Nadav Lapid – Peepal Media

ಕಾಶ್ಮೀರ್‌ ಫೈಲ್ಸ್‌ ಎನ್ನುವ ಮಾರುವೇಷದ ಸಿನೆಮಾ
ಇತ್ತೀಚಿಗೆ ಇಸ್ರೇಲ್ ದೇಶದ ಪ್ರಖ್ಯಾತ ನಿರ್ದೇಶಕ ನದಾವ್ ಲ್ಯಾಪಿಡ್ ಅವರು ದ ಕಾಶ್ಮೀರಿ ಫೈಲ್ಸ್ ಸಿನಿಮಾ ಕುರಿತು ಪ್ರತಿಷ್ಟಿತ IFFI ನಲ್ಲಿ ಮಾಡಿದ್ದ ಟೀಕೆ ಬಹಳ ಆಕ್ರೋಶಕ್ಕೆ ಗುರಿಯಾಗಿತ್ತು. ಅವರು ಈ ಚಿತ್ರದ ಕುರಿತು ಮಾತನಾಡುತ್ತಾ ʼಇದೊಂದು ಅಸಭ್ಯ ಮತ್ತು ಕಳಪೆ ಚಿತ್ರ ಎಂದು ಹೇಳಿದ್ದರು. ಮತ್ತು ಇದು ಬಹಳ ಚರ್ಚೆಗೆ ಒಳಗಾಗಿತ್ತು. ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಬರೆದ ಇಂಗ್ಲಿಷ್‌ ಲೇಖನದ ಕನ್ನಡ ಅವತರಣಿಕೆ ನಿಮ್ಮ ಓದಿಗಾಗಿ

“ಕಾಶ್ಮೀರ್‌ ಫೈಲ್ಸ್‌ ಕುರಿತು ನಾನು ಆಡಿದ ಮಾತುಗಳ ಕುರಿತು ನನಗೆ ಯಾವುದೇ ವಿಷಾದವಿಲ್ಲ. ಆ ಮಾತುಗಳನ್ನು ಅಲ್ಲಿ ಹೇಳಲೇಬೇಕಾದ ಅನಿವಾರ್ಯತೆಯಿದೆಂದು ನನಗೆ ಅನ್ನಿಸಿತ್ತು. ನಾನು ಆ ಮಾತುಗಳನ್ನು ಆಡಿದ ನಂತರದ ಘಟನೆಗಳು ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡಿದ್ದೇನೆನ್ನುವುದನ್ನು ಎತ್ತಿ ತೋರಿಸುವಂತಿದ್ದವು. ಹೌದು ಈ ಮಾತುಗಳನ್ನು ನಾನು ಆಡಲೇಬೇಕಿತ್ತು.”

ನಾನಿರುವುದು ಪ್ಯಾರಿಸ್ಸಿನಲ್ಲಿ. ನಾನು ಭಾರತದ ಜನಜೀವನದ ಭಾಗವಲ್ಲ, ನಾನು ಹೋಗಿದ್ದು ಜ್ಯೂರಿಯಾಗಿ ಒಂದು ಸಣ್ಣ ಜವಬ್ದಾರಿಯನ್ನು ನಿಭಾಯಿಸಲು. ನನ್ನ ಮಾತುಗಳು ಇಂತಹದ್ದೊಂದು ತಿರುವು ಪಡೆದುಕೊಳ್ಳಬಹುದೆನ್ನುವ ಕನಿಷ್ಟ ಅರಿವೂ ನನಗಿರಲಿಲ್ಲ. ಅದೇನೇ ಇದ್ದರೂ ಇದೆಲ್ಲ ಎರಡು ಮೂರು ದಿನಗಳಲ್ಲಿ ಜನರಿಗೆ ಮರೆತುಹೋಗಲಿದೆ.
ಇಲ್ಲಿ ವಿಷಯ ನನ್ನದಲ್ಲ. ಕಾಶ್ಮೀರ್‌ ಫೈಲ್ಸ್‌ ಸಿನೆಮಾದ್ದೂ ಅಲ್ಲ. ಮೂಲ ಪ್ರಶ್ನೆ ಸ್ವಲ್ಪ ಬೇರೆಯದು. ಜನರು ನನ್ನ ಮಾತುಗಳನ್ನು ಒಪ್ಪದಿರಬಹುದು, ನಾನು ಮಾತಾಡುತ್ತಿರುವ ವಿಷಯದ ಕುರಿತು ನನಗೆ ಏನೂ ತಿಳಿದಿಲ್ಲ ಎನ್ನಬಹುದು. ನನ್ನ ಬಗ್ಗೆ ಬಹಳ ಕೆಟ್ಟದಾಗಿ ಯೋಚಿಸಬಹುದು. ಜನರು ಸಿನೆಮಾವನ್ನು ಮೆಚ್ಚಬಹುದು, ಮೆಚ್ಚಿಕೊಳ್ಳದಿರಬಹುದು. ಅದನ್ನು ಪ್ರೀತಿಸಬಹುದು ಅಥವಾ ದ್ವೇಷಿಸಬಹುದು. ಇದೆಲ್ಲವೂ ನನಗೆ ಒಪ್ಪಿತವೇ ಆಗಿದೆ. ಹಾಗೆಯೇ ಭಾವುಕವಾಗಿ ಒಂದು ವಿಚಾರವನ್ನು ಚರ್ಚಿಸುವುದನ್ನು ಕೂಡಾ ವಿರೋಧಿಸುವುದಿಲ್ಲ. ಆದರೆ ನನ್ನ ಮಾತುಗಳಿಗೆ ಬಂದ ಪ್ರತಿಕ್ರಿಯೆಗಳಲ್ಲಿ ಹುಚ್ಚುತನದ ಮಾತುಗಳೇ ಹೆಚ್ಚಿದ್ದವು. ಹೌದು ಅದು ನಿಮ್ಮ ದೇಶ, ನಿಮ್ಮದೇ ಸಮಾಜ, ಆದರೆ ನನ್ನ ಪ್ರಶ್ನೆಯೇನೆಂದರೆ ಹಿಂಸೆಗೆ ಕಾರಣವಾಗುತ್ತದೆನ್ನುವ ಕಾರಣಕ್ಕಾಗಿ, ಬೆದರಿಕೆಗಳ ಸರಮಾಲೆಯೇ ಬರುತ್ತದೆನ್ನುವ ಕಾರಣಕ್ಕೆ ನೀವು ಸತ್ಯ ಹೇಳದೆ ಉಳಿಯಬಲ್ಲಿರಾ? ಮಾಧ್ಯಮಗಳಲ್ಲಿ ಒಂದು ಸಿನೆಮಾ ವಿಮರ್ಶೆಗೆ ಬಂದ ಪ್ರತಿಕ್ರಿಯೆಯನ್ನು ನೋಡಿ ನನ್ನ ಮನಸ್ಸಿನಲ್ಲಿ ಒಂದು ಸಿನಿಮಾ ವಿಮರ್ಶೆಗೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು ಸಹಜವೇ ಅನ್ನುವ ಪ್ರಶ್ನೆ ಮೂಡಿತು.

ನನಗೆ ಇಷ್ಟವಾಗದ ಹಲವು ಸಿನಿಮಾಗಳಿರಬಹುದು‌, ಆದರೆ, ದಿ ಕಾಶ್ಮೀರ್‌ ಫೈಲ್ಸ್‌ ಒಂದು ನಕಲಿ ಸಿನೆಮಾ. ಇದು ಒಂದು ಬಗೆಯ ನಿರೂಪಣೆ ಹೊಂದಿರುವ ಪ್ರಚಾರದ ಉದ್ದೇಶ ಹೊಂದಿರುವ ಚಿತ್ರ. ಈ ಚಿತ್ರವು ಒಂದು ಕಾಲಘಟ್ಟದಲ್ಲಿ ಜನರ ಬದುಕು, ಅಸ್ತಿತ್ವ, ಅವರ ಬದುಕಿನ ಐತಿಹಾಸಿಕ ಘಟನೆಗಳನ್ನು ಇತರ ಚಿತ್ರಗಳಂತೆ ದಾಖಲಿಸಲು ಪ್ರಯತ್ನಿಸುವ ಒಂದು ಕಲಾಕೃತಿ ಎಂದು ಬಿಂಬಿಸಿಕೊಳ್ಳುತ್ತದೆ. ಆದರೆ ನಿಜದಲ್ಲಿ ಅದು ಕೊನೆಗೆ ಕೇವಲ ಪ್ರಚೋದನೆಯಷ್ಟೇ ಅದರ ಫಲಿತಾಂಶವಾಗಿ ಕಾಣುತ್ತದೆ. ನನ್ನ ಪ್ರಕಾರ ಇದೊಂದು ಅತ್ಯಂತ ಅಗ್ಗದ ಮತ್ತು ಅಸಭ್ಯ ರಾಜಕೀಯ ನಿಲುವುಗಳ ಒಂದು ಗುಚ್ಛ. ಮತ್ತು ಇದು ನಾನು ಅತ್ಯಂತ ಅಗ್ಗವೆಂದು ಭಾವಿಸುವ ಚಿತ್ರಸಂಬಂಧಿ ಕೌಶಲಗಳನ್ನು ಬಳಸಿಕೊಂಡಿದೆ.
ಒಂದು ಚಿತ್ರವಾಗಿ ನಾನು ಇದನ್ನುಗಂಭೀರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಇದು ನೋಡಲು ಹೊರಗಿನಿಂದ ಒಂದು ಜೋಕ್ ಆಗಿ ಮಾತ್ರ ತೋರುತ್ತದೆ. ಆದರೆ ಅದರ ತಯಾರಕರು ಮತ್ತು ಅದರ ನೋಡುಗರು ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ನೋಡಿ ಮತ್ತು ಪ್ರತಿಷ್ಟಿತ ಸ್ಪರ್ದೆಗಳಿಗೂ ಆಯ್ಕೆ ಮಾಡಲು ತೀರ್ಮಾನಿಸಿರುವುದನ್ನು ನೋಡಿದಾಗ ಮಾತ್ರ ಇದರ ಕುರಿತು ಒಂದು ನಿಲುವನ್ನು ತಳೆಯಲೇಬೇಕಾಗಿ ಬಂದಿದೆ.

ಕಲಾಕೃತಿ ಎಂದು ಹೇಳಿದಾಗ ಅದರ ರೂಪವೇ (form) ಸಾರವಾಗಿರುತ್ತದೆ (content) ಮತ್ತು ಸಾರವೇ ರೂಪವೂ ಆಗಿರುತ್ತದೆ.‌
ಅದರ ಔಪಚಾರಿಕತೆ ಮತ್ತು ಸೌಂದರ್ಯವೂ ಸೈದ್ಧಾಂತಿಕ ಅರ್ಥವನ್ನು ಹೊಂದಿರುತ್ತವೆ. ಕಾಶ್ಮೀರ್‌ ಫೈಲ್ಸ್‌ ಪ್ರಕರಣದಲ್ಲಿ ಎಷ್ಟು ಜನ ಸತ್ತರು ಎನ್ನವುದನ್ನು ನಿರ್ಧರಿಸಲು ನನ್ನ ಬಳಿ ಯಾವುದೇ ಮಾನದಂಡಗಳಿಲ್ಲ. ಎಷ್ಟು ಜನರನ್ನು ಕಗ್ಗೊಲೆ ಮಾಡಲಾಗಿದೆ ಎನ್ನುವದನ್ನು ಹೇಳಬಲ್ಲ ಸಾಮರ್ಥ್ಯ ನನಗಿಲ್ಲ. ಈ ಚಿತ್ರದಲ್ಲಿ ತೋರಿಸಿರುವ ಈ ಭಯಾನಕ ಸಂಗತಿಗಳು ನಿಜವಾಗಿಯೂ ನಡೆದಿವೆಯೋ ಇಲ್ಲವೋ ಎಂದು ಕೂಡಾ ನಾನು ಹೇಳಲಾರೆ. ಪ್ರಶ್ನೆಯಿರುವುದು ಅಂತಹ ಭಯಾನಕತೆಯನ್ನು ಈ ಚಿತ್ರದಲ್ಲಿ ಚಿತ್ರಿಸಿರುವಂತೆ ಚಿತ್ರಿಸಬೇಕಿತ್ತೇ ಎನ್ನುವುದು ನನ್ನ ಪ್ರಶ್ನೆ. ಚಿತ್ರದಲ್ಲಿ ಕೆಟ್ಟ ಜನರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಅವರು ಇಲ್ಲಿ ಮನುಷ್ಯರೇ ಅಲ್ಲ ಕೆಟ್ಟತನದ ಪ್ರತಿರೂಪ ಎಂಬಂತೆ ಚಿತ್ರಿಸಲಾಗಿದೆ.

ಅತ್ಯಂತ ಕೆಟ್ಟ ಮನುಷ್ಯರು ಕೂಡಾ ತಾವು ಸರಿ ಎಂದೇ ನಂಬಿರುತ್ತಾರೆ. ನನ್ನ ಮಟ್ಟಿಗೆ ಬದುಕನ್ನು ಸಂಕೀರ್ಣಗೊಳಿಸಿ, ಭಯಾನಕವಾಗಿಸಿ ಬಿಕ್ಕಟ್ಟಿಗೆ ತಿರುಗಿಸ ಸಂಗತಿ ಇದೇ.
ಈ ಚಿತ್ರದಲ್ಲಿ ನಿಮಗೆ ಈ ಭಾವ ಹುಟ್ಟುವುದೇ ಇಲ್ಲ. ನಿಮಗೆ ಇದರಲ್ಲಿ ಅಜೆಂಡಾ ಕಂಡುಹಿಡಿಯುವುದು ತೀರಾ ಸುಲಭ ಮತ್ತು ಅದನ್ನು ಬಹಳ
ಅಸಭ್ಯ ರೀತಿಯಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಒಂದು ವೇಳೆ ನಿಮ್ಮ ಉದ್ದೇಶ ಪ್ರೊಪಗಾಂಡಾ ಮಾಡುವುದೇ ಆಗಿದ್ದಲ್ಲಿ ಅದನ್ನಾದರೂ ಸೊಗಸಾಗಿ ಮಾಡಬೇಕು ಎಂದು ಹೇಳುತ್ತೇನೆ.

ಕೆಲವರು ಸೆರ್ಗಿ ಐಸೆನ್‌ಸ್ಟೀನ್ ಅವರ ಬ್ಯಾಟಲ್ ಶಿಪ್ ಪೊಟೆಮ್ಕಿನ್ ಚಿತ್ರವನ್ನು ಪ್ರೊಪಗಾಂಡ ಚಲನಚಿತ್ರವೆಂದು ಭಾವಿಸುತ್ತಾರೆ, ಆದರೆ ಅದೊಂದು ಮಾಸ್ಟರ್ ಪೀಸ್. ಲೆನಿ ರೀಫೆನ್ಸ್ಟಾಲ್ ಮಾನವ ಇತಿಹಾಸದಲ್ಲಿ ಅತ್ಯಂತ ಭಯಾನಕ ಮತ್ತು ಹೀನಾಯ ಕೃತ್ಯಗಳನ್ನು ಪ್ರಸ್ತುತಪಡಿಸಿದರು, ಆದರೆ ಆಕೆಯ ಚಿತ್ರಗಳಲ್ಲಿ ಉತ್ತಮ ಪ್ಯಾಟ್ರನ್‌ಗಳಿರುವ ಸಂಗತಿಯನ್ನು ತಳ್ಳಿಹಾಕಲಾಗದು. ಅವರ ಚಿತ್ರಗಳು ಆಕರ್ಷಕ ಮತ್ತು ವರ್ಚಸ್ವೀ ಗುಣವನ್ನು ಹೊಂದಿದ್ದವು.

ಹಾಗೆ ನೋಡಿದರೆ ನಾನು ಪ್ರೊಪಗಾಂಡ ಸಿನೆಮಾಗಳ ವಿರೋಧಿಯಲ್ಲ. ಇದು ಪ್ರೊಪಗಾಂಡ ಸಿನೆಮಾ ಎಂದು ಘೋಷಿಸಿಕೊಂಡ ಚಿತ್ರಗಳನ್ನು ನಾನು ವಿರೋಧಿಸಲಾರೆ. ಓರ್ವ ಕಲಾವಿದ ಒಂದು ಸಿದ್ಧಾಂತದಲ್ಲಿ ನಿಜವಾದ ನಂಬಿಕೆ ಹೊಂದಿದ್ದರೆ ಅವನು ಸೃಷ್ಟಿಸುವ ಕಲಾಕೃತಿ ಸೈದ್ಧಾಂತಿಕವಾಗಿ ಸ್ಪಷ್ಟವಾಗಿರುತ್ತದೆ ಮತ್ತು ಒಂದು ಸೌಂದರ್ಯ ಸ್ಮಾರಕದಂತಿರುತ್ತದೆ. ಅದೇ ನಿಜವಾದ ಕಲೆಯ ಮಾಂತ್ರಿಕತೆ. ಅಲ್ಲಿ ಕಲಾವಿದರಿರುತ್ತಾರೆ ಅವರು ತಮ್ಮ ಕೆಮೆರಾ ಬಳಸಿದಾಗ ಅಲ್ಲೊಂದು ಮ್ಯಾಜಿಕ್‌ ಸೃಷ್ಟಿಯಾಗುತ್ತದೆ. ನಾನಿಲ್ಲಿ ಸಿನೆಮಾ ಪ್ರೊಪಗಾಂಡದ ನೈತಿಕ ಅಂಶದ ಕುರಿತು ಮಾತನಾಡುತ್ತಿಲ್ಲ. ನಾನಿಲ್ಲಿ ಚಿತ್ರವೊಂದರ ಕಲಾತ್ಮಕ ಸೌಂದರ್ಯದ ಕುರಿತು ಮಾತನಾಡುತ್ತಿದ್ದೇನೆ.

“ದಿ ಕಾಶ್ಮೀರ್‌ ಫೈಲ್ಸ್‌” ಸಿನಿಮಾದ ವೇಷ ಧರಿಸಿಕೊಂಡಿದೆ ಅಷ್ಟೇ. ಆದರೆ ನಿಜವಾದ ಚಲನಚಿತ್ರವಲ್ಲ. ಅದು ಅಸಭ್ಯತೆ ಮತ್ತು ಒಂದು ನಿರ್ದಿಷ್ಟ ಸಿದ್ಧಾಂತದ ಸಮಸ್ಯಾತ್ಮಕ ಸಂಗಮ ಬಿಂದುವಾಗಿದೆ.

ತಮ್ಮ ಮನೆಗಳಿಂದ ಅಥವಾ ಸಂಬಂಧಿಕರಿಂದ ಬೇರ್ಪಟ್ಟಿರುವ ಮತ್ತು ಈ ದೌರ್ಜನ್ಯಗಳನ್ನು ಅನುಭವಿಸಿದ ಜನರು ಇಂತಹ ಚಲನಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದು ನನಗೆ ತಿಳಿದಿಲ್ಲ. ಎಲ್ಲಾ ರೀತಿಯ ಪ್ರತಿಕ್ರಿಯೆಗಳೂ ಇರಬಹುದು. ಆದರೆ ನಾನೊಬ್ಬ ಇಂತಹ ದೌರ್ಜನ್ಯ ಎದುರಿಸಿದ ಕುಟುಂಬದಿಂದ ಬಂದವನಾಗಿದ್ದರೆ ಕಾಶ್ಮೀರ್‌ ಫೈಲ್ಸ್‌ನಂತಹ ಸಿನೆಮಾ ನನ್ನ ದನಿಯನ್ನು ಪ್ರತಿನಿಧಿಸುವುದನ್ನು ಕಟ್ಟಕಡೆಯ ಆಯ್ಕೆಯಾಗಿ ಒಪ್ಪಿಕೊಳ್ಳುತ್ತಿದ್ದೆ. ಅದರ ಬದಲು ನನ್ನ ದನಿಯನ್ನು ಪ್ರತಿನಿಧಿಸಬಲ್ಲ ಗಂಭೀರವಾದ ಯಾವುದನ್ನಾದರೂ ಹುಡುಕುತ್ತಿದ್ದೆ.
ಜನರನ್ನು ನೋಯಿಸುವುದು ಖಂಡಿತವಾಗಿಯೂ ನನ್ನ ಹವ್ಯಾಸವಲ್ಲ, ಆದರೆ ಕೆಲವೊಮ್ಮೆ, ಆಕ್ರೋಶ ಮತ್ತು ಅಪರಾಧಗಳು ವಿಮರ್ಶಾತ್ಮಕ ಆಲೋಚನೆ ಮತ್ತು ಕಲಾತ್ಮಕ ಸಂಕಥನಗಳ ಸದ್ದಡಗಿಸುವ ಸುಲಭ ಸಾಧನಗಳೆನ್ನುವುದು ನನ್ನ ನಂಬಿಕೆ. ನಾವು ಮಕ್ಕಳೇನಲ್ಲ. ಕಲೆಯ ಕೆಲಸವೆಂದರೆ ಜನರಿಗೆ ಒಳ್ಳೆಯ ಮನರಂಜನೆ ನೀಡುತ್ತಾ ಅವರಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಒಳ್ಳೆಯ ಭಾವನೆಗಳನ್ನು ಹುಟ್ಟಿಸುವುದು ಮಾತ್ರವಲ್ಲ. ಕಲೆ ಕೆಲವೊಮ್ಮೆ ಆಕ್ರಮಣಕಾರಿಯಾಗಿ ಜನರನ್ನು ಕಚ್ಚುವಂತಿರಬೇಕು. ಅದು ಕಠಿಣವಾಗಿರಬೇಕು. ಆದರೆ ಹಾಗೆ ಕಲೆಯನ್ನು ಆಕ್ರಮಣಕಾರಿಯಾಗಿಸುವಾಗ ಅದನ್ನು ಮೂರ್ಖ ಅಸಭ್ಯ ರೀತಿಯಲ್ಲಿ ಸಾಧಿಸಬಾರದು. ಬುದ್ಧಿವಂತಿಕೆಯಿಂದ ಅದನ್ನು ಸಾಧಿಸಬೇಕು.

ನನ್ನ ಸಿನೆಮಾಗಳನ್ನು ಒಮ್ಮೊಮ್ಮೆ ರಾಜಕೀಯವೆಂದು ಪರಿಗಣಿಸಲಾಗುತ್ತದೆ. ಆದರೆ ಅವು ಶಾಸ್ತ್ರೀಯ ರೀತಿಯಲ್ಲಿ ರಾಜಕೀಯವಲ್ಲವೆನ್ನುವುದು ನನ್ನ ಅಭಿಪ್ರಾಯ. ನನ್ನ ಚಿತ್ರಗಳಲ್ಲಿ ಜನರು ದೃಢವಾದ ಆಲೋಚನೆಗಳನ್ನು ಹೊಂದಿರುತ್ತಾರೆ. ಆದರೆ ನನ್ನ ಚಿತ್ರಗಳು ಒಂದು ಕಲ್ಪನೆಯಿಂದ ನಡೆಸಲ್ಪಡುವುದಿಲ್ಲವೆನ್ನುವುದು ನನ್ನ ಭಾವನೆ. ನನ್ನ ಚಿತ್ರಗಳಲ್ಲಿ ಅಲ್ಲಿನ ಪಾತ್ರಗಳು ಅವು ಕುಣಿಯುವ, ಹಾಡುವ, ಚುಂಬಿಸುವ ರೀತಿಯಲ್ಲೇ ಆಲೋಚನೆಗಳ ಕುರಿತಾಗಿ ಮಾತನಾಡುತ್ತಾರೆ. ನನಗೆ ನನ್ನದೇ ಆದ ರಾಜಕೀಯ ಸಿದ್ಧಾಂತವಿದ್ದರೂ ಬೇರೆ ಮಾದರಿಯ ಆಲೋಚನೆಗಳಿರುವ ಸಿನೆಮಾಗಳು ನನ್ನನ್ನು ಆಕರ್ಷಿಸುತ್ತವೆ. ಅದು ಯಾವ ಪಂಥದ್ದಾದರೂ ಸರಿಯೇ. ಆದರೆ ಕಲಾವಿದರನ್ನು ಆಡಳಿತ ಮುದ್ದಾಡುವುದು ಆರೋಗ್ಯಕರ ಬೆಳವಣಿಗೆಯಲ್ಲವೆನ್ನುವುದು ನನ್ನ ಅಭಿಪ್ರಾಯ. ಹೀಗಾಗಿ ಒಂದು ರೀತಿಯಲ್ಲಿ ಕಲಾವಿದರು ಆಡಳಿತದೊಡನೆ ಸಂಘರ್ಷದಲ್ಲಿರುವುದು, ತಮ್ಮನ್ನು ತಾವು ಆಡಳಿತದಿಂದ ದೂರವಿರಿಸಿಕೊಳ್ಳುವುದು ಸರಿಯೆನ್ನುವುದು ನನ್ನ ಅಭಿಪ್ರಾಯ.

ನದಾವ್ ಲಾಪಿಡ್
ಇಸ್ರೇಲಿ ಚಲನಚಿತ್ರ ನಿರ್ಮಾಪಕ ಮತ್ತು ಐಎಫ್ಎಫ್ಐ ಜ್ಯೂರಿ ಮುಖ್ಯಸ್ಥರು.

“ಮಾತನಾಡಲೇಬೇಕಿತ್ತು, ಮಾತಾಡಿದ್ದೇನೆ” ; ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ನಾದವ್ ಲ್ಯಾಪಿಡ್
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ತಾನು ಆಡಿದ ಮಾತನ್ನು ನಾದವ್ ಲ್ಯಾಪಿಡ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ಇಂತಹದ್ದೊಂದು ತೀರ್ಪು ಕೊಡಲೇಬೇಕಿತ್ತು. ಕೊಟ್ಟಿದ್ದೇನೆ ಎಂದು ಮತ್ತೊಮ್ಮೆ ಖಡಕ್ಕಾಗಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನೆಮಾವನ್ನು ಅತ್ಯಂತ ಕೆಟ್ಟ ಅಭಿರುಚಿ ಮತ್ತು ಅಸಭ್ಯತೆಯ ಚಿತ್ರ ಎಂದು ತೀರ್ಪುಗಾರ ಸಮಿತಿ ಮುಖ್ಯಸ್ಥರಾಗಿದ್ದ ನಾದವ್ ಲ್ಯಾಪಿಡ್ ಹೇಳಿದ ನಂತರ ಸಿನಿಮಾದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಸೇರಿದಂತೆ ಭಾರತದ ಬಲಪಂಥೀಯ ಹಿನ್ನೆಲೆಯ ವ್ಯಕ್ತಿಗಳು ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಈ ಬಗ್ಗೆ ಭಾರತದಾದ್ಯಂತ ಸಧ್ಯ ಬಿಸಿಬಿಸಿ ಚರ್ಚೆಯ ನಡುವೆ ಇಸ್ರೇಲ್ ದೇಶದ ಹೆಸರಾಂತ ಸಿನಿಮಾ ನಿರ್ದೇಶಕ ನಾದವ್ ಲ್ಯಾಪಿಡ್ ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಇಸ್ರೇಲ್ ಸುದ್ದಿ ವೆಬ್ಸೈಟ್ ynet ನೊಂದಿಗೆ ಹಿಬ್ರೂ ಭಾಷೆಯಲ್ಲಿ ಮಾತನಾಡಿದ ನಾದವ್ ಲ್ಯಾಪಿಡ್, “ಇಲ್ಲಿ ಎಲ್ಲವೂ ವಿಚಿತ್ರವಾಗಿದೆ. ಈ ಸಿನಿಮಾವನ್ನು ಭಾರತ ಸರ್ಕಾರ ಮಾಡದೇ ಇದ್ದರೂ ತಾನೇ ಮಾಡಿದ ಸಿನಿಮಾ ಎಂಬಂತೆ ಪ್ರೋತ್ಸಾಹಿಸಿದೆ. ಕಾಶ್ಮೀರದ ಕುರಿತು ಸರ್ಕಾರದ ನಿಲುವು ಏನಿದೆಯೋ ಅದನ್ನಷ್ಟೇ ಈ ಸಿನಿಮಾ ಸಮರ್ಥಿಸುತ್ತಿದೆಯಲ್ಲದೆ ಅದರಲ್ಲಿ ಫ್ಯಾಸಿಸ್ಟ್‌ ಲಕ್ಷಣಗಳಿವೆ” ಎಂದು ಹೇಳಿದ್ದಾರೆ.

“ದೇಶದ ಹೊರಗಿನ ಶತ್ರುವಿನ ಜೊತೆಗೆ ದೇಶದ ಒಳಗಿನ ವಿದ್ರೋಹಿಗಳು ಇರುತ್ತಾರೆ” ಎಂದು ಹೇಳುವ ವಿಧಾನ ಸರ್ವೇಸಾಮಾನ್ಯವಾದದ್ದು” ಎಂದವರು ತಿಳಿಸಿದ್ದಾರೆ.

ಬಿಜೆಪಿ ಪಕ್ಷದ ಹಲವಾರು ಮುಖಂಡರು ಅತ್ಯಂತ ಆಸಕ್ತಿಯಿಂದ ಉತ್ತೇಜನ ನೀಡಿದ್ದ ʼಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ಸಾಕಷ್ಟು ಚರ್ಚೆಗಳು ದೇಶದಲ್ಲಿ ನಡೆದಿವೆ. ಕೆಲವು ವಾಸ್ತವಿಕ ಸಂಗತಿಗಳ ಅರ್ಧ ಸತ್ಯದ ಜೊತೆಗೆ ಅನೇಕ ಅವಾಸ್ತವಿಕ ಮತ್ತು ಉತ್ಪ್ರೇಕ್ಷಿತ ಅಂಶಗಳನ್ನೂ ಸೇರಿಸಿ ಭಾವನಾತ್ಮಕ ಪ್ರಚಾರ ಸಿನಿಮಾವಾಗಿ ಮಾಡಲಾಗಿದೆ ಎಂಬ ಆರೋಪಗಳು ಈ ಸಿನಿಮಾದ ಕುರಿತು ಕೇಳಿಬಂದಿದ್ದವು. ಈಗ ಇಸ್ರೇಲಿನ ಸಿನಿಮಾ ನಿರ್ದೇಶಕರೊಬ್ಬರು ಬಂದು ಸಿನಿಮಾದ ಕುರಿತು ಅಪ್ರಿಯ ನುಡಿಗಳನ್ನಾಡಿರುವುದು ಸಿನಿಮಾ ಪರವಾಗಿ ಪ್ರಚಾರ ಮಾಡಿದ್ದವರಿಗೆ ಮುಜುಗರ ಉಂಟುಮಾಡಿದೆ ಮಾತ್ರವಲ್ಲದೇ ಸ್ವತಃ ಇಸ್ರೇಲಿನ ಅಧಿಕಾರಿಗಳೂ ಕಸಿವಿಸಿಕೊಂಡಿದ್ದಾರೆ. ಇಸ್ರೇಲಿನ ರಾಯಭಾರಿಗಳು ನಡಾವ್‌ ಲ್ಯಾಪಿಡ್‌ ಅವರ ಅಭಿಪ್ರಾಯವನ್ನು ಖಂಡಿಸಿ ಹೇಳಿಕೆಯನ್ನೂ ನೀಡಿದ್ದರು. ಆದರೆ ಇದ್ಯಾವುದಕ್ಕೂ ನಡಾವ್‌ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

ಸಿನಿಮಾ ವೀಕ್ಷಣೆಯ ನಂತರ ನಡೆದ  ತಮ್ಮ ಸಂದರ್ಶನದಲ್ಲಿ ಲ್ಯಾಪಿಡ್‌ ಅವರು, ಸಿನಿಮಾ ನೋಡಿದಾಗ ಅದರಲ್ಲಿ ಪ್ರೊಪಗಾಂಡಾ ಮತ್ತು ಫ್ಯಾಸಿಸಂ ಅಂಶಗಳನ್ನು ಹಾಗೂ ಅಸಭ್ಯತೆಗಳನ್ನು (vulgarity) ಕಂಡು ತಮಗೆ ಆಘಾತವಾಯಿತು ಎಂದಿದ್ದರು. ಇದೇ ತರದ ಇಸ್ರೇಲಿ ಸಿನಿಮಾವೊಂದು ಒಂದೆರಡು ವರ್ಷಗಳಲ್ಲಿ ಬರಬಹುದೇನೋ ಎಂದು ಕಲ್ಪಿಸಿಕೊಂಡಿದ್ದಾಗಿ ಹೇಳಿದರು.

ʼನಿಮ್ಮ ಅಭಿಪ್ರಾಯಕ್ಕೆ ತೀವ್ರ ಟೀಕೆ ಬರುವ ಕುರಿತು ನಿಮಗೆ ನಿರೀಕ್ಷೆಯಿತ್ತೇ?ʼ ಎಂಬ ಪ್ರಶ್ನೆಗೆ ಲ್ಯಾಪಿಡ್‌ ಅವರು, ತಮ್ಮ ಅಭಿಪ್ರಾಯ ತಿಳಿಸುವಾಗ ತಾವು ʼಆತಂಕಗೊಂಡಿದ್ದಾಗಿʼ ಹೇಳಿದ್ದಾರೆ. ʼನನ್ನ ಸ್ಥಿತಿ ಅಷ್ಟು ಸುಲಭದ್ದಾಗಿರಲಿಲ್ಲ. ನಾನೊಬ್ಬ ಅತಿಥಿಯಾಗಿದ್ದೆ. ಅಲ್ಲದೇ ತೀರ್ಪುಗಾರರ ತಂಡದ ಅಧ್ಯಕ್ಷನಾಗಿದ್ದೆ. ನನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡಿದ್ದರು. ಹೀಗಿರುವಾಗ ನಾನು ಬಂದು ಆ ಸಿನಿಮಾ ಹಬ್ಬದಲ್ಲಿ ಟೀಕೆ ಮಾಡುವುದು ಎಂದರೆ ಸುಲಭದ್ದಾಗಿರಲಿಲ್ಲ. ಒಂದು ಬಗೆಯ ಅಳುಕು ಮತ್ತು ಅಸಮಧಾನವೂ ನನಗೆ ಉಂಟಾಗಿತ್ತುʼ ಎಂದು ಹೇಳಿದ್ದ ನಡಾವ್‌, ʼಈಗ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಾಗ ನಾನು ಖುಶಿಯಾಗಿದ್ದೇನೆ ಎಂದಷ್ಟೇ ಹೇಳಬಹುದುʼ ಎಂದಿದ್ದಾರೆ.

ಒಂದು ವೇಳೆ‌ ತನ್ನ  ಇಸ್ರೇಲ್ ದೇಶದಲ್ಲಿ ವಿದೇಶಿ ತೀರ್ಪುಗಾರರ ಅಧ್ಯಕ್ಷನೊಬ್ಬ ತಮ್ಮ ದೇಶದ ಸಿನಿಮಾವೊಂದರೆ ಬಗ್ಗೆ ತೀಕ್ಷ್ಣ ವಿಮರ್ಶೆ ಮಾಡಿದರೆ ನನಗದು ಸಮಾಧಾನ ಕೊಡದಿದ್ದರೂ ʼಸಂತೋಷʼ ಎನಿಸುತ್ತದೆʼ ಎಂದು ಹೇಳಿರುವ ನದಾವ್‌ ಲ್ಯಾಪಿಡ್‌, ʼನಿಮಗನಿಸಿದ್ದನ್ನು ಮಾತನಾಡುವ ಅಥವಾ ಸತ್ಯ ಹೇಳುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿರುವ ದೇಶಗಳಲ್ಲಿ ಯಾರಾದರೊಬ್ಬರು ಮಾತಾಡಲೇಬೇಕಿರುತ್ತದೆ. ಈ ಸಿನಿಮಾ ನೋಡಿದಾಗ ನಾನು ಇಂತಹುದೇ ಒಂದು ಸಿನಿಮಾ ಇಸ್ರೇಲ್‌ನಲ್ಲಿ ಬರುವುದನ್ನು ಊಹಿಸಿಕೊಳ್ಳದೇ ಇರಲು ಸಾಧ್ಯವಾಗಲೇ ಇಲ್ಲ. ಇದುವರೆಗೆ ಇಂತಹ ಸಿನಿಮಾ ಅಲ್ಲಿ ಇಲ್ಲದಿರಬಹುದು ಆದರೆ ಖಂಡಿತಾ ಮುಂದೆ ಬರಬಹುದು. ಹೀಗಾಗಿಯೇ ನಾನು ಮಾತಾಡಲೇಬೇಕಾಯ್ತು” ಎಂದರು.

ʼಕಾಶ್ಮೀರ್ ಫೈಲ್ಸ್ ಅಶ್ಲೀಲ ಮತ್ತು ಪ್ರಾಪಗಂಡ ಸಿನೆಮಾʼ ; ಮತ್ತೆ ಮುನ್ನೆಲೆಗೆ ಬಂದ ಚರ್ಚೆ, ದೂರು ದಾಖಲು
ಪ್ರಾಪಗಂಡ ಅಡಿಯಲ್ಲಿ ನಿರ್ಮಾಣವಾದ ಚಿತ್ರ ಎಂದೇ ರಾಷ್ಟ್ರಾದ್ಯಂತ ಹೆಚ್ಚು ಪ್ರಚಾರ ಪಡೆದಿದ್ದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನೆಮಾ ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ಕೆಟ್ಟ ಅಭಿರುಚಿ ಮತ್ತು ಅಶ್ಲೀಲ ಉದ್ದೇಶದ ಚಿತ್ರ ಎಂದು ತೀರ್ಪುಗಾರರು ಅಭಿಪ್ರಾಯ ಪಟ್ಟು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ನಾಯಕರಿಂದ ವ್ಯಾಪಕ ಪ್ರಚಾರಕ್ಕೆ ಬಂದಿದ್ದ ಈ ಸಿನಿಮಾ ಈಗ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಕಡೆಯಿಂದ ಅತ್ಯಂತ ಕೆಟ್ಟ ಅಭಿರುಚಿ ಮತ್ತು ಅಶ್ಲೀಲ ಉದ್ದೇಶ ಹೊಂದಿರುವ ಸಿನೆಮಾ ಎಂದು ಅಭಿಪ್ರಾಯ ಹೊರಬಿದ್ದಿದೆ. ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರ ಸಮಿತಿಯ ಮುಖ್ಯಸ್ಥರಾದ ಇಸ್ರೇಲ್ ಮೂಲದ ನಿರ್ಮಾಪಕ ನಾದವ್ ಲ್ಯಾಪಿಡ್ (Nadav Lapis) ಈ ಸಿನೆಮಾದ ಬಗ್ಗೆ ಈ ರೀತಿಯಾಗಿ ವೇದಿಕೆಯಲ್ಲೇ ಸಿನೆಮಾ ಬಗ್ಗೆ ಅಭಿಪ್ರಾಯ ಹೊರ ಹಾಕಿದ್ದಾರೆ.

ಸಹಜವಾಗಿಯೇ ಇದು ಬಿಜೆಪಿ ಪಕ್ಷ ಅಥವಾ ಬಲಪಂಥೀಯ ಹಿನ್ನೆಲೆಯವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತ ದೇಶದ ಇಸ್ರೇಲ್ ಅಂಬಾಸಿಡರ್ ಆಗಿರುವ ನೋರ್ ಗಿಲೋನ್ (Naor Gilon) ಅವರು ಮುಂದಿನ ರಾಜಕೀಯ ಮತ್ತು ದೇಶಗಳ ನಡುವಿನ ಬಾಂಧವ್ಯದ ದೃಷ್ಟಿಯಿಂದ ಇದು ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ‘ನಾದವ್ ಲ್ಯಾಪಿಡ್ ಅವರೇ.. ನೀವೇನೋ ನಿಮ್ಮ ಅಭಿಪ್ರಾಯವನ್ನು ಧೈರ್ಯದಿಂದ ಪ್ರಸ್ತುತಪಡಿಸಿ ಹೋದಿರಿ. ಆದರೆ ಅದರ ಪರಿಣಾಮವನ್ನು ನಾವು ಎದುರಿಸಬೇಕು. ಇದು ನನಗೆ ತೀವ್ರ ಮುಜುಗರ ಮತ್ತು ಸಮಸ್ಯೆಗೆ ಕಾರಣವಾಗಲಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದರ ನಡುವೆ ಸುಪ್ರೀಂಕೋರ್ಟ್ ವಕೀಲರಾದ ವಿನೀತ್ ಜಿಂದಾಲ್ ಎಂಬುವವರು ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ ನಿರ್ಮಾಪಕ ನಾದವ್ ಲ್ಯಾಪಿಡ್ ಮೇಲೆ ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಮತ್ತು ಸಮಾಜ ಒಡೆಯುವ ಹೇಳಿಕೆ ನೀಡಿದ ಆರೋಪದ ಮೇಲೆ ಸೆಕ್ಷನ್ 153 ಮತ್ತು 295 ಅಡಿಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಬಲಪಂಥೀಯ ಮೂಲದ ವ್ಯಕ್ತಿಗಳೂ ಸಹ ಇಸ್ರೇಲ್ ದೇಶದ ನಿರ್ಮಾಪಕರ ಮೇಲೆ ಮಾಧ್ಯಮಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಒಬ್ಬ ತೀರ್ಪುಗಾರನಾಗಿ ನಾದವ್ ಲ್ಯಾಪಿಡ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಅವರ ಆಯ್ಕೆಯ ಸ್ವಾತಂತ್ರ್ಯ. ಈಗಾಗಲೇ ಈ ಸಿನೆಮಾ ಹಲವಷ್ಟು ರಾಜಕೀಯ ಉದ್ದೇಶಗಳನ್ನು ಹೊಂದಿದ ಬಗ್ಗೆಯೂ ಈ ಹಿಂದೆ ದೇಶದ ಒಳಗೇ ಹಲವಷ್ಟು ಪರ ವಿರೋಧದ ಚರ್ಚೆಗಳಾಗಿವೆ. ಆದರೆ ಈಗ ನಡಾವ್ ಲ್ಯಾಪಿಡ್ ಅವರ ಈ ಅಭಿಪ್ರಾಯದ ಮೂಲಕ ಮತ್ತೆ ಚರ್ಚೆ ಮುನ್ನಲೆಗೆ ಬಂದಿದೆ.

ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಅಡಿಯಲ್ಲಿ ಮೂಡಿಬಂದ ಈ ಸಿನಿಮಾ ದೇಶದ ಪ್ರತಿಯೊಬ್ಬರೂ ನೋಡಬೇಕು ಎಂದು ಬಿಜೆಪಿ ಪಕ್ಷದ ನಾಯಕರು ಖುದ್ದು ಪ್ರಚಾರ ಕೈಗೊಂಡಿದ್ದರು. ಹಾಗಾಗಿಯೇ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲೂ ಈ ಸಿನೆಮಾಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಜೊತೆಗೆ ಆಯಾ ರಾಜ್ಯಗಳ ಬಿಜೆಪಿ ನಾಯಕರೇ ಸಿನೆಮಾ ನೋಡುವಂತೆ ಪ್ರಚಾರ ಕೈಗೊಂಡಿದ್ದರು.

ಈ ನಡುವೆ ಇಸ್ರೇಲ್ ದೇಶದ ಅಂಬಾಸಿಡರ್ ಆಗಿರುವ ನೋರ್ ಗಿಲೋನ್ ಅವರ ವಿರೋಧದ ಅಭಿಪ್ರಾಯ ಜಾಗತಿಕವಾಗಿ ಬಲಪಂಥೀಯ ಟ್ರೋಲ್‌ಗಳು ಹೇಗೆ ಅಭಿಪ್ರಾಯಗಳನ್ನು ನಿಯಂತ್ರಣ ಮಾಡುತ್ತವೆ ಎಂಬುದಕ್ಕೆ ಸಾಕ್ಷಿಯಂತಿದೆ. ಜೊತೆಗೆ ಈ ಹೇಳಿಕೆಯಿಂದ ಭಾರತೀಯ ಮೂಲದಿಂದ ಎದುರಾಗಬಹುದಾದ ಹಲವಷ್ಟು ಸಮಸ್ಯೆಗಳನ್ನು ತಾನು ಎದುರಿಸಬೇಕು ಎಂಬುದನ್ನು ನೋರ್ ಗಿಲೋನ್ ಪರೋಕ್ಷವಾಗಿ ಹೇಳಿದಂತಿದೆ.

ನಡಾವ್ ಲ್ಯಾಪಿಡ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಬಾಲಿವುಡ್ ನಟ ಅನುಪಮ್ ಖೇರ್ ಸೇರಿದಂತೆ ಹಲವು ನಟರು, ನಿರ್ದೇಶಕರು ಆಕ್ರೋಶ ಹೊರಹಾಕಿದ್ದಾರೆ.