murder – Peepal Media

ಸೌಜನ್ಯ ಪರ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಗೆ ಪೊಲೀಸ್ ನೋಟಿಸ್
ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಿಡಿಯೋ ಮಾಡಿದ್ದ ಸಮೀರ್ ಎಂ.ಡಿ. ಅವರ ಮನೆಗೆ ಮಾರ್ಚ್ 6ರ, ಬುಧವಾರ ತಡರಾತ್ರಿ ಪೊಲೀಸರು ಪ್ರವೇಶಿಸಿದ್ದಾರೆ. ಬಂಧಿಸಲು ಯತ್ನಿಸಿ, ಆನಂತರ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಬುಧವಾರ ರಾತ್ರಿ 1ಗಂಟೆ ಸುಮಾರಿ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮಾಹಿತಿ ನೀಡಿರುವ ಸಮೀರ್ ತಮ್ಮ ಮೇಲಾಗುತ್ತಿರುವ ಟ್ರೋಲ್ ಗಳು, ಮತ್ತು ಅವರ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

ಸಮೀರ್ ತಮ್ಮ ಯೂಟ್ಯೂಬ್ ನಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಇತ್ತೀಚೆಗೆ ಮಾಡಿದ್ದ ವೀಡಿಯೊವೊಂದು ಹೆಚ್ಚು ವೈರಲ್ ಆಗಿತ್ತು, ಆ ಮೂಲಕ ರಾಜ್ಯದಾದ್ಯಂತ ಮತ್ತೆ ಸೌಜನ್ಯ ಪ್ರಕರಣ ಮುನ್ನಲೆಗೆ ಬಂದಿದೆ. ಈ ನಡುವೆ ಸಮೀರ್ ಅವರ ಧರ್ಮವನ್ನು ಮುನ್ನಲೆಗೆ ತಂದು ಅವರನ್ನು ಅವಮಾನಿಸುತ್ತಿರುವವರಿಗೆ ಪ್ರತಿಕ್ರಿಯೆ ನೀಡಿರುವ ಸಮೀರ್, ಜನರು ಜಾತಿ ಮತ್ತು ಧರ್ಮವನ್ನು ಈ ವಿಷಯಕ್ಕೆ ಏಕೆ ಎಳೆದು ತರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ  ನಡುವೆ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅವರು ಹೊರಡಿಸಿದ್ದಾರೆ ಎನ್ನಲಾದ ಆದೇಶದ ಪ್ರತಿಯೊಂದು ಬುಧವಾರ ಸಂಜೆಯಿಂದ ವೈರಲ್ ಆಗಿದೆ. ಈ ಆದೇಶದಲ್ಲಿ “ಸಮೀರ್ ವೀಡಿಯೊದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್ ಚುರುಕುಗೊಳಿಸಿ ಕ್ರಮ ಕೈಗೊಳ್ಳಬೇಕು” ಎಂಬ ಆದೇಶ ನೀಡಲಾಗಿದ್ದು, ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಎಡಿಜಿಪಿ ಹೊರಡಿಸಿದ್ದಾರೆ ಎನ್ನಲಾದ ಈ ಆದೇಶದಲ್ಲಿ, “ಇತ್ತೀಚಿಗೆ ಸಮೀರ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಹರಿಬಿಟ್ಟದ್ದು, ಘಟಕಾಧಿಕಾರಿಗಳು ಈ ವಿಷಯವನ್ನು ತಮ್ಮ ಘಟಕಗಳಲ್ಲಿರುವ Social Media Monitoring Cell ಮುಖೇನ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುತ್ತೀರಿ. ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ/ವಿರೋಧ ಅನಿಸಿಕೆಗಳು ಉದ್ಭವಿಸಿ ಸಾಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿರುತ್ತದೆ. ಆದ್ದರಿಂದ, Social Media Monitoring Cell ಚುರುಕುಗೊಳಿಸುವುದು ಹಾಗೂ ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಮಾನ್ಯ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ರವರಿಗೆ ಮಾಹಿತಿ ನೀಡುವುದು” ಎಂದು ಹೇಳಿದೆ.

ಮಾಜಿ ಪೊಲೀಸ್ ಅಧಿಕಾರಿ, ಸೌಜನ್ಯ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಗಿರೀಶ್ ಮಟ್ಟಣ್ಣನವರ್ ಅವರ ಜೊತೆಗೆ ಸಮೀರ್ ಅವರು ಬುಧವಾರ ತಡರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ತನಗೆ ವ್ಯಾಪಕ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ.

ಲೈವ್‌ನಲ್ಲಿ ಮಾತನಾಡಿದ ಸಮೀರ್, “ಪ್ರಸ್ತುತ ನನ್ನ ಪರಿಸ್ಥತಿ ತುಂಬಾ ಕೆಟ್ಟದಾಗಿದ್ದು, ಈಗಾಗಲೆ ಪೊಲೀಸ್ ನೋಟಿಸ್ ಬಂದಿದೆ. ಸುಮಾರು ರಾತ್ರಿ 10;45ರ ಹೊತ್ತಿಗೆ ಪೊಲೀಸರು ಬಂದು ನೋಟಿಸ್ ಕೊಟ್ಟು ಹೋಗಿದ್ದಾರೆ. ಅದಾಗ್ಯೂ ನನಗೆ ಯಾವುದೇ ಭಯವಿಲ್ಲ. ನಾನು ವಿಡಿಯೊದಲ್ಲಿ ಹೇಳಿರುವ ಎಲ್ಲಾ ವಿಚಾರಗಳಿಗೂ ಸಾಕ್ಷಿಯಿದೆ. ನನಗೆ ಕಾನೂನಿನ ಮೇಲೆ ನಂಬಿಕೆಯಿದ್ದು, ಕೋರ್ಟ್‌ನ ಮುಂದೆ ಮತ್ತಷ್ಟು ವಿಸೃತವಾಗಿ ಮಂಡಿಸುತ್ತೇನೆ. ಈ ಬಗ್ಗೆ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದ್ದಾರೆ.

ಪ್ರಸ್ತುತ ತನಗೆ ತೊಂದರೆ ಆಗುತ್ತಿರುವುದು, ಮುಸ್ಲಿಮನೊಬ್ಬ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದೆ ತಪ್ಪು ಹಾಗೂ ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಆದರೆ, ನಾನು ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದೇನೆ, ಅದು ನನ್ನ ಧರ್ಮ, ಅದನ್ನು ನಾನು ಪಾಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

“ಒಂದು ವೇಳೆ ನಾನು ಹಿಂದೂ ವಿರೋಧಿ ಆಗಿದ್ದರೆ, ಒಬ್ಬ ಹಿಂದೂ ಹುಡುಗಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಯಾಕೆ ಧ್ವನಿ ಎತ್ತಬೇಕು? ನ್ಯಾಯದ ಬಗ್ಗೆ ಮಾತನಾಡೋಣ. ಅದುವೇ ಧರ್ಮ” ಎಂದು ಸಮೀರ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.

ದರ್ಶನ್ ಪ್ರಕರಣದಲ್ಲಿ ಮಗ ಜೈಲುಪಾಲು: ಮಗನ ಶೋಕದಲ್ಲಿ ಕೊರಗಿ ಕೊರಗಿ ತಾಯಿ ಮಣ್ಣುಪಾಲು
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ಎಂಬಾತನ ತಾಯಿ ಮಂಜುಳಮ್ಮ (65) ನಿಧನ ಹೊಂದಿದ್ದಾರೆ.

ಜಿಲ್ಲೆಯ ಕೋಳಿ ಬುರುಜನಹಟ್ಟಿಯ ಮನೆಯಲ್ಲಿ ಮಂಜುಳಮ್ಮ ವಾಸವಾಗಿದ್ದರು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ಮಗನ ಜೈಲು ಸುದ್ದಿ ಮತ್ತಷ್ಟು ಆತಂಕ ಬಾಧಿಸುವಂತೆ ಮಾಡಿತ್ತು.

ರೇಣುಕಾಸ್ವಾಮಿ ಅಪಹರಣ ಮತ್ತು ಮರ್ಡರ್ ಕೇಸ್​ಗೆ ಸಂಬಂಧಿಸಿದಂತೆ ಎ4 ಆರೋಪಿಯಾಗಿದ್ದಾರೆ. ಇದೀಗ ಮಂಜುಳಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ರಘು ತಾಯಿ ನಿಧನದ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆತನ ಸಹೋದರಿ, ನಮ್ಮ ತಮ್ಮ ಕೊಲೆ ಆರೋಪಿ ಆಗಿದ್ದ ಚಿಂತೆಯಲ್ಲಿ ತಾಯಿ ಚಿಂತೆ ಮಾಡಿ ನಿಧನರಾಗಿದ್ದಾರೆ. ಅವನು ಅಂದ್ರೆ ನಮ್ಮ ಅಮ್ಮನಿಗೆ ಬಹಳ ಜೀವ, ಅಷ್ಟು ದೊಡ್ಡವನಾದರೂ ಮುದ್ದಾಡುತ್ತಿದ್ದರು. ಅವನು ಇಂಥ ಕೆಲಸ ಮಾಡುವವನೇ ಅಲ್ಲ. ಅದು ಹೇಗಾಯ್ತು ಅಂತ ಗೊತ್ತಿಲ್ಲ. ಒಬ್ಬರಿಗೆ ಒಂದೇಟು ಹೊಡೆದವನಲ್ಲ, ಡ್ರಿಂಕ್ಸ್ ಮಾಡಿದಾಗ ಹೆಂಡತಿ ಹತ್ತಿರ ಬಾಯಿ ಮಾಡ್ತಿದ್ದ. ಬೇರೆ ಯಾರತ್ರನೂ ಗುದ್ದಾಡಿ, ಹೊಡೆದಾಡಿದ್ದನ್ನು ನಾವು ನೋಡಿಲ್ಲ ಎಂದರು.

ನನ್ನ ಸಹೋದರನನ್ನು ಅಂತ್ಯಕ್ರಿಯೆಗೆ ಕರೆಸಬೇಕು. ಅವನಿಂದಲೇ ನರಳಿ ನರಳಿ, ನೊಂದಿದ್ದಾರೆ. ಚೆನ್ನಾಗಿಯೇ ಓಡಾಡಿಕೊಂಡು ಇದ್ದರು.  ಆದರೆ ಮಗ ಜೈಲಿಗೆ ಹೋದ ಬಳಿಕ ಹಾಸಿಗೆ ಹಿಡಿದಿದ್ದರು ಎಂದು ಹೇಳಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೊತೆಗೆ ಜೈಲು ಸೇರಿರುವ 17 ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಸಂಬಂಧಿಕರು ಸಾವನ್ನಪ್ಪಿದ್ದಾರೆ. ಈ ಹಿಂದೆ ಅನುಕುಮಾರ್ ಎಂಬ ಆರೋಪಿಯ ತಂದೆ ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಈಗ ಮತ್ತೊಂದು ಆರೋಪಿಗೆ ತೀವ್ರ ಅಘಾತ ಎದುರಾಗಿದೆ.

ಕೆಡುಕ ಮಗನನ್ನು ಕೊಲ್ಲಲು ಸ್ನೇಹಿತರಿಗೆ ವೀಳ್ಯ ಕೊಟ್ಟ ತಂದೆ!
ಬೆಳಗಾವಿ: ಮನೆಯ ಬೆಲೆಬಾಳುವ ವಸ್ತುಗಳು, ಕಟಾವು ಮಾಡಿದ ಧಾನ್ಯಗಳನ್ನು ಮಾರುವುದು, ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯರನ್ನು ಥಳಿಸಿ ಕಿರುಕುಳ ನೀಡುತ್ತಿದ್ದ ಮಗನನ್ನು ಕೊಂದು ಹಾಕಲು ತಂದೆಯೇ ವೀಳ್ಯ ನೀಡಿದ ಘಟನೆಯೊಂದು ನಡೆದಿದೆ.

ಕೊಲೆ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (39) ಕೊಲೆಯಾದವನು.

ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಮಂಜುನಾಥ ಹಾಗೂ ಹಿರೇಕೊಪ್ಪ ಗ್ರಾಮದ ಆಂಜಪ್ಪ ಬಂಧಿತ ಆರೋಪಿಗಳು. ಕೊಲೆಯಾದ ಸಂಗಮೇಶ ಕುಡಿತದ ಚಟ ಹೊಂದಿದ್ದ. ಬೆಳಗ್ಗೆಯಿಂದ ತಡರಾತ್ರಿವರೆಗೂ ಮದ್ಯ ಸೇವಿಸಿ ತಂದೆ-ತಾಯಿಯನ್ನು ನಿಂದಿಸುತ್ತಿದ್ದ. ಅಲ್ಲದೇ ಕುಡಿತದ ಚಟಕ್ಕೆ ಬಿದ್ದಿದ್ದ ಈತ ಮನೆಯಲ್ಲಿನ ಬೆಲೆಬಾಳುವ ವಸ್ತುಗಳು, ಧಾನ್ಯಗಳನ್ನು ಮಾರಾಟ ಮಾಡಿ ಮದ್ಯ ಸೇವಿಸುತ್ತಿದ್ದ. ಇದರ ಜತೆಗೆ ಸಂಗಮೇಶ ಕೆಲ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.

ಅಲ್ಲದೆ ಸಂಗಮೇಶ್ ಕುಡಿದು ಮನೆಗೆ ಬಂದು ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಕೋಪಗೊಂಡ ತಂದೆ ಸಂಗಮೇಶ್ ತನ್ನ ಜತೆ ವ್ಯಾಪಾರ ಮಾಡುತ್ತಿದ್ದ, ಸ್ನೇಹಿತರಾದ ಮಂಜುನಾಥ್ ಹಾಗೂ ಅಂಜಪ್ಪನ ಬಳಿ ಕೊಲೆ ಮಾಡುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಕೊಲೆಯಾದ ಸಂಗಮೇಶನನ್ನು ದ್ವಿಚಕ್ರ ವಾಹನದಲ್ಲಿ ಬೈಲಹೊಂಗಲ, ನೇಸರಗಿ, ವನ್ನೂರು, ಮುರಗೋಡ ಮತ್ತಿತರ ಕಡೆ ಕರೆದುಕೊಂಡು ಹೋಗಲಾಗಿತ್ತು.

ಮಂಜುನಾಥ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಗೋಕಾಕ ತಾಲೂಕಿನ ಅಂಕಲಗಿಗೆ ತೆರಳಿದ್ದನು. ನಂತರ ಹೀರೆಕೊಪ್ಪ ಗ್ರಾಮಕ್ಕೆ ಹಿಂತಿರುಗಿ ಅಂಜಪ್ಪನನ್ನು ಮತ್ತೆ ಅಂಕಲಗಿಗೆ ಕರೆದೊಯ್ದರು. ಆರೋಪಿ ಮಂಜುನಾಥ ಆಂಜಪ್ಪನ ಸಹಾಯದಿಂದ ಅಲ್ಲಿನ ವೈನ್ ಶಾಪ್ ನಲ್ಲಿ ಮದ್ಯ ಸೇವಿಸಿ ನಶೆಯಲ್ಲಿದ್ದ ಸಂಗಮೇಶನನ್ನು ಬೈಕ್ ನಲ್ಲಿ ಸವದತ್ತಿ ತಾಲೂಕಿನ ಕುಟಾರನಟ್ಟಿ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಲ್ಲುಗಳಿಂದ ಸಂಗಮೇಶ್ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಕುಟರನಟ್ಟಿಗ್ರಾಮದ ನಿರ್ಜನ ಪ್ರದೇಶದಲ್ಲಿ ಪಾನಮತ್ತರಾಗಿದ್ದ ಮೂವರು ಸಂಗಮೇಶನ ತಲೆ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಮುರಗೋಡ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಂತರ ಸಂಗಮೇಶ್ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಕೊಲೆ ನಡೆದ ಪ್ರದೇಶದಲ್ಲಿ ದೊರೆತ ಫೋನ್ ನಂಬರ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಹಂತಕರಾದ ಮಂಜುನಾಥ್ ಮತ್ತು ಅಂಜಪ್ಪನನ್ನು ಬಂಧಿಸಿದ್ದಾರೆ. ಈ ಮಾಹಿತಿ ಮೇರೆಗೆ ಕೊಲೆಯಾದ ಸಂಗಮೇಶ್ ಮನೆಗೆ ತೆರಳಿ ವಿಚಾರಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಕೊಲೆ ನಡೆದ 24 ಗಂಟೆಗಳಲ್ಲಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಘಮೇಶನನ್ನು ಕೊಲ್ಲಲು ಎರಡು ಲಕ್ಷ ರೂಪಾಯಿ ಕೊಡುವುದಾಗಿ ಮಂಜುನಾಥ್ ಜೊತೆ ಆತನ ತಂದೆ ಮಾತುಕತೆ ನಡೆಸಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಬಾಗಲಕೋಟೆಯಲ್ಲಿ ತಂದೆಯನ್ನೇ ಕೊಂದು ಕೊಳವೆ ಬಾವಿಗೆ ತುರುಕಿದ ಮಗ
ಬಾಗಲಕೋಟೆ: ತಂದೆಯನ್ನು ಕೊಂದು 30 ತುಂಡುಗಳನ್ನಾಗಿ ಮಾಡಿ ಕೊಳವೆ ಭಾವಿಗೆ ತುರುಕಿದ ಘಟನೆ ಬಾಗಲಕೋಟೆಯ ಮುಧೋಳದಲ್ಲಿ ನಡೆದಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚ್ಚೆಗೆ ಅತಿ ಹೆಚ್ಚು ಸುದ್ದಿಯಲ್ಲಿರುವ, ಜನರನ್ನು ನಿಬ್ಬೆರಗು ಗೊಳಿಸಿದ ಘಟನೆ ದೆಹಲಿಯಲ್ಲಿ ಶ್ರದ್ಧಾಳ ಕೊಲೆ ಪ್ರಕರಣ. ಶ್ರದ್ಧಾಳನ್ನು ತುಂಡು ತುಂಡುಗಳನ್ನಾಗಿ ಕತ್ತರಿಸಿ ಪ್ರಿಡ್ಜ್‌ನಲ್ಲಿ ಇಟ್ಟರೆ, ಮತ್ತೊಂದು ಪ್ರಕರಣದಲ್ಲಿ ಸೂಟ್ಕೇಸ್‌ನಲ್ಲಿ, ಚೀಲದಲ್ಲಿ ಹೀಗೆ ಒಂದೊಂದಾಗಿ ಹೆಚ್ಚಾಗುತ್ತಲೇ ಇವೆ. ಇದೀಗ ಅದೇ ರೀತಿ ಮಗ ತನ್ನ ತಂದೇಯನ್ನೇ ಕೊಂದು ಕೊಳವೆಬಾವಿಯನ್ನು ತುರುಕಿರುವ ಘಟನೆ  ಬಾಗಲಕೋಟೆಯಲ್ಲಿ ನಡೆದಿದೆ.

ತಂದೆ ಕುಡಿದ ಮತ್ತಿನಲ್ಲಿ ಮನೆಗೆ ಬಂದು ಪ್ರತಿದಿನ ಗಲಾಟೆ ಮಾಡುತ್ತಿದ್ದ ಕಾರಣ ಅದನ್ನು ಸಹಿಸಿಕೊಳ್ಳಲಾಗದೆ 21 ವರ್ಷದ ವಿಠ್ಠಲ ಕುಳಲಿ ಎಂಬಾತನು ಆತನ ತಂದೆ ಪರಶುರಾಮ ಕುಳಲಿ(54) ಅವರನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ದೇಹವನ್ನು ಕತ್ತರಿಸಿ ಕೊಳವೆ ಬಾವಿಯಲ್ಲಿ ತುರುಕಿರುವ ಘಟನೆ ಮುಧೋಳದಲ್ಲಿ ನಡೆದಿದೆ.

ಪತಿ ಕಾಣೆಯಾಗಿದ್ದಾರೆಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ನಂತರ ಕೊಲೆ ರಹಸ್ಯ ಬಯಲಾಗಿದ್ದು, ಈ ಕುರಿತು ಮುಧೋಳ ಪೊಲೀಶ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಠ್ಠಲ್‌ ಕುಳಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ: ಕತ್ತು ಸೀಳಿ ವೃದ್ಧ ದಂಪತಿ ಹತ್ಯೆ
ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ವೃದ್ಧ ದಂಪತಿಗಳನ್ನು, ಹೊಸದುರ್ಗ ಪಟ್ಟಣದ ಅವರ ನಿವಾಸದಲ್ಲಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು, ಹೊಸದುರ್ಗದ ವಿನಾಯಕ ಲೇಔಟ್‌ ನಿವಾಸಿಗಳಾದ ಖಾದ್ಯ ತೈಲ ವ್ಯಾಪರ ನಡೆಸುತ್ತಿದ್ದ ಪ್ರಭಾಕರ್‌ ಶೆಟ್ಟಿ (75) ಮತ್ತು ವಿಜಯಲಕ್ಷ್ಮಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸರು, ನೆರೆಹೊರೆಯವರು ಅವರ ಮನೆಗೆ ಹೋದ ನಂತರ ಗುರುವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ. ದಂಪತಿಗಳು ಮನೆಯಲ್ಲಿ ಒಬ್ಬರೇ ಇದ್ದಾರೆ ಎಂದು ತಿಳಿದು, ಮನೆಗೆ ನುಗ್ಗಿ ದಂಪತಿಯ ಕತ್ತು ಸೀಳಿ ಕೊಲೆಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳು ಯಾವ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಹೀಗಾಗಿ ಮನೆಯಲ್ಲಿನ ಆಭರಣಗಳು ಮತ್ತು ಬೆಳೆಬಾಳುವ ವಸ್ತುಗಳು ಕಾಣೆಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನೂ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒಬ್ಬರು ದಾವಣಗೆರೆ, ಮತ್ತೊಬ್ಬರು ಚಿಕ್ಕನಾಯಕನಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಟ್ಕೇಸ್ನಲ್ಲಿ ಬಾಲಕಿಯ ಶವ ಪತ್ತೆ: ಪೋಷಕರನ್ನು ಬಂಧಿಸಿದ ಯುಪಿ ಪೊಲೀಸರು
ಉತ್ತರ ಪ್ರದೇಶ: ಶ್ರದ್ಧಾ ಕೊಲೆ ಪ್ರಕರಣದ ಆಘಾತದಿಂದ ರಾಷ್ಟ್ರದ ರಾಜಧಾನಿ ಹೊರಬರುವ ಮೊದಲೇ, ತಾವು ಹೇಳಿದಂತೆ ನಡೆದುಕೊಳ್ಳದ ಕಾರಣ 22 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಕೊಂದು, ಆಕೆಯ ದೇಹವನ್ನು ಸೂಟ್ಕೇಸ್ನಲ್ಲಿ ಹಾಕಿ ಹೆದ್ದಾರಿಯಲ್ಲಿ ಎಸೆದಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಕಳೆದ ವಾರ 22 ವರ್ಷದ ಆಯುಷಿ ಮೃತದೇಹವನ್ನು ಪೊಲೀಸರು ಸೂಟ್ಕೇಸ್ನಲ್ಲಿ ಪತ್ತೆಹಚ್ಚಿದ್ದರು.

ಪೊಲೀಸರು ಶವವನ್ನು ಗುರುತಿಸಲು ಸಾಧ್ಯವಾಗದ ಕಾರಣ, ಅವರು ಮೊಬೈಲ್‌, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು, ನಂತರ ಯಾವುದೇ ಸುಳಿವು ಸಿಗದ ಕಾರಣ ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸಿದರು. ನಂತರ  ಮಹಿಳೆಯನ್ನು ಗುರುತಿಸಲು ಅವರು ನಗರದಾದ್ಯಂತ ಪೋಸ್ಟರ್ ಗಳನ್ನು ಅಂಟಿಸಿದ್ದರು.

ಪೊಲೀಸರು ಭಾನುವಾರ ಅಪರಿಚಿತ ಕರೆಯಿಂದ ಮಾಹಿತಿ ಪಡೆದಿದ್ದು, ಮೃತಳ ತಾಯಿ ಮತ್ತು ಸಹೋದರರನ್ನು ಪತ್ತೆಹಚ್ಚಿದ್ದಾರೆ. ನಂತರ ಅವರು ಮೃತಳು ಆಯುಷಿ ಎಂದು ಗುರುತಿಸಿದ್ದಾರೆ. ನಂತರ ಅವರನ್ನು ವಿಚಾರಣೆ ನಡೆಸಿದ ಬಳಿಕ ಯುವತಿಯ ತಂದೆ ಕೊಲೆ ಮಾಡಿರುವ ವಿಚಾರ ತಿಳಿದಿದ್ದು, ಸೋಮವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆಯುಷಿ ಪೋಷಕರನ್ನು ಯುಪಿ ಪೋಲೀಸರು ಬಂಧಿಸಿರುವ ದೃಶ್ಯ

ಉತ್ತರ ಪ್ರದೇಶ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆಯುಷಿಯನ್ನು ಅವರ ತಂದೆ ಗುಂಡಿಕ್ಕಿ ಕೊಂದಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸರು, ಆಯುಷಿ ತನ್ನ ಹೆತ್ತವರಿಗೆ ತಿಳಿಸದೆ ಬೇರೆ ಜಾತಿಗೆ ಸೇರಿದ ಛತ್ರಪಾಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಹೀಗಾಗಿ ಅವಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ಅವಳ ಮದುವೆಯ ಬಗ್ಗೆ ಅವಳ ಹೆತ್ತವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅವರ ತಂದೆ ನಿತೀಶ್ ಯಾದವ್ ಆಯುಷಿಯು ಗುಂಡಿಕ್ಕಿ ಕೊಂದು, ದೆಹಲಿಗೆ ಸ್ಥಳಾಂತರಗೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪರವಾನಗಿ ಪಡೆದ ಬಂದೂಕಿನಿಂದ ಮಗಳನ್ನು ಕೊಂದ ನಂತರ, ಶವವನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ, ಸೂಟ್ಕೇಸ್ನಲ್ಲಿ ಹಾಕಿ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಎಸೆದಿದ್ದಾರೆ, ಘಟನೆ ಕುರಿತು ಇನ್ನು ಹೆಚ್ಚಿನ ತಿನಿಖೆ ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಬಿ ಅಧಿಕಾರಿ ಕುಲಕರ್ಣಿ ಕೊಲೆ ಪ್ರಕರಣ : ಹತ್ಯೆ ರಹಸ್ಯವನ್ನು ಬಯಲಿಗೆಳೆದ ಪೊಲೀಸರು
ಮೈಸೂರು: ನವೆಂಬರ್‌ 4ರಂದು ನಡೆದ ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿ ಕುಲಕರ್ಣಿಯವರ ಕೊಲೆ ರಹಸ್ಯ ಭೇದಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿಯು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ವಿದೇಶದಿಂದ ಬಂದ ಅವರ ಅಳಿಯ ಅಪಘಾತದ ರೀತಿಯಲ್ಲಿ ಕೊಲೆ ಮಾಡಿದ್ದಾರೆಂದು ದೂರು ದಾಖಲಿಸಿದ್ದರು.

ದೂರಿನಲ್ಲಿ ʼಎನ್‌. ಆರ್‌ ಕುಲಕರ್ಣಿಯವರು ವಾಸವಿರುವ ಟಿ.ಕೆ ಲೇಔಟ್‌ನ ಮನೆಯ ದಕ್ಷಿಣ ಭಾಗದಲ್ಲಿ ಮಾದಪ್ಪ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, ಅದನ್ನು ಕಾನೂನು ಬಾಹಿರವಾಗಿ ಕಟ್ಟುತ್ತಿದ್ದಾರೆ ಎಂದು ನಗರ ಪಾಲಿಕೆಯವರಿಗೆ ದೂರು ನೀಡಿದ್ದರು. ಆದರೆ ನಗರ ಪಾಲಿಕೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ನಗರ ಪಾಲಿಕೆ ವಿರುದ್ದವೂ  ನ್ಯಾಯಲಯದಲ್ಲಿ ದೂರು ದಾಖಲಿಸಿ ನ್ಯಾಯಾಲಯದಿಂದ ಮಾದಪ್ಪ ಮನೆ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ವಿರುದ್ದ ಮಾದಪ್ಪ ಹೈಕೋರ್ಟ್‌ ಮೊರೆ ಹೋಗಿ ಒಂದು ವೇಳೆ ನನ್ನ ವಿರುದ್ದ ಆದೇಶವಾದರೆ ಮನೆಯನ್ನು ಒಡೆಯುತ್ತೇನೆʼ ಎಂದು ನಮ್ಮ ಮಾವನಿಗೆ ಹೇಳಿದ್ದರುʼ ಎಂದು ಸಂಜಯ್‌ ದೂರಿನಲ್ಲಿ ಹೇಳಿದ್ದರು.

ಹಾಗೆಯೇ  ʼಕೊಲೆಯಾದ ನಮ್ಮ ಮಾವ ನಮಗೆ ವಿಡಿಯೋ ಕಾಲ್‌ ಮಾಡಿದಾಗ, ಮಾದಪ್ಪ ಕೊಲೆ ಬೆದರಿಕೆ ಹಾಕಿತ್ತಿರುವ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡುತ್ತಿದ್ದರು. ಈ ಬೆದರಿಕೆ ವಿಚಾರವಾಗಿ ನನ್ನ ಮಾವ ಈಗಾಗಲೇ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರುʼ ಎಂದು ಉಲ್ಲೇಖಿಸಿದ್ದರು.

ಪ್ರಕರಣದ ಕುರಿತು ನವೆಂಬರ್‌ 5ರಂದು ತನಿಖೆ ಆರಂಭಿಸಿದ್ದ ಜಯಲಕ್ಷ್ಮೀ ಪುರಂನ ಪೊಲೀಸರು, ಕ್ಯಾಂಪಾಸ್‌ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಇದೊಂದು ಕೊಲೆ ಎಂದು ಶಂಕಿಸಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ಇಂದು ಮೈಸೂರು ಪೊಲೀಸರು ಸಾವಿನ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿ ವಿಚಾರಣೆ  ನಡೆಸಿಸಲಾರಂಭಿಸದ್ದರು. ಈ ವೇಳೆ ಕೊಲೆ ಮಾಡಿರುವ ಹಿಂದಿನ ರಹಸ್ಯ ತಿಳಿದು ಬಂದಿದ್ದು, ಮಾದಪ್ಪನ ಪುತ್ರ ಮನು(30) ಮತ್ತು ಅವನ ಸ್ನೇಹಿತ ಅರುಣ್‌ ಗೌಡ ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸರಿಗೆ ಸ್ವಲ್ಪ ಮಟ್ಟಿಗೆ ಸುಳಿವು ಸಿಕ್ಕರೂ ಅದರ ಜಾತಕವನ್ನೇ ಇಳಿಸುತ್ತಾರೆಂಬುದಕ್ಕೆ ಮೈಸೂರು ಪೊಲೀಸರು ಸಾಕ್ಷಿಯಾಗಿದ್ದಾರೆ. ಮೊದಲಿಗೆ ಕುಲಕರ್ಣಿಯವರ ಅಳಿಯನ ದೂರಿನ ಆಧಾರದ ಮೇಲೆ ಸಿಸಿಟಿವಿ ʼಕೈ ತೋರಿಸಿ ಕುಲಕರ್ಣಿಯವರ ಜಾಗ ತೋರಿಸಿರುವʼ ಸುಳಿವಿನಿಂದ ತನಿಖೆ ಶುರು ಮಾಡಿದ ಮೈಸೂರು ಪೊಲೀಸರು ಈಗ ಕೊಲೆ ಮಾಡಿರುವುದನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ.

ನವೆಂಬರ್‌ 4ರಂದು ಶುಕ್ರವಾರ ಸಂಜೆ  ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಾಸ್‌ನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ರಸ್ತೆಯಲ್ಲಿ ಕುಲಕರ್ಣಿಯವರು ವಾಯುವಿಹಾರ ನಡೆಸುತ್ತಿದ್ದಾಗ ಅವರಿಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಕುಲಕರ್ಣಿಯವರು ಮೃತಪಟ್ಟಿದ್ದು, ಅಪಘಾತದ ರೀತಿಯಲ್ಲಿಯೇ ಅವರನ್ನು ಕೊಲೆ ಮಾಡಲಾಗಿದೆ.

ಕಾರು ಅಪಘಾತ ಮಾಡಿದ ದೃಶ್ಯವನ್ನು ಸಿಸಿ ಕ್ಯಾಮೆರಾದಲ್ಲಿ ವೀಕ್ಷಿಸಿದ್ದು, ʼಕುಲಕರ್ಣಿ ರಸ್ತೆಯ ಪಕ್ಕದಲ್ಲಿದ್ದರೂ ಬೇಕೆಂತಲೇ ಡಿಕ್ಕಿ ಹೊಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆʼ ಮತ್ತು ಅಪಘಾತ ಮಾಡಿರುವ ಕಾರಿಗೆ  ನಂಬರ್‌ ಪ್ಲೇಟ್‌ ಇಲ್ಲದೆಯೇ ಚಾಣಾಕ್ಯವಾಗಿ ಕೊಲೆ ಮಾಡುವ ಯತ್ನ ಮಾಡಿರುವುದುʼ ತನಿಖೆ ವೇಳೆ ತಿಳಿದು ಬಂದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟವರನ್ನು ಬಂಧಿಸಿದ್ದಾರೆ.

ಅರುಣ್‌ಗೌಡ ಮತ್ತು ಮನು ಇಬ್ಬರು ಸ್ನೇಹಿತರಾಗಿದ್ದು, ಕುಲಕರ್ಣಿಯವರ ಕೊಲೆ ಮಾಡಿ ಉಪಾಯದಿಂದ ಸಂಚು ಮಾಡಿದ್ದು, ಮನು ಅವರ ತಂದೆ ಮಾದಪ್ಪನಿಗೆ ಅಧಿಕಾರಿಯ ಹತ್ಯೆಗೆ ಮುಂದಾಗಿದ್ದರು ಎಂದು  ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗ ನಿಜಾಂಶ  ಒಪ್ಪಿಕೊಂಡಿದ್ದಾರೆ.

ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬರ್ಬರ ಹತ್ಯೆ
ಅಳಂದ (ಕಲಬುರಗಿ): ಶಾಲಾ ಬಾಲಕಿಯ ಮೇಲೆ ಬರ್ಬರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕೊರಳ್ಳಿ ಗ್ರಾಮದಲ್ಲಿ ನಡೆದಿದೆ.

ಮಳವಳ್ಳಿಯಲ್ಲಿ ಹತ್ತು ವರ್ಷದ ಬಾಲಕಿ ಮೇಲೆ ಶಾಲೆಯ ಶಿಕ್ಷಕರೇ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದ ನೆನಪು ಮಾಸುವ ಮುನ್ನವೇ ಈ ಭೀಕರ ಘಟನೆ ನಡೆದಿದೆ.

9 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಕೊರಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಅತ್ಯಾಚಾರ ನಡೆಸಿದ ನಂತರ ಹಂತಕರು ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಬಾಲಕಿ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕೋಗನೂರು ಗ್ರಾಮದವಳಾಗಿದ್ದು, ಆಳಂದ ತಾಲ್ಲೂಕಿನ ಕೊರಳ್ಳಿಯ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು.

ದೀಪಾವಳಿ ಹಬ್ಬಕ್ಕೆ ತಂದೆ ತಾಯಿಯ ಬಳಿ ತೆರಳಿದ್ದ ಬಾಲಕಿ ಹಬ್ಬ ಮುಗಿಸಿ ವಾಪಸ್ ನಿನ್ನೆ ಕೊರಳ್ಳಿಗೆ ಬಂದಿದ್ದಳು ಸಂಬಂಧಿಕರ ಮನೆಯಲ್ಲಿದ್ದ ಬಾಲಕಿ ನಿನ್ನೆ ಮಧ್ಯಾಹ್ನ ಬಹಿರ್ದೆಸಗೆ ಹೋಗಿದ್ದ ಬಾಲಕಿ ಸಂಜೆಯಾದ್ರು ಮನೆಗೆ ವಾಪಸ್ ಬಂದಿರಲಿಲ್ಲ. ಬಳಿಕ ಸಂಬಂಧಿಕರು ಬಹಿರ್ದೆಸೆಗೆ ತೆರಳಿದ್ದ ಸ್ಥಳಕ್ಕೆ ಹೋಗಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ.

ಕಬ್ಬಿನ ಹೊಲದಲ್ಲಿ ಬಾಲಕಿ ಶವವಾಗಿ ಪತ್ತೆಯಾದ ನಂತರ, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ. ಎಸ್ಪಿ ಇಶಾ ಪಂತ್ ಸ್ಥಳಕ್ಕೆ ಭೇಟಿದ್ದು, ಆರೋಪಿಗಳ ಹುಡುಕಲು ತಂಡ ರಚನೆ ಮಾಡಲಾಗಿದೆ.

ಬೆಳಗಾವಿ: ವಿದ್ಯಾರ್ಥಿಯ ಬರ್ಬರ ಕೊಲೆ, ಪ್ರಕರಣ ದಾಖಲು
ಬೆಳಗಾವಿ: 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಗುರುವಾರ ಬೆಳಗಾವಿ ನಗರದ ಹೊರವಲಯದಲ್ಲಿ ನಡೆದಿದೆ.

ಮೃತ ಯುವಕನನ್ನು ಬೆಳಗಾವಿಯ ಶಿವಾಜಿ ನಗರದ ನಿವಾಸಿ ಪ್ರಜ್ವಲ್ ಶಿವಾನಂದ್ ಕರಿಗಾರ್ ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಪೋಲೀಸರು, ಮೃತನ  ಕುಟುಂಬದವರು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು, ದೂರಿನ ಮೇರೆಗೆ ತನಿಖೆ ನಡೆಯುತ್ತಿತ್ತು. ಗುರುವಾರ ಪ್ರಜ್ವಲ್ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಜ್ವಲ್ ನಾಪತ್ತೆಯಾದಾಗ ಧರಿಸಿದ್ದ ಶಾಲಾ ಸಮವಸ್ತ್ರವನ್ನು ಖಚಿತಪಡಿಸಿಕೊಂಡು ಶವವನ್ನು ಗುರುತಿಸಲಾಗಿದೆ. ಆದರೆ ಬಾಲಕನ ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

ವಿದೇಶದಲ್ಲಿ ಭಾರತ ಮೂಲದ ನಾಲ್ವರ ಅಪಹರಣ: ತೋಟದಲ್ಲಿ ಪತ್ತೆಯಾದ ಮೃತದೇಹಗಳು
ಕ್ಯಾಲಿಫೋರ್ನಿಯಾ : ಭಾರತದ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅಮೆರಿಕದ ಕ್ಯಾಲಿಫೋರ್ನಿಯಾದ ಮರ್ಸಿಡ್‌ ನಗರದಲ್ಲಿ ಕಿಡ್ನಾಪ್‌ ಆಗಿದ್ದು, ಇದೀಗ  ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾ ಸ್ಯಾನ್‌ಜೋಕ್ವಿನ್‌ ವ್ಯಾಲಿಯಲ್ಲಿರುವ ಮರ್ಸಿಡ್‌ನಲ್ಲಿ ಸೋಮವಾರದಂದು ಭಾರತ ಮೂಲದ ಒಂದೇ ಕುಟುಂಬದ ನಾಲ್ವರನ್ನು  ಅಪಹರಿಸಲಾಗಿತ್ತು. 8 ತಿಂಗಳ ಮಗು ಅರೂಹಿ ಧೇರಿ ಸೇರಿದಂತೆ ಮಗುವಿನ ಪೋಷಕರು ಮತ್ತು ಸೋದರ ಮಾವನನ್ನು ಅವರ ಉದ್ಯಮದ ಸ್ಥಳದಿಂದ ಕಿಡ್ನಾಪ್‌ ಮಾಡಿದ್ದು, ಮರ್ಸಿಡ್‌ ಕೌಂಟಿಯ ತೋಟದಲ್ಲಿ 4 ಜನರ ಮೃತ ದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಿಡ್ನಾಪ್‌ ಮಾಡಿದ್ದ ವ್ಯಕ್ತಿಯ ಕಣ್ಗಾಗಳು ವೀಡಿಯೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದು, ಹಣಕಾಸಿನ ವ್ಯವಹಾರಕ್ಕೆ ಈ ಕೊಲೆ ಮಾಡಿರಬಹದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

8 ತಿಂಗಳ ಮಗು ಅರೂಹಿ ಧೇರಿ, ಮಗುವಿನ ತಂದೆ ಜಶದೀಪ್‌ ಸಿಂಗ್‌(36) ತಾಯಿ ಜಸ್ಲೀನ್‌ ಕೌರ್‌(27) ಮತ್ತು ಸೋದರಮಾವ ಅಮನ್‌ ದೀಪ್‌ ಸಿಂಗ್‌(39) ನಾಲ್ಕೂ ಜನ ಕೊಲೆಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ‘ಕಾಂತಾರ’ ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು

‘ಕಾಂತಾರ’ ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು