Muslim community holds mass prayer as part of Bakrid festival – Peepal Media

ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಹಾಸನ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಅಂಗವಾಗಿ ಶನಿವಾರದಂದು ನಗರದ ಹೊಸಲೈನ್ ರಸ್ತೆ ಹಳೆ ಈದ್ಗಾ ಮೈದಾನ ಮತ್ತು ಅಬ್ದೂಲ್ ಕಲಾಂ ರಸ್ತೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ ಮೈದಾನದಲ್ಲಿ ಸರಿಯಾಗಿ ಬೆಳಿಗ್ಗೆ 8ಕ್ಕೆ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಇದಾದ ಬಳಿಕ ಬೆಳಿಗ್ಗೆ 9ಕ್ಕೆ ನಗರದ 80 ಪೀಟ್ ರಸ್ತೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇದೆ ಸಂದರ್ಭದಲ್ಲಿ ಹಜರತ್ ಗುಜರಾತಿ ದರ್ಗಾ ಕಮಿಟಿ ಹಾಗೂ ಈದ್ಗಾ ಕಮಿಟಿ ಅಧ್ಯಕ್ಷ ಸಮೀರ್ ಖಾನ್ ಮಾಧ್ಯಮದೊಂದಿಗೆ ಮಾತನಾಡಿ, ಸಮಸ್ತ ನಾಗರೀಕ ಬಂಧುಗಳಿಗೆ ಬಕ್ರೀದ್ ಹಬ್ಬದ ಅಂಗವಾಗಿ ತುಂಬು ಹೃದಯದ ಶುಭಾಶಯಗಳನ್ನು ಹೇಳುತ್ತೇನೆ. ದೇಶದಲ್ಲಿ ನಡೆಯುತ್ತಿರವ ಕೆಡಕುಗಳಿಗೆ ಅಂತ್ಯವಾಡಲು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ. ಕೆಲ ದಿನಗಳ ಹಿಂದೆ ನಡೆದಂತಹ ಘಟನೆಗಳು, ಮುಂದೆ ಸಂಭವಿಸದAತೆ ಹಾಗೂ ನಾವುಗಳು ಸಹೋಧರತ್ವ ಮತ್ತು ಬ್ರಾತುತ್ವದಿಂದ ಬದುಕಬೇಕು, ನಮ್ಮಲ್ಲಿ ಸಂಘರ್ಷ ಕಡಿಮೆ ಆಗಬೇಕು. ನಾವೆಲ್ಲಾ ಭಾರತೀಯರು, ಒಟ್ಟಾಗಿ ಬಾಳುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೊಂದಿಗೂ ವಿಶ್ವ ಹಾಗೂ ದೇಶದ ಶಾಂತಿಗಾಗಿ ಅಲ್ಲಾನಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಬಕ್ರೀದ್ ಹಬ್ಬ ಎಂದರೇ ತ್ಯಾಗ ಬಲಿದಾನದ ಸಂಕೇತ. ಪ್ರವಾದಿ ಇಬ್ರಾಹಿಂರು ತನ್ನ ಸ್ವಂತ ಮಗ ಪ್ರವಾದಿ ಇಸ್ಮಾಯಿಲ್ ಅವರನ್ನು ಬಲಿ ಕೊಡುವ ಸಂದರ್ಭ ಒದಗಿ ಬರುತ್ತದೆ. ಇಬ್ರಾಹಿಂ ರನ್ನು ಪರೀಕ್ಷೆಗೆ ಒಳಪಡಿಸುವಂತಹ ಒಂದು ಸನ್ನಿವೇಶ. ಆ ಒಂದು ಪರೀಕ್ಷೆಯಲ್ಲಿ ಪ್ರವಾದಿ ಇಬ್ರಾಹಿಂರು ಉತ್ತೀರ್ಣರಾಗುತ್ತಾರೆ. ಆ ನೆನಪಿಗಾಗಿ ಪ್ರಾಣಿಯನ್ನು ಬಲಿ ಕೊಡುತ್ತೇವೆ ಎಂದರು. ಪ್ರಪಂಚದ ನಾನಾ ಮೂಲೆಗಳಿಂದ ಬಕ್ರಿದ್ ಹಬ್ಬದ ವೇಳೆ ಹಜ್ಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಬಲಿ ಕೊಡುವ ಪ್ರಾಣಿಯ ಮಾಂಸವನ್ನು ಎಲ್ಲಾ ಬಡ ಜನರಿಗೆ ಆಹಾರವನ್ನು ಕೊಡುವುದು ಈ ಬಕ್ರೀದ್ ಹಬ್ಬದ ವೇಳೆ ನೆಡಯುತ್ತದೆ. ಈ ದೇಶದ ಪ್ರಗತಿಗಾಗಿ ಸೌಹಾರ್ಧತೆಗಾಗಿ, ಸಹೋಧರತ್ವಕ್ಕಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದರು.