murderr case – Peepal Media

ಮಂಗಳೂರು: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಂದ ಪತಿ
ಮಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ, ಜಿಲ್ಲೆಯ ತೆಂಕ ಎಕ್ಕಾರು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಪೊಲೀಸ್‌ ಮಾಹಿತಿ ಪ್ರಕಾರ, ಆರೋಪಿ ದುರ್ಗೇಶ್ ನವೆಂಬರ್ 27 ರ ಭಾನುವಾರ ಸಂಜೆ ಕುಡಿದ ಮತ್ತಿನಲ್ಲಿ ತನ್ನ ಪತ್ನಿ ಸರಿತಾ ಅವರೊಂದಿಗೆ ಜಗಳವಾಡಿದ್ದಾನೆ. ದುರ್ಗೇಶ್ ಮತ್ತು ಆತನ ಪತ್ನಿಯ ನಡುವೆ ತೀವ್ರ ವಾಗ್ವಾದಗಳು ಹೆಚ್ಚಾದಾಗ, ಅವನು ಮರದ ದಿಮ್ಮಿಯನ್ನು ತೆಗೆದುಕೊಂಡು ತನ್ನ ಹೆಂಡತಿಗೆ ಹೊಡೆದು ಅವಳನ್ನು ಕೊಂದನು ಎಂದು ಆರೋಪಿಸಲಾಗಿದೆ ಎಂದು ತಿಳಿಸಿದ್ದಾರೆ.

ದಂಪತಿಯ ಮಗ ರಾಹುಲ್ ಭಯದಿಂದ ಸ್ಥಳದಿಂದ ಓಡಿಹೋಗಿ ತನ್ನ ಅಜ್ಜಿಯ ಮನೆಗೆ ಹೋಗಿದ್ದಾನೆ. ನವೆಂಬರ್ 28ರ ಸೋಮವಾರ ಬೆಳಿಗ್ಗೆ ಆರೋಪಿ ದುರ್ಗೇಶ್ ತನ್ನ ಅಣ್ಣ ಮಧು ಎಂಬಾತನಿಗೆ ಕರೆ ಮಾಡಿ ಸರಿತಾ ಸತ್ತಿದ್ದಾಳೆ ಎಂದು ಹೇಳಿದ್ದಾನೆ. ಮಧು ಸ್ಥಳಕ್ಕೆ ಹೋಗಿ ಸರಿತಾಳನ್ನು ನೋಡಿದಾಗ, ದುರ್ಗೇಶ್ ನ ಹೆಂಡತಿ ಸತ್ತು ಬಿದ್ದಿದ್ದಳು ಎಂದು ತಿಳಿದುಬಂದಿದೆ.

ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿ ಶವ!
ಶಹಜಹಾನ್ಪುರ: ಕಬ್ಬಿನ ಗದ್ದೆಯೊಂದರಲ್ಲಿ 12 ವರ್ಷದ ಬಾಲಕಿಯೊಬ್ಬಳ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸ್‌ ಮಾಹಿತಿ ಪ್ರಕಾರ ಸಂತ್ರಸ್ತೆಯನ್ನು ಪುಷ್ಪಾ ಅಲಿಯಾಸ್ ರಜನಿ ಎಂದು ಗುರುತಿಸಲಾಗಿದೆ.

ಈ ಕುರಿತು ಶಹಜಹಾನ್ಪುರದ ಪೊಲೀಸ್ ಅಧೀಕ್ಷಕ ಎಸ್.ಆನಂದ್ ಅವರು ಮಾತನಾಡಿದ್ದು, 12 ವರ್ದದ ಬಾಲಕಿಯು ಶವವಾಗಿ ಪತ್ತೆಯಾಗಿದ್ದು, ಆಕೆಯ ಕೈಗಳನ್ನು ಕಟ್ಟಲಾಗಿತ್ತು ಮತ್ತು ಆಕೆಯ ಕುತ್ತಿಗೆಯ ಮೇಲೆ ಕೆಲವು ಗುರುತುಗಳು ಕಂಡುಬಂದಿವೆ. ಹೀಗಾಗಿ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿಲಾಗಿದೆ ಎಂದು ಶಂಕಿಸಿದ್ದಾರೆ.

ಅಲ್ಲಿನ ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತೆಯು ತನ್ನ ಅಜ್ಜಿಯೊಂದಿಗೆ, ತನ್ನ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಹೊಲದಲ್ಲಿ ಹುಲ್ಲನ್ನು ಕೊಯ್ಯುತ್ತಿದ್ದಳು ಎಂದು ಮಾಹಿತಿ ದೊರಕಿದೆ. ಆದರೆ ಬಹಳ ಹೊತ್ತಿನ ನಂತರ ಅಜ್ಜಿ ಮನೆಗೆ ಬಂದು ನೋಡದಾಗ ಮೊಮ್ಮಗಳು ಇಲ್ಲದಿರುವುದನ್ನು ಗಮನಿಸಿದ್ದಾರೆ. ನಂತರ ಅಜ್ಜಿಯು ಅಲ್ಲಿನ ಗ್ರಾಮಸ್ಥರ ಸಹಾಯದಿಂದ ಶೋಧ ನಡೆಸಿದಾಗ, ಬಾಲಕಿಯ ಶವ ಪತ್ತೆಯಾಯಿತು ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಘಟನೆಯ ತನಿಖೆಗಾಗಿ ತಂಡಗಳನ್ನು ರಚಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಶ್ರದ್ಧಾ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್: ಸಾವಿಗೆ ಕಾರಣವಾಯಿತೇ ಪೊಲೀಸರ ನಿರ್ಲಕ್ಷ್ಯ?
ನವದೆಹಲಿ: ಕೆಲವು ದಿನಗಳಿಂದ ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ʼಶ್ರದ್ಧಾ ಹತ್ಯೆʼ ಪ್ರಕರಣ ಇದೀಗ ಮತ್ತೊಂದು ತಿರುವು ತೆಗೆದುಕೊಂಡಿದೆ. ತನ್ನ ಮಾಜಿ ಪ್ರೇಮಿ ಅಫ್ತಾಬ್ ತನ್ನನ್ನು ಹಿಂಸಿಸುತ್ತಿದ್ದಾನೆ ಎಂದು ಮೃತ ಶ್ರದ್ಧಾ 2 ವರ್ಷಗಳ ಹಿಂದೆಯೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವ ಪರಿಣಾಮ ಹಾಗೂ ಪೊಲೀಸರ ನಿರ್ಲಕ್ಷ್ಯ ಇಂದು ಶ್ರದ್ಧಾ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತಂತೆ ಶ್ರದ್ಧಾ 23 ನವೆಂಬರ್ 2020 ರಂದು ಪೊಲೀಸರಿಗೆ ಸಲ್ಲಿಸಿದ್ದ ದೂರಿನ ಪ್ರತಿ ಇದೀಗ ಸಾಮಾಜಿಕ ತಾಲತಾಣದಲ್ಲಿ ವೈರಲ್‌ ಆಗಿದೆ.

ಶ್ರದ್ಧಾ ನೀಡಿದ್ದ ದೂರಿನಲ್ಲಿ ಏನಿದೆ?

ಅಶ್ವಿನಿ ಶ್ರೀವಾಸ್ತವ ಎಂಬುವರು ಈ ದೂರಿನ ಪ್ರತಿಯನ್ನು ಹಂಚಿಕೊಂಡಿದ್ದು ಅದರಲ್ಲಿ ಪೊಲೀಸ್‌ ಅಧಿಕಾರಿಗಳ ಮೊಹರು ದಾಖಲಾಗಿದೆ. ಆ ದೂರಿನಲ್ಲಿ ಶ್ರದ್ಧಾ ʼಅಫ್ತಾಬ್ ನನ್ನನ್ನು 6 ತಿಂಗಳುಗಳಿಂದ ಹಿಂಸಿಸುತ್ತಿದ್ದು, ಹಲವು ಬಾರಿ ನನ್ನ ಕತ್ತು ಹಿಸುಕಿ ಉಸಿರು ಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದ, ಕೆಲವು ಸಲ ನನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಎಲ್ಲಿಯಾದರು ಎಸೆದು ಬರುತ್ತೇನೆ ಎಂದು ಹೇಳುತ್ತಿದ್ದʼ ಎಂದು ಮಾಹಿತಿ ನೀಡಿದ್ದರು. ಎರಡು ವರ್ಷಗಳ ಹಿಂದೆಯೇ ತನ್ನ ಮತ್ತು ಅಫ್ತಾಬ್‌ ಪ್ರೇಮ ಸಂಬಂಧ ಕೊನೆಗೊಂಡಿದ್ದರ ಕುರಿತು ಸಹ ಶ್ರದ್ಧಾ ತಿಳಿಸಿದ್ದಳು. ʼನಾವು ಅಫ್ತಾಬ್‌ ಹಿರಿಯದ ಆಶೀರ್ವಾದದೊಂದಿಗೆ ಮದುವೆ ಆಗುವುದು ನಿಶ್ಚಿತವಾಗಿತ್ತು. ಆದರೆ ಈಗ ನಾನು ಅವನಿಂದ ದೂರ ಇರಲು ತೀರ್ಮಾನಿಸಿದ್ದೇನೆʼ ಎಂದು ದೂರಿನಲ್ಲಿ ಹೇಳಲಾಗಿತ್ತು. ʼನಾನು ಎಲ್ಲೇ ಕೈಗೆ ಸಿಗಲಿ ಹೊಡೆದು ಕೊಲ್ಲುವುದಾಗಿ ಅವನು ನನಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದಾನೆ. ಹೀಗಾಗಿ ನನ್ನ ಮೇಲೆ ಯಾವುದೇ ದೈಹಿಕ ಹಲ್ಲೆ ನಡೆದರೂ ಅವನೇ ಕಾರಣ. ನನಗೆ ರಕ್ಷಣೆ ಕೊಡಿʼ ಎಂದು ಶ್ರದ್ಧಾ ಈ ದೂರಿನ ಮೂಲಕ ವಿನಂತಿಸಿಕೊಂಡಿದ್ದರು.

ಶ್ರದ್ಧಾ ನೀಡಿರುವ ದೂರಿನ ಪ್ರತಿ

ʼನಾವು ಲಿವಿಂಗ್‌ ಟುಗೆದರ್‌ ನಲ್ಲಿರುವುದು ಅಫ್ತಾಬ್‌ ಪೋಷಕರಿಗೆ ತಿಳಿದಿತ್ತಲ್ಲದೆ ಅವರು ವಾರಕ್ಕೊಮ್ಮೆ ಭೇಟಿ ಮಾಡಿ ಹೋಗುತ್ತಿದ್ದರು. ಇಲ್ಲಿಯ ವರೆಗೂ ನಾವು ಜೊತೆಗೆ ಇದ್ದೆವುʼ ಎಂದು ತಿಳಿಸಿದ್ದ ಶ್ರದ್ದಾ ಸದ್ಯದ ಪರಿಸ್ಥಿತಿಯಲ್ಲಿ ನನ್ನ ಜೀವಕ್ಕೆ ತೊಂದರೆ ಇರುವುದರಿಂದ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದರು.

Big Breaking News: Shraddha had said 2 years ago (23 Nov 20) in a complaint to the Mumbai police, "Aftab will chop me into pieces, if action is not taken"

Shraddha had told Aftab's behavior to his family as well, but they did nothing. They used to visit them on weekends
+ pic.twitter.com/2zwyzM5iQg
— Ashwini Shrivastava (@AshwiniSahaya) November 23, 2022

ಜಬಲ್ಪುರದಲ್ಲಿ ನಡೆದ ಭೀಕರ ಕೊಲೆ ; ಜಾಲತಾಣದಲ್ಲಿ ಕೊಲೆಯ ಮಾಹಿತಿ ಬಿಟ್ಟ ಆರೋಪಿ
ದೇಶದಾದ್ಯಂತ ಸಂಚಲನ ಮೂಡಿಸಿ ಭಯಾನಕ ವಿವರಗಳೊಂದಿಗೆ ಸುದ್ದಿಯಾಗಿರುವ ದೆಹಲಿ ಶ್ರದ್ಧಾ ಕೊಲೆ ಪ್ರಕರಣದ ಬೆನ್ನಲ್ಲೇ, ಇದೇ ರೀತಿಯ ಮತ್ತೊಂದು ಭಯಾನಕ ಪ್ರಕರಣ ಮಧ್ಯಪ್ರದೇಶದ ಕಡೆಯಿಂದ ಸುದ್ದಿಯಾಗುತ್ತಿದೆ. ಅಭಿಜಿತ್ ಪಾಟಿದಾರ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣಗಳ ಮೂಲಕ ತಾನು ಕೊಲೆ ಮಾಡಿದ್ದನ್ನು ಬಹಿರಂಗಪಡಿಸಿದ್ದಾನೆ.

ಇಂತಹ ಭಯಾನಕ ಪ್ರಕರಣವೊಂದು ನಡೆದು ಒಂದು ವಾರದ ಮೇಲಾದರೂ ಕೊಲೆಗಾರ ಅಭಿಜಿತ್ ಪಾಟಿದಾರ್ ನನ್ನು ಬಂಧಿಸಲು ಮಧ್ಯಪ್ರದೇಶ ಪೊಲೀಸರು ವಿಫಲರಾಗಿದ್ದಾರೆ. ದುರಂತ ಎಂದರೆ ದೆಹಲಿ ಶ್ರದ್ಧಾ ಕೊಲೆ ಪ್ರಕರಣದ ಬಗ್ಗೆ ಮೇಲಿಂದ ಮೇಲೆ ವರದಿ ನೀಡುತ್ತಿರುವ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಮಧ್ಯಪ್ರದೇಶದ ಇಂತಹ ಭಯಾನಕ ಪ್ರಕರಣವನ್ನು ಕಂಡೂ ಕಾಣದಂತೆ ಕೇವಲ Flash News ನ್ನು ಅಷ್ಟೆ ಬಿತ್ತರಿಸಿ ಕೆಲಸ ಮುಗಿಸಿವೆ.

ಮಧ್ಯಪ್ರದೇಶದ ಜಬಲ್ಪುರ್ ನ ಮೇಕ್ಲಾ ರೆಸಾರ್ಟ್ ನಲ್ಲಿ ಕೊಲೆ ನಡೆದ ನಂತರ ಕೊಲೆಗಾರ ಅಭಿಜಿತ್ ಪಾಟಿದಾರ್ ಜಾಲತಾಣಗಳ ಮೂಲಕ ವಿಡಿಯೋ ಮಾಡಿದ್ದು ಸಧ್ಯ ವಿಡಿಯೋ ವೈರಲ್ ಆಗಿದೆ. ಶಿಲ್ಪಾ ರಜಿಯಾ (25) ಎಂಬ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವುದನ್ನು ಕೊಲೆಗಾರ ವಿಡಿಯೋ ಮೂಲಕ ಸಾಕ್ಷಿ ಬಿಟ್ಟಿದ್ದಾನೆ. ನಂತರ “ಬೇವಾಫೈ ನಹೀ ಕರ್ನೆ ಕಾ” (ನಂಬಿಕೆಗೆ ದ್ರೋಹ ಮಾಡಬೇಡಿ) ಎನ್ನುವ ಮೂಲಕ ಕೊಲೆ ಪ್ರಕರಣದ ಗಂಭೀರ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ನಂತರ ಆತ ಹಾಸಿಗೆ ಮೇಲಿರುವ ಹೊದಿಕೆಯನ್ನು ತಗೆದು ಕೊಲೆ ಮಾಡಿರುವ ಹೆಣ್ಣಿನ ಮೃತದೇಹವನ್ನು ತೋರಿಸಿದ್ದಾನೆ. ಶಿಲ್ಪಾ ರಜಿಯಾ ಎಂಬ ಯುವತಿ ಕತ್ತು ಸೀಳಿದ ಭಯಾನಕ ಸ್ಥಿತಿಯಲ್ಲಿ ವಿಡಿಯೋದಲ್ಲಿ ಪತ್ತೆಯಾಗಿದೆ.

ಅಭಿಜಿತ್ ಪಾಟಿದಾರ್ ನಡೆಸಿದ ಕೊಲೆಯ ಹಿನ್ನೆಲೆಯಲ್ಲಿ ಇದೊಂದು ಹಣಕಾಸಿನ ವ್ಯವಹಾರದ ಕೊಲೆ ಎಂಬುದು ಸಾಭೀತಾಗಿದೆ. ಅಭಿಜಿತ್ ನ ಸ್ನೇಹಿತ ಜಿತೇಂದ್ರ ಎಂಬ ವ್ಯಕ್ತಿಯ ಸೂಚನೆಯ ಮೇಲೆ ಈ ಕೊಲೆ ಮಾಡಿರುವುದಾಗಿ ಅಭಿಜಿತ್ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಶಿಲ್ಪಾ ರಜಿಯಾ ಅವರು ಜಿತೇಂದ್ರನ ಬಳಿಯಿಂದ 12 ಲಕ್ಷ ರೂಪಾಯಿ ತಗೆದುಕೊಂಡಿರುತ್ತಾರೆ. ನಡುವೆ ವ್ಯವಹಾರದಲ್ಲಿ ಬಂದ ವೈಮನಸ್ಸಿನಿಂದ ಜಿತೇಂದ್ರ ಆಕೆಯನ್ನು ಕೊಲೆಗೈಯಲು ಅಭಿಜಿತ್ ಗೆ ತಿಳಿಸಿದ್ದಾನೆ. ವಿಡಿಯೋ ನಡೆಸಿದ ಸಂದರ್ಭದಲ್ಲಿ ಅಭಿಜಿತ್, ಜಿತೇಂದ್ರ ಮತ್ತು ಸುಮಿತ್ ಪಟೇಲ್ ಎಂಬ ಹೆಸರು ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗಾರ ಅಭಿಜಿತ್ ಪಾಟಿದಾರ್ ನ ಹುಡುಕಾಟ ಇನ್ನೂ ಮುಂದುವರೆದಿದೆ.

ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ಶುಕ್ಲಾ ಮಾಧ್ಯಮಗಳೊಂದಿಗೆ ಮಾತನಾಡಿ, ಅಭಿಜಿತ್ ಪಾಟ್ನಾದಲ್ಲಿರುವ ಜಿತೇಂದ್ರ ಅವರ ಮನೆಯಲ್ಲಿ ಒಂದು ತಿಂಗಳ ಕಾಲ ತಂಗಿದ್ದರು. ಈ ಸಂದರ್ಭದಲ್ಲಿ ಕೊಲೆ ವಿಚಾರವಾಗಿ ಮಾತುಕತೆ ನಡೆದಿರಬಹುದು. ಸಧ್ಯ ಬಿಹಾರದ ಹೊರತಾಗಿ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ವಿವಿಧ ಭಾಗಗಳಿಗೆ ಅಭಿಜಿತ್‌ನ ಹುಡುಕಾಟಕ್ಕಾಗಿ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಲೆಯ ವಿವರಗಳನ್ನು ಹಂಚಿಕೊಂಡ ಪೊಲೀಸರು “ಆರೋಪಿ ಅಭಿಜಿತ್ ನವೆಂಬರ್ 6 ರಂದು ಮೇಖ್ಲಾ ರೆಸಾರ್ಟ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದಾನೆ. ರಾತ್ರಿ ಅವನು ತನ್ನ ಕೋಣೆಯಲ್ಲಿ ಒಬ್ಬನೇ ಇದ್ದನು. ಮರುದಿನ ಮಧ್ಯಾಹ್ನ ಅವನನ್ನು ಭೇಟಿಯಾಗಲು ಶಿಲ್ಪಾ ರಜಿಯಾ ರೆಸಾರ್ಟ್‌ಗೆ ಬಂದಿರುತ್ತಾರೆ. ನಂತರ ಅವರು ಊಟಕ್ಕೆ ಆರ್ಡರ್ ಮಾಡುತ್ತಾರೆ. ಸುಮಾರು ಒಂದು ಗಂಟೆಯ ನಂತರ, ಆರೋಪಿ ಹೋಟೆಲ್‌ಗೆ ರೂಂ ಗೆ ಬೀಗ ಹಾಕಿ ಒಬ್ಬರೇ ಹೊರಟಿದ್ದಾನೆ. ನಂತರ ನವೆಂಬರ್ 8 ರಂದು ಹೋಟೆಲ್ ಆಡಳಿತ ಮಂಡಳಿ ಬಾಗಿಲು ಒಡೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ” ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಸಧ್ಯ ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ಸೈಬರ್ ಸೆಲ್ ಜೊತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಅಭಿಜಿತ್ ಸೇರಿದಂತೆ ಇನ್ನಿತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ದೆಹಲಿ ಹತ್ಯೆ ಪ್ರಕರಣ ; ಆರೋಪಿ ಅಫ್ತಾಬ್ ಜೊತೆಗೆ ಇದ್ದ ಇನ್ನೊಬ್ಬರು ಯಾರು?
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿ ಶ್ರದ್ಧಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಕೊಲೆಯ ಆರೋಪಿ ಅಫ್ತಾಬ್ ಅಮಿನ್ ನನ್ನು ಬಂಧಿಸಿದ ದೆಹಲಿ ಪೊಲೀಸರು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ. ಈ ನಡುವೆ ಆರೋಪಿ ಅಫ್ತಾಬ್ ಗೆ ಬೇರೊಂದು ಹೆಣ್ಣಿನ ಸಂಪರ್ಕದ ಬಗ್ಗೆಯೂ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ 6 ತಿಂಗಳ ಹಿಂದೆಯೇ ನಡೆದಿದ್ದ ಭೀಕರ ಕೊಲೆ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮೃತ ಶ್ರದ್ಧಾಳ ಪ್ರಿಯಕರ ಅಫ್ತಾಬ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ ಮೇ ತಿಂಗಳಲ್ಲಿಯೇ ಶ್ರದ್ಧಾ ಎಂಬ ಹೆಣ್ಣು ಮಗಳನ್ನು ಕೊಲೆ ಮಾಡಿದ್ದ ಆಕೆಯ ಪ್ರಿಯಕರ ಅಫ್ತಾಬ್ ಅಮಿನ್ ಪೂನಾವಾಲ ಏನೂ ನಡೆದೇ ಇಲ್ಲವೆಂಬಂತೆ ಓಡಾಡಿಕೊಂಡಿದ್ದ. ಮೃತ ಶ್ರದ್ಧಾಳ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ಆರೋಪಿ ಅಫ್ತಾಬ್ ನನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಕೊನೆಯ ಬಾರಿಗೆ ಆಕೆಯ ಮೊಬೈಲ್ ಫೋನ್ ಸ್ಥಗಿತವಾದ ನೆಟ್ವರ್ಕ್ ಹುಡುಕಿ ಶ್ರದ್ಧಾ ಹಾಗೂ ಅಫ್ತಾಬ್ ರ ಲಿವ್ ಇನ್ ರಿಲೇಷನ್ (Live in relationship) ನಲ್ಲಿ ಇದ್ದದ್ದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ನಂತರ ಪ್ರಾಥಮಿಕ ವಿಚಾರಣೆಯಲ್ಲಿ ಅಫ್ತಾಬ್ ಕೊಲೆ ಮಾಡಿರುವ ಬಗ್ಗೆ ಒಪ್ಪಿರಲಿಲ್ಲ. ಆದರೆ ತನಿಖೆ ತೀವ್ರತರವಾಗಿ ಚುರುಕುಕೊಂಡ ಹಿನ್ನೆಲೆಯಲ್ಲಿ ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆಕೆಯ ಕೊಲೆಯ ಸುಳಿವೇ ಸಿಗಬಾರದು ಎಂದು ಅಫ್ತಾಬ್ ಬಳಸಿದ ವಿವಿಧ ಉಪಾಯಗಳನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಆಕೆಯ ಕೊಲೆಯ ನಂತರ ಅಫ್ತಾಬ್ ಕ್ರೈಂ ವೆಬ್ ಸೀರೀಸ್ ನೋಡಿದ್ದು ವಿಚಾರಣೆಯಲ್ಲಿ ತಿಳಿದು ಬಂದಿದೆ. ನಂತರ ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಎಸೆದ ಬಗ್ಗೆ ಅಫ್ತಾಬ್ ಒಪ್ಪಿದ್ದಾನೆ. ಆದರೆ ಸಧ್ಯಕ್ಕೆ ಶ್ರದ್ಧಾಳ ದೇಹದ ಯಾವುದೇ ಭಾಗವೂ ತನಿಖೆಯಲ್ಲಿ ಪತ್ತೆ ಆಗಿಲ್ಲ.

ಈ ನಡುವೆ ಅಫ್ತಾಬ್, ಶ್ರದ್ಧಾ ಮಾತ್ರವಲ್ಲದೆ ಬೇರೊಂದು ಹೆಣ್ಣಿನ ಸಂಪರ್ಕದಲ್ಲಿ ಇದ್ದ ಬಗ್ಗೆಯೂ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಅದೂ ಶ್ರದ್ಧಾಳ ಮೃತದೇಹ ಮನೆಯ ರೆಫ್ರಿಜರೇಟರ್ (Refrigerator) ನಲ್ಲಿ ಇದ್ದಾಗಲೇ ಆ ಹೆಣ್ಣು ಅಫ್ತಾಬ್ ಇರುವ ಫ್ಲಾಟ್ ಗೆ ಬಂದ ಬಗ್ಗೆಯೂ ಪೊಲೀಸರು ಅನುಮಾನಿಸಿದ್ದಾರೆ. ಹಾಗೊಂದು ವೇಳೆ ಶ್ರದ್ಧಾ ಕೊಲೆಯ ನಂತರ ಆಕೆಯೂ ಆ ಮನೆಗೆ ಬಂದಿದ್ದರೆ ಅಫ್ತಾಬ್ ಪೂನವಾಲ ಜೊತೆಗೆ ಆಕೆಯ ಮೇಲೂ ಕೊಲೆಯ ಆರೋಪ ಸಾಭೀತಾಗಬಹುದು ಎನ್ನಲಾಗಿದೆ. ಶ್ರದ್ಧಾಳ ಕೊಲೆಯಲ್ಲಿ ಆ ಮೂರನೇ ವ್ಯಕ್ತಿಯ ಪಾತ್ರ ಇದೆಯೇ ಎಂಬುದನ್ನು ತನಿಖೆಯ ನಂತರ ತಿಳಿಯಬಹುದಾಗಿದೆ.

ಹಿಟ್ ಅಂಡ್ ರನ್ ಮಾಡಿ ಇಂಟಲಿಜೆನ್ಸ್ ಅಧಿಕಾರಿ ಕೊಲೆ
ಮೈಸೂರು: ನಿವೃತ್ತ ಇಂಟಲಿಜೆನ್ಸ್ ಅಧಿಕಾರಿಯ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹರಿಸಿ, ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಶುಕ್ರವಾರ, ಮಾನಸಗಂಗೋತ್ರಿ ಆವರಣದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ (83) ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಂಬರ್ ಪ್ಲೇಟ್ ಇಲ್ಲದ ಕಾರೊಂದು ಉದ್ದೇಶಪೂರ್ವಕವಾಗಿ ರಸ್ತೆಯ ಬದಿಯಲ್ಲಿ ನಡೆಯುತ್ತಿದ್ದ ಕುಲಕರ್ಣಿ ಅವರಿಗೆ ಡಿಕ್ಕಿ ಹೊಡೆದಿರುವುದು ಬೆಳಕಿಗೆ ಬಂದಿದೆ.

ಮೈಸೂರಿನಲ್ಲಿ ಹಿಟ್ ಅಂಡ್ ರನ್ ರೀತಿ ಕೊಲೆಯಾದ ನಿವೃತ್ತ ಕೇಂದ್ರ ಇಂಟಲಿಜೆನ್ಸ್ ಅಧಿಕಾರಿ ಕುಲಕರ್ಣಿ ಅವರ ಹತ್ಯೆಯ ಅಮಾನವೀಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ.  ವಯೋವೃದ್ದರ ಸಾವಿಗೆ ಕಾರಣರಾದ ಪಾತಕಿಗಳ ಬಂಧನಕ್ಕೆ ಬಲೆ ಬೀಸಿರುವ ಮೈಸೂರು ಪೊಲೀಸರು.@JustKannada @CMofKarnataka @DgpKarnataka @JnanendraAraga @CPMysuru @MysuruMemes pic.twitter.com/YrYHqNmV0R
— JustKannada (@JustKannada) November 5, 2022

ಆರೋಪಿಗಳ ಪತ್ತೆಗೆ ಎಸಿಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದು,‌ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮೈಸೂರು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕೊಲೆ, ಕಳ್ಳತನ, ಅಪಹರಣ ಯತ್ನ, ಕಳಪೆ ದರ್ಜೆಯ ಮದ್ಯ ಮಾರಾಟ; ಗೃಹ ಸಚಿವರ ಕ್ಷೇತ್ರದಲ್ಲಿ ಲಾ & ಆರ್ಡರ್ ಢಮಾರ್!
ಒಂದು ತಿಂಗಳ ಪ್ರೋಗ್ರೆಸ್ ರಿಪೋರ್ಟ್ ಕಡೆಗೆ ಗಮನ ಹರಿಸಿ ಮುಖ್ಯ ವಿಚಾರಕ್ಕೆ ಬರೋಣ. ಶಾಲೆ ಮತ್ತು ಕಾಲೇಜುಗಳಲ್ಲಿ ಸರಣಿ ಕಳ್ಳತನ, ವಿದ್ಯಾರ್ಥಿನಿ ಮೇಲೆ ಅಪರಣ ಯತ್ನ, ಕಳಪೆ ದರ್ಜೆಯ ಮದ್ಯ ಮಾರಾಟ, ಅನುಮಾನಾಸ್ಪದ ಸಾವು ; ಕೊಲೆ ಶಂಕೆ…! ಇಂತಹ ಆತಂಕಕಾರಿ ದುರ್ಘಟನೆಗಳು ನಡೆಯುತ್ತಿರೋದು ಯಾವುದೋ ದೂರದ ಉತ್ತರ ಪ್ರದೇಶ ಅಥವಾ ಬಿಹಾರದಂತಹ ರಾಜ್ಯಗಳಲ್ಲಿ ಅಲ್ಲ. ಇದು ಕರ್ನಾಟಕ ರಾಜ್ಯದ ಘನತೆವೆತ್ತ ಗೃಹಮಂತ್ರಿ ಆರಗ ಜ್ಞಾನೇಂದ್ರರ ಸ್ವಕ್ಷೇತ್ರ ತೀರ್ಥಹಳ್ಳಿ ಕ್ಷೇತ್ರದಲ್ಲಿ.

ಎಲ್ಲೋ ಒಂದು ಕಡೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಬಹುಕಾಲದ ನಂತರ ರಾಜ್ಯ ಸರ್ಕಾರದ ಅತ್ಯುನ್ನತ ಸಚಿವ ಸ್ಥಾನ ಗೃಹಮಂತ್ರಿ ಪಟ್ಟ ಸಿಕ್ಕಿತ್ತು ಅಂತಲೇ ಕ್ಷೇತ್ರದ ಜನ ಎರಡು ವರ್ಷಗಳ ಹಿಂದೆ ಬಹಳ ಸಂತಸ ಪಟ್ಟಿದ್ದರು. ಮುಖ್ಯಮಂತ್ರಿ ನಂತರದ ಅತ್ಯಂತ ಪ್ರಭಾವಿ ಹುದ್ದೆ ಸಿಕ್ಕಿದ್ದಕ್ಕೆ ಆಡಳಿತ ಪಕ್ಷದ ಜೊತೆಗೆ ವಿರೋಧ ಪಕ್ಷದ ಕಾರ್ಯಕರ್ತರು ಮುಖಂಡರಾದಿಯಾಗಿ ಸಚಿವ ಆರಗ ಜ್ಞಾನೇಂದ್ರರಿಗೆ ಅಭಿನಂದನೆ ಸುರಿಮಳೆಗೈದಿದ್ದರು. ಆದರೆ ನಂತರದ ದಿನಗಳಲ್ಲಿ ಆರಗ ಜ್ಞಾನೇಂದ್ರರ ಆಡಳಿತ ವೈಖರಿ, ಸಾಮಾಜಿಕವಾಗಿ ಅವರು ಕೊಡುವ ಬಹಿರಂಗ ಹೇಳಿಕೆಗಳು, ತಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ಕಳಪೆ ಮಟ್ಟದ್ದಾಗಿತ್ತು ಮತ್ತು ಕ್ಷೇತ್ರದ ಪ್ರಜ್ಞಾವಂತ ಜನತೆ ತಲೆ ತಗ್ಗಿಸುವಂತದ್ದಾಗಿತ್ತು.

ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಯಾಗಿ, ಜವಾಬ್ದಾರಿಯುತ ಸ್ಥಾನದ ಸಚಿವರಾಗಿ ಆರಗ ಜ್ಞಾನೇಂದ್ರ ಕೊಟ್ಟ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬೆಂಗಳೂರಿನ ದಲಿತ ಯುವಕನ ಕೊಲೆ ಸಂದರ್ಭದಲ್ಲೂ ತನಿಖೆಗೆ ಮುನ್ನವೇ ಮುಸ್ಲಿಂ ಧ್ವೇಷದ ಹಿನ್ನೆಲೆಯಲ್ಲಿ ‘ಉರ್ದು ಮಾತನಾಡದ್ದಕ್ಕೆ ಕೊಲೆ ನಡೆಯಿತು’ ಎಂಬ ರೀತಿಯ ಹೇಳಿಕೆ ಕೂಡಾ ಇಡೀ ಸರ್ಕಾರವೇ ತಲೆ ತಗ್ಗಿಸುವಂತೆ ಮಾಡಿತ್ತು. ಪ್ರಸ್ತುತ ರಾಜ್ಯದ ಅತ್ಯಂತ ದೊಡ್ಡ ಸ್ಕ್ಯಾಮ್ ಪಿಎಸ್ಐ ಹಗರಣ ಸಹ ಆರಗ ಜ್ಞಾನೇಂದ್ರರ ಅವಧಿಯಲ್ಲೇ ನಡೆದದ್ದು ಮತ್ತು ಬೆಳಕಿಗೆ ಬಂದದ್ದು ಎಂಬುದು ಉಲ್ಲೇಖಾರ್ಹ.

ಸಚಿವ ಜ್ಞಾನೇಂದ್ರ ಮೇಲೆ ಇಂತದ್ದೊಂದು ಸಣ್ಣ ಪೀಠಿಕೆಗೆ ಉದ್ದೇಶವಿದೆ. ಒಬ್ಬ ವ್ಯಕ್ತಿ ಆಡಳಿತಾತ್ಮಕವಾಗಿ ಎಷ್ಟು ಬಲಿಷ್ಠನಾಗಿದ್ದಾನೆ, ಎಷ್ಟು ಪಕ್ವನಾಗಿದ್ದಾನೆ ಎಂಬುದು ಸಾಮಾಜಿಕವಾಗಿ ಅವರು ಕೊಡುವ ಹೇಳಿಕೆ ಮತ್ತು ತಗೆದುಕೊಳ್ಳುವ ನಿರ್ಧಾರಗಳ ಮೇಲೆ ನಿಲ್ಲುತ್ತದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದ ಕ್ರೈಂ ಪ್ರಕರಣಗಳ ಮೇಲೆ ಕಣ್ಣಾಡಿಸಿದರೆ ಸಚಿವ ಆರಗ ಜ್ಞಾನೇಂದ್ರ ಇಡೀ ರಾಜ್ಯದ ಆಡಳಿತದ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ತಮ್ಮ ಕ್ಷೇತ್ರದ ಜನತೆ, ಅಲ್ಲಿನ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದದು ಹೆಚ್ಚು ಸೂಕ್ತ ಎಂದೇ ತೀರ್ಥಹಳ್ಳಿ ಮಹಾಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಸರಣಿ ಕಳ್ಳತನದ ಬಗ್ಗೆ ವ್ಯಾಪಕ ಟೀಕೆ
ಕೇವಲ ಒಂದು ವಾರದ ಅಂತರದಲ್ಲಿ ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸರಣಿ ಕಳ್ಳತನಕ್ಕೆ ಕ್ಷೇತ್ರದ ಜನತೆ ಕಳ್ಳರ ಜೊತೆಗೆ ಗೃಹ ಮಂತ್ರಿಗಳಿಗೂ ಹಿಡಿಶಾಪ ಹಾಕುತ್ತಿದ್ದಾರೆ. ಹೊಸನಗರ ಪಟ್ಟಣದ ಕೊಡಚಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ರೂಂಗಳ ಬೀಗಗಳನ್ನು ತುಂಡರಿಸಿ 15ಕ್ಕೂ ಹೆಚ್ಚು ಕಾಲೇಜಿನ ಕಡತಗಳು, ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮೊದಲಾದ ದಾಖಲೆಗಳಿರುವ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಂತರ ಬೀರುನಲ್ಲಿದ್ದ ಅಂದಾಜು 20,000 ರೂಪಾಯಿಗಳಷ್ಟು ಹಣವನ್ನು ದೋಚಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ನಗರದ ಅಮೃತಾಮಯಿ ಶಾಲೆ ಸೇರಿದಂತೆ ಒಟ್ಟು ಎರಡು ಶಾಲೆಗಳಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಕೋಣಂದೂರು ವಿವೇಕಾನಂದ ಶಾಲೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಅಮೃತ ಪದವಿಪೂರ್ವ ಕಾಲೇಜಿನ ಬೀಗ ಮುರಿದು ಕಳ್ಳತನ ನಡೆದ ಬಗ್ಗೆಯೂ ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ರಿಪ್ಪನ್ ಪೇಟೆಯ ನಿವೃತ್ತ ಎಎಸ್ಐ ಮನೆಯಲ್ಲಿ ಹಾಡ ಹಗಲೇ ಕಳ್ಳತನ ನಡೆದಿದ್ದು 10 ಲಕ್ಷಕ್ಕೂ ಹೆಚ್ಚು ಹಣ ಮತ್ತು ಚಿನ್ನಾಭರಣ ಕಳುವಾದ ಪ್ರಕರಣ ದಾಖಲಾಗಿದೆ. ಇನ್ನು ಕ್ಷೇತ್ರದಲ್ಲಿ ಕಳ್ಳರು ಸ್ಮಶಾನವನ್ನೂ ಬಿಡದೇ ಕಟ್ಟೆಹಕ್ಕಲು ಸಾಲ್ಗಡಿ ಎಂಬಲ್ಲಿ ಸ್ಮಶಾನದ ಚೇಂಬರ್ ಕಳ್ಳತನ ಮಾಡಿರುವುದು, ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಸಾಕ್ಷಿ ಕೊಡುವಂತಿದೆ. ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪವೇ ಇರುವ ಮೇಲಿನ ಕುರುವಳ್ಳಿ ಗ್ರಾಮದಲ್ಲಿ 6 ನೇ ತರಗತಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಓಮ್ನಿ ಕಾರಿನಲ್ಲಿ ಅಪಹರಣಕ್ಕೆ ಯತ್ನಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿನಿ ಅಪಹರಣ ಪ್ರಕರಣ ತಪ್ಪಿದೆ.

ಅಕ್ರಮ ಮದ್ಯ ಮಾರಾಟದ ಆರೋಪ, ವ್ಯಕ್ತಿ ಸಾವು ; ಕೊಲೆ ಶಂಕೆ
ಗೃಹ ಸಚಿವರ ಸ್ವಗೃಹ ಗುಡ್ಡೇಕೊಪ್ಪ ಊರಿನ ಕೆಲವೇ ದೂರದಲ್ಲಿ ಬರುವ ಹೊದಲ ಬಾಳೆಕೋಡ್ಲು ಎಂಬಲ್ಲಿ ಮದ್ಯ ಮಾರಾಟ ವಿಚಾರದಲ್ಲಿ ಗಲಾಟೆಯೊಂದು ನಡೆದಿತ್ತು. ಅದರಲ್ಲಿ ರಮೇಶ್ ಎಂಬುವರಿಗೆ ಗಂಭೀರವಾಗಿ ಪೆಟ್ಟುಬಿದ್ದು ಅಸುನೀಗಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಇದು ಅಕ್ರಮ ಮದ್ಯ ಸೇವನೆಯಿಂದಾದ ಸಾವು ಎಂಬ ಮಾತು ಬಂದರೂ ರಮೇಶ್ ಮೈಮೇಲೆ ಆದ ಗಂಭೀರ ಗಾಯಗಳು ಇದೊಂದು ಕೊಲೆ ಎಂಬುದನ್ನು ಸಾರಿ ಹೇಳುತ್ತಿದೆ. ದುರಂತ ಎಂದರೆ ಈ ಬಗ್ಗೆ ಇಲ್ಲಿಯವರೆಗೂ ಇಷ್ಟು ದಿನವಾದರೂ ಆರೋಪಿಗಳ ಬಂಧನವಾಗಿಲ್ಲ ಮತ್ತು ಪೊಲೀಸ್ ಇಲಾಖೆ ಅಡಿಯಲ್ಲಿ ಎಫ್ಐಆರ್ ಕೂಡ ದಾಖಲಾಗದಿರುವುದು ಆಡಳಿತ ಯಂತ್ರದಲ್ಲಿ ಗೃಹ ಮಂತ್ರಿಗಳ ಹಿಡಿತ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಹೇಳುತ್ತಿದೆ.

ರಮೇಶ್ ಸಾವಿನ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಭ್ರಷ್ಟ ಲಂಚಾವತಾರದ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ. ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ರಮೇಶ್ ಸಾವಿನ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸರು ಇಲ್ಲಿಯವರೆಗೂ ಎಫ್ಐಆರ್ ದಾಖಲು ಮಾಡದ ಹಿನ್ನೆಲೆಯಲ್ಲಿ ಇದರಲ್ಲಿ ರಾಜಕೀಯ ಹಿತಾಸಕ್ತಿ ಅಡಗಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೃತ ರಮೇಶ್ ಸಚಿವ ಆರಗ ಜ್ಞಾನೇಂದ್ರರ ದೂರದ ಸಂಬಂಧಿ ಎಂಬುದು ವಿಶೇಷ.

ಈ ಪ್ರಕರಣದಲ್ಲಿ ರಮೇಶ್ ಪರವಾಗಿ ದೂರು ದಾಖಲಿಸಲಾಗಿದೆ. ಆದರೆ ಹಿನ್ನೆಲೆಯಿಂದ ದೂರು ನೀಡಿದವರಿಗೆ ದೂರನ್ನು ವಾಪಸ್ ತಗೆದುಕೊಳ್ಳಲು ಒತ್ತಡ ಹೇರಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಸಧ್ಯ ಈ ಎಲ್ಲಾ ಗಂಭೀರ ಪ್ರಕರಣ ನಡೆದಿರೋದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಅಲ್ಲ. ಕೇವಲ ಗೃಹ ಮಂತ್ರಿ ಆರಗ ಜ್ಞಾನೇಂದ್ರರ ಸ್ವಕ್ಷೇತ್ರದಲ್ಲಿ ಎಂಬುದು ಉಲ್ಲೇಖಾರ್ಹ ವಿಚಾರ. ಅದೂ ಕೇವಲ ಒಂದು ತಿಂಗಳ ಪ್ರೋಗ್ರೆಸ್ ರಿಪೋರ್ಟ್.

ಇಲ್ಲಿ ಗೃಹ ಮಂತ್ರಿಗಳಿಗೆ ಕ್ಷೇತ್ರದ ಆಡಳಿತದಲ್ಲಿ ಹಿಡಿತ ತಪ್ಪಿದೆಯೇ? ಸ್ವತಃ ಗೃಹ ಮಂತ್ರಿಗಳು ಸ್ವಜನ ಪಕ್ಷಪಾತಿಯಾಗಿ ಕಳ್ಳರ, ಪುಂಡ ಪೋಕರಿಗಳ, ಕೊಲೆಗಡುಕರ ಪರ ನಿಂತಿದ್ದಾರೆಯೇ? ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿಗಳು ಇದ್ದರೂ ಇಲ್ಲಿಯವರೆಗೂ ಅಧಿಕೃತವಾಗಿ ಗೃಹ ಸಚಿವ ಜ್ಞಾನೇಂದ್ರ ಅಧಿಕಾರಿಗಳಿಗೆ ಯಾಕೆ ನಿಯಂತ್ರಣದ ಆದೇಶ ನೀಡಿಲ್ಲ.? ಅಥವಾ ಸ್ವತಃ ಗೃಹ ಸಚಿವರಿಗೆ ಕ್ಷೇತ್ರವನ್ನು ಹಿಡಿತದಲ್ಲಿ ಇಡಲು ಸೋತಿದ್ದಾರೆಯೇ? ಎಂಬ ಹತ್ತಾರು ಪ್ರಶ್ನೆಗಳು ಕ್ಷೇತ್ರದ ಜನರ ಬಾಯಲ್ಲಿ ಓಡಾಡುತ್ತಿದೆ.

ಮುಖ್ಯಮಂತ್ರಿ ಹುದ್ದೆ ನಂತರದ ಸ್ಥಾನ ಎಂದೇ ಗೃಹ ಇಲಾಖೆಯನ್ನು ಬಣ್ಣಿಸಲಾದರೂ, ರಾಜ್ಯದ ಮೂಲೆ ಮೂಲೆಗಳಲ್ಲಿ ಅದೆಂತಹ ಗಂಭೀರ ಅಪರಾಧ ಪ್ರಕರಣ ನಡೆದರೂ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮಾತ್ರ ಕ್ಷೇತ್ರ ಬಿಟ್ಟು ಕದಲಲ್ಲ. ವಾರದ ಏಳು ದಿನಗಳಲ್ಲಿ ಐದಾರು ದಿನವೂ ಇವರು ಕ್ಷೇತ್ರದಲ್ಲೇ ಇರುತ್ತಾರೆ. ಇದು ಆರಗ ಜ್ಞಾನೇಂದ್ರ ಮೇಲಿರುವ ಗಂಭೀರವಾದ ಆರೋಪ. ಇವರು ರಾಜ್ಯದ ಗೃಹ ಮಂತ್ರಿಯೋ ಅಥವಾ ತೀರ್ಥಹಳ್ಳಿ ಗೃಹ ಮಂತ್ರಿಯೋ ಎಂಬುದು ಜ್ಞಾನೇಂದ್ರ ವಿರೋಧಿಗಳ ಅಣಕ.

ಹುಚ್ಚು ಅಭಿಮಾನಿಯಿಂದ ಕೊಲೆ : ವಿರಾಟ್‌ ಕೊಹ್ಲಿ ಬಂಧನಕ್ಕೆ ಆಗ್ರಹ
ತಮಿಳುನಾಡು : ನೆಚ್ಚಿನ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ವಿರುದ್ದ ಅಪಹಾಸ್ಯ ಮಾಡಿದ್ದ ಸ್ನೇಹಿತನನ್ನು ಹುಚ್ಚು ಅಭಿಮಾನದಿಂಧ ಕೊಲೆ  ಮಾಡಿರುವ ಘಟನೆ ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಪೋಯೂರು ಗ್ರಾಮದಲ್ಲಿ ನಡೆದಿದ್ದು, ವಿರಾಟ್‌ ಕೊಹ್ಲಿಯನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಶುರುವಾಗಿದೆ.

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡು ದೈತ್ಯ ತಂಡಗಳಾದ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ  ಈ ಅಭಿಮಾನ

ಎಸ್‌ಐಸಿಸಿಒ ಕಂಪನಿಯಲ್ಲಿ ಕೆಲಸ ಮಾಡತ್ತಿದ್ದ ವಿಘ್ನೇಶ್‌(24) ಮತ್ತು ದರ್ಮರಾಜ್‌ ಎಂಬ ಇಬ್ಬರು ಸ್ನೇಹಿತರಲ್ಲಿ ತಮ್ಮ ತಮ್ಮ ನೆಚ್ಚಿನ ಕ್ರಿಕೆಟಿಗರ ಬಗ್ಗೆ ಚರ್ಚೆ ಉಂಟಾಗಿತ್ತು.  ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಇಬ್ಬರಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆ ಹಾಕಿಕೊಂಡು ಪರಸ್ಪರ ವಾದಗಳನ್ನು ನಡೆಸಿದ್ದರು. ಆ ನಂತರ ಧರ್ಮರಾಜ್‌ನಿಗೆ ಅವನ ನೆಚ್ಚಿನ ನಟ ವಿರಾಟ್‌ ಕೊಹ್ಲಿಯ ಬಗ್ಗೆ ಅಪಹಾಸ್ಯ ಮಾಡುವಂತೆ ವಿಘ್ನೇಶ್‌ ಮಾತನಾಡಿ, ಗೇಲಿ ಮಾಡಿದ್ದನು. ಇದರಿಂದ ಕೋಪಗೊಂಡ ಧರ್ಮರಾಜ್‌ ತನ್ನ ಹುಚ್ಚು ಅಭಿಮಾನದಿಂದ ವಿಷ್ನೇಶ್‌ನನ್ನು ಬಾಟಲ್‌ ಮತ್ತು ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ವಿಘ್ನೇಶ್‌ನನ್ನು ಕೊಲೆ ಮಾಡಿದ್ದಾರೆ.  ಈ ಘಟನೆ ಗುರುವಾರದಂದು  ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದರೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಈ ವಿಷಯ ತಿಳಿದ ಪೊಲೀಸರು ಆರೋಪಿಯಾದ ಧರ್ಮರಾಜ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡಿಸಿದ್ದಾರೆ. ಬಂಧಿತ ನೀಡಿರುವ ಹೇಳಿಕೆ ಪ್ರಕಾರ, ಒಟ್ಟಿಗೆ ಕುಡಿಯಲು ಹೋದ ಸಂದರ್ಭದಲ್ಲಿ ನಡೆದಂತಹ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯಗೊಂಡಿರುವುದು ತಿಳಿದುಬಂದಿದೆ. ಪೊಲೀಸ್‌ ಅಧಿಕಾರಿಗಳು ಹೇಳಿರುವ ಪ್ರಕಾರ, ಮಾಲೂರು ಸಮೀಪ ಇರುವ ಎಸ್‌ಐಡಿಸಿಒ (ಸಿಡ್ಕೋ) ಕೈಗಾರಿಕಾ ಪ್ರದೇಶದಲ್ಲಿನ ತೆರೆದ ಸ್ಥಳವೊಂದರಲ್ಲಿ ಈ ಘಟನೆ ಸಂಭವಿಸಿದೆ.

ಕ್ರಿಕೆಟಿಗರ ಬಗ್ಗೆ ಪರಸ್ಪರ ಚರ್ಚೆ ಉಂಟಾಗಿದ್ದು, ಅಪಹಾಸ್ಯ ಮಾಡಿದ್ದ ಕಾರಣ ಬಂಧಿತ ಆರೋಪಿ ಎಸ್‌. ಧರ್ಮರಾಜ್‌ ಜೊತೆಗೆ ಹೊಡೆದಾಟ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಧರ್ಮರಾಜ್‌, ಬಾಟಲಿಯಿಂದ ಇರಿದು ವಿಘ್ನೇಶ್‌ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಹಿನ್ನಲೆಯಲ್ಲಿ ಇಷ್ಟೆಲ್ಲಾ ಆಗುವುದಕ್ಕೆ ನಿಜವಾದ ಕಾರಣ ಧರ್ಮರಾಜ್‌ ಅಲ್ಲ, ವಿರಾಟ್‌ ಕೊಹ್ಲಿಯ ಮೇಲಿನ ಅಭಿಮಾನ ಎಂದು ಮೊದಲು ವಿರಾಟ್‌ ಕೊಹ್ಲಿಯನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಶುರುವಾಗಿದೆ.