Nadahabba Mysore Dussehra – Peepal Media

ಮೈಸೂರು ದಸರಾದಲ್ಲಿ ಕ್ರೀಡಾಪಟುಗಳಿಗೆ ಅವ್ಯವಸ್ಥೆ: ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ
ಮೈಸೂರು: ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ನಗರದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟಕ್ಕೆ ವಿವಿಧ ಜಿಲ್ಲೆಗಳಿಂದ ಆಗಮನಿಸಿದ ಕ್ರೀಡಾಪಟುಗಳಿಗೆ ವಸತಿ ವಿಚಾರದಲ್ಲಿ ಅವಮಾನವಾಗಿದೆ ಎಂದು ಸರ್ಕಾರದ ವಿರುದ್ಧ  ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ.

ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಬೇರೆ- ಬೇರೆ ಜಿಲ್ಲೆಗಳಿಂದ ಆಗಮಸಿದ ಕುಸ್ತಿ ಪಟುಗಳು ಸೆಪ್ಟೆಂಬರ್‌ 29 ಗುರುವಾರದಂದು ನಡೆಯಬೇಕಿದ್ದ ಕುಸ್ತಿ ಪಂದ್ಯಾವಳಿಗೆ ಒಂದು ದಿನ ಮುಂಚಿತವಾಗಿ, ಅಂದರೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೈಸೂರಿಗೆ ಬಂದಿಳಿದ ನಂತರ ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶರ ಕಚೇರಿಗೆ ಭೇಟಿ ನೀಡಿದ ಕ್ರೀಡಾಪಟುಗಳು ವಸತಿ ವ್ಯವಸ್ಥೆ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿಗಳು ಮಾಹಿತಿ ನೀಡಲು ತಾತ್ಸಾರ ನಡೆಸಿದ್ದಾರೆ. ಈ ಕಾರಣ ರಾತ್ರಿ ಎಂಟು ಗಂಟೆಗಳ ಕಾಲ ವಸತಿ ವ್ಯವಸ್ಥೆ ಇಲ್ಲದೆ ಕ್ರೀಡಾಪಟುಗಳು ಮೈದಾನದ ಕ್ರೀಡಾ ಕಚೇರಿ ಮುಂದೆ ಕುಳಿತುಕೊಂಡಿದ್ದರು.

ಕ್ರೀಡಾಪಟುಗಳ ಆಳಲನ್ನು ಕುರಿತು ವಿಜಯ ಕರ್ನಾಟಕ ದಿನಪತ್ರಿಕೆಯ ವರದಿ

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ದಸರಾ ಅನುದಾನದಲ್ಲೂ 40% ಕಮಿಷನ್ ಕರಾಮತ್ತು ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ! ಬಿಜೆಪಿ ಎಂಬ ಗಾಂಪರ ಗುಂಪಿನ ಸರ್ಕಾರದಲ್ಲಿ ಹೆಜ್ಜೆಹೆಜ್ಜೆಗೂ ಎಡವಟ್ಟುಗಳು, ವೈಫಲ್ಯಗಳು ಸಿಗುತ್ತಿವೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ದೂರಿದೆ.

ದಸರಾ ಕವಿಗೋಷ್ಠಿಯ ಎಡವಟ್ಟಿನ ನಂತರ ಕ್ರೀಡಾಕೂಟದ ಕ್ರೀಡಾಪಟುಗಳಿಗೆ ವಸತಿ ನೀಡದೆ ಅವಮಾನ ಮಾಡಲಾಗಿದ್ದು, ಕನಿಷ್ಠ ವಸತಿ ನೀಡಲೂ ಯೋಗ್ಯತೆ ಇಲ್ಲವೇ ಈ ಸರ್ಕಾರಕ್ಕೆ? ಎಂದು ರಾಜ್ಯ ಕಾಂಗ್ರೆಸ್‌ ಘಟಕ ಟೀಕಿಸಿದೆ.

ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಮೈಸೂರು: ನಾಡ ಹಬ್ಬ ಮೈಸೂರು ದಸರಾಗೆ ಚಾಲನೆ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿಗೆ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೂತ್‌ ಅವರು ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.

ಮಂಡಕ್ಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಸವರಾಜ ಬೊಮ್ಮಾಯಿ ಮತ್ತು  ಥಾವರ್‌ ಚಂದ್‌ ಅವರು  ಉದ್ಘಾಟನೆಗೆ ಬರಮಾಡಿಕೊಂಡರು.

ನಂತರ ಅಲ್ಲಿಂದ ನೇರವಾಗಿ ಚಾಮುಂಡೇಶ್ವರಿ ಬೆಟ್ಟಕ್ಕೆ ಮುರ್ಮು ಅವರು ಹೋಗಿದ್ದು, ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದರು. ನಂತರ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಹಬ್ಬಕ್ಕೆ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೂತ್‌ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಹಲವು ಗಣ್ಯ ವ್ಯಕ್ತಿಗಳು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.