murder case – Peepal Media

ಕುಕ್ಕರ್‌ ನಿಂದ ಹೊಡೆದು ಸಂಗಾತಿಯ ಕೊಲೆ
ಬೆಂಗಳೂರು : ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ತನ್ನ ಸಂಗಾತಿಯನ್ನು ಕುಕ್ಕರ್‌ನಿಂದ ಹೊಡೆದು ಸಾಯಿಸಿದ ಪ್ರಕರಣದಲ್ಲಿ 29 ವರ್ಷದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ಕೇರಳ ಮೂಲದ ವೈಷ್ಣವ್‌ (29) ಹಾಗೂ ಆತನ ಸಂಗಾತಿ ದೇವಾ (24) ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದು Living Together ಸಂಬಂಧದಲ್ಲಿದ್ದರು. ತನ್ನ ಸಂಗಾತಿ ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಅನುಮಾನದಿಂದ ನಡೆದ ಈ ಜಗಳ ಸಂಜೆ ಐದು ಗಂಟೆಯ ಹೊತ್ತಿಗೆ ಕುಕ್ಕರ್‌ ನಿಂದ ಹೊಡೆದು ಸಾಯಿಸುವ ಮೂಲಕ ಅಂತ್ಯಕಂಡಿದೆ.

ದೇವಾ ಅವರ ಸಹೋದರಿ ದೂರವಾಣಿ ಕರೆ ಮಾಡಿ ಸಂಪರ್ಕಕ್ಕೆ ಬಾರದೇ ಇದ್ದಾಗ ನೆರೆಹೊರೆಯವರನ್ನು ಸಂಪರ್ಕಿಸಲಾಯಿತು. ಈ ವೇಳೆ ಈ ಕೊಲೆ ಬೆಳಕಿಗೆ ಬಂದಿದೆ. ಘಟನೆಯ ನಂತರ ಪರಾರಿಯಾಗಿದ್ದ ವೈಷ್ಣವ್‌ನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಈ ಜೋಡಿ ಒಟ್ಟಿಗೆ ವಾಸಿಸುತ್ತಿದ್ದ ವಿಚಾರ ಮನೆಯವರಿಗೂ ತಿಳಿದಿತ್ತು. ಅವರ ಮಧ್ಯೆ ಆಗಾಗ ನಡೆಯುತ್ತಿದ್ದ ಜಗಳದ ಬಗ್ಗೆ ನೆರೆಹೊರೆಯವರಿಗೂ ತಿಳಿದಿತ್ತು.

“ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯ ಪೋಷಕರನ್ನು ಭೇಟಿ ಮಾಡಿದ್ದೇನೆ. ಕಳೆದ ಹಲವು ದಿನಗಳಿಂದ ಇಬ್ಬರು ಜಗಳವಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಅವರ ಕುಟುಂಬವು ಇವರಿಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದೆ” ಎಂದು ಆಗ್ನೇಯ ಬೆಂಗಳೂರು ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಹೇಳಿದ್ದಾರೆ.

ವೈಷ್ಣವ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

‘ಆಕೆಯ ಶವವನ್ನು ಬೇಯಿಸಿ ವಿಲೇವಾರಿ ಮಾಡಲಾಯ್ತು!’ ; ಮುಂಬೈನಲ್ಲೊಂದು ಭೀಕರ ಕೊಲೆ ಪ್ರಕರಣ
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಇನ್ನೂ ಜನರ ಮನಸ್ಸಿನಲ್ಲಿ ಮಾಸುವ ಮುನ್ನವೇ ಅದೇ ಮಾದರಿಯ ಹಾಗೂ ಅದಕ್ಕಿಂತ ಭೀಕರ ಎನ್ನಿಸುವ ಕೊಲೆ ಪ್ರಕರಣವೊಂದು ಮಹಾರಾಷ್ಟ್ರದ ಥಾಣೆ ಭಾಗದಿಂದ ದಾಖಲಾಗಿದೆ.

3 ವರ್ಷಗಳ ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದ ಆರೋಪಿಯ ಹೆಸರು ಮನೋಜ್ ಸಾನೆ. ತನ್ನ ಸಂಗಾತಿ ಸರಸ್ವತಿ ವೈದ್ಯ ಎಂಬುವವರನ್ನು ಮರ ಕಡಿಯುವ ಯಂತ್ರದಿಂದ ತುಂಡು ತುಂಡಾಗಿ ಕತ್ತರಿಸಿ, ನಂತರ ಶವ ವಾಸನೆ ಬಾರದಂತೆ ಕುಕ್ಕರಿನಲ್ಲಿ ಬೇಯಿಸಿ ನಂತರ ಅದನ್ನು ವಿಲೇವಾರಿ ಮಾಡುವ ಸಮಯದಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಘಟನೆಯ ವಿವರ ; ಹಿಂದು ಮುಂದು ಗೊತ್ತಿಲ್ಲದ 32 ವರ್ಷದ ಸರಸ್ವತಿ ವೈದ್ಯ ಹಾಗೂ 56 ವರ್ಷದ ಮನೋಜ್ ಸಾನೆ ಕಳೆದ ಮೂರು ವರ್ಷಗಳಿಂದ ಮುಂಬೈನ ಮೀರಾ ರೋಡ್ ಭಾಗದ ಆಕಾಶಗಂಗಾ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ಕಳೆದ ಹತ್ತು ವರ್ಷಗಳಿಂದ ಇವರಿಬ್ಬರ ನಡುವೆ ಸಂಪರ್ಕವಿದ್ದು ಈ ಹಿಂದೆ ಮುಂಬೈನ ಬೋರಿವಳ್ಳಿಯಲ್ಲಿ ವಾಸವಿದ್ದರು. ಕಳೆದ ಮೂರು ವರ್ಷಗಳ ಈಚೆಗೆ ಆಕಾಶಗಂಗಾ ಅಪಾರ್ಟ್ಮೆಂಟ್ ಗೆ ತಮ್ಮ ವಾಸ್ತವ್ಯವನ್ನು ಸ್ಥಳಾಂತರಿಸಿದ್ದರು.

ಮನೋಜ್ ಸಾನೆ ಅನುಮಾನದ ವ್ಯಕ್ತಿಯಾಗಿದ್ದು, ತನ್ನ ಸಂಗಾತಿ ಸರಸ್ವತಿ ವೈದ್ಯ ಯಾರ ಬಳಿಯೇ ಮಾತನಾಡಲಿ, ವ್ಯವಹರಿಸಲಿ ಅವರನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದ. ಹಾಗೂ ಪದೇ ಪದೆ ಆಕೆಯನ್ನು ಪ್ರಶ್ನಿಸುತ್ತಿದ್ದ. ಇದೇ ಕಾರಣಕ್ಕೆ ಹಲವು ದಿನಗಳಿಂದ ಅವರ ನಡುವೆ ಮನಸ್ತಾಪ ಉಂಟಾಗಿತ್ತು.

ಕಳೆದ ಜೂನ್ 6 ಕ್ಕೆ ಇವರಿಬ್ಬರು ತಂಗಿದ್ದ ಅಪಾರ್ಟ್ಮೆಂಟ್ ಒಳಗಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಮೀರಾ ರೋಡ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಕಾರ್ಯೋನ್ಮುಕರಾದ ಪೊಲೀಸರು ಅಪಾರ್ಟ್ಮೆಂಟ್ ಗೆ ದಾಳಿ ಮಾಡಿ ಶಂಕಿತ ಆರೋಪಿ ಮನೋಜ್ ಸಾನೆಯನ್ನು ಬಂಧಿಸಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಆಕೆ ವಿಷ ಸೇವಿಸಿ ಸತ್ತದ್ದು ಎಂದು ಮನೋಜ್ ಸಾನೆ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮನೋಜ್ ಸಾನೆ, ಆಕೆ ಸತ್ತ ನಂತರ ಮರ ಕತ್ತರಿಸುವ ಯಂತ್ರದಿಂದ ತುಂಡು ತುಂಡಾಗಿ ಕತ್ತರಿಸಿ, ಕತ್ತರಿಸಿದ ದೇಹವನ್ನು ಕುಕ್ಕರಿನಲ್ಲಿ ಬೇಯಿಸಿದ್ದಾನೆ. ನಂತರ ಮಿಕ್ಸಿಯಲ್ಲಿಯೂ ಆಕೆಯ ದೇಹವನ್ನು ಪುಡಿ ಮಾಡಿದ ಬಗ್ಗೆ ತನಿಖೆಯಲ್ಲಿ ಆತ ಬಾಯಿ ಬಿಟ್ಟ ಮಾಹಿತಿ ಭೀಕರವಾಗಿದೆ.

ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಳ್ಳುವ ಮುನ್ನವೇ ದೇಹದ ಒಂದಷ್ಟು ಭಾಗಗಳನ್ನು ಆರೋಪಿ ಒಂದಷ್ಟು ಕಡೆ ಎಸೆದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಅಡುಗೆ ಮನೆಯಲ್ಲಿ ವಶಪಡಿಸಿಕೊಂಡ ದೇಹದ ಭಾಗಗಳನ್ನು ಮುಂಬೈನ ಸರ್ ಜೆಜೆ ಆಸ್ಪತ್ರೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನಾಥರಾಗಿದ್ದ ಸರಸ್ವತಿ ವೈದ್ಯ ಅವರನ್ನು ಕೊಲೆ ಮಾಡಿದರೆ ಕೇಳಲು ಯಾರೂ ಬರುವುದಿಲ್ಲ ಎಂದು ಭಾವಿಸಿ ಆರೋಪಿ ಮನೋಜ್ ಸಾನೆ ಆಕೆಯನ್ನು ಕೊಲೆಗೈದಿದ್ದಾನೆ. ಪೊಲೀಸ್ ಮೂಲಗಳ ಮಾಹಿತಿಯಂತೆ ಜೂನ್ 4 ರಂದೇ ಆಕೆಯನ್ನು ಸಾಯಿಸಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ರಾತ್ರಿ ಸಾನೆಯನ್ನು ನಯಾ ನಗರ ಪೊಲೀಸರು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಬಂಧಿಸಲಾಗಿದೆ.

ಪ್ರಕರಣದ ಇನ್ನುಳಿದ ತನಿಖೆ ಹೊರಬರುವ ವರೆಗೆ ಆರೋಪಿಯನ್ನು ಜೂನ್ 16 ರವರೆಗೆ ಪೊಲೀಸ್ ಕಸ್ಟಡಿಗೆ ಕಳಿಸಿದ್ದಾರೆ. ಜೂನ್ 16 ಕ್ಕೆ ಆರೋಪಿಗೆ ಶಿಕ್ಷೆ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.

ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣ : ಮೂವರನ್ನು ಬಂಧಿಸಿದ ಪೊಲೀಸರು
ಮೈಸೂರು : ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿಯು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ವಿದೇಶದಿಂದ ಬಂದ ಅವರ ಅಳಿಯ ಅಪಘಾತದ ರೀತಿಯಲ್ಲಿ ಕೊಲೆ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಹಿನ್ನಲೆ :ಮಾನಸ ಗಂಗೋತ್ರಿಯ ಆವರಣದಲ್ಲಿ ನಿವೃತ್ತ ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಯಾಗಿದ್ದ ಆರ್‌.ಎನ್‌ ಕುಲಕರ್ಣಿ ಅವರಿಗೆ ನೋಂದಣಿ ಸಂಖ್ಯೆಯಿಲ್ಲದ ಕಾರೊಂದು ಗುದ್ದಿ ಪರಾರಿಯಾಗಿರುವ ಘಟನೆ ನವೆಂಬರ್‌ 4ರಂದು ನಡೆದಿತ್ತು.

ಈ ಕುರಿತು ನವೆಂಬರ್‌ 5ರಂದು ಕುಲಕರ್ಣಿಯವರ ಅಳಿಯ ಸಂಜಯ್‌ ಅವರು ನನ್ನ ಮಾವನ ಸಾವು ಅಪಘಾತವಲ್ಲ, ಇದೊಂದು ಕೊಲೆ ಎಂದು ಜಯಲಕ್ಷ್ಮೀ ಪುರಂ ಠಾಣೆಗೆ ದೂರು ನೀಡಿದ್ದರು.

ದೂರಿನಲ್ಲಿ ʼಎನ್‌. ಆರ್‌ ಕುಲಕರ್ಣಿಯವರು ವಾಸವಿರುವ ಟಿ.ಕೆ ಲೇಔಟ್‌ನ ಮನೆಯ ದಕ್ಷಿಣ ಭಾಗದಲ್ಲಿ ಮಾದಪ್ಪ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, ಅದನ್ನು ಕಾನೂನು ಬಾಹಿರವಾಗಿ ಕಟ್ಟುತ್ತಿದ್ದಾರೆ ಎಂದು ನಗರ ಪಾಲಿಕೆಯವರಿಗೆ ದೂರು ನೀಡಿದ್ದರು. ಆದರೆ ನಗರ ಪಾಲಿಕೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ನಗರ ಪಾಲಿಕೆ ವಿರುದ್ದವೂ  ನ್ಯಾಯಲಯದಲ್ಲಿ ದೂರು ದಾಖಲಿಸಿ ನ್ಯಾಯಾಲಯದಿಂದ ಮಾದಪ್ಪ ಮನೆ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ವಿರುದ್ದ ಮಾದಪ್ಪ ಹೈಕೋರ್ಟ್‌ ಮೊರೆ ಹೋಗಿ ಒಂದು ವೇಳೆ ನನ್ನ ವಿರುದ್ದ ಆದೇಶವಾದರೆ ಮನೆಯನ್ನು ಒಡೆಯುತ್ತೇನೆʼ ಎಂದು ನಮ್ಮ ಮಾವನಿಗೆ ಹೇಳಿದ್ದರು.

ಹಾಗೆಯೇ  ʼಕೊಲೆಯಾದ ನಮ್ಮ ಮಾವ  ನಮಗೆ ವಿಡಿಯೋ ಕಾಲ್‌ ಮಾಡಿದಾಗ, ಮಾದಪ್ಪ ಕೊಲೆ ಬೆದರಿಕೆ ಹಾಕಿತ್ತಿರುವ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡುತ್ತಿದ್ದರು. ಈ ಬೆದರಿಕೆ ವಿಚಾರವಾಗಿ ನನ್ನ ಮಾವ ಈಗಾಗಲೇ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರುʼ ಎಂದು ಉಲ್ಲೇಖಿಸಿದ್ದರು.

ಈ ಮಧ್ಯೆ ಮಾದಪ್ಪ ಅಕ್ರಮವಾಗಿ ಮನೆ ಕಟ್ಟುತ್ತಿರುವ ಬಗ್ಗೆ ಕಳೆದ ಜೂನ್‌ನಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ನವೆಂಬರ್‌ 2ರಂದು ಮಾದಪ್ಪ ಕಟ್ಟುತ್ತಿರುವ ಮನೆ ಕಾನೂನು ಬಾಹಿರವಾಗಿದ್ದು, ಒತ್ತುವರಿಯಾಗಿರುವ ಮತ್ತು ಕಾನೂನು ಉಲ್ಲಂಘನೆ ಮಾಡಿ ಅಕ್ರಮವಾಗಿ ಕಟ್ಟಿರುವ ಭಾಗಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಈ ಆದೇಶದ ಆಧಾರದ ಮೇಲೆ ಅಳಿಯ ಸಂಜಯ್‌ ಮಾದಪ್ಪನ ವಿರುದ್ಧ ದೂರು ನೀಡಿದ್ದರು.

ದೂರಿನ ಕುರಿತು ನವೆಂಬರ್‌ 5ರಂದು ತನಿಖೆ ಆರಂಭಿಸಿದ್ದ ಜಯಲಕ್ಷ್ಮೀ ಪುರಂನ ಪೊಲೀಸರು, ಕ್ಯಾಂಪಾಸ್‌ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಇದೊಂದು ಕೊಲೆ ಎಂದು ಶಂಕಿಸಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ಈ ಕೊಲೆಗೆ ಸಂಬಂಧಪಟ್ಟ ದೂರಿನ ಹಿನ್ನೆಲೆಯಲ್ಲಿ ಮಾದಪ್ಪ , ಮಕ್ಕಳು ಮತ್ತು ಸಹಚರರನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದು , ವಿಚಾರಣೆ ನಡೆಸಲಾಗುತ್ತಿದೆ.