೆ ಲಭ್ಯವಾಗಿದ್ದು ಮೇಲಿನ ವಿವರಗಳನ್ನು ಅದರಿಂದಲೇ ಪಡೆಯಲಾಗಿದೆ.

ಅಧಿಕಾರ ದುರ್ಬಳಕೆ ವಿರುದ್ಧ ಸಂತ್ರಸ್ಥ ಮಹಿಳೆಯು 2021ರ ಡಿಸೆಂಬರ್‌ ತಿಂಗಳಿನಲ್ಲೇ ಅಂದಿನ DGP, ಪೊಲೀಸ್‌ ಕಮಿಷನರ್‌ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರಾದರೂ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರಸ್ತುತ ಕೇಸು ಹೊಸ ತಿರುವು ಪಡೆದಿದ್ದು ಮತ್ತೆ ಕಮಿಷನರ್‌ ಅವರಿಗೆ ದೂರು ಸಲ್ಲಿಕೆಯಾಗಿದೆ. ಈ ಕುರಿತು ಕ್ರಮ ಏನಾದರೂ ಜರುಗಿಸಲಾಗುತ್ತದೆಯೇ ಅಥವಾ ಮತ್ತೆ ಪ್ರಭಾವ ಬಳಸುವ ಮೂಲಕ ಪ್ರಕರಣವನ್ನು ದಾರಿ ತಪ್ಪಿಸಲಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

‘ಓಟು ಕೇಳಲು ಬಂದರೆ ಓಡಾಡಿಸಿಕೊಂಡು ಹೊಡೀರಿ’ ; ಸಚಿವ ಮುನಿರತ್ನ ಪ್ರಚೋದನಕಾರಿ ಭಾಷಣ ; ಕುಸುಮಾ ಗಂಭೀರ ಆರೋಪ
ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ನೀತಿ ಸಂಹಿತೆ ಅಡಿಯಲ್ಲಿ ಅಧಿಕಾರಿಗಳು ತಪಾಸಣೆ, ನಿಯಮಗಳ ಉಲ್ಲಂಘನೆಯನ್ನು ಗುರುತಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕೋರ್ಟ್ ಕೂಡಾ ದ್ವೇಷದ ಭಾಷಣ (Hate Speech) ಕಂಡುಬಂದರೆ ಸೂಕ್ತ ದಾಖಲೆ ಒದಗಿಸಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಇದರ ನಡುವೆ ರಾಜ್ಯ ರಾಜಕಾರಣದಲ್ಲಿ ಸಂಹಿತೆಯನ್ನು ಗಾಳಿಗೆ ತೂರಿ ದ್ವೇಷ ಭಾಷಣ ಎಗ್ಗಿಲ್ಲದೆ ಸಾಗಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಚಿವ ಮುನಿರತ್ನ ವಿರೋಧ ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರನ್ನು ಎತ್ತಿ ಕಟ್ಟಿ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಪ್ರಚೋದಿಸಿ ಮಾತನಾಡಿರುವ ಮುನಿರತ್ನ ಕ್ಷೇತ್ರದಲ್ಲಿ ಅಶಾಂತಿ ಹುಟ್ಟಲು ನಾಂದಿ ಹಾಡಿದ್ದಾರೆ.

ಈ ಬಗ್ಗೆ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮುನಿರತ್ನ ಅವರ ಪ್ರಚೋದನಕಾರಿ ದ್ವೇಷ ಭಾಷಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ‌. ಅದರ ಜೊತೆಗೆ ಕನ್ನಡಿಗರು ಮತ್ತು ತಮಿಳರ ನಡುವೆ ಕಂದಕ ಸೃಷ್ಟಿಸಿ ಸಮಾಜವನ್ನು ಒಡೆಯುವ ಕೆಲಸವನ್ನು ಮುನಿರತ್ನ ಮಾಡಿದ ಬಗ್ಗೆ ಗಂಭೀರವಾಗಿ ಆರೋಪಿಸಿದ್ದಾರೆ.

https://twitter.com/KusumaH_INC/status/1641676567377248259

ಹೆಚ್ಚಿನದಾಗಿ ತಮಿಳು ಭಾಷಿಕರು ವಾಸಿಸುತ್ತಿರುವ ಜಾಲಹಳ್ಳಿ ವಾರ್ಡಿನ ಖಾತಾನಗರದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ ತಮಿಳಿನಲ್ಲಿ ಮಾತನಾಡಿ ಅಲ್ಲಿ ನೆರೆದಿದ್ದ ಕಾರ್ಯಕರ್ತರನ್ನು “ಬೇರೆ ಪಕ್ಷದವರು ನಿಮ್ಮ ವ್ಯಾಪ್ತಿಯಲ್ಲಿ ಬಂದರೆ ಅಟ್ಟಾಡಿಸಿ ಹೊಡೆಯಿರಿ, ಮುಂದಿನದು ನಾನು ನೋಡ್ಕೋತೀನಿ..” ಎಂಬ ರೀತಿಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ.

ಮುನಿರತ್ನ ಮಾಡಿರುವ ಪ್ರಚೋದನಕಾರಿ ದ್ವೇಷ ಭಾಷಣದ ತುಣುಕು ಈ ಕೆಳಗಿನಂತಿದೆ ; “ಯಾರಾದರೂ ನಿಮ್ಮ ವಾರ್ಡಿನ ಒಳಗೆ ಬಂದರೆ ಓಡಾಡಿಸಿಕೊಂಡು ಹೊಡೆಯಿರಿ. ಮಿಕ್ಕಿದ್ದು ನಾನು ನೋಡ್ಕೋತೀನಿ. ನೀವು ಯಾವ ರೀತಿಯಲ್ಲಿ ಹೊಡೀಬೇಕು ಅಂದ್ರೆ.. ಅವರು ತಿರುಗಿ ನೋಡಬಾರದು. ಆ ತರ ಹೊಡೀರಿ. ಯಾರ್ಯಾರು ಹೊಡೀತೀರಿ ಕೈ ಎತ್ತಿ ನೋಡೋಣ.. ನಾಳೆ ನಮ್ದು. ಯಾವಾಗ ನಮ್ಜು? ನಾಳೆ ಓಟ್ ಹಾಕ್ತೀರಲ್ಲ ಆ ನಾಳೆ ನಮ್ದು” ಎಂಬುದಾಗಿ ಬೇರೆ ಯಾವುದೇ ಪಕ್ಷದ ನಾಯಕರು ಬಂದರೂ ಹೊಡೆಯಲು ಕರೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ “ಈ ರೀತಿಯ ದ್ವೇಷ ಭಾಷಣ ಮಾಡುವುದರಿಂದ ಯಾವುದಾದರೂ ಪ್ರಾಣಹಾನಿಯಾದರೆ ಯಾರು ಹೊಣೆ? ತನ್ನ ಬೆಂಬಲಿಗರು ಹಾಗೂ ಸಾಮಾನ್ಯ ಜನರ ಜೀವಕ್ಕೆ ಇವರ ಬಳಿ ಬೆಲೆಯೇ ಇಲ್ಲವೇ?” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತನ್ನ ಬೆಂಬಲಿಗರಿಗೆ ಹಿಂಸಾಚಾರಕ್ಕೆ ಇಳಿಯಿರಿ ಎಂಬ ಶಾಸಕ ತಮ್ಮ ಮನೆ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸುತ್ತಾರೆಯೇ? ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಇವರು ಒಬ್ಬ ಜನಪ್ರತಿನಿಧಿ ಆಗಲು ಯೋಗ್ಯನೇ?” ಎಂಬುದಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿಯವರಿಗೆ ದೂರು ದಾಖಲಿಸಿ ದ್ವೇಷ ಭಾಷಣದ ಅಡಿಯಲ್ಲಿ ಮುನಿರತ್ನ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಹಾಗೇ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಂಡು ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಇನ್ನು ಸಚಿವ ಮುನಿರತ್ನ ಪ್ರಚೋದನಕಾರಿ ಭಾಷಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕ್ರಮ ತಗೆದುಕೊಳ್ಳಬಹುದು ಎಂಬುದು ಒಂದು ಮುಖ್ಯ ಪ್ರಶ್ನೆಯಾದರೆ, ಮುನಿರತ್ನ ಇಂತಹ ಪ್ರಚೋದನಾಕಾರಿ ಭಾಷಣದ ಹಿಂದೆ ಬಿಜೆಪಿ ಪಕ್ಷ ಎಷ್ಟರ ಮಟ್ಟಿಗೆ ಶಾಂತಿ ಸುವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ನಾಯಕರು ಮುನಿರತ್ನರ ಪ್ರಚೋದನಕಾರಿ ಭಾಷಣದ ಬಗ್ಗೆ ಈ ಬಗ್ಗೆ ತುಟಿ ಬಿಚ್ಚದೇ ಇರುವುದು ಸಹ ಮುನಿರತ್ನ ಮಾತಿಗೆ ಸಮ್ಮತಿ ಎಂದುಕೊಳ್ಳಬಹುದೇನೋ?

ಅಡಿಕೆ ತೋಟಗಳಿಗೆ ಎಲೆ ಚುಕ್ಕೆ, ಹಳದಿ ಎಲೆ ರೋಗ: ದೋಟಿ ಖರೀದಿಸಲು ರಾಜ್ಯ ಸರ್ಕಾರದಿಂದ ಸಬ್ಸಿಡಿ- ಸಚಿವ ಮುನಿರತ್ನ
ಸುಳ್ಯ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಡಿಕೆ ತೋಟಗಳು ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಬಳಲುತ್ತಿದ್ದು, ಚುಕ್ಕೆಗಳಿಂದ ಬಾಧಿತವಾದ ಎಲೆಯನ್ನು ಕತ್ತರಿಸಲು ಮತ್ತು ಬೆಳೆಗಳಿಗೆ ಔಷದಿ ಸಿಂಪಡಿಸುವ ಸಲುವಾಗಿ ರಾಜ್ಯ ಸರ್ಕಾರವು ದೋಟಿ ಖರೀದಿಸಲು ಸಬ್ಸಿಡಿ ನೀಡುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ಭಾನುವಾರ ತಿಳಿಸಿದ್ದಾರೆ.

ಡಿ.11ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯತಾಲೂಕಿನ ಎಲೆ ಚುಕ್ಕೆ ಮತ್ತು ಅಡಿಕೆ ರೋಗ ಭಾದಿತ ಮರ್ಕಂಜದಲ್ಲಿರುವ ಅಡಿಕೆ ತೋಟಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಅಡಿಕೆ ತೋಟಗಳು ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಬಳಲುತ್ತಿದ್ದು, ಇದರಿಂದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಈ ರೋಗವು ಅಡಿಕೆ ಬೆಳೆಯನ್ನು ಏಕೆ ಬಾಧಿಸುತ್ತಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಇಸ್ರೇಲ್ ಗೆ ಭೇಟಿ ನೀಡಿದಾಗ, ಅಲ್ಲಿನ ವಿಜ್ಞಾನಿಗಳೊಂದಿಗೆ ಈ ಕುರಿತು ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೆನೆʼ ಎಂದು ಹೇಳಿದ್ದಾರೆ.

ʼಚುಕ್ಕೆಗಳಿಂದ ಬಾಧಿತವಾದ ಎಲೆಯನ್ನು ಕತ್ತರಿಸಬೇಕು ಮತ್ತು ಬೆಳೆಯನ್ನು ಉಳಿಸಲು ಕೀಟನಾಶಕವನ್ನು ಸಿಂಪಡಿಸಬೇಕು ಎಂದು ತಿಳಿದುಬಂದಿದೆ. ಆದರೆ ಇದನ್ನು ನೆರೆಹೊರೆಯ ಕೃಷಿ ಮಾಲೀಕರು ಸಹ ಮಾಡಬೇಕಾಗಿದೆ. ಈ ಉದ್ದೇಶಕ್ಕಾಗಿ ಸರ್ಕಾರವು ದೋಟಿ ಖರೀದಿಸಲು ಸಬ್ಸಿಡಿ ನೀಡುತ್ತಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಚರ್ಚೆ ನಡೆಸಲಾಗಿದೆ. ಈ ಮೂಲಕ ರೋಗದಿಂದ ಬಾಧಿತವಾಗದ ತಳಿಯ ಅಡಿಕೆಯನ್ನು ಅಭಿವೃದ್ಧಿಪಡಿಸಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಎಲೆ ಚುಕ್ಕಿ ಬಾಧಿತ ಅಡಿಕೆ ತೋಟಗಳಿಗೆ,ಕೀಟನಾಶಕ ಸಿಂಪಡಿಸಲು ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಈ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆʼ ಎಂದು ಮುನಿರತ್ನ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ, ಮರ್ಕಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಗುಂಡಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ ಕಂಜಿಪಿಲಿ ಉಪಸ್ಥಿತರಿದ್ದರು.

ʼಗುತ್ತಿದಾರರ ಸಂಘಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ, ನಮ್ಮನ್ನು ರಕ್ಷಿಸಿʼ: ಕೆಂಪಣ್ಣ
ಬೆಂಗಳೂರು: ಕಾಮಗಾರಿ ಮಾಡಬೇಕಾದರೆ ನಾನು ಹೇಳಿದಷ್ಟು ಹಣ ತಂದು ಕೊಡಲಿಲ್ಲ ಅಂದರೆ ಕೆಲಸದಿಂದ ತೆಗೆಯುತ್ತೇನೆ ಎಂದು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಮುನಿರತ್ನ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದ ಎಲ್ಲ ಎಂಎಲ್‌ ಎಗಳೂ ಕಮಿಷನ್‌ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. 40% ಕಮಿಷನ್‌ ಇಲ್ಲದೆ ಕೆಲಸ ಆಗುತ್ತಿಲ್ಲ. ಇದನ್ನು ಪ್ರಶ್ನೆ ಮಾಡುತ್ತಿರುವ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ.

ಈ ಕುರಿತು  ಪ್ರತಿಕ್ರಿಯೆ ನೀಡಿರುವ ತೋಟಗಾರಿಕೆ ಸಚಿವ ಮುನಿರತ್ನ, ಸಂಪೂರ್ಣ ದಾಖಲೆ ಕೊಟ್ಟು ಮಾತಾಡಲಿ, ಆರೋಪಗಳಿಗೆ ದಾಖಲೆ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಮತ್ತು ಇದನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘವನ್ನು ವಿಭಜಿಸಲು ಸಚಿವರು ಯತ್ನಿಸುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ 10,000 ಕೋಟಿ ರುಪಾಯಿ ಕಾಮಗಾರಿ ಆಗಿದೆಯೇ ಎಂದು ಪ್ರಶ್ನಿಸಿದ ಕೆಂಪಣ್ಣ, ಮುನಿರತ್ನ ಅವರು ನಡೆಸಿರುವ ಕಾಮಗಾರಿಯ ಬಗ್ಗೆ ಉನ್ನತಮಟ್ಟದ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.

ಕೆಂಪಣ್ಣ ಹೇಳಿಕೆಗೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಗುತ್ತಿಗೆದಾರರ ಸಂಘದವರು ವಿರೋಧ ಪಕ್ಷದ ನಿರ್ದೇಶನದಂತೆ ಆರೋಪ ಮಾಡುತ್ತಿದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುತ್ತಿಗೆದಾರರ ಆರೋಪದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದಮೇಲೆ  ಕೆಂಪಣ್ಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ, ಇದು ರಾಜಕೀಯ ಪ್ರೇರಿತ ಆರೋಪ ಎಂದು ಕಿಡಿಕಾರಿದ್ದಾರೆ.